Mahabba Campaign Part-181/365
ಇಸ್ಲಾಮಿನ ಆರಂಭಿಕ ಹಂತದಲ್ಲಿ ಮುಸ್ಲಿಮರ ಖಿಬ್’ಲ ಫಲಸ್ತೀನಿನ ಬೈತುಲ್ ಮುಖದ್ದಸ್ ಆಗಿತ್ತು. ಪ್ರವಾದಿಯವರು ﷺ ಮಕ್ಕಾದಲ್ಲಿ ಇದ್ದಾಗಲೂ ಕೂಡ ಬೈತುಲ್ ಮುಖದ್ದಸಿನ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡುತ್ತಿದ್ದರು. ಹೀಗೆ ನಮಾಝ್ ಮಾಡುತ್ತಿದ್ದಾಗಲೂ ಪ್ರವಾದಿಯವರು ﷺ ತಮ್ಮ ಮುಂಭಾಗಕ್ಕೆ ಕಅ್’ಬ ಬರುವ ಹಾಗೆ ನಿಲ್ಲುತ್ತಿದ್ದರು, ಮದೀನಕ್ಕೆ ಹಿಜ್’ರ ಬಂದ ನಂತರವೂ ಕೂಡ ಬೈತುಲ್ ಮುಖದ್ದಸಿನ ಭಾಗಕ್ಕೆ ನಿಂತೇ ನಮಾಝ್ ಮಾಡುತ್ತಿದ್ದರು. ಸುಮಾರು ಹದಿನಾರು ತಿಂಗಳ ಕಾಲ ಇದೇ ರೀತಿ ಬೈತುಲ್ ಮುಖದ್ದಸನ್ನೇ ಖಿಬ್’ಲವಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಪ್ರವಾದಿಯವರಿಗೆ ﷺ ತಮ್ಮ ಪಿತಮಹಾ ಪ್ರವಾದಿ ಇಬ್ರಾಹಿಮರ (ಅ) ಖಿಬ್’ಲವಾದ ಕಅ್’ಬವನ್ನೇ ಖಿಬ್’ಲವಾಗಿ ಆಯ್ಕೆ ಮಾಡಬೇಕೆಂದು ಬಹಳಷ್ಟು ಆಸೆ ಪಟ್ಟಿದ್ದರು. ಅಷ್ಟೇ ಅಲ್ಲದೆ ಯಹೂದಿಗಳು ಕೂಡ , “ಮುಹಮ್ಮದ್’ರು ﷺ ನಮ್ಮ ವಿರೋಧಿಯಾಗಿದ್ದರೂ ಅವರು ನಮ್ಮ ಖಿಬ್’ಲಾದ ಭಾಗಕ್ಕೆ ತಿರುಗಿ ನಿಲ್ಲುತ್ತಿದ್ದಾರೆ” ಎಂದು ಹೇಳಿ ಪ್ರವಾದಿಯವರನ್ನು ﷺ ಗೇಲಿ ಮಾಡುತ್ತಿದ್ದರು. ಈ ಕಾರಣಕ್ಕೂ ಕೂಡ, ಪ್ರವಾದಿಯವರು ﷺ ಕಅ್’ಬವನ್ನು ಖಿಬ್’ಲವಾಗಿ ಸಿಗಬೇಕೆಂದು ಬಹಳಷ್ಟು ಪ್ರಾರ್ಥನೆ ನಡೆಸುತ್ತಿದ್ದರು. ಹಿಜ್’ರ ಎರಡನೇ ವರ್ಷದ ರಜಬ್ ತಿಂಗಳಲ್ಲಿ ಪ್ರವಾದಿಯವರ ﷺ ಆಸೆಯಂತೆ ಕಅ್’ಬವನ್ನು ಖಿಬ್’ಲವಾಗಿ ತೀರ್ಮಾನಿಸಿದ ಬಗ್ಗೆ ಆದೇಶ ನೀಡಲಾಯಿತು.
ಇಮಾಮ್ ಮುಸ್ಲಿಂರವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಬರ್’ರಾಅ್’ಬಿನ್ ಆಸಿಬ್ ◌ؓ ಹೇಳುವುದು ಕಾಣಬಹುದು. ನಾವು ಪ್ರವಾದಿಯವರ ﷺ ಜೊತೆಯಲ್ಲಿ ನಿಂತು ಸುಮಾರು ಹದಿನಾರು ತಿಂಗಳಷ್ಟು ಕಾಲ ಬೈತುಲ್ ಮುಖದ್ದಸಿನ ಭಾಗಕ್ಕೆ ನಿಂತು ನಮಾಝ್ ಮಾಡಿದ್ದೆವು. ನಂತರವಾಗಿತ್ತು ನಮ್ಮ ಖಿಬ್’ಲವಾಗಿ ಕಅ್’ಬಾಲಯವನ್ನು ತೀರ್ಮಾನಿಸಿದ್ದು. ಇಬ್’ನು ಅಬ್ಬಾಸ್ ◌ؓ ಹೇಳುವುದು ಕಾಣಬಹುದು, ಪ್ರವಾದಿಯವರು ﷺ ಮಕ್ಕಾದಲ್ಲಿ ಇದ್ದಾಗ, ಬೈತುಲ್ ಮುಖದ್ದಸಿನ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡುತ್ತಿದ್ದರು. ಆಗಲೂ ಪ್ರವಾದಿಯವರ ﷺ ಮುಂಭಾಗದಲ್ಲಿ ಕಅ್’ಬಾಲಯ ಇರುತ್ತಿತ್ತು. ಮದೀನಕ್ಕೆ ಹಿಜ್’ರ ಬಂದು ಹದಿನಾರು ತಿಂಗಳ ನಂತರವಾಗಿತ್ತು, ಕಅ್’ಬಾವನ್ನು ಖಿಬ್’ಲವಾಗಿ ಆಯ್ಕೆ ಮಾಡಿದ್ದು. ಮಕ್ಕಾದಲ್ಲಿ ಇದ್ದಾಗ ಬೈತುಲ್ ಮುಖದ್ದಸಿನ ನಡುವೆ ಕಅ್’ಬ ಬರುವ ಹಾಗೆ ನಿಲ್ಲುತ್ತಿದ್ದರು, ಹಾಗಾಗಿ ಅವರಿಗೆ ಎರಡು ಖಿಬ್’ಲ ಕೂಡ ಒಟ್ಟಿಗೆ ಸಿಗುತ್ತಿತ್ತು, ಆದರೆ ಮದೀನಕ್ಕೆ ಬಂದ ನಂತರ ಹಾಗೆ ನಿಲ್ಲಲು ಅಸಾಧ್ಯವಾದ ಕಾರಣ, ಪ್ರವಾದಿಯವರು ﷺ ಖಿಬ್’ಲವನ್ನು ಬದಲಾಯಿಸಲು ಬಹಳಷ್ಟು ಬಾರಿ ಪ್ರಾರ್ಥನೆ ನಡೆಸಿ, ವಹ್’ಯ್ (ದಿವ್ಯ ಸಂದೇಶ) ಬರುವುದನ್ನು ಕಾಯುತ್ತಿದ್ದರು. ಹೀಗಿರುವಾಗ ಒಂದು ದಿನ ಅಲ್ ಬಖರ ಅಧ್ಯಾಯದ ನೂರಾ ನಲ್ವತ್’ನಾಲ್ಕನೇ ಸೂಕ್ತವು ಅವತರಿಸಿತು.
“ಪ್ರವಾದಿಯವರೇ ನಿಮ್ಮ ಮುಖವು ಆಕಾಶದತ್ತ ತಿರುಗಿರುವುದನ್ನು ನಾವು ಗಮನಿಸಿದ್ದೇವೆ, ಹಾಗಾಗಿ ನಿಮಗೆ ಇಷ್ಟವಿರುವ ಸ್ಥಳವನ್ನೇ ಖಿಬ್’ಲವಾಗಿ ತಿರುಗಿಸುತ್ತಿದ್ದೇವೆ. ಇನ್ನು ಮುಂದೆ ನೀವು ಮಸ್ಜಿದುಲ್ ಹರಾಮಿನ ಭಾಗಕ್ಕೆ ತಿರುಗಿ ನಿಲ್ಲಿರಿ, ಅಷ್ಟೇ ಅಲ್ಲ ನೀವು ಎಲ್ಲೇ ಇದ್ದರೂ ಕೂಡ ಅದರ ಭಾಗಕ್ಕೆಯೇ ತಿರುಗಿ ನಿಲ್ಲಿರಿ” ಎಂದಾಗಿತ್ತು ಅದರ ಸಾರ.
ಕಅ್’ಬಾಲಯದ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡಲು ಆದೇಶ ಸಿಕ್ಕಿದ ನಂತರ ಪ್ರವಾದಿಯವರು ﷺ ಮಾಡಿದ ಮೊದಲ ನಮಾಝ್ ಅಸರ್ ನಮಾಝ್ ಆಗಿತ್ತು. ಬೇರೆ ಸ್ಥಳದಲ್ಲೂ ಬೈತುಲ್ ಮುಖದ್ದಸಿನ ಭಾಗಕ್ಕೆ ನಿಂತು ನಮಾಝ್ ಮಾಡುತ್ತಿದ್ದವರು ಕೂಡ ಖಿಬ್’ಲ ತಿರುಗಿದ ವಿಷಯ ತಿಳಿದಾಗ, ನಮಾಝಿನಲ್ಲೇ ಕಅ್’ಬಾದ ಭಾಗಕ್ಕೆ ತಿರುಗಿ ನಿಂತರು. ಇಮಾಮ್ ಬುಖಾರಿಯವರು ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು, ಪ್ರವಾದಿಯವರೊಂದಿಗಿದ್ದ ﷺ ವ್ಯಕ್ತಿಯೊಬ್ಬರು ಅಸರ್ ನಮಾಝಿನ ಬಳಿಕ, ಅನ್ಸಾರಿಗಳಿದ್ದ ಒಂದು ಗುಂಪಿನ ಬಳಿ ಹೋದರು. ಅಲ್ಲಿ ಅವರೆಲ್ಲರೂ ಅಸರ್ ನಮಾಝ್ ಮಾಡುತ್ತಿದ್ದರು, ಅದನ್ನು ಕಂಡು ಆ ವ್ಯಕ್ತಿ ಈಗಷ್ಟೇ ಪ್ರವಾದಿಯವರ ﷺ ಜೊತೆಯಲ್ಲಿ ನಮಾಝ್ ಮಾಡಿ ಬಂದಿರುತ್ತೇನೆ, ಪ್ರವಾದಿಯವರು ﷺ ಕಅ್’ಬಾದ ಭಾಗಕ್ಕೆ ತಿರುಗಿ ನಮಾಝ್ ಮಾಡಿದ್ದರು ಎಂದು ಹೇಳಿದಾಗ ಅವರೆಲ್ಲರೂ ನಮಾಝಿನಲ್ಲಿ ರುಕೂಅ್ ಮಾಡುತ್ತಿರುವಾಗಲೇ ಕಅ್’ಬಾದ ಕಡೆಗೆ ಮುಖ ಮಾಡಿ ನಿಂತರು.
ಖುಬಾದ ಜನರಿಗೆ ಖಿಬ್’ಲ ಬದಲಾದ ಮಾಹಿತಿ ಲಭಿಸಿದ್ದು ಮರುದಿನ ಮುಂಜಾನೆ ಸುಬಹಿ ನಮಾಝಿನ ವೇಳೆಯಲ್ಲಾಗಿತ್ತು, ಅವರು ಕೂಡ ಅದೇ ರೀತಿ ನಮಾಝಿನಲ್ಲೇ ಕಅ್’ಬಾದ ಕಡೆಗೆ ತಿರುಗಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-182/365
ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಇಬ್’ನು ಉಮರ್ ◌ؓ ಹೇಳುವುದು ಕಾಣಬಹುದು. ಖುಬಾದ ಜನರು ಸುಬಹಿ ನಮಾಝ್ ಮಾಡುತ್ತಿದ್ದ ಸಂದರ್ಭದಲ್ಲಿ ಅವರ ಬಳಿ ಒಬ್ಬ ವ್ಯಕ್ತಿ ಬಂದು, ಕಳೆದ ರಾತ್ರಿಯಲ್ಲಿ ಪ್ರವಾದಿಯವರಿಗೆ ﷺ ಅವತರಿಸಿದ ಖುರ್’ಆನ್ ಸೂಕ್ತದಲ್ಲಿ ಕಅ್’ಬಾಲಯವನ್ನು ಖಿಬ್’ಲವಾಗಿ ಆಯ್ಕೆ ಮಾಡಿರುವುದಾಗಿ ತಿಳಿಸಲಾಗಿತ್ತು, ಹಾಗಾಗಿ ಅವರು ನಮಾಝಿನಲ್ಲೇ ಶಾಮಿನ ಭಾಗಕ್ಕೆ ನಿಂತಿದ್ದವರು, ಕಅ್’ಬಾದ ಭಾಗಕ್ಕೆ ತಿರುಗಿ ನಮಾಝ್ ಮುಂದುವರಿಸಿದರು ಎಂದು ಹೇಳಿದರು.
ಖಿಬ್’ಲಾದ ಬದಲಾವಣೆಯ ನೆನಪಿಗಾಗಿ ಕಟ್ಟಲಾಗಿದ್ದ ಮಸ್ಜಿದ್ ಆಗಿತ್ತು, ಮಸ್ಜಿದುಲ್ ಖಿಬ್’ಲತೈನಿ ಅಥವಾ ಎರಡು ಖಿಬ್’ಲದ ಮಸ್ಜಿದ್. ಈ ಮಸ್ಜಿದ್’ಗೆ ಮಸ್ಜಿದ್ ಬನೂಸಲಮ ಎಂಬ ಹೆಸರು ಕೂಡ ಇದೆ. ಪ್ರವಾದಿಯವರು ﷺ ಈ ಮಸ್ಜಿದ್’ನಲ್ಲಿ ಅಸರ್ ಅಥವಾ ಸಂಜೆಯ ನಮಾಝ್ ಮಾಡುತ್ತಿದ್ದ ಸಮಯದಲ್ಲಾಗಿತ್ತು, ಖಿಬ್’ಲ ಬದಲಾವಣೆಯ ಖುರ್’ಆನಿನ ಸೂಕ್ತ ಅವತರಿಸಿದ್ದು. ಅದೇ ನಮಾಝಿನಲ್ಲೇ ಪ್ರವಾದಿಯವರು ﷺ ಕಅ್’ಬಾದ ಭಾಗಕ್ಕೆ ತಿರುಗಿ ನಮಾಝ್ ಮುಂದುವರಿಸಿದ ಕಾರಣ, ನಂತರದ ದಿನಗಳಲ್ಲಿ ಈ ಮಸ್ಜಿದನ್ನು ಖಿಬ್’ಲತೈನಿ ಎಂಬ ಹೆಸರಿನಿಂದ ಕರೆಯಲಾಯಿತು. ಶತಮಾನಗಳ ಕಾಲ ಈ ಮಸ್ಜಿದ್’ನಲ್ಲಿ ಎರಡು ಮಿಹ್’ರಾಬ್’ಗಳಿದ್ದವು. (ನಮಾಝ್ ಮಾಡಲು ನಾಯಕತ್ವ ನೀಡುವ ಇಮಾಮ್ ನಿಲ್ಲುವ ವಿಶೇಷವಾದ ಸ್ಥಳ) ಈಗ ಅಲ್ಲಿ ಕಅ್’ಬಾದ ಭಾಗಕ್ಕೆ ತಿರುಗುವ ಮಿಹ್’ರಾಬ್ ಬಿಟ್ಟು ಹಳೆಯ ಖಿಬ್’ಲಾದ ಸ್ಥಳದಲ್ಲಿ ನಮಾಝಿನ ಚಾಪೆಯ (ಮುಸಲ್ಲಾದ ) ಚಿತ್ರಣವನ್ನು ಬಿಡಿಸಲಾಗಿದೆ.
ಬನೂ ಸಲಮಃ ಜನಾಂಗದ ಉಮ್ಮುಬಶೀರ್’ರವರ ಆಮಂತ್ರಣ ಸ್ವೀಕರಿಸಿ, ಅತಿಥಿ ಸತ್ಕಾರಕ್ಕೆ ಬಂದಿದ್ದ ಸಂದರ್ಭದಲ್ಲಿ ಅಂದು ಪ್ರವಾದಿಯವರು ﷺ ಈ ಸ್ಥಳದಲ್ಲಿ ಲುಹರ್ ನಮಾಝ್ (ಮಧ್ಯಾಹ್ನದ ನಮಾಝ್) ಮಾಡಿದ್ದರು, ಎಂಬ ಅಭಿಪ್ರಾಯವನ್ನು ಉಸ್ಮಾನ್ ಬಿನ್ ಮುಹಮ್ಮದ್’ರು ﷺ ಹೇಳಿರುವುದನ್ನು, ಇಬ್’ನುನ್ನಜ್ಜಾರ್ ಉಲ್ಲೇಖಿಸಿದ್ದು ಕಾಣಬಹುದು.
ಪ್ರವಾದಿಯವರು ﷺ ನಮಾಝ್ ಮಾಡಿದ ಸ್ಥಳವೆಂಬ ಗೌರವವನ್ನು ಪರಿಗಣಿಸಿ, ಪ್ರಮುಖ ಸ್ವಹಾಬಿಯಾಗಿದ್ದ ಇಬ್’ನುಲ್ ಉಮರ್’ರವರು ◌ؓ ಆಗಾಗ ಬಂದು ಈ ಸ್ಥಳದಲ್ಲಿ ನಮಾಝ್ ಮಾಡುತ್ತಿದ್ದರು. ಇವತ್ತಿಗೂ ಮದೀನಕ್ಕೆ ಬರುವ ಯಾತ್ರಿಕರು ಈ ಮಸ್ಜಿದ್’ನ ಬಳಿ ಬಂದು ಇಲ್ಲಿ ನಮಾಝ್ ಮಾಡುವುದು ಕಾಣಬಹುದು.
ಐದನೇ ಖಲೀಫ ಎಂದು ಪ್ರಸಿದ್ದರಾಗಿದ್ದ ಉಮರ್ ಬಿನ್ ಅಬ್ದುಲ್ ಅಝೀಝ್’ರವರ ◌ؓ ಆಡಳಿತ ಅವಧಿಯಲ್ಲಿ ಈ ಮಸ್ಜಿದಿನ ಪುನರ್ನಿರ್ಮಾಣವನ್ನು ನಡೆಸಲಾಗಿತ್ತು. 1931 ರಲ್ಲಿ ಅಬ್ದುಲ್ ಅಝೀಝ್ ರಾಜ ಹಾಗೂ 1987 ರಲ್ಲಿ ಫಹದ್ ರಾಜರು ಮಾಡಿದ ಅಭಿವೃದ್ಧಿಯು ಬಹಳಷ್ಟು ಗಮನಾರ್ಹವಾಗಿದೆ. ಈ ಹಿಂದೆ ಕೇವಲ ನಾನೂರು ಚದರ ಮೀಟರ್ ವಿಸ್ತೀರ್ಣವಿದ್ದ ಈ ಮಸ್ಜಿದ್’ನಲ್ಲಿ, ಇಂದು ಸುಮಾರು ಎರಡು ಸಾವಿರದಷ್ಟು ಜನರಿಗೆ ಒಳಾಂಗಣ ಹಾಗೂ ಅಂಗಳದಲ್ಲಿ ಸೇರಿ ನಮಾಝ್ ಮಾಡುವಷ್ಟು ಸೌಲಭ್ಯವಿರುವುದು ಕಾಣಬಹುದು.
ಖಿಬ್’ಲಾದ ಬದಲಾವಣೆಯ ನಂತರ ಸತ್ಯನಿಷೇದಿಗಳು, ಕಪಟ ವಿಶ್ವಾಸಿಗಳು ಹಾಗೂ ಯಹೂದಿಗಳು ನಿಮ್ಮ ಬಳಿ ಬಂದು ಯಾಕೆ ನೀವು ಹಳೆಯ ಖಿಬ್’ಲವನ್ನು ಬದಲಾಯಿಸಿದ್ದು ಎಂದು ಕೇಳಬಹುದು ಎಂದು ಅಲ್ಲಾಹನು ಪ್ರವಾದಿಯವರಿಗೆ ﷺ ತಿಳಿಸಿದ್ದು, ಅಲ್ ಬಖರ ಅಧ್ಯಾಯದ ನೂರ ನಲ್ವತ್ತೆರಡನೇ ಸೂಕ್ತದಲ್ಲಿ ಇರುವುದು ಕಾಣಬಹುದು. ಅದರ ಸಾರವು ಈ ರೀತಿಯಾಗಿದೆ, “ಇವರು ಇಲ್ಲಿವರೆಗೆ (ನಮಝಿಗಾಗಿ) ತಿರುಗಿ ನಿಂತಿದ್ದ ಭಾಗದಿಂದ ಬದಲಾವಣೆ ಮಾಡಿರುವುದರ ಕಾರಣವೇನೆಂದು ಮೌಢ್ಯರಾದ ಕೆಲವು ಜನರು ಕೇಳಬಹುದು, (ಪ್ರವಾದಿಯವರೇ) ನೀವು ಹೇಳಿರಿ, ಪೂರ್ವ, ಪಶ್ಚಿಮ ಎರಡು ದಿಕ್ಕು ಕೂಡ ಅಲ್ಲಾಹನದ್ದೇ ಆಗಿದೆ. ಅವನು ಇಚ್ಛಿಸುವ ಜನರನ್ನು ಸನ್ಮಾರ್ಗಕ್ಕೆ ಕಳುಹಿಸುವನು”
ಅಲ್ಲಾಹನು ಹೇಳಿದಂತೆ, ಖಿಬ್’ಲ ಬದಲಾವಣೆಯ ವಿಷಯದಲ್ಲಿ ಬಹಳಷ್ಟು ಮಾತುಗಳನ್ನು ಕೇಳಲು ಸಾಧ್ಯವಾಯಿತು. ಅದಕ್ಕೆ ಮುಸ್ಲಿಮರು ಅವರಲ್ಲಿ, “ನಾವು ಆ ಬದಲಾವಣೆಯನ್ನು ಒಪ್ಪಿಕೊಳ್ಳುತ್ತೇವೆ, ಅದನ್ನು ಅದೇ ರೀತಿ ಖಂಡಿತ ಪಾಲಿಸುತ್ತೇವೆ” ಎಂದು ಹೇಳಿದರು. ಆದರೆ ಸತ್ಯ ನಿಷೇದಿಗಳು, “ಮುಹಮ್ಮದ್’ರು ﷺ ನಮ್ಮ ಖಿಬ್’ಲಾದ ಭಾಗಕ್ಕೆ ತಿರುಗಿದ ಹಾಗೆ, ನಮ್ಮ ಹಳೆಯ ಧರ್ಮಕ್ಕೂ ಮರಳಬಹುದು ಎಂದು ಅನಿಸುತ್ತದೆ, ನಮ್ಮ ಖಿಬ್’ಲ ಸತ್ಯವಾದ ಕಾರಣ ಈಗ ಮುಹಮ್ಮದ್’ರು ﷺ ನಮ್ಮ ಖಿಬ್’ಲಾದ ಭಾಗಕ್ಕೆ ತಿರುಗಿದ್ದು” ಎಂದು ಹೇಳಿದರು. ಯಹೂದಿಗಳು “ಮುಹಮ್ಮದ್ ಪ್ರವಾದಿಯವರು ﷺ ಗತಕಾಲದ ಪ್ರವಾದಿಯವರ ಖಿಬ್’ಲಾದಿಂದ ದೂರ ಸರಿದಿದ್ದಾರೆ, ಬಹುಶಃ ಮುಹಮ್ಮದ್’ರು ﷺ ನೈಜವಾದ ಪ್ರವಾದಿಯಾಗಿರುತ್ತಿದ್ದರೆ.? ಗತಕಾಲದ ಪ್ರವಾದಿಯವರ ﷺ ಖಿಬ್’ಲವನ್ನೇ ಆಯ್ಕೆ ಮಾಡಿ ನಮಾಝ್ ಮಾಡಬೇಕಿತ್ತು” ಎಂದು ಹೇಳಿದರು.
ಆದರೆ ಕಪಟ ವಿಶ್ವಾಸಿಗಳು “ಮುಹಮ್ಮದ್ ಪ್ರವಾದಿಯವರಿಗೆ ﷺ ಯಾವ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡಬೇಕೆಂದು ಗೊತ್ತಿಲ್ಲ, ಯಾಕೆಂದರೆ ಮೊದಲು ತಿರುಗಿದ ಖಿಬ್’ಲ ಸರಿಯಾಗಿದ್ದರೆ.? ಅದನ್ನು ಈಗ ಕೈಬಿಟ್ಟಿದ್ದಾರೆ. ಇನ್ನೂ ಈಗ ತಿರುಗಿದ ಖಿಬ್’ಲ ಸರಿಯಾಗಿದ್ದರೆ.? ಮುಹಮ್ಮದ್’ರು ﷺ ಈ ಮೊದಲು ಅಸತ್ಯದ ದಾರಿಯಲ್ಲಿ ಇದ್ದರು” ಎಂದು ಹೇಳಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-183/365
ಒಟ್ಟಾರೆ ಹೇಳುವುದಾದರೆ, ಖಿಬ್’ಲ ಬದಲಾವಣೆಯಾಗಿದ್ದು ಇಡೀ ಧರ್ಮದ ತಳಹದಿಯೇ ಕುಸಿದು ಬಿದ್ದ ಹಾಗೆ ವಿರೋಧಿಗಳು ಆರೋಪಿಸ ತೊಡಗಿದರು. ಇಂತಹ ಯಾವುದೇ ಆರೋಪಕ್ಕೂ ಒಂದೊಂದಾಗಿ ಉತ್ತರ ಕೊಡದೆ, ಪೂರ್ವ ಪಶ್ಚಿಮ ದಿಕ್ಕುಗಳೆಲ್ಲವೂ ಅಲ್ಲಾಹನದ್ದೇ ಆಗಿರುತ್ತದೆ. ಬೇರೆ ಯಾವುದಾದರೂ ಭಾಗಕ್ಕೆ ತಿರುಗಿ ನಿಲ್ಲಲು ಅವನು ಆದೇಶ ನೀಡಿದರೆ, ಆ ಭಾಗಕ್ಕೆ ತಿರುಗುವುದಲ್ಲದೆ, ಇದೇ ಭಾಗಕ್ಕೆ ತಿರುಗಿ ನಿಲ್ಲಬೇಕು, ಎಂಬ ಅನಿವಾರ್ಯತೆ ಯಾವುದೇ ದಿಕ್ಕಿಗೂ ಇಲ್ಲ, ಎಂದು ಎಲ್ಲರಿಗೂ ತಿಳಿಯುವ ಹಾಗೆ ಪವಿತ್ರ ಕುರ್’ಆನ್ ಒಂದೇ ವಾಕ್ಯದಲ್ಲಿ ಉತ್ತರ ನೀಡಿತು.
ಹೀಗೆ ಬಹಳಷ್ಟು ಆರೋಪಗಳು ನಾನಾ ದಿಕ್ಕಿಗಳಿಂದ ಕೇಳಲು ಸಾಧ್ಯವಾದಾಗ ದುರ್ಬಲ ವಿಶ್ವಾಸಿಗಳ ಮನಸ್ಸೊಳಗೆ ಕಳವಳ ಉಂಟಾಯಿತು. ಅವರು ಗೊಂದಲದಿಂದಲೇ, “ನಾವು ಇಷ್ಟು ದಿನ ಬೈತುಲ್ ಮುಖದ್ದಸಿನ ಭಾಗಕ್ಕೆ ತಿರುಗಿ ನಿಂತು ಮಾಡಿದ ನಮಾಝಿನ ಗತಿಯೇನು.? ಈ ಮೊದಲು ಬೈತುಲ್ ಮುಖದ್ದಸಿನ ಭಾಗಕ್ಕೆ ತಿರುಗಿ ನಿಂತು ನಮಾಝ್ ಮಾಡಿ, ನಮ್ಮಿಂದ ಮರಣ ಹೊಂದಿದವರ ಗತಿ ಏನು.?” ಎಂದು ಕಳವಳ ವ್ಯಕ್ತಪಡಿಸಿದಾಗ, ಅಲ್ ಬಖರ ಅಧ್ಯಾಯದ ನೂರ ನಲ್ವತ್ಮೂರನೇ ಸೂಕ್ತವು ಅವತರಿಸಿತು. ಅದರ ಸಾರವು ಈ ರೀತಿಯಾಗಿದೆ, “ಅದೇ ರೀತಿ ನೀವು ಜನರಿಗೆ ಸಾಕ್ಷಿಗಳಾಗಿರಲು ಹಾಗೂ ರಸೂಲರು ನಿಮಗೆ ಸಾಕ್ಷಿಯಾಗಿರಲು, ನಾವು ನಿಮ್ಮನ್ನು ಉತ್ತಮ ಸುಮೂಹವನ್ನಾಗಿ ಮಾಡಿರುತ್ತೇವೆ, ನೀವು ಈ ಹಿಂದೆ ತಿರುಗಿ ನಿಂತಿದ್ದ ಭಾಗವನ್ನು ನಾವು ಖಿಬ್’ಲವಾಗಿ ನಿಶ್ಚಯಿಸಿದ್ದು. ಯಾಕೆಂದರೆ ರಸೂಲರನ್ನು ಯಾರು ಅನುಸರಿಸುತ್ತಾರೆ, ಯಾರು ವಿರೋಧಿಸುತ್ತಾರೆ ಎಂದು ತಿಳಿಯುವ ಉದ್ದೇಶದಿಂದ ಮಾತ್ರವಾಗಿತ್ತು. ಅಲ್ಲಾಹನು ಸನ್ಮಾರ್ಗಕ್ಕೆ ಕೊಂಡು ಬಂದವರನ್ನು ಹೊರತಾಗಿ ಇತರರಿಗೆ ಅದೊಂದು (ಖಿಬ್’ಲಾದ ಬದಲಾವಣೆ) ಬಹಳ ದೊಡ್ಡ ಸಮಸ್ಯೆಯಾಗಿ ಕಾಣುತ್ತಿತ್ತು. ಅಲ್ಲಾಹನು ನಿಮ್ಮ ವಿಶ್ವಾಸವನ್ನು (ನಮಾಝನ್ನು) ವ್ಯರ್ಥಗೊಳಿಸುವುದಿಲ್ಲ, ಖಂಡಿತವಾಗಿಯೂ ಅಲ್ಲಾಹನು ಮನುಷ್ಯರೊಂದಿಗೆ ಅತ್ಯಧಿಕ ಪ್ರೀತಿ ಇರುವವನೂ ಪರಮ ದಯಾಳು ಆಗಿರುವನು.”
ಮೊದಲು ಬೈತುಲ್ ಮುಖದ್ದಸನ್ನು ಖಿಬ್’ಲವಾಗಿ ನಿಶ್ಚಯಿಸಿ, ನಂತರ ಅದನ್ನು ಕಅ್’ಬಾದ ಭಾಗಕ್ಕೆ ಬದಲಾವಣೆ ಮಾಡಿರುವುದರ ಹಿಂದೆ ಕೆಲವೊಂದು ನಿಗೂಢವಾದ ಉದ್ದೇಶಗಳು ಅಡಗಿತ್ತು. ಒಂದೇ ಸಮಯದಲ್ಲಿ ಮುಸ್ಲಿಮರಿಗೆ, ಯಹೂದಿಗಳಿಗೆ ಹಾಗೂ ಕಪಟ ವಿಶ್ವಾಸಿಗಳಿಗೆ ಒಡ್ಡಿದ ಪರೀಕ್ಷೆಯಾಗಿತ್ತು ಅದು. ಒಳಿತಿನಿಂದ ಕೆಡುಕನ್ನು ದೂರ ಸರಿಸಲು, ಹಾಗೂ ಮುಹಮ್ಮದ್ ಪ್ರವಾದಿಯವರನ್ನು ﷺ ಯಾರು ಪ್ರಾಮಾಣಿಕವಾಗಿ ಹಿಂಬಾಲಿಸುತ್ತಾರೆ ಎಂದು ತಿಳಿಯುವ ಉದ್ದೇಶದಿಂದಲೂ, ಅಲ್ಲಾಹನು ತನ್ನ ದಾಸರಿಗೆ ಒಡ್ಡಿದ ಪರೀಕ್ಷೆಯಾಗಿತ್ತು ಅದು.
ಪ್ರವಾದಿಯವರ ﷺ ಆದೇಶವನ್ನು ಚಾಚೂ ತಪ್ಪದೆ ಪಾಲಿಸಲೇ ಬೇಕು ಎಂಬ ಸೂಚನೆಯನ್ನೂ ಕೂಡ ತಿಳಿಸುವುದು ಈ ನಿಯಮದ ಹಿಂದಿನ ಮತ್ತೊಂದು ಉದ್ದೇಶವಾಗಿತ್ತು. ಯಾಕೆಂದರೆ ವಿರೋಧಿಗಳ ಬಹಳಷ್ಟು ಶಕ್ತಿಯುತವಾಗಿ ತಮ್ಮ ಜಾಲವನ್ನು ಬೀಸ ತೊಡಗಿದ್ದರು, ಅವರು ಜನರಲ್ಲಿ ಮುಹಮ್ಮದ್’ರ ﷺ ಧರ್ಮ ಅದು ಅಲ್ಲಾಹನ ಧರ್ಮವಲ್ಲ, ಅದು ಅವರೇ ಉಂಟುಮಾಡಿದ ಹೊಸ ಧರ್ಮ, ಹಾಗಾಗಿ ಅದು ಸ್ಥಿರತೆ ಇಲ್ಲದೆ ಆಚೆ ಈಚೆ ಬದಲಾಗುತ್ತಲೇ ಇರುತ್ತದೆ. ಅವರ ಜೊತೆಯಲ್ಲಿ ಸೇರಿದವರಿಗೂ ಕೂಡ ನಾಶವಾಗಿದೆ ಸಂಭವಿಸಲಿರುವುದು ಎಂಬ ರೀತಿಯಲ್ಲಿ ಅಪಪ್ರಚಾರ ಮಾಡುತ್ತಿದ್ದರು. ಕೆಲವರು ಈ ಅಪಪ್ರಚಾರಕ್ಕೆ ಸಿಲುಕಿ ಪುನಃ ಇಸ್ಲಾಮ್ ಬಿಟ್ಟು ಹೊರಗೆ ಹೋದರು. ಇಂತಹ ಪರಿಸ್ಥಿತಿಯಲ್ಲಿಯೂ ಕೂಡ ದೃಢವಾಗಿ ನಿಲ್ಲುವ ವಿಶ್ವಾಸಿಗಳನ್ನು ಅರಿತುಕೊಳ್ಳುವ ನಿಟ್ಟಿನಲ್ಲಿ ಇಟ್ಟ ಮಹತ್ತರವಾದ ಒಂದು ಹೆಜ್ಜೆಯಾಗಿತ್ತು ಇದು.
ಖಿಬ್’ಲ ಬದಲಾವಣೆಯ ಘಟನೆಯಿಂದ ಸತ್ಯವಿಶ್ವಾಸಿಗಳಿಗೆ ಬಹಳಷ್ಟು ಪಾಠಗಳು ತಿಳಿಯಲಿದೆ, ಅವುಗಳಲ್ಲಿ ಕೆಲವೊಂದನ್ನು ತಿಳಿಸುತ್ತಿದ್ದೇವೆ.
ಒಂದು: ಒಂದು ಪ್ರತ್ಯೇಕವಾದ ದಿಕ್ಕನ್ನು ಖಿಬ್’ಲವಾಗಿ ಆಯ್ಕೆ ಮಾಡಿರುವುದರ ಉದ್ದೇಶ, ಅಲ್ಲಾಹನು ಆ ಭಾಗದಲ್ಲಿ ಇರುವುದರಿಂದಲೋ, ಅಥವಾ ಆ ಭಾಗದಲ್ಲಿ ವಿಶೇಷ ಒಲವು ಇರುವುದರಿಂದಲೋ ಅಲ್ಲ, ಬದಲಾಗಿ ಸಮುದಾಯದ ಏಕೀಕರಣ ಹಾಗೂ ಅನುಕೂಲತೆಗಾಗಿ ಮಾತ್ರವಾಗಿತ್ತು. ಅಲ್ ಬಖರ ಅಧ್ಯಾಯದ ನೂರ ನಲ್ವತ್ತೆರಡನೇ ಸೂಕ್ತದಲ್ಲಿ ಅಲ್ಲಾಹನು ಪ್ರವಾದಿಯವರಲ್ಲಿ ﷺ ತಿಳಿಸುವುದು ಕಾಣಬಹುದು. (ಪ್ರವಾದಿಯವರೇ ﷺ) ಹೇಳಿರಿ, ಪೂರ್ವ, ಪಶ್ಚಿಮ ದಿಕ್ಕುಗಳೆಲ್ಲವೂ ಅಲ್ಲಾಹನದ್ದೇ ಆಗಿದೆ, ಅವನು ಉದ್ದೇಶಿಸುವ ವ್ಯಕ್ತಿಗಳನ್ನು ಸನ್ಮಾರ್ಗದಲ್ಲಿ ನಡೆಸುವನು ಎಂದು. ಅಷ್ಟೇ ಅಲ್ಲ ನೂರ ಹದಿನೈದನೇ ಸೂಕ್ತದಲ್ಲೂ ಕೂಡ ಅಲ್ಲಾಹನು ತಿಳಿಸುವುದು ಕಾಣಬಹುದು, “ಪೂರ್ವ ಪಶ್ಚಿಮ ದಿಕ್ಕುಗಳೆಲ್ಲವೂ ಅಲ್ಲಾಹನದ್ದೇ ಆಗಿದೆ. ನೀವು ಯಾವ ದಿಕ್ಕಿಗೆ ತಿರುಗಿ ನಿಂತು ಪ್ರಾರ್ಥನೆ ನಡೆಸಿದರೂ, ಅಲ್ಲಿ ಅಲ್ಲಾಹನ ಅನುಗ್ರಹದ ಸಾನಿಧ್ಯವಿರುತ್ತದೆ. ಅಲ್ಲಾಹನು ಸರ್ವ ಶಕ್ತಿಶಾಲಿಯೂ, ಸರ್ವಜ್ಞನೂ ಆಗಿರುವನು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-184/365
ಎರಡು: ಅಲ್ಲಾಹು ಹಾಗೂ ಅವನ ಪ್ರವಾದಿಯವರು ﷺ ಒಂದು ತೀರ್ಮಾನವನ್ನು ಕೈಗೊಂಡಾಗ ಅದನ್ನು ಸಂಪೂರ್ಣವಾಗಿ ಸತ್ಯವಿಶ್ವಾಸಿಗಳಿಗೆ ಅನುಸರಿಸಲು ಸಾಧ್ಯವಾಗಬೇಕು. ಅಲ್ಲಾಹು ಹಾಗೂ ಅವನ ಪ್ರವಾದಿಯವರು ﷺ ಆದೇಶಿಸಿದ ವಿಷಯದಲ್ಲಿ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಿದೆ ಚಾಚೂ ತಪ್ಪದೆ ಅನುಸರಿಸುವುದು ಒಬ್ಬ ಸತ್ಯ ವಿಶ್ವಾಸಿಯ ಕರ್ತವ್ಯವಾಗಿದೆ. ಅಲ್ಲದವರ ವಿಶ್ವಾಸ ನೈಜವಾದ ವಿಶ್ವಾಸವೇ ಅಲ್ಲ. ಖುರ್’ಆನಿನ ಅಹ್’ಝಾಬ್ ಅಧ್ಯಾಯದ ಮೂವತ್ತಾರನೇ ಸೂಕ್ತದಲ್ಲಿರುವುದು ಕಾಣಬಹುದು. “ಅಲ್ಲಾಹು ಹಾಗೂ ಅವನ ಪ್ರವಾದಿಯವರು ﷺ ಒಂದು ವಿಷಯದಲ್ಲಿ ತೀರ್ಮಾನಿಸದರೆ, ಸತ್ಯ ವಿಶ್ವಾಸಿಯಾದ ಯಾವುದೇ ಪುರುಷನಿಗಾಗಲಿ, ಮಾಹಿಳೆಗಾಗಲಿ ತಮ್ಮ ತೀರ್ಮಾನದ ಬಗ್ಗೆ ಬೇರೆ ಅಭಿಪ್ರಾಯ ಇರಕೂಡದು. ಯಾರಾದರೂ ಅಲ್ಲಾಹನಿಗೂ, ಅವರ ಪ್ರವಾದಿಯವರಿಗೂ ﷺ ವಿರೋಧ ವ್ಯಕ್ತಪಡಿಸಿದರೆ ಅವನು ದಾರಿ ತಪ್ಪಿದವನಾಗಿರುವನು” ಅನ್ನೂರ್ ಅಧ್ಯಾಯದ ಐವತ್ತೊಂದನೆ ಸೂಕ್ತದಲ್ಲಿ ಇರುವುದು ಕಾಣಬಹುದು, “ಅವರ ನಡುವೆ ಆದೇಶ ನಿರ್ಣಯಿಸಲು ಅಲ್ಲಾಹನ ಹಾಗೂ ಪ್ರವಾದಿಯವರ ಕಡೆಗೆ ಕರೆಯಲ್ಪಟ್ಟರೆ, ಸತ್ಯವಿಶ್ವಾಸಿಗಳು ನಾವು ಕೇಳಿರುತ್ತೇವೆ, ಅದನ್ನು ಪಾಲಿಸಿರುತ್ತೇವೆ ಎಂದು ಹೇಳುವರು, ಅವರೇ ಆಗಿರುವರು ವಿಜೇತರು.”
ಮೂರು: ಖುರ್’ಆನ್ ಮಾತ್ರವಲ್ಲದೆ ಬೇರೆ ವಿಷಯಗಳು ಕೂಡ ಅಲ್ಲಾಹನಿಂದ ಪ್ರವಾದಿಯವರಿಗೆ ﷺ ವಹಿಯ್ (ದಿವ್ಯ ಸಂದೇಶ) ಲಭಿಸುತ್ತದೆ ಎಂದು ಈ ಘಟನೆಯಿಂದ ನಮಗೆ ಅರ್ಥವಾಯಿತು. ಅಲ್ ಬಖರ ಅಧ್ಯಾಯದ ನೂರ ನಲ್ವತಮೂರನೇ ಸೂಕ್ತದಲ್ಲಿ “ಪ್ರವಾದಿಯವರನ್ನು ﷺ ಯಾರೆಲ್ಲಾ ಅನುಸರಿಸುತ್ತಾರೆ, ಯಾರೆಲ್ಲಾ ವಿರೋಧಿಸುತ್ತಾರೆ ಎಂದು ತಿಳಿಯುವ ಉದ್ದೇಶದಿಂದ ಮಾತ್ರವಾಗಿದೆ, ನೀವು ಇಲ್ಲಿಯವರೆಗೆ ತಿರುಗಿ ನಿಂತಿದ್ದ ಭಾಗವನ್ನು ಖಿಬ್’ಲವಾಗಿ ನಿಶ್ಚಯಿಸಿದ್ದದ್ದು” ಎಂದು ಇರುವುದು ಕಾಣಬಹುದು. ಅಂದರೆ ಬೈತುಲ್ ಮುಖದ್ದಸನ್ನು ಕೂಡ ಖಿಬ್’ಲವನ್ನಾಗಿ ಮಾಡಲು ಕೂಡ ಅಲ್ಲಾಹನ ಆದೇಶವಿತ್ತು ಆದರೆ ಇಂತಹ ಒಂದು ಆದೇಶ ಖುರ್’ಆನಿನಲ್ಲಿ ಇರುವುದು ಕಾಣಲು ಸಾಧ್ಯವಿಲ್ಲ, ಅದರರ್ಥ ಖುರ್’ಆನ್ ಅಲ್ಲದ್ದು ಕೂಡ ಪ್ರವಾದಿಯವರಿಗೆ ﷺ ಅಲ್ಲಾಹನಿಂದ ದಿವ್ಯ ಸಂದೇಶ ಸಿಗುತ್ತಿತ್ತು ಎಂದಾಗಿದೆ. ಇಮಾಮ್ ಅಬೂದಾವೂದ್ ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಮಿಖ್’ದಾಮಿ ಬಿನ್ ಮಅ್’ದೀಕರಿಬ’ರವರು ಹೇಳುವುದು ಕಾಣಬಹುದು, ಪ್ರವಾದಿಯವರು ﷺ, ಖಂಡಿತವಾಗಿಯೂ ನನಗೆ ಕಿತಾಬ್ (ಖುರ್’ಆನ್) ಮಾತ್ರವಲ್ಲದೆ, ಅದರಂತೆ ಬೇರೆಯೂ ಕೂಡ ನೀಡಲಾಗಿದೆ ಎಂದು ಹೇಳಿದ್ದರು.
ನಾಲ್ಕು: ಅಲ್ಲಾಹನು ಅವನ ಪ್ರವಾದಿಯವರ ﷺ, ಇಚ್ಛೆ ಹಾಗೂ ಆಸಕ್ತಿಯನ್ನು ಎಷ್ಟರಮಟ್ಟಿಗೆ ಪರಿಗಣಿಸುತ್ತಾನೆ ಎಂಬುದಕ್ಕೆ ಸಾಕ್ಷಿಯಾಗಿದೆ ಈ ಘಟನೆ, ‘ಖಿಬ್’ಲತನ್ ತರ್’ಳಾಹಾ…’ ಎಂಬ ಪದವೇ ಅದನ್ನು ಸಾಬೀತು ಪಡಿಸುತ್ತದೆ. ನಮಾಝ್ ಅಲ್ಲಾಹನ ತೃಪ್ತಿಗಾಗಿ ಮಾಡಬೇಕಾದ ಬಹಳ ಮುಖ್ಯವಾದ ಆರಾಧನೆಯಾಗಿರೂದರಿಂದ ಅದರ ದಿಕ್ಕನ್ನು ಆಯ್ಕೆ ಮಾಡುವುದು ಕೂಡ ಅವನದ್ದೇ ಇಚ್ಛೆಯಾಗಿರಬೇಕು. ಹೀಗಿದ್ದರೂ ಅಲ್ಲಾಹನು ಅವನ ಪ್ರವಾದಿಯವರ ﷺ ಆಸಕ್ತಿ ಹಾಗೂ ಇಚ್ಛೆಯನ್ನು ಪರಿಗಣಿಸಿ, ದಿಕ್ಕನ್ನು ಬದಲಾಯಿಸಿದನು. ಹಾಗಾಗಿ ಈ ಘಟನೆಯು, ಅಲ್ಲಾಹನು ಪ್ರವಾದಿಯವರಿಗೆ ﷺ ನೀಡಿದ ಮಹತ್ವಕ್ಕೆ ಉದಾಹರಣೆ ಕೂಡ ಆಗಿರುತ್ತದೆ.
ಈ ಒಂದು ಪರಿಕಲ್ಪನೆಯನ್ನು ಬಳಸಿ, “ಖಿಬ್’ಲಾದ ಖಿಬ್’ಲ ಎಂದು” ಪ್ರವಾದಿಯವರನ್ನು ﷺ ಕರೆದವರೂ ಇದ್ದಾರೆ. ಮದೀನಕ್ಕೆ ತೆರಳಿ, ಪ್ರವಾದಿಯವರ ﷺ ಕೀರ್ತನೆಗಳನ್ನು ಹಾಡಿದ ನಂತರ ಅಲ್ಲಾಹನಲ್ಲಿ ಪ್ರಾರ್ಥನೆ ಮಾಡುವ ಸಂದರ್ಭದಲ್ಲಿ, ಕಅ್’ಬಾದ ಭಾಗಕ್ಕೆ ತಿರುಗಿ ನಿಲ್ಲಬೇಕೋ.? ಎಂಬ ಒಂದು ಅಭಿಪ್ರಾಯವಿದೆ. ಅದಕ್ಕೆ ಇಮಾಮ್ ಮಾಲಿಕ್’ರು ◌ؓ ಸಮೇತವಾಗಿ ಬಹಳಷ್ಟು ಜನರು ತಿಳಿಸುವುದು ಪ್ರವಾದಿಯವರ ﷺ ನೇರಕ್ಕೆ ನಿಂತು ಪ್ರಾರ್ಥನೆ (ದುಆ) ಮಾಡಬೇಕು ಎಂದಾಗಿದೆ. ವಾಸ್ತವವಾಗಿ ಈ ಪ್ರಶ್ನೆಯನ್ನು, ಅಲ್ಲಾಹನ ಭವನದ ಭಾಗಕ್ಕೆ ತಿರುಗಿ ನಿಲ್ಲಬೇಕೋ.? ಅಥವಾ ಆ ಪವಿತ್ರ ಭವನದ ಮಹತ್ವವನ್ನು ಕಲಿಸಿ ಕೊಟ್ಟ ಪ್ರವಾದಿಯವರ ﷺ ಭಾಗಕ್ಕೆ ತಿರುಗಿ ನಿಲ್ಲಬೇಕೋ.? ಎಂದು ಕೇಳುವುದಾದರೆ ಈ ಪ್ರಶ್ನೆಗೆ ತನ್ನಷ್ಟಕ್ಕೆ ಉತ್ತರ ಸಿಗುತ್ತದೆ. ಪವಿತ್ರ ಕಅ್’ಬಾಲಯದ ಅರ್ಧ ವೃತ್ತಾಕಾರದ ಮಿಹ್’ರಾಬಿನಂತಿರುವ ಸ್ಥಳವು, ಮದೀನಾದ ಭಾಗಕ್ಕಾಗಿದೆ ತಿರುಗಿ ಇರುವುದು ಎಂಬುದು ಕುತೂಹಲಕಾರಿ ಸಂಗತಿಯಾಗಿದೆ. ಏನೇ ಆದರೂ ಪ್ರವಾದಿಯವರನ್ನು ﷺ ಸಂದರ್ಶಿಸುವ ಸಂದರ್ಭದಲ್ಲಿ ಕಅ್’ಬಾದ ಭಾಗಕ್ಕೆ ತಿರುಗಿ ನಿಲ್ಲಬೇಕು ಎಂಬ ವಾದ ಅಧಿಕೃತವಲ್ಲ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-185/365
ಪ್ರವಾದಿಯವರು ﷺ ಮದೀನದ ಆಂತರಿಕ ವ್ಯವಸ್ಥೆಗಳನ್ನು ಕ್ರಮವಾಗಿ ಆಯೋಜಿಸಿ ಕೊಂಡರು. ಮಕ್ಕಾದಿಂದ ಬಂದಿದ್ದ ಸುಮಾರು ನೂರ ಎಂಬತ್ತು ಕುಟುಂಬಗಳು ವ್ಯವಸ್ಥಿತವಾಗಿ, ಮದೀನದ ಕುಟುಂಬಗಳೊಂದಿಗೆ ಸಂಯೋಜಿಸಲ್ಪಟ್ಟವು. ಅದರೊಂದಿಗೆ, ಮದೀನಾವನ್ನು ಪ್ರವೇಶಿಸಿದ ಮೊದಲ ವರ್ಷದಲ್ಲಿ, ಸುಮಾರು ನಾಲ್ಕು ನೂರು ಕುಟುಂಬಗಳು ಸಾರ್ವಜನಿಕವಾಗಿ, ಇಸ್ಲಾಮಿಕ್ ವ್ಯವಸ್ಥೆಯಲ್ಲಿ ಸದಸ್ಯರಾದರು. ಅಂದಿನ ಒಟ್ಟು ಜನಸಂಖ್ಯೆಯ ಚಿತ್ರಣವನ್ನು ನೀಡುವ ಉಲ್ಲೇಖದಲ್ಲಿ ಹುದೈಫತುಲ್ ಯಮಾನ್’ರವರು ಹೇಳುವುದು ಕಾಣಬಹುದು, ಇಸ್ಲಾಂ ಸ್ವೀಕರಿಸಿದ ಜನರ ಹೆಸರನ್ನು ಬರೆದು ಕೊಡಲು ಪ್ರವಾದಿಯವರು ﷺ ನಮ್ಮಲ್ಲಿ ಆಗ್ರಹಿಸಿದಾಗ, ನಾವು ಸಾವಿರದ ಐನೂರು ಜನರ ಹೆಸರನ್ನು ಬರೆದು ಕೊಟ್ಟೆವು. ಇಸ್ಲಾಮಿಕ್ ಸಮುದಾಯದ ಮೊದಲ ಜನಗಣತಿಯಾಗಿತ್ತು ಅದು.
ಪ್ರವಾದಿಯವರ ﷺ ಆಗಮನ ಸಂದರ್ಭದಲ್ಲೂ, ಕಾರ್ಯಾಚರಣೆಯ ಸಂದರ್ಭದಲ್ಲೂ ಹಾಗೂ ಅವರ ವಿಯೋಗದ ನಂತರವೂ ಮಕ್ಕಾದಲ್ಲಿ ಯಹೂದಿಗಳಿದ್ದರು. ಅವರೊಂದಿಗಿರುವ ಸಹವಾಸ ಹಾಗೂ ಸಹಕಾರದ ಕುರಿತು ಇಸ್ಲಾಮಿನಲ್ಲಿ ಸ್ಪಷ್ಟವಾದ ನಿಲುವುಗಳು ಕೂಡ ಇತ್ತು.
ಮದೀನದಲ್ಲಿ ವಿಶೇಷವಾಗಿ ಬನೂ ಖೈನುಖಾಅ್, ಬನೂನಳೀರ್, ಬನೂ ಖುರೈಳ ಎಂಬ ಯಹೂದಿ ಜನಾಂಗಳಿತ್ತು. ಇವರಲ್ಲಿ ಮೊದಲನೇ ಜನಾಂಗ ಖಝ್’ರಜ್’ಗಳ ಜೊತೆಯಲ್ಲಿ ಹಾಗೂ ಮೂರನೇ ಜನಾಂಗ ಔಸ್’ಗಳ ಜೊತೆಯಲ್ಲಿ ಮೈತ್ರಿಮಾಡಿಕೊಂಡಿತ್ತು. ಔಸ್ ಹಾಗೂ ಖಝ್’ರಜ್ ಪರಸ್ಪರ ಯುದ್ಧ ಮಾಡುತ್ತಿದ್ದ ಹಾಗೆ ಯಹೂದಿಗಳು ಕೂಡ ಪರಸ್ಪರ ಆಂತರಿಕ ಯುದ್ಧಗಳು ನಡೆಸುತ್ತಿದ್ದರು. ಈ ಕಾರಣಕ್ಕಾಗಿಯೇ, ಅವರು ಅರಬರ ಎರಡು ಪ್ರತಿಷ್ಠಿತ ಜನಾಂಗದ ನಡುವೆ ಮೈತ್ರಿ ಮಾಡಿಕೊಂಡಿದ್ದು ಕೂಡ. “ಖೈನುಖಾಅ್” ಎಂಬ ಪದದ ಅರ್ಥ ಅಕ್ಕಸಾಲಿಗ (ಚಿನ್ನದ ಕೆಲಸ ಮಾಡುವವನು) ಹಾಗೂ “ನಳೀರ್” ಅಂದರೆ ರೈತ ಅಥವಾ ಕೃಷಿ ಮಾಡುವವರು ಎಂದರ್ಥ. ಖುರೈಳ ಎಂದರೆ ಚರ್ಮದ ಸಿಪ್ಪೆ ಸುಲಿಯುವವರು ಉಪಯೋಗಿಸುವ ವಿಶೇಷವಾದ ಸಸ್ಯಗಳಾಗಿವೆ. ಈ ಹೆಸರುಗಳು ಅವರಿಗೆ ಬಂದದ್ದು ಅವರ ಜನಾಂಗದ ಪ್ರಮುಖ ವೃತ್ತಿಯನ್ನು ತಿಳಿಸುವ ರೂಪದಲ್ಲಿ ಆಗಿರಬಹುದು. ಅದರ ಜೊತೆಯಲ್ಲಿ ಯಹೂದಿಗಳು ಆಹಾರ ಧಾನ್ಯಗಳ ಆಮದು ರಫ್ತು ವ್ಯಾಪಾರಗಳನ್ನೂ, ಹಣ ಕಾಸಿನ ವ್ಯವಹಾರಗಳನ್ನೂ ನಡೆಸುತ್ತಿದ್ದರು.
ಮದೀನದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಕ್ರೈಸ್ತರಿದ್ದರು. ಔಸ್ ಜನಾಂಗದ ಅಬೂ ಆಮಿರ್ ಎಂಬ ವ್ಯಕ್ತಿಯೂ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಪುರೋಹಿತರೆಂದು ಹೇಳಲಾಗುತ್ತದೆ. ಆದರೆ ಆತನ ಮಗ ಹನ್’ಳಲಃ ಮುಸ್ಲಿಂ ವಿಶ್ವಾಸಿಯಾಗಿ, ಉಹ್’ದ್ ಯುದ್ಧದ ಸಂದರ್ಭದಲ್ಲಿ ವೀರ ಮರಣ ಹೊಂದಿದರು, ಅಷ್ಟೇ ಅಲ್ಲದೆ “ಮಲಕ್’ಗಳು ಸ್ನಾನ ಮಾಡಿಸಿದ ವ್ಯಕ್ತಿ” ಅಥವಾ ಗಸೀಲುಲ್ ಮಲಾಇಕಃ ಎಂಬ ಹೆಸರಿನಿಂದಲೂ ಅವರನ್ನು ಕರೆಯಲಾಗುತ್ತದೆ. ಇಸ್ಲಾಮಿನೊಂದಿಗೆ ದ್ವೇಷವನ್ನು ಕಟ್ಟಿಕೊಂಡ ಅಬೂ ಆಮಿರ್ ತನ್ನ ಹದಿನೈದು ಜನ ಅನುಯಾಯಿಗಳ ಜೊತೆಯಲ್ಲಿ ಮದೀನಾ ಬಿಟ್ಟು ಹೋಗಿ, ಉಹುದು ಯುದ್ಧದ ಸಂದರ್ಭದಲ್ಲಿ ಮಕ್ಕ ನಿವಾಸಿಗಳ ಜೊತೆಯಲ್ಲಿ ಸೇರಿಕೊಂಡಿದ್ದರು, ಅಲ್ಲೂ ಭರವಸೆ ಕಳೆದುಕೊಂಡ ಅಬೂ ಆಮಿರ್ ಬೈಝಾಂಟಿಯನ್ ಪ್ರಾಂತ್ಯದಲ್ಲಿ ನೇಲಿಸಿಕೊಂಡರು. ಬೈಝಾಂಟಿಯನ್’ರ ವಿರುದ್ಧ ಪ್ರವಾದಿಯವರು ﷺ ತಬೂಕ್’ಗೆ ತೆರಳುತ್ತಿದ್ದ ಸಂದರ್ಭವನ್ನು ಬಳಸಿಕೊಂಡು, ಬೈಝಾಂಟಿಯನ್’ರ ಸೈನ್ಯವು ಮದೀನಕ್ಕೆ ಆಕ್ರಮಣ ನಡೆಸುತ್ತದೆ ಎಂದು, ಅಬೂ ಆಮಿರ್ ಮದೀನದ ಕಪಟ ವಿಶ್ವಾಸಿಗಳನ್ನು ಒಪ್ಪಿಸಿ, ಅವರಿಗೆ ಜೊತೆ ಸೇರಲು ಮದೀನದ ಖುಬ ಮಸ್ಜಿದ್’ನ ಬಳಿ ಇನ್ನೊಂದು ವಿನಾಶದ ಮಸ್ಜಿದನ್ನು ಕಟ್ಟಲು ಸೂಚನೆಯನ್ನೂ ನೀಡಿದರು. ಈ ಯೋಜನೆಯನ್ನು ತಿಳಿದ ಪ್ರವಾದಿಯವರು ﷺ, ವಿರೋಧಿಗಳ ಆ ಕಟ್ಟಡವನ್ನು ಸಮುದಾಯದ ಸುರಕ್ಷತೆಯ ದೃಷ್ಟಿಯಿಂದ ಅದನ್ನು ಕೆಡವಿ ಹಾಕಲು ಆದೇಶ ನೀಡಿದರು. ಎರಡು ವರ್ಷದ ಬಳಿಕ ಅಬೂ ಆಮಿರ್ ಹೆರಾಕ್ಲಿಯಸ್’ನ ಊರಿನಲ್ಲಿ ಮರಣ ಹೊಂದಿದರು. ಮದೀನದಲ್ಲಿದ್ದ ಕ್ರೈಸ್ತರ ಬಗ್ಗೆ ಇಷ್ಟು ಮಾಹಿತಿಗಳು ಮಾತ್ರವೇ ಲಭ್ಯವಿರುವುದು. ಇನ್ನೂ ಇತರ ಧರ್ಮದ ಅನುಯಾಯಿಗಳು ಇಸ್ಲಾಮಿನ ಆರಂಭಿಕ ಮದೀನದಲ್ಲಿ ಇರಲಿಲ್ಲ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-186/365
ಮದೀನದ ರಾಜಕೀಯ ಭೂಗೋಳವು ಅಲ್ಲಿನ ಜನಾಂಗದ ವಿಚಾರಗಳನ್ನು ಮೀರಿಸಿರಲಿಲ್ಲ. ಅರಬಿಗಳೇ ಆಗಲಿ ಅಥವಾ ಯಹೂದಿಗಳೇ ಆಗಲಿ ಪ್ರತಿಯೊಂದು ಜನಾಂಗವೂ ಅವರವರ ಸ್ವತಂತ್ರ ಘಟಕಗಳನ್ನು ಹೊಂದಿತ್ತು. ಅವರು ತಮ್ಮ ಜನಾಂಗದ ಮುಖ್ಯನನ್ನು ಬಿಟ್ಟು ಇನ್ಯಾರನ್ನೂ ಅನುಸರಿಸುತ್ತಲೂ ಇರಲಿಲ್ಲ, ಈ ಜನಾಂಗದ ಮುಖ್ಯಸ್ಥರಿಗೆ ವಿಷಯಗಳನ್ನು ತೀರ್ಮಾನಿಸಲು ಯಾವುದೇ ರೀತಿಯ ಮಾನದಂಡವಾಗಲೀ ವ್ಯವಸ್ಥೆಯಾಗಲೀ ತಿಳಿದಿರಲಿಲ್ಲ. ಅವರೆಲ್ಲರಿಗೂ ಜೊತೆ ಸೇರಲು ಪ್ರತಿಯೊಂದು ಜನಾಂಗಕ್ಕೂ ಅವರದ್ದೇ ಆದ ವಿಶೇಷ ಸ್ಥಳಗಳೂ ಇರುತ್ತಿತ್ತು, ಕೆಲವೊಮ್ಮೆ ಕೆಲವು ವಿಶೇಷ ವಿಷಯಗಳ ಬಗ್ಗೆ ತೀರ್ಮಾನಿಸಲು ಪ್ರಮುಖ ವ್ಯಕ್ತಿಗಳು ಕೂಡ ಸೇರುತ್ತಿದ್ದರು. ಬೇಸಿಗೆಯಲ್ಲಿ ವಿನೋಧಗಳಿಗಾಗಿ, ಕೆಲವೊಂದು ಮನೋರಂಜನೆಗಳನ್ನು ಆಯೋಜಿಸುತ್ತಿದ್ದರು. ಬನೂ ನಳೀರ್ ಯಹೂದಿಗಳು ಪ್ರತಿಯೊಂದು ಜನಾಂಗಕ್ಕೂ ಪ್ರತಿಯೊಂದು ಸಾರ್ವಜನಿಕ ಠೇವಣಿ ವ್ಯವಸ್ಥೆಗಳನ್ನು (ಕನ್’ಸ್) ಮಾಡಿದ್ದರು, ಜನಾಂಗದ ಜನರೆಲ್ಲರೂ ಇಲ್ಲಿ ಠೇವಣಿ ಮಾಡಿ ಇಡಬೇಕಿತ್ತು, ಯುದ್ಧ ಮುಂತಾದ ಅನೀರಕ್ಷಿತ ಸಂದರ್ಭದಲ್ಲಿ ಇದರಿಂದ ಖರ್ಚುಗಳನ್ನು ನಿಭಾಯಿಸುತ್ತಿದ್ದರು. ಸರಳವಾಗಿ ಹೇಳುವುದಾದರೆ ಒಂದು ವಿಶೇಷ ರೀತಿಯ ಸಾರ್ವಜನಿಕ ಸುರಕ್ಷಾ ವ್ಯವಸ್ಥೆಯಾಗಿತ್ತು ಅದು ಇಂತಹ ಒಂದು ವ್ಯವಸ್ಥೆ ಅರಬಿಗಳ ಎಡೆಯಲ್ಲೂ ಜಾರಿಯಲ್ಲಿತ್ತು. ಇನ್ನೂ ಯಾರಾದರೂ ಏನಾದರೂ ತಪ್ಪುಗಳನ್ನು ಮಾಡಿದರೆ, ಅಥವಾ ನಷ್ಟ ಪರಿಹಾರ ನೀಡಬೇಕಾದ ಪರಿಸ್ಥಿತಿ ಎದುರಾದರೆ.? ತಪ್ಪು ಮಾಡಿದ ವ್ಯಕ್ತಿಯಲ್ಲ ಬದಲಾಗಿ ಅವರ ಜನಾಂಗವಾಗಿತ್ತು ಅದರ ಶಿಕ್ಷೆಯನ್ನು ಅನುಭವಿಸ ಬೇಕಿದ್ದದ್ದು. ಎಲ್ಲಾ ಜನಾಂಗಗಳನ್ನು ನಿಯಂತ್ರಿಸಲು ಒಂದು ಪ್ರತ್ಯೇಕವಾದ ಆಡಳಿತ ಮಂಡಳಿ ಇಲ್ಲದ ಕಾರಣ ಅಪರಾಧ ಮಾಡಿದವನು ಹಾಗೂ ಅದನ್ನು ಎದುರಿಸಿದವನು ಬೇರೆ ಬೇರೆ ಜನಾಂಗದ ವ್ಯಕ್ತಿಗಳಾಗಿದ್ದರೆ ಜನಾಂಗದ ಮುಖ್ಯಸ್ಥರು ಕುಳಿತು ಪರಸ್ಪರ ಚರ್ಚೆ ನಡೆಸಿ ತೀರ್ಮಾನ ತೆಗಿಯುತ್ತಿದ್ದರು. ಆದರೆ ಇಲ್ಲಿ ನ್ಯಾಯ ಸಿಗುವುದು ಮಾತ್ರ ಸಂಶಯದ ಮಾತಾಗಿತ್ತು, ಕಾರಣ ಇಲ್ಲಿ ಯಾರು ಶಕ್ತಿವಂತರಾಗಿರುತ್ತಾರೋ.? ಅವರ ಭಾಗಕ್ಕೆ ತೀರ್ಪುಗಳು ಹೋಗುತ್ತಿತ್ತು. ಕೊಲ್ಲಲ್ಪಡುವವರು ದುರ್ಬಲ ಜನಾಂಗದ ಜನರಾಗಿದ್ದರೆ, ಅವರ ಸಂಬಂಧಿಕರಿಗೆ ಸಿಗುತ್ತಿದ್ದ ಪರಿಹಾರ ಪ್ರಬಲ ಜನಾಂಗದ ಜನರಿಗಿಂತ ಅರ್ಧದಷ್ಟು ಮಾತ್ರವಾಗಿತ್ತು. ಇಲ್ಲಿ ಯಾವುದಕ್ಕೂ ಯಾವುದೇ ರೀತಿಯ ನಿಯಮ ವ್ಯವಸ್ಥೆಯೂ ಕೂಡ ಇರಲಿಲ್ಲ, ಕೆಲವೊಂದು ಜನರು ಸೇರಿ ಮಾಡುವ ಚರ್ಚೆಯಲ್ಲಿ, ಯಾರೋ ಒಬ್ಬ ವ್ಯಕ್ತಿ ಗುಂಪಿನಲ್ಲಿ ತನಗೆ ಅನಿಸಿದಂತೆ ನೀಡುವ ತೀರ್ಪುಗಳಾಗಿತ್ತು ಮಾತ್ರವಾಗಿತ್ತು ಇದು. ಕೆಲವೊಮ್ಮೆ ಅದು ನ್ಯಾಯಕ್ಕೆ ಸಂಪೂರ್ಣ ವಿರುದ್ಧವಾಗಿ ಸಾಂಪ್ರದಾಯಿಕ ಆಧಾರದ ಮೇಲಾಗಿಯೂ ಇರುತ್ತಿತ್ತು.
ಅವರ ಜನಾಂಗವು ಮೂಲಭೂತವಾಗಿ ಸಂಕುಚಿತ ಸಮಾಜವಾಗಿತ್ತು. ಇದರಲ್ಲಿ ಜನಾಂಗದ ಪ್ರತಿಷ್ಠೆ, ಸ್ವಾಭಿಮಾನ, ಸಂಘರ್ಷ ಮನೋಭಾವನೆ ಹಾಗೂ ಸುಧಾರಣಾವಿರೋಧಿ ಎಲ್ಲವೂ ಇರುತ್ತಿತ್ತು. ಆದರೆ ಅವುಗಳಲ್ಲಿದ್ದ ಕೆಲವೊಂದು ವಿಶೇಷತೆಗಳೆಂದರೆ, ತಂಡದ ಮನೋಭಾವ, ಹೋರಾಟದ ಛಲ, ಆತಿಥ್ಯ, ಪ್ರೀತಿಯ ಆಲೋಚನೆ, ಹಾಗೂ ಮನೋಬಲ ಮುಂತಾದವುಗಳಾಗಿತ್ತು. ಪುರಾಣಗಳು ಹಾಗೂ ದಂತಕಥೆಗಳು ಅವರ ಅಭಿವ್ಯಕ್ತಿಗಳಿಗೆ ಪ್ರಭಾವ ಬೀರಿತ್ತು. ಜಾನಪದ ಕಥೆ, ದಂತಕಥೆ ಹಾಗೂ ಗಾದೆಗಾಳಗಿತ್ತು ಅವರ ಸಭೆಗಳನ್ನು ನಿಯಂತ್ರಣ ಮಾಡುತ್ತಿದ್ದದ್ದು.
ಸಂಖ್ಯೆಯಲ್ಲಿ ಹಾಗೂ ಗಾತ್ರದಲ್ಲಿ ವಿಭಿನ್ನವಾದ ನಲ್ವತ್’ನಾಲ್ಕು ಜನಾಂಗಗಳು ಅಂದು ಮದೀನದಲ್ಲಿತ್ತು, ಅವರೆಲ್ಲರನ್ನೂ ಪ್ರವಾದಿಯವರು ﷺ ಸಾಮಾನ್ಯ ಆಯಾಮದಲ್ಲಿ ಒಂದುಗೂಡಿಸುವ ಕಾರ್ಯವನ್ನು ಕೂಡ ನಿರ್ವಹಿಸಬೇಕಿತ್ತು.
ಅರಬ್ ಜನಾಂಗದ ವಿಭಾಗಗಳು, ಯಹೂದಿ ಜನರ ವಿಭಾಗಗಳು, ಕ್ರೈಸ್ತರು ಹಾಗೂ ಇತರರು, ಹೀಗೆ ವಿವಿಧ ಸಮುದಾಯಗಳನ್ನು ಪ್ರವಾದಿಯವರು ﷺ ಎದುರಿಸಿದ್ದರು. ಮಜೂಸಿಗಳು, ಸೌರಾಷ್ಟ್ರರು ಹಾಗೂ ಮಾಗಿಗಳು ಇವರು ಇತರ ಸಮುದಾಯದ ಸಾಲಿನಲ್ಲಿ ಬರುವ ಜನರಾಗಿದ್ದರು. ಈ ವಿಭಿನ್ನ ವಿಭಾಗಗಳು ಹಾಗೂ ಭೌಗೋಳಿಕವಾಗಿ ವಾಸಿಸುವ ಪ್ರಾಂತ್ಯಗಳ ಬಗ್ಗೆ ಒಂದು ಸಣ್ಣ ಅಧ್ಯಯನ ನಡೆಸುವುದು ಆಸಕ್ತಿದಾಯಕವಾಗಿರುತ್ತದೆ.
ಬನೂ ಮುದ್’ಲಜ್, ಬನೂ ಗಿಫಾರ್, ಖುಸಾಅ, ಅಸ್’ಲಂ, ಮುಸ್’ತಲಖ್, ಮುಸೈನ, ಶನುಅ ಎಂಬ ಈ ಜನಾಂಗಗಳು ಮದೀನದ ಪಶ್ಚಿಮ ಭಾಗದಲ್ಲಿ ವಾಸವಾಗಿತ್ತು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-187/365
ಮೇಲೆ ತಿಳಿಸಿದ ಬನೂಸಮೂರ ಹಾಗೂ ಬನೂ ಮುದ್’ಲಜ್ ಜನಾಂಗವು ಪ್ರಸಿದ್ಧವಾದ “ಕಿನಾನ” ಜನಾಂಗದ ಶಾಖೆಗಳಾಗಿತ್ತು. ಸುಮಾರು ಹಿಜ್’ರ ಮೂರನೇ ವರ್ಷದ ಸಂದರ್ಭದಲ್ಲಿ ಈ ಜನಾಂಗದಿಂದ ಬಹಳಷ್ಟು ಜನರು ಇಸ್ಲಾಮ್ ಸ್ವೀಕರಿಸಲು ಆರಂಭಿಸಿದರು. ಜಿಆರ್ ಬಿನ್ ಸುರಾಖ, ಅಂರ್ ಬಿನ್ ಉಮಯ್ಯಃ, ಅಲ್’ಖಮ ಬಿನ್ ಮುಜಸ್ವಿಸ್, ಉಮಯ್ಯ ಬಿನ್ ಖುವೈಲಿದ್ ಎಂಬ ಗಣ್ಯ ವ್ಯಕ್ತಿಗಳು ಕೂಡ ಅವರ ಜೊತೆಯಲ್ಲಿದ್ದರು. ಬನೂ ಸಮೂರ ಜನಾಂಗದ ಶಾಖೆಯಾದ ಗಿಫಾರ್ ಜನಾಂಗವು, ಪ್ರಮುಖ ಸ್ವಹಾಬಿಯಾದ ಅಬೂದರ್’ರವರ ಜನಾಂಗವಾಗಿತ್ತು. ಅವರ ಸಹೋದರರಾದ ಉನೈಸ್, ಅಬೂರುಫ್’ಮ್ ಹಾಗೂ ಜನಾಂಗದ ಸುಮಾರು ಅರ್ಧದಷ್ಟು ಜನರು ಹಿಜ್ರಾದ ಮೊದಲೇ ಇಸ್ಲಾಮನ್ನು ಸ್ವೀಕರಿಸಿದ್ದರು. ಹಿಜ್ರಾದ ನಂತರ ಉಳಿದ ಜನರು ಕೂಡ ಇಸ್ಲಾಂ ಸ್ವೀಕರಿಸಿದರು.
ಕಿನಾನ ಜನಾಂಗದ ಇನ್ನೊಂದು ಉಪ ಶಾಖೆಯಾದ ಜಝೀಮ ಜನಾಂಗವು, ಹಿಜ್ರಾ ಎಂಟನೇ ವರ್ಷದಲ್ಲಿ ಸಂಪೂರ್ಣವಾಗಿ ಇಸ್ಲಾಮ್ ಸ್ವೀಕರಿಸಿತು. ಹಿಜಾಝಿನಲ್ಲಿ ಬೀಡು ಬಿಟ್ಟಿದ್ದ ಅಸ್ಲಮ್, ಖುಸಾಅ ಹಾಗೂ ಬನುಲ್’ಮುಸ್’ತಲಖ್ ಎಂಬ ಜನಾಂಗವು ಹಿಜ್ರಾದ ಮೊದಲೇ ಇಸ್ಲಾಂ ಸ್ವೀಕರಿಸಿದ್ದರು. ಮಕ್ಕಾವಿಜಯದ ಸಂದರ್ಭದಲ್ಲಿ ಖುಸಾಅ ಜನಾಂಗದ ಶಾಖೆಯಾದ ಬನೂ ಅಸ್’ಲಂ ಜನಾಂಗದಿಂದ ಸುಮಾರು ನಾಲ್ಕುನೂರರಷ್ಟು ಜನರು ಹಾಗೂ, ಬನೂ ಕಅಬ್ ಜನಾಂಗದಿಂದ ಸುಮಾರು ಐನೂರರಷ್ಟು ಜನರು ಇಸ್ಲಾಮ್ ಸ್ವೀಕರಿಸಿದರು. ಮದೀನದ ಪಶ್ಚಿಮ ದಿಕ್ಕಿನಲ್ಲಿ ವಾಸಿಸುತ್ತಿದ್ದ ಪ್ರಮುಖ ಜನಾಂಗವಾದ ಮುಸೈನ ಹಾಗೂ ಜುಹೈನ ಜನಾಂಗವು, ಅನ್ಸಾರಿಗಳಾದ ಔಸ್ ಹಾಗೂ ಖಝ್’ರಜ್ ಜನಾಂಗದವರ ನಡುವೆ ಜೀವಿಸುತ್ತಿದ್ದ ಕಾರಣ, ಅವರಿಗೆ ಇಸ್ಲಾಮಿನ ಬಗ್ಗೆ ಅತೀ ವೇಗವಾಗಿ ಕಲಿತು, ಇಸ್ಲಾಮ್ ಸ್ವೀಕರಿಸಲು ಅವರಿಗೆ ಸಾಧ್ಯವಾಗಿತ್ತು. ಹಿಜ್’ರಾ ಎರಡನೇ ವರ್ಷದಲ್ಲಿ ನಡೆದ ಬದ್’ರ್ ಯುದ್ಧದಲ್ಲಿ ಜುಹೈನ ಜನಾಂಗದಿಂದ ಐದು ಜನರು ಹಾಗೂ ಮುಸೈನದಿಂದ ಒಬ್ಬರು ಭಾಗವಹಿಸಿದ್ದರು. ಅದೀಬ್ ಬಿನ್ ಅಬೀ ಸಗ್’ಬ, ಸಂರ್ ಬಿನ್ ಅಂರ್, ಬಸ್ ಬಾಸ್ ಬಿನ್ ಅಂರ್, ಆಸ್ವೀಮ್ ಬಿನ್ ಉಮೈರ್, ವದೀಅತ್ ಬಿನ್ ಅಂರ್, ಹಾಗೂ ಝಿಯಾದ್ ಬಿನ್ ಕಅಬ್ ಎಂದಾಗಿತ್ತು ಆ ಧೀರ ಯೋಧರ ಹೆಸರು. ಈ ಜನಾಂಗದಿಂದ ಗುಂಪು ಗುಂಪಾಗಿ ಇಸ್ಲಾಮ್ ಸ್ವೀಕರಿಸಿರುವ ಬಗ್ಗೆ ಇತಿಹಾಸಕಾರರು ದಾಖಲಿಸಿದ್ದು ಕಾಣಬಹುದು. ಮಕ್ಕಾ ವಿಜಯದ ಸಂದರ್ಭದಲ್ಲಿ ಇವರ ಕಡೆಯಿಂದ, ಸುಮಾರು ಎಂಟು ನೂರರಿಂದ ಸಾವಿರದಷ್ಟು ಜನರು ಭಾಗವಹಿಸಿದ್ದರು, ಅದರಲ್ಲಿ ಸುಮಾರು ಐತ್ತರಿಂದ ನೂರರಷ್ಟು ಅಶ್ವ ಸೇನೆಯೇ ಇತ್ತು.
ಮದೀನದ ಪಶ್ಚಿಮ ಭಾಗದ ಪ್ರಾಂತ್ಯಗಳಲ್ಲಿ ಜೀವಿಸುತ್ತಿದ್ದ ಇನ್ನೆರಡು ಜನಾಂಗವಾಗಿತ್ತು, ಅಸ್’ದ್ ಹಾಗೂ ಶನೂಬ್ ಜನಾಂಗ. ಅವರೂ ಕೂಡ ಹಿಜ್ರಾದ ಮೊದಲೇ ಪ್ರವಾದಿಯವರನ್ನು ﷺ ಅಂಗೀಕರಿಸಿ ಇಸ್ಲಾಮ್ ಸ್ವೀಕರಿಸಿದ್ದರು. ಇವರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದ, ಸಮಾದ್ ಬಿನ್ ಸಅಲಬರು ಕ್ರಿ. ಶ 613 ರಲ್ಲಿ ಉಮ್ರಾ ಮಾಡಲು ಮಕ್ಕಾ ನಗರಕ್ಕೆ ಬಂದಿದ್ದ ಸಂದರ್ಭದಲ್ಲಿ ಪ್ರವಾದಿಯವರನ್ನು ﷺ ಕಂಡು, ಭೇಟಿಯಾಗಿ ಇಸ್ಲಾಮ್ ಸ್ವೀಕರಿಸಿದ್ದರು. ನಂತರ ಅವರ ನಿರಂತರವಾದ ಪರಿಶ್ರಮ ಕಾರಣದಿಂದಾಗಿತ್ತು, ಅವರ ಜನಾಂಗದ ಜನರಿಗೆ ಇಸ್ಲಾಮಿನ ಬಗ್ಗೆ ತಿಳಿಯಲು ಸಾಧ್ಯವಾದದ್ದು. ಇವರ ಮಿತ್ರ ಜನಾಂಗವಾದ “ಬನೂದೌಸ್” ಜನಾಂಗವು ಕೂಡ ಇಸ್ಲಾಮ್ ಸ್ವೀಕರಿಸಿದ್ದೂ ಇವರ ಕಾರಣದಿಂದಲೇ ಆಗಿತ್ತು. ಹಿಜ್’ರ ಏಳನೇ ವರ್ಷದ ಸಂದರ್ಭದಲ್ಲಿ ದೌಸ್ ಜನಾಂಗದ ಪ್ರಮುಖ ವ್ಯಕ್ತಿಯಾಗಿದ್ದ ತುಫೈಲ್ ಬಿನ್ ಅಂರ್ ಹಾಗೂ ಅಂರ್ ಇಸ್ಲಾಮ್ ಸ್ವೀಕರಿಸಿದ ಕಾರಣ ಅವರ ಸಂಪೂರ್ಣ ಜನಾಂಗದ ಜನರು ಕೂಡ ಇಸ್ಲಾಮ್ ಸ್ವೀಕರಿಸಿದರು. ಪ್ರವಾದಿಯವರ ﷺ ನೆಚ್ಚಿನ ಸಹಚರನೂ, ಅತೀ ಹೆಚ್ಚು ಹದೀಸ್ ಉಲ್ಲೇಖಿಸಿದ ವ್ಯಕ್ತಿಯೂ ಆದ ಅಬೂ ಹುರೈರರು ◌ؓ ದೌಸ್ ಜನಾಂಗದ ವ್ಯಕ್ತಿಯಾಗಿದ್ದರು. ಅದೇ ರೀತಿ ಅಬೂ ರವಾಹ ಹಾಗೂ ಸಅದ್ ಬಿನ್ ಅಬೀಸುಬಾಬರು ಕೂಡ ಇದೇ ಜನಾಂಗದ ಜನರಾಗಿದ್ದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-188/365
ಮದೀನದ ಪಶ್ಚಿಮ ಭಾಗದಲ್ಲಿದ್ದ ಜನಾಂಗಗಳ ಬಗ್ಗೆ ಹಾಗೂ ಅವುಗಳ ಪರಿವರ್ತನೆಗಳ ಬಗ್ಗೆ ತಿಳಿದುಕೊಂಡೆವು. ಇನ್ನೂ ಮಕ್ಕಾ ಹಾಗೂ ಮದೀನದ ಪೂರ್ವ ಪ್ರಾಂತ್ಯದಲ್ಲಿರುವ ಜನಾಂಗಗಳ ಬಗ್ಗೆ ತಿಳಿಯೋಣ. ಈ ಭಾಗದಲ್ಲಿ ಸುಮಾರು ಇಪ್ಪತ್ನಾಲ್ಕರಷ್ಟು ಜನಾಂಗಗಳಿದ್ದವು.
1. ಬನೂಖುಸೈಮ
2. ಬನೂ ಅಸದ್
3. ಬನೂ ಹುದೈಲ್
4. ಬನೂ ಸಖೀಫ
5. ಬನೂ ಜುಝ್’ಹಾಂ
6. ಸಅದ್ ಬಿನ್ ಬಕ್ಕರ್
7. ಬನೂ ದೂದಾನ್
8. ಬನೂಗನಂ
9. ಬನೂಸುಲೈಮ್
10. ಬನೂಸಅಲಬ್
11. ಬನೂಹಿಲಾಲ್
12. ಬನೂಹಿಲಾಲ್
13. ಬನೂನಝ್’ರ್
14. ಬನೂಕಿಲಾಬ್
15. ಬನೂಸುವಾಅ
16. ಬನೂಗತ್’ವ್’ಫಾನ್
17. ಬನೂಮುರ್’ರ
18. ಬನೂಫಸಾರ
19. ಬನೂದುಖ್’ಬಾನ್
20. ಬನೂಅಬ್’ದ್
21. ಬನೂಹವಾಸಿಲ್
22. ಬನೂ ಖೈಸ್ ಅಯ್’ಲಾನ್
23. ಬನೂಮುಹಾರಿಬ್
24. ಬನೂಖೈಸ್
ಎಂದಾಗಿದೆ ಅವುಗಳ ಹೆಸರುಗಳು.
ಖುರೈಷಿಗಳ ಜೊತೆಯಲ್ಲಿ, ಬನೂ ಅಸದ್ ಮುಂತಾದ ಜನಾಂಗವು ಹಿಂದಿನಿಂದಲೂ ವೈವಾಹಿಕ ಸಂಬಂಧವನ್ನು ಹೊಂದಿದ್ದ ಕಾರಣ, ಈ ಗುಂಪಿನಿಂದ ಇಪ್ಪತ್ತು ಪುರುಷರು ಹಾಗೂ ಎಂಟು ಮಹಿಳೆಯರು ಹಿಜ್ರಾದ ಮೊದಲೇ ಇಸ್ಲಾಮ್ ಸ್ವೀಕರಿಸಿದ್ದರು. ಅಸದ್ ಜನಾಂಗದ ಜೊತೆಯಲ್ಲಿ ಒಪ್ಪಂದದಲ್ಲಿದ್ದ ಬನೂ ಗತ್’ವ್’ಫಾನ್, ಬನೂ ತ್ವಯ್ಯ್, ಬನೂ ಸಅಲಬ್, ಬನೂದೂದಾನ್ ಜನಾಂಗದ ಮೂಲಕ ಇಸ್ಲಾಮಿನ ಪ್ರಕಾಶ ಹರಿದು, ಪೂರ್ವ ದಿಕ್ಕಿನ ಪ್ರಾಂತ್ಯಗಳಿಂದ ಬಹಳಷ್ಟು ಜನರು ಇಸ್ಲಾಂ ಸ್ವೀಕರಿಸಿದರು. ಅವರಲ್ಲಿ ಳಿರಾರುಬಿನುಲ್ ಅಸ್’ವರ್, ಔಫ್ ಬಿನ್ ಮಾಲಿಕ್, ಮಸ್’ವೂದ್ ಬಿನ್ ಅಬ್’ದಿಲ್ ಖಾರಿ, ಹುಸೈನ್ ಬಿನ್ ಖಾರಿಜ, ಉಯಯ್’ನ ಬಿನ್ ಹಿಸ್’ನ ಉಬೈದ್ ಬಿನ್ ಸಅಲಬ್, ಮಾಲಿಕ್ ಬಿನ್ ಹಿಳ್’ರಮಿ ಹಾಗೂ ವಾಬಿಸ್ ಬಿನ್ ಮಅ್’ಬದ್ ಮುಂತಾದವರು ಪ್ರಮುಖರಾಗಿದ್ದರು.
ಆದರೆ ಕೆಲವು ಜನಾಂಗಗಳು ಇಸ್ಲಾಮನ್ನು ಬಹಳ ದ್ವೇಷಿಸುತ್ತಿದ್ದ ಕಾರಣ, ಕೆಲವೊಂದು ಸಂದರ್ಭದಲ್ಲಿ ಅವರ ವಿರುದ್ಧ ಸೈನಿಕ ಕಾರ್ಯಾಚರಣೆ ನಡೆಸಿ ಅವರನ್ನು ತಡೆಯಬೇಕಾಗಿ ಬಂದಿತ್ತು. ಹಾಗಾಗಿ ಸುಮಾರು ಇಪ್ಪತೆಂಟರಷ್ಟು ಸೈನಿಕ ಚಳುವಳಿಯು ಅವರ ವಿರುದ್ಧ ನಡೆದಿತ್ತು.
ಮದೀನದ ಉತ್ತರ ಭಾಗದಲ್ಲೂ ಕೆಲವೊಂದು ಜನಾಂಗಗಳು ವಾಸವಾಗಿತ್ತು. ಬನೂಖುಸಾಅ, ಬನೂ ಬಾಲಿ, ಬನೂಬಹ್’ರ್, ಬನೂಉಸ್’ರ, ಬನೂಸಅದ್, ಬನೂಗಸ್ಸಾನ್, ಬನೂಜುಝ್’ಆಂ ಬನೂಕಲ್’ಬ್, ಬನೂಸಿನ್ನ, ಬನೂ ಸಅದ್ ಹೈಸಂ ಎಂಬ ಜನಾಂಗವು ಅವುಗಳಲ್ಲಿ ಪ್ರಮುಖವಾಗಿತ್ತು. ಅವರಲ್ಲಿ ಬನೂಗಸ್ಸಾನ್ ಹಾಗೂ ಬನೂಖುಸಾಅ ಜನಾಂಗವು ಪ್ರಮುಖವಾಗಿತ್ತು. ಬನೂಖುಸಾಅಗೆ ಮಾತ್ರ ಸುಮಾರು ಏಳರಷ್ಟು ಉಪಜನಾಂಗಗಳಿದ್ದವು, ಸಿನ್ನ, ಉಝ್’ರ, ಮಹಾರ, ಜುಹೈನ, ಬಹ್’ರ, ಬಾಲಿ, ಸಅದ್ ಹುಝೈಂ ಎಂಬುದಾಗಿದೆ ಅವುಗಳ ಹೆಸರುಗಳು. ಹಿಜಾಝ್’ನಲ್ಲಿ ಇವರ ಪ್ರಭಾವ ಬಹಳಷ್ಟಿತ್ತು, ಮದೀನದ ಔಸ್ ಹಾಗೂ ಖಝ್’ರಜ್’ಗಳ ಜೊತೆಯಲ್ಲಿಯೂ ಅವರು ವ್ಯವಹಾರಗಳನ್ನು ಹೊಂದಿದ್ದರು. ಪ್ರಮುಖ ಸ್ವಾಹಾಬಿಯಾದ ಅಬ್ದುರ್’ರಹ್ಮಾನ್ ಬಿನ್ ಔಫ್’ರ ◌ؓ ತಾಯಿ ಸಹ್’ಲ ಬಿಂತ್ ಆಸೀಮ್ ಹಾಗೂ ಅಂರ್ ಬಿನ್ ಆಸ್’ರ ತಾಯಿ ಈ ಜನಾಂಗದವರಾಗಿದ್ದರು. ಇಸ್ಲಾಮಿನ ಆಗಮನದ ನಂತರ ಮೇಲೆ ತಿಳಿಸಿದ ಎಲ್ಲಾ ಜನಾಂಗವು ಒಂದಾಯಿತು. ಅಬ್ದುಬಿನ್ ಉದೈಸ್, ಅಬೂಸಿಬಾಬ್, ತ್ವಲ್’ಹತ್’ಬಿನ್ ಬರ್’ರ, ಅಬ್ದುಲ್ಲಾಹಿಬಿನ್ ಝಿಯಾದ್, ಸಹೀಲ್ ಬಿನ್ ರಾಫಿ, ಕಅಬ್ ಬಿನ್ ಉಜ್’ರ ಹಾಗೂ ಅಬ್ದುಲ್ಲಾಹಿಬಿನು ಅಸ್’ಲಂ ಮುಂತಾದವರು ಈ ಪ್ರಾಂತ್ಯದಿಂದ ಇಸ್ಲಾಮ್ ಸ್ವೀಕರಿಸಿದ ಪ್ರಮುಖರಾಗಿದ್ದರು.
ಈ ಪ್ರಾಂತ್ಯದಿಂದ ಇಸ್ಲಾಂ ಸ್ವೀಕರಿಸಿದ ವ್ಯಕ್ತಿಗಳ ಉಪಸ್ಥಿತಿಯು ಮದೀನಾದ ರಾಜಕೀಯ ನಕ್ಷೆಯನ್ನು ಸುಂದರ ಹಾಗೂ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಉಸ್ಮಾನ್ ಬಿನ್ ಅಫ್ಫಾನ್’ರ ◌ؓ ಪತ್ನಿ ನೈಲಾ ಹಾಗೂ ಸಹೋದರ ಸಾಬಿವು ಬಿನ್ ಫರಾಫಿಝ ಕೂಡ ಈ ಪ್ರಾಂತ್ಯದವರಾಗಿದ್ದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-189/365
ಮದೀನವನ್ನು ಒಂದು ರಾಷ್ಟ್ರ ಹಾಗೂ ರಾಜಧಾನಿಯಾಗಿ ಅಭಿವೃದ್ಧಿ ಪಡಿಸುವುದರ ಹಿಂದೆ ಮದೀನದ ದಕ್ಷಿನ ಪ್ರಾಂತಗಳ ಪ್ರಭಾವ ಬಹಳಷ್ಟು ಬೀರಿತ್ತು. ಸುಮಾರು ಹದಿನೈದರಷ್ಟು ಜನಾಂಗಗಳ ಹೆಸರುಗಳನ್ನು ಇತಿಹಾಸಕಾರರು ಉಲ್ಲೇಖಿಸಿದ್ದು ಕಾಣಬಹುದು.
1. ಬನೂ ಸಬೀದ್
2. ಬನೂ ಮುರಾದ್
3. ಬನೂ ರೂಹ
4. ಬನೂ ಅನ್’ಸ್
5. ಬನೂಸದ್’ಅ
6. ಬನೂ ಮಸ್’ಹಿಜ್
7. ಬನೂ ನಕ್’ಅ
8. ಬನೂ ಖಸ್’ಆಂ
9. ಬನೂ ಖೌಲಾನ್
10. ಬನೂ ಬಾಜಿಲ
11. ಬನೂ ನಹ್’ದ
12. ಬನೂಹಂದಾನ್
13. ಬನೂಅಶ್’ಅರ್
14. ಬನೂ ಕಿನ್’ದ
15. ಬನೂಅಝ್’ದ
ಇವರಲ್ಲಿ ಬನೂ ಅಶ್’ಅರ್ ಜನಾಂಗದವರು ಇಸ್ಲಾಮ್ ಸ್ವೀಕರಿಸಿದ್ದ ಕಾರಣ ಪೂರ್ವ ಭಾಗದ ಪ್ರಾಂತ್ಯಗಳಲ್ಲೂ ಇಸ್ಲಾಮ್ ಹರಡಿತು. ಪ್ರಮುಖ ಸ್ವಹಾಬಿಯಾದ ಅಬೂ ಮೂಸಲ್ ಅಶ್’ಅರಿಯವರ ◌ؓ ನಾಯಕತ್ವದಲ್ಲಿ ಸುಮಾರು ಅರುವತ್ತು ಜನರ ಗುಂಪೊಂದು ಮದೀನಕ್ಕೆ ಬಂದು ಇಸ್ಲಾಮ್ ಸ್ವೀಕರಿಸಿದವು. ಅವರ ಗುಂಪಿನಲ್ಲಿ, ಅಬೂ ಮೂಸಲ್ ಅಶ್’ಹರಿಯವರ ◌ؓ ಸಹೋದರರಾದ ಅಬೂಬುರ್’ದ, ಅಬೂ ಆಮಿರ್, ಅಬೂ ಮಾಲಿಕ್, ಹಾಗೂ ಆಮಿರ್ ಬಿನ್ ಆಮಿರ್ ಕೂಡ ಇದ್ದರು.
ಪೂರ್ವ ಭಾಗದ ಪ್ರಾಂತ್ಯಗಳಲ್ಲಿ ಇಸ್ಲಾಮ್ ವ್ಯಾಪಕವಾದಂತೆ ಅಲ್ಲಿದ್ದ ಹಿಂಯರಿಗಳ ಪ್ರಾಬಲ್ಯವೂ ಕೂಡ ಕಡಿಮೆಯಾಯಿತು. ಸಬಯಿನಲ್ಲಿ ಯಹೂದಿ ಧರ್ಮವನ್ನು ಸ್ವೀಕರಿಸಿದ್ದ ಳಿಫಾರ್ ಜನಾಂಗದ ಕೇಂದ್ರೀಕೃತ ಆಡಳಿತ ನಡೆಸುತ್ತಿದ್ದ ವ್ಯಕ್ತಿಗಳಾಗಿದ್ದರು ಈ ಹಿಂಯರಿಗಳು. ನಂತರದ ದಿನಗಳಲ್ಲಿ ಈ ಪ್ರಾಂತ್ಯಗಳಿಂದ ಬಹಳಷ್ಟು ಜನರು, ಸತ್ಯದ ಪಕ್ಷಕ್ಕೆ ಜೊತೆ ಸೇರಿದರು.
ಮದೀನದ ಸುತ್ತಮುತ್ತಲಿನಲ್ಲಿರುವ ಪ್ರಾಂತ್ಯಗಳ, ಜನಾಂಗದವರ ಕಾರ್ಯಾಚರಣೆಯ ಕುರಿತಾಗಿದೆ ನಾವೀಗ ತಿಳಿದದ್ದು. ಇದರ ಹೊರತಾಗಿ, ದೂರದ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ಉಳಿದುಕೊಂಡಿದ್ದ ಕೆಲವೊಂದು ಜನಾಂಗಗಳು ಕೂಡ ಇಸ್ಲಾಂ ಆಗಮನದೊಂದಿಗೆ ಸಂಘಟಿತವಾದವು. ಅಥವಾ ವಿಶಾಲವಾದ ರಾಷ್ಟ್ರೀಯ ಪರಿಕಲ್ಪನೆಯ ಭಾಗವಾದವು. ಇವರ ಪ್ರಮುಖ ವಿಭಾಗಗಳಿದ್ದದ್ದು, ಪ್ರಾಚೀನ ಇರಾಖ್, ಒಮಾನ್ ಹಾಗೂ ಪರ್ಷಿಯನ್ ಸಮುದ್ರದ ಕಿನಾರೆಯ ಭಾಗದಲ್ಲಾಗಿತ್ತು. ಅರಬ್ ಉಪಖಂಡದಲ್ಲಿ ಇವರ ಆರ್ಥಿಕ ಹಾಗೂ ಸಾಮಾಜಿಕ ವ್ಯವಹಾರಗಳ ಪ್ರಭಾವವು ಮೊದಲೇ ಇತ್ತು. ಬನೂ ಹನೀಫ್, ಬನೂತಗ್’ಲಿಬ್, ಬನೂತಮೀಮ್, ಬನೂವಾಯಿಲ್, ಬನೂಶೈಬಾನ್, ಬನೂಅಬ್ದುಲ್ ಖೈಸ್ ಎಂಬ ಜನಾಂಗವು ಅವುಗಳಲ್ಲಿ ಪ್ರಮುಖ ಜನಾಂಗವಾಗಿತ್ತು. ಈ ಜನಾಂಗಗಳೆಲ್ಲವೂ ಬನೂರಬೀಅ ಎಂಬ ಜನಾಂಗದ, ಉಪಜನಾಂಗವಾಗಿದ್ದವು.
ಪ್ರವಾದಿಯವರ ﷺ ಪತ್ರ ವ್ಯವಹಾರ ಹಾಗೂ ಸೈನಿಕ ಚಳುವಳಿಯ ಕಾರಣದಿಂದ ಇವೆಲ್ಲವನ್ನೂ ಒಟ್ಟಾಗಿಸಲು ಸಾಧ್ಯವಾಯಿತು. ಸುಮಾಮತ್ ಬಿನ್ ಉಝಾಲಿನ್ ಇಸ್ಲಾಮ್ ಸ್ವೀಕರಿಸಿದ ನಂತರ, ಈ ಪ್ರದೇಶದಲ್ಲಿ ಬಹಳಷ್ಟು ಗಮನಾರ್ಹ ಬದಲಾವಣೆಯಾದವು. ನಜ್’ದ್’ನಲ್ಲಿ ನಡೆದ ಯುದ್ಧದಲ್ಲಿ ಖೈದಿಯಾಗಿ ಸಿಕ್ಕಿದ್ದ ಸುಮಾಮರಿಗೆ, ಮದೀನದಲ್ಲಿ ಸಿಕ್ಕಿದ ಆತಿಥ್ಯ, ಮದೀನದ ಜನತೆಯ ಜೀವನ ಶೈಲಿ ಹಾಗೂ ಅವರ ಚಲನವಲನಗಳನ್ನು ನೇರವಾಗಿ ಕಂಡ ನಂತರ, ಸುಮಾಮರಿಗೆ ಇಸ್ಲಾಮ್ ಸ್ವೀಕರಿಸಲು ಅದು ಕಾರಣವಾಯಿತು. ಅಲ್ಲಿಂದ ನೇರವಾಗಿ ಮಕ್ಕಾಗೆ ತೆರಳಿ, ಉಮ್ರಾ ನಿರ್ವಹಿಸಿದ ನಂತರ ತನ್ನ ಸ್ವಂತ ಊರಾದ ಯಮನಿಗೆ ಹೊರಟು ಹೋದರು. ಅಲ್ಲಿ ಪ್ರವಾದಿಯವರೊಂದಿಗೆ ﷺ ವಿರೋಧ ಕಟ್ಟಿಕೊಂಡಿದ್ದ ಮಕ್ಕಾ ಜನತೆಗೆ, ಧಾನ್ಯಗಳನ್ನು ರಫ್ತುಮಾಡುವುದನ್ನು ನಿಲ್ಲಿಸಿದ ಕಾರಣ, ಮಕ್ಕಾ ನಿವಾಸಿಗಳು ಧಾನ್ಯಗಳ ಕೊರೆತೆಯನ್ನು ಎದುರಿಸಬೇಕಾಯಿತು. ಅವರು ಪ್ರವಾದಿಯವರ ﷺ ಬಳಿ ಹೋಗಿ ದೂರು ನೀಡಿದಾಗ, ಪ್ರವಾದಿಯವರು ﷺ ಸುಮಾಮರಲ್ಲಿ ಪುನಃ ಧಾನ್ಯಗಳ ರಫ್ತು ಮಾಡಲು ಸೂಚನೆ ನೀಡಿದರು.
ಇಲ್ಲಿ ಬನೂತಮೀಮ್ ಜನಾಂಗದ ಬಗ್ಗೆ ಹೇಳದೆ ಇರಲು ಸಾಧ್ಯವಿಲ್ಲ, ಯಾಕೆಂದರೆ ಬಹರೈನ್ ಹಾಗೂ ಒಮಾನ್ ದೇಶಗಳನ್ನು ಆಳ್ವಿಕೆ ನಡೆಸುತ್ತಿದ್ದದ್ದು ಇವರಾಗಿದ್ದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-190/365
ಬನೂ ತಮೀಮ್ ಜನಾಂಗದ ಜನರು ಹಿಂದೆ ಬೆಂಕಿಯ ಆರಾಧಕರಾಗಿದ್ದರು. ಅವರು ವಿವಿಧ ಭಾಗಗಳಲ್ಲಿ ಸ್ವಂತ ಆಡಳಿತ ನಡೆಸುತ್ತಿದ್ದರು, ಈ ಜನಾಂಗವು ತುಲನಾತ್ಮಕವಾಗಿ ತಡವಾಗಿ ಇಸ್ಲಾಮ್ ಸ್ವೀಕರಿಸಿದ್ದಾದರೂ, ಬಹಳಷ್ಟು ಪ್ರಮುಖ ವ್ಯಕ್ತಿಗಳನ್ನು ಇಸ್ಲಾಮಿಗೆ ಕರೆದುಕೊಂಡು ಬಂದರು. ವಖೀದ್ ಬಿನ್ ಅಬ್ದುಲ್ಲಾಹ್, ಸಫ್’ವಾನ್ ಬಿನ್ ಸಫ್’ವಾನ್, ಸಫ್’ವಾನ್ ಬಿನ್ ಮಾಲಿಕ್, ಖಬ್ಬಾಬ್ ಬಿನ್ ಅಲ್ ಅರತ್ತ್, ಹನ್’ಳಲತ್ ಬಿನ್ ಅರ್’ರಬೀಅ್, ಸಅದ್ ಬಿನ್ ಅಂರ್ ಅತ್ತಮೀಮಿ ಎಂಬುವವರು ಅವರಲ್ಲಿ ಪ್ರಮುಖರಾಗಿದ್ದರು.
ವಾಯಿಲ್ ಜನಾಂಗ ಹಾಗೂ ಅವರ ಇಸ್ಲಾಮ್ ಸ್ವೀಕರಣೆಯ ಬಗ್ಗೆ ಇಲ್ಲಿ ತಿಳಿಸಲೇಬೇಕಾಗಿದೆ. ಮಕ್ಕಾ ವಿಜಯದ ಸಂದರ್ಭದಲ್ಲಾಗಿತ್ತು ಇವರು ಇಸ್ಲಾಮ್ ಸ್ವೀಕರಿಸಿದ್ದು, ಬನೂಶೈಬಾನ್, ಬನೂಅನ್’ಸ್, ಬನೂ ಬಕ್ಕರ್, ಬನೂ ತಗ್’ಲಿಬ್ ಎಂಬುವುದು ಈ ಜನಾಂಗದ ಉಪ ಶಾಖೆಗಳಾಗಿದೆ. ಆಮಿರ್ ಬಿನ್ ರಬೀಅಃ ಫುರ್’ರಾತ್ ಬಿನ್ ಹಯ್ಯಾನ್, ಅಲ್ ಜೀಲಿಅದಿ, ಬಿನ್’ಶರಾಹೀಲ್ ಮುಂತಾದ ಪ್ರಮುಖರು ಈ ಪ್ರಾಂತ್ಯದ ಜನರಾಗಿದ್ದರು.
ಇಸ್ಲಾಮಿಕ್ ಸಂಸ್ಕೃತಿಯ ಬೆಳವಣಿಗೆಯ ಕೆಲವು ಪ್ರಮುಖ ಐತಿಹಾಸಿಕ ಹಂತಗಳನ್ನು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ. ಪ್ರವಾದಿಯವರು ﷺ ಒಬ್ಬರು ಇತಿಹಾಸ ಪುರುಷ ಆಗಿರುವರು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ ಈ ಅಧ್ಯಾಯಗಳು. ಅವರು ಕೇವಲ ಒಂದು ದಂತಕಥೆಯೋ, ಅಥವಾ ಕಾಲ್ಪನಿಕ ಕಥೆಯಲ್ಲಿ ಬರುವ ಒಂದು ಕಲ್ಪನೆಯೋ ಆಗಿರದೆ, ಸ್ಪಷ್ಟವಾದ ಒಂದು ಆದರ್ಶವನ್ನು ತೋರಿಸಿಕೊಟ್ಟು, ಅದನ್ನು ಚಾಚೂ ತಪ್ಪದೆ ಪಾಲಿಸುವ ಹಾಗೆ ಮಾಡಿ, ಅದಕ್ಕೆ ಅಡ್ಡಿಯಾಗುವಂತಹ ಯಾವುದೇ ಸಮಸ್ಯೆ ಎದುರಾದರೂ ಅದನ್ನು ನಿವಾರಿಸಿ, ಅದಕ್ಕಾಗಿ ಹೋರಾಟ ನಡೆಸಿ ಆಸ್ತಿ ಸಂಪತ್ತು, ಅಷ್ಟೇ ಅಲ್ಲದೆ ಸ್ವಂತ ಊರನ್ನು ಬಿಟ್ಟು, ನಾಯಕನ ಮಹತ್ವನ್ನು ತಿಳಿದು ತಮ್ಮ ಜೊತೆಯಲ್ಲಿರುವ ಅನುಯಾಯಿಗಳಿಗೆ, ಯಾವುದೇ ಸಂದಿಗ್ಧ ಪರಿಸ್ಥಿತಿಯಲ್ಲೂ ಉತ್ತಮ ನಿರ್ದೇಶನಗಳನ್ನು ನೀಡಿ, ಒಂದು ಪ್ರದೇಶದಲ್ಲಿ ಸಂಪೂರ್ಣವಾದ ಬದಲಾವಣೆಯನ್ನು ತರಿಸಿ, ಅತೀ ವೇಗದಲ್ಲಿ ಬೇರೆ ಪ್ರಾಂತ್ಯಗಳಿಗೂ ತಲುಪುವ ಹಾಗೆ ಮಾಡಿದ ಕೌಶಲ್ಯತೆ, ಅದರೊಂದಿಗೆ ಒಂದೇ ಆದರ್ಶದ ಕೆಳಗೆ ಎಲ್ಲರನ್ನು ಒಗ್ಗಟ್ಟಾಗಿ ಇರುವಂತೆ ಮಾಡಿದ್ದು ಹೀಗೆ ಹಲವಾರು ಬದಲಾವಣೆಗಳನ್ನು ತಂದೆ ಮಹಾ ವ್ಯಕ್ತಿತ್ವವಾಗಿ ಆಗಿದೆ ಪ್ರವಾದಿಯವರನ್ನು ﷺ ಇತಿಹಾಸವು ಗುರುತಿಸುವುದು.
ಮದೀನಾ ಹಾಗೂ ಅದರ ಸುತ್ತಮುತ್ತಲಿನ ಪ್ರತಿಯೊಂದು ವಿಭಾಗವನ್ನು ಒಂದು ರಾಷ್ಟ್ರವಾಗಿ ಮುನ್ನಡೆಸಲು, ಕೆಲವು ನಿರ್ದಿಷ್ಟ ತಂತ್ರದ ಅಗತ್ಯವಿತ್ತು. ಏಕೆಂದರೆ ಅದೊಂದು ವಿಶಾಲವಾದ ಒಂದು ಸಮೂಹವಾದ ಕಾರಣ, ಅಲ್ಲಿ ಸತ್ಯವಿಶ್ವಾಸಿಗಳು, ನಿಷೇಧಿಗಳು ಹಾಗೂ ಕಪಟ ವಿಶ್ವಾಸಿಗಳು ಎಲ್ಲರೂ ಇರುವ ಸಂದರ್ಭದಲ್ಲಿ, ಎಲ್ಲರನ್ನು ಒಂದೇ ರೀತಿಯಲ್ಲಿ ನಿಯಂತ್ರಿಸಲು, ಒಂದೇ ನಿಯಮದಲ್ಲಿ ಒಂದು ಗೂಡಿಸಲು ಸಾಧ್ಯವಿರಲಿಲ್ಲ. ಅಷ್ಟೇ ಅಲ್ಲದೆ ಬಲವಂತವಾಗಿ ಇಸ್ಲಾಮಿಗೆ ಕರೆದುಕೊಂಡು ಬರುವುದು ಇಸ್ಲಾಮಿನ ಸಂಸ್ಕಾರವೇ ಅಲ್ಲ. ಹೀಗಾಗಿಯೇ ಒಂದು ರಾಜತಾಂತ್ರಿಕ ವಿಧಾನದ ಕಲ್ಪನೆಯೊಂದಿಗೆ ಮುಂದೆ ಬಂದರು. ಕೊನೆಗೆ ಅದೊಂದು ಜಾಗತಿಕ ರಾಜಕೀಯ ಭೂಪಟದಲ್ಲಿ ಪ್ರಕಾಶಮಾನವಾದ ರೇಖೆಯಾಗಿ ಹೊರಹೊಮ್ಮಿತು. ಕೇವಲ ಕೆಲವೊಂದು ಆರ್ಥಿಕ ವಿಷಯಗಳಿಗಾಗಿ ಅಥವಾ ಕ್ಷುಲ್ಲಕ ಕಾರಣಕ್ಕೆ ಜಗಳವಾಡುತ್ತಿದ್ದ ಜನಾಂಗಗಳ ನಡುವೆ, ಜನರ ನಡುವೆ ಒಂದು ರಾಷ್ಟ್ರವಾಗಿ ಜನಸಾಮಾನ್ಯರನ್ನು ಒಟ್ಟು ಸೇರಿಸಿ, ಅದಕ್ಕಾಗಿ ಒಂದು ಪ್ರತ್ಯೇಕವಾದ ಸಂವಿಧಾನವನ್ನು ಸಿದ್ಧಪಡಿಸುವ ಜವಾಬ್ದಾರಿಯನ್ನು ನಿರ್ವಹಿಸಲು, ಅದರ ನೆರವೇರಿಕೆಗಾಗಿ ಮದೀನವನ್ನು ಸಿದ್ಧಗೊಳಿಸಿದ್ದಾಗಿತ್ತು ಪ್ರವಾದಿಯವರು ﷺ ಮಾಡುತ್ತಿದ್ದದ್ದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-191/365
ಪ್ರವಾದಿಯವರು ﷺ ತಯಾರಿಸಿದ ಹಕ್ಕುಗಳ ಘೋಷಣೆಯ ದಾಖಲೆ (ಕಿತಾಬ್) ಎಂದು ವಿವರಿಸಲಾಗಿದೆ. ಜನಜೀವನವನ್ನು ರೂಪಿಸುವ ಅಧಿಕಾರದ ಜೊತೆಯಲ್ಲಿ, ಅದನ್ನು ಬರೆದು ಇಡಲಾಗುತ್ತಿತ್ತು ಎಂಬುವುದು ಈ ದಾಖಲೆಯ ವಿಶೇಷತೆಯಾಗಿದೆ. ಪೆನ್ನಿನ ಮೂಲಕ ಕಲಿಸಿದ ಅಲ್ಲಾಹನನ್ನು ಪರಿಚಯಿಸಿದ ಪ್ರವಾದಿಯವರು ﷺ, ಜನಜೀವನದಲ್ಲಿ ಬರೆಯುವುದಕ್ಕೆ ಬಹಳಷ್ಟು ಮಹತ್ವ ನೀಡಿದ್ದರು. ಈ ದಾಖಲೆಯನ್ನೇ ಸುಮಾರು ಎಂಟು ಬಾರಿ ಸ್ವಹೀಫ ಅಥವಾ ಕಾಗದದಿಂದ ಬರೆದಿಡಲಾಗಿದೆ ಎಂದು ಖುದ್ದಾಗಿ ಪ್ರವಾದಿಯವರು ﷺ ತಿಳಿಸಿದ್ದು ಕಾಣಬಹುದು. ಪ್ರವಾದಿ ಮೂಸ ಹಾಗೂ ಇಬ್ರಾಹಿಂರವರ (ಅ) ಗ್ರಂಥದ ಬಗ್ಗೆಯೂ ಕೂಡ ಖುರ್’ಆನ್ ಇದೇ ರೀತಿ ತಿಳಿಸಲಾಗಿತ್ತು.
ಐದು ಉಪ ಷರತ್ತುಗಳನ್ನು ಹಾಗೂ 52 ಷರತ್ತುಗಳನ್ನು ಒಳಗೊಂಡಿರುವ ದಾಖಲೆಗಳ ಬಗ್ಗೆ ನಾವು ತಿಳಿಯೋಣ.
ಭಾಗ – ಒಂದು
1. ಇದು ಅಲ್ಲಾಹನ ಪ್ರವಾದಿಯವರಾದ ಮುಹಮ್ಮದ್’ರಿಗೂ ﷺ, ಮಕ್ಕಾ ಹಾಗೂ ಯಸ್’ರಿಬ್ ನಿವಾಸಿಗಳಾದ ಸತ್ಯ ವಿಶ್ವಾಸಿಗಳಿಗೂ, ಅವರನ್ನು ಅನುಸರಿಸುವವರಿಗೂ, ಅವರೊಂದಿಗೆ ಸಹಕರಿಸಿ, ಹಾಗೂ ಅವರ ಜೊತೆಯಲ್ಲಿ ಹೋರಾಡುವವರಿಗೂ, ಅನ್ವಯಿಸುವ ದಾಖಲೆಯಾಗಿದೆ.
2.ಮೇಲೆ ತಿಳಿಸಿದ ಎಲ್ಲರನ್ನೂ ಒಂದೇ ಸಮುದಾಯದ ಅಂಗವಾಗಿ ಪರಿಗಣಿಸಲಾಗುತ್ತದೆ.
3. ಮಕ್ಕಾದಿಂದ ಬಂದಿರುವ ಖುರೈಷಿಗಳ ನಡುವೆ ಉಂಟಾಗುವ ಕೊಲೆ, ಅಂಗವಿಕಲತೆ, ಹಾಗೂ ಇತರ ನಷ್ಟಗಳಿಗೆ ಚಾಲ್ತಿಯಲ್ಲಿರುವ ಸಂಪ್ರದಾಯದಂತೆ ಪ್ರಾಯಶ್ಚಿತ್ತ (ದಿಯ) ಹಾಗೂ ಮೋಚನೆ ಮೌಲ್ಯವನ್ನೂ (ಫಿದ) ನೀಡಬೇಕಾಗುತ್ತದೆ. ಹಾಗೂ ಅವರ ಬಂದಿಯಲ್ಲಿರುವ ಖೈದಿಗಳನ್ನು, ಅಪರಾಧಿಗಳನ್ನು ನ್ಯಾಯಯುತವಾಗಿ ಹಾಗೂ ಕರುಣೆಯಿಂದಲೇ ನೋಡಿಕೊಳ್ಳಬೇಕು.
4. ಬನೂ ಔಫ್ ಜನಾಂಗದವರ ನಡುವೆ ಉಂಟಾಗುವ ಪ್ರಾಣಹಾನಿ, ಶರೀರಹಾನಿ ಹಾಗೂ ಇತರ ನಷ್ಟಗಳಿಗೆ ಚಾಲ್ತಿಯಲ್ಲಿರುವ ಸಂಪ್ರದಾಯದಂತೆ ಪ್ರಾಯಶ್ಚಿತ್ತವನ್ನು ಮೋಚನೆ ಮೌಲ್ಯಗಳನ್ನು ನೀಡಬೇಕಾಗುತ್ತದೆ. ಅವರ ಅಧೀನದಲ್ಲಿ ಬಂದಿಯಾಗಿರುವ ಖೈದಿಗಳನ್ನು ಹಾಗೂ ಅಪರಾಧಿಗಳನ್ನು ನ್ಯಾಯಯುತವಾಗಿ ಹಾಗೂ ಕರುಣೆಯಿಂದಲೇ ನೋಡಿಕೊಳ್ಳಬೇಕು.
5,6,7,8,9,10,11. ಕ್ರಮವಾಗಿ ಬನೂಹಾರಿಸ್, ಬನೂಝೈದ್, ಬನೂಜುಶಾಂ, ಬನೂನಜ್ಜಾರ್, ಬನೂಅಂರ್, ಬನೂನಬೀತ್ ಹಾಗೂ ಬನೂಔಸ್ ಜನಾಂಗದವರುಗಳ ನಡುವೆ ಉಂಟಾಗುವ ಪ್ರಾಣಹಾನಿ, ಶರೀರಹಾನಿ ಹಾಗೂ ಇತರ ನಷ್ಟಗಳಿಗೆ ಚಾಲ್ತಿಯಲ್ಲಿರುವ ಸಂಪ್ರದಾಯದಂತೆ ದಿಯ ಹಾಗೂ ಫಿದವನ್ನು ನೀಡಬೇಕಾಗುತ್ತದೆ. ಅವರ ಅಧೀನದಲ್ಲಿರುವ ಅಪರಾಧಿ ಹಾಗೂ ಖೈದಿಗಳನ್ನು ನ್ಯಾಯಯುತವಾಗಿ ಹಾಗೂ ಕರುಣೆಯಿಂದಲೇ ನೋಡಿಕೊಳ್ಳಬೇಕು.
12. ಸಾಕಷ್ಟು ಪ್ರಮಾಣದಲ್ಲಿ ಮೋಚನೆ ಮೌಲ್ಯಗಳನ್ನಾಗಲಿ, ಪ್ರಾಯಶ್ಚಿತ್ತವನ್ನಾಗಲಿ ನೀಡದೆ ಯಾರನ್ನೂ ಸ್ವೀಕರಿಸಲಾಗುವುದಿಲ್ಲ. ಪರಸ್ಪರರ ನಡುವೆ ನ್ಯಾಯಯುತ ಹಾಗೂ ಕರುಣೆಯಿಂದಲೇ ವರ್ತಿಸಬೇಕು.
13. ಭಕ್ತರಾದ ವಿಶ್ವಾಸಿಗಳು ಭ್ರಷ್ಟಾಚಾರ, ಅನ್ಯಾಯ, ದ್ವೇಷ ಹಾಗೂ ಇತರ ಪಾಪಗಳಿಂದ ಸಂಪೂರ್ಣವಾಗಿ ವಿರುದ್ಧರಾಗಿರಬೇಕು.
14. ಒಬ್ಬ ಸತ್ಯ ನಿಷೇಧಿಗಾಗಿ ಮತ್ತೊಬ್ಬ ಮತ್ತೊಬ್ಬ ಸತ್ಯ ವಿಶ್ವಾಸಿಯನ್ನು ಕೊಲ್ಲಬಾರದು. ಅದೇ ರೀತಿ ಒಬ್ಬ ಸತ್ಯ ನಿಷೇಧಿಗಾಗಿ ಮತ್ತೊಬ್ಬ ಮತ್ತೊಬ್ಬ ಸತ್ಯ ವಿಶ್ವಾಸಿಯ ವಿರುದ್ಧ ಸಹಾಯವನ್ನು ಮಾಡಬಾರದು.
15. ಅಲ್ಲಾಹನ ಸಂರಕ್ಷಣೆಯು ಎಲ್ಲರನ್ನೂ ಸುತ್ತುವರಿಯಲ್ಪಟ್ಟಿದೆ. ಪ್ರತಿಯೊಬ್ಬರು ತಮ್ಮ ಸ್ವಂತದವರ ಹಾಗೆ ತಮ್ಮ ಗೆಳೆಯರಲ್ಲೂ ವರ್ತಿಸಬೇಕು. ಸತ್ಯ ವಿಶ್ವಾಸಿಗಳು ಪರಸ್ಪರ ಸಹೋದರರು ಹಾಗೂ ಪರಸ್ಪರ ಸಂರಕ್ಷಣೆ ನಡೆಸಬೇಕಾದರಾಗಿರುತ್ತಾರೆ.
16. ಈ ಒಪ್ಪಂದಕ್ಕೆ ಸಹಿ ಹಾಕಿದ ಯಹೂದಿಗಳಿಗೆ ಎಲ್ಲಾ ರೀತಿಯ ಸಮಾನತೆ ಹಾಗೂ ಸಹಾಯವನ್ನು ನೀಡಲಾಗುತ್ತದೆ. ಆದರೆ ಯಹೂದಿಗಳು ಯಾವುದೇ ನಿಯಮವನ್ನು ಉಲ್ಲಂಘಿಸಬಾರದು ಹಾಗೂ ಇತರ ತಮ್ಮ ಶತ್ರುಗಳಿಗೆ ಸಹಾಯ ಮಾಡಬಾರದು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-192/365
17. ಸತ್ಯವಿಶ್ವಾಸಿ ಹಾಗೂ ಸತ್ಯ ನಿಷೇಧಿಯ ನಡುವಿನ ಈ ಒಪ್ಪಂದವನ್ನು ಸಂರಕ್ಷಣೆಯಲ್ಲಿ ಇಡಬೇಕು. ಸತ್ಯ ವಿಶ್ವಾಸಿಗಳ ಯೋಗ ಕ್ಷೇಮ ಮುಖ್ಯವಾದ ಕಾರಣ, ಬಹುಶಃ ಒಪ್ಪಂದ ಮುರಿದ ಕಾರಣಕ್ಕೆ ಸತ್ಯ ವಿಶ್ವಾಸಿಗಳು ಹೋರಾಟ ನಡೆಸಿದರೆ ಹಿಂದಿನ ಶಾಂತಿ ಒಪ್ಪಂದ ಪುನಃ ಸ್ಥಾಪಿಸಲು ಸಾಧ್ಯವಿಲ್ಲ.
18. ಕೆಲವೊಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಹೋರಾಟಗಾರರು ಪರಸ್ಪರಿಗೆ ಸಹಾಯ ಮಾಡಬೇಕು.
19. ಅಲ್ಲಾಹನ ದಾರಿಯಲ್ಲಿ ಸುರಿಸಿದ ಒಂದೊಂದು ಬಿಂದು ರಕ್ತಕ್ಕೂ, ಸತ್ಯ ವಿಶ್ವಾಸಿಗಳು ಪ್ರತೀಕಾರ ತೀರಿಸಲು ಅರ್ಹರಾಗಿರುತ್ತಾರೆ.
20. ಸತ್ಯ ವಿಶ್ವಾಸಿಗಳಿಗೆ ಅಲ್ಲಾಹನ ಭಾಗದಿಂದ ನಿರ್ದೇಶನಗಳು ಬರುತ್ತಲೇ ಇರುತ್ತದೆ.
21. ಮದೀನದಲ್ಲಿರುವ ಯಾವುದಾದರೂ ಒಬ್ಬರು ಬಹುದೈವ ವಿಶ್ವಾಸಿ, ಸತ್ಯವಿಶ್ವಾಸಕ್ಕೆ ಅಡ್ಡಿ ಉಂಟುಮಾಡುವ ರೀತಿಯಲ್ಲಿ ಮಕ್ಕಾ ಖುರೈಷಿಗಳ ಜೊತೆಯಲ್ಲಿ ವ್ಯವಹಾರ ನಡೆಸಮಾಡಬಾರದು.
22. ಅಲ್ಲಾಹನಲ್ಲಿಯೂ, ಅಂತ್ಯ ದಿನದಲ್ಲಿಯೂ ವಿಶ್ವಾಸವಿರಿಸುವ ಒಬ್ಬ ವ್ಯಕ್ತಿ, ಆಕ್ರಮಣಕಾರನಿಗೆ ಸಹಾಯ ಮಾಡಬಾರದು. ಅದು ನಿಯಮ ಉಲ್ಲಂಘನೆಯಾಗಿದೆ, ಬಹುಶಃ ಹಾಗೆ ಮಾಡಿದ್ದಲ್ಲಿ ಅಂತ್ಯ ದಿನದಲ್ಲಿ ಅವರು ಅಲ್ಲಾಹನ ಕೋಪಕ್ಕೂ, ಶಾಪಕ್ಕೂ ತುತ್ತಾಗಬೇಕಾಗುತ್ತದೆ. ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ಪಶ್ಚಾತ್ತಾಪ ಸ್ವೀಕರಿಸಲಾಗುವುದಿಲ್ಲ.
23. ನಿಮ್ಮ ನಡುವೆ ಇರುವ ಯಾವುದೇ ರೀತಿಯ ಭಿನ್ನಭಿಪ್ರಾಯಗಳಲ್ಲೂ ಕೊನೆಯ ನಿರ್ಧಾರವನ್ನು ತೆಗೆದುಕೊಳ್ಳವ ಅಧಿಕಾರವನ್ನು, ಅಲ್ಲಾಹನ ಹಾಗೂ ಅವನ ಪ್ರವಾದಿಯವರಿಗೆ ﷺ ಬಿಟ್ಟು ಕೊಡಬೇಕಾಗುತ್ತದೆ.
ಭಾಗ – 02
24. ಯಹೂದಿಗಳು ಮುಸ್ಲಿಮರೊಂದಿಗೆ ಸೇರಿ ಹೋರಾಟ ನಡೆಸುವರೆಗೂ ಯುದ್ಧದ ವೆಚ್ಚದ ಒಂದು ಭಾಗವನ್ನು ಅವರು ಭರಿಸಬೇಕಾಗುತ್ತದೆ.
25. ಯಹೂದಿ ಜನಾಂಗವಾದ ಬನೂಔಫ್, ಮುಸ್ಲಿಮರ ಹಾಗೆ ಇನ್ನೊಂದು ಸಮುದಾಯವಾಗಿರುತ್ತದೆ. ಅವರಿಗೆ ಅವರ ಧರ್ಮ ನಮಗೆ ನಮ್ಮ ಧರ್ಮ. ಅವರಲ್ಲಿ ಉತ್ತಮ ರೀತಿಯಲ್ಲಿ ವ್ಯವಹರಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಅನ್ಯಾಯ, ಮೋಸ ಮಾಡಿದರೆ ಈ ನಿಯಮವು ಅನ್ವಯವಾಗುವುದಿಲ್ಲ. ಯಾಕೆಂದರೆ ಅವರು, ಅವರ ಸ್ವಂತದವರಿಗೆ, ಸಂಬಂಧಿಕರಿಗೆ ಹಾಗೂ ತಮ್ಮ ಸಮುದಾಯದ ಜನರಿಗೆ ಮೋಸ ಮಾಡಿದವರಾಗಿರುತ್ತಾರೆ.
26. ಬನೂ ನಜ್ಜಾರ್ ಜನಾಂಗ ದವರಿಗೂ ಕೂಡ ಮೇಲೆ ತಿಳಿಸಿದ ಎಲ್ಲಾ ಕಾರ್ಯಗಳು ಬನೂಔಫ್ ಜನಾಂಗದವರ ಹಾಗೆ ಸಮಾನ ರೀತಿಯಲ್ಲಿ ಅನ್ವಯವಾಗುತ್ತದೆ.
27. ಬನೂ ಹಾರಿಸ್..
28. ಬನೂ ಝಾಯಿದ..
29. ಬನೂ ಜುಷಾಮ್..
30. ಬನೂ ಔಸ್..
31. ಬನೂ ಸಅಲಬ್..
32. ಬನೂ ಜಫ್’ನ..
33. ಬನೂ ಶುತೈಬ.. ಜನಾಂಗದವರಿಗೂ ಕೂಡ ಮೇಲೆ ತಿಳಿಸಿದ ಕಾರ್ಯದಲ್ಲಿ ಬನೂಔಫ್ ಜನಾಂಗದವರ ಹಾಗೆ ಸಮಾನ ರೀತಿಯಲ್ಲಿ ಅನ್ವಯವಾಗುತ್ತದೆ.
34. ಸಅಲಬ್ ಜನಾಂಗದ ಸ್ವತಂತ್ರ ಗುಲಮರು ಕೂಡ ಈ ತಿಳಿಸಿದ ನಿಯಮಗಳಿಗೆ ಬದ್ಧರಾಗಿರುತ್ತಾರೆ.
35. ಯಹೂದಿಗಳಲ್ಲಿ ನಿಕಟ ಸಂಬಂಧವಿರುವ ಮಿತ್ರರೆಲ್ಲರಿಗೂ ಈ ಮೇಲೆ ತಿಳಿಸಿದ ನಿಯಮಗಳನ್ನು ಪಾಲಿಸಲಾಗುತ್ತದೆ.
36. ಮುಹಮ್ಮದ್ ಪ್ರವಾದಿಯವರ ﷺ ಅನುಮತಿಯಿಲ್ಲದೆ ಯಾರೂ ಕೂಡ ಯುದ್ಧದಲ್ಲಿ ತೊಡಗುವಂತಿಲ್ಲ.
36 (b). ಆದರೆ ನ್ಯಾಯವಾದ ರೀತಿಯಲ್ಲಿ ಅವರ ಹೋರಾಟ ಆಗಿದ್ದಲ್ಲಿ, ಅವರನ್ನು ಹಿಂತಿರುಗಿಸಲಾಗುವುದಿಲ್ಲ. ಮುನ್ನೆಚ್ಚರಿಕೆ ನೀಡದೆ ಅಥವಾ ಸ್ಪಷ್ಟವಾದ ತಿಳಿವಳಿಕೆ ಇಲ್ಲದೆ ಪ್ರತೀಕಾರಕ್ಕೆ ಮುಂದಾಗಬಾರದು.
37. ಮುಸ್ಲಿಮರು ಹಾಗೂ ಯಹೂದಿಗಳು ತಮ್ಮ ತಮ್ಮ ಖರ್ಚುಗಳನ್ನು ತಾವೇ ನೋಡಿಕೊಳ್ಳಬೇಕು, ಯಾವುದೇ ಬಣದ ಮೇಲೆ ದಾಳಿ ನಡೆದರೆ ಎರಡೂ ಬಣಗಳು ಒಗ್ಗೂಡಿ ಶತ್ರುಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಪರಸ್ಪರ ಚರ್ಚೆ ನಡೆಸಿ ಒಮ್ಮತದಿಂದ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿದೆ. ಎಲ್ಲಾ ಕೆಡುಕುಗಳ ವಿರುದ್ಧ ನಿಲ್ಲುವ ಅತ್ಯುತ್ತಮ ಅಸ್ತ್ರ ಒಳ್ಳೆತನವಾಗಿದೆ.
37 (b). ಮಿತ್ರಪಕ್ಷದ ನಾಯಕರು ಉದ್ದೇಶಪೂರ್ವಕವಾಗಿ ಒಪ್ಪಂದಗಳನ್ನು ಉಲ್ಲಂಘಿಸಿದ್ದಕ್ಕಾಗಿ ತಮ್ಮದೇ ಬುಡಕಟ್ಟಿನ ಮುಗ್ಧ ಸದಸ್ಯರನ್ನು ಹೊಣೆಗಾರರನ್ನಾಗಿ ಮಾಡಲಾಗುವುದಿಲ್ಲ. ಆಕಸ್ಮಿಕವಾಗಿ ಒಪ್ಪಂದದ ಉಲ್ಲಂಘಣೆಯದಲ್ಲಿ ಅವರಿಗೆ ಕ್ಷಮೆ ನೀಡಿ ಮತ್ತೊಂದು ಅವಕಾಶ ನೀಡಬೇಕಾಗುತ್ತದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-193/365
38. ಯಹೂದಿಗಳು ಯುದ್ಧ ಮುಗಿಯುವವರೆಗೂ, ಯುದ್ಧದಲ್ಲಿ ಪಾಲ್ಗೊಳ್ಳಬೇಕು ಹಾಗೂ ಅವರ ಖರ್ಚುಗಳನ್ನು ಅವರೇ ನೋಡಿಕೊಳ್ಳಬೇಕು.
39. ಈ ಒಪ್ಪಂದದ ಘೋಷಣೆಯೊಂದಿಗೆ ಯಸ್’ರಿಬ್ ಪವಿತ್ರಭೂಮಿಯಾಗಿ ಬದಲಾಗಿರುತ್ತದೆ.
40. ಅತಿಥಿಗಳು, ಯಾತ್ರಿಕರು, ಮುಂತಾದ ಅಪರಿಚ ವ್ಯಕ್ತಿಗಳ ಪರಿಗಣನೆ ಹಾಗೂ ಸರಕ್ಷತೆಯನ್ನು ಈ ಒಪ್ಪಂದವು ಖಾತರಿಪಡಿಸುತ್ತದೆ. ಅತಿಥಿಗಳ ಭಾಗದಿಂದ ಉಂಟಾದ ತಪ್ಪುಗಳಿಗೆ ಅತಿಥಿಗಳನ್ನು ಶಿಕ್ಷಿಸುವುದು ಸಮ್ಮತಾರ್ಹವಲ್ಲ.
41. ಮಹಿಳೆಯರಿಗೆ ಅವರ ಪೋಷಕರ ಅನುಮತಿಯೊಂದಿಗೆ ಮಾತ್ರವೇ ಸಂರಕ್ಷಣೆ ನೀಡಲಾಗುವುದು.
42. ಈ ಒಪ್ಪಂದಕ್ಕೆ ಸಹಿ ಹಾಕಿದವರ ನಡುವೆ ಏನಾದರೂ ಭಿನ್ನಾಭಿಪ್ರಾಯ ಉಂಟಾದರೆ, ಅದರ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುವುದು ಅಲ್ಲಾಹನು ಹಾಗೂ ಅವನ ಪ್ರವಾದಿಯವರಿಗೆ ﷺ ಮಾತ್ರವಾಗಿರುತ್ತದೆ. ಈ ಒಪ್ಪಂದಕ್ಕೆ ತೋರಿಸುವ ನಿಷ್ಠೆ, ಸೂಕ್ಷ್ಮತೆ, ಹಾಗೂ ಕಾಳಜಿಯಿಂದ ಅಲ್ಲಾಹನ ಪ್ರತಿಫಲ ಸಿಗಲು ಅದು ಕಾರಣವಾಗುತ್ತದೆ.
43. ಮಕ್ಕಾದ ಮುಶ್ರಿಕ್’ಗಳಿಗೂ, (ಸತ್ಯ ನಿಷೇದಿಗಳು) ಅವರಿಗೆ ಸಹಾಯ ಮಾಡುವವರಿಗೆ ಸಂರಕ್ಷಣೆ ನೀಡುವುದು ನಿಷೇಧಿಸಲಾಗಿದೆ.
44. ಯಸ್’ರಿಬ್’ನ ವಿರುದ್ಧ ಬರುವ ಎಲ್ಲಾ ರೀತಿಯ ವಿರೋಧಗಳಿಗೂ ಪ್ರತಿರೋಧ ಮಾಡುವುದು ಒಪ್ಪಂದಕ್ಕೆ ಸಹಿ ಹಾಕಿದ ಎಲ್ಲರ ಕರ್ತವ್ಯವಾಗಿರುತ್ತದೆ.
45. ಮಕ್ಕಾ ನಿವಾಸಿಗಳು ಯಸ್’ರಿಬ್’ನೊಂದಿಗೆ ಯಾವುದಾದರೂ ವ್ಯವಹಾರದಲ್ಲಿ ಆಸಕ್ತಿ ಹೊಂದಿದರೆ, ಸಾಮಾನ್ಯ ತಿಳಿವಳಿಕೆಯ ಆಧಾರದ ಮೇಲೆ ಮಾತ್ರವೇ ನಿರ್ಧರಿಸಬೇಕು. ಇನ್ನೂ ಸತ್ಯ ವಿಶ್ವಾಸಿಗಳ ಜೊತೆಯಲ್ಲಿ ನಡೆಸುವ ವ್ಯವಹಾರ ಆಗಿದ್ದಲ್ಲಿ ವಿಶೇಷವಾದ ಪರಿಗಣನೆಯಿಂದಲೇ ವ್ಯವಹರಿಸಬೇಕು.
45 (b). ಪ್ರತಿಯೊಂದು ನಾಗರಿಕನಿಗೂ, ಅವರು ಒಳಗೊಂಡಿರುವ ಸಾಮಾಜಿಕ ವಲಯದಲ್ಲಿ ಸ್ವತಂತ್ರ ವ್ಯಕ್ತಿತ್ವ ಹಾಗೂ ಅಸ್ತಿತ್ವವನ್ನು ಒಪ್ಪಂದ ವು ಖಾತರಿಪಡಿಸುತ್ತದೆ.
46. ಔಸಿನ ಯಹೂದಿ ಜನಾಂಗದವರಿಗೂ ಹಾಗೂ ಅವರ ಜೊತೆಯಿರುವ ಗುಲಾಮರಿಗೂ, ಈ ಒಪ್ಪಂದದಲ್ಲಿ ಇತರ ಸಾಮಾಜಿಕ ವಿಭಾಗಕ್ಕೆ ನೀಡಲಾದ ಹಕ್ಕುಗಳಿಗೆ ಅವರೂ ಕೂಡ ಅರ್ಹರಾಗಿರುತ್ತಾರೆ. ಹಾಗಾಗಿ ಅವರ ಮೇಲೆ ಕೂಡ ಒಪ್ಪಂದವನ್ನು ಪಾಲಿಸುವ ಜವಾಬ್ದಾರಿಯು ಇರುತ್ತದೆ. ವೈಯಕ್ತಿಕ ತಪ್ಪುಗಳಿಗೆ ಆ ವ್ಯಕ್ತಿಗಳು ಮಾತ್ರವೆ ಜವಾಬ್ದಾರರಾಗಿರುತ್ತಾರೆ.
47. ದಾಳಿಕೋರರನ್ನೂ, ಅನ್ಯಾಯ ಮಾಡುವವರನ್ನೂ ಈ ಒಪ್ಪಂದವು ರಕ್ಷಿಸುವುದಿಲ್ಲ. ಧರ್ಮ ರಕ್ಷಕರು ಹಾಗೂ ಅವರ ಮನೆಯವರನ್ನೂ ಸಮಾನವಾಗಿ ಸಂರಕ್ಷಿಸಲಾಗುತ್ತದೆ. ಅಲ್ಲಾಹನು ಯಾವಾಗಲೂ ಒಳ್ಳೆಯ ಕಾರ್ಯಗಳನ್ನು ರಕ್ಷಿಸುವವನು. ಅಲ್ಲಾಹನು ಸರ್ವ ಜ್ಞಾನಿಯೂ, ಮುಹಮ್ಮದ್’ರು ﷺ ಅವನ ಕೊನೆಯ ಪ್ರವಾದಿಯವರು ಆಗಿರುವರು. ಇನ್ನು ಮುಂದೆ ಮದೀನದ ನಾಯಕತ್ವ ಹಾಗೂ ನ್ಯಾಯದ ಆಡಳಿತದ ಅಂತಿಮ ನಿರ್ಧಾರ ಪ್ರವಾದಿ ಮುಹಮ್ಮದ್’ರದ್ದು ﷺ ಆಗಿರುತ್ತದೆ.
ಈ ಹಕ್ಕು ಘೋಷಣೆಯ ದಾಖಲೆಯಲ್ಲಿ ಮೊದಲು ತಿಳಿಸಿದ್ದು, ಮಕ್ಕಾದಿಂದ ಬಂದಿರುವ ನಿರಾಶ್ರಿತ ಮುಸ್ಲಿಮರು ಹಾಗೂ ಮದೀನಾದಲ್ಲಿದ್ದ ಸ್ಥಳೀಯ ಮುಸ್ಲಿಮರ ಧಾರ್ಮಿಕ ಸಮುದಾಯದ ಬಗ್ಗೆಯಾಗಿತ್ತು. ನಂತರ ತಿಳಿಸಿದ್ದು, ಈ ಕೇಂದ್ರೀಕರಣಕ್ಕೆ ಕೈ ಜೋಡಿಸುವ, ಹಾಗೂ ಯುದ್ಧ ಅಥವಾ ಇತರ ಸಂಧಿಗ್ದ ಪರಿಸ್ಥಿತಿಯಲ್ಲಿ ಮುಸ್ಲಿಮರ ಜೊತೆಯಲ್ಲಿ ನಿಲ್ಲಲ್ಲು ಸಿದ್ಧವಿರುವ ಮುಸ್ಲಿಮೇತರ ಸಮುದಾಯದ ಜನರ ಬಗ್ಗೆಯಾಗಿತ್ತು. ಇವರೆಲ್ಲರೂ ಒಂದು ಗೂಡಿದ ಏಕ ಸಮಾಜದ ಪರಿಕಲ್ಪನೆಯನ್ನು ಈ ಒಪ್ಪಂದ ರಚನೆಯು ಪರಿಪೂರ್ಣವಾಗಿಸುತ್ತದೆ. ಇದು ಎರಡನೇ ವಾಕ್ಯವೃಂದದಲ್ಲಿ ತಿಳಿಸಿದ ಸಮೂಹಕ್ಕಿಂತ ವಿಭಿನ್ನವಾಗಿದೆ. ಯುದ್ಧಸಂದರ್ಭದಲ್ಲಿ ಎಲ್ಲಾ ವಿಭಾಗದವರ ಹಕ್ಕುಗಳಿಗೆ ಸಮಾನ ರೀತಿಯಲ್ಲಿ ಪರಿಗಣನೆ ನೀಡಲಾಗುವುದು. (15, 18, 19 ನೇ ವಾಕ್ಯವೃಂದ) ಒಂದು ವಿಶೇಷವಾದ ವಾಕ್ಯವೃಂದವು, (16) ಸಮಾನವಾದ ನ್ಯಾಯ ಹಾಗೂ ಪರಸ್ಪರ ಸಹಾಯದ ಆಧಾರದ ಮೇಲೆ ಯಹೂದಿಗಳಿಗೆ ಈ ಸಾಮಾಜಿಕ ವ್ಯವಸ್ಥೆಯ ಬಾಗಿಲನ್ನು ತೆರೆಯಲಾಗಿದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-194/365
ಮದೀನಾದ ಚಾರ್ಟರ್ (ದಾಖಲೆ) ನ್ಯಾಯದ ಆಡಳಿತದಲ್ಲಿ ಪ್ರತ್ಯೇಕವಾದ ಕ್ರಾಂತಿಯಾಗಿತ್ತು. ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳನ್ನು ಖಾತ್ರಿಪಡಿಸುವುದರ ಜೊತೆಗೆ ಅಧಿಕಾರವನ್ನು ಕೇಂದ್ರ ರಚನೆಗೆ ತರಲಾಯಿತು. ಯಾವುದಾದರೂ ವ್ಯಕ್ತಿಗೆ ಮಾತ್ರ ಸೀಮಿತವಾಗಿದ್ದ ಕೆಲವೊಂದು ನಿಯಮಗಳನ್ನು ಪುನಃ ಬರೆಯಲಾಯಿತು. ಪ್ರತಿಯೊಬ್ಬ ನಾಗರಿಕನು ತನ್ನ ಜನಾಂಗದವರ, ಕುಟುಂಬಸ್ಥರ ಅಥವಾ ಇತರ ಸಂಬಂಧಿಕರ ವಿರುದ್ಧವಾಗಿದ್ದರೂ ಕೂಡ ಈ ದಾಖಲೆಯನ್ನು ಪಾಲಿಸುವುದು ಖಡ್ಡಾಯವಾಗಿತ್ತು. ಯಾವುದೇ ದಾಳಿಕೋರನಿಗೂ ಯಾರೊಬ್ಬರೂ ಆಶ್ರಯ ನೀಡುವಂತಿರಲಿಲ್ಲ, ಭಿನ್ನಾಭಿಪ್ರಾಯ ಬಂದ ಸಂದರ್ಭದಲ್ಲಿ ಅಲ್ಲಾಹನ ಭಾಗದಿಂದ ಬರುವ ನಿರ್ಧಾರವೇ ಕೊನೆಯ ನಿರ್ಧಾರವಾಗಿತ್ತು, ಅದೇ ಆಧಾರದ ಮೇಲೆಯಾಗಿತ್ತು ಪರಿಹಾರವನ್ನು ನೀಡುವುದು ಕೂಡ. ಈ ಸಂವಿಧಾನದಲ್ಲಿ ಬಹಳಷ್ಟು ಹೊಸ ವಿಷಯಗಳನ್ನು ಸೇರಿಸಿದರೂ, ಸಾಂಪ್ರದಾಯಿಕ ವಿಧಾನಗಳನ್ನು ಸೇರಿಸಿಕೊಂಡೇ ಆಗಿತ್ತು ಇದರ ವಿನ್ಯಾಸಗೊಳಿಸಿದ್ದು. “ಮಆಕಿಲುಹುಮ್ ಅಲ್ ಊಲಾ” ಅಥವಾ ಮೊದಲಿನಂತೆಯೇ ಎಂಬ ಪದವು ಅದಕ್ಕೆ ಸಾಕ್ಷಿಯಾಗಿದೆ.
ಯುದ್ಧ ಖೈದಿಗಳಿಗೆ ಹಾಗೂ ಹತ್ಯೆಗಳಿಗೆ ಪರಿಹಾರವನ್ನು ಪಾವತಿಸಬೇಕಾದವರಿಗೂ ಸಾಮಾಜಿಕ ಭದ್ರತಾ ವ್ಯವಸ್ಥೆಯನ್ನು ಸಿದ್ಧಪಡಿಸಲಾಗಿತ್ತು. ಕೊಲ್ಲಲ್ಪಟ್ಟರೆ ಅಥವಾ ಏನಾದರೂ ಗಾಯಗಳು ಆದರೆ, ಮೊದಲಿನ ಹಾಗೆ ಪ್ರತೀಕಾರ ತೀರಿಸುವುದು ಅಲ್ಲ, ಇನ್ನೂ ಯಾರಿಗಾದರೂ ನಷ್ಟ ಪರಿಹಾರ ನೀಡಲು ಕಷ್ಟವಾದರೆ ಮುಸ್ಲಿಮರು ಸಹಾಯ ಮಾಡಬಹುದು ಎಂಬುದನ್ನು ಇಲ್ಲಿ ಮರೆಯುವಂತಿಲ್ಲ. ಈ ರಚನೆಯಲ್ಲಿ ಜನಾಂಗಗಳನ್ನು ಸಮನ್ವಯಗೊಳಿಸಲು, ಲೋಪದೋಷಗಳನ್ನು ನಿವಾರಿಸಿ ಸ್ವಾಯತ್ತತೆಯನ್ನು ನೀಡಲಾಯಿತು.
ಉದಾಹರಣೆಗೆ ಮಕ್ಕಾದಿಂದ ಬಂದಿದ್ದ ನಿರಾಶ್ರಿತ ಮುಸ್ಲಿಮರು, ಬಹಳಷ್ಟು ಇತರ ಅರಬ್ ಜನಾಂಗದಿಂದ ಬಂದವರಾಗಿದ್ದರು. ಅಬ್’ಸೀನಿಯದಿಂದಲೂ ಇತರ ಅರಬಿಗಳಲ್ಲದ ಜನರು ಕೂಡ ಬಂದಿದ್ದರು. ಇವರೆಲ್ಲರೂ ಸೇರಿ ಒಂದು ಹೊಸ ಜನಾಂಗವನ್ನು ರೂಪಿಸಿದರು. ಅವರಿಗೆ ನಿಜವಾದ ಜನಾಂಗದ ಎಲ್ಲಾ ಹಕ್ಕುಗಳು ಇರದಿದ್ದರೂ, ಸ್ವಲ್ಪಮಟ್ಟಿಗಾದರೂ ವಿದೇಶಿಯರನ್ನು ತಮ್ಮ ಜನಾಂಗಕ್ಕೆ ಸೇರಿಸಿಕೊಳ್ಳುತ್ತಿದ್ದರು.
ಬಹಳ ದೊಡ್ಡ ಸಮೂಹವೊಂದು ಒಟ್ಟಾಗಿ, ಸಮಗ್ರವಾದ ಜನಾಂಗವಾಗಿ ಬದಲಾಗುವುದು, ಹಿಂದೆಂದೂ ಕೇಳಿರದ ವಿಷಯವಾಗಿತ್ತು. ಬಹುಶಃ ಇಲ್ಲೇ ಆಗಿದೆ, ಇಸ್ಲಾಮಿನ ರಾಜಕೀಯ ಪರಿಕಲ್ಪನೆಗಳ ” ನಾಗರಿಕ ದೇಶ” ಎಂಬ ವ್ಯಾಖ್ಯಾನ ರೂಪಗೊಳ್ಳುವುದು. ಜನಿಸಿದ ಭೂಮಿ, ವಂಶ, ಜಾತಿ, ಚರ್ಮದ ಬಣ್ಣ ಹಾಗೂ ಭಾಷೆಯಂತಹ ಅನಿವಾರ್ಯ ಅಥವಾ ಅನಿಶ್ಚಿತ ಆಯಾಮಗಳಾಗಿತ್ತು ನಾಗರಿಕ ದೇಶ ನಿರ್ಮಾಣಕ್ಕೆ ಕಾರಣ. ಆದರೆ ಇಸ್ಲಾಂ ಸ್ವೀಕರಿಸಿದ ಎಲ್ಲಾ ಜನರನ್ನು ಒಳಗೊಳ್ಳುತವ ರೀತಿಯಲ್ಲಾಗಿದೆ ಈ ಪೌರತ್ವ ಪರಿಕಲ್ಪನೆಯನ್ನು ಏಕೀಕರಿಸಿದ್ದು. ಯಾರೇ ಆದರೂ ಈ ಪೌರತ್ವ ಪರಿಕಲ್ಪನೆಯನ್ನು ಸ್ವಯಂಪ್ರೇರಣೆಯಿಂದ ಸ್ವೀಕರಿಸಬಹುದು, ಆದರೆ ಇದು ಕೇವಲ ಒಂದು ತಂಡದ ಆಧಾರದ ಮೇಲೆ ಅಸ್ತಿತ್ವಕ್ಕೆ ಬರುತ್ತದೆ ಎಂದು ಮಾತ್ರ.
ಮದೀನಾ ದಾಖಲೆಯನ್ನು ಭದ್ರತೆ ಹಾಗೂ ರಕ್ಷಣೆಯ ಶಾಂತಿಯ ಮೂಲಧಾರವಾಗಿ ಜೋಡಿಸಲ್ಪಟ್ಟಿದೆ. ಸೈನಿಕ ಸೇವೆಯು ಪ್ರತಿಯೊಬ್ಬ ವ್ಯಕ್ತಿಯ ಬಾಧ್ಯತೆ ಎಂದು ಒತ್ತಿ ಹೇಳಲಾಯಿತು. ಬದ್ದ ವೈರಿಯಾಗಿ ಪ್ರಸ್ತುತಪಡಿಸಲಾಗಿದ್ದ, ಖುರೈಷಿಗಳನ್ನು ಮುಸ್ಲಿಮೇತರು ಯಾವುದೇ ಕಾರಣಕ್ಕೂ ರಕ್ಷಿಸಬಾರದು ಎಂಬ ಷರತ್ತುಗಳನ್ನು ವಿಧಿಸಲಾಯಿತು. ಯಾಕೆಂದರೆ ಇದು ಕೇವಲ ಮುಸ್ಲಿಮರನ್ನು ಮಾತ್ರ ಬಾಧಿಸುವ ಸಮಸ್ಯೆಯಾಗಿತ್ತು. ಅದರೊಂದಿಗೆ ಇಸ್ಲಾಂ ಧರ್ಮಕ್ಕಾಗಿ, ತ್ಯಾಗ ಬಲಿದಾನ ಮಾಡುವವರ ಕಷ್ಟಗಳನ್ನು ನಿವಾರಿಸುವ ಹೊಣೆಗಾರಿಕೆಯೂ ಕೂಡ ವಿಶ್ವಾಸಿ ಸಮುದಾಯದ ಮೇಲಿತ್ತು.
ಈ ಸಂವಿಧಾನದ ಶ್ರೇಷ್ಠ ನ್ಯಾಯಾಧೀಶರು, ಅಲ್ಲಾಹನ ಪ್ರವಾದಿಯವರು ﷺ ಮಾತ್ರ ಎಂಬ ಕಲ್ಪನೆಯು, ಬಲವಾದ ಸಾರವನ್ನು ಪ್ರಸ್ತುತಪಡಿಸುತ್ತದೆ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-195/365
ಮದೀನದ ಚಾರ್ಟರ್’ನ್ನು (ದಾಖಲೆ) ಭೌತಿಕ ಜೀವನ ಹಾಗೂ ಆಧ್ಯಾತ್ಮಿಕ ಜೀವನವನ್ನು ಬೇರ್ಪಡಿಸದಲಾಗದ ರೀತಿಯಲ್ಲಿ ಜೋಡಿಸಿದ ದಾಖಲೆಯಾಗಿ ಗುರುತಿಸಬಹುದು. ಮದೀನಾದಿಂದ ರೂಪುಗೊಂಡ ಸಮುದಾಯವು, ಈ ಆದರ್ಶದ ಪ್ರಾಯೋಗಿಕ ರೂಪವಾಗಿ ಬದಲಾಯಿತು. ಅಂದಿನ ರಾಜಕೀಯ ಪಾತ್ರದಲ್ಲಿ ಪ್ರವಾದಿಯವರು ﷺ ಊಹಿಸಲಾಗದ ರೀತಿಯ ಕೇಂದ್ರೀಕೃತ ರಾಜ್ಯ ರಚನೆಯನ್ನು ರೂಪಿಸಿದರು.
ಈ ಒಪ್ಪಂದದ ಬಗ್ಗೆ ಹಲವಾರು ಶೈಕ್ಷಣಿಕ ಹಾಗೂ ಜನಪ್ರಿಯ ದೃಷ್ಟಿಕೋನಗಳನ್ನು ಹಲವಾರು ಗ್ರಂಥಗಳಲ್ಲಿ ಕಾಣಬಹುದು. ಬರ್ನಾರ್ಡ್ ಲೆವಿಸ್ ಎಂಬ ಇಂಗ್ಲೀಷ್ ವಿದ್ವಾಂಸರ ಅಭಿಪ್ರಾಯದ ಪ್ರಕಾರ “ಈ ಚಾರ್ಟರನ್ನು ಕೇವಲ ರಾಜಕೀಯ ತಿಳುವಳಿಕೆಯಾಗಿ ಮಾತ್ರ ಓದಬಾರದು, ಬದಲಾಗಿ ಇಂದೊಂದು ಇತರ ಸಮುದಾಯದವರ ಆಚಾರ ವಿಚಾರಗಳನ್ನು ಪರಿಗಣಿಸಿ, ರೂಪಿಸಲಾದ ಉತ್ತಮವಾದ ಒಪ್ಪಂದವಾಗಿದೆ.” ಜನಸಾಮಾನ್ಯರ ಆದ್ಯತೆಗಳನ್ನು ಸಾಮಾನ್ಯ ದೃಷ್ಟಿಯಲ್ಲಿ ಹೇಗೆ ಒಂದುಗೂಡಿಸಬಹುದು ಎಂಬುದನ್ನು ಈ ಚಾರ್ಟರ್ ತೋರಿಸಿ ಕೊಡುತ್ತದೆ.
ವಿಲಿಯಮ್ ಜೋನ್ ಆಂಡನ್’ರವರ ಅಭಿಪ್ರಾಯದ ಪ್ರಕಾರ “ವ್ಯಕ್ತಿಗಳು ಹಾಗೂ ಅವರ ಸಾಧನೆಗಳನ್ನು ಸಮಾಜದ ನಿರ್ಮಾಣದಲ್ಲಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಪ್ರದರ್ಶಿಸಲು ಇತಿಹಾಸದ ಮೊದಲ ತಿಳುವಳಿಕೆಯ ಜ್ಞಾಪಕ ಪತ್ರವಾಗಿದೆ ಈ ಚಾರ್ಟರ್.” ಆದರೆ ಓರಿಯಂಟಲಿಸ್ಟ್ ವಿಚಾರಗಳ ಬಗ್ಗೆ ಹಾಗೂ ಪ್ರವಾದಿಯವರ ﷺ ಇತಿಹಾಸದ ಬಗ್ಗೆ ವಿಲಿಯಂ ಮೂರ್’ರವರ ವ್ಯಾಖ್ಯಾನ ಹಾಗೂ ಅಭಿಪ್ರಾಯವು ಈ ರೀತಿಯಾಗಿದೆ, “ಮುಹಮ್ಮದ್’ರಿಗಿಂತ ﷺ ಮುಂಚೆ ಬಹಳಷ್ಟು ಸಮೂಹಗಳು ಹಾಗೂ ಆಡಳಿತ ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಅವರ್ಯಾರೂ ಸ್ವಂತ ಸಮೂಹದ ಸಮೃದ್ಧಿ ಹಾಗೂ ಶಾಂತಿಯ ಬಗ್ಗೆ ಇಷ್ಟೊಂದು ನಿಖರವಾದ ದಾಖಲೆಯನ್ನು ತಯಾರಿಸಿಲ್ಲ.”
ಸಮನ್ವಯ ಹಾಗೂ ಮಾನವೀಯತೆಯೂ ಕೂಡ ಒಡೆದು ಹೋಗಿ, ಪರಸ್ಪರ ಛಿದ್ರವಾಗಿ ಜೀವಿಸುತ್ತಿದ್ದ ಸುಮಾರು ಮುನ್ನೂರರಷ್ಟು ಸ್ವತಂತ್ರ ಜನಾಂಗವನ್ನು ಒಂದೇ ಸಂವಿಧಾನದ ರಾಷ್ಟ್ರವನ್ನಾಗಿ ಬದಲಾಯಿಸಿದರೆ ಯಾರೇ ಆಗಲಿ ಪ್ರಶಂಸಿಸದೆ ಇರಲು ಸಾಧ್ಯವೇ ಇಲ್ಲ.
ಧರ್ಮವನ್ನು ಹಾಗೂ ಪ್ರವಾದಿಯವರನ್ನು ﷺ ಆಚರಣೆಯ ಜೊತೆಯಲ್ಲಿ ಓದಿ, ಮಂತ್ರಗಳು ಹಾಗೂ ಆರಾಧನೆ ಸ್ಥಳಗಳಿಗೆ ಮಾತ್ರ ಸೇರಿಸಿ, ಕಿರಿದಾದ ಪರದೆಯ ಮೂಲಕ ನೋಡಿ, ಧರ್ಮವನ್ನು ವ್ಯವಹರಿಸುವ ರೀತಿಯಲ್ಲಿ ಇಸ್ಲಾಮನ್ನು ಚಿತ್ರೀಕರಣ ನಡೆಸುವ ಬಹಳಷ್ಟು ಜನರಿದ್ದಾರೆ. ಆದರೆ ವಾಸ್ತವದಲ್ಲಿ ಪ್ರವಾದಿಯವರ ﷺ ಜೀವನ ಶೈಲಿಯನ್ನು ಸಮಗ್ರವಾಗಿ ಕಲಿತು, ತಿಳಿದುಕೊಂಡಾಗ ಮಾತ್ರ, ಅರಮನೆಯಲ್ಲೂ, ಸಾಮಾನ್ಯ ಸ್ಥಳದಲ್ಲೂ ಯಾವ ರೀತಿಯಲ್ಲಿ ಧರ್ಮ ಪಾಠಗಳನ್ನು ಇಸ್ಲಾಮ್ ಕಲಿಸಿ ಕೊಟ್ಟಿದೆ ಎಂದು ತಿಳಿಯಲು ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೆ ಪ್ರವಾದಿಯವರು ﷺ ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯತ್ಯಾಸಗಳನ್ನು ಮೀರಿದ ಮಾನವ ಪ್ರಜ್ಞೆಯನ್ನು ಹೇಗೆ ಅಭಿವೃದ್ಧಿಪಡಿಸಿದರು ಎಂಬುವುದು ಕೂಡ ಸ್ಪಷ್ಟವಾಗುತ್ತದೆ.
ಯಾವ ಆಧಾರದ ಮೇಲೆ ಪ್ರವಾದಿಯವರ ﷺ ಬಗ್ಗೆ ಕಲಿತು, ಅವರ ವಿರುದ್ಧ ಬರುವ ವಿಮರ್ಶೆಗಳ ಕುರಿತು ತಿಳಿಯಬಹುದು.? ಎಂಬುದರ ಉತ್ತರ, ಮನಸ್ಸಿನ ಒಳಗೆ ಬಹಳಷ್ಟು ದ್ವೇಷಗಳನ್ನು ತುಂಬಿದ ಜನರು ಬರೆದ ವಿಮರ್ಶೆಗಳ ಆಧಾರದಿಂದಲೋ.? ಅಥವಾ ಅಧಿಕೃತವಾದ, ನೈಜ ಇತಿಹಾಸದ ಗ್ರಂಥಗಳ ಆಧಾರದಿಂದಲೋ.? ಎಂಬುದನ್ನು ಅರ್ಥೈಸಿಕೊಂಡರೆ ತನ್ನಷ್ಟಕ್ಕೆ ಅದಕ್ಕೆ ಉತ್ತರ ಸಿಗುತ್ತದೆ.
ಒಂದು ಬಹುತ್ವದ ಸಮೂಹಕ್ಕೆ ಸಂಪೂರ್ಣವಾಗಿ, ತೃಪ್ತಿಯಾದ ಒಂದು ಸಂವಿಧಾನವನ್ನು ಆರಂಭಿಸಿದ ಮದೀನದ, ನವೋತ್ತಾನ ದಿನಗಳ ಬಗ್ಗೆ ನಮಗೆ ಮುಂದಿನ ಅಧ್ಯಯನವನ್ನು ನಡೆಸೋಣ.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-196/365
ಮದೀನದಲ್ಲಿ ಪ್ರಭೋಧನೆಯ ಗಮನಾರ್ಹದ ಪ್ರಭಾವ ಬೀರಿದ ಕಾರಣ, ಒಂದು ಜನಸಮೂಹ ಸಮಾಜ ನಿರ್ಮಾಣದ, ಹೊಸ ಮುಖವನ್ನು ಜಗತ್ತಿನ ಮುಂದೆ ತೋರಿಸಿತು.
ಇನ್ನೂ ಮುಂದಿನ ಅಧ್ಯಯನ ಮದೀನ ರಾಜಧಾನಿಯಾಗಿ ಕಾಲದ ಪ್ರಗತಿಯ ದಿನಗಳ ಬಗ್ಗೆಯಾಗಿದೆ. ಅದಕ್ಕೂ ಮುನ್ನ ಮದೀನಾದ ಆರಂಭದ ದಿನಗಳಲ್ಲಿ ನಡೆದ ಕೆಲವು ಗಮನಾರ್ಹ ಘಟನೆಗಳನ್ನು ತಿಳಿಯೋಣ. ಅದರಲ್ಲಿ ಮೊದಲನೆಯದು ಅಬ್ದುಲ್ಲಾಹಿಬಿನು ಸಲಾಮ್’ರವರು ಇಸ್ಲಾಂ ಸ್ವೀಕರಿಸಿದ ಘಟನೆಯಾಗಿದೆ.
ಯಹೂದಿ ವಿದ್ವಾಂಸರಲ್ಲಿ ಅಗ್ರಗಣ್ಯರಾಗಿದ್ದ ಅಬ್ದುಲ್ಲಾಹಿ ಬಿನ್ ಸಲಾಮ್, ಪ್ರವಾದಿಯವರು ﷺ ಮದೀನಕ್ಕೆ ಆಗಮಿಸಿದಾಗ, ಅವರು ನಿಜವಾಗಿಯೂ ಅಲ್ಲಾಹನ ಪ್ರವಾದಿಯವರೇ ﷺ ಆಗಿರುವರೋ ಎಂಬ ಪುರಾವೆಗಳನ್ನು ಪಡೆದುಕೊಂಡರು. ನಂತರ ಅವರು ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು. ಇದರ ಬಗ್ಗೆ ಅನಸ್ ◌ؓ ಹೇಳುವುದು ಕಾಣಬಹುದು, ಪ್ರವಾದಿಯವರು ﷺ ಮದೀನಕ್ಕೆ ತಲುಪಿದ ವಿಷಯ ಅಬ್ದುಲ್ಲಾಹಿ ಬಿನ್ ಸಲಾಮರಿಗೆ ತಿಳಿದಾಗ, ಅವರು ಪ್ರವಾದಿಯವರ ﷺ ಬಳಿ ಬಂದು, “ನಾನು ನಿಮ್ಮಲ್ಲಿ ಮೂರು ಪ್ರಶ್ನೆಗಳನ್ನು ಕೇಳುತ್ತೇನೆ. ಒಬ್ಬರು ಪ್ರವಾದಿಯವರಿಗೆ ಅಲ್ಲದೆ ಅದಕ್ಕೆ ಉತ್ತರಿಸಲೂ ಸಾಧ್ಯವಿಲ್ಲ” ಎಂದು ಹೇಳುತ್ತಾ, ಪ್ರವಾದಿಯವರಲ್ಲಿ ﷺ, “ಅಂತ್ಯ ದಿನದ ಮೊದಲನೇ ಲಕ್ಷಣ ಯಾವುದು.? ಸ್ವರ್ಗ ವಾಸಿಗಳಾದ ಜನರು ಮೊದಲು ಸೇವಿಸುವ ಆಹಾರ ಯಾವುದು.? ಹಾಗೂ ಜನಿಸಿದ ಒಂದು ಮಗು ತಾಯಿಯೊಂದಿಗೆ ಅಥವಾ ತಂದೆಯೊಂದಿಗೆ ಹೋಲಿಕೆ ಉಂಟಾಗುವುದು ಹೇಗೆ.? ಎಂದು ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಈ ಪ್ರಶ್ನೆಗೆ ಮೊದಲೇ ಜಿಬ್’ರೀಲ್ (ಅ) ನನಗೆ ಉತ್ತರ ತಿಳಿಸಿಕೊಟ್ಟಿದ್ದರು ಎಂದು ಹೇಳಿದಾಗ ಅಬ್ದುಲ್ಲಾಹ್’ರು, ಜಿಬ್’ರೀಲರು ಮಲಕುಗಳ ಸಾಲಿನಲ್ಲಿ ಯಹೂದಿಗಳಿಗೆ ಶತ್ರುಗಳಾಗಿರುವರು ಎಂದು ಹೇಳಿದರು. ನಂತರ ಪ್ರವಾದಿಯವರು ﷺ ಮಾತು ಮುಂದುವರಿಸುತ್ತಾ, “ಅಂತ್ಯ ದಿನದ ಮೊದಲನೇ ಲಕ್ಷಣ ಯಾವುದೆಂದರೆ, ಪೂರ್ವದಿಂದ ಪಶ್ಚಿಮ ದಿಕ್ಕಿಗೆ ಜನರನ್ನು ಒಗ್ಗೂಡಿಸುವ ಒಂದು ಬೆಂಕಿಯಾಗಿದೆ. ಸ್ವರ್ಗ ವಾಸಿಗಳ ಮೊದಲ ಆಹಾರ ಮೀನಿನ ಯಕೃತ್ತು ಆಗಿರುತ್ತದೆ. ಜನಿಸಿದ ಮಗು ತಂದೆಯ ಹೋಲಿಕೆಗೆ ಕಾರಣ ಪುರುಷನ ವೀರ್ಯಾಣು ಸ್ರವಿಸುವಿಕೆಯು ಹೆಣ್ಣಿಗಿಂತ ಹೆಚ್ಚು ಪ್ರಬಲವಾದಾಗ ಆಗಿರುತ್ತದೆ. ಆದರೆ ಹೆಣ್ಣಿನ ರಸವು ಮೇಲುಗೈ ಸಾಧಿಸಿದರೆ ಮಗು ತಾಯಿಯಂತಾಗುತ್ತದೆ” ಎಂದು ಉತ್ತರಿಸಿದರು. ಇದನ್ನು ಕೇಳಿದ್ದೆ ತಡ ಅಬ್ದುಲ್ಲಾಹಿ ಬಿನ್ ಸಲಾಮ್’ರವರು ನಾನು ನಿಮ್ಮನ್ನು ಅಲ್ಲಾಹನ ಪ್ರವಾದಿ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದರು.
ಹಲವಾರು ಇತಿಹಾಸಕಾರರು ಉಲ್ಲೇಖಿಸಿದ ಒಂದು ಉಲ್ಲೇಖದಲ್ಲಿ ಅಬ್ದುಲ್ಲಾಹಿ ಬಿನು ಸಲಾಮ್ ಹೇಳುವುದು ಕಾಣಬಹುದು. ಪ್ರವಾದಿಯವರು ﷺ ಮದೀನಕ್ಕೆ ತಲುಪಿದರೆಂದು ನನಗೆ ತಿಳಿದಾಗ, ಅವರ ಹೆಸರು ಹಾಗೂ ಲಕ್ಷಣಗಳನ್ನು ತಿಳಿದು ಅವರ ಬಗ್ಗೆ ಅರಿತುಕೊಂಡೆನು. ಪ್ರವಾದಿಯವರು ﷺ ಖೂಬಾಕ್ಕೆ ತಲುಪಿದಾಗ ಒಬ್ಬರು ನನ್ನ ಬಳಿ ಬಂದು, ಪ್ರವಾದಿಯವರ ﷺ ಆಗಮನದ ವಿಷಯವನ್ನು ತಿಳಿಸಿದರು, ಆ ಸಂದರ್ಭದಲ್ಲಿ ನಾನು ಖಾರ್ಜುರದ ಮರದ ಮೇಲೆ ಬೇರೆ ಕೆಲಸವನ್ನು ಮಾಡುತ್ತಿದ್ದೆ. ಆ ಮರದ ಕೆಳಗೆ ನನ್ನ ಅತ್ತೆ ಖಾಲಿದ ಬಿಂತ್ ಹಾರಿಸರು ಕುಳಿತಿದ್ದರು. ನನಗೆ ಪ್ರವಾದಿಯವರ ﷺ ಆಗಮನದ ವಿಷಯ ತಿಳಿದಾಗ, ನಾನು ತಕ್ಬೀರ್ ಕೂಗಿ ಹೇಳಿದನು. ಅದನ್ನು ಕೇಳಿ ಅತ್ತೆಯವರು, ಮೂಸ ಪ್ರವಾದಿಯವರು (ಅ) ಬಂದಿರುವ ಹಾಗೆ ಅನಿಸುತ್ತದೆ ಅಲ್ಲವೇ.? ಎಂದು ಕೇಳಿದಾಗ, ನಾನು ಅಲ್ಲಾಹನ ಮೇಲಾಣೆಗೂ ಈಗ ಬಂದಿರುವವರು ಮೂಸ ಪ್ರವಾದಿಯವರ (ಅ) ಸಹೋದರನಾಗಿರುವರು. ಮೂಸ ಪ್ರವಾದಿಯವರ (ಅ) ಆದರ್ಶದಲ್ಲಿ ವಿಶ್ವಾಸವಿರಿಸುವ ಪ್ರವಾದಿಯಾಗಿರುವರು ﷺ ಅವರು, ಅಷ್ಟೇ ಅಲ್ಲದೆ ಮೂಸ ಪ್ರವಾದಿಯವರ (ಅ) ಅದೇ ಜವಾಬ್ದಾರಿಯನ್ನು ನಿರ್ವರ್ಹಿಸಲು ಬಂದಿರುವ ಪ್ರವಾದಿಯಾಗಿರುವರು ﷺ ಎಂದು ಹೇಳಿದೆನು. ಅದಕ್ಕೆ ಅತ್ತೆಯವರು, ಅಂತ್ಯ ದಿನಕ್ಕೆ ಸಮೀಪದ ಕಾಲದಲ್ಲಿ ಬರಲಿರುವ ಪ್ರವಾದಿ ಎಂದು ನಾವು ಹೇಳುವ ಪ್ರವಾದಿಯವರ ಇವರು ಎಂದು ಕೇಳಿದಾಗ.? ನಾನು ಹೌದು ಎಂದು ಹೇಳಿದೆನು. ಅದಕ್ಕೆ ಅತ್ತೆಯವರು ಓಹ್ ಅವರಲ್ಲವೇ ಇವರು ಎಂದು ಹೇಳಿದರು.
ಅದರ ನಂತರ ನಾನು ಪ್ರವಾದಿಯವರ ﷺ ಬಳಿ ಬಂದು, ಅವರ ಮುಖವನೊಮ್ಮೆ ಗಂಭೀರವಾಗಿ ನೋಡಿದೆನು. ತಕ್ಷಣವೇ ನನಗೆ ಇವರು ಸುಳ್ಳು ಹೇಳಿ ಬಂದಿರುವ ವ್ಯಕ್ತಿ ಆಗಿರಲು ಸಾಧ್ಯವಿಲ್ಲ ಎಂದು ಅರ್ಥವಾಯಿತು. ನಾನು ಪ್ರವಾದಿಯವರಿಂದ ﷺ ಮೊದಲು ಕೇಳಿದ ಮಾತು, “ಶಾಂತಿಯ ಮಾತುಗಳನ್ನು ಆಡಿರಿ, ಜನರಿಗೆ ಆಹಾರ ನೀಡಿರಿ, ಕುಟುಂಬ ಸಂಬಂಧಗಳನ್ನು ಸೇರಿಸಿರಿ, ಅರ್ಧ ರಾತ್ರಿಯಲ್ಲಿ ಜನರು ನಿದ್ರಿಸುತ್ತಿರುವ ಸಂದರ್ಭದಲ್ಲಿ ನೀವು ಎದ್ದು ನಮಾಝ್ ಮಾಡಿರಿ ಹಾಗಿದ್ದರೆ ನಿಮಗೆ ಬಹಳ ಸುಲಭವಾಗಿ ಸ್ವರ್ಗ ಪ್ರವೇಶ ಮಾಡಬಹುದು” ಎಂದಾಗಿತ್ತು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-197/365
ಪ್ರವಾದಿಯವರನ್ನು ﷺ ಅಲ್ಲಾಹನ ಪ್ರವಾದಿಯೆಂದು ಅಂಗೀಕರಿಸಿದ ನಂತರ ಅಬ್ದುಲ್ಲಾಹಿ ಬಿನ್ ಸಲಾಂ’ರು ◌ؓ ಪ್ರವಾದಿಯವರಲ್ಲಿ ﷺ, ಯಹೂದಿಗಳು ಬಹಳಷ್ಟು ಸುಳ್ಳುಗಳನ್ನು ಪ್ರಚಾರ ಮಾಡುವ ಒಂದು ಸಮೂಹವಾಗಿದೆ, ನಾನು ಮುಸ್ಲಿಮಾಗಿದ್ದೇನೆ ಎಂದು ಅವರಿಗೆ ತಿಳಿದರೆ, ಅವರು ಖಂಡಿತ ನಿಮ್ಮ ಸಮ್ಮುಖದಲ್ಲೇ ನನ್ನ ಬಗ್ಗೆ ಬಹಳಷ್ಟು ಅಪವಾದಗಳನ್ನು ಹೊರಿಸುವರು ಎಂದು ಹೇಳಿದರು. ಅಷ್ಟರಲ್ಲೇ, ಕೆಲವು ಯಹೂದಿಗಳ ಕೆಲವು ಜನರ ಗುಂಪೊಂದು ಪ್ರವಾದಿಯವರ ﷺ ಬಳಿ ಬರುತ್ತಿದ್ದವು. ತಕ್ಷಣವೇ ಅವರ ಕಣ್ಣಿಗೆ ಬೀಳದ ರೀತಿಯಲ್ಲಿ, ಅಬ್ದುಲ್ಲಾಹ್ ◌ؓ ಮನೆಯ ಒಳಗೆ ಹೋಗಿ ಸೇರಿಕೊಂಡರು. ಪ್ರವಾದಿಯವರು ﷺ ಬಂದ ವ್ಯಕ್ತಿಗಳಲ್ಲಿ, ನಿಮ್ಮ ಗುಂಪಿನಲ್ಲಿರುವ ಅಬ್ದುಲ್ಲಾಹಿ ಬಿನ್ ಸಲಾಮ್’ರ ◌ؓ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕೇಳಿದಾಗ, ನಮ್ಮ ಗುಂಪಿನಲ್ಲಿರುವ ಅಗ್ರಗಣ್ಯ ವಿದ್ವಾಂಸ ಆಗಿರುವರು ಅವರು, ಅಷ್ಟೇ ಅಲ್ಲ ಅಗ್ರಗಣ್ಯ ವಿದ್ವಾಂಸನ ಮಗನೂ ಕೂಡ ಆಗಿರುವರು. ನಮ್ಮ ಗುಂಪಿನಲ್ಲಿ ಅತ್ಯಂತ ಒಳ್ಳೆಯ ವ್ಯಕ್ತಿ ಆಗಿರುವರು ಅವರು, ಒಳ್ಳೆಯ ವ್ಯಕ್ತಿಯ ಮಗನೂ ಕೂಡ ಆಗಿರುವರು ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಬಹುಶಃ ಅಬ್ದುಲ್ಲಾಹ್ ಇಸ್ಲಾಮ್ ಸ್ವೀಕರಿಸಿದ್ದರೆ.? ನಿಮ್ಮ ಅಭಿಪ್ರಾಯ ಏನು.? ಕೇಳಿದಾಗ, ಅವರೆಲ್ಲರೂ ಅಲ್ಲಾಹು ಅದರಿಂದ ಅವರನ್ನು ಕಾಪಾಡಲಿ ಎಂದು ಹೇಳಿದರು. ಅಷ್ಟರಲ್ಲೇ ಅಬ್ದುಲ್ಲಾಹ್ ಅವರ ಅವರ ಮುಂದೆ ಬಂದು, “ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್’ರು ﷺ ಅವನ ಪ್ರವಾದಿಯಾಗಿರುವರು ಎಂದು ನಾನು ಒಪ್ಪಿಕೊಳ್ಳುತ್ತೇನೆ (ಸಾಕ್ಷಿ ವಹಿಸುತ್ತೇನೆ)” ಎಂದು ಹೇಳಿದ್ದೆ ತಡ, ಅದನ್ನು ಕೇಳಿ ಅವರೆಲ್ಲರೂ ಒಂದೇ ಧ್ವನಿಯಲ್ಲಿ, “ಅಬ್ದುಲ್ಲಾಹಿ ಬಿನ್ ಸಲಾಮ್ ನಮ್ಮ ಗುಂಪಿನಲ್ಲಿದ್ದ ಅತೀ ಕೆಟ್ಟ ವ್ಯಕ್ತಿ ಆಗಿರುತ್ತಾನೆ, ಅತೀ ಕೆಟ್ಟ ವ್ಯಕ್ತಿಯ ಮಗನೂ ಕೂಡ ಆಗಿರುತ್ತಾನೆ.” ಎಂದು ಹೇಳಿ, ಇನ್ನೂ ಹಲವಾರು ಅಪವಾದಗಳನ್ನು ಅವರ ಮೇಲೆ ಹೊರಿಸಿದರು. ಈ ಘಟನೆಯನ್ನು ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ್ದು ಕೂಡ ಕಾಣಬಹುದು.
ಅಬ್ದುಲ್ಲಾಹ್’ರ ಮಹತ್ವವನ್ನು ತಿಳಿಸುವ ಇನ್ನೊಂದು ಹೇಳಿಕೆಯಲ್ಲಿ, ಇಮಾಮ್ ಬುಖಾರಿ ◌ؓ ಹಾಗೂ ಇಮಾಮ್ ಮುಸ್ಲಿಂ’ರವರು, ಸಅ್’ದ್ ◌ؓ ಹೇಳುವ ಮಾತನ್ನು ಉಲ್ಲೇಖಿಸಿದ್ದು ಈ ರೀತಿಯಾಗಿದೆ. “ಜೀವಂತವಾಗಿ ಇರುವ ವ್ಯಕ್ತಿಗಳಲ್ಲಿ, ಅಬ್ದುಲ್ಲಾಹಿ ಬಿನ್ ಸಲಾಮ್’ರ ಬಗ್ಗೆಯಲ್ಲದೆ ಬೇರೆ ಯಾರನ್ನೂ, ಅವರು ಸ್ವರ್ಗಕ್ಕೆ ಪ್ರವೇಶಿಸಿದ್ದಾರೆ ಎಂದು ಪ್ರವಾದಿಯವರು ﷺ ಹೇಳಿರುವುದಾಗಿ ನಾನು ಕೇಳಿರಲಿಲ್ಲ”
ಮದೀನಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಉಂಟಾದ ಮತ್ತೊಂದು ಘಟನೆಯೆಂದರೆ, ರೂಮಾ ಬಾವಿಗೆ ಸಂಬಂಧಪಟ್ಟ ಘಟನೆ. ಮದೀನಕ್ಕೆ ಬಂದ ನಂತರ ಮುಸ್ಲಿಮರಿಗೆ ಕುಡಿಯಲು ಶುದ್ಧವಾದ ನೀರಿನ ವ್ಯವಸ್ಥೆ ಇರಲಿಲ್ಲ. ಒಬ್ಬ ಯಹೂದಿಯ ಬಳಿ ಇದ್ದ ಒಂದು ಬಾವಿ ಮಾತ್ರವಾಗಿತ್ತು, ಅವರಿಗೆ ಇದ್ದ ಒಂದೇ ಒಂದು ದಾರಿ. ಹಾಗಾಗಿ ಪ್ರವಾದಿಯವರು ﷺ, “ಯಾರು ಆ ಯಹೂದಿಯಿಂದ ರೂಮ ಬಾವಿಯನ್ನು ಖರೀದಿಸಿ ಮುಸ್ಲಿಮರಿಗೆ ನೀಡುತ್ತಾರೋ.? ಅವರಿಗೆ ಖಂಡಿತ ಸ್ವರ್ಗವಿದೆ ಎಂದು ಘೋಷಣೆ ಮಾಡಿದರು.” ಅದನ್ನು ಕೇಳಿದ್ದೆ ತಡ ಉಸ್ಮಾನ್’ರವರು ◌ؓ ಆ ಬಾವಿಗೆ ದುಡ್ಡು ಕೊಟ್ಟು, ಆತನಿಂದ ಅದನ್ನು ಖರೀದಿಸಿ ಮುಸ್ಲಿಮರಿಗೆ ದಾನವಾಗಿ ಕೊಟ್ಟರು. ಇದರ ಬಗ್ಗೆ ತಿಳಿಸುವ ಸ್ವಹೀಹುಲ್ ಬುಖಾರಿಯ ಹದೀಸ್’ನಲ್ಲಿ ಉಸ್ಮಾನ್’ರವರು ◌ؓ ಹೇಳುವುದು ಕಾಣಬಹುದು. “ಯಾರಾದರೂ ರೂಮಾ ಬಾವಿಯನ್ನು ತೋಡಿದರೆ, ಅವರಿಗೆ ಸ್ವರ್ಗವಿದೆ ಎಂದು ಪ್ರವಾದಿಯವರು ﷺ ಹೇಳಿದ್ದರು, ಆ ಕಾರಣಕ್ಕಾಗಿ ನಾನು ಆ ಬಾವಿಯನ್ನು ತೋಡಿದೆನು.” ಈ ಹದೀಸ್’ನಲ್ಲಿ ತೋಡಿದೆನು ಎಂಬುದರ ಒಳಾರ್ಥ, ಮುಸ್ಲಿಮರ ಅಧೀನಕ್ಕೆ ಅದನ್ನು ನೀಡಲಾಯಿತು ಎಂದಾಗಿದೆ.
ಇದೇ ಸಂದರ್ಭಗಳಲ್ಲಿ ಉಂಟಾದ ಮತ್ತೊಂದು ಬದಲಾವಣೆಯಾಗಿತ್ತು, ನಮಾಝಿನ ರಕಾಅತುಗಳ ಪೂರ್ಣರೂಪ. ಇದರ ಬಗ್ಗೆ ಇರುವ ಹದೀಸಿನಲ್ಲಿ ಇಮಾಮ್ ಅಹ್ಮದ್’ರವರು ಉಲ್ಲೇಖಿಸಿದ್ದು ಕಾಣಬಹುದು, ಪ್ರವಾದಿಯವರು ﷺ ಮಿಅ್’ರಾಜ್ ಯಾತ್ರೆ ಹೋಗಿದ್ದ ಸಂದರ್ಭದಲ್ಲಿ, ಖಡ್ಡಾಯಗೊಳಿಸಿದ ಐದು ಹೊತ್ತಿನ ನಮಾಝ್’ಗಳನ್ನು ಎರಡು ರಕಾಅತ್’ನ ಹಾಗೆಯಾಗಿತ್ತು ಮಾಡುತ್ತಿದ್ದದ್ದು, ಮಗ್ರಿಬ್ ಮಾತ್ರವಾಗಿತ್ತು ಮೂರು ರಕಾಅತ್ ಇದ್ದದ್ದು. ಮದೀನಕ್ಕೆ ಬಂದ ನಂತರವಾಗಿತ್ತು ಸುಬಾಹಿಯಲ್ಲದ ಬಾಕಿ ನಮಾಝನ್ನು ನಾಲ್ಕು ರಕಾಅತ್ ಆಗಿಯೂ ಬದಲಾವಣೆ ಮಾಡಿದ್ದು, ಅಷ್ಟೇ ಅಲ್ಲದೆ ಮಗ್ರಿಬ್ ನಮಾಝನ್ನು ಮೂರು ರಕಾಅತಿನಲ್ಲೇ ಮುಂದುವರಿಸಲಾಯಿತು. ಆದರೆ ನಾಲ್ಕು ರಕಾಅತಾಗಿ ಬದಲಾವಣೆ ಮಾಡಿದ ನಮಾಝ್’ಗಳಲ್ಲಿ, ದೂರದ ಪ್ರಯಾಣಿಕರಿಕಾಗಿ ಎರಡು ರಕಾಅತ್’ನ ಹಾಗೆ ನಮಾಝ್ ಮಾಡುವ ಅನುಮತಿಯನ್ನು ನೀಡಲಾಯಿತು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-198/365
ಸುಬಹಿ (ಬೆಳಿಗ್ಗಿನ) ನಮಾಝನ್ನು ಎರಡು ರಕಾಅತ್ತಿಗೆ ಸೀಮಿತಗೊಳಿಸಿದ್ದು ಯಾಕೆಂದರೆ ಅದರಲ್ಲಿ ದೀರ್ಘವಾದ ಕುರ್’ಆನ್ ಓದುವ ಉದ್ದೇಶದಿಂದವಾಗಿದೆ ಎಂಬ ತರ್ಕವನ್ನು ಉಲ್ಲೇಖಿಸಿದ್ದೂ ಕಾಣಬಹುದು. ಅದೇ ರೀತಿ ಮಗ್’ರಿಬ್ ನಮಾಝ್ ಮೂರು ರಕಾಅತ್ ಮಾಡಿದ್ದು ಯಾಕೆಂದರೆ ಅದು ಹಗಲು ಹೊತ್ತಿನ ವಿತ್’ರ್ ನಮಾಝ್ ಎನ್ನುವ ನಿಟ್ಟಿನಲ್ಲಿಯೂ ಆಗಿದೆ ಎಂಬ ಅಭಿಪ್ರಾಯವನ್ನು ಇಮಾಮ್ ಇಬ್’ನು ಹಿಬ್ಬಾನ್’ರು ಉಲ್ಲೇಖಿಸಿದ್ದು ಕಾಣಬಹುದು.
ಇದರ ನಡುವೆ ಪ್ರವಾದಿಯವರು ﷺ ಬನೂಸಲಮ ಜನಾಂಗಕ್ಕೆ, ತಮ್ಮ ದೀರ್ಘದೃಷ್ಟಿಯಿಂದ ಒಂದು ಉಪದೇಶವನ್ನು ನೀಡಿದ್ದರು. ಪ್ರವಾದಿಯವರ ﷺ ಅನುಚರರೆಲ್ಲರೂ, ಒಬ್ಬೊಬ್ಬರಾಗಿ ಮಸ್ಜಿದುನ್ನಬವಿ ಮಸ್ಜಿದ್’ನ ಸುತ್ತಮುತ್ತಲಿನ ಪ್ರದೇಶಕ್ಕೆ ಸ್ಥಳಾಂತರವಾಗಲು ಆರಂಭಿಸಿದರು, ಇದರಿಂದ ಮದೀನದ ಸುತ್ತುಮುತ್ತಲಿನ ಪ್ರದೇಶ ಖಾಲಿ ಸ್ಥಳವಾಗಬಹುದೋ ಎಂಬ ಚಿಂತೆಯೂ ಕೂಡ ಪ್ರವಾದಿಯವರಿಗೆ ﷺ ಕಾಡುತ್ತಿತ್ತು. ಬನೂಸಲಮ ಜನಾಂಗದ ಜನರು ವಾಸವಾಗಿದ್ದು ಮಸ್ಜಿದ್’ನ ಸ್ವಲ್ಪ ದೂರದ ಪ್ರದೇಶದಲ್ಲಿ ಆಗಿತ್ತು, ಹಾಗಾಗಿ ಅವರೂ ಕೂಡ ಸ್ಥಳಾಂತರವಾಗಲು ತಮ್ಮ ಆಗ್ರಹ ವ್ಯಕ್ತಪಡಿಸಿದಾಗ, ಪ್ರವಾದಿಯವರು ﷺ ಅವರಿಗೆ ಅನುಮತಿ ನೀಡಲು ನಿರಾಕರಿಸಿ, ನೀವು ದೂರದಿಂದಲೇ ಮಸ್ಜಿದ್’ಗೆ ನಡೆದು ಬಂದರೆ, ನಿಮಗೆ ಬಹಳಷ್ಟು ಪ್ರತಿಫಲ ಇದೆ ಎಂದು ಅವರಿಗೆ ತಿಳಿಸಿ, ಅವರನ್ನು ಸಮಾಧಾನ ಪಡಿಸಿದರು.
ಇಮಾಮ್ ಮುಸ್ಲಿಮ್ ◌ؓ ಉಲ್ಲೇಖಿಸುವ ಹದೀಸಿನಲ್ಲಿ ಜಾಬಿರ್ ಬಿನ್ ಅಬ್ದುಲ್ಲಾಹ್’ರು ಹೇಳುವುದು ಕಾಣಬಹುದು. “ನಮ್ಮೆಲ್ಲರ ಮನೆಗಳು ಮದೀನದಿಂದ ಸ್ವಲ್ಪ ದೂರದಲ್ಲಿ ಆಗಿತ್ತು ಇದ್ದದ್ದು, ನಾವು ನಮ್ಮ ಮನೆಗಳನ್ನು ಮಾರಿ ಅಲ್ಲಿಂದ ಮದೀನ ಮಸ್ಜಿದಿನ ಸುತ್ತಮುತ್ತಲಿನಲ್ಲಿ ವಾಸಿಸಬೇಕೆಂದು ಆಗ್ರಹಿಸಿದಾಗ, ಪ್ರವಾದಿಯವರು ﷺ ನಮ್ಮನ್ನು ಅದರಿಂದ ತಡೆದು, ನೀವುಗಳು ಇಡುವ ಒಂದೊಂದು ಹೆಜ್ಜೆಗೂ ಒಂದೊಂದು ಘನತೆಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದರು. ಬನೂಸಲಮ ಜನಾಂಗದ ಜನರಲ್ಲಿ ಪ್ರವಾದಿಯವರು ﷺ ಹೇಳಿದ ಮಾತನ್ನು, ಇಮಾಮ್ ಬುಖಾರಿ ◌ؓ ಹಾಗೂ ಇಮಾಮ್ ಮುಸ್ಲಿಂರವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು, “ಓ ಬನೂಸಲಮ ಜನಾಂಗದ ಜನರೇ, ನೀವುಗಳು ಪ್ರಸ್ತುತ ವಾಸವಾಗಿರುವ ಮನೆಯಲ್ಲೇ ಇನ್ನೂ ಕೂಡ ಮುಂದುವರಿಯಿರಿ, ನೀವುಗಳು ಇಡುವ ಒಂದೊಂದು ಹೆಜ್ಜೆಗೂ, ಒಳಿತಿನ ಪ್ರತಿಫಲವನ್ನು ನೀಡಲಾಗುತ್ತದೆ,” ಎಂದು ಪ್ರವಾದಿಯವರು ﷺ ಈ ಮಾತನ್ನು ಎರಡೆರಡು ಬಾರಿ ಹೇಳಿದರು.
ಮನೆಯಿಂದ ಮಸ್ಜಿದ್’ಗೆ ನಡೆದುಕೊಂಡು ಹೋಗುವ ಒಂದೊಂದು ಹೆಜ್ಜೆಗೂ, ಪ್ರತಿಫಲ ಸಿಗಲಿದೆ ಹಾಗಾಗಿ ಯಾರೂ ಕೂಡ ಈಗ ವಾಸಿಸುತ್ತಿರುವ ಮನೆಯನ್ನು ಬದಲಾಯಿಸಬೇಡಿರಿ ಎಂದಾಗಿತ್ತು ಆ ಮಾತಿನ ಅರ್ಥ. ಮದೀನದ ಸುತ್ತಮುತ್ತಲಿನ ಪ್ರದೇಶವನ್ನು ಖಾಲಿ ಬಿಟ್ಟರೆ, ನುಸುಳುಕೋರರಿಗೆ ಅದೊಂದು ಅವಕಾಶವಾಗಿ ಬದಲಾಗುತ್ತದೆ, ಮುಂದೆ ಮದೀನಕ್ಕೆ ಅದುವೇ ದೊಡ್ಡ ಆಪತ್ತು ಆಗಲೂ ಬಹುದು ಎಂಬ ದೂರದೃಷ್ಟಿಯಾಗಿತ್ತು ಪ್ರವಾದಿಯವರು ﷺ ಇಂತಹ ಒಂದು ತೀರ್ಮಾನ ಕೈಗೊಂಡಿರುವುದರ ಹಿಂದೆ ಉದ್ದೇಶ ಎಂದೂ ಬಹಳಷ್ಟು ಜನರು ಅಭಿಪ್ರಾಯ ಪಟ್ಟವರೂ ಇದ್ದಾರೆ.
ಇನ್ನೊಂದು ಕುತೂಹಲಕರ ವಿಷಯದ ಬಗ್ಗೆ ತಿಳಿಯೋಣ, ಹಿಜ್’ರಾದ ಎರಡನೇ ವರ್ಷ ಮುಹರ್ರಂ ಹತ್ತರ ದಿವಸದಂದು ಅಸ್’ಮಾಅಬಿನು ಹಾರಿಸ ಅಲ್ ಅಸ್’ಲಮಿ ಎಂಬ ವ್ಯಕ್ತಿ ಪ್ರವಾದಿಯವರನ್ನು ﷺ ಭೇಟಿಯಾಗಲು ಬಂದಿದ್ದರು, ಪ್ರವಾದಿಯವರು ﷺ ಅವರಲ್ಲಿ “ನೀವು ಇವತ್ತು ವ್ರತ ಆಚರಿಸಿದ್ಡೀರೆ.? ಎಂದು ಕೇಳಿದಾಗ, ಅದಕ್ಕೆ ಅವರು ಇಲ್ಲ ಎಂದು ಉತ್ತರಿಸಿದರು, ಸರಿ ಹಾಗಿದ್ದರೆ ಇವತ್ತಿನ ಮುಂದಿನ ಭಾಗವನ್ನು ಉಪವಾಸ ವ್ರತವನ್ನಾಗಿ ಮಾಡಿರಿ ಎಂದು ಪ್ರವಾದಿಯವರು ﷺ ಹೇಳಿದಾಗ, ಅವರು ಈಗಾಗಲೇ ಉಪಹಾರ ಸೇವಿಸಿದ್ದೇನೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಅದು ಪರವಾಗಿಲ್ಲ, ಇನ್ನುಳಿದ ಸಮಯವನ್ನು ಉಪವಾಸದಲ್ಲಿ ಮುಂದುವರಿಸಿ, ಅಷ್ಟೇ ಅಲ್ಲದೆ ನಿಮ್ಮ ಇತರ ಕುಟುಂಬದ ಜನರಿಗೂ ಅದನ್ನು ಮಾಡಲು ಹೇಳಿರಿ ಎಂದು ಹೇಳಿದರು. ಅದನ್ನು ಕೇಳಿ ತಕ್ಷಣವೇ ಅಸ್’ಮಾಅ ಅಲ್ಲಿಂದ ಹೊರಟು ಹೋಗಿ, ಮದೀನದ ಉಪನಗರದ ಯಈನ್ ಕೋಲೋನಿಯಲ್ಲಿ ವಾಸಿಸುತ್ತಿದ್ದ ತನ್ನ ಕುಟುಂಬದ ಜನರ ಬಳಿ ಬಂದು, ಆಶೂರಾಅ್ ಉಪವಾಸ ಆಚರಿಸಲು ಹೇಳಿದರು. ಆಶೂರಾಅ್ ದಿನದ ಉಪವಾಸವನ್ನು ಕಡ್ಡಾಯ ಗೊಳಿಸಿದ್ದು ಕೂಡ ಹಿಜ್’ರಾದ ಎರಡನೇ ವರ್ಷದಲ್ಲೇ ಆಗಿತ್ತು ಎಂಬ ಉಲ್ಲೇಖವನ್ನೂ ಕೂಡ ಕಾಣಬಹುದು. ಕೆಲವು ವರ್ಷಗಳ ನಂತರ ಈ ರೀತಿ ರಾಮದಾನ್ ಮಾಸದ ಉಪವಾಸವನ್ನೂ ಕೂಡ ಕಡ್ಡಾಯಗೊಳಿಸಲಾಯಿತು.
ಹಿಜ್’ರಾದ ಎರಡನೇ ವರ್ಷದಲ್ಲೇ ಅಸ್’ಲಮಿ ಜನಾಂಗದ ಬಹಳಷ್ಟು ಕುಟುಂಬಗಳು ಮದೀನಕ್ಕೆ ಬಂದು ನೆಲೆಸಿದ್ದರು ಎಂಬುದನ್ನು ಕೂಡ ನಾವು ತಿಳಿಯಬೇಕಿದೆ. ಹೀಗೆ ವಲಸೆ ಬರುತಿದ್ದ ಮದೀನ ನಿವಾಸಿಗಳಲ್ಲದ ಮುಸ್ಲಿಂಮರ ಸಂಖ್ಯೆಯೂ ಅಧಿಕವಾಗ ತೊಡಗಿತು. ಅವರು ಜನಾಂಗ ಹಾಗೂ ಪಿತೃ ಪರಂಪರೆಯ ಆಧಾರದ ಮೇಲೆ ವಿವಿಧ ಭಾಗಗಳಲ್ಲಿ ಅವರದೇ ಆದ ಕೋಲೋನಿಗಳನ್ನು, ಸ್ಪಷ್ಟವಾದ ಯೋಜನೆಗಳೊಂದಿಗೆ ಮಾಡುತ್ತಿದ್ದರು. ಪ್ರತಿಯೊಂದು ವಸಾಹತು ಪ್ರದೇಶದಲ್ಲೂ ತಮ್ಮದೇ ಆದ ಮಸ್ಜಿದ್ ಹಾಗೂ ಮಾರುಕಟ್ಟೆಗಳನ್ನು ಆರಂಭಿಸಿ ಅಭಿವೃದ್ಧಿಯೊಂದಿಗೆ ಜೀವಿಸಲು ಆರಂಭಿಸಿದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-199/365
ಮದೀನದ ಆರಂಭಿಕ ಕಾಲದ ಬಗ್ಗೆಯಲ್ಲವೇ ನಾವು ಅಧ್ಯಯನ ನಡೆಸುತ್ತಿರುವುದು. ಈ ಕಾಲದ ಮೊತ್ತೊಂದು ಬಹಳ ಮುಖ್ಯವಾದ ವಿಷಯವಾಗಿತ್ತು, ಸಂಪೂರ್ಣ ನಿಯಮದೊಂದಿಗೆ ಖುರ್’ಆನ್ ಸೂಕ್ತಗಳ, ಅಧ್ಯಾಯಗಳ ಅವತರಣೆ ಗೊಂಡದ್ದು. ಪವಿತ್ರ ಖುರ್’ಆನಿನ ಎರಡನೇ ಅಧ್ಯಾಯವಾದ, “ಅಲ್ ಬಖರ” ಅಧ್ಯಾಯದ ಬಹಳಷ್ಟು ಸೂಕ್ತಗಳು ಅವತರಿಸಿದ್ದು ಕೂಡ ಇದೇ ಸಂದರ್ಭದಲ್ಲಾಗಿತ್ತು. ಬಹಳ ದೀರ್ಘವಾದ ಒಂದು ಅಧ್ಯಾಯವೂ ಕೂಡ ಇದುವೇ ಆಗಿದೆ, ಅಲಿಫ್ ಲಾಂ ಮೀಮ್ ಎಂಬ ಅರಬಿ ಅಕ್ಷರಗಳಿಂದ ವಿಶೇಷವಾದ ರೀತಿಯಲ್ಲಿ ಜೋಡಿಸಲಾದ ಕುರ್’ಆನ್ ಅಧ್ಯಾಯದ ಆರಂಭವು, ಸಾಹಿತ್ಯ ಪಿತಾಮಹರಾಗಿದ್ದ ಅರಬ್ಬರನ್ನು ಆಶ್ಚರ್ಯಗೊಳಿಸಿತ್ತು. ನಂತರ ಬರುವ ಸೂಕ್ತಗಳಿಗೆ ರಚನಾತ್ಮಕವಾಗಿ ಹಾಗೂ ಆದರ್ಶಾತ್ಮಕವಾಗಿ ಪರಸ್ಪರ ಸಂಬಂಧಿಸದ ಕಾರಣ ಈ ಅಕ್ಷರಗಳನ್ನು ಪ್ರತ್ಯೇಕವಾಗಿ ನಿಲ್ಲುವ ಅಕ್ಷರ (ಅಲ್ ಹುರೂಫುಲ್ ಮುಖ ತ್ತಅ) ಎಂದು ಕರೆಯುತ್ತಾರೆ. ಖುರ್’ಆನಿನ ಇಪ್ಪತೊಂಬತ್ತು ಅಧ್ಯಾಯಗಳು ಈ ರೀತಿಯ ಅಕ್ಷರಗಳಿಂದಾಗಿದೆ ಆರಂಭವಾಗುವುದು. ಅದರಲ್ಲಿ ಕೆಲವೊಂದು ಒಂದು ಅಕ್ಷರ ಮಾತ್ರ ಇರುವಂಥದ್ದು ಇವೆ, “ಸ್ವಾದ್” ಎಂಬ ಮುವ್ವತೆಂಟನೆ ಅಧ್ಯಾಯ ಅದಕ್ಕೆ ಉದಾಹರಣೆಯಾಗಿದೆ. ಹೀಗೆ ಕೆಲವೊಂದು ಎರಡು ಅಕ್ಷರ ಇರುವಂಥದ್ದೂ, ಇನ್ನೂ ಕೆಲವು ಮೂರು ಅಕ್ಷರ ಇರುವಂಥದ್ದು ಇನ್ನೂ ಕೆಲವು ಅದಕ್ಕಿಂತಲೂ ಅಧಿಕವಿರುವ ಅಧ್ಯಾಯಗಳೂ ಕೂಡ ಇವೆ. ಇಪ್ಪತ್ತನೇ ಅಧ್ಯಾಯದ ತ್ವಾಹ, ಎರಡನೇ ಅಧ್ಯಾಯದ ಅಲಿಫ್ ಲಾಂ ಮೀಂ, ಹದಿಮೂರನೇ ಅಧ್ಯಾಯದ ಅಲಿಫ್ ಅಲಿಫ್ ಲಾಂ ಮೀಂ ರಾಅ್ ಎಂಬುದು ಅವುಗಳಿಗೆ ಉದಾಹರಣೆಗಳಾಗಿವೆ.
ಅರಬಿ ಅಕ್ಷರ ಮಾಲೆಯಲ್ಲಿರುವ ಇಪ್ಪತ್ತೆಂಟು ಅಕ್ಷರಗಳಲ್ಲಿ, ಈ ರೀತಿಯಾಗಿ ಹದಿನಾಲ್ಕು ಅಕ್ಷರಗಳು ಖುರ್’ಆನಿನ ಆರಂಭದ ಅಕ್ಷರಗಳಾಗಿ ಬಂದಿವೆ. ಸ್ವರ ವ್ಯತ್ಯಾಸ ಹಾಗೂ ಉಚ್ಚಾರಣಾ ಶೈಲಿಯ ಆಧಾರದ ಮೇಲೆ ಅರಬಿ ಅಕ್ಷರಗಳನ್ನು ವಿವಿಧ ರೀತಿಯಲ್ಲಿ ವರ್ಗೀಕರಿಸಲಾಗಿದೆ. ಎಲ್ಲಾ ವರ್ಗದಲ್ಲೂ ಅರ್ಧದಷ್ಟು ಅಕ್ಷರಗಳು, ಮೇಲೆ ತಿಳಿಸಿದ ಅಧ್ಯಾಯದ ಆರಂಭಿಕ ಅಕ್ಷರಗಳಲ್ಲಿ ಸೇರಿಕೊಂಡಿವೆ. ಅದಕ್ಕೆ ಸಂಬಂಧಿಸಿದ ಹಲವಾರು ಅಧ್ಯಯನದ ಗ್ರಂಥಗಳು ನಮಗೆ ಬಹಳಷ್ಟು ಕಾಣಲು ಸಾಧ್ಯವಿದೆ.
ಅಲ್’ಬಖರ ಅಧ್ಯಾಯದ ಆರಂಭದ, “ಅಲಿಫ್ ಲಾಂ ಮೀಂ” ಎಂದು ಆರಂಭವಾಗುವ ಖುರ್’ಆನಿನ ಸೂಕ್ತಗಳನ್ನು ಕೇಳಿದ, ಅರಬ್ಬರು ಆಶ್ಚರ್ಯದಿಂದ ಪರಿಶೀಲನೆ ಮಾಡಿದ ದೃಶ್ಯದ ಬಗ್ಗೆ ಅಬ್ದುಲ್ಲಾಹಿಬಿನು ಅಬ್ಬಾಸ್’ರು ◌ؓ ಉಲ್ಲೇಖಿಸಿದ್ದು ಕಾಣಬಹುದು. ಅಬೂಯಾಸಿರ್ ಬಿನ್ ಅಖ್’ತಬ್ ಎಂಬವರು, ಪ್ರವಾದಿಯವರ ﷺ ಹತ್ತಿರದಿಂದಲೇ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಪ್ರವಾದಿಯವರು ﷺ ಅಲ್ ಬಖರ ಅಧ್ಯಾಯದ ಆರಂಭದ ಭಾಗವನ್ನು ಪಠಿಸುತಿದ್ದರು. ಅಬೂ ಯಾಸಿರ್ ಅದನ್ನು ಬಹಳ ಶ್ರದ್ಧೆಯಿಂದ ಕೇಳುತ್ತಾ ಅಲ್ಲೇ ನಿಂತು ಬಿಟ್ಟರು, ಸ್ವಲ್ಪ ಸಮಯದ ನಂತರ ಅಲ್ಲಿಂದ ಹೊರಟು ಯಹೂದಿ ಗೆಳೆಯರ ಜೊತೆಯಲ್ಲಿ ನಿಂತಿದ್ದ ಸಹೋದರನಾದ ಹುಯಯ್ಯ್ ಬಿನ್ ಅಖ್’ತಬ್’ರ ಬಳಿ ಹೋಗಿ, ಮುಹಮ್ಮದ್ ಪ್ರವಾದಿಯವರು ﷺ ಖುರ್’ಆನಿಂದ ಅಲಿಫ್ ಲಾಂ ಮೀಂ ದಾಲಿಕಲ್ ಕಿತಾಬು… ಎಂದು ಖುರ್’ಆನ್ ಪಟಣೆ ಮಾಡುತ್ತಿರುವುದು ನನಗೆ ಕೇಳಲು ಸಾಧ್ಯವಾಯಿತು ಎಂದು ಹೇಳಿದರು. ಅದಕ್ಕೆ ಅವರು ನಿಜವಾಗಿಯೂ ನಿಮಗೆ ಕೇಳಲು ಸಾಧ್ಯವಾಯಿತೆ.? ಎಂದು ಪುನಃ ಕೇಳಿದಾಗ ಅಬೂಯಾಸಿರ್ ಹೌದು ಎಂದು ಹೇಳಿದರು. ನಂತರ ಅವರಿಬ್ಬರೂ ಒಟ್ಟಿಗೆ ಪ್ರವಾದಿಯವರ ﷺ ಬಳಿ ಬಂದು, ನೀವು ಅಲಿಫ್ ಲಾಂ ಮೀಂ ಎಂದು ಆರಂಭಿಸಿದ ಖುರ್’ಆನ್ ಸೂಕ್ತದ ಪಠಣೆ ನಡೆಸಿದಿರಿ ಅಲ್ವೆ.? ಅದು ನಿಮಗೆ ಅವತರಿಸಿದ ಸೂಕ್ತವೆ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹೌದು ಎಂದು ಹೇಳಿದರು, ಅದಕ್ಕೆ ಅವರು ಅಲ್ಲಾಹನಿಂದ ದಿವ್ಯ ಸಂದೇಶವನ್ನು ಜಿಬ್’ರೀಲರು ಬಂದು ತಲುಪಿಸಿದ್ದೋ.? ಎಂದು ಪುನಃ ಕೇಳಿದರು. ಅದಕ್ಕೂ ಪ್ರವಾದಿಯವರು ﷺ ಹೌದು ಎಂದು ಉತ್ತರಿಸಿದರು. ಅಲ್ಲಾಹನು ಈಗಾಗಲೇ ಬಹಳಷ್ಟು ಪ್ರವಾದಿಗಳನ್ನು ﷺ ನೇಮಿಸಿದ್ದಾನೆ. ಅವರಲ್ಲಿ ಒಬ್ಬರಿಗೂ ಅವರ ಕಾಲದ ದೀರ್ಘತೆಯಾಗಲಿ, ಅವರ ಸಮುದಾಯದ ಆಯಸ್ಸನ್ನಾಗಲಿ ಹೇಳಿಲ್ಲವಲ್ಲ ಎಂದು ಕೇಳಿದರು. ಅರಬಿ ಅಕ್ಷರಗಳಲ್ಲಿ ಪ್ರತಿಯೊಂದಕ್ಕೂ ನಿರ್ದಿಷ್ಟ ಅಂಕೆಗಳನ್ನು ನಿಗದಿಪಡಿಸುವ ಮೂಲಕ ಎಣಿಸುವ ವಿಧಾನವಿದೆ. ಅದರ ಪ್ರಕಾರ ‘ಅಲಿಫ್ ಲಾಂ ಮೀಂ ಎಂಬ ಅಕ್ಷರಗಳಿಗೂ ಅಂಕೆಯನ್ನು ಹಾಕುವ ಮೂಲಕ ಇದೊಂದು ಲೆಕ್ಕಾಚಾರ ಆಗಿರಬಹುದು ಎಂದು ಭಾವಿಸಿ ಇವರು ಹಾಗೆ ಹೇಳಿದ್ದರು. ಅದೇ ರೀತಿ ಅವರು ಅಲಿಫಿಗೆ ಒಂದು, ಲಾಮಿಗೆ ಮೂವತ್ತು, ಮೀಮಿಗೆ ನಲ್ವತ್ತು ಎಂದು ಲೆಕ್ಕ ಹಾಕಿ, ಈ ಪ್ರವಾದಿಯವರ ﷺ ಅಧಿಕಾರದ ಕಾಲ ಎಪ್ಪತ್ತೊಂದು ಆಗಿರಬಹುದು ಅಥವಾ ಇವರ ಸಮುದಾಯದ ಕಾಲ ಎಪ್ಪತ್ತೊಂದು ಆಗಿರಬಹುದು ಎಂದು ಸಂಕಲ್ಪಿಸಿ, ಪುನಃ ಪ್ರವಾದಿಯವರ ﷺ ಬಳಿ ಹೋದರು.
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-200/365
ಅವರು ಪ್ರವಾದಿಯವರ ﷺ ಬಳಿ ಬಂದು, “ಅಲಿಫ್ ಲಾಂ ಮೀಂ” ಎಂಬ ಅಕ್ಷರದ ಹಿಂದೆ ಏನಾದರೂ ರಹಸ್ಯವಿದೆಯೆ.? ಎಂದು ಕೇಳಿದಾಗ, ಪ್ರವಾದಿಯವರು ﷺ “ಅಲಿಫ್ ಲಾಂ ಮೀಂ ಸ್ವಾದ್” ಪಠಣೆ ಮಾಡಿದರು. ಅದಕ್ಕೆ ಅವರಿಬ್ಬರು ಪುನಃ ಅಲಿಫ್’ಗೆ ಒಂದು, ಲಾಮಿಗೆ ಮೂವತ್ತು, ಮೀಮಿಗೆ ನಲ್ವತ್ತು, ಹಾಗೂ ಸ್ವಾದ್’ಗೆ ತೊಂಬತ್ತು ಎಂದು ಲೆಕ್ಕ ಹಾಕಿ ನೂರ ಅರುವತ್ತೊಂದು ಎಂದಾಗುತ್ತದೆ, ಎಂದು, ಅವರಿಗೆ ಸ್ಪಷ್ಟನೆ ಸಿಗದೆ ಗೊಂದಲಕ್ಕೆ ಸಿಲುಕಿದರು. ಅವರು ಪುನಃ ಇನ್ನೂ ಏನಾದರೂ ಬಾಕಿ ಇದೆಯಾ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹೌದು ಎಂದು ಹೇಳುತ್ತಾ, ಯೂಸುಫ್ ಅಧ್ಯಾಯದ ಆರಂಭಲ್ಲಿರುವ “ಅಲಿಫ್ ಲಾಂ ರಾಅ್” ಎಂಬ ಅಕ್ಷರವನ್ನು ಪಠಣೆ ಮಾಡಿದರು. ಅದನ್ನು ಕೇಳಿ ಅವರು ಇದು ತುಂಬಾ ಕಷ್ಟಕರವಾಗಿದೆ ಎನಿಸಿದಷ್ಟು ಸುಲಭವಿಲ್ಲ ಎಂದು ಅಲಿಫಿಗೆ ಒಂದು, ಲಾಮಿಗೆ ಮೂವತ್ತು, ರಾಅ್’ಗೆ ಇನ್ನೂರು, ಒಟ್ಟಾಗಿ ಇನ್ನೂರ ಮೂವತ್ತೊಂದು ಆಯಿತಲ್ಲವೇ.? ಎಂದು ಹೇಳುತ್ತಾ, ಇನ್ನೂ ಏನಾದರೂ ಬಾಕಿ ಇದೆಯಾ.? ಎಂದು ಕೇಳಿದರು. ಪ್ರವಾದಿಯವರು ﷺ ಹೌದು ಎಂದು ಹೇಳುತ್ತಾ, ರಅದ್ ಅಧ್ಯಾಯದ ಆರಂಭವಾದ
“ಅಲಿಫ್ ಲಾಂ ಮೀಂ ರಾಅ್” ಎಂದು ಪಠಣೆ ಮಾಡಿದರು. ಅದನ್ನು ಕೇಳಿ ಅವರಿಬ್ಬರು ಇದು ಈಗ ಇನ್ನೂರ ಎಪ್ಪತ್ತೊಂದು ಆಯಿತಲ್ಲವೇ.? ನಮಗೆ ಯಾವುದೂ ಕೂಡ ಅರ್ಥವಾಗುತ್ತಿಲ್ಲ ಎಂದು ಹೇಳಿದರು. ಅಬೂ ಯಾಸಿರಿನಲ್ಲಿ, ಹುಯಯ್ಯ್ ಬಿನ್ ಅಖ್’ತಬ್ ಖಂಡಿತವಾಗಿಯೂ ಇದೊಂದು ಅದ್ಭುತವೇ ಆಗಿದೆ, ಈ ತಿಳಿಸಿದ ಎಲ್ಲವೂ ಮುಹಮ್ಮದ್ ಪ್ರವಾದಿಯವರಿಗೆ ﷺ ಮಾತ್ರ ನೀಡಿರುವ ವಿಷಯವಾಗಿದೆ ಎಂದು ಹೇಳಿದರು.
ವಾಸ್ತವದಲ್ಲಿ ಖುರ್’ಆನನ್ನು ಬೇಕಾದ ಹಾಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಕಾರಣವಾಗಿತ್ತು ಅವರಿಗೆ ಇಷ್ಟೊಂದು ಗೊಂದಲ ಉಂಟಾದ್ದದ್ದು. ಖುರ್’ಆನ್ ಜಗದೊಡೆಯನ ವಚನಗಳೇ ಆಗಿವೆ ಎಂದು ಅರ್ಥ ಮಾಡಿಕೊಳ್ಳುವ ಒಂದು ಅವಕಾಶವೂ ಕೂಡ ಇದಾಗಿತ್ತು. ಖುರ್’ಆನ್ ಗ್ರಂಥ ಅರಬಿಯಲ್ಲಿ ಅವತರಿಸಿದರೂ, ಅದನ್ನು ಅರಬ್ಬರಿಗೆ ಅರ್ಥ ಮಾಡಿಕೊಳ್ಳಲು ಕೂಡ ಪ್ರವಾದಿಯವರು ﷺ ವಿವರಣೆ ನೀಡಬೇಕಿತ್ತು. ಹಾಗಿದ್ದಲ್ಲಿ ಕೇವಲ ಭಾಷಾ ಜ್ಞಾನದ ಹೊರೆತಾಗಿ, ಮುಹಮ್ಮದ್ ಪ್ರವಾದಿಯವರಿಗೆ ﷺ ಈ ವಿಷಯಗಳನ್ನು, ಮಾಹಿತಿಗಳನ್ನು ತಿಳಿಸುವ ಒಂದು ಮೂಲ ಖಂಡಿತ ಇದೆ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ಆ ಮೂಲವೇ ಜಗದೊಡೆಯನಾದ ಅಲ್ಲಾಹನಾಗಿರುತ್ತಾನೆ.
ಇಬ್’ನು ಅಬ್ಬಾಸ್’ರವರ ◌ؓ ಅಭಿಪ್ರಾಯದ ಪ್ರಕಾರ ಈ ಕಾಲದಲ್ಲೇ ಆಗಿತ್ತು ಅತ್ತೌಹೀದ್ (ನೂರ ಹನ್ನೆರಡನೇ) ಅಧ್ಯಾಯ ಅವತರಿಸಿದ್ದು. ಇಮಾಮ್ ಖತಾದ ◌ؓ ಹಾಗೂ, ಳಹ್’ಹಾಕ್’ರು ◌ؓ ಈ ಅಧ್ಯಾಯವು ಮದೀನದಲ್ಲಿ ಅವತರಿಸಿದ್ದಾಗಿತ್ತು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದವರಾಗಿದ್ದಾರೆ. “ಅಲ್ ಇಖ್’ಲಾಸ್” ಎಂದಾಗಿದೆ ಈ ಅಧ್ಯಾಯದ ಪ್ರಸಿದ್ಧ ಹೆಸರು, ಅದಕ್ಕೊಂದು ಹಿನ್ನಯನ್ನೂ ಕೂಡ ಇಮಾಮ್ ಬೈಹಕಿಯವರು ◌ؓ ಉಲ್ಲೇಖಿಸಿದ್ದು ಕಾಣಬಹುದು. ಕಅಬ್ ಬಿನ್ ಅಲ್ ಅಶ್’ರಫ್ ಹಾಗೂ ಹುಯಯ್ಯ್ ಬಿನ್ ಅಖ್’ತಬ್ ಸಮೇತರಾಗಿರುವ ಯಹೂದಿ ಗುಂಪೊಂದು, ಪ್ರವಾದಿಯವರನ್ನು ﷺ ಭೇಟಿಯಾಗಿ, ಈ ಜಗತ್ತನ್ನು ಸೃಷ್ಟಿ ಮಾಡಿದ್ದು ಅಲ್ಲಾಹನಾಗಿದ್ದಾನೆ ಎಂದು ಅಲ್ಲವೇ.? ನೀವು ಹೇಳುತ್ತಿರುವುದು. ಹಾಗಿದ್ದಲ್ಲಿ ಅಲ್ಲಾಹನನ್ನು ಸೃಷ್ಟಿ ಮಾಡಿದ್ದು ಯಾರು.? ಎಂದು ಕೇಳಿದರು. ಈ ಪ್ರಶ್ನೆ ಕೇಳಿದ್ದೆ ತಡ ಪ್ರವಾದಿಯವರ ﷺ ಮುಖ ಕೋಪದಿಂದ ವಿವರ್ಣವಾಯಿತು. ತಕ್ಷಣವೇ ಅಲ್ಲಾಹನು ಜಿಬ್’ರೀಲರನ್ನು ಕರೆದು, ಪ್ರವಾದಿಯವರ ﷺ ಬಳಿ ಕಳುಹಿಸಿ, ಅಲ್ ಇಖ್’ಲಾಸ್ ಅಧ್ಯಾಯದ ಅವತರಣೆಯನ್ನು ಮಾಡಿದನು. ಅದರ ಸಾರ ಈ ರೀತಿಯಾಗಿದೆ, “ಪ್ರವಾದಿಯವರೇ ﷺ ತಾವು ಹೇಳಿರಿ, ಅಲ್ಲಾಹನು ಒಬ್ಬನೇ ಆಗಿರುವನು, ಅವನೆ ಎಲ್ಲರಿಗೂ ಆಶ್ರಯದಾತನಾಗಿರುವನು, ಅವನು (ಯಾರಿಗೂ) ಜನ್ಮ ನೀಡಲಿಲ್ಲ, ಅವನಿಗೂ ಯಾರೂ ಜನ್ಮ ನೀಡಲಿಲ್ಲ, ಅವನಿಗೆ ಸಮಾನರು ಯಾರೂ ಇಲ್ಲ.”
ಇಮಾಮ್ ಮುಜಾಹಿದ್ ◌ؓ ಹಾಗೂ ಅತ್ವಾಅ ◌ؓ, ಅವರ ಅಭಿಪ್ರಾಯದ ಪ್ರಕಾರ ಈ ಅಧ್ಯಾಯ ಅವತರಿಸಿದ್ದು ಮಕ್ಕಾದಲ್ಲಿ ಆಗಿತ್ತು. ಈ ಅಭಿಪ್ರಾಯದ ಪ್ರಕಾರ, ಅಲ್ಲಾಹು ಯಾರೆಂದು ಮಕ್ಕಾದ ಮುಶ್ರಿಕ್’ಗಳು ಕೇಳಿದ ಸಂದರ್ಭದಲ್ಲಿ, ಅವತರಿಸಿದ ಅಧ್ಯಾಯವಾಗಿದೆ ಇದು. ಕೆಲವೊಮ್ಮೆ ಒಂದು ಅಧ್ಯಾಯದ ಅವತರಣೆ ಒಂದು ಸ್ಥಳದಲ್ಲಿ ಉಂಟಾಗಿ, ಅದೇ ಅಧ್ಯಾಯವನ್ನೋ, ಅಥವಾ ಅದರ ಸೂಕ್ತವನ್ನೋ ಸಂದರ್ಭಕ್ಕನುಗುಣವಾಗಿ ಇನ್ನೊಂದು ಪ್ರಾಂತ್ಯದಲ್ಲಿ ಪುನಃ ಪಠಿಸಲೂಬಹುದು. ಹೀಗಿರುವಾಗ ಕೆಲವೊಮ್ಮೆ ಕೆಲವೊಂದು ಭಿನ್ನಾಭಿಪ್ರಾಯಗಳು ಸಾಪೇಕ್ಷವಾಗಿ, ಅದರ ವ್ಯಾಖ್ಯಾನದಲ್ಲಿ ಉಂಟಾಗುತ್ತದೆ.
ಮದೀನಾದ ಆತ್ಮವು ಪ್ರವಾದಿಯವರ ﷺ ಆರೈಕೆಯಲ್ಲಿ ಪೋಷಣೆಯಾಗುತ್ತಿದ್ದವು. ಪ್ರಪಂಚದ ಎಲ್ಲಾ ಜನರ ಗಮನವೂ ಮದೀನದ ಭಾಗಕ್ಕೆ ತಿರುಗಲು ಆರಂಭಿಸಿತು. ಅದರ ಜೊತೆಯಲ್ಲಿ ಕೆಲವರು ಬಾಣಗಳನ್ನು ಹಾಗೂ ಈಟಿಗಳನ್ನು ತೆಗೆದು ಮೇಜಿನ ಮೇಲಿರುವ ಮದೀನಾ ನಕ್ಷೆಯನ್ನು ನೋಡುತ್ತಿದ್ದರು. ಅವರಿಗೆ ಅದರಲ್ಲಿ ರಾಜಕೀಯ ಹಸ್ತಕ್ಷೇಪದ ಮೋಡಗಳು ಗೋಚರಿಸತೊಡಗಿದ್ದವು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-201/365
ಇಬ್’ನು ಇಸ್’ಹಾಖ್ ◌ؓ, ಇಬ್’ನು ಮುನ್’ದಿರ್ ◌ؓ ಹಾಗೂ ಇತರರು ಉಲ್ಲೇಖಿಸಿದ ಹದೀಸಿನಲ್ಲಿ ಕಾಣಬಹುದು. ಮುಸ್ಲಿಮರಲ್ಲಿ ಬಹಳಷ್ಟು ದ್ವೇಷವನ್ನು, ಅಸೂಯೆಯನ್ನು ಇಟ್ಟುಕೊಂಡಿದ್ದ ಷಅಸ್ ಬಿನ್ ಖೈಸ್ ಎಂಬ ವಯ್ಯಸ್ಸಾದ ವ್ಯಕ್ತಿ ಇದ್ದರು. ಒಂದು ದಿನ ಪ್ರವಾದಿಯವರು ﷺ ತಮ್ಮ ಅನುಚರರ (ಔಸ್ ಹಾಗೂ ಖಝ್’ರಜ್) ಜೊತೆಯಲ್ಲಿ ಕುಳಿತು ಕೆಲವು ವಿಷಯಗಳ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಆ ವ್ಯಕ್ತಿಯೂ ಅವರ ಕಡೆಗೆ ನಡೆದು ಬಂದರು. ವರ್ಷಾನುಗಟ್ಟಲೆ ಪರಸ್ಪರ ಶತ್ರುಗಳ ಹಾಗೆ, ಹಗೆ ಸಾಧಿಸಿದ್ದ ಜನಾಂಗವು ಬಹಳ ಅನ್ಯೋನ್ಯತೆಯಿಂದ ಇರುವುದನ್ನು ಕಂಡು ಆ ವ್ಯಕ್ತಿಗೆ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಆತನು ಹೇಗಾದರೂ ಇವರ ನಡುವೆ ಬಿರುಕು ಮೂಡಿಸಬೇಕೆಂದು ಯೋಜನೆ ರೂಪಿಸಿ, ಒಬ್ಬ ಯಹೂದಿ ಯುವಕನನ್ನು ಕರೆದು, ನೀನು ಇವರ ನಡುವೆ ಹೋಗಿ ಕುಳಿತು, ಅಂದು ಬುಆಸ್’ನಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಮಾತಾಡಬೇಕು, ಅವರ ನಡುವೆ ಅಂದು ಹಾಡುತ್ತಿದ್ದ ಕೆಲವು ಕವಿತೆಗಳಿತ್ತು, ಅದನ್ನು ನೀನು ಕೂಗಿ ಹೇಳಬೇಕು, ಎಂದು ಹೇಳಿದರು.
ಔಸ್ ಹಾಗೂ ಖಝ್’ರಜ್ ಜನಾಂಗದ ನಡುವೆ ಕೊನೆಯದಾಗಿ ನಡೆದ ಯುದ್ಧವಾಗಿತ್ತು ಈ ಬುಆಸ್ ಎಂಬುವುದು. ಪ್ರವಾದಿಯವರು ﷺ ಮದೀನಕ್ಕೆ ಬರುವುದಕ್ಕಿಂತ, ಐದು ವರ್ಷದ ಮೊದಲು ನಡೆದ ಯುದ್ಧವಾಗಿತ್ತು ಈ ಬುಆಸ್. ಅಂದಿನ ದಿನಗಳಲ್ಲಿ ನಡೆದ ವೈರಾಗ್ಯದ ಬಗ್ಗೆ, ಶೌರ್ಯದ ಬಗ್ಗೆ ಹಾಡುತ್ತಾ ಈ ವ್ಯಕ್ತಿಯೂ ಎರಡು ಜನಾಂಗವನ್ನು ಜೊತೆ ಸೇರಿಸಿದನು. ಅವರು ತಾವರಿಯದೆ ಪೂರ್ವ ಕಾಲಕ್ಕೆ ಹಿಂತಿರುಗಿ, ಪರಸ್ಪರ ವಾಗ್ವಾದಕ್ಕೆ ಇಳಿದು, ಕೊನೆಗೆ ತಮ್ಮ ಶಸ್ತ್ರಗಳನ್ನು ಎತ್ತಿಕೊಂಡರು.
ಈ ವಿಷಯವು ಪ್ರವಾದಿಯವರಿಗೆ ﷺ ತಿಳಿದಾಗ, ತಮ್ಮ ಜೊತೆಯಲ್ಲಿದ್ದ ಮುಹಾಜಿರ್’ಗಳನ್ನು ಜೊತೆ ಸೇರಿಸಿ, ವಾಗ್ವಾದ ನಡೆಯುತ್ತಿದ್ದ ಸ್ಥಳಕ್ಕೆ ಬಂದು ನೋಡಿದಾಗ, ಎರಡು ಜನಾಂಗವೂ ಕೂಡ ಪರಸ್ಪರ ಯುದ್ಧ ಮಾಡಲು ತಯಾರಾಗಿ ನಿಂತಿದ್ದರು. ಅದನ್ನು ಕಂಡು ಪ್ರವಾದಿಯವರು ﷺ ಯಾ ಮಆಷರಲ್ ಮುಸ್’ಲಿಮೀನ್ “ಓ ಮುಸ್ಲಿಮರೇ, ನಾನು ನಿಮ್ಮ ನಡುವೆ ಇರುವ ಸಂದರ್ಭದಲ್ಲಿಯೇ ನೀವು ಪುನಃ ಅಜ್ಞಾನದ ದಿನದ ಕಡೆಗೆ ಮರುಳುತ್ತಿದ್ದೀರೆ.? ಅಲ್ಲಾಹನನ್ನು ಭಯಪಡಿರಿ, ನೀವುಗಳು ಇಸ್ಲಾಮಿಗೆ ಬಂದ ನಂತರ ಅಜ್ಞಾನಕ್ಕೆ ವಿರಾಮ ಹಾಕಿದ್ದೀರಿ ಅಲ್ಲವೇ.? ಸತ್ಯ ನಿಷೇಧದಿಂದ ನಿಮ್ಮನ್ನು ರಕ್ಷಣೆ ಮಾಡಿದ್ದೀವಿ ಅಲ್ಲವೇ.? ನಿಮ್ಮನ್ನು ನಾವು ಒಗ್ಗಟ್ಟು ಮಾಡಿದ್ದೇವೆ ಅಲ್ಲವೇ.? ಹೀಗಿರುವಾಗ ನೀವು ಪುನಃ ಪೂರ್ವ ಕಾಲದ ಅಜ್ಞಾನಕ್ಕೆ ಮರುಳುತ್ತೀರೆ.? ಎಂದು ಕೇಳಿದಾಗ. ಅವರು ವಾಸ್ತವಕ್ಕೆ ಮರಳಿ ಬಂದರು.
ಈಗಷ್ಟೇ ನಡೆದ ಘಟನೆ ಪಿಶಾಚಿಯ ಪ್ರೇರಣೆಯಿಂದ ನಡೆದದ್ದಾಗಿತ್ತು ಎಂದು ಅರ್ಥ ಮಾಡಿಕೊಂಡು, ಪರಸ್ಪರ ತಬ್ಬಿಕೊಂಡು ತಮ್ಮಲ್ಲಿ ಉಂಟಾದ ತಪ್ಪುಗಳಿಗೆ ಕ್ಷಮೆ ಕೇಳಿ, ತಮ್ಮ ಕೈಯಲ್ಲಿದ್ದ ಶಸ್ತ್ರಗಳನ್ನು ನೆಲಕ್ಕೆ ಹಾಗೆ, ಬಿಕ್ಕಿ ಬಿಕ್ಕಿ ಕಣ್ಣೀರು ಸುರಿಸಿ, ಆಜ್ಞಾ ಪಾಲನೆಯಿರುವ ಇರುವ ಒಳ್ಳೆಯ ಅನುಯಾಯಿಗಳಂತೆ ಪ್ರವಾದಿಯವರ ﷺ ಹಿಂದೆ ಹೊರಟು ಹೋದರು. ಷಅಸ್ ಬಿನ್ ಖೈಸ್’ನ ಹಾಗೂ ಶತ್ರುಗಳ ಕುತಂತ್ರವು ಮಣ್ಣು ಪಾಲಾಗಿತ್ತು. ಈ ಸಂದರ್ಭದಲ್ಲಿ ಪವಿತ್ರ ಕುರ್’ಆನಿನ ಆಲು ಇಮ್ರಾನ್ ಅಧ್ಯಾಯದ ತೊಂಬತ್ತೆಂಟರಿಂದ ನೂರಾ ಒಂದರ ವರೆಗಿನ ಸೂಕ್ತದ ಅವತರಣೆಗೊಂಡದ್ದು. ಅದರ ಸಾರವು ಈ ರೀತಿಯಾಗಿದೆ, “ಪ್ರವಾದಿಯವರೇ ತಾವು ಹೇಳಿರಿ, ಓ ವೇದ ಗ್ರಂಥದ ಜನರೇ, ನೀವು ಯಾಕಾಗಿ ಅಲ್ಲಾಹನ ವಚನಗಳನ್ನು ನಿಷೇಧಿಸುವುದು.? ನೀವು ಮಾಡುತ್ತಿರುವ ಎಲ್ಲಾ ವಿಷಯಗಳನ್ನು ಅಲ್ಲಾಹನು ನೋಡುತ್ತಿರುವನು. ಓ ವೇದ ಗ್ರಂಥದವರೇ, ಅಲ್ಲಾಹನ ದಾರಿಯಿಂದ ದೂರ ಸರಿಸಲು, ನೀವು ಯಾಕಾಗಿ ಸತ್ಯ ವಿಶ್ವಾಸಿಗಳನ್ನು ತಡೆಯುತ್ತಿದ್ದೀರಿ.? (ಆ ದಾರಿ ಸರಿಯಾಗಿದೆ ಎಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದೀರಿ ಅಲ್ಲವೇ.? ನೀವು ಮಾಡುತ್ತಿರುವ ದುಷ್ಕೃತ್ಯದ ಬಗ್ಗೆ ಅಲ್ಲಾಹನಿಗೆ ತಿಳಿಯದೆ ಅಲ್ಲ. ಓ ಸತ್ಯ ವಿಶ್ವಾಸಿಗಳೇ, ವೇದ ಗ್ರಂಥ ನೀಡಿದವರಲ್ಲಿ, ಕೆಲವು ವಿಭಾಗದ ಜನರನ್ನು ನೀವು ಅನುಸರಿಸುವುದಾದರೆ.? ನೀವು ಸತ್ಯ ವಿಶ್ವಾಸವನ್ನು ಒಪ್ಪಿಕೊಂಡ ನಂತರವೂ, ಅವರು ನಿಮ್ಮನ್ನು ಸತ್ಯ ವಿಶ್ವಾಸದಿಂದ ದೂರ ಸರಿಸಿ ನಿಲ್ಲಿಸುವರು. ನಿಮಗೆ ಅಲ್ಲಾಹನ ವಚನಗಳನ್ನು ತಿಳಿಸುತ್ತಿರುವಾಗಲೇ, ನಿಮ್ಮ ನಡುವೆ ಅಲ್ಲಾಹನ ಪ್ರವಾದಿಯವರು ﷺ ಇರುವಾಗಲೇ, ನೀವು ಯಾಕಾಗಿ ಸತ್ಯನಿಷೇಧಿಯಾಗುತ್ತೀರಿ.? ಯಾರು ಅಲ್ಲಾಹನನ್ನು ಸಂಪೂರ್ಣವಾಗಿ ಹಿಂಬಾಲಿಸುತ್ತಾರೋ.? ಅವರು ಖಂಡಿತವಾಗಿಯೂ ಸನ್ಮಾರ್ಗದಲ್ಲಿ ಸೇರಿದವರಾಗಿದ್ದಾರೆ.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-202/365
ಖುರ್’ಆನಿನ ಸೂಕ್ತಗಳ ಅವತರಣೆ ಹಿಂದೆ ಸ್ಪಷ್ಟವಾದ ಹಿನ್ನೆಲೆಗಳು ಇದ್ದೇ ಇರುತ್ತದೆ. ಅದರಲ್ಲಿ ಒಂದಾಗಿದೆ ನಾವು ಈಗಾಗಲೇ ತಿಳಿದುಕೊಂಡದ್ದು. ಅಲ್ ಬಖರ ಅಧ್ಯಾಯದ ಇನ್ನೂರ ನಲವತ್ತೈದರ ಹಾಗೂ ಇತರ ಸೂಕ್ತಗಳ ಹಿಂದಿನ ಹಿನ್ನಲೆಯ ಬಗ್ಗೆಯೂ ತಿಳಿಯೋಣ.
ಅಬೂಬಕ್ಕರ್ ಸಿದ್ದೀಕ್’ರವರು ◌ؓ ಒಮ್ಮೆ ಯಹೂದಿಗಳ ಗ್ರಂಥಾಲಯಕ್ಕೆ ತೆರಳಿದ್ದರು, ಅಲ್ ಬಖರ ಅಧ್ಯಾಯದ ಅವತರಣೆ ನಂತರವಾಗಿತ್ತು ಈ ಭೇಟಿ. ಅವರು ಓದಿದ ಸೂಕ್ತದ ಸಾರವು ಈ ರೀತಿಯಾಗಿದೆ “ಅಲ್ಲಾಹನಿಗೆ ಉತ್ತಮ ಸಾಲ ನೀಡುವವರು ಯಾರಿದ್ದಾರೆ? ಹಾಗಿದ್ದಲ್ಲಿ ಅಲ್ಲಾಹನು ಅದನ್ನು ಆತನಿಗೆ ಹಲವು ಪಟ್ಟು ಹೆಚ್ಚಿಸಿ ವಾಪಸು ನೀಡುವನು. (ಸಂಪತ್ತನ್ನು) ತಡೆದು ನಿಲ್ಲಿಸುವವನೂ, ಬಿಟ್ಟುಕೊಡುವವನು ಅಲ್ಲಾಹನೇ ಆಗಿರುವನು. ಅವನ ಬಳಿಯೇ ಆಗಿದೆ ನೀವು ಖಂಡಿತ ಹಿಂದಿರುಗಲಿರುವುದು.” ಅಷ್ಟರಲ್ಲೇ ಫಿನ್’ಹಾಸ್ ಬಿನ್ ಆಸೂರಾಅ್ ಎಂಬ ಯಹೂದಿ ಪುರೋಹಿತನೊಬ್ಬ ತನ್ನ ಜೊತೆಯಲ್ಲಿ ಕೆಲವು ಜನರನ್ನು ಸೇರಿಸಿ ಅಬೂಬಕ್ಕರ್’ರವರ ಬಳಿ ಬಂದು ನಿಂತರು. ಅವರನ್ನು ಕಂಡ ಅಬೂಬಕ್ಕರ್’ರವರು ◌ؓ ನಿಮಗೆ ಇಸ್ಲಾಮ್ ಸ್ವೀಕರಿಸಿ, ಒಳ್ಳೆಯ ರೀತಿಯಲ್ಲಿ ಅಲ್ಲಾಹನ ತೃಪ್ತಿಯಿಂದ ಜೀವಿಸಬಹುದಲ್ಲವೇ.? ಅಲ್ಲಾಹನನ್ನು ಸಾಕ್ಷಿಯಾಗಿಸಿ ಒಮ್ಮೆ ಆಲೋಚಿಸಿರಿ, ನಿಮಗೆ ಚೆನ್ನಾಗಿ ಗೊತ್ತಿದೆ ತಾನೇ ಮುಹಮ್ಮದ್’ರು ﷺ ಅಲ್ಲಾಹನ ಪ್ರವಾದಿಯಾಗಿರುವರು ﷺ ಎಂದು.? ಅದನ್ನು ನೀವು ಕಲಿತ ತೌರಾತ್ ಹಾಗೂ ಇತರ ಗ್ರಂಥಗಳು ಕೂಡ ತಿಳಿಸುತ್ತದೆ ಅಲ್ಲವೇ.? ಎಂದು ಹೇಳಿದಾಗ, ತಕ್ಷಣವೇ ಫಿನ್’ಹಾಸ್ ಅಬೂಬಕ್ಕರ್’ರಲ್ಲಿ ◌ؓ ನಾವು ಅಲ್ಲಾಹನ ಹಾಗೆ ಬಡವರಲ್ಲ, ಅಲ್ಲಾಹನಿಗೆ ನಮ್ಮ ಅಗತ್ಯವಿದೆ. ಅವನು ನಮಗೆ ವಿನಯತೆ ತೋರಿಸುವ ಹಾಗೆ, ನಾವು ಅವನಿಗೆ ವಿನಯತೆ ತೋರಿಸುವುದಿಲ್ಲ. ಯಾಕೆಂದರೆ ನಾವು ಅವನಿಗಿಂತ ಶ್ರೀಮಂತರು. ಅವನು ನಮಗಿಂತ ಶ್ರೀಮಂತನಾಗಿದ್ದರೆ ನಿಮ್ಮ ಪ್ರವಾದಿಯವರು ﷺ ಹೇಳುವಂತೆ ನಮ್ಮಿಂದ ಸಾಲ ಕೇಳುತ್ತಿದ್ದನೇ? ನಿಮಗೆ ಬಡ್ಡಿಯನ್ನು ನಿಷೇಧಿಸಿದವನು, ನಮಗೆ ಬಡ್ಡಿಯನ್ನು ನೀಡುತ್ತಾನೆ. ಅವನು ನಿಜವಾಗಿಯೂ ಶ್ರೀಮಂತನಾಗಿದ್ದರೆ, ಅವನು ನಮಗೆ ಬಡ್ಡಿಯನ್ನು ನೀಡುತ್ತಿದ್ದನೇ? ಎಂದು ಹೇಳಿದರು. ಅದನ್ನು ಕೇಳಿ ಅಬೂಬಕ್ಕರ್’ರಿಗೆ ◌ؓ ಕೋಪ ನೆತ್ತಿಗೇರಿ, ಫಿನ್’ಹಾಸಿನ ಮುಖಕ್ಕೆ ಒಂದು ಏಟು ಹೊಡೆದು, ನಂತರ “ಲೋ ಅಲ್ಲಾಹನ ಶತ್ರು, ಬಹುಶಃ ನಮ್ಮ ನಡುವೆ ಒಪ್ಪಂದ ಇಲ್ಲದೆ ಇರುತ್ತಿದ್ದರೆ ನಿನ್ನ ತಲೆಯನ್ನು ಕತ್ತರಿಸಿ ಬಿಡುತ್ತಿದ್ದೆ ಎಂದು ಹೇಳಿದರು”
ಫಿನ್’ಹಾಸ್ ನೇರವಾಗಿ ಪ್ರವಾದಿಯವರ ﷺ ಬಳಿ ತೆರಳಿ, ಸಿದ್ದೀಕ್’ರ ವಿರುದ್ಧ ದೂರ ಹೇಳಿದರು. ಪ್ರವಾದಿಯವರು ﷺ ತಮ್ಮ ಗೆಳೆಯನನ್ನು ಕರೆದು, ವಿಷಯ ಏನೆಂದು ಕೇಳಿದಾಗ.? ಈತ ಅಲ್ಲಾಹನ ಬಗ್ಗೆ ಬಹಳ ಕೇವಲವಾದ ಮಾತುಗಳು ಆಡಿದನು. ಅಲ್ಲಾಹನು ಬಡವನು, ನಾವು ಶ್ರೀಮಂತರು ಆಗಿರುವೆವು ಎಂದು ಹೇಳಿದನು, ನನಗೆ ಆ ಮಾತು ಸಹಿಸಲು ಸಾಧ್ಯವಾಗದೆ ನಾನು ಅವನ ಮುಖಕ್ಕೆ ಒಂದು ಏಟನ್ನು ಕೊಟ್ಟೆನು ಎಂದು ಹೇಳಿದರು. ಆದರೆ ಫಿನ್’ಹಾಸ್ ಅಲ್ಲಾಹನನ್ನು ನಿಂದಿಸಿದ ಬಗ್ಗೆ ಅಲ್ಲಿ ಒಪ್ಪಿಕೊಳ್ಳಲು ನಿರಾಕರಿಸಿದನು. ಅಷ್ಟೊತ್ತಿಗಾಗಿತ್ತು, ಖುರ್’ಆನಿನ ಮೂರನೇ ಅಧ್ಯಾಯವಾದ ಆಲುಇಮ್ರಾನಿನ ನೂರ ಎಂಬತ್ತೊಂದನೆ ಸೂಕ್ತದ ಅವತರಣೆ ಗೊಂಡದ್ದು. ಅದರ ಸಾರವು ಈ ರೀತಿಯಾಗಿದೆ, “ಅಲ್ಲಾಹನು ಬಡವನಾಗಿರುವನು, ನಾವು ಶ್ರೀಮಂತನಾಗಿರುವೆವು ಎಂಬ ಮಾತನ್ನು, ಅಲ್ಲಾಹನು ಸಂಪೂರ್ಣವಾಗಿ ಕೇಳಿರುವನು. ಅವರು ಹೇಳಿದ ಆ ಮಾತುಗಳನ್ನೂ, ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ ಘಟನೆಗಳನ್ನೂ ನಾವು ಬರೆದು ಇಟ್ಟುಕೊಂಡಿದ್ದೇವೆ. ಹಾಗೂ ಅವರಲ್ಲಿ ಹೊತ್ತಿ ಉರಿಯುವ ನರಕಾಗ್ನಿಯ ಶಿಕ್ಷೆಯನ್ನು ಅನುಭವಿಸಿರಿ ಎಂದು ನಾವು ಹೇಳುತ್ತೇವೆ.”
ಫಿನ್’ಹಾಸಿನ ಭವಿಷ್ಯದ ಬಗ್ಗೆ ತಿಳಿಸಿದ ಖುರ್’ಆನ್ ನಂತರ ತಿಳಿಸಿದ್ದು ಅಬೂಬಕ್ಕರ್’ರವರ ◌ؓ ಬಗ್ಗೆಯಾಗಿತ್ತು. ಖಂಡಿತವಾಗಿಯೂ ನಿಮ್ಮ ಆಸ್ತಿ ಹಾಗೂ ಶರೀರಗಳಿಂದ ನೀವು ಪರೀಕ್ಷಿಸಲ್ಪಡುವಿರಿ. ನಿಮಗಿಂತ ಮೊದಲು ಧರ್ಮಗ್ರಂಥಗಳನ್ನು ನೀಡಿದವರಿಗೆ, ಬಹುದೈವಾರಾಧಕರು ನಿಂದಿಸಿದ ಮಾತುಗಳಿಗಿಂತ ನೀವು ಬಹಳಷ್ಟು ಮಾತುಗಳನ್ನು ಕೇಳಬೇಕಾಗುತ್ತದೆ. ನೀವು ಕ್ಷಮಿಸಿ, ಜಾಗರೂಕತೆಯಿಂದ ಇರುವುದು ಖಂಡಿತವಾಗಿಯೂ ದೃಢ ನಿಶ್ಚಯ ತೆಗೆಯಬೇಕಾದ ವಿಷಯಗಳೇ ಆಗಿವೆ.” ಆಲು ಇಮ್ರಾನ್ ಅಧ್ಯಾಯದ ನೂರ ಎಂಬತ್ತಾರನೇ ಸೂಕ್ತದ ಸಾರವಾಗಿದೆ ಮೇಲೆ ತಿಳಿಸಿದ್ದು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-203/365
ಮದೀನದಲ್ಲಿ ಬೆಳೆಯುತ್ತಿರುವ ಇಸ್ಲಾಮ್ ಮಕ್ಕಾದಲ್ಲಿ ಬಹಳ ಗಂಭೀರವಾದ ಚರ್ಚೆಗೆ ದಾರಿ ಮಾಡಿಕೊಡುತ್ತಿದ್ದವು. ಅದರ ಪರಿಣಾಮ ಮದೀನದ ಮೇಲೂ ಬೀರ ತೊಡಗಿತು. ಪ್ರವಾದಿಯವರು ﷺ ಪಲಾಯನ ಮಾಡಿ ಮದೀನಕ್ಕೆ ಬಂದಿದ್ದರೂ, ಮಕ್ಕಾದ ಮೇಲೆ ಹಾಗೂ ಅಲ್ಲಿನ ನಿವಾಸಿಗಳ ಮೇಲೆ ವಿಶೇಷ ಒಲವನ್ನು ಹೊಂದಿದ್ದರು. ಆದರೆ ಮಕ್ಕಾ ಮುಶ್ರಿಕ್’ಗಳ ನಿಲುವು ಮಾತ್ರ ಅದಕ್ಕೆ ತದ್ವಿರುದ್ಧವಾಗಿತ್ತು, ಪ್ರವಾದಿಯವರು ﷺ ಹಾಗೂ ಅವರ ಅನುಚರರು ಮಕ್ಕಾ ಬಿಟ್ಟು ಮದೀನಕ್ಕೆ ಹೋಗಿದ್ದರೂ, ಅವರನ್ನು ಅಲ್ಲಿಯೂ ಕೂಡ ನೆಮ್ಮದಿಯಿಂದ ಇರಲು ಬಿಡುವುದಿಲ್ಲ ಎಂಬ ನಿರ್ಧಾರವನ್ನು ಮಾಡಿಕೊಂಡಿದ್ದರು. ಅದರ ಭಾಗವಾಗಿ ನಡೆದ ಎರಡು ಪ್ರಮುಖ ಘಟನೆಗಳೆಂದರೆ.? ಒಂದು, ಮಕ್ಕಾದಿಂದ ಬಂದಿದ್ದ ನಿರಾಶ್ರಿತರಿಗೆ ಆಶ್ರಯ ನೀಡಿದ ಅನ್ಸಾರ್’ಗಳ ಜನಾಂಗದ ಮುಖ್ಯಸ್ಥನಿಗೆ, ಅಬೂಸುಫಿಯಾನ್ ಹಾಗೂ ಉಬೈಯ್ಯು ಬಿನು ಖಲಫ್ ಒಂದು ಪತ್ರವನ್ನು ಬರೆದರು. ಅದು ಈ ರೀತಿಯಿತ್ತು, ನಿಮ್ಮ ಜೊತೆಯಲ್ಲಿ ಯುದ್ಧ ಮಾಡುವುದು, ಬೇರೆ ಇತರ ಜನಾಂಗದ ಜನರೊಂದಿಗೆ ಯುದ್ಧ ಮಾಡಿದಕ್ಕಿಂತ ಅಧಿಕ ಬೇಸರ ನೀಡುತ್ತದೆ. ನಮ್ಮ ಜೊತೆಯಲ್ಲಿದ್ದ ಉನ್ನತ ಸ್ಥಾನಮಾನ ಉತ್ತಮ ಗುಣಗಳನ್ನು ಹೊಂದಿದ್ದ ವ್ಯಕ್ತಿಗೆ ನೀವು ಸಹಾಯ ಪ್ರಯತ್ನ ಮಾಡುತ್ತಿದ್ದೀರಿ. ನೀವು ಆ ವ್ಯಕ್ತಿಗೆ ಆಶ್ರಯ ನೀಡಿ, ಪ್ರತಿರೋಧವನ್ನು ಕಟ್ಟಿಕೊಳ್ಳುತ್ತಿದ್ದೀರಿ, ಇದು ಬಹಳಷ್ಟು ಮುಜುಗರದ ಸಂಗತಿಯಾಗಿದೆ. ಇದು ನಿಮ್ಮಿಂದ ಉಂಟಾದ ತಪ್ಪಾಗಿದೆ, ಹಾಗಾಗಿ ನೀವುಗಳು, ಆ ವ್ಯಕ್ತಿ ಹಾಗೂ ನಮ್ಮ ನಡುವೆ ಇರುವ ಸಮಸ್ಯೆಯಲ್ಲಿ ಹಸ್ತಕ್ಷೇಪ ಮಾಡಬಾರದು. ಅವರಲ್ಲಿ ಏನಾದರೂ ಒಳಿತಿದ್ದರೆ, ಅದರ ಪ್ರಯೋಜನ ಸಿಗಬೇಕಾದದ್ದು ನಮಗೆಯಾಗಿದೆ. ಇನ್ನೂ ಅವರಲ್ಲಿ ಏನಾದರೂ ಕೆಡುಕುಗಳು ಇದ್ದರೂ, ಅದಕ್ಕೆ ಪರಿಹಾರ ಹುಡುಕಬೇಕಾದವರೂ ಕೂಡ ನಾವೇ ಆಗಿರುತ್ತೇವೆ. ಈ ರೀತಿ ಬರೆದ ಪತ್ರಕ್ಕೆ ಉತ್ತರವಾಗಿ, ಕಅ್’ಬು ಬಿನ್ ಮಾಲಿಕ್’ರು ನಂತರದ ಸಮಯದಲ್ಲಿ ಕವಿತೆಯನ್ನೂ ಕೂಡ ರಚಿಸಿದ್ದರು.
ಪಲಾಯನದ ನಂತರವೂ ಮಕ್ಕಾ ನಿವಾಸಿಗಳು, ದ್ವೇಷ ಇಟ್ಟುಕೊಂಡಿರುವುದಕ್ಕೆ ಅತೀ ದೊಡ್ಡ ಉದಾಹರಣೆಯಾಗಿದೆ ಈ ಘಟನೆ. ಮದೀನದ ಅನ್’ಸ್ವಾರುಗಳು ಅವರ ಬೇಡಿಕೆಗಳನ್ನು ನಿರಾಕರಿಸಿದರೂ, ವಿರೋಧಿಗಳು ಪುನಃ ಎರಡನೇ ಬಾರಿಯೂ ಯೋಜನೆಯನ್ನು ಹೆಣೆದರು. ಮದೀನದಲ್ಲಿ ಪ್ರವಾದಿಯವರ ﷺ ವಿರೋಧಿಯಾಗಿದ್ದ ಅಬ್ದುಲ್ಲಾಹಿಬಿನು ಉಬಯ್ಯ್ ಹಾಗೂ ಆತನ ವಿಗ್ರಹ ಆರಾಧಕರಾದ ಕೆಲವು ಸಂಗಡಿಗರಿಗೆ ಅವರೊಂದು ಪತ್ರ ಬರೆದರು, “ಓಡಿ ಬಂದ ನಮ್ಮ ಒಡನಾಡಿ ಒಬ್ಬರಿಗೆ ನೀವು ಆಶ್ರಯ ನೀಡಿದ್ದೀರಿ, ದೇವನ ಮೇಲೆ ಆಣೆ ಇಟ್ಟು ಹೇಳುತ್ತಿದ್ದೇವೆ, ಬಹುಶಃ ನೀವು ಅವರನ್ನು ದೂರ ಮಾಡಿ, ಹೊರಗೆ ಹಾಕದಿದ್ದರೆ.? ನಿಮ್ಮ ಯೋಧರನ್ನು ಸಾಯಿಸಿ, ನಿಮ್ಮ ಮಹಿಳೆಯರನ್ನು ಕೊಂಡು ಹೋಗಲು ನಾವು ಬರುತ್ತಿದ್ದೇವೆ.” ಎಂದಾಗಿತ್ತು ಆ ಪತ್ರದಲ್ಲಿ ಬರೆದಿದ್ದದ್ದು.
ಇದು ಮದೀನದಲ್ಲಿ ಸ್ವಲ್ಪ ಆತಂಕವನ್ನು ಸೃಷ್ಟಿ ಮಾಡಿತು. ಆದರೆ ಮದೀನದ ಅನ್ಸಾರ್’ಗಳು ಪ್ರವಾದಿಯವರೊಂದಿಗೆ ﷺ ದೃಢವಾಗಿ ನಿಂತಿದ್ದ ಕಾರಣ, ಮದೀನಾದ ಮುಸ್ಲಿಮರ ವಿರುದ್ಧ ಯಾವುದಾದರು ಕ್ರಮವನ್ನು ತೆಗೆದುಕೊಳ್ಳುವುದು ಆಂತರಿಕ ಸಮಸ್ಯೆಗಳಿಗೆ ಕಾರಣವಾಗಬಹುದೆಂದು ಅರಿತುಕೊಂಡು, ಅವರು ಆ ಎಚ್ಚರಿಕೆಯ ಪತ್ರವನ್ನು ಕಡೆಗಣಿಸಿದರು. ಮದೀನದ ಅರಬಿಗಳಿಂದ ಯಾವುದೇ ನಿರೀಕ್ಷೆ ಇಲ್ಲದ ಕಾರಣ, ಅಲ್ಲಿರುವ ಯಹೂದಿಗಳ ಜೊತೆ ಸೇರಲು ತಯಾರದರು ಈ ಮಕ್ಕಾ ನಿವಾಸಿಗಳು. ಅದು ಬನುನ್ನದೀರ್’ಗಳ ವಿರುದ್ಧ ಯುದ್ಧಕ್ಕೆ ಕಾರಣವಾಯಿತು.
ಆ ಸಂದರ್ಭದಲ್ಲಿ ಮದೀನಕ್ಕೆ ವಿರುದ್ಧವಾಗಿ, ಮಕ್ಕಾ ನಿವಾಸಿಗಳು ಕೆಲವೊಂದು ಕ್ರಮಗಳನ್ನು ಕೈಗೊಂಡಿದ್ದರು. ಅಬೂನಾಇಲ ಎಂಬ ವ್ಯಕ್ತಿಯೂ, ತನ್ನ ಸಾಕು ಸಹೋದರನಾದ ಕಅ್’ಬು ಬಿನ್ ಅಶ್’ರಫಿನಲ್ಲಿ ಹೇಳುವುದು ಕಾಣಬಹುದು. ಈ ವ್ಯಕ್ತಿಯು (ಪ್ರವಾದಿಯವರು) ನಮ್ಮ ಊರಿಗೆ ಬಹಳ ದೊಡ್ಡ ದೌರ್ಭಾಗ್ಯವನ್ನು ತಂದು ಕೊಟ್ಟಿದ್ದಾರೆ. ಈಗ ಇಡೀ ಅರೇಬಿಯಾ ಪ್ರಾಂತ್ಯಗಳೇ ನಮಗೆ ಶತ್ರುವಾಗಿಬಿಟ್ಟಿದೆ, ಎಲ್ಲರೂ ನಮ್ಮ ವಿರುದ್ಧವೇ ಇದ್ದಾರೆ. ಎಲ್ಲಾ ದಾರಿಗಳನ್ನು ನಿರ್ಬಂಧಿಸಲಾಗಿದೆ. ನಮ್ಮ ಕುಟುಂಬಗಳು (ಹಸಿವಿನಿಂದ) ಸಾಯುತ್ತಿವೆ. ನಮಗೆ ತಿನ್ನಲು ಏನೂ ಇಲ್ಲ, ಆಹಾರ ಸಿಗುವುದು ತುಂಬಾ ಕಷ್ಟಕರವಾಗಿದೆ ಎಂದು. ಶತ್ರು ಪಾಳಯದಲ್ಲಿರುವ ಅಬೂನಾಇಲ, ಉದ್ದೇಶ ಪೂರ್ವಕವಾಗಿ ಈ ಸುದ್ದಿಯನ್ನು ಹರಡಿಸಿದ್ದು ಎಂದು ತಿಳಿಯುವ ವೇಳೆಗೆ,
ಮಕ್ಕಾದವರು ಹೇರಿದ ಆರ್ಥಿಕ ಒತ್ತಡವು ಮದೀನಾದಲ್ಲಿ ಪರಿಣಾಮ ಬೀರಲು ಆರಂಭಿಸಿತು. ಯಾಕೆಂದರೆ ಆ ಸಮಯದಲ್ಲಿ ಅರಬ್ ಪ್ರದೇಶದ ಎಲ್ಲಾ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗಗಳನ್ನು ನಿಯಂತ್ರಿಸುತ್ತಿದ್ದದ್ದು ಮಕ್ಕಾ ನಿವಾಸಿಗಳಾಗಿದ್ದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-204/365
ಮಕ್ಕಾ ಬಿಟ್ಟು ಮದೀನಕ್ಕೆ ಬಂದರೂ ಶಾಂತಿ ಕೊಡದ ಮಕ್ಕಾ ನಿವಾಸಿಗಳ ವಿರುದ್ಧ, ಅನಿವಾರ್ಯವಾಗಿ ಕೆಲವೊಂದನ್ನು ರಾಜತಂತ್ರಗಳನ್ನು ನಡೆಸಬೇಕಾಗಿ ಬಂದಿತು. ಪ್ರವಾದಿಯವರ ﷺ ಆಸ್ಥಾನವು ರಾಜತಾಂತ್ರಿಕ ಚಿಂತನೆಗಳಿಗೆ ಸಾಕ್ಷಿಯಾಯಿತು. ಆರಾಧನೆ ಹಾಗೂ ಸಮಾಜ ಕಲ್ಯಾಣದ ಬಗ್ಗೆ ಮಾತನಾಡುತ್ತಿದ್ದವರು, ರಕ್ಷಣೆಯ ಬಗ್ಗೆಯೂ ಚರ್ಚಿಸಲು ಆರಂಭಿಸಿದರು.
ತಿಂಗಳುಗಳ ವೀಕ್ಷಣೆಯ ನಂತರ, ಪ್ರವಾದಿಯವರು ﷺ ಪ್ರತಿರೋಧದ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಮದೀನಕ್ಕೆ ಬಂದ ಸುಮಾರು ಒಂದು ವರ್ಷದ ನಂತರ, ಪ್ರವಾದಿಯವರು ﷺ ಸೈನ್ಯದ ಒಂದು ತುಕಡಿಯನ್ನು ಕಳುಹಿಸಿದರು. ಮಕ್ಕಾದ ವ್ಯಾಪಾರ ತಂಡವು ಮುಸ್ಲಿಂಮರ ಪ್ರಭಾವವಿರುವ ಪ್ರದೇಶಗಳ ಮೂಲಕ ಹಾದುಹೋಗದಂತೆ ನೋಡಿಕೊಳ್ಳುವುದಾಗಿತ್ತು ಅದರ ಮುಖ್ಯ ಉದ್ದೇಶ. ಮಕ್ಕಾದಿಂದ ಬಂದಿದ್ದ ಸುಮಾರು ಮುವತ್ತರಷ್ಟು ಮುಹಾಜಿರುಗಳನ್ನು ಸೇರಿಸಿ, ಪ್ರವಾದಿಯವರ ﷺ ಚಿಕ್ಕಪ್ಪ ಹಂಝರವರ ನಾಯಕತ್ವದಲ್ಲಿ ಮಾಡಿದ ಸೈನ್ಯದ ತುಕಡಿಯಾಗಿತ್ತು ಅದು. ಮದೀನದ ಪಶ್ಚಿಮ ಭಾಗಕ್ಕೆ ತೆರಳಿ, ಅಲ್ಲಿ ಅಬುಜಹಲನ್ನು ಭೇಟಿಯಾಗಳು ಪ್ರವಾದಿಯವರು ﷺ ಸೂಚನೆ ನೀಡಿದ್ದರು. ಅಬೂಜಹಲ್ ತನ್ನ ಕಾರವಾನ್ (ಚಲಿಸುವ ಮನೆ) ಜೊತೆಯಲ್ಲಿ ಸುಮಾರು ಮುನ್ನೂರಷ್ಟು ಜನರು ಜೊತೆಗಿದ್ದರು. ಅವರು ಜುಹೈನ ಜನಾಂಗದವರು ವಾಸಿಸುತ್ತಿದ್ದ ಸ್ಥಳದಲ್ಲಿ ಶಿಬಿರವನ್ನು ಹಾಕಿಕೊಂಡಿದ್ದರು. ಜುಹೈನ ಜನಾಂಗದ ಮುಖ್ಯ ಮಜ್’ದಿಬಿನು ಅಂರ್ ಉಭಯ ಬಣಗಳ ಸುರಕ್ಷತೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ಮುಂದಾಳತ್ವದಲ್ಲಿ ಅಂದು ಯಾವುದೇ ಸಮಸ್ಯೆ ಉಂಟಾಗದೆ ಎರಡು ವಿಭಾಗವೂ ಶಾಂತಿಯಿಂದ ತಮ್ಮ ತಮ್ಮ ಊರಿಗೆ ಮರಳಿದರು.
ಕೆಲವು ವಾರಗಳ ನಂತರ, ಪುನಃ ಪ್ರವಾದಿಯವರ ﷺ ಸಂಬಂಧಿಯಾದ ಉಬೈದತು ಬಿನು ಹಾರಿಸರ ನಾಯಕತ್ವದಲ್ಲಿ ಅರವತ್ತು ಜನರ ಮತ್ತೊಂದು ಸೈನ್ಯದ ತುಕಡಿಯೊಂದು, ಅಬುಜಹಲ್’ನ ಮಗನಾದ ಇಕ್’ರಿಮ ನಾಯಕತ್ವ ವಹಿಸುತ್ತಿದ್ದ ಮತ್ತೊಂದು ಗುಂಪನ್ನು ತಡೆಯಲು, ಸನಿಯ್ಯಾತುಲ್ ಮುರ್’ರ ಎಂಬ ಸ್ಥಳಕ್ಕೆ ಬಂದು ತಲುಪಿದರು. ಅಲ್ಲಿಯೂ ಕೂಡ ಯಾವುದೇ ಕಾದಾಟ ಉಂಟಾಗದೆ, ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ಶತ್ರುಗಳ ಗುಂಪಿನಿಂದ ಎರಡು ಮುಸ್ಲಿಮರು ಬಹಳ ತಂತ್ರಪೂರ್ವಕವಾಗಿ ಮುಸ್ಲಿಮರ ಜೊತೆಗೆ ಬಂದು ಸೇರಿದರು. ಮಿಖ್’ದಾದು ಬಿನುಲ್ ಅಂರ್ ಅಲ್ ಬಹರಾಯಿ (ಯಮನ್) ಹಾಗೂ ಉತ್’ಬತುಬಿನು ಗಝ್’ವಾನ್ ಅಲ್ ಮಾಸೀನಿ ಎಂದಾಗಿತ್ತು ಅವರ ಹೆಸರು. ಇವರಿಬ್ಬರೂ ಬಹಳಷ್ಟು ಸಮಯದಿಂದ ಮಕ್ಕಾದಲ್ಲೇ ಜೀವಿಸುತ್ತಿದ್ದರು, ಬಹುಶಃ ಬಹಳ ಸುರಕ್ಷಿತವಾಗಿ ಮದೀನಕ್ಕೆ ತಲುಪಬೇಕೆಂಬ ಉದ್ದೇಶದಿಂದಲೇ ಇವರು ಈ ಯಾತ್ರೆ ಗುಂಪಿನಲ್ಲಿ ಸೇರಿದ್ದಾಗಿರಬಹುದು.
ಸಅದು ಬಿನ್ ಅಬೀವಾಖಾಸ್’ರ ನಾಯಕತ್ವದಲ್ಲಿ ಎಂಟು ಜನ ಮುಹಾಜಿರುಗಳ ತಂಡವೊಂದು, ರಾಗಿಬಿನ ಸಮೀಪ ವಿರುವ ಖರ್’ರಾದ ಕಡೆಗೆ ಹೊರಟಿದ್ದರು. ಬಹುಶಃ ಶತ್ರುಗಳ ಆಗುಹೋಗುಗಳನ್ನು ಗಮನಿಸುವ ಉದ್ದೇಶದಿಂದ ಅಥವಾ ಅಲ್ಲಿರುವ ಜನಾಂಗದವ ಜೊತೆಯಲ್ಲಿ ಮೈತ್ರಿ ಉಂಟುಮಾಡುವ ಉದ್ದೇಶದಿಂದಲೂ ಆಗಿರಬಹುದು. ಈ ಮೊದಲೇ ತಿಳಿಸಿದ್ದ ಜುಹೈನ ಜನಾಂಗದವರ ಹಾಗೆ, ಆಯಾಯ ಸ್ಥಳಗಳಲ್ಲಿ ವಾಸಿಸುವ ಜನಾಂಗಗಳ ಸಹಕರಣೆ ಇಲ್ಲದೆ, ಆ ಸ್ಥಳದ ಮೂಲಕ ಹಾದು ಹೋಗುವ ಮಕ್ಕಾದ ವ್ಯಾಪಾರ ಸಂಘವನ್ನು ತಡೆಯುವುದು ಸುಲಭವಾಗಿರಲಿಲ್ಲ. ಪ್ರವಾಸೋದ್ಯಮ ಇಲಾಖೆಯ ರೀತಿಯಲ್ಲಿದ್ದ ದಾರಿಗಳಾಗಿತ್ತು ಅದು, ವ್ಯಾಪಾರ ಸಂಘಗಳು ಆ ಮೂಲಕ ಹಾದು ಹೋಗುವಾಗ, ಬಹಳಷ್ಟು ಆರ್ಥಿಕವಾಗಿ ಲಾಭಗಳು ಉಂಟಾಗುತ್ತಿತ್ತು. ವಿಶೇಷವಾಗಿ ಕಾರವಾನ್’ಗಳು ಇಲ್ಲಿ ಡೇರೆ ಹಾಕುವ ಸಂದರ್ಭದಲ್ಲಿ, ಅವರಿಗೆ ಆಹಾರ, ನೀರು, ಸ್ವಾದಿಷ್ಟವಾದ ಮಾಂಸಾಹಾರ ಅಗತ್ಯ ಬರುವಾಗ ಅವರು, ಆಯಾಯ ಸ್ಥಳದಲ್ಲೇ ಅದನ್ನು ಖರೀದಿ ಮಾಡುತ್ತಿದ್ದರು. ಬಹುಶಃ ಇಲ್ಲಿ ವ್ಯಾಪಾರ ಸಂಘಗಳಿಗೆ ಏನಾದರೂ ಅನಾಹುತಗಳು ಎದುರಾದಲ್ಲಿ, ಖುರೈಷಿಗಳಿಂದ ಬಹಳ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಜನಾಂಗದ ಸಹಕರಣೆ ಪಡೆಯಲು, ಖುರೈಷಿಗಳ ಪ್ರತಿಕಾರದಿಂದಲೂ ಅವರಿಗೆ ರಕ್ಷಣೆ ಸಿಗಬೇಕಿತ್ತು. ಆ ಕಾರಣಕ್ಕೆ ಕೆಲವು ಜನಾಂಗದ ಜನರಿಗೆ ಪ್ರವಾದಿಯವರು ﷺ ಖುದ್ದಾಗಿ ತೆರಳಿ, ಸುರಕ್ಷತೆಯ ಭರವಸೆಯನ್ನು ನೀಡಬೇಕಾಗಿಯೂ ಬಂದಿತ್ತು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-205/365
ಪ್ರವಾದಿಯವರು ಅದರ ಭಾಗವಾಗಿ ಮದೀನದ ದಕ್ಷಿಣ ಭಾಗದಲ್ಲಿರುವ ವದ್ದಾನ್ ಎಂಬ ಸ್ಥಳಕ್ಕೆ ಹೋದರು. ಬದ್’ರಿನ ಹತ್ತಿರದಲ್ಲೇ ಇರುವ ಸ್ಥಳವಾಗಿತ್ತು ಅದು. ಬನೂದಂರ ಜನಾಂಗದವರು ಈ ಸ್ಥಳದಲ್ಲಿ ವಾಸವಾಗಿದ್ದರು. ಸುಮಾರು ಎರಡು ವಾರಗಳ ಕಾಲ ಇಲ್ಲೇ ಆ ಜನತೆಯ ಜೊತೆಯಲ್ಲೇ ಉಳಿದುಕೊಂಡರು. ಮೊದಲ ವಾರ, ಅವರಲ್ಲಿ ಬಹಳಷ್ಟು ಮಾತುಕತೆಗಳನ್ನು ನಡೆಸಿ, ಪರಸ್ಪರ ಸಹಕರಣೆಗೆ ಬೇಕಾಗಿ ಒಪ್ಪಂದವನ್ನು ಕೂಡ ಮಾಡಲು ಪ್ರಯತ್ನಿಸಿದರು. ಬನೂದಂರರ ಜೊತೆಯಲ್ಲಿ ಮಾಡಿಕೊಂಡ ಎರಡು ಒಪ್ಪಂದಗಳ ರೇಖೆಗಳನ್ನೂ ಇತಿಹಾಸಕಾರರು ವಿವರಿಸುವುದು ಕಾಣಬಹುದು. ಅದರಲ್ಲಿ ಒಂದು, ಹಿಜ್’ರ ಎರಡನೇ ವರ್ಷದ ಸ್ವಫರ್ ತಿಂಗಳಲ್ಲಿ, ಯಾವುದೇ ರೀತಿಯ ಆಕ್ರಮಣ ಇಲ್ಲದೆ, ತಟಸ್ಥವಾಗಿರುವುದಾಗಿತ್ತು ಅದರಲ್ಲಿ ಉಲ್ಲೇಖಿಸಿದ್ದು,
ಅದೇನೆಂದರೆ ‘ಮುಹಮ್ಮದ್ ಪ್ರವಾದಿಯವರು ﷺ ಬನೂದಂರ ಜನಾಂಗದವರ ಮೇಲೆ ದಾಳಿ ಮಾಡುವುದಿಲ್ಲ, ಅದೇ ರೀತಿ ಬನೂದಂರ ಜನಾಂಗದವರು ಪ್ರವಾದಿಯವರ ﷺ ವಿರುದ್ಧವಾಗಿ ಯಾವುದೇ ಷಡ್ಯಂತ್ರವಾಗಲಿ, ಶತ್ರುಗಳಿಗೆ ಸಹಾಯ ಮಾಡುವುದಾಗಲಿ ಮಾಡಬಾರದು ಎಂದಾಗಿತ್ತು ಅದರಲ್ಲಿ ಬರೆದಿದ್ದದ್ದು.
ಇದು ನಡೆದು ಕೆಲವು ದಿನದ ಬಳಿಕ ಮತ್ತೊಂದು ಒಪ್ಪಂದಕ್ಕೆ ಸಹಿ ಹಾಕಲಾಯಿತು. ಯಾಕೆಂದರೆ ಮದೀನದ ವಾಯುವ್ಯ ಭಾಗದಲ್ಲಿರುವ ರದ್’ವಕ್’ನ ಸಮೀಪದಲಿರುವ ಬುವಾತ್’ನ ಮುಕಾಂತರ ಒಂದು ಸಣ್ಣ ವ್ಯಾಪಾರ ಗುಂಪೊಂದು ಹಾದು ಹೋಗುವ ಕಾರಣ ಮೊದಲ ಒಪ್ಪಂದಕ್ಕೆ ಸಹಿ ಹಾಕಿದ ಕೂಡಲೇ ಪ್ರವಾದಿಯವರಿಗೆ ﷺ ಅಲ್ಲಿಗೆ ಹೋಗಲೇ ಬೇಕಿತ್ತು. ಅಲ್ಲಿ ಅವರೊಂದಿಗೆ ಯಾವುದೇ ಸಂಘರ್ಷ ನಡೆಯಲಿಲ್ಲ, ಆ ಭಾಗದ ಜನರಿಗೆ ತಿಳುವಳಿಕೆ ಮಾಡಿಕೊಡಲು ಮಾತ್ರವಾಗಿತ್ತು ಅಲ್ಲಿಗೆ ಹೋಗಿದ್ದು. ಆದರೆ ಕೆಲವು ದಿನಗಳ ನಂತರ, ಫಿಹ್’ರಿಗಳಲ್ಲಿ ಒಬ್ಬರಾದ ಕುರ್’ಸುಬ್’ನು ಜಾಬೀರ್’ನ ನೇತೃತ್ವದಲ್ಲಿ ಮಕ್ಕಾದ ಸಣ್ಣ ಗುಂಪೊಂದು ಮದೀನಾದ ದಕ್ಷಿಣ ಪ್ರದೇಶಗಳ ಮೇಲೆ ದಾಳಿ ಮಾಡಿ, ಲೂಟಿ ಮಾಡಿರುವುದಾಗಿ ಇತಿಹಾಸಕಾರರು ಉಲ್ಲೇಖಿಸಿದ್ದು ಕಾಣಬಹುದು. ಅವರನ್ನು ಹಿಡಿಯಲು ದಿವಸಗಳ ಕಾಲ ಪ್ರಯತ್ನಿಸಿದರೂ ವಿಫಲವಾಯಿತು. ಇದು ಮುಸ್ಲಿಮರಿಗೆ ತೀವ್ರ ಬೇಸರ ತಂದ ಕೃತ್ಯವಾಗಿತ್ತು. ಇದರಿಂದ ಇನ್ನೂ ಬಹಳಷ್ಟು ಭಾಗಗಳಲ್ಲಿ ಇನ್ನಷ್ಟು ಚಲನೆಯನ್ನು ನಡೆಸಬೇಕು ಎಂಬ ಆಲೋಚನೆಯು ಮುಸ್ಲಿಮರಿಗೆ ಬಂದಿತು. ಹೀಗಿರುವಾಗ ಬಹಳ ದೊಡ್ಡ ವ್ಯಾಪಾರ ಗುಂಪೊಂದು ಸಿರಿಯ ದೇಶಕ್ಕೆ ತೆರಳಿರುವುದಾಗಿ ಸುದ್ದಿ ತಿಳಿಯಿತು. ಅವರನ್ನು ಮದೀನಾದ ಉತ್ತರ ಭಾಗದಲ್ಲಿ ಎದುರಿಸುವ ಬಗ್ಗೆ ಕಾಳಜಿ ಉಂಟಾದ ಕಾರಣ, ನಗರದ ನೈರುತ್ಯ ಭಾಗದಲ್ಲಿರುವ ಕರಾವಳಿ ಪ್ರದೇಶಕ್ಕೆ ತೆರಳಲು ನಿರ್ಧರಿಸಿದರು. ಯಾಕೆಂದರೆ ಅದು ಬನೂದಂರ ಜನಾಂಗವು ವಾಸವಿದ್ದ ಸ್ಥಳವಾಗಿತ್ತು.
ಅಂದಿನವರೆಗೆ, ಮದೀನದಲ್ಲಿ ಉಂಟಾಗಿದ್ದ ಸಣ್ಣ ಸಣ್ಣ ಚಲನೆಗಳು ಮಕ್ಕಾದ ವ್ಯಾಪಾರ ಸಂಘವನ್ನು ಎದುರಿಸುವುದು ಮಾತ್ರವಾಗಿತ್ತು. ಅದು ಕೇವಲ ರಾಜತಂತ್ರದ ಭಾಗವಾಗಿದ್ದ ಕಾರಣ, ಬೇರೆ ಪ್ರದೇಶದ ವ್ಯಾಪಾರ ಗುಂಪುಗಳನ್ನು ಎದುರಿಸಿ, ಅವರ ವಸ್ತುಗಳನ್ನು ವಶಪಡಿಸಿಕೊಳ್ಳುವುದು, ಮದೀನದ ಗುಂಪಿನ ಗುರಿ ಆಗಿರಲಿಲ್ಲ. ಆದರೆ ಈಗಿನ ಚಿತ್ರಣವು ಸಂಪೂರ್ಣ ಬದಲಾಗಿತ್ತು, ಕುರ್’ಸು ಬಿನು ಜಾಬಿರ್ ಮದೀನದಲ್ಲಿ ದಾಳಿ ಮಾಡಿ, ಲೂಟಿಮಾಡಿದ ಕಾರಣ ಪ್ರತೀಕಾರ ಎಂಬ ಗುರಿಯಾಗಿ ಬದಲಾಯಿತು.
ಬನೂ ಮುದ್’ಲಜ್ ಜನಾಂಗದವರ ವಾಸಸ್ಥಳಕ್ಕೆ ಮದೀನದ ತಂಡವು ತಲುಪಿತು. ಹಿಜ್’ರಾದ ಸಂದರ್ಭದಲ್ಲಿ ಪ್ರವಾದಿಯವರನ್ನು ﷺ ಹಿಂಬಾಲಿಸಿದ ಸುರಾಖ ಈ ಜನಾಂಗದ ವ್ಯಕ್ತಿಯಾಗಿದ್ದರು. ಅವರು ಪ್ರವಾದಿಯವರ ﷺ ಜೊತೆಯಲ್ಲಿದ್ದ ನೂರ ಐವತ್ತು ಜನರಿಗೂ ಸೇರಿಸಿ ಉತ್ತಮವಾದ ಭೋಜನದ ವ್ಯವಸ್ಥೆಯನ್ನು ಮಾಡಿದರು. ಪ್ರವಾದಿಯವರು ﷺ ಎದುರಿಸಲು ಬಂದಿದ್ದ ವ್ಯಾಪಾರ ಗುಂಪು, ಬೇರೆ ದಾರಿಯಲ್ಲಿ ಸಂಚಾರ ನಡೆಸಿ ತಪ್ಪಿಸಿಕೊಂಡರು. ಆದರೆ ಪ್ರವಾದಿಯವರು ﷺ ಈ ಸಂದರ್ಭವನ್ನು, ಬನೂದಂರ ಜನಾಂಗದ ಜನರ ನಡುವೆ ಇರುವ ಸಂಬಂಧವನ್ನು ಇನ್ನಷ್ಟು ಹತ್ತಿರವಾಗಿಸಲು ಬಳಸಿಕೊಂಡರು. ಆ ಜನಾಂಗದ ಜೊತೆಯಲ್ಲಿ ಮತ್ತೊಂದು ಹೊಸ ಒಪ್ಪಂದಕ್ಕೆ ಸಹಿ ಹಾಕಲಾಯಿತು. “ಅಲ್ಲಾಹನ ಪ್ರವಾದಿಯವರಾದ ಮುಹಮ್ಮದ್’ರು ﷺ ಬನೂದಂರ ಜನಾಂಗಕ್ಕೆ ಬರೆದು ನೀಡುವುದು ಈ ರೀತಿಯಾಗಿದೆ, ಅವರ ಪ್ರಾಣ, ಆಸ್ತಿ ಎಲ್ಲವೂ ಸಂಪೂರ್ಣ ಸುರಕ್ಷಿತವಾಗಿ ಇರುತ್ತದೆ. ಅವರಿಗೆ ಅನ್ಯಾಯವಾಗಿ ಯಾರೇ ಬಂದು ದಾಳಿ ಮಾಡಿದರೂ ಅವರಿಗೆ ನಾವು ಖಂಡಿತ ಸಹಾಯ ಮಾಡುವೆವು, ಸಮುದ್ರದ ನೀರು ಕೂದಲನ್ನು ತೇವಗೊಳಿಸಲು ಸಾಧ್ಯವಾಗುದಾದರೆ, ಖಂಡಿತವಾಗಿಯೂ ಪ್ರವಾದಿವರಿಗೆ ﷺ ﷺ ಸಹಾಯ ಮಾಡುವುದು ಅವರ ಕರ್ತವ್ಯವಾಗಿದೆ. ಆದರೆ ಮುಸ್ಲಿಮರ ಸತ್ಯ ವಿಶ್ವಾಸಕ್ಕೆ ಸಂಬಂಧಿಸಿದ ಹೋರಾಟಗಳು ಇದರಿಂದ ಹೊರೆತು ಪಡಿಸಿದೆ. ಪ್ರವಾದಿಯವರು ﷺ, ಅವರನ್ನು ಸಹಾಯಕ್ಕೆ ಕರೆದರೆ ಅವರು ತಕ್ಷಣವೇ ಅದಕ್ಕೆ ಸಹಕರಿಸಬೇಕು, ಅಲ್ಲಾಹನ ಹಾಗೂ ಅವನ ಪ್ರವಾದಿಯವರ ﷺ ಮಾತನ್ನು ಸಂಪೂರ್ಣವಾಗಿ ವಿಶ್ವಾಸ ಇರಿಸಬಹುದು. ಒಪ್ಪಂದವನ್ನು ಕಟ್ಟುನಿಟ್ಟಾಗಿ ಪಾಲಿಸುವ ಹಾಗೂ ಕಳಂಕರಹಿತವಾಗಿ ನಡೆದುಕೊಳ್ಳುವವರಿಗೆ ಎಲ್ಲಾ ರೀತಿಯ ಬೆಂಬಲವನ್ನು ನೀಡಲಾಗುವುದು” ಎಂದಾಗಿತ್ತು ಆ ಒಪ್ಪಂದಲ್ಲಿ ಇದ್ದದ್ದು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-206/365
ಉದ್ದಾನ್ ಸೈನಿಕ ಕಾರ್ಯಾಚರಣೆಯನ್ನು, “ಅಬವಾಅ ಸೈನಿಕ ಕಾರ್ಯಾಚರಣೆ” ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಪ್ರವಾದಿಯವರ ﷺ ಇತಿಹಾಸದಲ್ಲಿ ಮೊದಲ ಸೈನಿಕ ಕಾರ್ಯಾಚರಣೆಯಾಗಿತ್ತು ಇದು. ಸಅದ್ ಬಿನ್ ಉಬಾದರಿಗೆ ಮದೀನದ ಜವಾಬ್ದಾರಿ ನೀಡಿ ಪ್ರವಾದಿಯವರು ﷺ ಅಬವಾಯಿಗೆ ಹೋಗಿದ್ದರು. ಅಂದು ಧ್ವಜವನ್ನು ಹಿಡಿದಿದ್ದದ್ದು ಹಂಝ ◌ؓ ಆಗಿದ್ದರು. ಬಿಳಿ ಬಣ್ಣದ ಧ್ವಜವನ್ನಾಗಿತ್ತು ಹಿಡಿದಿದ್ದದ್ದು.
ಪಲಾಯನದ ಎರಡನೇ ವರ್ಷದ ಜುಮಾದುಲ್ ಆಖರ್ ತಿಂಗಳಲ್ಲಿ, ಪ್ರವಾದಿಯವರು ﷺ ತಮ್ಮ ಎಲ್ಲಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿರ್ವಹಿಸಿ ಸಂತೃಪ್ತಿಯಿಂದ ವಾಪಸು ಬಂದರು. ನಂತರ ಫಲಸ್ತೀನಿಂದ ಹಿಂತಿರುಗಿ ಬರುವ ವ್ಯಾಪಾರ ಸಂಘದ ಬಗ್ಗೆ ಮಾಹಿತಿ ತಿಳಿಯಲು ಪ್ರವಾದಿಯವರು ﷺ ಇಬ್ಬರನ್ನು ಫಲಸ್ತೀನಿಗೆ ಕಳುಹಿಸಿದರು. ಮಕ್ಕಾ ನಿವಾಸಿಗಳ ವ್ಯಾಪಾರ ದಾರಿಯಲ್ಲಿ ವಾಸಿಸುತ್ತಿದ್ದ ದಂರ, ಮುದ್’ಲಜ್ ಮುಂತಾದ ಜನಾಂಗದ ಜನರಲ್ಲಿ ಶಾಂತಿ ಒಪ್ಪಂದ ಹಾಗೂ ಸೈನಿಕ ಮೈತ್ರಿಯನ್ನು ಮಾಡಿಕೊಂಡು, ರಾಜತಂತ್ರದಲ್ಲಿ ಬಹಳಷ್ಟು ಲಾಭಗಳನ್ನು ಗಳಿಸಿದರೂ, ಅಷ್ಟಕ್ಕೇ ನಿಲ್ಲಿಸದೆ ಬೇರೆ ಇತರ ಕಾರ್ಯಾಚರಣೆಯ ಕಡೆಗೆ ಹೊಸದೊಂದು ಹೆಜ್ಜೆಯನ್ನೂ ಇಟ್ಟರು. ಒಬ್ಬರು ನಂಬಿಕಸ್ಥ ಜನಾಂಗದ ಮುಖ್ಯಸ್ಥನ ನಾಯಕತ್ವದಲ್ಲಿ, ಬಹಳ ಧೀರರಾದ ಎಂಟು ಮುಹಾಜಿರ್’ಗಳ ಒಂದು ತಂಡವನ್ನು ಮಾಡಿ, ಈ ವಿವರ ಹೊರಗೆ ತಿಳಿಯದೆ ಇರಲು ಕೆಲವೊಂದು ಸೂಚನೆಗಳನ್ನು ಬರೆದಿದ್ದ ಪತ್ರಕ್ಕೆ ಮುದ್ರೆಯೊತ್ತಿ ಅವರಿಗೆ ನೀಡಲಾಯಿತು. ಅವರಲ್ಲಿ ಎರಡು ದಿನಗಳ ಕಾಲ ಎತ್ತರದ ಪ್ರದೇಶದಲ್ಲಿ (ನಜ್’ದೀಯ) ಸಂಚರಿಸಿ, ನಂತರ ಸಣ್ಣ ಬಾವಿಯ (ರುಕಯ್ಯ) ಕಡೆಗಳಿಂದ ಮುಂದುವರಿಯಬೇಕು ಎಂದೂ, ಯಾತ್ರೆ ಕೊನೆಯ ಹಂತಕ್ಕೆ ತಲುಪಿದಾಗ ಪತ್ರವನ್ನು ತೆರೆದು ಓದಬೇಕು ಎಂದೂ ಕೂಡ ಹೇಳಲಾಗಿತ್ತು. ಅದೇ ರೀತಿ ಅಬ್ದುಲ್ಲಾಹಿಬಿನ್ ಜಹ್’ಶ್’ರು ◌ؓ ಪತ್ರ ತೆರೆದು ಓದಲು ಆರಂಭಿಸಿದರು. “ಈ ಪತ್ರವನ್ನು ತೆರೆದು ಓದಿದ ನಂತರ ನೀವು ಮಕ್ಕಾ ಹಾಗೂ ತ್ವಾಹಿಫಿನ ನಡುವೆ ಇರುವ ನಖ್’ಲ ಎಂಬ ಸ್ಥಳಕ್ಕೆ ತೆರಳಬೇಕು, ಅಲ್ಲೇ ಸಣ್ಣ ಡೇರೆಯನ್ನು ಹಾಕಿ, ಖುರೈಷಿಗಳ ಚಲನವಲನಗಳನ್ನು ಗಮನಿಸಿ ನಮಗೆ ವಿವರ ನೀಡಬೇಕು.” ಎಂದಾಗಿತ್ತು ಅದರಲ್ಲಿ ಬರೆದಿದ್ದದ್ದು.
ವಾಸ್ತವದಲ್ಲಿ ಶತ್ರುಗಳು ನಡುವಿನಿಂದಲೇ ಆಗಿತ್ತು ಈ ಸಣ್ಣ ತಂಡಕ್ಕೆ ತರಳಬೇಕಿದ್ದದ್ದು. ಬಹಳ ಕಡಿಮೆ ಜನ ಸಂಖ್ಯೆ ಇದ್ದ ಕಾರಣ, ಮಾಹಿತಿ ತಿಳಿಸುವುದು ಬಿಟ್ಟು, ಬೇರೆ ಯಾವುದೇ ಜವಾಬ್ದಾರಿಯನ್ನೂ ನೀಡಿರಲಿಲ್ಲ. ಆದರೆ ಅವರು ನಡೆಸಿದ ಕೆಲವು ಕಾರ್ಯಗಳು ಬಹಳ ಗಂಭೀರವಾದ ಪರಿಣಾಮವನ್ನು ಬೀರಿದ್ದವು. ಒಣ ದ್ರಾಕ್ಷಿ, ಚರ್ಮ, ಮಧ್ಯದಂತಹ ಕೆಲವು ಸರಕುಗಳನ್ನು ಹೊಂದಿದ್ದ ಮಕ್ಕಾದ ಸಣ್ಣ ವ್ಯಾಪಾರ ಗುಂಪೊಂದು ಇವರ ಕಣ್ಣಿಗೆ ಬಿದ್ದಾಗ, ಮೊದಲು ಸ್ವಲ್ಪ ಹಿಂಜರಿದರೂ ನಂತರ ಅವರ ಮೇಲೆ ದಾಳಿ ಮಾಡಲು ತೀರ್ಮಾನಿಸಿ, ಒಬ್ಬನ ಮೇಲೆ ಬಾಣವನ್ನು ಬಿಟ್ಟು ಅವನನ್ನು ಕೊಂದು, ಇಬ್ಬರನ್ನು ಬಂದಿಯಾಗಿಸಿ, ಅವರ ಬಳಿಯಿದ್ದ ಎಲ್ಲಾ ಸರಕುಗಳನ್ನು ವಶಪಡಿಸಿಕೊಂಡರು. ಆದರೆ ಕಾರವಾನ್’ನಲ್ಲಿದ್ದ ಇನ್ನುಳಿದ ಜನರು ಮಾತ್ರ ಓಡಿ ತಪ್ಪಿಸಿಕೊಂಡಿದ್ದರು. ವಶಪಡಿಸಿಕೊಂಡ ಸರಕುಗಳೊಂದಿಗೆ ಮದೀನಕ್ಕೆ ತಲುಪಿದ ಗುಂಪಿನೊಂದಿಗೆ, ತಮ್ಮ ಸೂಚನೆಗೆ ವಿರುದ್ಧವಾಗಿ ವರ್ತಿಸಿದ್ದಕ್ಕೆ ಪ್ರವಾದಿಯವರು ﷺ ಬಹಳಷ್ಟು ಕೋಪಗೊಂಡರು. ಅಷ್ಟೇ ಅಲ್ಲದೆ ರಜಬ್ ತಿಂಗಳಲ್ಲಿ ಯುದ್ಧ ನಿಷೇಧವಾಗಿದ್ದ ಆ ತಿಂಗಳಲ್ಲಿ ರಕ್ತ ಸುರಿಸಿದರು ಎಂಬ ಆರೋಪ ಬರಬಹುದೇ.? ಎಂಬ ಭಯ ಅವರನ್ನು ಕಾಡಿದರೂ, ಸ್ವಲ್ಪ ಸಮಯದ ನಂತರ ಅವರೆಲ್ಲರೂ ಸಮಾಧಾನಗೊಂಡರು. ಕಾರಣ ಈ ಘಟನೆ ನಡೆದದ್ದು ರಜಬ್ ತಿಂಗಳ ಕೊನೆಯ ದಿವಸದ ಸೂರ್ಯ ಅಸ್ತಮಿಸಿದ ನಂತರವಾಗಿತ್ತು, ಅದು ಹೊಸ ದಿನದ ಆರಂಭದ ದಿನವಾದ ಕಾರಣ ಅದರ ಬಗ್ಗೆ ಯಾರೂ ಅಷ್ಟೊಂದು ಗಮನ ನೀಡಿರಲಿಲ್ಲ.
ಪ್ರವಾದಿಯವರ ﷺ ತಂಡವು ಬಂಧಿಸಿದ್ದ ಖೈದಿಗಳನ್ನು ಬಿಡಿಸಿಕೊಳ್ಳಲು, ವಿಮೋಚನಾ ಮೌಲ್ಯದೊಂದಿಗೆ ಮಕ್ಕಾ ನಿವಾಸಿಗಳು, ಮದೀನಕ್ಕೆ ಬಂದರು. ಅಂದಿನ ಸಂಪ್ರದಾಯದಂತೆ ಅವರನ್ನು ಬಿಡಿಸಿಕೊಳ್ಳಲು ತಂದಿದ್ದ ಮೌಲ್ಯಗಳನ್ನು ನೀಡಿ ಬಂಧಿಸಲಾಗಿದ್ದ ಇಬ್ಬರು ಖೈದಿಗಳನ್ನು ಬಿಡಿಸಿಕೊಂಡು ಅವರು ಹಿಂತಿರುಗಿ ಹೋದರು, ಹಾಗೆ ಆ ಸಮಸ್ಯೆ ಅಲ್ಲಿಗೆ ಮುಕ್ತಾಯವಾಯಿತು.
ಅದರ ನಡುವೆ ಬುವಾತ್ವಿಗೂ ಕೂಡ ಒಂದು ರಾಜತಂತ್ರದ ಕಾರ್ಯಾಚರಣೆ ನಡೆದಿತ್ತು. ಸುಮಾರು ಇನ್ನೂರರಷ್ಟು ಮುಹಾಜಿರುಗಳು ಆ ತಂಡದಲ್ಲಿ ಇದ್ದರು. ಅಲ್ಲಿಯೂ ಕೂಡ ಬಿಳಿ ಬಣ್ಣದ ಧ್ವಜವನ್ನು ಹಿಡಿಯಲಾಗಿತ್ತು, ಸಅದ್ ಬಿನ್ ಅಬೀ ವಖಾಸ್ ◌ؓ ಆಗಿದ್ದರು ಧ್ವಜ ಹಿಡಿದಿದ್ದದ್ದು. ಆ ಸಂದರ್ಭದಲ್ಲಿ ಪ್ರವಾದಿಯವರು ﷺ ಮದೀನದಲ್ಲಿ ಸಅದ್ ಬಿನ್ ಮುಆದರಿಗೆ ◌ؓ ನಾಯಕತ್ವದ ಜವಾಬ್ದಾರಿಯನ್ನು ವಹಿಸಿದ್ದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-207/365
ಮೇಲೆ ತಿಳಿಸಿದ ಘಟನೆ ಬಗ್ಗೆ ಇನ್ನೊಂದು ವಿಭಿನ್ನವಾದ ಶೈಲಿಯಲ್ಲಿ ಅಧ್ಯಯನ ನಡೆಸೋಣ. ಸಅದ್ ಬಿನ್ ಅಬೀ ವಖಾಸ್’ರು ◌ؓ ಹೇಳುವುದು ಕಾಣಬಹುದು, ಪ್ರವಾದಿಯವರು ﷺ ನಮಗೆ ಸೈನಿಕ ಕಾರ್ಯಾಚರಣೆಯ ಜವಾಬ್ದಾರಿಯನ್ನು ವಹಿಸಿ, “ನಿಮ್ಮ ಗುಂಪಿನಲ್ಲಿ ಹಸಿವು ಹಾಗೂ ಬಾಯಾರಿಕೆಯನ್ನು ಅಧಿಕವಾಗಿ ಯಾರಿಗೆ ತಡೆಯಲು ಸಾಧ್ಯವಿದೆಯೋ ಅವರನ್ನೇ ನೀವು ನಾಯಕನನ್ನಾಗಿ ಮಾಡಿರಿ” ಎಂದು ಹೇಳಿ, ಅಬ್ದುಲ್ಲಾಹಿಬಿನ್ ಜಹ್’ಶ್’ರನ್ನು ◌ؓ ನಾಯಕನಾಗಿ ಆಯ್ಕೆ ಮಾಡಿಕೊಂಡರು. ಅಮೀರುಲ್ ಮುಅ್’ಮಿನೀನ್ ಅಥವಾ ಸತ್ಯ ವಿಶ್ವಾಸಿಗಳ ನಾಯಕ ಎಂಬ ಹೆಸರಿನಿಂದಲೂ ಪ್ರವಾದಿಯವರು ﷺ ಅವರನ್ನು ಪರಿಚಯಿಸಿ ಕೊಂಡರು. ಇಸ್ಲಾಮಿನ ಇತಿಹಾಸದಲ್ಲಿ ಈ ಹೆಸರು ಲಭಿಸಿದ ಮೊದಲ ವ್ಯಕ್ತಿ, ಅಬ್ದುಲ್ಲಾಹಿಬಿನು ಜಹ್’ಶ್ ◌ؓ ಆಗಿದ್ದರು. ಪ್ರವಾದಿಯವರ ﷺ ಪರಂಪರೆಯ ಖಲೀಫ ಎಂಬ ನಿಟ್ಟಿನಲ್ಲಿ, ಮೊದಲ ಬಾರಿಗೆ ಅಮೀರುಲ್ ಮುಅ್’ಮಿನೀನ್ ಎಂದು ಕರೆಸಿಕೊಂಡದ್ದು ಉಮರ್ ಬಿನ್ ಅಲ್’ಖತ್ವಾಬ್’ರನ್ನು ◌ؓ ಆಗಿತ್ತು.
ಇಬ್’ನುಲ್ ಜಹ್’ಶ್’ರು ◌ؓ ಹೇಳುವುದು ಕಾಣಬಹುದು, ” ಒಂದು ದಿನ, ರಾತ್ರಿ ಇಶಾ ನಮಾಝಿನ ಬಳಿಕ ಪ್ರವಾದಿಯವರು ﷺ ನನ್ನನ್ನು ಕರೆದು, “ಸೂರ್ಯೋದಯದ ಸಂದರ್ಭದಲ್ಲಿ, ಕೈಯಲ್ಲಿ ಆಯುಧ ಹಿಡಿದುಕೊಂಡು ಬರಬೇಕು, ನಿಮಗೆ ನಾನೊಂದು ಜವಾಬ್ದಾರಿಯನ್ನು ನೀಡಲಿದ್ದೇನೆ ಇನ್ಷಾ ಅಲ್ಲಾಹ್” ಎಂದು ಹೇಳಿದರು. ನಾನು ಮರುದಿನ ಸೂರ್ಯೋದಯದ ಸಂದರ್ಭದಲ್ಲಿ, ಖಡ್ಗ, ಗುರಾಣಿ, ಹಾಗೂ ಬತ್ತಳಿಕೆಯಲ್ಲಿ ಬಾಣವನ್ನು ತುಂಬಿಸಿ ಪ್ರವಾದಿಯವರ ﷺ ಬಳಿ ಹೋದೆನು. ಪ್ರವಾದಿಯವರು ﷺ ಮುಂಜಾನೆಯ ನಮಾಝನ್ನು ಮಾಡುತಿದ್ದರು, ಅಷ್ಟೊತ್ತಿಗೆ ನಾವು ಕೂಡ ಮಸ್ಜಿದಿನ ಬಾಗಿಲ ಬಳಿ ಬಂದು ನಿಂತಿದ್ದೆವು. ಪ್ರವಾದಿಯವರು ﷺ ಉಬಯ್ಯ್ ಬಿನ್ ಕಅಬನ್ನು ◌ؓ ಕರೆದು, ಅವರಲ್ಲಿ ಪ್ರವಾದಿಯವರು ﷺ ಒಂದು ಪತ್ರವನ್ನು ಬರೆಯಲು ಸೂಚನೆ ನೀಡಿದರು. ನಂತರ, ನನ್ನನ್ನು ಕರೆದು, ನನ್ನ ಕೈಗೆ ಆ ಪತ್ರವನ್ನು ಕೊಟ್ಟು, ನಿಮ್ಮನ್ನು ಈ ಗುಂಪಿಗೆ ನಾಯಕನಾಗಿ ಆಯ್ಕೆ ಮಾಡಿರುತ್ತೇನೆ. ನೀವು ಹೊರಡಿರಿ, ನೀವು ಎರಡು ರಾತ್ರಿ ಕಳೆದ ನಂತರ ಈ ಪತ್ರವನ್ನು ತೆರೆದು ನೋಡಿ ಅದರ ಸೂಚನೆಗಳನ್ನು ಪಾಲಿಸಿ ಮುಂದಕ್ಕೆ ಸಾಗಿರಿ ಎಂದು ಹೇಳಿದರು. ಯಾವ ಭಾಗಕ್ಕೆ ಹೊರಡಬೇಕು ಎಂದು ಕೇಳಿದಾಗ.?, ರಖಿಯ್ಯವನ್ನು ಲಕ್ಷ್ಯವಾಗಿಸಿ, ನಜ್’ದ್’ನ ಕಡೆಗೆ ಸಾಗಿರಿ ಎಂದು ಹೇಳಿದರು. ಅದೇ ರೀತಿ ಎರಡು ದಿನಗಳ ಸಂಚಾರದ ನಂತರ ಇಬ್’ನು ಳುಮೈರರ ಬಾವಿಯ ಬಳಿ ತಲುಪಿದಾಗ ಪತ್ರವನ್ನು ತೆರೆದು ನೋಡಲಾಯಿತು.
ಅದರಲ್ಲಿ ” ಅಲ್ಲಾಹನ ಹೆಸರಿನಲ್ಲಿ, ಅವನ ಆಶೀರ್ವಾದದ ಜೊತೆಯಲ್ಲಿ ಯಾತ್ರೆಯನ್ನು ಮುಂದುವರಿಸಿರಿ, ಸ್ವಂತ ಆಸಕ್ತಿಯಿಂದ ಬರುವವರನ್ನು ಬಿಟ್ಟು ಬೇರೆ ಯಾರನ್ನು ಜೊತೆಗೆ ಕರೆದುಕೊಂಡು ಹೋಗಬೇಡಿ, ಬತ್ವನ್ ನಖ್’ಲಿಗೆ ತಲುಪಿದ ನಂತರ, ಅಲ್ಲಿರುವ ವ್ಯಾಪಾರ ಸಂಘವನ್ನು ಬಹಳ ಜಾಗರೂಕತೆಯಿಂದ ಗಮನಿಸಿರಿ” ಎಂದು ಬರೆಯಲಾಗಿತ್ತು. ಪತ್ರ ಓದಿದ ನಂತರ, ಅಬ್ದುಲ್ಲಾಹಿಬಿನ್ ಜಹ್’ಷ್ ◌ؓ ತನ್ನ ಇತರ ಸಹಚರರಲ್ಲಿ, ನಿಮ್ಮಲ್ಲಿ ಯಾರನ್ನೂ ಕೂಡ ಒತ್ತಾಯ ಪಡಿಸುವುದಿಲ್ಲ, ಹಿಂತಿರುಗಿ ಹೋಗಲು ಮನಸ್ಸಿರುವವರಿಗೆ ಹಿಂತಿರುಗಿ ಹೋಗಬಹುದು. ಶಹೀದ್ ಆಗಲು (ಅಲ್ಲಾಹನ ದಾರಿಯಲ್ಲಿ ಜೀವ ಸಮರ್ಪಣೆ) ಮನಸ್ಸಿರುವ ವ್ಯಕ್ತಿಗಳು, ಪ್ರವಾದಿಯವರ ﷺ ಸೂಚನೆಯಂತೆ ನಮ್ಮ ಜೊತೆಯಲ್ಲಿ ಮುಂದೆ ಬರಬಹುದು ಎಂದು ಹೇಳಿದಾಗ, ಜೊತೆಯಲ್ಲಿದ್ದ ಸಹಚರರು ಒಂದೇ ಧ್ವನಿಯಲ್ಲಿ “ನಾವೆಲ್ಲರೂ ಅಲ್ಲಾಹನ ಹಾಗೂ ಅವರ ಪ್ರವಾದಿಯವರನ್ನು ﷺ ಹಾಗೂ ನಿಮ್ಮನ್ನು ಕೂಡ ಸಂಪೂರ್ಣವಾಗಿ ಅಂಗೀಕರಿಸುತ್ತೇವೆ, ಅಲ್ಲಾಹನ ಆಶೀರ್ವಾದದೊಂದಿಗೆ ನೀವು ಮುಂದಕ್ಕೆ ಸಾಗಿರಿ” ಎಂದು ಹೇಳಿದರು.
ಅಲ್ಲಿಂದ ಮುಂದುವರಿದ ಯಾತ್ರೆ, ಬತ್ವನ್ ನಖ್’ಲಿಗೆ ತಲುಪಿದ ನಂತರ, ಖುರೈಷಿಗಳ ಗುಂಪನ್ನು ಗುರುತಿಸಿ ಕೊಂಡರು. ಆ ಗುಂಪಿನಲ್ಲಿ ಅಂರ್ ಬಿನ್ ಳಮ್’ರಮಿ, ಹಕಮ್ ಬಿನ್ ಕೈಸಾನ್, ಉಸ್ಮಾನ್ ಬಿನ್ ಅಬ್ದುಲ್ಲಾಹ್ ಮಖ್’ಸೂಮಿ ಮುಂತಾದವರು ಇದ್ದರು. ಅವರು ಮುಸ್ಲಿಮರನ್ನು ಕಂಡ ಕೂಡಲೇ, ಭಯ ಪಟ್ಟುಕೊಂಡರು. ಅವರ ಭಯವನ್ನು ಇಲ್ಲವಾಗಿಸಲು, ಅಬ್ದುಲ್ಲಾಹ್’ರು ◌ؓ ತಂತ್ರವನ್ನು ರೂಪಿಸಿದರು. ಅವರ ಜೊತೆಯಲ್ಲಿದ್ದ ಉಕ್ಕಾಶನನ್ನು ತಲೆ ಬೋಳಿಸಿ ಅವರ ಮುಂದೆ ಹೋಗಿ ನಿಲ್ಲಿಸಿದರು. ಅದನ್ನು ಕಂಡು ಅವರಿಗೆ ಸ್ವಲ್ಪ ಸಮಾಧಾನವಾಯಿತು, ಅವರು ಬಹುಶಃ ಇವರು ಉಮ್ರಾ ಮಾಡಲು ಬಂದಿರಬಹುದು ಎಂದು ಭಾವಿಸಿದರು. ಅವರು ತಮ್ಮ ಪ್ರಾಣಿಗಳನ್ನು ಮೇಯಿಸಲು ಬಿಟ್ಟು, ಆಹಾರ ಸಿದ್ಧಪಡಿಸಲು ಸಿದ್ಧ ಪಡಿಸಲು ಆರಂಭಿಸಿದರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-208/365
ಇನ್ನೇನು ಮಾಡುವುದು ಎಂದು ಮುಸ್ಲಿಮರು ಆಲೋಚಿಸಲು ಆರಂಭಿಸಿದರು. ಗುಂಪಿನಲ್ಲಿದ್ದ ಒಬ್ಬರು ವ್ಯಕ್ತಿ ಎದ್ದು ನಿಂತು ಖುರೈಷಿಗಳು ಇನ್ನೂ ಕೂಡ ಏನು ಮಾಡುತ್ತಾರೆ ಎಂದು ಆಲೋಚಿಸುತ್ತಾ ಮುಂದುವರಿಯಲು ಸಾಧ್ಯವಿಲ್ಲ. ಅವರು ಪವಿತ್ರ ಮಕ್ಕಾ ಊರಿಗೆ ತಲುಪಿದರೆ ನಂತರ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಜಬ್ ತಿಂಗಳ ಕೊನೆಯ ದಿನವಾಗಿತ್ತು ಅದು, ರಜಬ್ ಯುದ್ಧ ನಿಷೇಧಿಸಿದ ತಿಂಗಳುಗಳಲ್ಲಿ ಒಂದಾಗಿದೆ. ಅದನ್ನೂ ಕೂಡ ಒಬ್ಬರು ಸೂಚನೆ ನೀಡಿದಾಗ, ಇನ್ನೊಬ್ಬರು ಎದ್ದು ನಿಂತು ಇದು ರಜಬ್ ತಿಂಗಳು ಎನ್ನುವುದು ಕೂಡ ಖಚಿತವಿಲ್ಲ ಎಂದು ಹೇಳಿದರು. ಅದಕ್ಕೆ ಮತ್ತೊಬ್ಬರು ಎದ್ದು ನಿಂತು, ಇದು ರಜಬ್ ತಿಂಗಳೇ ಆಗಿದೆ ನಿಮ್ಮ ಆಗ್ರಹವನ್ನು ಸಾಧಿಸಲು ಈ ದಿನವನ್ನು ಕೈ ಬಿಡಬೇಡಿ ಎಂದು ಹೇಳಿದರು. ಕೊನೆಗೆ ಖುರೈಷಿಗಳನ್ನು ಎದುರಿಸಲೇ ಬೇಕು ಎಂಬ ತೀರ್ಮಾನವನ್ನು ಮಾಡಲಾಯಿತು. ಮುಸ್ಲಿಮರ ಪಕ್ಷದಲ್ಲಿದ್ದ ನುರಿತ ಬಿಲ್ಲುಗಾರನಾದ ವಾಖಿದ್ ಬಿನ್ ಅಬಿದಿಲ್ಲಾಹ್’ರು ◌ؓ, ಅಂರ್ ಬಿನ್ ಹಳ್’ರಮಿನ ಮೇಲೆ ನೇರವಾಗಿ ಬಾಣ ಬಿಟ್ಟಾಗ, ಅದು ಗುರಿ ತಪ್ಪದೆ ಹೋಗಿ ಅವರಿಗೆ ತಾಗಿ, ಅವರು ಕುಸಿದು ಬಿದ್ದರು. ಅಷ್ಟರಲ್ಲೇ, ಖುರೈಷಿಗಳ ವಿರುದ್ಧವಾಗಿ ಮುಸ್ಲಿಮರು ಒಟ್ಟಾಗಿ ದಾಳಿ ಮಾಡಲು ಆರಂಭಿಸಿದರು. ಕೊನೆಗೆ ಹಕಮ್ ಬಿನ್ ಖೈಸ್ ಹಾಗೂ ಉಸ್ಮಾನ್ ಬಿನ್ ಅಬ್’ದಿಲ್ಲಾಹ್’ರನ್ನು ಮುಸ್ಲಿಮರು ಬಂಧಿಯಾಗಿಸಿದರು. ನೌಫಲ್’ರ ಕಣ್ಣನ್ನು ಕಿತ್ತು ಎಸೆದರು, ಖುರೈಷಿಗಳ ಒಂಟೆ ಹಾಗೂ ಇತರ ಸರಕುಗಳು ಮುಸ್ಲಿಮರಿಗೆ ಸಿಕ್ಕಿತು. ತ್ವಾಯಿಫಿನಿಂದ ತಂದಿದ್ದ ದ್ರಾಕ್ಷಿ, ಚರ್ಮ, ಮಧ್ಯವಾಗಿತ್ತು ಆ ಸರಕುಗಳು. ಒಂಟೆಗಳ ಗುಂಪಿನೊಂದಿಗೆ ಪ್ರವಾದಿಯವರ ﷺ ಬಳಿ ತಲುಪಿದಾಗ, ನಡೆದ ಘಟನೆಯನ್ನು ವಿವರಿಸಲು ಹೇಳಿದರು. ಸರಕುಗಳಲ್ಲಿ ಯಾವುದನ್ನು ಸ್ವೀಕರಿಸಲಿಲ್ಲ, ಎಲ್ಲವನ್ನು ಪಕ್ಕದಲ್ಲಿ ಇರಿಸಿ, ಖೈದಿಗಳನ್ನು ಬಂಧಿಸಲು ಸೂಚನೆ ನೀಡಿದರು. ನಂತರ ತಮ್ಮ ಅನುಚರರಲ್ಲಿ ನಾನು ಈ ಪವಿತ್ರ ತಿಂಗಳಲ್ಲಿ ಯುದ್ಧ ಮಾಡಲು ಅನುಮತಿ ನೀಡಿರಲಿಲ್ಲ ಅಲ್ಲವೇ.? ಎಂದು ಕೇಳಿದರು.
ಅಬ್ದುಲ್ಲಾಹ್’ರ ಗುಂಪು ಒಳಗೊಳಗೆ ಬಹಳಷ್ಟು ಬೇಸರಪಟ್ಟರು. ನಾವು ನಾಶವಾಗಿ ಹೋದೆವು ಎಂದು ಕೂಡ ದುಃಖಿತರಾದರು. ಇತರ ಮುಸ್ಲಿಮರೂ ಕೂಡ, ಪ್ರವಾದಿಯವರ ﷺ ಆಜ್ಞೆಯನ್ನು ಉಲ್ಲಂಘಿಸಿದವರರು ಎಂಬ ಅಪರಾಧವನ್ನು ಕೂಡ ಸೇರಿಸಿ ದೂಷಿಸಲು ಆರಂಭಿಸಿದರು.
ಖುರೈಷಿಗಳು ಈ ಅವಕಾಶವನ್ನು ಲಾಭ ಪಡೆಯಲು ಆರಂಭಿಸಿದರು. ಮುಹಮ್ಮದ್’ರು ﷺ ಪವಿತ್ರ ತಿಂಗಳಲ್ಲಿ ಯುದ್ಧ ಅನುಮತಿಸಿದರು ಎಂದು ಆರೋಪಿಸಲು ಆರಂಭಿಸಿದರು. ಇದನ್ನು ಕೇಳಿ, ಖುರೈಷಿಗಳೊಂದಿಗೆ ವ್ಯವಹಾರ ಇಟ್ಟುಕೊಂಡಿದ್ದ ಮುಸ್ಲಿಮರು, ಘಟನೆ ನಡೆದದ್ದು ರಜಬ್ ತಿಂಗಳಲ್ಲಿ ಅಲ್ಲ, ಬದಲಾಗಿ ಅದು ಶಅಬಾನ್ ತಿಂಗಳಲ್ಲಿ ಆಗಿತ್ತು ಎಂದು ಉತ್ತರಿಸಿದರು. ಯಹೂದಿಗಳು ಕೂಡ ಈ ಅವಕಾಶವನ್ನು ಬಳಸಿಕೊಳ್ಳಲು, ಕೊಲ್ಲಲ್ಪಟ್ಟ ಹಳರಮಿ ಹಾಗೂ ಬಿಲ್ಲುಗಾರ ವಾಖಿದಿನ ಹೆಸರನ್ನು ಸೇರಿಸಿ, ಶಕುನವನ್ನು ರಚಿಸಿದರು. ಅಂರ್ ಎಂಬುವುದಕ್ಕೆ, “ಅಮರ್’ತ್ತಲ್ ಹರ್’ಬಃ” (ಯುದ್ಧ ಆರಂಭಿಸಿದನು) ಎಂದೂ, ಹಳ್’ರಮಿ ಎಂಬ ಪದವನ್ನು “ಹಳರತ್ತಿಲ್ ಹರ್’ಬಃ” (ಯುದ್ಧದಲ್ಲಿ ಭಾಗವಹಿಸಿದವನು) ಹಾಗೂ ವಾಖಿದ್ ಎಂಬ ಪದವನ್ನು “ವಖದ್’ತಲ್ ಹರ್’ಬಃ” (ಯುದ್ಧವನ್ನು ಹೊತ್ತಿ ಉರಿಸಿದವನು) ಎಂಬ ಅರ್ಥದಿಂದಲೂ ಲೇವಡಿ ಮಾಡಲು ಆರಂಭಿಸಿದರು. ಮುಸ್ಲಿಮರನ್ನು ಇನ್ನಷ್ಟು ದೂಷಿಸಿ, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಲು ಅವರು ಮಾಡಿದ್ದ ತಂತ್ರವಾಗಿತ್ತು ಇದು.
ನಾಲ್ಕು ದಿಕ್ಕಿಗಳಿಂದಲೂ ಟೀಕೆಗಳು ಕೇಳಿಬಂದಾಗ ಅಬ್ದುಲ್ಲಾಹ್’ರ ಗುಂಪಿನ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿದರು. ಆ ಸಂದರ್ಭದಲ್ಲಾಗಿತ್ತು ಪವಿತ್ರ ಕುರ್’ಆನಿನ ಎರಡನೇ ಅಧ್ಯಾಯ ಅಲ್ ಬಖರಾದ ಇನ್ನೂರ ಹದಿನೇಳನೇ ಸೂಕ್ತವೂ ಅವತರಿಸಿದ್ದು. ಅದರ ಸಾರವು ಈ ರೀತಿಯಾಗಿದೆ.
ಪವಿತ್ರ ತಿಂಗಳಲ್ಲಿ ಯುದ್ಧ ಮಾಡುವುದರ ಬಗ್ಗೆ ಅವರು ನಿಮ್ಮಲ್ಲಿ ಕೇಳಬಹುದು. ನೀವು ಹೇಳಿರಿ, ಆ ತಿಂಗಳಲ್ಲಿ ಯುದ್ಧ ಮಾಡುವುದು ಅಪರಾಧವೇ ಆಗಿದೆ. ಆದರೆ ಅಲ್ಲಾಹನ ದಾರಿಯಿಂದ (ಜನರನ್ನು) ತಡೆಯುವುದು, ಅವನಿಗೆ ದ್ರೋಹ ವೆಸಗುವುದು, ಮಸ್ಜಿದುಲ್ ಹರಾಮ್‍ನಿಂದ (ಜನರನ್ನು) ತಡೆಯುವುದು, ಅಲ್ಲಿನ ಹಕ್ಕುದಾರರನ್ನು ಹೊರಹಾಕುವುದು ಅಲ್ಲಾಹನ ದೃಷ್ಟಿಯಲ್ಲಿ ಅದಕ್ಕಿಂತಲೂ ಘೋರ ಅಪರಾಧವಾಗಿದೆ. ಗೊಂದಲವು ಕೊಲೆಗಿಂತಲೂ ಗಂಭೀರವಾಗಿದೆ. ಅವರಿಗೆ ಸಾಧ್ಯವಾದರೆ ನಿಮ್ಮನ್ನು, ನಿಮ್ಮ ಧರ್ಮದಿಂದ ವಿಮುಖಗೊಳಿಸುವವರೆಗೂ ನಿಮ್ಮ ವಿರುದ್ಧ ಯುದ್ಧ ಮಾಡುತ್ತಲೇ ಇರುವರು. ನಿಮ್ಮಿಂದ ಯಾರಾದರೂ ಒಬ್ಬರು ತಮ್ಮ ಧರ್ಮದಿಂದ ಹಿಂತಿರುಗಿ ಸತ್ಯ ನಿಷೇಧಿಯಾಗಿ ಮರಣ ಹೊಂದುವನೋ, ಅಂತಹವನ ಎಲ್ಲಾ ಸತ್ಕರ್ಮಗಳು ಇಹದಲ್ಲೂ ಪರದಲ್ಲೂ ಫಲಹೀನವಾಗುವುದು. ಅವರು ನರಕವಾಸಿಗಳಾಗಿರುವರು. ಅದರಲ್ಲೇ ಅವರು ಶಾಶ್ವತವಾಗಿ ಇರುವರು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-209/365
ಕುರ್’ಆನಿನ ಮಧ್ಯಸ್ಥಿಕೆಯು ಸತ್ಯ ವಿಶ್ವಾಸಿಗಳಿಗೆ ಬಹಳಷ್ಟು ಸಮಾಧಾನ ತಂದಿತು. ಅಬ್ದುಲ್ಲಾಹ್’ರು ಬಂದಿಯಾಗಿಸಿ ತಂದಿದ್ದ, ಒಂಟೆಗಳನ್ನು ಹಾಗೂ ಖೈದಿಗಳನ್ನು ಪ್ರವಾದಿಯವರು ﷺ ಪಡೆದುಕೊಂಡರು. ಮಕ್ಕಾ ನಿವಾಸಿಗಳು ವಿಮೋಚನೆ ಮೌಲ್ಯಗಳನ್ನು ನೀಡಿ ಖೈದಿಗಳನ್ನು ಬಿಡಿಸಲು ತಮ್ಮ ಜನರನ್ನು ಪ್ರವಾದಿಯವರ ﷺ ಬಳಿ ಕಳುಹಿಸಿದರು. ಆದರೆ ತಕ್ಷಣವೇ ಅವರನ್ನು ಬಿಡುಗಡೆ ಗೊಳಿಸುವುದು ಮುಸ್ಲಿಮರಿಗೆ ಅಸಾಧ್ಯದ ಮಾತಾಗಿತ್ತು, ಕಾರಣ ಇನ್ನೂ ಕೂಡ ಮುಸ್ಲಿಮರ ಗುಂಪಿನಲ್ಲಿದ್ದ ಇಬ್ಬರು ವಾಪಸು ಬಂದಿರಲಿಲ್ಲ, ಅದು ಸಅದ್ ಬಿನ್ ಅಬೀ ವಕ್ಖಾಸ್ ಹಾಗೂ ಉತ್’ಬತ್ ಬಿನ್ ಗಝ್’ವಾನ್ ಆಗಿದ್ದರು. ಪ್ರವಾದಿಯವರು ﷺ ಬಂದ ಖುರೈಷಿಗಳಲ್ಲಿ, ನಿಮ್ಮ ಜನರನ್ನು ತಕ್ಷಣವೇ ಬಿಡುಗಡೆ ಮಾಡಲು ಸಾಧ್ಯವಿಲ್ಲ, ಯಾಕೆಂದರೆ ನಮ್ಮ ಗುಂಪಿನ ಇಬ್ಬರು ವ್ಯಕ್ತಿಗಳು ಇಲ್ಲಿಯವರೆಗೆ ಹಿಂತಿರುಗಿ ಬರಲಿಲ್ಲ, ಹಾಗಾಗಿ ಅವರು ಬರುದಕ್ಕೂ ಮುನ್ನ ನಿಮ್ಮವರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ನೀವುಗಳು ಏನಾದರೂ ಅವರಿಗೆ ತೊಂದರೆ ಮಾಡಿದರೆ.? ನಾವು ಕೂಡ ಅದಕ್ಕೆ ಪ್ರತೀಕಾರ ತೀರಿಸಬೇಕಾಗುತ್ತದೆ ಎಂದು ಹೇಳಿದರು. ಸ್ವಲ್ಪ ಸಮಯದ ನಂತರ ಅವರಿಬ್ಬರೂ ಕೂಡ ಪ್ರವಾದಿಯವರ ﷺ ಬಳಿ ಬಂದು ತಲುಪಿದರು. ಅವರಲ್ಲಿ ಕಾರಣ ಕೇಳಿದಾಗ, ಅವರು ಪ್ರಯಾಣಿಸುತ್ತಿದ್ದ ಒಂಟೆ ತಪ್ಪಿಸಿಕೊಂಡಿದ್ದರಿಂದ ತಡವಾಯಿತು ಎಂದು ಹೇಳಿದರು.
ವಿಮೋಚನೆ ಮೌಲ್ಯಗಳನ್ನು ಪಡೆದು, ಖೈದಿಗಳನ್ನು ಬಿಡುಗಡೆ ಮಾಡಿದರು. ಆದರೆ ಅದರಲ್ಲಿ ಹಕಮ್ ಬಿನ್ ಕೈಸಾನ್ ಎಂಬ ವ್ಯಕ್ತಿಯು ಇಸ್ಲಾಮ್ ಸ್ವೀಕರಿಸಿ, ಪ್ರವಾದಿಯವರ ﷺ ಜೊತೆಯಲ್ಲೇ ಸೇರಿಕೊಂಡರು. ಹಿಜ್’ರ ನಾಲ್ಕನೇ ವರ್ಷದಲ್ಲಿ ಉಂಟಾದ ಬಿಅರ್ ಮಊನಃ ಎಂಬ ಘಟನೆಯಲ್ಲಿ ರಕ್ತಸಾಕ್ಷಿಯಾಗಿ (ಶಹೀದ್) ಮರಣ ಹೊಂದಿದರು. ಇನ್ನೊಬ್ಬ ಖೈದಿಯಾದ ಉಸ್ಮಾನ್ ಬಿನ್ ಅಬ್ದಿಲ್ಲಾಹ್ ಮಕ್ಕಾ ನಗರಕ್ಕೆ ವಾಪಸ್ಸು ಹೋಗಿ, ತನ್ನ ಹಳೆಯ ಅವಿಶ್ವಾಸದಲ್ಲೇ ಮುಂದುವರಿದರು.
ಸೈನಿಕ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರು ನಿರಪರಾಧಿಗಳು ಎಂದು, ಅಲ್’ಬಖರ ಅಧ್ಯಾಯದ ಇನ್ನೂರಹದಿನೇಳನೇ ಸೂಕ್ತ ಅವತರಿಸಿದರೂ, ಅವರಿಗೆ ಧರ್ಮ ಯೋಧರ ಪ್ರತಿಫಲ ಸಿಗಬಹುದೇ.? ಎಂಬ ಸಂಶಯವು ಕೂಡ ಅವರ ನಡುವೆ ಉಂಟಾಯಿತು. ಆ ಸಂದರ್ಭದಲ್ಲಿ ಆಗಿತ್ತು, ಅಲ್ ಬಖರ ಅಧ್ಯಾಯದ ಇನ್ನೂರಹದಿನೆಂಟನೇ ಸೂಕ್ತವು ಅವತರಿಸಿದ್ದು, ಅದರ ಸಾರವು ಈ ರೀತಿಯಾಗಿದೆ. “ಸತ್ಯ ವಿಶ್ವಾಸವನ್ನು ಒಪ್ಪಿಕೊಂಡು, ತಮ್ಮ ಸ್ವಂತ ಊರನ್ನು ಬಿಟ್ಟು ಹೋದವರು, ಅಲ್ಲಾಹನ ಮಾರ್ಗದಲ್ಲಿ ಧರ್ಮಯುದ್ಧ ಮಾಡಿದರು, ಅಲ್ಲಾಹನ ತೃಪ್ತಿಗೆ ಅರ್ಹರಾಗಿರುವರು. ಅಲ್ಲಾಹನು ಕ್ಷಮಿಸುವವನೂ, ಕರುಣಾಮಯಿಯು ಆಗಿರುವನು.”
ಸತ್ಯವಿಶ್ವಾಸಿಗಳು ಹಾಗೂ ಸತ್ಯನಿಷೇಧಿಗಳ ನಡುವಿನ ಸಂಘರ್ಷದಲ್ಲಿ ಮೊದಲನೇ ಬಾರಿ ಕೊಲ್ಲಲ್ಪಟ್ಟ ವ್ಯಕ್ತಿ ಅಂರ್ ಬಿನ್ ಅಲ್’ಹಳ್’ರಮಿ ಆಗಿದ್ದರು. ಹಾಗೂ ಮೊದಲ ಬಾರಿಗೆ ಬಂಧಿಸಿದ್ದ ಖೈದಿಗಳು ಕೂಡ ಹಕಮ್ ಹಾಗೂ ಉಸ್ಮಾನ್ ಆಗಿದ್ದರು. ಅದೇ ರೀತಿ ಮೊದಲ ಬಾರಿ ಸಿಕ್ಕಿದ ಸಮರಾರ್ಜಿತ ಆಸ್ತಿಯೂ ಕೂಡ ಇದೇ ಗುಂಪಿನಿಂದ ಸಿಕ್ಕಿದ್ದ ಆಸ್ತಿಯಾಗಿತ್ತು.
ಪ್ರವಾದಿಯವರ ﷺ ರಾಜತಾಂತ್ರಿಕ ಕಾರ್ಯಾಚರಣೆಯ ವಿಭಿನ್ನವಾದ ಚಿತ್ರಣವನ್ನಾಗಿದೆ ನಾವೀಗ ಅಧ್ಯಯನ ಮಾಡುತ್ತಿರುವುದು. ಒಂದು ಉತ್ತಮವಾದ ಆದರ್ಶವನ್ನು ಇಂಪಾದ ಕವಿತೆಯ ಹಾಗೆ ಅದನ್ನು ಪ್ರಸ್ತುತ ಪಡಿಸಿದಾಗ, ಉತ್ತಮ ಮನಸ್ಸಿನ ಜನಸಮೂಹ ಅದನ್ನು ಆನಂದಿಸಿದರೆ, ಕತ್ತಲೆಂಬ ಕಾರ್ಮೋಡದಲ್ಲಿ ಸಿಲುಕಿಕೊಂಡಿದ್ದ ಮತ್ತೊಂದು ಜನಸಮೂಹ ಅದನ್ನು ವಿರೋಧಿಸಿತು. ಅವರು ಚಲಿಸುತ್ತಿದ್ದ ದಾರಿಯಲ್ಲಿ ಹಲವಾರು ಅಡಚಣೆಗಳನ್ನು ಸೃಷ್ಟಿ ಮಾಡಿದರು. ಪ್ರವಾದಿಯವರು ﷺ ಸಹಿಷ್ಣುತೆಯ ಹಾಗೂ ಸಾಮರಸ್ಯದ ಜೀವನವನ್ನು ನಡೆಸಿದರೂ, ನೆಮ್ಮದಿಯಿಂದ ಇರಲು ಬಿಡದ ಕಾರಣ ಕೊನೆಗೆ ತಾಯ್ನಾಡನ್ನೂ ಬಿಟ್ಟು ಅನ್ಯ ಊರಿಗೆ ಪಲಾಯನ ಮಾಡಬೇಕಾಗಿಯೂ ಬಂದಿತು. ಅಲ್ಲಿ ನಿರಾಶ್ರಿತರಾಗಿ ಜೀವಿಸಿ, ಹೊಸ ಜೀವನೋಪಾಯವನ್ನು ಕಂಡುಹಿಡಿದು, ಜೀವನಕ್ಕೆ ಹೊಸ ವೇಳಾಪಟ್ಟಿಗಳನ್ನು ಹೊಂದಿಸಿ, ಹೊಸ ವಾತಾವರಣವನ್ನು ಪರಿಚಯಿಸಿ ಕೊಟ್ಟು, ಹೊಸದೊಂದು ಸೌಹಾರ್ದತೆಯ ವಾತಾವರಣವನ್ನು ರೂಪಿಸಿಕೊಟ್ಟರು.
ಇಷ್ಟೆಲ್ಲಾ ತ್ಯಾಗಗಳನ್ನು ಮಾಡಿದರೂ, ಮಕ್ಕಾದ ಶತ್ರುಗಳ ಹಗೆತನ ಕಮ್ಮಿಯಾಗಿರಲಿಲ್ಲ. ಅವರು ತಮ್ಮ ಈಟಿಯ ಹರಿತವನ್ನು ಇನ್ನೂ ಹರಿತ ಮಾಡುತ್ತಲೇ ಇದ್ದರು, ಬತ್ತಳಿಕೆಯಲ್ಲಿ ಬಾಣಗಳನ್ನು ತುಂಬಿಸುತ್ತಲೇ ಇದ್ದರು, ಆಯುಧಗಳನ್ನು ಓರೆಯಲ್ಲಿ ಹಾಕಿ, ಸುಮಾರು ನಾನೂರಕ್ಕೂ ಮಿಕ್ಕ ಕಿ ಮೀಗಳಷ್ಟು ದೂರದಲ್ಲಿ ವಾಸಿಸುತ್ತಿರುವ ಮುಸ್ಲಿಮರನ್ನು ಶಾಂತಿಯಿಂದ ಜೀವಿಸಲು ಬಿಡಬಾರದು ಎಂದು ದೃಢ ಸಂಕಲ್ಪ ಮಾಡಿಕೊಂಡು, ಬಹಳಷ್ಟು ಕುತಂತ್ರಗಳನ್ನು ನಡೆಸಿದರು. ವಿಶ್ವಾಸಿಗಳು ಮಕ್ಕಾದಲ್ಲಿ ಬಿಟ್ಟು ಹೋಗಿದ್ದ ಆಸ್ತಿಗಳನ್ನು ಖುರೈಷಿಗಳು, ಅಕ್ರಮವಾಗಿ ಬಳಸಿಕೊಳ್ಳಲು ಆರಂಭಿಸಿದಾಗ, ವಿಧಿಯಿಲ್ಲದೆ ಸತ್ಯವಿಶ್ವಾಸಿಗಳು ಪ್ರತಿರೋಧ ಮಾಡಲೇಬೇಕಾಯಿತು. ಸಶಸ್ತ್ರ ಪರಾಕ್ರಮವನ್ನು ಮೀರಿಸುವಂತಹ ಆದರ್ಶದ ಶಕ್ತಿಯನ್ನು ಅವರು ಮುನ್ನಡೆಸಬೇಕಾಯಿತು. ಈಗ ಎರಡೂ ಪಕ್ಷಗಳು ಬಹುತೇಕವಾಗಿ ಬೆಂಕಿ ಹಚ್ಚಲು ಇನ್ನೂ ಒಂದು ಕಿಡಿ ಸಾಕು ಎನ್ನುವಷ್ಟರ ಮಟ್ಟಿಗೆ ಯುದ್ಧದ ವಾತಾವರಣಕ್ಕೆ ಬಂದು ತಲುಪಿದ್ದವು. ಇತಿಹಾಸವು ತನ್ನ ದೃಷ್ಟಿಯನ್ನು ಮಕ್ಕಾ ಹಾಗೂ ಮದೀನದ ನಡುವೆ ಇರುವ ಸ್ಥಳದ ಕಡೆಗೆ ಗಮನ ಹರಿಸುತ್ತಲೇ ಇದೆ.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Mahabba Campaign Part-210/365
ಪ್ರವಾದಿಯವರು ﷺ ನಿಖರವಾಗಿ ಕುಶಲತೆಯ ಬಗ್ಗೆ ಯೋಚಿಸ ತೊಡಗಿದರು. ಉಷೈರಾ ಚಳವಳಿಯಲ್ಲಿ ಬಿಟ್ಟುಹೋದ ವ್ಯಾಪಾರ ಗುಂಪು ಸಿರಿಯಾದಿಂದ ಹಿಂದಿರುಗುವ ಸಮಯಕ್ಕಾಗಿ ಕಾಯುತ್ತಿದ್ದರು. ಖುರೈಷಿಗಳ ಸಂಪತ್ತಿನೊಂದಿಗೆ (ಸರಕುಗಳು) ಶಾಮಿಗೆ (ಸಿರಿಯ) ವ್ಯಾಪಾರಕ್ಕೆ ಹೋಗುವುದನ್ನು ತಡೆಯುವುದಾಗಿತ್ತು, ಉಷೈರ ಸಂಘದ ಲಕ್ಷ್ಯವಿದ್ದದ್ದು. ಆದರೆ ಬಹಳ ಚಾಲಾಕಿತನದಿಂದ ಅವರು ತಪ್ಪಿಸಿಕೊಂಡು ಹೋಗಿದ್ದರು. ಇನ್ನೂ ಅವರು ಮಕ್ಕಕ್ಕೆ ತಿರುಗಿ ವಾಪಸು ಬರುವರು, ಏನೆಯಾದರು ಅವರನ್ನು ಈ ಬಾರಿ ತಡೆಯಲೇ ಬೇಕು ಹಾಗಾಗಿ ಅವರ ಚಲವಲನಗಳನ್ನು ಗಮನಿಸಲು ಬಸ್ ಬಸತು ಬಿನು ಅಂರ್ ಅಲ್ ಜುಹನಿ ◌ؓ ಹಾಗೂ ಅದಿಯ್ಯ್ ಬಿನ್ ಅಬೂಸ್ಸಬಾಅ ◌ؓ ಎಂಬ ಗೂಢಚಾರರನ್ನೂ ನೇಮಿಸಲಾಯಿತು. ಸಾವಿರ ಒಂಟೆಗಳು ಹಾಗೂ ಅದರಲ್ಲಿ ಹೊತ್ತು ತರುತ್ತಿದ್ದ ಸರಕುಗಳಾಗಿದೆ ಸಿರಿಯಾದಿಂದ ಬರುತ್ತಿರುವುದು. ಸುಮಾರು ನಲ್ವತ್ತರಿಂದ ಎಪ್ಪತ್ತರಷ್ಟು ಜನರು ಸುರಕ್ಷತೆಗಾಗಿ ಅವರ ಜೊತೆಯಲ್ಲಿ ಇದ್ದಾರೆ. ಅಬೂಸೂಫಿಯಾನ್’ರ ನಾಯಕತ್ವದಲ್ಲಿರುವ ಈ ತಂಡದಲ್ಲಿ ಅಂರುಬಿನುಲ್ ಆಸ್ವ್, ಮಖ್’ರುಮತು ಬಿನು ನೌಫಲ್ ಎಂಬ ಪ್ರಮಖರು ಕೂಡ ಜೊತೆಯಲ್ಲೇ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಗೂಢಚಾರಿಗಳು ಪ್ರವಾದಿಯವರಿಗೆ ﷺ ತಿಳಿಸಿದರು.
ಪ್ರವಾದಿಯವರು ﷺ ತಮ್ಮ ಅನುಚರರಲ್ಲಿ ಇದರ ಬಗ್ಗೆ ಚಿಂತನೆ ನಡೆಸಿ, ಖುರೈಷಿಗಳು ಹಿಂತಿರುಗಿ ಬರುತ್ತಿರುವ ಈ ಯಾತ್ರೆಯನ್ನು ಖಂಡಿತವಾಗಿಯೂ ತಡೆಯಲೇ ಬೇಕು ಎಂಬ ವಿಷಯವನ್ನು ಹಂಚಿಕೊಂಡರು. ಅವರನ್ನು ತಡೆದು ನಿಲ್ಲಿಸಿ, ನಮ್ಮ ಆಸ್ತಿಗಳನ್ನು ಮಕ್ಕಾದಲ್ಲಿ ಅವರೆಲ್ಲರೂ, ಖಬಳಿಸಿದ ಕಾರಣಕ್ಕೆ ಈಗ ಅವರ ಆಸ್ತಿಯನ್ನು ನಾವು ತಡೆದು ನಿಲ್ಲಿಸಿ, ಅವರ ಆಸ್ತಿಯನ್ನು ನಾವು ಪಡೆದುಕೊಳ್ಳೋಣ ಎಂಬ ಅಭಿಪ್ರಾಯವನ್ನು ತಿಳಿಸಿದರು. ಕೇವಲ ಒಂದು ವ್ಯಾಪಾರ ಗುಂಪನ್ನು ತಡೆಯುವ ಉದ್ದೇಶ ಮಾತ್ರ ಇದ್ದಿದ್ದರಿಂದ, ಅದಕ್ಕಾಗಿ ವಿಶೇಷವಾದ ಸೈನ್ಯದ ಸಜ್ಜಿಕರಣ ಏನೂ ಮಾಡಿರಲಿಲ್ಲ. ಯಾರ ಜೊತೆ ಚಲಿಸಲು ವಾಹನವಿದೆಯೋ ಅವರು ಮಾತ್ರ ಹೋದರೆ ಸಾಕು ಎಂದು ಹೇಳಿದರು. ವಾಹನ ಸ್ವಲ್ಪ ದೂರ ಇರುವವರಿಗೆ ಅದು ಅವರ ಬಳಿ ಬರುವವರೆಗೂ ಸಮಯಾವಕಾಶವನ್ನು ನೀಡಿದರು. ಹಾಗೂ ಇತರ ರಿಯಾಯಿತಿಗಳ ಅಗತ್ಯವಿರುವವರಿಗೆ ಅದನ್ನೂ ಕೂಡ ನೀಡಲಾಯಿತು.
ಮುಸ್ಲಿಮರ ತಂಡವು, ಹಿಜ್ರಾ ವರ್ಷ (ಪಲಾಯನದ ಎರಡನೇ ವರ್ಷ) ರಮದಾನ್ ಎಂಟರಿಂದ ಹನ್ನೆರಡ ನಡುವೆ ಹೊರಟಿತು. ಮದೀನದಿಂದ ಒಂದು ಮೈಲಿ ದೂರದಲ್ಲಿರುವ ಬಿಅರು ಅಬೀ ಅತಬಃ ಎಂಬ ಬಾವಿಯ ಬಳಿ ಪ್ರವಾದಿಯವರು ﷺ ತಮ್ಮ ಅನುಚರರನ್ನು ಜೊತೆ ಸೇರಿಸಿ ನಿಲ್ಲಿಸಿದರು. ಪ್ರತಿರೋಧಿಸಲು ಸಾಧ್ಯವಾಗದವರನ್ನು ಹಾಗೂ ದೀರ್ಘ ಯಾತ್ರೆ ಮಾಡಲು ಸಾಧ್ಯವಾಗದವರನ್ನು ಅಲ್ಲಿಂದ ಹಿಂದಕ್ಕೆ ವಾಪಸು ಕಳುಹಿಸಿದರು. ರಾಫಿಉ ಬಿನ್ ಖದೀಜ್ ◌ؓ, ಅಬ್ದುಲ್ಲಾಹಿಬಿನು ಉಸಾಮತ್ ಬಿನ್ ಝೈದ್ ◌ؓ, ಉಸೈದ್ ಬಿನ್ ಹುಳೈರ್ ◌ؓ, ಬರಾಅ ಬಿನ್ ಆಸಿಬ್ ◌ؓ, ಝೈದ್ ಬಿನ್ ಸಾಬಿತ್ ◌ؓ, ಹಾಗೂ ಝೈದ್ ಬಿನ್ ಅರ್’ಖಂ ◌ؓ ಮುಂತಾದ ಜನರನ್ನು ವಾಪಸ್ಸು ಕಳುಹಿಸಲು ಮುಂದಾದರು. ಹದಿನೈದು ಅಥವಾ ಹದಿನಾರು ವಯಸ್ಸು ಪ್ರಾಯವಿರುವ ಉಮೈರ್ ಬಿನ್ ಅಬೀ ವಖಾಸ್ ◌ؓ ಹಿಂತಿರುಗಿ ಹೋಗಲು ಕೇಳದೆ, ಅತ್ತು ಗೋಳಾಡಿದಾಗ, ಕೊನೆಗೆ ಅವರಿಗೆ ಪ್ರವಾದಿಯವರು ﷺ ಜೊತೆಯಲ್ಲಿ ಬರಲು ಅನುಮತಿ ನೀಡಲಾಯಿತು.
ಪ್ರವಾದಿಯವರು ﷺ ಮದೀನದಲ್ಲಿ ಯಾವುದೇ ರೀತಿಯ ಸೈನ್ಯದ ತಯಾರು ಆಗಲಿ, ಸಜ್ಜಿಕರಣ ಆಗಲಿ ಮಾಡಿರಲಿಲ್ಲ. ಮದೀನದ ಆರಂಭಿಕ ಕಾಲದಲ್ಲಿ ಸಂಪೂರ್ಣವಾಗಿ ಆಧ್ಯಾತ್ಮಿಕತೆಯ ಸಜ್ಜಿಕರಣ ಹಾಗೂ ಸಹೋದರತ್ವದ ಸ್ಥಾಪನೆಗಾಗಿತ್ತು ಒತ್ತು ಕೊಡುತ್ತಿದ್ದದ್ದು.
ರಾಜತಾಂತ್ರಿಕ ಕಾರ್ಯಾಚರಣೆಗಾಗಿ ಪ್ರವಾದಿಯವರು ﷺ ಕೇಳಿದಾಗ, ತಮ್ಮ ಅನುಚರರಲ್ಲಿ (ಸ್ವಹಾಬಿಗಳು) ಇದ್ದ ಒಂದೇ ಒಂದು ಬಂಡವಾಳವೆಂದರೆ ಅದು ಪ್ರವಾದಿಯವರ ﷺ ಮೇಲಿದ್ದ ವಿಧೇಯತೆ ಹಾಗೂ ಒಳ್ಳೆಯ ವಿಶ್ವಾಸ ಮಾತ್ರವಾಗಿತ್ತು. ಆತ್ಮವಿಶ್ವಾಸವು ಅವರನ್ನು ಮುಂದಕ್ಕೆ ಹೋಗಲು ಪ್ರೇರಣೆ ನೀಡುತ್ತಿತ್ತು, ಪರಲೋಕದ ನಿರೀಕ್ಷೆ ಅವರಿಗೆ ಇನ್ನಷ್ಟು ಬಲ ನೀಡಿತು.
ಪ್ರವಾದಿಯವರು ﷺ ಹಾಗೂ ಅವರ ಅನುಚರರು ವ್ಯಾಪಾರ ತಂಡವನ್ನು ಕಾದು ಕುಳಿತ್ತಿದ್ದ ಅದೇ ಸಂದರ್ಭದಲ್ಲಿ ಮಕ್ಕಾದಲ್ಲಿ ಕೆಲವೊಂದು ಘಟನೆಗಳು ನಡೆಯಿತು. ಅದು ಆತ್ವಿಖ ಬೀವಿಯವರಿಗೆ ◌ؓ ಬಿದ್ದ ಕನಸಿನ ಬಗ್ಗೆಯಾಗಿತ್ತು.
(ಮುಂದುವರಿಯುವುದು…)
اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ
Leave a Reply