The biography of Prophet Muhammad – Month 2

Admin July 15, 2022 No Comments

The biography of Prophet Muhammad – Month 2

Mahabba Campaign Part-31/365

ಪುಣ್ಯ ಪ್ರವಾದಿಯವರ ﷺ ಐದನೇ ಮಗುವಾಗಿದ್ದಾರೆ ಫಾತಿಮ (ರ). ಹೆಣ್ಣು ಮಕ್ಕಳಲ್ಲಿ ಕಿರಿಯವರೂ, ಮಕ್ಕಳಲ್ಲಿ ಬಹಳ ಪ್ರಸಿದ್ಧಿ ಪಡೆದಿರುವ ಮಗಳಾಗಿದ್ದರು ಬೀವಿಯವರು. ಪ್ರವಾದಿಯವರ ﷺ ಮುವ್ವತ್ತೈದನೇ ವಯಸ್ಸಿನಲ್ಲಾಗಿತ್ತು ಬೀವಿಯವರು ಜನಿಸಿದ್ದು. ಖುರೈಶಿಗಳು ಕಅಬಾಲಯವನ್ನು ನವೀಕರಣಗೊಳಿಸುತ್ತಿದ್ದ ಸಮಯವಾಗಿತ್ತದು. ಅಲ್ಲ ನಲ್ವತ್ತೊಂದು ವಯಸ್ಸಿನಲ್ಲಾಗಿತ್ತು ಎನ್ನುವ ಅಭಿಪ್ರಾಯವೂ ಇತಿಹಾಸದಲ್ಲಿ ಕಾಣಬಹುದು.

ತಂದೆಯೊಂದಿಗೆ ಬಹಳ ಪ್ರೀತಿಯಿಂದ ವ್ಯವಹರಿಸಲು ಭಾಗ್ಯ ಲಭಿಸಿದ ಮಗಳಾಗಿದ್ದರು ಫಾತಿಮ (ರ). ಪ್ರವಾದಿಯವರು ﷺ ತಮ್ಮ ಎಲ್ಲಾ ರಹಸ್ಯಗಳನ್ನೂ, ಬೇಸರವನ್ನು ಮಗಳು ಫಾತಿಮರೊಂದಿಗೆ (ರ) ಹೇಳುತ್ತಿದ್ದರು. ಕೆಲವೊಮ್ಮೆ ತಾಯಿಯ ಸ್ಥಾನದಲ್ಲಿ ನಿಂತು ಪರಿಹಾರ ಕೊಡುತ್ತಿದ್ದರು. ಆ ಕಾರಣದಿಂದಲೇ ‘ಉಮ್ಮು ಅಬೀಹ’ (ಸ್ವಂತ ತಂದೆಯ ತಾಯಿ) ಎನ್ನುವ ಹೆಸರು ಕೂಡ ಬೀವಿಯವರಿಗೆ ಲಭಿಸಿದ್ದು. ಪ್ರವಾದಿಯವರು ﷺ ಬಹಳಷ್ಟು ಬಾರಿ ‘ಫಾತಿಮ ನನ್ನ ಕರುಳಿನ ಕುಡಿ’ ಎಂದು ಹೇಳುತ್ತಿದ್ದರು. ಪ್ರಬೋಧನೆಯ ಆರಂಭದ ಕಾಲದಲ್ಲಿದ್ದ ಸಮಸ್ಯೆಗಳನ್ನು, ಬೇಸರವನ್ನು ನೇರವಾಗಿ ಕಂಡು ಅನುಭವಿಸಿದ್ದರು. ಚಿಕ್ಕಪ್ಪ ಅಬೂತ್ವಾಲಿಬರ ಮಗನಾದ ಅಲಿಯವರೊಂದಿಗೆ (ರ) ಮದುವೆ ಮಾಡಿದರು. ಫಾತಿಮ (ರ), ಅಲಿ (ರ) ದಂಪತಿಗಳಿಗೆ ಐದು ಮಕ್ಕಳು ಜನಿಸಿದವು, ಹಸನ್, ಹುಸೈನ್, ಮುಹ್ಸಿನ್ ಎಂಬ ಮೂರು ಗಂಡು ಮಕ್ಕಳೂ, ಝೈನಬ್, ಉಮ್ಮು ಕುಲ್ಸು ಎಂಬ ಎರಡು ಹೆಣ್ಣು ಮಕ್ಕಳಾಗಿತ್ತು.

ಸ್ವರ್ಗದ ರಾಣಿಯಾಗಿ ಬೀವಿಯವರನ್ನು ಪ್ರವಾದಿಯವರು ﷺ ಪರಿಚಯಿಸಿದ್ದರು. ಮಗಳನ್ನು ಬಹಳ ಮುದ್ದಾದ ಹೆಸರಿನಿಂದ ಕರೆಯುತ್ತಿದ್ದರು. ಬತೂಲ್, ಝಹ್’ರ, ಎಂಬ ಹೆಸರು ಅವುಗಳಲ್ಲಿ ಪ್ರಸಿದ್ಧವಾಗಿದೆ. ಮುಸ್ಲಿಮರು ಅತೀ ಹೆಚ್ಚು ನಾಮಕರಣ ಮಾಡುವ ಹೆಸರು ಕೂಡ ಫಾತಿಮ ಆಗಿದೆ. ಪ್ರವಾದಿಯವರ ﷺ ವಿಯೋಗದ ಆರು ತಿಂಗಳ ನಂತರ ಬೀವಿಯವರು ಕೂಡ ಇಹಲೋಕ ತ್ಯಜಿಸಿದರು. ಹಿಜ್’ರಾದ ಹನ್ನೊಂದನೇ ವರ್ಷದಲ್ಲಾಗಿತ್ತು ಮರಣ ಹೊಂದಿದ್ದು. ಪ್ರವಾದಿಯವರ ﷺ ಪರಂಪರೆಯು ಬೀವಿಯವರ ಮಕ್ಕಳ ಪರಂಪರೆಯಿಂದಾಗಿದೆ ಬರುವುದು.

ಪ್ರವಾದಿಯವರ ﷺ ಆರನೇ ಮಗುವಾಗಿತ್ತು ಅಬ್ದುಲ್ಲಾಹ್ ಎನ್ನುವ ಮಗು. ಪ್ರವಾದಿತ್ವದ ನಿಯೋಗದ ನಂತರವಾಗಿತ್ತು ಮಗನು ಜನಿಸಿದ್ದು. ಆದರೆ ಖಾಸೀಮ್’ರ ಹಾಗೆ ಬಾಲ್ಯದಲ್ಲೇ ಅಬ್ದುಲ್ಲಾಹ್ ಕೂಡ ಮರಣ ಹೊಂದಿದರು. ತ್ವಯ್ಯಿಬ್, ತ್ವಾಹಿರ್ ಎಂಬ ಮುದ್ದಾದ ಹೆಸರಿನಿಂದಲೂ ಮಗುವನ್ನು ಕರೆಯುತ್ತಿದ್ದರು. ತ್ವಯ್ಯಿಬ್, ತ್ವಾಹಿರ್ ಎಂಬ ಹೆಸರು ಬೇರೆ ಗಂಡು ಮಕ್ಕಳನ್ನೂ ಕರೆಯುತ್ತಿದ್ದರು ಎನ್ನುವ ಅಭಿಪ್ರಾಯವನ್ನು, ಪ್ರಮುಖ ಇತಿಹಾಸಗಾರರು ಯಾರೂ ಕೂಡ ಅಂಗೀಕರಿಸಲಿಲ್ಲ.

ಖದೀಜ (ರ) ಬೀವಿಯವರು ಪ್ರವಾದಿಯವರ ﷺ ಪ್ರತಿಯೊಂದು ಮಕ್ಕಳಿಗೂ ಸ್ವತಃ ತಾನೇ ಎದೆಹಾಲುಣಿಸಿದ್ದರು. ಅಂದಿನ ಅರಬ್ ಸಂಪ್ರದಾಯದಂತೆ ಸಾಕು ತಾಯಿಯರಿಗೆ ನೀಡಿರಲಿಲ್ಲ. ಸಣ್ಣ ಮಗು ಮರಣ ಹೊಂದಿದ ನಂತರ ಎದೆ ಹಾಲು ಅಧಿಕವಾಗಿ, ಪ್ರವಾದಿಯವರಲ್ಲಿ ﷺ ಬೇಸರ ವ್ಯಕ್ತಪಡಿಸಿದಾಗ. ಸ್ವರ್ಗದಲ್ಲಿ ಮಗನನ್ನು ಸ್ವರ್ಗದ ಸ್ತ್ರೀಯರು ಹಾಲುಣಿಸುವ ಶಬ್ದ ನಿಮಗೆ ಕೇಳುತ್ತಿಲ್ಲವೇ ಎಂದು ಪ್ರವಾದಿಯವರು ﷺ ಸಮಾಧಾನ ಪಡಿಸಿದರು.
ಒಂದೊಂದು ಮಗು ಜನಿಸಿದಾಗಲೂ ಪ್ರವಾದಿಯವರು ﷺ ಅಖೀಖ (ಖುರ್ಬಾನಿ) ನಡೆಸಿ ಕೊಟ್ಟಿದ್ದರು. ಗಂಡು ಮಕ್ಕಳಿಗೆ ಎರಡು ಮೇಕೆಯನ್ನು, ಹೆಣ್ಣು ಮಕ್ಕಳಿಗೆ ಒಂದು ಮೇಕೆಯ ರೀತಿಯಲ್ಲಾಗಿತ್ತು ಅಖೀಖ ನಡೆಸಿದ್ದು.

ಪ್ರವಾದಿಯವರ ﷺ ಎರಡು ಗಂಡು ಮಕ್ಕಳು ಕೂಡ ಬಾಲ್ಯದಲ್ಲೇ ಮರಣ ಹೊಂದಿದಾಗ, ಪರಂಪರೆ ನಷ್ಟ ಹೊಂದಿದ ವ್ಯಕ್ತಿಯೆಂದು ಕೆಲವರು ಪ್ರವಾದಿಯವರನ್ನು ﷺ ಗೇಲಿ ಮಾಡಿದ್ದರು. ಖುರೈಶಿಗಳಲ್ಲಿ ಗಣ್ಯರಾಗಿದ್ದ ಆಸ್ವ್ ಬಿನ್ ವಾಯಿಲ್ ಎಂಬ ವ್ಯಕ್ತಿಯಾಗಿದ್ದರು ಗೇಲಿಮಾಡಿದ್ದು. ಪರಿಹಾಸ್ಯ ಮಾಡಿದವರಿಗೆ ಉತ್ತರವಾಗಿ ಕುರ್’ಆನ್ ಸೂಕ್ತವು ಅವತರಿಸಿತು. ಓ ಪ್ರವಾದಿಯವರೇ ﷺ ತಮಗೆ ಬಹಳಷ್ಟು ಅನುಗ್ರಹಗಳನ್ನು ನಾವು ನೀಡಿದ್ದೇವೆ, ಹಾಗಾಗಿ ತಮ್ಮ ಒಡೆಯನಿಗಾಗಿ ನಮಾಝ್ ಮಾಡಿರಿ, ಅವನಿಗಾಗಿ ಖುರ್ಬಾನಿ ನೀಡಿರಿ, ನಿಶ್ಚಯವಾಗಿಯೂ ತಮ್ಮನ್ನು ಗೇಲಿ ಮಾಡಿದವರಿಗಾಗಿದೆ ಪರಂಪರೆ ಇಲ್ಲದಿರುವುದು. ಕುರ್’ಆನಿನ ನೂರಾ ಎರಡನೇ ಅಧ್ಯಾಯವಾದ ‘ಅಲ್ ಕೌಸರ್’ನ ವ್ಯಾಖ್ಯಾನವಾಗಿದೆ ತಿಳಿಸಿದ್ದು. ಪ್ರವಾದಿಯವರ ﷺ ಪರಂಪರೆಯು ಇವತ್ತಿಗೂ ಪ್ರಪಂಚದಾದ್ಯಂತ ವ್ಯಾಪಿಸಿದೆ. ಲಕ್ಷಾಂತರ ಜನರು ಪ್ರವಾದಿಯವರನ್ನು ﷺ ತಲುಪುವ ಪರಂಪರೆಯ ಕುರಿತು ಸ್ಪಷ್ಟವಾದ ಆಧಾರಗಳೊಂದಿಗೆ ಇವತ್ತಿಗೂ ಜೀವಿಸುತ್ತಿದ್ದಾರೆ. ಇಷ್ಟೊಂದು ಸ್ಪಷ್ಟವಾದ ಕುಟುಂಬ ಪರಂಪರೆಯನ್ನು, ಇತಿಹಾಸವನ್ನು ತೋರಿಸಲು ಬೇರಾರಿಗೂ ಸಾಧ್ಯವಿಲ್ಲ.

ಪ್ರವಾದಿಯವರ ﷺ, ಖದೀಜರ (ರ) ಸಂಸಾರದಲ್ಲಿ ಹೊಸ ಅಥಿತಿಯೊಬ್ಬರ ಆಗಮನವಾಯಿತು…

Mahabba Campaign Part-32/365

ಪ್ರವಾದಿಯವರ ﷺ ಜೀವನದಲ್ಲಿ ಮನೆಯ ಹೊಸ ಸದಸ್ಯರಾಗಿ ಇನ್ನೊಂದು ವ್ಯಕ್ತಿಯೂ ಕೂಡ ಸೇರಿದರು. ಇನ್ಯಾರು ಅಲ್ಲ, ಉಕ್ಕಾಳ್ ಮಾರುಕಟ್ಟೆಯಲ್ಲಿ ಖರೀದಿಸಿದ ಸೇವಕ ಝೈದ್ ಆಗಿದ್ದರು. ಪ್ರವಾದಿಯವರ ﷺ ವ್ಯಕ್ತಿತ್ವವನ್ನು, ಜೀವನವನ್ನು ಬೆಳಗಿಸುವ ಒಂದು ಘಟನೆಯನ್ನು ಇಲ್ಲಿ ತಿಳಿಯಲಿಕ್ಕಿದೆ. ಝೈದ್ ಪ್ರವಾದಿಯವರ ﷺ ಜೀವನದಲ್ಲಿ ಆಗಮಿಸಿದ್ದು ಹೇಗೆ ಎಂದು ತಿಳಿಯೋಣ.

ಅರೇಬಿಯಾದ ಸುಪ್ರಸಿದ್ಧ ಕಲ್’ಬ್ ಜನಾಂಗದ ಶುರಾಹಿಲರ ಮಗನಾಗಿದ್ದಾರೆ ಹಾರಿಸ್. ತ್ವಯ್ ವಂಶದ ಸಅಲಬರ ಮಗಳಾದ ಝುಅದಃ ಆಗಿದ್ದರು ಇವರ ಪತ್ನಿ. ಹಾರಿಸ್, ಝುಅದಃ ದಂಪತಿಗಳ ಪ್ರೀತಿಯ ಮಗನೇ ಝೈದ್. ಶ್ರೀಮಂತ ಕುಟುಂಬವಾಗಿತ್ತು ಅವರದ್ದು, ಒಂದು ದಿನ ಝುಅದಃ ತನ್ನ ಮಗನ ಜೊತೆಯಲ್ಲಿ ಮಾವನ ಮನೆಗೆ ಹೊರಟರು. ‘ಬನುಲ್ ಖೈನ್ ಬಿನ್ ಜಸ್’ರ್’ ಎನ್ನುವ ಕುಖ್ಯಾತ ದರೋಡೆಕೋರರು ಅಲೆದಾಡುತಿದ್ದ ಸಮಯವಾಗಿತ್ತು ಅದು. ಆಯುಧದಾರಿಗಳಾಗಿದ್ದ ದರೋಡೆಕೋರರು ದಾರಿ ಮದ್ಯೆ ತಾಯಿ, ಮಗನನ್ನು ಬಂಧಿಸಿದರು. ಕ್ಷಮೆ ಕೇಳಿದಾಗ ತಾಯಿಯನ್ನು ಬಿಟ್ಟು, ಮಗನನ್ನು ಕೊಂಡೊದರು. ಝೈದನ್ನು ಗುಲಾಮರ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದಾಗಿತ್ತು ಅವರ ಉದ್ದೇಶ.
ಝುಅದಃ ಅದೃಷ್ಟದಿಂದ ಮಾತ್ರವಾಗಿತ್ತು ರಕ್ಷೆ ಹೊಂದಿದ್ದು. ಸಂಬಂಧಿಕರಿಗೆ ವಿಷಯ ತಿಳಿಸಿದರು. ತಂದೆ ಹಾರಿಸ್ ಹಾಗೂ ಸಹೋದರ ಕಲ್’ಬ್’ರ ಜೊತೆಯಲ್ಲಿ ಸಂಬಂಧಿಕರೆಲ್ಲರೂ ನಾಲ್ಕು ದಿಕ್ಕಿನಲ್ಲಿಯೂ ಹುಡುಕ ತೊಡಗಿದರು. ಬಲಿಷ್ಠರಾದ ಜನಾಂಗದವರು ತಮ್ಮ ಸಾಮರ್ಥ್ಯವನ್ನು ಬಳಸಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ದರೋಡೆಕೋರರು ಝೈದನ್ನು ಗುಲಾಮನಾಗಿಸಿ ಬಹಳ ವೇಗವಾಗಿ ಬೇರೆ ಊರಿಗೆ ತಲುಪಿಸಿದರು. ಮಗನ ವಿರಹದ ನೋವಿನಲ್ಲಿ ಹಾರಿಸ್ ಬಹಳ ದುಃಖಿತರಾದರು. ಅಲ್ಲಲ್ಲಿ ಹುಡುಕುತ್ತಾ ಅಲೆಯ ತೊಡಗಿದರು. ಯಾವತ್ತಾದರೂ ಮಗನನ್ನು ಭೇಟಿಯಾಗಬಹುದೆಂದು ಆಶಿಸಿದ್ದರು. ಎಷ್ಟೇ ಬೆಲೆ ಕೊಟ್ಟಾದರೂ ಬಿಡುಗಡೆ ಮಾಡಿಸುವೆನು ಎಂದು ನಿರ್ಧರಿಸಿದರು. ಅವನನ್ನು ವಾಪಸು ಸಿಗುವವರೆಗೂ ಆಡಂಬರದ ಜೀವನವನ್ನು ವರ್ಜಿಸಲು ತೀರ್ಮಾನಿಸಿದರು. ಆದರೂ ಅವನ ಜನಾಂಗವೂ ಅವನನ್ನು ಹುಡುಕುದನ್ನು ನಿಲ್ಲಿಸಿರಲಿಲ್ಲ. ಕೊನೆಗೆ ಮಗನು ಜೀವಿಸಿರಬಹುದೋ ಅಥವಾ ಮರಣ ಹೊಂದಿರಬಹುದೋ ಎಂದು ತಿಳಿಯದೆ ಚಿಂತಿತರಾದರು. ಮಗನೊಂದಿನ ಪ್ರೀತಿಯ ಕಾರಣ ವಿರಹ ವೇದನೆಯಿಂದ ಕವಿತೆ ಹೇಳುತ್ತಾ ಅಲೆದರು. ಅದು ಒಂದು ಮಗನೊಂದಿಗೆ ತಂದೆಗಿರುವ ಪ್ರೀತಿಯ ಉದಾಹರಣೆಯಾಗಿ ಬದಲಾಯಿತು. ಝೈದಿನ ಕಣ್ಮರೆಯ ಕುರಿತು ಹಾರಿಸರ ಕವಿತೆಗಳನ್ನು ಇವತ್ತಿಗೂ ಓದುತ್ತಿದ್ದಾರೆ.

ಇದರೆಡೆಯಲ್ಲಿ ಝೈದ್ ಮಕ್ಕಾದ ಸುಪ್ರಸಿದ್ಧ ಉಕ್ಕಾಳ್ ಮಾರುಕಟ್ಟೆಯಲ್ಲಿ ಗುಲಾಮನಾಗಿ ತಲುಪಿದ್ದನು. ಪ್ರವಾದಿಯವರು ﷺ ಏನೋ ಅಗತ್ಯಕ್ಕೆ ಮಾರುಕಟ್ಟೆಗೆ ಬಂದಿದ್ದರು. ಗುಲಾಮರ ಗುಂಪಿನಲ್ಲಿ ಒಳ್ಳೆಯ ಮುಖ ಲಕ್ಷಣವಿರುವ ಝೈದನ್ನು ಕಂಡರು. ಅವನ ಮುಖ ಭಾವವು ಪ್ರವಾದಿಯವರನ್ನು ﷺ ಬಹಳ ಆಕರ್ಷಿಸಿತು. ಮನೆಗೆ ತೆರಳಿ ಖದೀಜರಲ್ಲಿ ವಿಷಯ ತಿಳಿಸಿದರು. ಒಳ್ಳೆಯ ಸ್ವಭಾವ ಗುಣನಡತೆಯಿರುವ ಆ ಮಗನನ್ನು ನಾವು ಖರೀದಿಸಬೇಕು. ಅವನನ್ನು ನಾವು ಮಗನಾಗಿ ಬೆಳೆಸೋಣ, ಅವನಲ್ಲಿ ಒಳ್ಳೆಯ ಭವಿಷ್ಯವನ್ನು ಕಾಣುತಿದ್ದೇನೆ. ಅದಕ್ಕೆ ಬೀವಿಯವರು ಸಮ್ಮತಿ ನೀಡಿದರು. ಪ್ರವಾದಿಯವರ ﷺ ಆಸಕ್ತಿಯು ಬೀವಿಯವರಿಗೆ ಯಾವಾಗಲೂ ಮುಖ್ಯವಾಗಿತ್ತಲ್ಲವೇ.? ಬೀವಿಯವರು ತಕ್ಷಣವೇ ಸಹೋದರ ಹಿಸಾಮಿನ ಮಗನಾದ ಹಕೀಮನ್ನು ಕರೆದು. ಅಗತ್ಯವಿರುವ ಹಣ ನೀಡಿ ಝೈದನ್ನು ಖರೀದಿಸಲು ಮಾರುಕಟ್ಟೆಗೆ ಕಳುಹಿಸಿದರು. ಬಹಳ ವೇಗವಾಗಿ ಮಾರುಕಟ್ಟೆಗೆ ತೆರಳಿ ನಾನೂರು ದಿರ್ಹಂಗೆ ಝೈದನ್ನು ಖರೀದಿಸಿ ಅತ್ತೆ ಖದೀಜರಿಗೆ ತಲುಪಿಸಿದರು. ಪ್ರವಾದಿತ್ವ ನಿಯೋಗದ ಹನ್ನೆರಡು ವರ್ಷ ಹಿಂದಿನ ಘಟನೆಯಾಗಿತ್ತೆಂದು ‘ಅಲಿ ಅಲ್ ಖುಸಾಯಿಯವರು’ ಅಭಿಪ್ರಾಯ ಪಟ್ಟಿರುತ್ತಾರೆ. ಅಂದು ಝೈದಿಗೆ ಎಂಟು ವರ್ಷ ಪ್ರಾಯವಾಗಿತ್ತು. ಹಾಗಿದ್ದರೆ ಅಂದು ಪ್ರವಾದಿಯವರ ﷺ ಪ್ರಾಯ ಇಪ್ಪತ್ತೆಂಟು ವರ್ಷವಾಗಿರಬಹುದು.

ಇನ್ನುಮುಂದೆ ಝೈದಿನ ಒಡೆಯ ಪ್ರವಾದಿಯವರು ﷺ ಹಾಗೂ ಒಡತಿ ಖದೀಜ ಬೀವಿಯಾಗಿರುತ್ತಾರೆ. ಹೊಸ ವಾತಾವರಣಕ್ಕೆ ಝೈದ್ ಬಹಳ ವೇಗವಾಗಿ ಹೊಂದಿಕೊಂಡನು. ಪ್ರವಾದಿಯವರಿಗೆ ﷺ ಒಳ್ಳೆಯ ಉಡುಗೊರೆ ನೀಡಿದ್ದು ಬೀವಿಯವರಿಗೆ ಬಹಳ ಸಂತೋಷವಾಗಿತ್ತು. ಒಳ್ಳೆಯ ಸೇವಕನನ್ನು, ಮಗನನ್ನು ಸಿಕ್ಕಿದ ಸಂತೋಷವಾಗಿತ್ತು ಪ್ರವಾದಿಯವರಿಗೆ ﷺ. ಸ್ವಂತ ತಂದೆ ತಾಯಿಗಿಂತ ಅಧಿಕವಾಗಿ ಪ್ರೀತಿ ನೀಡುತ್ತಿದ್ದ ತಂದೆ,ತಾಯಿಯನ್ನು ಸಿಕ್ಕಿದ ಸಂತೋಷದಲ್ಲಾಗಿದೆ ಝೈದ್ ಇರುವುದು.
ಪ್ರವಾದಿಯವರ ﷺ ಜೊತೆಗಿನ ನಿರಂತರವಾದ ಸಹವಾಸದ ಕಾರಣ ತನ್ನ ಯಜಮಾನ ಸಾಧಾರಣ ವ್ಯಕ್ತಿಯಲ್ಲ ಎನ್ನುವುದು ಝೈದ್’ಗೆ ಅರ್ಥವಾಯಿತು. ಅವರ ಬಳಿ ಏನೋ ಒಂದು ವಿಸ್ಮಯವಾದ ವಿಷಯಗಳು ಬಂದು ಸೇರುತ್ತಿದೆ…

Mahabba Campaign Part-33/365

ಅಲ್ ಅಮೀನರ ಸೇವಕ, ಅಬ್ದುಲ್ ಮುತ್ತಲಿಬರ ಪೌತ್ರ ಮುಹಮ್ಮದರ ﷺ ಸೇವಕ. ಮಕ್ಕಾ ನಿವಾಸಿಗಳಿಗೆ ಝೈದ್ ಹಾಗೂ ಝೈದಿಗೆ ಮಕ್ಕವೂ ಕೂಡ ಪರಿಚಯವಾಯಿತು. ಝೈದಿಗೆ ವಿರಹದ ನೋವಿರಲಿಲ್ಲ, ಇಲ್ಲಿ ತಂದೆ ತಾಯಿ, ಸಹೋದರಿಯರು ಎಲ್ಲವೂ ಸಿಕ್ಕಿದ್ದಾರೆ. ಜೊತೆಯಲ್ಲಿ ಅಸಾಮಾನ್ಯವಾದ ಏನೋ ಒಂದು ವಿಷಯವನ್ನು ಕಾಯುತ್ತಿದ್ದರು. ಹೀಗಿರುವಾಗ ಹಜ್ಜ್ ಸಮಯವೂ ಬಂದಿತು. ಬೇರೆ ಬೇರೆ ಪ್ರದೇಶಗಳ ಜನರು ಮಕ್ಕಾದಲ್ಲಿಯೂ, ಅದರ ಪರಿಸರದಲ್ಲಿಯೂ ಬಂದು ಸೇರಿದ್ದರು. ಜೊತೆಯಲ್ಲಿ ‘ಕಲ್’ಬ್’ ಜನಾಂಗದ ಜನರು ಕೂಡ ಇದ್ದರು. ಅವರಲ್ಲಿ ಕೆಲವರು ಅನಿರೀಕ್ಷಿತವಾಗಿ ಝೈದನ್ನು ಭೇಟಿಯಾದರು. ಅವರು ಝೈದನ್ನು ಕಂಡಾಗ ತಕ್ಷಣವೇ ಗುರುತಿಸಿದರು, ಝೈದ್ ಕೂಡ ತಕ್ಷಣವೇ ಅವರನ್ನು ಗುರುತಿಸಿದನು. ಅವರಲ್ಲಿ ಮಾತುಕತೆ ನಡೆಸಿದ ನಂತರ ತಾನು ವಾಸಿಸುತ್ತಿರುವ ಮನೆಯ ಪರಿಚಯವನ್ನೂ ತಿಳಿಸಿದನು. ಒಡೆಯನ ಕುರಿತು ಸ್ಪಷ್ಟವಾಗಿ ತಿಳಿದುಕೊಂಡರು. ಝೈದ್ ಅವರಿಗೆ ಒಂದು ಕವಿತೆ ಬರೆದು ಕೊಟ್ಟನು, ನಾನಿಲ್ಲಿ ಕ್ಷೇಮವಾಗಿ, ಸಂತೋಷವಾಗಿದ್ದೇನೆ ಎಂಬುದಾಗಿತ್ತು ಕವಿತೆಯ ಸಾರಾಂಶ. ಇದನ್ನು ನನ್ನ ಮನೆಯವರಿಗೆ ತಲುಪಿಸಿಬೇಕು, ಇದರಿಂದ ನನ್ನ ಅನುಪಸ್ಥಿತಿಯಲ್ಲಿ ಕಂಗಳಾಗಿರುವ ಮನೆಯವರಿಗೆ ನೆಮ್ಮದಿ ಸಿಗಬಹುದು. ಇಷ್ಟು ಹೇಳಿ ಅವನು ತನ್ನ ಒಡೆಯನ (ಪ್ರವಾದಿಯವರ ﷺ) ಹತ್ತಿರ ಓಡಿ ಹೋದನು. ಕಲ್’ಬ್ ಜನಾಂಗದ ಯಾತ್ರಿಕರಿಗೆ ಸಂತೋಷವಾಯಿತು. ಹಾರಿಸ್’ಗೂ ಕುಟುಂಬಕ್ಕೂ ಈ ವಿಷಯ ಬಹಳ ಸಂತೋಷವಾಗಬಹುದೆಂದು ಅಂದುಕೊಂಡರು. ಅವರು ಊರಿಗೆ ತಲುಪಿದ ತಕ್ಷಣವೇ ಹಾರಿಸ್’ಗೆ ವಿಷಯ ತಿಳಿಸಿದರು. ಹಾರಿಸ್’ರ ಮನಸ್ಸಲ್ಲಿ ಭರವಸೆ ಮೂಡಿತು. ಯಾತ್ರಿಕರಿಂದ ಸಂಪೂರ್ಣವಾಗಿ ಮಾಹಿತಿ ಪಡೆದರು.

ಇನ್ನು ತಡ ಮಾಡಬಾರದು, ತಕ್ಷಣವೇ ಮಕ್ಕಾ ಪಟ್ಟಣಕ್ಕೆ ತೆರಳಬೇಕು, ಎಷ್ಟೇ ಬೆಲೆ ಕೊಟ್ಟಾದರೂ ಸರಿ ಮಗನನ್ನು ಮೋಚಿಸಬೇಕೆಂದು ಸಹೋದರ ಕಅಬನ್ನು ಕರೆದರು. ಅವರು ಮಕ್ಕಾದಲ್ಲಿ ಪರಿಚಿತರೂ, ಸ್ವೀಕಾರಾರ್ಹ ವ್ಯಕ್ತಿಯೂ ಆಗಿದ್ದರು. ಬಹು ದೊಡ್ಡ ಮೊತ್ತದ ಹಣ್ಣದೊಂದಿಗೆ ಇಬ್ಬರೂ ಮಕ್ಕಾ ನಗರಕ್ಕೆ ತೆರಳಿದರು. ಮಕ್ಕಾ ಪಟ್ಟಣಕ್ಕೆ ತಲುಪಿದ ತಕ್ಷಣವೇ ಝೈದ್ ವಾಸಿಸುವ ಮನೆಯನ್ನು ಹುಡುಕಿದರು. ಝೈದಿನ ಒಡೆಯ ಮುಹಮ್ಮದರನ್ನು ﷺ ಭೇಟಿಯಾದರು. ಓ ಮಾನ್ಯ ಅಬ್ದುಲ್ ಮುತ್ತಲಿಬ್ ಹಾಗೂ ಹಾಶಿಮರ ಪೌತ್ರರೇ, ತಾವು ಈ ಊರಿನ ಅಭಿಮಾನವಾಗಿರುತ್ತೀರಿ ಎಂದು ನಮಗೆ ತಿಳಿದಿದೆ. ಖುರೈಶಿಗಳು ಅಲ್ಲಾಹನ ಅಥಿತಿಗಳನ್ನು ಸ್ವೀಕರಿಸುವವರು ಹಾಗೂ ಕಅಬಲಾಯದ ಸೇವಕರೂ ಆಗಿರುತ್ತೀರಿಯಲ್ಲವೇ.? ಪೀಡಿತರನ್ನು ರಕ್ಷಿಸುವವರು ಹಾಗೂ ಸೆರೆಯಾಳುಗಳನ್ನು ವಿಮೋಚಿಸುವವರಲ್ಲವೇ ತಾವು. ನಾವು ಈಗ ಬಂದಿರುವುದು ಕೂಡ ನಮ್ಮ ಮಗನನ್ನು ಮೋಚಿಸುವ ಉದ್ದೇಶದಿಂದಾಗಿದೆ. ತಮ್ಮ ಬಳಿಯಾಗಿದೆ ಅವನು ಇರುವುದು. ಅದಕ್ಕೆ ಎಷ್ಟು ಹಣ ಬೇಕಾದರೂ ನಾವು ನೀಡಲು ಸಿದ್ಧರಿದ್ದೇವೆ. ನಮ್ಮೊಂದಿಗೆ ದಯೆ ತೋರಿಸಿರಿ ಎಂದು ಹೇಳಿದರು.

ನೀವು ಯಾರ ಕುರಿತಾಗಿದೆ ಹೇಳುತ್ತಿರುವುದು.? ನಿಮ್ಮ ಯಾವ ಮಗ ನಮ್ಮ ಜೊತೆಯಲ್ಲಿದ್ದಾನೆ.? ಎಂದು ಪ್ರವಾದಿಯವರು ﷺ ಕೇಳಿದಾಗ. ತಮ್ಮ ಸೇವಕನಾದ ಝೈದ್ ಆಗಿರುತ್ತಾನೆ, ಅವನು ನನ್ನ ಮಗನಾಗಿದ್ದಾನೆ, ನನ್ನ ಹೆಸರು ಹಾರಿಸ್, ಇದು ನನ್ನ ಸಹೋದರ ಕಅಬ್ ಎಂದು ಹೇಳಿದರು.
ಸರಿ ಎಂದು ಪ್ರವಾದಿಯವರು ﷺ ಅವರ ಜೊತೆಯಲ್ಲಿ ಬಹಳ ಗೌರವದಿಂದಲೇ ಪ್ರತಿಕ್ರಿಯೆ ನೀಡಿದರು. ಅವನು ನಿಮ್ಮ ಮಗನಲ್ಲವೇ.? ಹಾಗಾದರೆ ನೀವು ಅವನನ್ನು ಕರೆದುಕೊಂಡು ಹೋಗಿರಿ. ಝೈದಿನ ತಂದೆಯಾಗಿದ್ದೀರಿ ಹಾಗಾಗಿ ನೀವು ಯಾವುದೇ ಬೆಲೆ ನೀಡಬೇಕಾದ ಅಗತ್ಯವೂ ಇಲ್ಲ. ಆದರೆ ಒಂದು ನಿಮಿಷ, ನಾನು ಅವನನ್ನು ಕರೆದು ವಿಷಯಗಳನ್ನು ತಿಳಿಸುತ್ತೇನೆ ಅವನು ಖುದ್ದಾಗಿ ನಿಮ್ಮ ಜೊತೆಯಲ್ಲಿ ಬರಲು ತಯಾರಿದ್ದರೆ ನಿಮಗೆ ಕರೆದುಕೊಂಡು ಹೋಗಬಹುದು. ಆದರೆ ಅವನು ನನ್ನ ಜೊತೆಯಲ್ಲಿ ಇಲ್ಲಿಯೇ ಇರುದಾಗಿ ತಿಳಿಸಿದರೆ ನೀವು ಬಲವಂತವಾಗಿ ಕರೆದುಕೊಂಡು ಹೋಗುವಂತಿಲ್ಲ.

ಸರಿ ಹಾಗೆ ಆಗಲಿ ನೀವು ಹೇಳುದರಲ್ಲೂ ನ್ಯಾಯವಿದೆ. ಇದಕ್ಕಿಂತಲೂ ಹೆಚ್ಚಾಗಿ ನಾವೇನು ನಿಮ್ಮಿಂದ ಆಗ್ರಹಿಸುದಿಲ್ಲ.
ಪ್ರವಾದಿಯವರು ﷺ ಝೈದನ್ನು ತಕ್ಷಣವೇ ಕರೆದರು. ಅವನು ಬಹಳ ಆವೇಶದಿಂದ ಓಡಿ ಬಂದನು. ಬಂದ ಅತಿಥಿಗಳನ್ನು ತಕ್ಷಣವೇ ಗುರುತಿಸಿದನು, ಅವರನ್ನು ಕಂಡು ಅವನ ಮುಖವು ಹರಳಿತು. ಅವನನ್ನು ಕಂಡು ಹಾರಿಸ್’ಗು ಕೂಡ ಬಹಳಷ್ಟು ಸಂತೋಷವಾಯಿತು. ವಿರಹದ ನೋವಿನಲ್ಲಿ ಬಳಲುತ್ತಿದ್ದವರಿಗೆ ಪುನಃ ಮಗನನ್ನು ಕಂಡಾಗ ಸಂತೋಷದಲ್ಲಿ ತಮ್ಮನ್ನೇ ತಾವೇ ಮರೆತು ಬಿಟ್ಟರು. ಇನ್ನು ಯಾವತ್ತೂ ಮಗನನ್ನು ಕಾಣಲು ಸಾಧ್ಯವಿಲ್ಲವೆಂದು ಅಂದುಕೊಂಡಿದ್ದವರ ಕಣ್ಣ ಮುಂದೆ ಬಹಳ ಆವೇಶದಿಂದ ಮಗ ನಿಂತಿದ್ದಾನೆ. ಒಂದು ಕ್ಷಣ ಅವರಿಗೆ ವಾಸ್ತವವನ್ನು ಅರ್ಥೈಸಲು ಸಾಧ್ಯವಾಗಿರಲಿಲ್ಲ. ಮಗನೇ ಇಲ್ಲಿ ನಿಂತಿರುವವರು ಯಾರೆಂದು ಪ್ರವಾದಿಯವರು ﷺ ಝೈದ್’ನಲ್ಲಿ ಕೇಳಿದಾಗ. ಇದು ನನ್ನ ತಂದೆ ಹಾರಿಸತ್ ಬಿನ್ ಶರಾಹೀಲ್ ಹಾಗೂ ನನ್ನ ಚಿಕ್ಕಪ್ಪ ಕಅಬ್ ಎಂದು ಉತ್ತರಿಸಿದನು. ಮಗನೇ ಇವರು ನಿನ್ನನ್ನು ಮೋಚಿಸಲು ಬಂದಿದ್ದಾರೆ, ಇವರ ಜೊತೆಯಲ್ಲಿ ನೀನು ಹೋಗುತ್ತಿಯೋ.? ಅಥವಾ ಇಲ್ಲೇ ನಮ್ಮ ಜೊತೆಯಲ್ಲಿ ಇರುತ್ತೀಯೋ.? ಮಗನ ಇಷ್ಟದಂತೆ ಮಾಡುತ್ತೇವೆ…اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-34/365

ಅಧಿಕ ಯೋಚಿಸಲು ಏನು ಇಲ್ಲ, ನಾನು ಇಲ್ಲಿಯೇ ಇರುತ್ತೇನೆ ಎಂದು ಝೈದ್ ಪ್ರತಿಕ್ರಿಯೆ ನೀಡಿದನು. ನಾನು ತಮ್ಮನ್ನು ಬಿಟ್ಟು ಎಲ್ಲಿಗೂ ಹೋಗುವುದಿಲ್ಲ. ನನಗೆ ತಂದೆ ತಾಯಿ ಎಲ್ಲವೂ ನೀವೇ ಆಗಿರುತ್ತೀರಿ.
ಈ ಒಂದು ಉತ್ತರವನ್ನು ಊಹಿಸಿಯೂ ಇರದ ಹಾರಿಸ್ ಹಾಗೂ ಅವರ ಸಹೋದರನಿಗೆ ಆಶ್ಚರ್ಯವಾಯಿತು. ಮಗನೇ ಇದೇನು ಹೇಳುತ್ತಿರುವುದು ನೀನು.? ನಿನಗೆ ತಂದೆ, ತಾಯಿ ಇರುವಾಗ ಸೇವಕನಾಗಿ ಜೀವಿಸಲು ಇಷ್ಟ ಪಡುತ್ತಿಯೇ.? ಸ್ವಂತವಾದ ಮನೆ, ಕುಟುಂಬವೆಲ್ಲವೂ ಇರುವಾಗ ಸೇವಕನಾಗಿ ಜೀವಿಸುತ್ತಿಯೇ.? ಇದೆಂಥ ಹೊಸತನ.?

ಹೌದು ಅಪ್ಪ, ಈ ಮಹಾನ್ ವ್ಯಕ್ತಿತ್ವವನ್ನು ಬಿಟ್ಟು ನಾನು ಎಲ್ಲಿಗೂ ಬರುವುದಿಲ್ಲ. ಈ ಮಹಾಪುರುಷರಿಂದ ಭವಿಷ್ಯದಲ್ಲಿ ಕೆಲವೊಂದು ವಿಸ್ಮಯಕ್ಕಾಗಿ ಕಾಯುತ್ತಿದ್ದೇನೆ ಎಂದು ಝೈದ್ ಹೇಳಿದನು.
ಹಾರಿಸಿಗೆ ವಿಷಯ ಅರ್ಥವಾಯಿತು. ಇಷ್ಟೊಂದು ಪ್ರೀತಿಸುವ ವ್ಯಕ್ತಿಯಿಂದ ನಾನು ಹೇಗೆ ಮಗನನ್ನು ದೂರ ಮಾಡಲು ಸಾಧ್ಯ ಎಂದು ಹೇಳಿದರು. ಝೈದಿನ ಭರವಸೆ ಹಾಗೂ ಪ್ರತಿಕ್ರಿಯೆವನ್ನು ಅರ್ಥ ಮಾಡಿಕೊಂಡ ಪ್ರವಾದಿಯವರು ﷺ ಝೈದಿನ ಕೈ ಹಿಡಿದು ನೇರವಾಗಿ ಕಅಬಾದ ಬಳಿ ತೆರಳಿದರು. ಹಾರಿಸ್ ಹಾಗೂ ಕಅಬ್ ಕೂಡ ಅವರ ಹಿಂದೆ ತೆರಳಿದರು. ಖುರೈಶಿಗಳ ಸಾನಿಧ್ಯದಲ್ಲಿ ಮುತ್ತು ಹಬೀಬರು ﷺ ಹೀಗೆ ಘೋಷಿಸಿದರು. “ಪ್ರೀತಿಯ ಜನಗಳೇ, ಖುರೈಶಿ ನಾಯಕರೇ ಇವನು ಝೈದ್, ಹಾರಿಸಿನ ಮಗ, ಇವನನ್ನು ನಾನು ದತ್ತು ಪುತ್ರನಾಗಿ ಸ್ವೀಕರಿಸುತ್ತಿದ್ದೇನೆ.” ನನ್ನ ಅನುವಂಶಿಕ ಆಸ್ತಿಯಲ್ಲಿ ಅವನಿಗೂ, ಅವನ ಅನುವಂಶಿಕ ಆಸ್ತಿಯಲ್ಲಿ ನನಗೂ ಅವಕಾಶವಿದೆ. ಆ ಕಾಲದಲ್ಲಿ ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದದ್ದು ಕಅಬಾದ ಪರಿಸರದಲ್ಲಾಗಿತ್ತು. ಮಕ್ಕಾದ ಗಣ್ಯ ವ್ಯಕ್ತಿಗಳು ಜೊತೆ ಸೇರುವುದು, ಇತರ ಮಾತುಕತೆ ನಡೆಸುತ್ತಿದ್ದದ್ದೂ ಕೂಡ ಕಅಬಾದ ಪರಿಸರದಲ್ಲಾಗಿತ್ತು.

ಹಾರಿಸ್ ಹಾಗೂ ಕಅಬ್’ಗೆ ಈಗ ಸಮಾಧಾನವಾಯಿತು. ಝೈದ್ ಈಗ ಸೇವಕನಲ್ಲ ಬದಲಾಗಿ ‘ಅಲ್ ಅಮೀನರ’ ಮಗನಾಗಿದ್ದಾನೆ. ಏನೇ ಆದರೂ ಮಗನನ್ನು ಮಕ್ಕದಿಂದ ದೂರ ಮಾಡಲು ಸಾಧ್ಯವಿಲ್ಲ, ಅವರಿಬ್ಬರ ನಡುವಿನ ಅಘಾದವಾದ ಪ್ರೀತಿಯನ್ನು ಅರ್ಥಮಾಡಿದರು. ಮಗನನ್ನು ಮಕ್ಕಾದಲ್ಲಿ ಬಿಟ್ಟು ಅವರು ಊರಿಗೆ ಮರಳಲು ತೀರ್ಮಾನಿಸಿದಾಗ ಪ್ರವಾದಿಯವರು ﷺ ಅವರನ್ನು ಕಳುಹಿಸಿದರು. ಮಗನನ್ನು ಜೊತೆಯಲ್ಲಿ ಕೊಂಡೋಗಳು ಸಾದ್ಯವಾಗದಿದ್ದರೂ ಏನೋ ಒಂದು ಸಮಾಧಾನದಿಂದಾಗಿತ್ತು ಮರಳಿದ್ದು. ಕುಟುಂಬಸ್ಥರಲ್ಲಿ ಎಲ್ಲಾ ವಿವರವನ್ನು ತಿಳಿಸಿದರು. ಕೇಳಿದವರೂ ಅಧಿಕವೇನು ಪ್ರತಿಕ್ರಿಯೆ ನೀಡಲಿಲ್ಲ. ನಂತರದ ದಿನಗಳಲ್ಲಿ ಅವರು ಆಗಾಗ ಮಕ್ಕಾ ನಗರಕ್ಕೆ ಕುಟುಂಬಸ್ಥರೊಂದಿಗೆ ಬಂದು ಮಗನನ್ನು ಭೇಟಿಯಾಗಿ ಹೋಗುತ್ತಿದ್ದರು.
ಝೈದ್ ಪ್ರವಾದಿಯವರು ﷺ ಆಶ್ರಯದಲ್ಲಿ ಬೆಳೆಯ ತೊಡಗಿದರು. ಪ್ರವಾದಿಯವರ ﷺ ಜೀವನದಲ್ಲಿದ್ದ ಪ್ರಗತಿಗಳ ಜೊತೆಯಲ್ಲಿ ಝೈದ್ ಕೂಡ ಒಂದೊಂದೇ ಮೆಟ್ಟಿಲು ಹತ್ತಿದರು. ಅಂತ್ಯ ಪ್ರವಾದಿಯವರನ್ನು ﷺ ಅಖಾಡದಲ್ಲೂ, ಅಡುಗೆಮನೆಯಲ್ಲೂ, ತಿಳಿಯಲು ಭಾಗ್ಯ ಲಭಿಸಿದ ವ್ಯಕ್ತಿಯಾಗಿ ಇತಿಹಾಸದಲ್ಲಿ ಝೈದ್ ಅರಿಯಲ್ಪಟ್ಟರು.

ಪ್ರವಾದಿಯವರ ﷺ ಪ್ರಬೋಧನೆಯ ಆರಂಭದಲ್ಲಿಯೇ ಇಸ್ಲಾಮ್ ಸ್ವೀಕರಿಸಿದ್ದರು, ತಂದೆ ಹಾರಿಸ್ ಕೂಡ ಇಸ್ಲಾಂ ಸ್ವೀಕರಿಸಿದರು. ನಂತರ ಪ್ರವಾದಿಯವರ ﷺ ನೆರಳಿನ ಹಾಗೆ ಪ್ರವಾದಿಯವರ ﷺ ಜೊತೆಯಾಗಿ ಸಂಚರಿಸುವ ಭಾಗ್ಯ ಪಡೆದುಕೊಂಡರು. ಪವಿತ್ರ ಕುರ್’ಆನಿನಲ್ಲಿ ಹೆಸರು ಉಚ್ಚರಿಸಲ್ಪಟ್ಟ ಏಕೈಕ ಸ್ವಹಾಬಿ (ಪ್ರವಾದಿಯ ﷺ ಅನುಚರರು) ಎನ್ನುವ ಸ್ಥಾನವನ್ನು ಪಡೆದರು.
ಪ್ರವಾದಿತ್ವದ ಘೋಷಣೆಯ ಮುಂಚೆ ಹಾಗೂ ನಂತರವೂ ಪ್ರವಾದಿಯವರ ﷺ ಜೊತೆಯಲ್ಲಿದ್ದ ಅಪರೂಪದ ವ್ಯಕ್ತಿಯಾಗಿದ್ದರು ಝೈದ್. ಪ್ರವಾದಿಯವರ ﷺ ಸ್ವಭಾವ, ವರ್ತನೆ, ಜೀವನ ಹಾಗೂ ಮುಂತಾದ ವೈಯುಕ್ತಿಕ ವಿಷಯಗಳನ್ನು ತಿಳಿಯಲು ಅವಕಾಶ ಲಭಿಸಿದ ಕೆಲವೇ ಕೆಲವು ವ್ಯಕ್ತಿಗಳಲ್ಲೊಬ್ಬರು ಕೂಡ ಆಗಿದ್ದರು.
ಕೆಲವೊಂದು ಸಂದರ್ಭಗಳಲ್ಲಿ, ಪ್ರವಾದಿಯವರ ﷺ ಜೀವನದ ಬಹಳ ಮುಖ್ಯವಾದ ಪರೀಕ್ಷೆಗಳ ದಿನಗಳಲ್ಲಿ ಝೈದ್ (ರ) ಸಾಕ್ಷಿಯಾಗಿರುತ್ತಿದ್ದರು.

ಪ್ರವಾದಿಯವರ ﷺ ಮುಂದಿನ ಇತಿಹಾಸದಲ್ಲಿ ಈ ಸ್ವಹಾಬಿಯವರು ಆಗಮಿಸಲಿದ್ದಾರೆ. ಕುಟುಂಬ ಜೀವನದಲ್ಲಿಯೂ, ರಣ ರಂಗದಲ್ಲಿಯೂ, ಝೈದ್ (ರ) ಜೊತೆಯಲ್ಲಿರುತ್ತಿದ್ದರು.
ಝೈದ್ ಎಲ್ಲಿಗೆ ತಲುಪಿದರೆಂದು ನಂತರ ನಾವು ತಿಳಿಯೋಣ. ಇನ್ನೂ ಪ್ರವಾದಿಯವರ ﷺ ಮಧ್ಯಸ್ಥಿಕೆಯ ಇನ್ನೊಂದು ಅಧ್ಯಾಯಕ್ಕೆ ಹೋಗಲಿದ್ದೇವೆ…

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-35/365

ಪ್ರವಾದಿಯವರು ﷺ ಎಲ್ಲರೂ ಅಂಗೀಕರಿಸುವ ರೀತಿಯಲ್ಲಿ ಮಕ್ಕಾ ನಗರದಲ್ಲಿ ತಮ್ಮ ಯವ್ವನವನ್ನು ಕಳೆದರು. ಸರ್ವರೆಡೆಯಲ್ಲಿ ಮಾನ್ಯತೆ ಲಭಿಸುವ ಬಹಳಷ್ಟು ಘಟನೆಗಳು ನಡೆಯಿತು. ಅದರಲ್ಲಿ ಪ್ರಮುಖ ಘಟನೆಯಾಗಿತ್ತು ಕಅಬಾದ ನವೀಕರಣ ಸಂದರ್ಭದಲ್ಲಿ ಉಂಟಾದ ಘಟನೆ.
ಕಅಬಾದ ಪರಿಸರದಲ್ಲಿ ಒಬ್ಬರು ಮಹಿಳೆ ಆಹಾರ ತಯಾರಿಸಲೆಂದೋ ಅಥವಾ ಇನ್ಯಾವುದೋ ವಿಷಯಕ್ಕೋ ಬೆಂಕಿ ಹಚ್ಚಿದ್ದರು. ಅದರ ಕಿಚ್ಚು ಕಅಬಾಲಯಕ್ಕೆ ಹಾರಿ ಬೆಂಕಿ ಹಿಡಿದು ಬಹಳಷ್ಟು ಹಾನಿಯಾಗಿತ್ತು. ಇನ್ನು ಕಅಬಲಾಯವನ್ನು ಪುನರ್’ನಿರ್ಮಾಣ ಮಾಡದೆ ಮುಂದೆ ಸಾಗಲು ಎಂದಿಗೂ ಸಾಧ್ಯವಿಲ್ಲ ಎನ್ನುವ ಪರಿಸ್ಥಿತಿಗೆ ತಲುಪಿತು. ತಕ್ಷಣದ ನವೀಕರಣಕ್ಕೆ ಇತರ ಬೇರೆ ಎರಡು ಕಾರಣಗಳಿತ್ತೆಂದು ಇತಿಹಾಸಕಾರರು ಉಲ್ಲೇಖಿಸಿದ್ದಾರೆ.

ಒಂದು; ಒಮ್ಮೆ ಬಲವಾದ ಪ್ರವಾಹ ಬಂದ ಕಾರಣ ಕಅಬಾಲಯಕ್ಕೆ ಹಾನಿಯುಂಟಾಗಿತ್ತು. ಬೆಟ್ಟಗಳಿಂದ ಆವೃತವಾದ ಪ್ರದೇಶದಲ್ಲಿ ಕಅಬಾಲಯವಿರೂದರಿಂದ ಪರ್ವತಗಳಿಂದ ಇಳಿದು ಬಂದ ನೀರು ಕಅಬಾದ ಗೋಡೆಯನ್ನು ಬಹಳಷ್ಟು ಹಾನಿಗೊಳಿಸಿತ್ತು. ಎರಡು, ಕಅಬಾದೊಳಗೆ ಮಾಡಿದ ದರೋಡೆ. ಕಾಬಾದೊಳಗಿದ್ದ ಅನೇಕ ಬೆಲೆಬಾಳುವ ವಸ್ತುಗಳನ್ನು ಕಳ್ಳರು ದರೋಡೆ ಮಾಡಿದ್ದರು. ಕಾಬಾದ ಒಳಗಿನ ಬಾವಿಯಲ್ಲಿ ಇರಿಸಲಾಗಿದ್ದ ಜಿಂಕೆಗಳ ರೂಪದ ಎರಡು ಚಿನ್ನದ ಶಿಲ್ಪಗಳು ಹಾಗೂ ಇತರ ಅತ್ಯಮೂಲ್ಯ ರತ್ನಗಳು ಖುಸಾಅ ಜನಾಂಗದ ದುವೈಕ್’ನ ಮನೆಯಲ್ಲಿ ಸಿಕ್ಕಿತ್ತು. ಯಾರೋ ಕಳ್ಳರು ತನ್ನ ಸ್ಥಳದಲ್ಲಿ ಹಾಕಿ ಹೋಗಿರುವುದೆಂದು ವಾದಿಸಿದರು. ಆದರೆ ಸಮಗ್ರವಾಗಿ ತನಿಖೆ ನಡೆದ ನಂತರ ಅವರೇ ಆಗಿರುತ್ತಾರೆ ಕಳ್ಳತನ ಮಾಡಿದ್ದೆಂದು ಸಾಬಿತಾಗಿ, ಅವರ ಕೈಯನ್ನು ಕತ್ತರಿಸಿ ಶಿಕ್ಷೆ ವಿಧಿಸಲಾಯಿತು. ಭವಿಷ್ಯದಲ್ಲಿ ಇಂತಹ ದುಷ್’ಕೃತ್ಯ ನಡೆಯಬಾರದೆಂಬ ಉದ್ದೇಶದಿಂದ ಕಅಬಾದ ನವೀಕರಣ ಅನಿವಾರ್ಯವಾಯಿತು.

ಈ ಶುಭಾ ಕಾರ್ಯದ ಮುಹೂರ್ತವೂ ಕೂಡ ಬಂದೇ ಬಿಟ್ಟಿತು . ಆ ಸಮಯದಲ್ಲಿ ರೋಮ್ ಚಕ್ರವರ್ತಿಯ ಹಡಗೊಂದು ಸಮುದ್ರದಲ್ಲಿ ಚಲಿಸುತ್ತಿತ್ತು. ಅದರಲ್ಲಿ ಸಂಪೂರ್ಣವಾಗಿ ಕಟ್ಟಡ ನಿರ್ಮಾಣಕ್ಕೆ ಅವಶ್ಯವಿರುವ ವಸ್ತುಗಳಿದ್ದವು. ಕಲ್ಲು, ಮರ, ಕಬ್ಬಿಣ ಹೀಗೆ ಮುಂತಾದ ವಸ್ತುಗಳಿಂದ ತುಂಬಿ ಕೊಂಡಿದ್ದ ಹಡಗು ಯುಥೋಪಿಯಕ್ಕಾಗಿತ್ತು ಯಾತ್ರೆ ಹೊರಡಿದ್ದದ್ದು. ಜಿದ್ದಾದ ಬಳಿ ತಲುಪಿದಾಗ ಬಲವಾದ ಬಿರುಗಾಳಿಗೆ ಸಿಲುಕಿ ಜಿದ್ದಾ ಬಂದರಿನಲ್ಲಿ ಹಡಗನ್ನು ನಿಲ್ಲಿಸಬೇಕಾಯಿತು. ಹಡಗಿನಲ್ಲಿ ಇತರ ಸಾಮಗ್ರಿಗಳ ಜೊತೆಯಲ್ಲಿ ಶಿಲ್ಪಿಯೂ ಕೂಡ ಇದ್ದರು.

ಹಡಗು ಹಾಗೂ ವಸ್ತುಗಳು ಜಿದ್ದಾ ಪಟ್ಟಣಕ್ಕೆ ತಲುಪಿದ ವಿವರವು ಖುರೈಶಿಗಳಿಗೂ ತಲುಪಿತು. ಅವಕಾಶವನ್ನು ಸದುಪಯೋಗಗೊಳಿಸೋಣ ಎನ್ನುವ ಉದ್ದೇಶದಿಂದ ವಲೀದ್ ಬಿನ್ ಅಲ್’ಮುಗೀರರ ನಾಯಕತ್ವದ ಒಂದು ಗುಂಪು ಜಿದ್ದಾ ನಗರಕ್ಕೆ ತೆರಳಿ, ಹಡಗಿನ ಮೇಲ್ವಿಚಾರಕರನ್ನು ಭೇಟಿಯಾದರು. ಕಟ್ಟಿ ಹಾಕಿದ ಸಾಮಗ್ರಿಗಳನ್ನು ಖರೀದಿಸುವ ಯೋಚನೆಯನ್ನು ವ್ಯಕ್ತಪಡಿಸಿದರು. ಶಿಲ್ಪಿ ಬಾಖಿಮನ ಕೂಡ ಮೇಲ್ವಿಚಾರಣೆಯ ಭರವಸೆಯನ್ನು ನೀಡಿದರು.
ನವೀಕರಣದ ಎಲ್ಲಾ ಸಂದರ್ಭಗಳೂ ಒಟ್ಟು ಸೇರಿವೆ. ಇನ್ನೂ ತಕ್ಷಣವೇ ಕಾಮಗಾರಿ ಆರಂಭಿಸಬೇಕು. ಆದರೆ ಪುನಃ ನಿರ್ಮಿಸಲು ಇರುವುದನ್ನು ಕೆಡವಿ ಹಾಕಬೇಕು. ಆದರೆ ಯಾರಿಗೂ ಧೈರ್ಯ ಬರುತ್ತಿಲ್ಲ. ಕೊನೆಗೆ ಕಅಬಾಲದ ಒಂದು ಕಲ್ಲನ್ನು ತೆಗೆದರು, ಈ ಕಲ್ಲು ತೆಗೆದ ವ್ಯಕ್ತಿಗೆ ಏನಾದರೂ ಅನಾಹುತ ಸಂಭವಿಸಬಹುದೇ ಎಂದು ತಿಳಿಯಲು ಮೂರು ದಿನ ಕಾದು ನೋಡಿದರು. ಏನು ಸಂಭವಿಸಿದಿದ್ದಾಗ ಅದನ್ನು ಶುಭ ಲಕ್ಷಣವಾಗಿ ಕಂಡು ಹಳೆಯ ಕಟ್ಟಡವನ್ನು ಕೆಡವಿ ಹಾಕಲು ತೀರ್ಮಾನಿಸಿದರು.

ವಲೀದ್ ಬಿನ್ ಮುಗೀರ, ಆಯಿದ್ ಬಿನ್ ಅಂರ್ ಅಲ್ ಮಖ್ಸೂಮಿ ಎಂಬವರ ನಾಯಕತ್ವದಲ್ಲಿ ಪ್ರಾರ್ಥನೆಯನ್ನೂ, ಸೇವೆಯನ್ನು ನೀಡಿದರು. ಅದರ ನಡುವೆ ಒಂದು ಘಟನೆ ನಡೆಯಿತು. ಆಯಿದ್ ಒಂದು ಕಲ್ಲು ತೆಗೆದ ತಕ್ಷಣವೇ ಆ ಕಲ್ಲು ಕೈಯಿಂದ ತಪ್ಪಿ ಪುನಃ ಪೂರ್ವ ಸ್ಥಾನಕ್ಕೆ ಹೋಗಿ ನಿಲ್ಲುತಿತ್ತು. ಇದರ ಕುರಿತು ಆಳವಾಗಿ ಯೋಚಿಸಿದಾಗ ಸಂಶುದ್ಧವಾದ ಸಂಪತ್ತನ್ನು ಮಾತ್ರವೇ ಬಳಸಬೇಕು ಎಂದಾಗಿತ್ತು ಅದರ ರಹಸ್ಯ. ಅವರು ಸಂಶುದ್ಧವಾದ ಸಂಪತ್ತನ್ನು ಮಾತ್ರವೇ ನಾವು ಬಳಸುತ್ತೇವೆ, ಕಳ್ಳತನ, ವ್ಯಭಿಚಾರ ಅಥವಾ ಜೂಜಾಟದ ಮೂಲಕ ಸಂಪಾದಿಸಿದಂತಹ ಯಾವುದೇ ಆಸ್ತಿಯನ್ನು ಬಳಸದಿರಲು ನಿರ್ಧರಿಸಿದ್ದೇವೆ ಎಂದು ಘೋಷಿಸಿದರು. ತೀರ್ಮಾನಿಸಿದ ಪ್ರಕಾರ ಪ್ರವಾದಿ ಇಬ್ರಾಹಿಂ (ಅ) ನಿರ್ಮಿಸಿದಷ್ಟು ನೆಲಮಳಿಗೆಯವರೆಗೆ ನಿರ್ಮಿಸಲು ಖುರೈಷಿಗಳ ಬಳಿ ಪವಿತ್ರ ಸಂಪತ್ತಿರಲಿಲ್ಲ. ಆದ್ದರಿಂದ, ಕಾಬಾದ ಉತ್ತರ ಭಾಗದಲ್ಲಿರುವ ಅರ್ಧವೃತ್ತಾಕಾರದ ಪ್ರದೇಶವನ್ನು ಅಡಿಪಾಯ ಮಾತ್ರ ಹಾಕಿ ಉಳಿಸಿಕೊಳ್ಳಬೇಕಾಗಿ ಬಂದಿತು.

ಕಅಬಾಲಯದ ನಿರ್ಮಾಣ ಬಹಳ ತ್ವರಿತವಾಗಿ ನಡೆಯಿತು. ಒಂದೊಂದು ಭಾಗವನ್ನು ಒಂದೊಂದು ಕುಟುಂಬದ ಉಸ್ತುವಾರಿಯೊಂದಿಗೆಯಾಗಿತ್ತು ನಿರ್ಮಾಣ ಕಾರ್ಯಗಳನ್ನು ಏರ್ಪಡಿಸಿದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-36/365

ಅದೇ ಪ್ರಕಾರ ಕಅಬಾದ ಬಾಗಿಲು ಸಂಬಂಧಿಸಿದ ಭಾಗಗಳು ಬನೂಸಹ್’ರ, ಬನೂ ಅಬ್ದುಮನಾಫ್ ಕುಟುಂಬಕ್ಕಾಗಿತ್ತು. ಪ್ರವಾದಿಯವರ ﷺ ಶ್ರಮದಾನವು ಈ ಭಾಗದ ನಿರ್ಮಾಣದಲ್ಲಾಗಿತ್ತು. ಹಜರುಲ್ ಅಸ್’ವದ್ ಶಿಲೆಯಿಂದ ರುಕ್’ನುಲ್ ಯಮಾನಿವರೆಗಿನ ಭಾಗ ಮಖ್’ಸೂಮ್ ಕುಟುಂಬಕ್ಕೂ, ಅದರ ಉಪ ವಿಭಾಗಕ್ಕಾಗಿತ್ತು. ಕಅಬಾದ ಮೇಲ್ಮೈ ನಿರ್ಮಾಣದ ಉಸ್ತುವಾರಿತ್ವ ಬೂಸಹಮ್ ಬನೂ ಜುಮಹ್ ಎಂಬವರಿಗಾಗಿತ್ತು. ಬನೂ ಅಬ್’ದುದ್ದಾರ್, ಬನೂಉಸ್ಸ, ಬನೂ ಅಸದ್, ಬನೂ ಅದಿಯ್ಯ್ ಎಂಬವರಿಗೆ ಹಜರುಲ್ ಅಸ್’ವದ್ ಭಾಗದ ನಿರ್ಮಾಣದ ಉಸ್ತುವಾರಿತ್ವವಾಗಿತ್ತು.

ನಿರ್ಮಾಣ ಕಾರ್ಯವು ಸಂಪೂರ್ಣವಾಯಿತು. ರೋಮನ್ ಶಿಲ್ಪಿ ಬಾಖುಮಿನ ಹಾಗೂ, ಕೋಪ್’ಡಿಕ್ ವಂಶಸ್ಥರಾದ ಬಡಗಿಯೊಬ್ಬರ ಮೇಲ್’ನೋಟದಲ್ಲಾಗಿತ್ತು ನಿರ್ಮಾಣ ಕಾರ್ಯವೆಲ್ಲವೂ ನಡೆದದ್ದು. ಕಅಬಾದಿಂದ ಸ್ವಲ್ಪ ದೂರವಿರುವ ಪರ್ವತದ ಕಲ್ಲಿನಿಂದಾಗಿತ್ತು ಕಅಬಾಲಯದ ಗೋಡೆಗಳಿಂದ ನಿರ್ಮಿಸಿದ್ದು. ನಂತರದ ಕಾಲದಲ್ಲಿ ಆ ಪರ್ವತವನ್ನು ‘ಜಬಲ್ ಕಅಬ’ ಎಂದು ಹೆಸರಿನಿಂದ ಕರೆಯತೊಡಗಿದರು. ಇಲ್ಲಿ ಪ್ರವಾದಿಯವರ ﷺ ಮುಖ್ಯ ಪಾತ್ರ ಕಲ್ಲು ಹೊತ್ತು ಕೊಂಡು ಹೋಗುವುದಾಗಿತ್ತು. ಈ ಸಂದರ್ಭದಲ್ಲಾಗಿತ್ತು ಬಟ್ಟೆ ಮಡಚಿ ಹೆಗಲ ಮೇಲಿಟ್ಟು ಕಲ್ಲು ಕೊಂಡು ಹೋದ ಘಟನೆ ನಡೆದದ್ದು. ಕಅಬಾದ ನಿರ್ಮಾಣ ಪೂರ್ತಿಯಾದ ನಂತರ ಒಂದು ವಿವಾದ ನಿರ್ಮಾಣವಾಯಿತು. ಕಅಬಾದ ಆಗ್ನೇಯ ಭಾಗದಲ್ಲಿದ್ದ ಕಪ್ಪು ಶಿಲೆ ಅಥವಾ ಹಜರುಲ್ ಅಸ್’ವದ್ ಶಿಲೆಯನ್ನು ಪುನಃ ಪ್ರತಿಷ್ಠಾಪನೆಯ ಕುರಿತಾಗಿತ್ತು ವಿವಾದ. ಪರಿಶುದ್ಧವಾದ ಸ್ವರ್ಗದ ಶಿಲೆಯನ್ನು ಪುನಃ ಪ್ರತಿಷ್ಠಾಪಿಸುವುದು ಎಲ್ಲರಿಗೂ ಅಭಿಮಾನದ ವಿಷಯವಾಗಿತ್ತು. ಪ್ರತಿ ವಿಭಾಗವು ಈ ವಿಷಯವಾಗಿ ತಮ್ಮ ಹಕ್ಕುಗಳನ್ನು ಹೇಳ ತೊಡಗಿದರು. ಬನೂ ಅಬ್’ದುದಾರ್ ಒಂದು ತಟ್ಟೆಯಲ್ಲಿ ಗಣ್ಯರ ರಕ್ತವನ್ನು ಶೇಖರಿಸಿ ಅದರಲ್ಲಿ ಕೈ ಮುಳುಗಿಸಿ ನಾವೇ ಈ ಪವಿತ್ರ ಶಿಲೆಯನ್ನು ಪ್ರತಿಷ್ಠಾಪನೆ ನಡೆಸುತ್ತೇವೆ ಎಂದು ಘೋಷಣೆ ಮಾಡಿದರು. ಬನೂ ಅದಿಯ್ಯ್ ಬಿನ್ ಕಅಬ್ ಕೂಡ ಅದೇ ರೀತಿಯಲ್ಲಿ ಘೋಷಣೆ ಮಾಡಿದಾಗ ಸಮಸ್ಯೆ ಇನ್ನಷ್ಟು ಗಂಭೀರವಾಯಿತು. ಖುರೈಶಿ ಗಣ್ಯರೆಲ್ಲರೂ ಪರಿಹಾರಕ್ಕಾಗಿ ಕಅಬಾದ ಪರಿಸರದಲ್ಲಿ ಕುಳಿತು ಸಭೆ ಸೇರಿದರು, ಖುರೈಷಿಗಳ ಹಿರಿಯ ನಾಯಕರಾದ ಅಬೂ ಉಮಯ್ಯ ಮುಗೀರ ಬಿನ್ ಅಲ್ ಮಖ್’ಸೂಮರನ್ನು ತೀರ್ಮಾನಕ್ಕಾಗಿ ನಿಯೋಗಿಸಲಾಯಿತು. ಓ ಖುರೈಶಿಗಳೇ ಸಮಸ್ಯೆಗೆ ನಾನೊಂದು ಪರಿಹಾರ ಸೂಚಿಸುತ್ತೇನೆ. ಇನ್ನು ಪ್ರಥಮವಾಗಿ ಯಾರು ಕಅಬಾದ ಸಮೀಪದಿಂದ ಹಾದು ಬರುತ್ತಾರೋ ಅವರಿಗೆ ಜವಾಬ್ದಾರಿ ವಹಿಸೋಣ, ಅವರೇ ಹಜರುಲ್ ಅಸ್’ವದ್ ಪುನಃ ಪ್ರತಿಷ್ಠಾಪನೆ ಮಾಡಲಿ. ಬರುವವರು ಯಾರೇ ಆದರೂ ಸರಿ ಎಂದು ಅವರು ಘೋಷಣೆ ಮಾಡಿದರು. ಎಲ್ಲರೂ ಈ ತೀರ್ಮಾನಕ್ಕೆ ಸಮ್ಮತಿ ನೀಡಿದರು.

ಎಲ್ಲರೂ ಬಹಳ ನಿರೀಕ್ಷೆಯಿಂದ ಕಾಯುತ್ತಾ ಕುಳಿತರು. ಯಾರಾಗಿರಬಹುದು ಪ್ರಥಮವಾಗಿ ಬರುವ ವ್ಯಕ್ತಿ ಎಂದು ಯೋಚಿಸುತ್ತಿರುವಾಗ ಒಬ್ಬರು ಒಳಗೆ ಬಂದೇ ಬಿಟ್ಟರು. ಅವರನ್ನು ನೋಡಿ ಎಲ್ಲಾರೂ ಒಂದೇ ಶಬ್ದದಲ್ಲಿ ಹಾದಾ ‘ಅಲ್ ಅಮೀನ್’ ಎಂದು ಕೋಗಿ ಹೇಳಿದರು. ಈ ಬರುತ್ತಿರುವ ವ್ಯಕ್ತಿ ಅಲ್ ಅಮೀನ್ ಅಥವಾ ಮುಹಮ್ಮದ್ ﷺ ಆಗಿದ್ದಾರೆ, ನಮಗೆಲ್ಲರಿಗೂ ಸಮ್ಮತಿಯಿದೆಯೆಂದು ಹೇಳಿದರು.
ಊರಿನ ಜನತೆಯ ಚರ್ಚೆಯಲ್ಲೋ, ಸಭೆಯಲೋ ಪ್ರವಾದಿಯವರು ﷺ ಉಪಸ್ಥಿತರಾಗಿರಲಿಲ್ಲ. ಅವರು ಬಹಳ ವಿನಮ್ರತೆಯಿಂದ ಜನರ ಬಳಿ ಬಂದು ನಿಂತರು. “ಹಜರುಲ್ ಅಸ್’ವದ್ ಪುನಃ ಪ್ರತಿಷ್ಠಾಪನೆಯ ವಿಷಯದಲ್ಲಿ ತೀರ್ಮಾನ ತೆಗೆಯಲು ನಾವು ನಿಮ್ಮನ್ನು ನಿಯೋಗಿಸಿದ್ದೇವೆ” ಎಂದು ಅವರು ತೆಗೆದುಕೊಂಡ ತೀರ್ಮಾನವನ್ನು ಪ್ರವಾದಿಯವರಿಗೆ ﷺ ತಿಳಿಸಿದರು. ಪ್ರವಾದಿಯವರು ﷺ ಬಹಳ ವಿನಮ್ರತೆಯಿಂದಲೇ ಅಧಿಕ ಯೋಚಿಸದೆ ಸಮಸ್ಯೆಗೆ ಪರಿಹಾರ ಈ ರೀತಿ ನೀಡಿದರು. ನೀವು ಅಗಲವಾದ ಬಟ್ಟೆ ತನ್ನಿರಿ, ಎಂದು ಹೇಳಿದಾಗ ಅವರು ತಂದರು, ಅದರ ಮೇಲೆ ಶಿಲೆಯನ್ನು ಇಟ್ಟು ಎಲ್ಲಾ ಜನಾಂಗದ ಹಿರಿಯ ನಾಯಕರನ್ನು ಕರೆದರು. ಒಂದೊಂದು ಭಾಗವನ್ನು ಹಿಡಿದು ಒಟ್ಟಾಗಿ ಎತ್ತಿ ಪ್ರತಿಷ್ಠಾಪನೆ ಮಾಡಬೇಕಾದ ಸ್ಥಳದಲ್ಲಿ ಕೊಂಡೋಗಿ ಇಟ್ಟರು. ಎಲ್ಲರಿಗೂ ಪ್ರತಿಷ್ಠಾಪಿಸಲು ಅವಕಾಶ ಲಭಿಸಿದ ಕಾರಣಕ್ಕೆ ಬಹಳಷ್ಟು ಸಂತೋಷವಾಗಿತ್ತು. ಪ್ರವಾದಿಯವರು ﷺ ಬಹಳ ಯುಕ್ತಿಯಿಂದ ತೆಗೆದ ಪಕ್ವತೆಯ ತೀರ್ಮಾನದ ಮೇಲೆ ಎಲ್ಲರಿಗೂ ಅಭಿಮಾನವಾಗಿತ್ತು. ಪ್ರಸ್ತುತ ಘಟನೆಗೆ ಸಾಕ್ಷಿಯಾಗಿದ್ದ ಮಹಾಕವಿ ಹುಬೈರ ಬಿನ್ ಅಬೀ ವಹಾಬ್ ಈ ರೀತಿ ಹಾಡಿದರು.

“ತಶಾಜರತಿಲ್ ಅಹಿಯಾಉ ಫೀ ಫಸ್ಸಿ ಖುತ್ತಾತಿ……..
ಯರೂಹು ಬಿಹಾ ರಕಬುಲ್ ಇರಾಖಿ ವ ಯಗ್’ತದೀ”
ಹನ್ನೊಂದು ಸಾಲುಗಳ ಈ ಕವಿತೆಯು ಸಂಪೂರ್ಣವಾಗಿ ಪುಣ್ಯ ಪ್ರವಾದಿಯವರ ﷺ ಮಹತ್ವವನ್ನು, ಈ ಘಟನೆಯನ್ನು ಉದ್ದೇಶಿಸಿ ಆಗಿತ್ತು.

Mahabba Campaign Part-37/365

ಪ್ರವಾದಿಯವರು ﷺ ಎಲ್ಲರ ನಡುವೆ ಬಹಳ ಉನ್ನತ ಸ್ಥಾನಕ್ಕೆ ತಲುಪುತ್ತಿದ್ದರು. ಅದೇ ಸಮಯದಲ್ಲಿ ಪ್ರಪಂಚದ ಇತರ ಭಾಗಗಳಿಂದಲೂ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ಕುರಿತು ಚರ್ಚೆಗಳು ಅಧಿಕಗೊಳ್ಳುತ್ತಿದ್ದವು. ಇಡೀ ಜಗತ್ತೇ ಒಳಿತನ್ನು ಬೋಧಿಸುವ ಪ್ರವಾದಿಯವರಿಗಾಗಿ ﷺ ಕಾಯುತ್ತಿದ್ದವು. ಕತ್ತಲು ತುಂಬಿದ ವಾತಾವರಣದಿಂದ ಬೆಳಕಿನೆಡೆಗೆ ತೆರಳಲು ಕಾಲವು ಯಾಚಿಸುತ್ತಿದ್ದವು.
ಇದೆಲ್ಲವೂ ಜೊತೆ ಸೇರುವಾಗ ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರನ್ನು ಮುಹಮ್ಮದರಿಂದ ﷺ ಗುರುತಿಸುವ ಕೆಲವೊಂದು ಘಟನೆಗಳನ್ನು ತಿಳಿಯೋಣ.

ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರ ﷺ ಕುರಿತಿರುವ ಚರ್ಚೆಗಳು, ವೇದ ಜ್ಞಾನಿಗಳ ನಡುವೆ ಬಹಳಷ್ಟು ನಡೆಯತೊಡಗಿತು. ಜೊತೆಯಲ್ಲಿ ಜ್ಯೋತಿಷ್ಯರು, ಪಂಡಿತರು ಕೂಡ ಹೇಳ ತೊಡಗಿದ್ದರು. ಅಂದು ಮಕ್ಕಾದಲ್ಲಿ ಜೀವಿಸಿದ್ದ ತತ್ವಜ್ಞಾನಿಗಳು ಅನ್ವೇಷಣೆ ನಡೆಸಿದ್ದರು. ಹೀಗಿರುವಾಗ ಮಕ್ಕಾದಲ್ಲಿ ಒಂದು ಉತ್ಸವಕಾಲ ಆರಂಭವಾಯಿತು. ಎಲ್ಲಾ ವರ್ಷವು ಆಚರಿಸಿಕೊಂಡು ಬರುತ್ತಿರುವ ‘ಬುವಾನ’ ಎಂಬ ಮೂರ್ತಿಯ ಉತ್ಸವವಾಗಿತ್ತದು. ಮಕ್ಕಾ ನಿವಾಸಿಗಳೆಲ್ಲರೂ ಸೇರಿ, ಬಲಿ ಕೊಟ್ಟು, ಅರ್ಚನೆಗಳು ನಡೆಸಿ, ಉತ್ಸವ ಆಚರಿಸುತ್ತಿದ್ದರು. ಇದರೆಡೆಯಲ್ಲಿ ನಾಲ್ಕು ಜನರು ಬಹಳ ಗಂಭೀರವಾಗಿ ಚರ್ಚೆ ಮಾಡಲು ಆರಂಭಿಸಿದರು. ಅವರು ನಡೆಸಿದ ಚರ್ಚೆ ಹಾಗೂ ತೀರ್ಮಾನಗಳು ಬಹಳ ರಹಸ್ಯವಾಗಿರಬೇಕೆಂದು ಅಂದುಕೊಂಡರು. ನಮ್ಮ ಜನರು ಈಗ ಮಾಡುತ್ತಿರುವ ಆದರ್ಶ ಹಾಗೂ ಆಚರಣೆಗಳನ್ನು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ. ಪೂರ್ವಿಕರೂ, ಪ್ರವಾದಿಯೂ ಆಗಿದ್ದ ಇಬ್ರಾಹಿಂ’ರು (ಅ) ತೋರಿಸಿದ ಆದರ್ಶಕ್ಕಿಂತ ವಿಭಿನ್ನವಾಗಿಯಾಗಿದೆ ಜನರು ಸಂಚರಿಸುತ್ತಿರುವುದು. ಯಾವುದೇ ಉಪಕಾರವಾಗಲಿ, ತೊಂದರೆಯಾಗಲಿ ಮಾಡದ ಮೂರ್ತಿಗಳನ್ನಾಗಿದೆ ಅವರು ಆರಾಧಿಸುತ್ತಿರುವುದು. ಪ್ರದಕ್ಷಿಣೆ ಹಾಕುವುದು. ಇದು ಯಾವತ್ತೂ ಸರಿಯಲ್ಲ. ಎಂಬುದಾಗಿತ್ತು ಅವರು ಮಾಡಿದ ಚರ್ಚೆ, ಜನ ಸಾಮಾನ್ಯರ ಈ ತಪ್ಪು ತಿಳುವಳಿಕೆಯಿಂದ ಸತ್ಯವನ್ನು ಹುಡುಕಲು ಪ್ರತಿಜ್ಞೆ ಮಾಡಿದರು. ವರಕತ್ ಬಿನ್ ನೌಫಲ್, ಉಬೈದುಲ್ಲಾಹ್ ಬಿನ್ ಜಹ್’ಷ್, ಉಸ್ಮಾನ್ ಬಿನ್ ಹುವೈರಿಸ್, ಝೈದ್ ಬಿನ್ ಅಂರ್ ಬಿನ್ ನುಫೈಲ್ ಎನ್ನುವವರಾಗಿದ್ದರು ಆ ಚರ್ಚೆ ಮಾಡಿದ ವ್ಯಕ್ತಿಗಳು.

ವರಕತ್ ಬಿನ್ ನೌಫಲ್ ವೇದವನ್ನು ಕಲಿತು, ಇತರ ಪ್ರದೇಶದ ಪಂಡಿತರನ್ನು ಸಂಪರ್ಕಿಸಿ, ಮೂಸ, ಈಸ (ಅ) ಪ್ರವಾದಿಯವರ ಆದರ್ಶದಲ್ಲಿ ಸಂಚರಿಸಿದ್ದರು. ಅದೇ ಆದರ್ಶಲ್ಲೇ ಜೀವಿಸಿದರು. ಮಾಕ್ಕಾ ಪಟ್ಟಣದಲ್ಲೇ ಜಗತ್ ಪ್ರಸಿದ್ಧ ವೇದ ಜ್ಞಾನಿಯಾದರು. ಪ್ರವಾದಿತ್ವದ ಘೋಷಣೆಯ ಸಂದರ್ಭದಲ್ಲಿ ಪ್ರವಾದಿಯವರೊಂದಿಗೆ ಸಂಭಾಷಣೆ ನಡೆಸಿ, ಪ್ರವಾದಿಯವರನ್ನು ಅಂಗೀಕರಿಸಿದ್ದರು. ಅದೇ ರೀತಿ ಪ್ರೋತ್ಸಾಹವೂ ನೀಡಿದ್ದರು.
ಉಬೈದುಲ್ಲಾಹ್ ಬಿನ್ ಜಹ್’ಷ್ ನಿರ್ದಿಷ್ಟವಾದ ಧರ್ಮವನ್ನು ಅಂಗೀಕರಿಸದೆ ಸತ್ಯಾನ್ವೇಷಣೆ ನಡೆಸಿದ್ದರು. ಅದೇ ಸಂದರ್ಭದಲ್ಲಾಗಿತ್ತು ಪ್ರವಾದಿಯವರ ﷺ ನಿಯೋಗವೂ ಉಂಟಾದದ್ದು. ಉಬೈದರ ಪತ್ನಿ ಉಮ್ಮು ಹಬೀಬ ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದರು. ಖುರೈಶಿಗಳ ನಾಯಕರಾಗಿದ್ದ ಅಬೂ ಸೂಫಿಯಾನರ ಮಗಳಾಗಿದ್ದರು ಅವರು. ಪತ್ನಿಯ ನಂತರ ಉಬೈದ್ ಕೂಡ ಇಸ್ಲಾಮ್ ಸ್ವೀಕರಿಸಿದರು. ಮಕ್ಕಾದಲ್ಲಿ ಬಹಳಷ್ಟು ಪರೀಕ್ಷೆಗಳನ್ನು ಎದುರಿಸಬೇಕಾಗಿ ಬಂದಿತು, ತನ್ನ ಪತ್ನಿಯ ಜೊತೆಯಲ್ಲಿ ಎಥಿಯೋಪಿಯಾಗೆ ತೆರಳಿದರು. ಆದರೆ ಕೆಲವು ಕ್ರೈಸ್ತ ಪಾದ್ರಿಗಳ ಬಲೆಗೆ ಬಿದ್ದು ಕ್ರೈಸ್ತ ಧರ್ಮ ಸ್ವೀಕರಿಸಿದರು. ನಂತರದ ದಿನಗಳಲ್ಲಿ ಕ್ರೈಸ್ತವರಾಗಿಯೇ ಜೀವಿಸಿ ಕ್ರೈಸ್ತನಾಗಿಯೇ ಮರಣ ಹೊಂದಿದರು. ನೈಜ ವಿಶ್ವಾಸಿನಿಯಾಗಿದ್ದ ಉಮ್ಮು ಹಬೀಬ ಇಸ್ಲಾಮಿನಲ್ಲೇ ಜೀವಿಸಿದರು. ನಂತರದ ದಿನಗಳಲ್ಲಿ ಉಮ್ಮು ಹಬೀಬ (ರ) ಪ್ರವಾದಿಯವರ ﷺ ಪತ್ನಿಯ ಸ್ಥಾನವನ್ನು ಪಡೆದುಕೊಂಡು ಸತ್ಯ ವಿಶ್ವಾಸಿಗಳ ತಾಯಿಯಾದರು.

ಮೂರನೇ ವ್ಯಕ್ತಿ ಉಸ್ಮಾನ್ ಬಿನ್ ಅಲ್ ಹುವೈರಿಸ್ ಬಹಳ ಹಿಂದಿನಿಂದಲೇ ಸತ್ಯಾನ್ವೇಷಣೆ ಆರಂಭಿಸಿದ್ದರು. ಆ ಘಟನೆ ಈ ರೀತಿಯಾಗಿತ್ತು. ಒಂದು ಉತ್ಸವದಲ್ಲಿ ಮೇಲೆ ತಿಳಿಸಿದ ಮೂರು ಜನರೊಂದಿಗೆ ಉಸ್ಮಾನ್ ಕೂಡ ಜೊತೆಗಿದ್ದರು. ಅಲ್ಲಿ ನೆರೆದಿದ್ದ ಜನರೆಲ್ಲರೂ ಒಂದು ಮೂರ್ತಿಯನ್ನು ಪೂಜಿಸುತ್ತಿದ್ದರು. ಮದ್ಯ ಸೇವಿಸಿ ನಶೆಯಲ್ಲಿ ಮುಳುಗಿದ್ದರು. ಆದರೆ ಮೂರ್ತಿ ನಿಲ್ಲುತ್ತಿರಲಿಲ್ಲ ತಲೆ ಕೆಳಗಾಗಿ ಬೀಳುತ್ತಲೇ ಇತ್ತು. ಬಹಳಷ್ಟು ಬಾರಿ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಇದರಲ್ಲೇನೋ ರಹಸ್ಯ ಅಡಗಿದೆ ಎಂದು ಉಸ್ಮಾನ್ ಆಲೋಚಿಸಿದ್ದರು. ಅದು ಪ್ರವಾದಿಯವರ ﷺ ಜನನದ ಸಂದರ್ಭವಾಗಿತ್ತೆಂದು ನಂತರದ ದಿನಗಳಲ್ಲಿ ಅವರಿಗೆ ತಿಳಿಯಿತು.
ಬಹಳಷ್ಟು ಬಾರಿ ಮೂರ್ತಿಯಲ್ಲಿ ನಿಲ್ಲಿಸಿದರೂ ಸರಿಯಾಗಿ ನಿಲ್ಲುತ್ತಿರಲಿಲ್ಲ. ಬಹು ದೈವದ ಮೂರ್ತಿ ಯಾವುದೇ ಪ್ರಯೋಜನವಿಲ್ಲದ್ದೆಂದು ಅವರಿಗೆ ಆಗ ಅರ್ಥವಾಯಿತು. ಅದರ ಭಾಗವಾಗಿ ಅವರೊಂದು ಕವಿತೆ ಹೇಳಿದಾಗ ಅವರಿಗೆ ಉತ್ತರವಾಗಿ ಒಂದು ಅಶರೀರವಾಣಿ ಕೇಳಿಸಿತು. ಮೂರ್ತಿಗಳು ತಲೆ ಕೇಳಗಾಗಿ ಬೀಳುದಕ್ಕಿದ ಕಾರಣ ಆ ಕವಿತಯಲ್ಲಿತ್ತು. ನಾಲ್ಕು ಜನರ ವಿಭಿನ್ನವಾದ ಚಿಂತನೆಗಳಿಗೆ ಆರಂಭವಾಗಿತ್ತು ಇದು.

(ಮುಂದುವರೆಯುವುದು…)

Mahabba Campaign Part-38/365

ಉಸ್ಮಾನ್ ಬಿನ್ ಅಲ್ ಹುವೈರಿಸ್ ತಮ್ಮ ಅನ್ವೇಷಣೆಯನ್ನು ಮುಂದುವರಿಸಿದರು. ರೋಮನ್ ಚಕ್ರವರ್ತಿ ಸೀಸರಿನ ಆಸ್ಥಾನಕ್ಕೆ ತಲುಪಿದಾಗ, ಅರೇಬಿಯಾದಿಂದ ಬಂದ ಜ್ಞಾನಿಯಾದ ಉಸ್ಮಾನರನ್ನು ಸೀಸರ್ ಗೌರವಿಸಿದರು. ಉಸ್ಮಾನ್ ಕ್ರೈಸ್ತ ಧರ್ಮವನ್ನು ಸ್ವೀಕರಿಸಿ, ಪ್ರವಾದಿಯವರ ﷺ ಪ್ರವಾದಿತ್ವದ ನಿಯೋಗಕ್ಕೂ ಮುಂಚೆಯೇ ಮರಣ ಹೊಂದಿದರು.

ನಾಲ್ಕನೇ ವ್ಯಕ್ತಿಯಾದ ಝೈದ್ ಬಿನ್ ಅಂರ್ ಬಿನ್ ನುಫೈಲ್, ಚಿಂತಕರು, ತತ್ವಜ್ಞಾನಿಯೂ ಆಗಿದ್ದರು. ಅರೇಬಿಯಾದಲ್ಲಿ ಜಾಲಾಡುತ್ತಿದ್ದ ಅನಾಚಾರಗಳನ್ನು ಬಹಳ ಕಟುವಾಗಿಯೇ ವಿರೋಧಿಸಿದ್ದರು. ಮೂರ್ತಿ ಪೂಜೆ ಮಾಡುವುದೋ, ಬಹುದೈವತ್ವವನ್ನು ಸ್ವೀಕರಿಸುವುದೋ ಮಾಡಿರಲಿಲ್ಲ. ಹರಕೆ ಸಂದಾಯದ ಪೂಜೆಗಳನ್ನು ಒಪ್ಪುತ್ತಿರಲಿಲ್ಲ. ಹೆಣ್ಣು ಮಕ್ಕಳನ್ನು ಜೀವಂತ ಸಮಾಧಿ ಮಾಡುತಿದ್ದ ವಿಚಿತ್ರ ಸಂಪ್ರದಾಯದ ವಿರುದ್ಧ ಎದ್ದು ನಿಂತರು. ಸಮಾಧಿ ಮಾಡಲು ಕೊಂಡೊಗುತ್ತಿದ್ದ ಮಕ್ಕಳನ್ನು ಅವರು ದತ್ತು ಪಡೆದುಕೊಂಡರು. ಕ್ರೈಸ್ತ ಧರ್ಮವನ್ನಾಗಲಿ, ಯಹೂದಿ ಧರ್ಮಾವನ್ನಾಗಲಿ ಸ್ವೀಕರಿಸದೆ, ನೈಜವಾದ ಪ್ರವಾದಿ ಇಬ್ರಾಹಿಮರು (ಅ) ತೋರಿಸಿ ಕೊಟ್ಟ ಆದರ್ಶವನ್ನು (ಏಕ ದೈವ ವಿಶ್ವಾಸವನ್ನು) ಸ್ವೀಕರಿಸಿದರು. ಅಬೂಬ್ಬಕ್ಕರ್’ರವರ (ರ) ಮಗಳು ಅಸ್ಮಾ (ರ) ಬೀವಿಯವರು ತಮಗಾದ ಒಂದು ಅನುಭವವನ್ನು ಈ ರೀತಿ ವಿವರಿಸುತ್ತಾರೆ. ಝೈದ್ ಬಿನ್ ಅಂರ್ ಒಮ್ಮೆ ಕಅಬಾಲಯದ ಗೋಡೆಗೆ ಒರಗಿ ನಿಂತು ಮಾತಾಡುತ್ತಿದ್ದಾಗ ಅಲ್ಲಿ ನೆರೆದಿದ್ದ ಜನರಲ್ಲಿ, ಓ ಖುರೈಶಿಗಳೇ ಈ ಗುಂಪಿನಲ್ಲಿ ಪ್ರವಾದಿ ಇಬ್ರಾಹಿಮರ (ರ) ಆದರ್ಶಗಳನ್ನು ಹಿಂಬಲಿಸುವ ವ್ಯಕ್ತಿ ನಾನೊಬ್ಬನೇ ಇರುವುದೆಂದು ಹೇಳಿದ್ದರು.

ಅಲ್ಲಾಹನೇ ನಿನಗೆ ಹೇಗೆ ಆರಾಧನೆ ಮಾಡಬೇಕೆಂಬೂದು ನನಗೆ ತಿಳಿದಿಲ್ಲ, ತಿಳಿದಿದ್ದರೆ ನಾನು ಅದೇ ರೀತಿ ಆರಾಧಿಸುತ್ತಿದ್ದೆ ಎಂದು ಝೈದ್ ಆಗಾಗ ಹೇಳುತ್ತಾ, ತನ್ನ ವಾಹನದ ಮೇಲೆ ಸುಜೂದ್ (ಸಾಷ್ಟಾಂಗ) ಹಾಕುತ್ತಿದ್ದರು.
ಇವರ ಸತ್ಯಾನ್ವೇಷಣೆ ಯಾತ್ರೆಯ ಕುರಿತಾದ ಒಂದು ವಿವರಣೆಯನ್ನು ಬುಖಾರಿ ಗ್ರಂಥದಲ್ಲಿ ಕಾಣಬಹುದು. ಅಬ್ದುಲ್ಲಾಹಿ ಬಿನ್ ಉಮರ್’ರವರು (ರ) ಈ ರೀತಿ ಉಲ್ಲೇಖಿಸುತ್ತಾರೆ, ಇಸ್ಲಾಮಿನ ಆಗಮನಕ್ಕೂ ಮುಂಚೆಯೇ ಝೈದ್ ಬಿನ್ ಅಂರ್ ಸತ್ಯಾನ್ವೇಷಣೆಗಾಗಿ ಸಿರಿಯಾಗೆ ತಲುಪಿದರು. ಒಬ್ಬರು ಯಹೂದಿ ಪಂಡಿತನಲ್ಲಿ ಅವರ ಧರ್ಮದ ಕುರಿತು ತಿಳಿದುಕೊಂಡರು. ನಾನು ಈ ಯಹೂದಿ ಧರ್ಮವನ್ನು ಸ್ವೀಕರಿಸಿದರೆ ಹೇಗೆ.? ಎಂದು ಕೇಳಿದಾಗ, ಇಂದು ಯಹೂದಿ ಧರ್ಮವು ಸಂಪೂರ್ಣವಾಗಿ ಮುರಿದು ಬಿದ್ದಿದೆ ನೀವು ಇಂದು ಈ ಧರ್ಮಕ್ಕೆ ಸೇರಿದರೆ ಸೃಷ್ಟಿಕರ್ತನ ಕೋಪವನ್ನು ಎದುರಿಸಬೇಕಾಗಬಹುದೆಂದು ಯಹೂದಿ ಪಂಡಿತರು ಹೇಳಿದರು. ಹಾಗಾದರೆ ಬೇಡ ಅಲ್ಲಾಹನ ಕೋಪವನ್ನಲ್ಲ ಬದಲಾಗಿ ಅಲ್ಲಾಹನ ಪ್ರೀತಿಯನ್ನು ಪಡೆಯುವ ಉದ್ದೇಶದಿಂದಾಗಿದೆ ನಾನು ಇಲ್ಲಿಗೆ ಬಂದದ್ದು, ಬೇರೆ ಏನಾದರೂ ದಾರಿ ಇದಿಯೇ ಎಂದು ಝೈದ್ ಕೇಳಿದರು.

ಹನೀಫಿ ದಾರಿ ಅಥವ ನೇರವಾದ ದಾರಿಯಲ್ಲದೇ ಬೇರೆ ಆಯ್ಕೆಗಳಿಲ್ಲ. ಎಂದು ಪಂಡಿತರು ಹೇಳಿದರು.
ಯಾವುದಾಗಿದೆ ಈ ನೇರವಾದ ದಾರಿ ಎಂದು ಝೈದ್ ಕೇಳಿದಾಗ, ಅದು ಪ್ರವಾದಿ ಇಬ್ರಾಹಿಮರ (ಅ) ಆದರ್ಶದ ದಾರಿಯಾಗಿದೆ. ಅವರು ಕ್ರೈಸ್ತರೋ, ಯಹೂದಿಯೋ ಆಗಿರಲಿಲ್ಲ. ಹನೀಫಿ ದಾರಿ ಅಥವಾ ಸತ್ಯವಾದ ದಾರಿಯಲ್ಲಾಗಿತ್ತು ಇದ್ದದ್ದು. ಅಲ್ಲಾಹನನ್ನು ಮಾತ್ರವೇ ಆರಾಧಿಸುತ್ತಿದ್ದರು.
ಝೈದ್ ಅಲ್ಲಿಂದ ಪುನಃ ಯಾತ್ರೆ ಆರಂಭಿಸಿದರು. ದಾರಿಯಲ್ಲಿ ಕ್ರೈಸ್ತ ಪಂಡಿತನನ್ನು ಭೇಟಿಯಾದಾಗ, ಅವರೂ ಕೂಡ ಯಹೂದಿ ಪಂಡಿತ ಹೇಳಿದ ರೀತಿಯಲ್ಲೇ ಹೇಳಿದರು. ಪ್ರವಾದಿ ಇಬ್ರಾಹಿಮರ (ಅ) ಪರಂಪರೆಯ ಕುರಿತು ಕೇಳಿದ ಝೈದ್ ಅಲ್ಲಾಹನೇ ಖಂಡಿತವಾಗಿಯೂ ನಾನು ಪ್ರವಾದಿ ಇಬ್ರಾಹಿಮರ (ರ) ಆದರ್ಶವನ್ನು ಹಿಂಬಾಲಿಸುತ್ತಾನೆ ಅದಕ್ಕೆ ನೀನೇ ಸಾಕ್ಷಿಯೆಂದು ಹೇಳಿದರು.

ಝೈದಿನ ಸತ್ಯಾನ್ವೇಷಣೆ ಯಾತ್ರೆಯ ಕುರಿತಿರುವ ಮತ್ತೊಂದು ವಿವರಣೆ ಈ ರೀತಿಯಾಗಿದೆ. ಝೈದ್ ತಮ್ಮ ಸತ್ಯಾನ್ವೇಷಣೆ ಯಾತ್ರೆಯನ್ನು ಆರಂಭಿಸಿದರು. ಹಲವಾರು ದೇಶಗಳನ್ನು ದಾಟಿ ಅಲ್ ಜಝೀರದಲ್ಲೂ, ಮೌಸಿಲಿಯಲ್ಲೂ ಸಂಚರಿಸಿ, ಕೊನೆಗೆ “ಬಲ್’ಖಾಅ” ಎನ್ನುವ ಪ್ರದೇಶಕ್ಕೆ ತಲುಪಿದರು. ವೇದಗಳ ಕುರಿತು ಅಘಾದ ಜ್ಞಾನವಿರುವ ವೇದ ಜ್ಞಾನಿಯೊಬ್ಬರನ್ನು ಭೇಟಿಯಾಗಿ, ಸತ್ಯವಾದ ದಾರಿಯ (ಹನೀಫಿ ದಾರಿ) ಕುರಿತು ಕೇಳಿದಾಗ. ಸಹೋದರ ನೀವು ಹುಡುಕುತ್ತಿರುವ ಈ ಸತ್ಯವಾದ ದಾರಿ ಇವತ್ತು ಎಲ್ಲಿಯೂ ಕಾಣಲು ಸಾಧ್ಯವಿಲ್ಲ, ಆದರೆ ಸತ್ಯವಾದ ದಾರಿಗೆ ಆಹ್ವಾನ ನೀಡಲು ಸಂದೇಶವಾಹಕರು ಬರುವ ಸಮಯವು ಹತ್ತಿರವಾಗಿದೆ. ಆ ಸಂದೇಶವಾಹಕರ ಆಗಮನ ನಿಮ್ಮ ಊರಿನಲ್ಲೇ ಆಗಿದೆ. ಹಾಗಾಗಿ ತಕ್ಷಣವೇ ಊರಿಗೆ ಮರಳಿರಿ ಶೀಘ್ರದಲ್ಲೇ ಅವರ ಆಗಮನವಾಗಲಿದೆ, ಆ ಪುಣ್ಯ ಪುರುಷರೊಂದಿಗೆ ಸೇರಲು ಪ್ರಯತ್ನಿಸಿರಿ ಎಂದು ವೇದ ಜ್ಞಾನಿ ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-39/365

ಝೈದ್’ಗೆ ಬಹಳ ಸಂತೋಷವಾಯಿತು. ಸತ್ಯಾನ್ವೇಷಣೆಯಲ್ಲಿ ಮುಗಿಯದ ಹಂಬಲದೊಂದಿಗೆ ಅವರು ಸಂಚರಿಸ ತೊಡಗಿದರು. ಹಲವಾರು ದಾರಿಗಳನ್ನು ದಾಟಿ ಕೊನೆಗೆ ತಮ್ಮ ಲಕ್ಷ್ಯದ ಬಳಿಯಾಗಿತ್ತು ಅವರ ಪ್ರಯಾಣ. ಆದರೆ ಲಖ್’ಮ ಎನ್ನುವ ಸ್ಥಳಕ್ಕೆ ತಲುಪಿದಾಗ ದರೋಡೆಕೊರರು ಝೈದನ್ನು ಹಿಡಿದರು. ತನ್ನ ಮರಣ ನಿಶ್ಚಿಯವಾಯಿತೆಂದು ಅರಿತಾಗ, “ನನಗೆ ನನ್ನ ಲಕ್ಷ್ಯದ ಕಡೆಗೆ ತೆರಳಲು ಸಾಧ್ಯವಾಗಲಿಲ್ಲ, ನನ್ನ ಮಗ ಸಈದಿಗಾದರೂ ಸತ್ಯವಾದ ದಾರಿಯನ್ನು ತೋರಿಸು ಒಡೆಯ!” ಎಂದು ಝೈದ್ ಪ್ರಾರ್ಥಿಸಿದರು. ಕೊಲೆಗಟುಕರಾದ ದರೋಡೆಕೋರರು ಝೈದನ್ನು ಕೊಲೆ ಮಾಡಿದರು. ಅವರ ಕೊನೆಯ ಪ್ರಾರ್ಥನೆಯನ್ನು ಅಲ್ಲಾಹನು ಸ್ವೀಕರಿಸಿದನು. ಝೈದಿನ ಮಗನಾದ ಸಈದ್ (ರ) ಸ್ವಹಾಬಿಯಾದರು. (ಪ್ರವಾದಿಯವರ ಅನುಚರರು) ಸ್ವರ್ಗ ಪ್ರವೇಶದ ಶುಭವಾರ್ತೆ ಲಭಿಸಿದ ಹತ್ತು ಪ್ರಮುಖರಲ್ಲಿ ಸಈದ್ (ರ) ಒಬ್ಬರಾದರು.

ಝೈದ್ ಮರಣ ಹೊಂದಿದ ವಾರ್ತೆಯು ಮಕ್ಕ ಪಟ್ಟಣಕ್ಕೆ ತಲುಪಿತು. ಸತ್ಯಾನ್ವೇಷಿಯಾದ ಝೈದಿನ ಮರಣವು ವರಖತ್ ಬಿನ್ ನೌಫಲಿಗೆ ಸಹಿಸಲು ಅಸಾದ್ಯವಾಗಿತ್ತು. ಬಹಳ ಕಷ್ಟದಿಂದ ದುಃಖವನ್ನು ಸಹಿಸಿ ವಿರಹದ ಕವಿತೆಯನ್ನು ರಚಿಸಿದರು. ಸತ್ಯಪತದಲ್ಲಿ ಝೈದ್ ತೋರಿಸಿದ ಆವೇಶವನ್ನು ಬರೆದ ನಂತರ ಅವರು ಹೀಗೆ ಹೇಳಿದರು. “ಖಂಡಿತವಾಗಿಯೂ.! ನೀವು ಪ್ರವಾದಿ ಇಬ್ರಾಹಿಮರನ್ನು (ಅ) ಕಾಣಲಿದ್ದೀರಿ, ಭೂಮಿಯಡಿಯಲ್ಲಿ ಏಳು ಕಣಿವೆಗಳ ಅಂತರದ ದೂರದಲ್ಲಿದ್ದರೂ ಅಲ್ಲಾಹನ ಕರುಣೆಯು ನಿಮಗೆ ಖಂಡಿತ ಲಭಿಸಲಿದೆ” (ವ ಖದ್ ತುದ್ ರಿಕುಲ್ ಇನ್’ಸಾನ ರಹ್’ಮತು ರಬ್ಬಿಹಿ, ವಲೌಕಾನ ತಹ್’ತಲ್ ಅರ್’ಳಿ ಸಬ್’ಈನ ವಾದಿಯ..)

ಝೈದ್ ಒಳ್ಳೆಯ ಕವಿಯೂ ಕೂಡ ಆಗಿದ್ದರು. ಏಕ ದೈವವಿಶ್ವಾಸದ ಮಹತ್ವವನ್ನು ತಿಳಿಸುವ, ಅವರು ಬರೆದ ಬಹಳಷ್ಟು ಸಾಲುಗಳನ್ನು ಗ್ರಂಥಗಳಲ್ಲಿ ಕಾಣಬಹುದು. ವಾಸ್ತವದಲ್ಲಿ ಅವರನ್ನು ಒಬ್ಬ ಏಕದೈವ ವಿಶ್ವಾಸಿಯಾಗಿಯೇ ಪರಿಗಣಿಸ ಬೇಕಾಗಿದೆ. ಪ್ರವಾದಿ ಇಬ್ರಾಹಿಮರ (ಅ) ದಾರಿಯನ್ನು ಇಷ್ಟಪಟ್ಟು, ಅಲ್ಲಾಹನನ್ನು ಮಾತ್ರ ತನ್ನ ಆರಾಧ್ಯನಾಗಿ ಸ್ವೀಕರಿಸಿದ ವ್ಯಕ್ತಿಯಾಗಿದ್ದರು ಅವರು. ನಂತರದ ಕಾಲದಲ್ಲಿ ಪ್ರವಾದಿಯವರು ﷺ ಅವರನ್ನು ಬಹಳಷ್ಟು ಹೊಗಳಿದ್ದರು. ಹದೀಸ್ ಗ್ರಂಥಗಳಲ್ಲಿ ಹೀಗೆ ಉಲ್ಲೇಖಿಸಲಾಗಿದೆ. “ಅವರನ್ನು ಮಾತ್ರ ಅಲ್ಲಾಹನು ಒಂದು ಸ್ವತಂತ್ರ ಸಮೂಹವಾಗಿ ನಾಳೆ ಪರಲೋಕದಲ್ಲಿ ಹಾಜರು ಪಡಿಸುವನೆಂದು” ಪ್ರವಾದಿಯವರು ﷺ ಹೇಳಿದ್ದರು. ಮತ್ತೊಂದು ಉಲ್ಲೇಖದಲ್ಲಿ ಪ್ರವಾದಿಯವರು ﷺ ಹೇಳಿದ್ದನ್ನು ಈ ರೀತಿ ಉಲ್ಲೇಖಿಸಲಾಗಿದೆ. “ನಾನು ಸ್ವರ್ಗಕ್ಕೆ ಪ್ರವೇಶಿಸಿದಾಗ ಝೈದ್ ಬಿನ್ ಅಂರ್’ರವರ ಎರಡು ಮನೆಗಳನ್ನು ನೋಡಿದ್ದೆನು.

ಎಲ್ಲಾ ಕಡೆಗಳಲ್ಲೂ ಕತ್ತಲು ಆವರಿಸಿ, ಸತ್ಯಪತದ ಬೆಳಕು ಮಾಯವಾಗ ತೊಡಗಿದವು. ಇಡೀ ಜಗತ್ತೇ ಪ್ರವಾದಿಯವರ ﷺ ಆಗಮನಕ್ಕಾಗಿ ಕಾಯುತ್ತಿದ್ದವು. ನಿಯೋಗಿಸಲ್ಪಡುವ ಸ್ಥಳದ ಕಡೆಗೆ ಕೆಲವರು ಸಂಚರಿಸ ತೊಡಗಿದರು. ಅದರಲ್ಲಿ ಕೆಲವರು ಮರಣ ಹೊಂದಿದರು, ಇನ್ನೂ ಕೆಲವರು ಬಹಳ ಶೀಘ್ರವಾಗಿ ಬಂದು ಭವಿಷ್ಯದಲ್ಲಿ ಬರಲಿರುವ ಪ್ರವಾದಿಯವರಿಗಾಗಿ ﷺ ಕಾಯತೊಡಗಿದರು. ಇಡೀ ಜಗತ್ತೇ ಪ್ರವಾದಿಯವರ ﷺ ಆಗಮನಕ್ಕಾಗಿ ಕಾಯುತ್ತಿದ್ದವು. ಎಲ್ಲಾ ಕಣ್ಣುಗಳು ತಿಹಾಮ ಕಣಿವೆಯತ್ತ ತಿರುಗಿದ್ದವು. ಪ್ರವಾದಿಯವರ ﷺ ಸಣ್ಣ ಚಲನೆಗಳನ್ನೂ ಕೂಡ ಕಾಲವು ಕಾಯುತ್ತಿತ್ತು. ಪ್ರವಾದಿಯವರ ﷺ ನಿಯೋಗಕ್ಕಾಗಿ ಕಾಲವು ಕಾಯುತ್ತಿರುವಾಗ ನಾವು ಕೆಲವೊಂದು ಉಲ್ಲೇಖಗಳನ್ನು ತಿಳಿಯಬೇಕಿದೆ.

ಮದೀನದ ಬನೂ ಖುರೈಳ ಜನಾಂಗವು ಜೀವಿಸುತಿದ್ದ ಸ್ಥಳದ ಬಳಿ, ಸಿರಿಯಾದ ಇಬ್’ನು ಹಯ್ಯಿಬಾನ್ ಎನ್ನುವ ಯಹೂದಿ ಪಂಡಿತರೊಬ್ಬರು ಬಂದು ನೆಲೆಸಿದರು. ಪ್ರವಾದಿತ್ವ ನಿಯೋಗದ ಎರಡು ವರ್ಷದ ಹಿಂದಿನ ಘಟನೆಯಾಗಿದೆ ಇದು. ಭೌತಿಕ ಜೀವನವನ್ನು ತ್ಯಾಗ ಮಾಡಿದ್ದ, ವೇದಗಳಲ್ಲಿ ಅಘಾದ ಜ್ಞಾನವಿರುವ ಪಂಡಿತನಾಗಿದ್ದರು ಅವರು. ಕ್ರಮೇಣ ಮದೀನದಲ್ಲಿ ಅವರು ಎಲ್ಲರ ಪ್ರೀತಿಗೆ ಪಾತ್ರರಾದರು. ಮಳೆ ಬರದೆ ಇದ್ದಾಗ ಮದೀನದ ನಿವಾಸಿಗಳು ಸ್ವತಃ ಆ ಪುರೋಹಿತನ ಬಳಿ ತೆರಳುತ್ತಿದ್ದರು. ಓ ಇಬ್’ನು ಹಯ್ಯಿಬಾನ್’ರವರೇ.! ಹೊರಗೆ ಬಂದು ನಮಗೆ ಮಳೆ ಬರಲು ನೀವು ಪ್ರಾರ್ಥಿಸಿರಿ ಎಂದು ಮದೀನ ನಿವಾಸಿಗಳು ಹೇಳಿದಾಗ, ಪ್ರಾರ್ಥನೆಗೆ ಮುಂಚೆ ಏನಾದರೂ ದಾನ ಮಾಡಿರಿ ಎಂದು ಹೇಳಿದರು. ಏನು ಮಾಡಬೇಕೆಂದು ಜನರು ಕೇಳಿದಾಗ, ಸ್ವಲ್ಪ ಖರ್ಜೂರ, ಬಾರ್ಲಿ ಮುಂತಾದ ಏನಾದರೂ ಎಂದು ಹೇಳಿದರು. ತಕ್ಷಣವೇ ಜನರು ದಾನದ ವಸ್ತುಗಳೊಂದಿಗೆ ತಲುಪಿದ ನಂತರ, ತೆರೆದ ಸ್ಥಳದಲ್ಲಿ ಒಟ್ಟು ಸೇರಿ ಮಳೆಗಾಗಿ ಪ್ರಾರ್ಥಿಸುತ್ತಿದ್ದರು. ಗುಂಪು ಹಿಂತಿರುಗಿ ಹೋಗುದಕ್ಕೂ ಮುಂಚೆಯೇ ಮಳೆ ಬರುತಿತ್ತು. ಮದೀನಾ ನಿವಾಸಿಗಳು ಇಂತಹ ಹಲವಾರು ಅನುಭವಗಳಿಗೆ ಸಾಕ್ಷಿಯಾಗಿದ್ದರು.

ದಿವಸಗಳು ಕಳೆಯಿತು, ಇಬ್’ನು ಹಯ್ಯಿಬಾನ್ ರೋಗ ಪೀಡಿತರಾದರು. ಎಲ್ಲರೂ ಅವರನ್ನು ಸಂದರ್ಶಿಸಲು ತೆರಳಿದರು. ಓ ಯಹೂದಿಗಳೇ ನಾನು ಯಾಕೆ ಊರು ಬಿಟ್ಟು ಇಲ್ಲಿಗೆ ಬಂದದ್ದು ಎಂದು ನಿಮಗೆ ತಿಳಿದಿದೆಯೇ.? ಎಂದು ಅವರು ಕೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-40/365

ಎಲ್ಲಾ ಅನುಕೂಲಗಳನ್ನು ನಿರಾಕರಿಸಿ ನಾನಿಲ್ಲಿ ಬಂದು ಜೀವಿಸುವ ಉದ್ದೇಶವೇನೆಂದು ಗೊತ್ತೆ.? ಎಂದು ಇಬ್’ನು ಹಯ್ಯಿಬಾನ್ ಕೇಳಿದಾಗ, ಅಲ್ಲಿದ್ದವರು ನಮಗೆ ಗೊತ್ತಿಲ್ಲ ನೀವೇ ಹೇಳಿರಿ ಎಂದು ಎತ್ತರಿಸಿದರು. ನಾನಿಲ್ಲಿ ಬಂದು ನೆಲೆಸಲು ಒಂದು ಕಾರಣವಿದೆ. ಜಗತ್ತಿಗೆ ಪ್ರವಾದಿಯಾಗಿ ﷺ ನಿಯೋಗಿಸಬೇಕಾದ ಪ್ರವಾದಿತ್ವದ ಸಮಯದ ಹತ್ತಿರವಾಗಿದೆ. ಆ ಪ್ರವಾದಿಯವರು ﷺ ಆಗಮಿಸಲಿರುವ ಪವಿತ್ರ ಸ್ಥಳವಾಗಿದೆ ಇದು. ಪಲಾಯನ (ಹಿಜ್’ರ) ಮಾಡಿ ಬರಲಿರುವ ಪುಣ್ಯ ಸ್ಥಳವಾಗಿದೆ ಇದು. ಅವರು ಇಲ್ಲಿಗೆ ತಲುಪಿದಾಗ ಅವರ ಜೊತೆ ಸೇರುವ ಉದ್ದೇಶದಿಂದಾಗಿದೆ ಇಲ್ಲಿ ಬಂದು ನೆಲೆಸಿದ್ದು. ಓ ಯಹೂದಿಗಳೇ ಆ ಪ್ರವಾದಿಯವರ ﷺ ಆಗಮನವಾದರೇ ತಕ್ಷಣವೇ ನೀವು ಅವರನ್ನು ಅನುಸರಿಸಿರಿ, ನೀವು ಅವರ ಅನುಯಾಯಿಗಳಾಗಿರಿ. ಸತ್ಯ ಸಂದೇಶ ವಾಹಕರ ಆಗಮನವಾಗುವಾಗ ಸ್ವಾಭಾವಿಕವಾಗಿ ಕೆಲವೊಮ್ಮೆ ಹೋರಾಟಗಳೂ, ರಕ್ತಪಾತವೂ ನಡೆಯಬಹುದು ಅದರಲ್ಲಿ ನೀವು ತಪ್ಪು ತಿಳಿಯಬೇಡಿರಿ, ಅವರು ಖಂಡಿತ ಸಂದೇಶವಾಹಕರೇ ಆಗಿರುತ್ತಾರೆ. ನಿಶ್ಚಯವಾಗಿ ಅವರು ಅಂತ್ಯ ಪ್ರವಾದಿಯಾಗಿರುತ್ತಾರೆ.

ಅಷ್ಟು ಹೇಳಿ ಸ್ವಲ್ಪ ಸಮಯವು ಕಳೆದ ನಂತರ ಅಂತ್ಯ ಪ್ರವಾದಿಯವರ ﷺ ಆಗಮನಕ್ಕಾಗಿ ಕಾದು ಕುಳಿತಿದ್ದ ಇಬ್’ನುಲ್ ಹಯ್ಯಿಬಾನ್ ಇಹಲೋಕ ತ್ಯಜಿಸಿದರು. ಆದರೆ ಕೊನೆದಾಗಿ ಅವರಾಡಿದ ಮಾತುಗಳು ಮಾತ್ರ ಬಹಳಷ್ಟು ಜನರ ಮನಸ್ಸಿನಲ್ಲಿ ಬಾಕಿಯಾಗಿತ್ತು. ಹುದೈಲ್ ಜನಾಂಗದ ಉಸೈದ್ ಬಿನ್ ಸಅದ್, ಅವರ ಸಹೋದರ ಸಅಲಬ, ಹಾಗೂ ಮಿತ್ರನಾಗಿದ್ದ ಉಸೈದ್ ಬಿನ್ ಹುಳೈರ್ ಎಂಬವರು ನಂತರದ ದಿನಗಳಲ್ಲಿ ಪ್ರವಾದಿಯವರನ್ನು ﷺ ಅನುಸರಿಸಿದ್ದು ಇಬ್’ನು ಹಯ್ಯಿಬಾನರ ಕೊನೆಯ ಮಾತಿನ ಕಾರಣದಿಂದಾಗಿತ್ತು.

ನಂತರದ ದಿನಗಳಲ್ಲಿ ಪ್ರವಾದಿಯವರು ﷺ ಮದೀನಕ್ಕೆ ಪಲಾಯನ ಮಾಡಿ ತಲುಪಿದಾಗ, ಆರಂಭದಲ್ಲಿ ಯಹೂದಿಗಳು ಪ್ರವಾದಿಯವರನ್ನು ﷺ ಶತ್ರುತ್ವದೊಂದಿಗೆ ಕಾಣುತ್ತಿದ್ದರು. ಆದರೆ ಬನೂ ಖುರೈಳ ಯುದ್ಧದ ನಂತರ ಅವರ ಮನಸ್ಥಿತಿಯು ಬದಲಾಯಿತು. ಅಂದು ಕೆಲವರು ಇವರು ‘ನಮ್ಮ ಪುಣ್ಯ ಪುರುಷ ಇಬ್’ನುಲ್ ಹಯ್ಯಿಬಾನ್ ಮುನ್ಸೂಚನೆ ನೀಡಿದ ಸತ್ಯ ಪ್ರವಾದಿಯರೇ ಆಗಿರುತ್ತಾರೆ ಅದರಲ್ಲಿ ಯಾವುದೇ ಸಂಶಯವಿಲ್ಲ’ ಎಂದು ಹೇಳತೊಡಗಿದರು. ಹೀಗೆ ಬಹಳಷ್ಟು ಜನರು ಪ್ರವಾದಿಯವರನ್ನು ﷺ ನೇರವಾಗಿ ಭೇಟಿಯಾಗಿ ಇಸ್ಲಾಂ ಸ್ವೀಕರಿಸಿದರು.

ಪ್ರವಾದಿಯವರ ﷺ ಪ್ರವಾದಿತ್ವದ ನಿಯೋಗವು ತಕ್ಷಣ ಉಂಟಾದ ವಿದ್ಯಮಾನವಲ್ಲ, ಬದಲಾಗಿ ಬಹಳಷ್ಟು ಸಮಯದಿಂದ ಕಾಲವು ನವೋತ್ತಾನ ನಾಯಕನಿಗಾಗಿ ಕಾಯುತ್ತಿತ್ತು. ಅಂತ್ಯ ಪ್ರವಾದಿಯಾಗಿ ಒಬ್ಬರು ಮಹಾಪುರುಷನನ್ನು ನಿಯೋಗಿಸಲಿದೆ ಎನ್ನುವ ಮುನ್ಸೂಚನೆಯನ್ನು ವೇದಗಳು, ಜ್ಞಾನಿಗಳು ಕೂಡ ಸೂಚನೆ ನೀಡಿದ್ದರು. ಆ ಪುಣ್ಯ ಪುರುಷ ಅಬ್ದುಲ್ಲಾಹ್’ರ (ರ) ಮಗನಾದ ಮುಹಮ್ಮದ್ ﷺ ಆಗಿದ್ದಾರೆಂದು ತಿಳಿಯಿತು. ಮುಹಮ್ಮದರು ﷺ ಕೂಡ ತಾನು ಸ್ವತಃಹ ಜವಾಬ್ದಾರಿಯನ್ನು ವಹಿಸಬೇಕಾದ ವ್ಯಕ್ತಿಯಾಗಿರುವೆನೆಂಬ ಪ್ರಜ್ಞೆಯೊಂದಿಗೆ ಜೀವಿಸುತ್ತಿದ್ದರು. ಎಲ್ಲಾ ಮುನ್ಸೂಚನೆಗಳು ಒಟ್ಟು ಸೇರಿದ ಮುಹೂರ್ತದಲ್ಲಾಗಿತ್ತು ಪ್ರವಾದಿತ್ವದ ಘೋಷಣೆಯುಂಟಾದದ್ದು.
ಪ್ರವಾದಿಯವರಿಗೆ ﷺ ಕಾಣುತ್ತಿದ್ದ ಕನಸುಗಳು ಅವರ ಪ್ರವಾದಿತ್ವದ ನಿಯೋಗಕ್ಕಿರುವ ಮುನ್ನುಡಿಯಾಗಿತ್ತು. ಆಯಿಶ (ರ) ಬೀವಿಯವರು ಈ ಘಟನೆಯ ಕುರಿತಾಗಿ ಈ ರೀತಿ ವಿವರಿಸುತ್ತಾರೆ, ಆರಂಭದಲ್ಲಿ ಪ್ರವಾದಿಯವರಿಗೆ ﷺ ದಿವ್ಯ ಉಪದೇಶದ (ವಹಿಯ್) ಭಾಗವಾಗಿ ಒಳ್ಳೆಯ ಕನಸುಗಳು ಬೀಳುತ್ತಿತ್ತು, ಅವರ ಕನಸುಗಳೆಲ್ಲವೂ ಸಂಪೂರ್ಣವಾಗಿ ನನಸಾಗುತ್ತಿತ್ತು.

ಗಂಭೀರವಾಗಿ ಚಿಂತಿಸಬೇಕಾದ ಬಹಳಷ್ಟು ಕನಸುಗಳು ಆ ಸಂದರ್ಭದಲ್ಲಿ ಪ್ರವಾದಿಯವರಿಗೆ ﷺ ಬೀಳುತ್ತಿತ್ತು. ಪ್ರವಾದಿತ್ವದ ಘೋಷಣೆಗೂ ಮುಂಚೆ ಆರು ತಿಂಗಳವರೆಗೆ ಸತತವಾಗಿ ಕನಸುಗಳು ಬೀಳುತ್ತಿದ್ದವು. ಅಂತಹ ಒಂದು ಕನಸಿನಲ್ಲಿ, ಒಬ್ಬರು ಪ್ರವಾದಿಯವರ ﷺ ಬಳಿ ಬಂದರು. ಅವರ ಹಿಂದೆ ಇಬ್ಬರು ಬೇರೆ ವ್ಯಕ್ತಿಗಳಿದ್ದರು. ಅವರು ಪ್ರವಾದಿಯವರನ್ನು ﷺ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಅವರಲ್ಲಿ ಒಬ್ಬ ವ್ಯಕ್ತಿಯು ಇನ್ನೊಬ್ಬರಲ್ಲಿ ನಾವು ಉದ್ದೇಶಿಸಿದ ವ್ಯಕ್ತಿ ಇವರೇ ಅಲ್ಲವೇ.? ಎಂದು ಕೇಳಿದ್ದರು. ಈ ದೃಶ್ಯವನ್ನು ಕಂಡ ಪ್ರವಾದಿಯವರು ﷺ ಗಾಬರಿಯಾಗಿ ಮರುದಿವಸ ಚಿಕ್ಕಪ್ಪ ಅಬೂತ್ವಾಲಿಬರೊಂದಿಗೆ ವಿಷಯ ತಿಳಿಸಿದಾಗ ಅದೊಂದು ಕೇವಲ ಕನಸು ಮಾತ್ರ ಅಲ್ಲವೇ.? ಎಂದು ಪ್ರವಾದಿಯವರನ್ನು ﷺ ಸಮಾಧಾನ ಪಡಿಸಿದರು. ಕನಸು ಅದೇ ರೀತಿ ಪುನರಾವರ್ತನೆಯಾದಾಗ ಅಬೂತ್ವಾಲಿಬರೊಂದಿಗೆ ವಿಷಯ ತಿಳಿಸಿದರು. ಅಬೂತ್ವಾಲಿಬ್ ಮುಹಮ್ಮದರನ್ನು ﷺ ಒಬ್ಬರು ಸುಪ್ರಸಿದ್ಧ ವೈದ್ಯರ ಬಳಿ ಕರೆದುಕೊಂಡು ಹೋದರು. ಅವರು ಪ್ರವಾದಿಯವರನ್ನು ﷺ ತಲೆಯಿಂದ ಕಾಲಿನವರೆಗೆ ಪರೀಕ್ಷಿಸಿ ಅಬೂತ್ವಾಲಿಬರೊಂದಿಗೆ ಈ ರೀತಿ ಹೇಳಿದರು. ಓ ಅಬೂತ್ವಾಲಿಬರೆ ನೀವು ಭಯ ಪಡಬೇಡಿರಿ, ನಿಮ್ಮ ಸಹೋದರನ ಮಗನಿಗೆ ಏನು ಆಗಲಿಲ್ಲ, ಅತ್ಯುತ್ತಮ ವ್ಯಕ್ತಿಯಾಗಿರುತ್ತಾರೆ ಅವರು. ಭವಿಷ್ಯದಲ್ಲಿ ಬಹಳಷ್ಟು ಒಳಿತು ಈ ಮಹಾ ಪುರುಷನಿಂದ ಬರಲಿದೆ. ಒಮ್ಮೆಯೂ ಕೂಡ ಪಿಶಾಚಿಯ ತೊಂದರೆ ಇವರಿಗೆ ಉಂಟಾಗಲು ಸಾಧ್ಯವೇ ಇಲ್ಲ. ಇವರ ಬಳಿ ನಾಮೂಸ್ (ಜಿಬ್’ರೀಲ್) ಬರುವ ಸಮಯ ಹತ್ತಿರವಾಯಿತು. ಅದರ ಲಕ್ಷಣವಾಗಿದೆ ಇದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-41/365

ಪ್ರವಾದಿಯವರು ﷺ ಆಂತರಿಕವಾಗಿ ಬಹಳಷ್ಟು ಪಕ್ವತೆಗೊಳ್ಳುತ್ತಿದ್ದರು. ಪ್ರವಾದಿಯವರನ್ನು ﷺ ಕಂಡವರೆಲ್ಲರೂ ಸತ್ಯ ಸಂದೇಶವಾಹಕರ ಲಕ್ಷಣವನ್ನು ಕಾಣುತ್ತಿದ್ದರು. ಪ್ರಕೃತಿಯೂ ಕೂಡ ಕೆಲವೊಂದನ್ನು ಪ್ರವಾದಿಯವರಲ್ಲಿ ﷺ ಕೂಗಿ ಹೇಳುತ್ತಿತ್ತು.
ಇಮಾಮ್ ಮುಸ್ಲಿಂರವರು (ರ) ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಮಕ್ಕಾದಲ್ಲಿ ಒಂದು ಕಲ್ಲಿತ್ತು, ಅದು ಪ್ರವಾದಿತ್ವದ ನಿಯೋಗಕ್ಕೂ ಮೊದಲೇ ನನಗೆ ಸಲಾಂ ಹೇಳುತ್ತಿತ್ತು, ಈಗಲೂ ನಾನು ಅದನ್ನು ಗುರುತಿಸಬಲ್ಲೆ ಎಂದು ಪ್ರವಾದಿಯವರು ﷺ ಹೇಳುತ್ತಿದ್ದರು. ಇದು ಕೇವಲ ಒಂದು ಕಲ್ಲಿಗೆ ಮಾತ್ರ ಸೀಮಿತವಾದದ್ದಲ್ಲ. ಇನ್ನೂ ಬಹಳಷ್ಟು ಅನುಭವಗಳು ಪುಣ್ಯ ಪ್ರವಾದಿಯವರ ﷺ ಕುರಿತು ವಿವರಿಸುತ್ತಿದ್ದವು. ಅಲಿಯವರು (ರ) ಈ ರೀತಿ ವಿವರಿಸುತ್ತಾರೆ, ನಾವು ಪ್ರವಾದಿಯವರೊಂದಿಗೆ ﷺ ಮಕ್ಕಾದಲ್ಲಿ ಜೀವಿಸುತ್ತಿದ್ದ ಸಮಯವಾಗಿತ್ತು ಅದು. ನಾವು ಒಟ್ಟಿಗೆ ಮಕ್ಕಾದ ಕೆಲವು ಉಪನಗರಗಳಿಗೆ ಗುಡ್ಡಗಾಡು, ಮರಗಳಿರುವ ಪ್ರದೇಶಗಳ ಮೂಲಕ ಸಂಚರಿಸುತ್ತಿದ್ದಾಗ, ಪ್ರತಿಯೊಂದು ಮರಗಳು ಕೂಡ ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ಅಸ್ಸಲಾಮ್ ಅಲೈಕುಂ ಯಾ ರಸೂಲಲ್ಲಾಹ್ (ಅಲ್ಲಾಹುವಿನ ಸಂದೇಶವಾಹಕರೆ ತಮಗಿದೋ ಸಲಾಂ) ಎಂದು. ಮತ್ತೊಂದು ಉಲ್ಲೇಖದಲ್ಲಿ ಈ ರೀತಿಯೂ ಕಾಣಬಹುದು. ಯಾವುದೇ ಮರದ ಸಮೀಪದಿಂದ ಸಂಚರಿಸುವಾಗ ಪ್ರತಿಯೊಂದು ಮರಗಳೂ ಕೂಡ ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ನನಗೆ ಅದು ಸ್ಪಷ್ಟವಾಗಿ ಕೇಳುತ್ತಿತ್ತು ಎಂದು.

ಇಂತಹ ಬಹಳಷ್ಟು ಘಟನೆಗಳು ಹದೀಸ್’ಗಳಲ್ಲಿ, ಇತಿಹಾಸ ಗ್ರಂಥಗಳಲ್ಲಿ ಕಾಣಬಹುದು. ಹೀಗೆಲ್ಲಾ ನಡೆದಿರಬಹುದೇ.? ಎಂದು ಯಾರೂ ಸಂಶಯ ಪಡಬೇಕಾಗಿಲ್ಲ, ಅಲಂಕಾರಕ್ಕಾಗಿ ಹೇಳಿದ್ದು ಅಲ್ಲ, ಇಂತಹ ಘಟನೆಗಳನ್ನು ಅಲ್ಲಾಹನು ಪ್ರವಾದಿಯವರಿಗೆ ﷺ ಮುಅಜಿಝತ್ತಾಗಿ (ಅಸಾಧರಣ ಮಹತ್ವ) ನೀಡಿದ್ದಾಗಿದೆ. ಅದರ ಭಾಗವಾಗಿಯಾಗಿತ್ತು ಕೆಲವೊಂದು ನಿರ್ಜೀವ ವಸ್ತುಗಳು ಕೂಡ ಬಹಳ ಪಕ್ವತೆಯಿಂದ ವರ್ತಿಸಿದ್ದು. ಅಲ್ಲಾಹನನ್ನು ಭಯಪಡುವ ಉರುಳುವ ಬಂಡೆ ಕಲ್ಲುಗಳ ಕುರಿತು ಕುರ್’ಆನಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲಾಹನನ್ನು ಸ್ತುತಿಸದೇ ಇರುವ ಯಾವುದೇ ವಸ್ತುವಿಲ್ಲವೆಂದು ಖುರ್’ಆನ್ ಹೇಳುವ ವಾಕ್ಯವನ್ನು, ಇಮಾಮ್ ನವವಿ (ರ) ದಾಖಲಿಸಿದ ವಿವರಣೆಯಲ್ಲಿ ಒಂದಾಗಿತ್ತು ಇದು.
ಪ್ರವಾದಿತ್ವದ ಘೋಷಣೆಗೂ ಮುಂಚೆಯೇ ಪ್ರವಾದಿಯವರಿಗೆ ﷺ ಕೆಲವೊಂದು ಅಶರೀರವಾಣಿಗಳು ಕೇಳುತ್ತಿದ್ದವು. ಆಕಾಶದಲ್ಲಿ ಕೆಲವು ವಿಶೇಷವಾದ ಹೊಳಪುಗಳು ಕಾಣುತ್ತಿದ್ದವು. ಒಮ್ಮೆ ಪ್ರೀತಿಯ ಪತ್ನಿ ಖದೀಜರಲ್ಲಿ (ರ), ಓ ಖದೀಜ (ರ) ನನಗೆ ಕೆಲವು ಅಶರೀರವಾಣಿ ಕೇಳುತ್ತಿದೆ. ಕೆಲವು ವಿಶೇಷವಾದ ಪ್ರಕಾಶಗಳು ಕಾಣುತ್ತಿದೆ ಯಾಕಾಗಿ ಇರಬಹುದು.? ನಾನು ಏನು ಆಗುತ್ತೇನೋ ಎನ್ನುವ ಚಿಂತೆ ಕಾಡುತ್ತಿದೆ ಎಂದು ಪ್ರವಾದಿಯವರು ﷺ ಹೇಳಿದಾಗ. ಚಿಂತಿಸಬೇಡಿ, ಅಲ್ಲಾಹನಾಣೆ.! ನಿಮಗೆ ಒಳಿತಲ್ಲದೆ ಇನ್ನೇನು ಆಗುವುದಿಲ್ಲ. ನೀವು ಪ್ರಾಮಾಣಿಕರು ಹಾಗೂ ಕುಟುಂಬ ಸಂಬಂಧಗಳನ್ನು ಜೋಡಿಸುವ ವ್ಯಕ್ತಿಯಲ್ಲವೇ ನಿಮಗೇನು ಆಗುದಿಲ್ಲ. ಎಂದು ಬುದ್ದಿವಂತರಾದ ಖದೀಜ ಉತ್ತರಿಸಿದರು.

ಕ್ರಮೇಣ ಪ್ರವಾದಿಯವರಲ್ಲಿ ﷺ ಹಲವಾರು ಬದಲಾವಣೆ ಕಾಣುತ್ತಿದ್ದವು. ಬಹಳ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಅಲ್ಲಾಹನು ಅವನ ಸಂದೇಶ ವಾಹಕರನ್ನು ಸಜ್ಜುಗೊಳಿಸುತ್ತಿದ್ದನು. ಇಡೀ ಜಗತ್ತನ್ನೇ ಶಾಂತಿಯಿಂದ ಹೊಲಿಸಿಕೊಳ್ಳಲು ಸಂಹಿತೆ ಸಿದ್ಧವಾಗುತ್ತಿತ್ತು. ಆ ಕಾಲದಲ್ಲಿ ಪ್ರವಾದಿಯವರು ﷺ ಒಂಟಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಅರಣ್ಯಗಳಿಂದ ಯಾರೋ ಸಲಾಂ ಹೇಳುವುದು ಕೇಳುತ್ತಿತ್ತು. ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದು ಕೂಗಿ ಹೇಳುತ್ತಿದ್ದವು.
ನಂತರದ ದಿನಗಳಲ್ಲಿ ಏಕಾಂತವನ್ನು ಬಹಳ ಇಷ್ಟಪಡುತಿದ್ದರು. ಅಲ್ಲಾಹನ ಬಗ್ಗೆ ಚಿಂತಿಸುತ್ತಾ, ಅವನನ್ನು ಆರಾಧಿಸುತ್ತಾ ಒಂಟಿಯಾಗಿರುತ್ತಿದ್ದರು. ಈ ಒಂಟಿ ಧ್ಯಾನವು ಬೇರೆ ಏನಾದರೂ ಕಾರಣಕ್ಕೆ ಸ್ವತಃ ತಾವೇ ಹಾಕಿದ ಯೋಜನೆಯೂ ಅಲ್ಲ, ಸಾಮಾಜಿಕವಾಗಿ ನಡೆಯುತ್ತಿದ್ದ ಅನಾಚಾರಗಳಿಂದ ದೂರವಿರಲು ತತ್ವಜ್ಞಾನಿಯಂತೆ ಆಯ್ಜೆ ಮಾಡಿದ ದಾರಿಯೂ ಅಲ್ಲ, ಬದಲಾಗಿ ಅಲ್ಲಾಹನ ಆಧ್ಯಾತ್ಮಿಕತೆಯನ್ನು ಪಡೆಯುವ ಉದ್ದೇಶದಿಂದಾಗಿತ್ತು. ಮುಹಮ್ಮದರನ್ನು ﷺ ಅಂತ್ಯ ಪ್ರವಾದಿಯಾಗಿ ಆಯ್ಕೆ ಮಾಡಿರುವೂದರ ಭಾಗವಾಗಿತ್ತು. ಅದರಲ್ಲಿ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷ ಸಿಗುತ್ತಿತ್ತು. ವಿಶೇಷ ಏಕಾಂತಕ್ಕಾಗಿ ಮಕ್ಕಾದ ಪ್ರಕಾಶಗಿರಿ (ಜಬಲುನ್ನೂರ್) ಮೇಲಿರುವ ಹಿರಾ ಗುಹೆಗೆ ಹೋಗಿ ಕುಳಿತುಕೊಳ್ಳಲು ಅವರ ಅಂತರಾತ್ಮ ಪ್ರೇರೇಪಿಸಿತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-42/365

ಹಿರಾ ಗುಹೆಗೆ ಬಹಳಷ್ಟು ವಿಶೇಷತೆಗಳಿದ್ದವು. ಒಂದು, ಅದರೊಳಗೆ ಕುಳಿತಾಗ ಕಅಬಾಲಯ ನೇರವಾಗಿ ಕಾಣುತಿತ್ತು. ಇನ್ನೊಂದು, ಪ್ರವಾದಿಯವರ ﷺ ತಾತ ಅಬ್ದುಲ್ ಮುತ್ತಲಿಬ್ ಧ್ಯಾನಕ್ಕೆ ಕುಳಿತಿದ್ದ ಸ್ಥಳವಾಗಿತ್ತು. ಹಿರಾ ಗುಹೆಯು ತನ್ನೆಡೆಗೆ ಬಹಳ ವಿನಮ್ರತೆಯಿಂದ ಸ್ವಾಗತಿಸಿದ ವಿವರಣೆಯನ್ನು ಬಹಳಷ್ಟು ಉಲ್ಲೇಖಗಳಲ್ಲಿ ಕಾಣಬಹುದು. ಇಮಾಮ್ ಕುಲಾಯಿಯವರು ಈ ರೀತಿ ವಿವರಿಸುತ್ತಾರೆ. ಎಲ್ಲಾ ವರ್ಷವೂ ಒಂದು ತಿಂಗಳವರೆಗೆ ಪ್ರವಾದಿಯವರು ﷺ ಗುಹೆಯಯೊಳಗೆ ಏಕಾಂತವಾಗಿ ಇರುತ್ತಿದ್ದರು. ಖುರೈಷಿಗಳ ನಡುವೆ ಇಂಥಹ ಒಂದು ಸಂಪ್ರದಾಯ ಹಿಂದೆಯೇ ಇತ್ತು. ‘ತಹನ್ನುಸ್’ ಅಥವಾ ವಿಗ್ರಹಗಳನ್ನು ದೂರಗೊಳಿಸುವುದು. ಅದು ಅಲ್ಲದಿದ್ದರೆ ತಹನ್ನುಫ್ ಅಥವಾ ಮೂರ್ತಿಗಳನ್ನು ಬಿಟ್ಟು ಸತ್ಯವಾದ ದಾರಿಯನ್ನು ಹುಡುಕುವುದು, ಮುಂತಾದ ಹೆಸರಿನಲ್ಲಿ ಅರಿಯಲ್ಪಟ್ಟಿದೆ.

ಒಂದು ತಿಂಗಳ ಏಕಾಂತ ವಾಸದ ಸಂದರ್ಭದಲ್ಲಿ ಅಲ್ಲಿಗೆ ಬರುತಿದ್ದವರಿಗೆ ಪ್ರವಾದಿಯವರು ﷺ ಆಹಾರ ದಾನ ಮಾಡುತಿದ್ದರು. ಧಾನ್ಯ ಮುಗಿದ ನಂತರ ಕೆಳಗೆ ಬರುವಾಗ ನೇರವಾಗಿ ಕಅಬಾಲಯದ ಬಳಿ ತೆರಳಿ, ಏಳು ಬಾರಿ ಅಥವಾ ಹಲವು ಬಾರಿ ಕಅಬಾದ ಪ್ರದಕ್ಷಿಣೆ ಹಾಕಿದ ನಂತರವೇ ಮನೆಗೆ ಹಿಂತಿರುಗಿ ಬರುತ್ತಿದ್ದರು.
ಒಮ್ಮೆ ಹಿರಾ ಗುಹೆಗೆ ಬಂದರೆ ಎಷ್ಟು ದಿವಸ ತಂಗುತ್ತಿದ್ದರು ಎನ್ನುವುದರಲ್ಲಿ ಬಹಳಷ್ಟು ಅಭಿಪ್ರಾಯಗಳಿವೆ. ಮೂರು, ಏಳು, ರಮದಾನ್ ಮಾಸದಲ್ಲಾದರೆ ಒಂದು ತಿಂಗಳು ಹೀಗೆ ಬಹಳಷ್ಟು ಉಲ್ಲೇಖಗಳಿವೆ. ಒಂದು ತಿಂಗಳಿಗಿಂತ ಅಧಿಕ ತಂಗುವ ಕುರಿತು ಯಾವುದೇ ಉಲ್ಲೇಖವಿಲ್ಲ. ಅಲ್ಲಿಯೇ ವಾಸಿಸಲು ಆವಶ್ಯಕವಾದ ವಸ್ತುಗಳನ್ನು ಕೊಂಡೊಗುತ್ತಿದ್ದರು, ವಿಚಿತ್ರ ರೀತಿಯ ಕೇಕ್ ಹಾಗೂ ಆಲಿವ್ ಎಣ್ಣೆಯನ್ನಾಗಿತ್ತು ಕೊಂಡೊಗುತ್ತಿದ್ದದ್ದು ಎಂದು ಗ್ರಂಥಗಳು ತಿಳಿಸುತ್ತದೆ.

ಪ್ರವಾದಿಯವರು ﷺ ಹಿರಾ ಗುಹೆಯಲ್ಲಿ ಆರಾಧನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ, ಪತ್ನಿ ಖದೀಜ (ರ) ಬೀವಿಯವರು ಎಲ್ಲಾ ರೀತಿಯ ಸಹಕಾರ ನೀಡಿ ಸಹಕರಿಸಿದರು. ಪ್ರವಾದಿಯವರು ﷺ ಕೊಂಡುಹೋದ ವಸ್ತುಗಳು ಮುಗಿಯುವ ಹಂತಕ್ಕೆ ತಲುಪುವಾಗ ಬೀವಿಯವರು ಆಹಾರ ವಸ್ತುಗಳನ್ನು ತಲುಪಿಸುತ್ತಿದ್ದರು, ಕೆಲವೊಮ್ಮೆ ನೇರವಾಗಿ ಬೆಟ್ಟ ಹತ್ತಿ ಕೊಂಡುಹೋಗಿ ಕೊಡುತ್ತಿದ್ದರು. ಮನೆಯಿಂದ ನಾಲ್ಕು ಮೈಲಿ ದೂರವಾಗಿತ್ತು ಜಬಲ್’ನ್ನೂರು ಬೆಟ್ಟ, ಕಣಿವೆಯಿಂದ ಸುಮಾರು ಎಂಟುನೂರ ಎಪ್ಪತ್ತು ಮೀಟರ್’ಗಳಷ್ಟು ಕಡಿದಾದ ಪರ್ವತವನ್ನು ಹತ್ತಬೇಕಿತ್ತು. ಒಮ್ಮೆಯೂ ಕೂಡ ಕೋಪವನ್ನು ತೋರಿಸುದಾಗಲಿ, ಹೇಳಿ ಕೊಳ್ಳುವುದಾಗಲಿ ಮಾಡಿರಲಿಲ್ಲ. ತುಂಬು ಹೃದಯದಿಂದ ಪ್ರವಾದಿಯವರ ﷺ ಸೇವೆಯನ್ನು ಮಾಡುತಿದ್ದರು. ಪ್ರವಾದಿಯವರು ﷺ ಖದೀಜರನ್ನು ಪತ್ನಿಯಾಗಿ ಆಯ್ಕೆಮಾಡಿದ್ದು ಯಾಕಾಗಿ ಆದೇಶ ಲಭಿಸಿತ್ತೆಂದು ಅರ್ಥ ಮಾಡಿಕೊಳ್ಳುವ ಸಮಯವಾಗಿತ್ತದು.

ಕೆಲವೊಂದು ಸಂದರ್ಭಗಳಲ್ಲಿ ಪರ್ವತದ ಮೇಲೆ ಇರುವ ಪತಿಯ ಸೇವೆ ಮಾಡಲು ಪ್ರವಾದಿಯವರ ﷺ ಜೊತೆಯಲ್ಲಿಯೇ ಇರುತ್ತಿದ್ದರು, ಸೇವೆ ಮಾಡಿದ ನಂತರವೇ ಕಣಿವೆಯ ಕೆಳಗೆ ಬರುತ್ತಿದ್ದರು.
ಕೆಲವೊಮ್ಮೆ ಪ್ರವಾದಿಯವರನ್ನು ﷺ ನೂರ್ ಪರ್ವತಕ್ಕೆ ಯಾತ್ರೆ ಕಳುಹಿಸಿ ಅವರ ದಾರಿಯನ್ನೇ ನೋಡುತ್ತಿದ್ದರು, ಪರ್ವತವನ್ನು ಬಹಳ ಹೊತ್ತು ನೋಡುತ್ತಲೇ ಇರುತ್ತಿದ್ದರು. ನಂತರ ಪ್ರೀತಿಯ ಪತಿಯನ್ನು ಹುಡುಕುತ್ತಾ ನೂರ್ ಕಣಿವೆಯ ಬಳಿ ತೆರಳುತ್ತಿದ್ದರು. ಕಣಿವೆಯ ಕೆಳಗೆ ನಿಂತು ಬಹಳ ಹೊತ್ತು ಮೇಲೆ ನೋಡಿ ನಿಲ್ಲುತ್ತಿದ್ದರು, ಸ್ವಲ್ಪ ಸಮಯದ ನಂತರ ಪ್ರವಾದಿಯವರೇ ﷺ ನೇರವಾಗಿ ಕೆಳಗೆ ಬರುತ್ತಿದ್ದರು. ಬಹಳ ಸಂತೋಷದಿಂದ ಭೇಟಿಯಾದ ನಂತರ, ಮನೆಯಿಂದ ಕೊಂಡುಬಂದ ವಸ್ತುಗಳನ್ನು ನೀಡಿ ಬಹಳಷ್ಟು ಸೇವೆಯನ್ನು ಮಾಡುತಿದ್ದರು. ಸೂರ್ಯೋದಯವಾದಾಗ ಪ್ರವಾದಿಯವರು ﷺ ಪುನಃ ಪರ್ವತದ ಮೇಲೆ ಹೋಗುತ್ತಿದ್ದರು. ಹೀಗೆ ಒಂದು ರಾತ್ರಿ ಜೊತೆಯಲ್ಲಿ ಕಳೆದ ಆ ಸ್ಥಳದಲ್ಲಿ ನಂತರದ ದಿನಗಳಲ್ಲಿ ಮಸ್ಜಿದ್ ನಿರ್ಮಿಸಲಾಯಿತು. ಅದುವೇ ‘ಮಸ್ಜಿದುಲ್ ಇಜಾಬಃ’ ಎನ್ನುವ ಮಸ್ಜಿದ್.

ಕೆಲವೊಮ್ಮೆ ಬೀವಿಯವರು ಬೆಟ್ಟ ಹತ್ತಿ ಮೇಲೆ ತಲುಪಿದ ನಂತರ ಪ್ರವಾದಿಯವರನ್ನು ಕಾಣುತ್ತಿರಲಿಲ್ಲ. ಸುತ್ತಮುತ್ತಲು ಹುಡುಕಿದರೂ, ಬಹಳಷ್ಟು ಬಾರಿ ಕೂಗಿದರೂ, ಸಿಗದಿದ್ದಾಗ ಕೊನೆಗೆ ಸುತ್ತಮುತ್ತಲು ಹುಡುಕಲು ಸೇವಕರನ್ನು ಕಳುಹಿಸಿದಾಗ ಪ್ರವಾದಿಯವರು ﷺ ಬಹಳ ಗಂಭೀರವಾಗಿ ಧ್ಯಾನ ಮಾಡುತ್ತ ಕುಳಿತಿರುತಿದ್ದರು . ಬೀವಿಯವರಿಗೆ ವಿಷಯ ತಲುಪಿದ ನಂತರ ಪರಸ್ಪರ ಭೇಟಿಯಾಗಿ ಹಿಂತಿರುಗಿ ಹೋಗುತ್ತಿದ್ದರು.
ಕೆಲವೊಮ್ಮೆ ಪ್ರವಾದಿಯವರು ﷺ ಅಂದುಕೊಂಡದ್ದಕ್ಕೂ ಮುಂಚೆಯೇ ಮನೆಗೆ ಹಿಂತಿರುಗಿ ಬರುತ್ತಿದ್ದರು. ಅದಕ್ಕೆ ಕಾರಣ ಅವರು ಕೊಂಡುಹೋಗಿದ್ದ ಆಹಾರ ವಸ್ತುಗಳನ್ನು ಯಾರಿಗಾದರು ದಾನ ಮಾಡಿರುತ್ತಿದ್ದರು.
ಏನಾದರು ವಿಚಿತ್ರ ಅನುಭವ ಉಂಟಾದರೆ ಪ್ರವಾದಿಯವರು ﷺ ಬೀವಿಯವರಲ್ಲಿ ಹೇಳುತ್ತಿದ್ದರು. ಬುದ್ಧಿವಂತೆಯಾಗಿದ್ದ ಬೀವಿ ಬಹಳ ತಾಳ್ಮೆಯಿಂದ ಕೇಳಿ ಉತ್ತಮವಾದ ಪರಿಹಾರ ನೀಡುತ್ತಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-43/365

ಹಿರಾ ಗುಹೆಯಲ್ಲಿ ವಾಸಿಸುತ್ತಿದ್ದ ಕಾಲದಲ್ಲಿ ಪ್ರವಾದಿಯವರು ﷺ ಯಾವ ರೀತಿ ಆರಾಧನೆ ನಡೆಸಿದ್ದರು, ಎನ್ನುವುದರಲ್ಲಿ ಬಹಳಷ್ಟು ಅಭಿಪ್ರಾಯಗಳನ್ನು ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಗತಕಾಲದ ಪ್ರವಾದಿಯರುಗಳ ಆರಾಧನೆ ಶೈಲಿಯಾಗಿತ್ತೆಂದು ಒಂದು ಗುಂಪಿನ ಅಭಿಪ್ರಾಯ. ಆದರೆ ಯಾವ ಪ್ರವಾದಿಯರುಗಳ ಶೈಲಿಯೆಂದು ಸ್ಪಷ್ಟವಾಗಿ ತಿಳಿಸಲಿಲ್ಲ. ಇಲ್ಲಿ ಎಂಟು ವೀಕ್ಷಣೆಯನ್ನು ಅಭಿಪ್ರಾಯ ಪಟ್ಟಿರುತ್ತಾರೆ. ಇಬ್’ನುಲ್ ಬುರ್’ಹಾನ್’ರವರು ಹೇಳುವುದು ಮನುಷ್ಯ ಪಿತ ಆದಂರವರ ಸರಣಿಯಲ್ಲಾಗಿತ್ತು ಎಂದು. ಕಾರಣ ಅವರು ಎಲ್ಲಾ ಪ್ರವಾದಿಯರುಗಳ ತಂದೆಯಾಗಿರುತ್ತಾರೆ ಅಲ್ಲವೇ. ಇಮಾಮ್ ಆಮುದಿಯವರ ಅಭಿಪ್ರಾಯದ ಪ್ರಕಾರ ಪ್ರವಾದಿ ನೂಹ್’ರವರ (ರ) ದಾರಿಯಾಗಿತ್ತು ಎಂದು, ಕಾರಣ ಅವರು ಶೈಖುಲ್ ಅಂಬಿಯಾ ಎನ್ನುವ ಪದವಿಯಿರುವ ವ್ಯಕ್ತಿಯಾಗಿದ್ದಾರಲ್ಲವೇ ಎಂದು. ಒಂದು ವಿಭಾಗ ಪಂಡಿತರ ಅಭಿಪ್ರಾಯ ಪ್ರವಾದಿ ಇಬ್ರಾಹಿಂರವರ (ಅ) ದಾರಿಯಾಗಿತ್ತು ಎಂದು, ಕಾರಣ ಅಲ್ಲಾಹನ ಖಲೀಲ್ ಎನ್ನುವ ಪದವಿಯಿರುವ ಪ್ರವಾದಿಯಾಗಿದ್ದಾರೆ ಅಲ್ಲವೇ. ಅದರ ಜೊತೆಯಲ್ಲಿ ಇಬ್ರಾಹಿಮೀ ಸರಣಿಯ ಕುರಿತು ತಿಳಿಸುವ ಖುರ್’ಆನಿನ ಸೂಕ್ತಗಳು ನಂತರದ ದಿನಗಳಲ್ಲಿ ಅವತರಿಸಿದ್ದು ಕಾಣಬಹುದು. ಪ್ರವಾದಿ ಮೂಸರವರದ್ದು (ಅ), ಪ್ರವಾದಿ ಈಸರವರದ್ದು (ಅ) ಎಂದಾಗಿದೆ ನಾಲ್ಕನೇ ಹಾಗೂ ಐದನೇ ಅಭಿಪ್ರಾಯ. ಕಲೀಮುಲ್ಲಾಹ್, ರೂಹುಲ್ಲಾಹ್ ಎನ್ನುವ ಪದವಿಯಿರುವ ಪ್ರವಾದಿಯಾಗಿದ್ದಾರಲ್ಲವೇ ಅವರು. ಗತಕಾಲದ ಪ್ರವಾದಿಗಳ ಆರಾಧನೆ ಶೈಲಿಯಲ್ಲಿ ಕೆಲವೊಂದನ್ನು ಸೇರಿಸಿಯಾಗಿತ್ತು ಎಂದು ಮತ್ತೊಂದು ಅಭಿಪ್ರಾಯ. ಪ್ರವಾದಿಯವರಿಗೆ ﷺ ಸ್ವಂತವಾದ ಆರಾಧನೆ ಶೈಲಿಯನ್ನು ಆಧ್ಯಾತ್ಮಿಕವಾಗಿ ಅಲ್ಲಾಹನು ನೀಡಿದ್ದನು ಎಂದು ಇನ್ನೊಂದು ಅಭಿಪ್ರಾಯ. ಕೊನೆಯ ಅಭಿಪ್ರಾಯ ಪರಿಗಣಿಸಿ ಇಮಾಮ್ ಇಬ್’ನು ಹಜರ್’ರವರು (ರ) ಹೇಳುವುದು ಈ ರೀತಿಯಾಗಿದೆ. “ಪ್ರವಾದಿಯವರಿಗೆ ﷺ ಆ ಕಾಲದಲ್ಲಿ ಉತ್ತಮವಾದ ಕೆಲವು ಆರಾಧನೆ ಶೈಲಿ ಲಭಿಸಿತ್ತು, ಅದರ ಪ್ರಕಾರ ಪ್ರವಾದಿಯವರು ﷺ ಆರಾಧನೆ ನಿರ್ವಹಿಸುತ್ತಿದ್ದರು.”

ಆ ಕಾಲದ ಪ್ರಮುಖ ಆರಾಧನೆ, ಚಿಂತನೆ ಹಾಗೂ ಧ್ಯಾನವಾಗಿತ್ತು. ಅಥವಾ ಅಲ್ಲಾಹನ ಮಹತ್ವಗಳನ್ನು ಚಿಂತಿಸುವುದಾಗಿತ್ತು. ಈ ಒಂದು ಸಮಯವನ್ನು ಆಧ್ಯಾತ್ಮಿಕ ಶೈಲಿಯನ್ನು (ರಿಯಾಲ) ಪೂರ್ತಿಗೊಳಿಸುವ ತಪಸ್ಸಿನ ಕಾಲವಾಗಿ ಪ್ರಸ್ತುತಪಡಿಸಿದವರೂ ಇದ್ದಾರೆ. ಸರಳವಾಗಿ ಹೇಳುವುದಾದರೆ ಜೀವನದ ವ್ಯವಹಾರಗಳಿಂದ ದೂರ ಸರಿದು ಚಿಂತನೆಯಲ್ಲಿ (ತಫಕ್ಕುರ್) ಕಳೆಯುವ ಸಮಯವಾಗಿದೆ ಎಂದು.
ಹಿರಾ ಗುಹೆಯಲ್ಲಿ ವಾಸಿಸುತ್ತಿರುವ ಕಾಲದಲ್ಲಿ ದಿವಸಗಳು ಕಳೆದಂತೆ ಪ್ರವಾದಿಯವರಿಗೆ ﷺ ವಿಶೇಷವಾದ ಆಧ್ಯಾತ್ಮಿಕ ಅನುಭವಗಳು ಲಭಿಸುತ್ತಿತ್ತು. ಇದರ ಕುರಿತು ಪ್ರವಾದಿಯವರು ﷺ ಪ್ರೀತಿಯ ಪತ್ನಿ ಖದೀಜರಲ್ಲಿ (ರ) ಈ ರೀತಿ ವಿವರಿಸುತ್ತಾರೆ. ನಾನು ಒಂಟಿಯಾಗಿ ಇರುವ ಸಂದರ್ಭದಲ್ಲಿ ವಿಶೇಷವಾದ ಬೆಳಕುಗಳು ಕಾಣುತ್ತದೆ, ಕೆಲವೊಮ್ಮೆ ಕೆಲವು ಶಬ್ದಗಳು ಕೇಳುತ್ತದೆ. ಓ ಮುಹಮ್ಮದರೇ ﷺ ನಾನು ಜಿಬ್’ರೀಲ್ ಆಗಿರುತ್ತೇನೆ ಎಂದು. ನನಗೇನು ಆಗುತ್ತಿದೆ ಒಂದೂ ತಿಳಿಯುತ್ತಿಲ್ಲ. ಎಂದು ಪ್ರವಾದಿಯವರು ﷺ ಖದೀಜರಲ್ಲಿ (ರ) ಹೇಳಿದಾಗ, ನೀವು ಏನೂ ಭಯಪಡಬೇಡಿರಿ ನಿಮಗೆ ಒಳಿತಲ್ಲದೇ ಇನ್ನೇನು ಆಗುದಿಲ್ಲ ಎಂದು ಖದೀಜ (ರ) ಉತ್ತರಿಸಿದರು.
ಸ್ವಲ್ಪ ಸಮಯದ ನಂತರ ಅಬೂಬಕ್ಕರ್’ರವರು (ರ) ಆ ಸ್ಥಳಕ್ಕೆ ಆಗಮಿಸಿದಾಗ ಖದೀಜ (ರ) ಎಲ್ಲಾ ವಿಷಯವನ್ನು ಅಬೂಬಕ್ಕರ್’ರವರಲ್ಲಿ(ರ) ತಿಳಿಸಿದರು. ನೀವು ವರಕತ್ ಬಿನ್ ನೌಫಲ್’ರನ್ನು ಸಂಪರ್ಕಿಸಿ ಅವರಿಗೆ ವಿಷಯವನ್ನು ತಿಳಿಸಿರಿ ಅವರು ಬಹಳ ದೊಡ್ಡ ವೇದ ಜ್ಞಾನಿಯಾಗಿದ್ದಾರೆ ಎಂದು ಅಬೂಬಕ್ಕರ್’ರವರು ಹೇಳಿದರು. ನಂತರ ಪ್ರವಾದಿಯವರ ﷺ ಜೊತೆಯಲ್ಲಿ ಅಬೂಬಕ್ಕರ್’ರವರು ವರಕತ್ ಬಿನ್ ನೌಫಲನ್ನು ಭೇಟಿಯಾಗಿ ಸಂಪೂರ್ಣ ವಿಷಯವನ್ನು ತಿಳಿಸಿದರು. ನಾನು ಜಿಬ್’ರೀಲ್ ಆಗಿದ್ದೇನೆ ಎಂದು ಹೇಳಿದಾಗ ಸುಬ್ಬುಹಾನ್.. ಸುಬ್ಬುಹಾನ್.. ಸ್ತುತಿಸಲ್ಪಡುವವನು.. ವಿಗ್ರಹವನ್ನು ಆರಾಧಿಸುವ ಈ ಪ್ರದೇಶದಲ್ಲಿ ಜಿಬ್ರೀಲ್ (ಅ) ಎಂದು ಹೇಳುತ್ತಿದ್ದಾರಲ್ಲವೇ.! ಅಲ್ಲಾಹನು ಹಾಗೂ ಅವನ ಸಂದೇಶ ವಾಹಕರ ನಡುವೆ ಜವಾಬ್ದಾರಿ ತಿಳಿಸಿಕೊಡುವ ಮಲಕ್ (ಫರಿಶ್ತ) ಆಗಿದ್ದಾರೆ ಮಗನೇ ಅವರು, ಅದರಲ್ಲಿ ಭಯ ಪಡಬೇಕಾಗಿಲ್ಲ ಎಂದು ವರಕತ್ ಬಿನ್ ನೌಫಲ್ ಹೇಳಿದರು. ಈ ಘಟನೆಯನ್ನು ಅಂರ್ ಬಿನ್ ಶುರಹಬೀಲ್’ರವರು ಉಲ್ಲೇಖಿಸಿದ್ದಾರೆ.

ಮತ್ತೊಮ್ಮೆ ರಾತ್ರಿ ಒಂಟಿಯಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ‘ಅಸ್ಸಲಾಂ’ ಎನ್ನುವ ಶಬ್ದ ಕೇಳಿಸಿತು. ತಕ್ಷಣವೇ ಮನೆಗೆ ತೆರಳಿ ಖದೀಜ (ರ) ಬೀವಿಯವರಲ್ಲಿ ವಿಷಯ ತಿಳಿಸಿದಾಗ, ಅಸ್ಸಲಾಂ ಎನ್ನುವುದು ಶಾಂತಿಯ ಸಂದೇಶವಾಗಿದೆಯಲ್ಲವೇ ಒಳ್ಳೆಯದೇ ಉಂಟಾಗುತ್ತದೆ, ಭಯ ಪಡಬೇಕಾಗಿಲ್ಲ ಎಂದು ಖದೀಜ (ರ) ಹೇಳಿದರು.
ಮತ್ತೊಮ್ಮೆ ವರಖತ್ ಬಿನ್ ನೌಫಲ್’ರೊಂದಿಗೆ ಇನ್ನೊಂದು ಅನುಭವವನ್ನು ಹೇಳಿದಾಗ, ಸಂತೋಷ ಪಡು ಮಗನೇ ಸಂತೋಷ ಪಡು. ಮರ್’ಯಮಿನ ಮಗನಾದ ಈಸ (ಅ) ಪ್ರವಾದಿಯವರ ಬಳಿ ಬರುತ್ತಿದ್ದ ನಾಮೂಸ್ ಆಗಿದ್ದಾರೆ ಮಗನನ್ನು ಕೂಡ ಹಿಂಬಾಲಿಸುತ್ತಿರುವುದು….

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-44/365

ಪ್ರವಾದಿಯವರು ﷺ ಅಧಿಕೃತವಾಗಿ ತಮ್ಮ ಜವಾಬ್ದಾರಿಯನ್ನು ಪಡೆಯುದಕ್ಕೂ ಮುಂಚಿನ ಒಂದು ಘಟನೆಯನ್ನು ತಿಳಿಯೋಣ. ರಮದಾನಿನ ಕೊನೆಯ ದಿನಗಳಲ್ಲಿ ಪ್ರವಾದಿಯವರು ﷺ ಹಿರಾ ಗುಹೆಯಲ್ಲಿ ಆರಾಧನೆಯಲ್ಲಿ ನಿರತರಾಗಿದ್ದರು. ಶನಿವಾರ ಹಾಗೂ ಆದಿತ್ಯವಾರ ರಾತ್ರಿಗಳಲ್ಲಿ ಜಿಬ್’ರೀಲ್ (ಅ) ಪ್ರವಾದಿಯವರಿಗೆ ﷺ ಕಾಣಿಸಿಕೊಂಡಿದ್ದರು. ಸೋಮವಾರ ರಾತ್ರಿ ಜಿಬ್’ರೀಲ್ ಹಾಗೂ ಮೀಕಾಯಿಲ್ (ಅ) ಒಟ್ಟು ಸೇರಿ ಪ್ರವಾದಿಯವರ ﷺ ಮುಂದೆ ಕಾಣಿಸಿಕೊಂಡರು. ಮೀಕಾಯಿಲ್ (ಅ) ಆಕಾಶ ಹಾಗೂ ಭೂಮಿಯ ನಡುವೆ ನಿಂತುಕೊಂಡಿದ್ದರು. ಮಲಕುಗಳಲ್ಲಿ (ಫರಿಶ್ತ) ಒಬ್ಬರು ಇನ್ನೊಬ್ಬರಲ್ಲಿ ನಾವು ಉದ್ದೇಶಿಸಿರುವ ವ್ಯಕ್ತಿ ಇವರೇ ಅಲ್ಲವೇ.? ಎಂದು ಕೇಳಿದಾಗ. ಹೌದು ಇವರೇ ಆಗಿರುತ್ತಾರೆ ಎಂದು ಪಕ್ಕದಲ್ಲಿ ಇದ್ದ ಮಲಕ್ ಉತ್ತರಿಸಿದರು. ಹಾಗಾದರೆ ಇವರನ್ನು ಇನ್ನೊಬರ ಜೊತೆ ತೂಕ ಮಾಡಿ ನೋಡೋಣ ಎಂದು ಹೇಳಿ ತೂಕ ಮಾಡಿದಾಗ, ಪ್ರವಾದಿಯವರು ﷺ ಅಧಿಕ ಭಾರವಿದ್ದರು. ಹತ್ತು ಜನರನ್ನು ಇಟ್ಟು ತೂಕ ಮಾಡಿದಾಗಲೂ ಪ್ರವಾದಿಯವರೇ ﷺ ಅಧಿಕ ಭಾರವಿದ್ದರು. ನೂರು ಜನರನ್ನು ಇಟ್ಟು ತೂಕ ಮಾಡಿದಾಗಲೂ ಇದೆ ರೀತಿಯಾಗಿತ್ತು. ಕೊನೆಗೆ ಅವರು ಹೀಗೆ ಹೇಳಿದರು ಕಅಬಾಲಯದ ಒಡೆಯನಾಣೆಗೂ ಈ ವ್ಯಕ್ತಿಯನ್ನು ಒಂದು ಭಾಗದಲ್ಲಿ ಇರಿಸಿ, ಮತ್ತೊಂದು ಭಾಗದಲ್ಲಿ ಸಂಪೂರ್ಣ ಸಮುದಾಯವನ್ನು ಇರಿಸಿದರೂ ಈ ವ್ಯಕ್ತಿಯೇ ಅಧಿಕ ಭಾರ ಇರುವರು ಎಂದು.

ನಂತರ ಮುತ್ತು ರತ್ನಗಳಿಂದ ಕೂಡಿದ ಒಂದು ಚಾಪೆಯನ್ನು ಹಾಕಿ ಅದರ ಮೇಲೆ ಪ್ರವಾದಿಯವರನ್ನು ಕುಳ್ಳಿರಿಸಿದರು. ಇವರ ಒಳಭಾಗವನ್ನು ಒಮ್ಮೆ ಪವಿತ್ರಗೊಳಿಸಬೇಕೆಂದು ಒಬ್ಬರು ಹೇಳಿದಾಗ ಇತರರು ಅದನ್ನು ಮಾಡಿದರು. (ಮನುಷ್ಯ ಸ್ವಭಾವಿಕವಾಗಿ) ಪೈಶಾಚಿಕ ಪ್ರಭಾವಕ್ಕೆ ಒಳಗಾಗುವ ರಕ್ತದ ದ್ರವ್ಯರಾಶಿಯನ್ನು ದೇಹದಿಂದ ತೆಗೆದುಹಾಕಿದರು. ಚೆನ್ನಾಗಿ ತೊಳೆದು ನಂತರ ತೆರದ ದೇಹದ ಭಾಗವನ್ನು ಹೊಲಿದು ಸೇರಿಸಿ ಪ್ರವಾದಿಯವರನ್ನು ﷺ ಸರಿಯಾಗಿ ಕುಳ್ಳಿರಿಸಿದರು.
ನಂತರ ಪ್ರವಾದಿತ್ವದ ಜವಾಬ್ದಾರಿಯನ್ನು ನೀಡಲಾಯಿತು. ಮನೋ ಧೈರ್ಯಕ್ಕೆ ಅವಶ್ಯವಾದ ಎಲ್ಲವನ್ನು ನೀಡಿದ ಬಳಿಕ ಪ್ರವಾದಿಯವರ ﷺ ಬಳಿ ಬಂದು ಜಿಬ್’ರೀಲ್ (ಅ) ಓದಿರಿ ಎಂದು ಹೇಳಿದರು. ನಾನು ಓದುವ ವ್ಯಕ್ತಿಯಲ್ಲ ಎಂದು ಉತ್ತರಿಸಿದಾಗ ಜಿಬ್’ರೀಲ್ (ಅ) ಪ್ರವಾದಿಯವರನ್ನು ﷺ ಗಟ್ಟಿಯಾಗಿ ತಬ್ಬಿಕೊಂಡರು. ಅಪ್ಪುಗೆಯ ಗಾಢತೆಯು ಪ್ರವಾದಿಯವರಿಗೆ ﷺನೋವಿನ ಅನುಭವ ಉಂಟುಮಾಡಿತ್ತು. ಪುನಃ ಓದಿರಿ ಎಂದು ಹೇಳಿದಾಗ, ನಾನು ಓದುವ ವ್ಯಕ್ತಿಯಲ್ಲ ಎಂದು ಪುನಃ ಉತ್ತರಿಸಿದರು. ಇದೇ ರೀತಿ ಮೂರು ಬಾರಿ ಪುನರಾವರ್ತನೆಯಾದ ಬಳಿಕ ಪವಿತ್ರ ಕುರ್’ಆನಿನ ಖಲಂ ಅಧ್ಯಾಯದ ಇಖ್’ರಅ ಬಿಸ್ಮಿ… ಎನ್ನುವ ಸೂಕ್ತವನ್ನು ಜಿಬ್’ರೀಲ್ (ಅ) ಹೇಳಿ ಕೊಟ್ಟರು. ಹೇಳಿ ಕೊಟ್ಟ ಸೂಕ್ತದ ಅರ್ಥ ಈ ರೀತಿಯಾಗಿದೆ. ನಿಮ್ಮನ್ನು ಸೃಷ್ಟಿಸಿದ ಒಡೆಯನ ಹೆಸರಿನಿಂದ ಆರಂಭಿಸಿರಿ.! ಅಲಖಿನಿಂದ (ರಕ್ತಪಿಂಡ) ಮನುಷ್ಯನನ್ನು ಸೃಷ್ಟಿಸಲಾಗಿದೆ. ಓದಿರಿ… ತಮ್ಮ ಪ್ರಭು ಅತ್ಯಂತ ಉದಾರಿಯಾಗಿರುವನು. ಅವನು ಲೇಖನಿಯಿಂದ ಕಲಿಸುವವನಾಗಿದ್ದಾನೆ.

ನಾನು ಓದುವ ವ್ಯಕ್ತಿಯಲ್ಲ ಎನ್ನುವ ಪದವು ಬಹಳ ಗಮನಾರ್ಹವಾಗಿದೆ. ಕಾರಣ ಪ್ರವಾದಿಯವರು ﷺ ಯಾವುದೇ ಗುರುವಿನಿಂದ ಓದಲು, ಬರೆಯಲು ಕಲಿತ ವ್ಯಕ್ತಿಯಾಗಿರಲಿಲ್ಲ. ಆದರೂ ಅಲ್ಲಾಹನ ಹೆಸರಿನಿಂದ ಓದಲು ಹೇಳಿದಾಗ ಪ್ರವಾದಿಯವರು ﷺ ನಿರಾಕರಿಸಿರಲಿಲ್ಲ, ಕಾರಣ ಆಗ ಅಲ್ಲಾಹನು ಅವರಿಗೆ ಓದುವ ಸಾಮರ್ಥ್ಯ ನೀಡಿದ್ದನು. ಅಥವಾ ಪ್ರವಾದಿಯವರಿಗೆ ﷺ ಲಭಿಸಿದ್ದೆಲ್ಲವೂ ಅಲ್ಲಾಹನು ನೇರವಾಗಿ ನೀಡಿದ ಅನುಗ್ರಹವಾಗಿತ್ತು. ‘ಉಮ್ಮೀಯ್ಯ್’ ಎನ್ನುವ ಅರಬಿ ಪದದ ಅರ್ಥ ಅಕ್ಷರ ಜ್ಞಾನ ಇಲ್ಲದ ವ್ಯಕ್ತಿ ಎಂದಾಗಿದೆ. ಆದರೆ ಪ್ರವಾದಿಯವರು ﷺ ಉಮ್ಮೀಯ್ಯ್ ಆಗಿರುತ್ತಾರೆ ಎನ್ನುವುದರ ಅರ್ಥ ಅದಲ್ಲ, ಸಾಮಾನ್ಯವಾಗಿ ಎಲ್ಲರ ರೀತಿಯಲ್ಲಿ ವಿದ್ಯಾರ್ಜನೆ ಮಾಡಲಿಲ್ಲ ಎಂದಾಗಿದೆ. ಪ್ರಾಯೋಗಿಕವಾಗಿ ಏನನ್ನೂ ಕಲಿಯದೆ ಎಲ್ಲಾ ಜ್ಞಾನವನ್ನು ನಿಭಾಯಿಸಿದಾಗ ಪ್ರವಾದಿಯವರ ﷺ ಜ್ಞಾನದ ಬಗ್ಗೆ ಎಲ್ಲರೂ ಆಶ್ಚರ್ಯಚಕಿತರಾಗಿದ್ದರು.

ಹಿರಾ ಗುಹೆಯಲ್ಲಿ ಕುರ್’ಆನ್ ಲಭಿಸಿದ ಬಳಿಕ, ಪ್ರವಾದಿಯವರು ﷺ ಮನೆಗೆ ತೆರಳಿದರು. ದಾರಿಯಲ್ಲಿ ಸಿಗುವ ಕಲ್ಲುಗಳು, ಸಸ್ಯಗಳು ಪ್ರವಾದಿಯವರಿಗೆ ﷺ ಸಲಾಂ ಹೇಳುತ್ತಿದ್ದವು. ಲಭಿಸಿದ ವೇದದ ಬಾರ ಹಾಗೂ ನಿಯೋಗಿಸಿದ ಜವಾಬ್ದಾರಿಯ ಬಾರವು ಬಹಳ ಅಧಿಕವಾಗಿತ್ತು. ಪ್ರವಾದಿಯವರ ﷺ ಹೃದಯವು ಕಂಪಿಸ ತೊಡಗಿತು. ಪ್ರವಾದಿಯವರು ﷺ ಪ್ರೀತಿಯ ಪತ್ನಿ ಖದೀಜರನ್ನು (ರ) ಕೂಗಿ ನನ್ನನ್ನು ಹೊದಿಕೆಯಿಂದ ಮುಚ್ಚಿ ಮಲಗಿಸಿರಿ ಎಂದು ಹೇಳಿದಾಗ, ತಕ್ಷಣವೇ ಖದೀಜ (ರ) ಬೀವಿ ಹೊದಿಕೆಯಿಂದ ಮುಚ್ಚಿದರು. ಅತ್ಯುನ್ನತವಾದ ಜವಾಬ್ದಾರಿಯಾಗಿದೆ ತನಗೆ ಲಭಿಸಿದ್ದು ಎಂದು ಪ್ರವಾದಿಯವರಿಗೆ ﷺ ತಿಳಿದಿತ್ತು, ಆದರೆ ಜವಾಬ್ದಾರಿಯ ಬಾರವು ಪ್ರವಾದಿಯವರನ್ನು ﷺ ಸ್ವಾಧೀನ ಪಡಿಸಿತ್ತು. ಖದೀಜ ಹತ್ತಿರದಲ್ಲೇ ಕುಳಿತು ಸಮಾಧಾನ ಪಡಿಸುತ್ತಿದ್ದರು….

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-45/365

ಪ್ರವಾದಿಯವರು ﷺ ವಿವರಿಸ ತೊಡಗಿದರು. ಖದೀಜ ನಾನು ನಿಮ್ಮಲ್ಲಿ ಕನಸಿನಲ್ಲಿ ಬರುತ್ತಿದ್ದ ಒಬ್ಬರ ಕುರಿತು ಹೇಳುತ್ತಿದ್ದೆ ಅಲ್ಲವೇ. ವಾಸ್ತವದಲ್ಲಿ ಅವರೇ ಮಲಕ್ ಜಿಬ್’ರೀಲ್ (ಅ) ಆಗಿರುತ್ತಾರೆ. ಇವತ್ತು ಅವರು ಖುದ್ದಾಗಿ ನನ್ನ ಬಳಿ ಬಂದಿದ್ದರು. ನಂತರದ ಪ್ರತಿಯೊಂದು ವಿಷಯವನ್ನು ಪ್ರೀತಿಯ ಪತ್ನಿ ಖದೀಜರಲ್ಲಿ (ರ) ಹಂಚಿಕೊಂಡರು. ಕೊನೆಗೆ ಪ್ರಿಯೆ ನಾನು ಬಹಳಷ್ಟು ಹೆದರಿಕೊಂಡಿದ್ದೆ ಇದೇನಾಗುತ್ತಿದೆ ಎಂದು ಹೇಳಿದಾಗ, ತಕ್ಷಣವೇ ಖದೀಜರು (ರ) ನೀವು ಭಯ ಪಡಬೇಡಿರಿ, ಏನೇಯಾದರು ತಮಗೆ ಒಳಿತು ಮಾತ್ರವೇ ಉಂಟಾಗುವುದು. ಕಾರಣ ನೀವು ಕುಟುಂಬ ಸಂಬಂಧಗಳನ್ನು ಸೇರಿಸುವ ವ್ಯಕ್ತಿಯಲ್ಲವೇ, ಸತ್ಯವನ್ನು ಮಾತ್ರ ಹೇಳುವ, ಅಥಿತಿಗಳನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸುವ, ವಿಶ್ವಾಸದೊಂದಿಗೆ ನೀಡಿದ ವಸ್ತುಗಳನ್ನು ಬಹಳ ಜಾಗರೂಕತೆಯಿಂದ ನೋಡಿಕೊಳ್ಳುವ, ನಿರಾಶ್ರಿತರಿಗೆ ವಸತಿ ಕಲ್ಪಿಸುವ, ಇತರರ ನೋವನ್ನು ಹಗುರಗೊಳಿಸುವ ವ್ಯಕ್ತಿಯಾಗಿದ್ದೀರಿ ಅಲ್ಲವೇ.! ಅಲ್ಲಾಹನಾಣೆ ನಿಮ್ಮನ್ನು ಅವರು ನಿರಾಶೆ ಮಾಡಲಾರರು, ಅಲ್ಲಾಹನಿಂದ ಸಿಕ್ಕಿದ್ದನ್ನು ನಿಶ್ಚಿಂತೆಯಿಂದ ಸ್ವೀಕರಿಸಿರಿ. ಖಂಡಿತವಾಗಿಯೂ ಅದು ಸತ್ಯ ಮಾತ್ರವೇ ಆಗಿರುತ್ತದೆ ಎಂದು ಹೇಳಿದರು.

ಪ್ರೀತಿಯ ಪತಿಗೆ ಸಮಾಧಾನ ಪಡಿಸಿ, ವಿಶ್ರಾಂತಿ ಪಡೆಯಲು ಅವಕಾಶ ಮಾಡಿಕೊಟ್ಟು. ಖದೀಜ (ರ) ಅಲ್ಲಿಂದ ಹೊರಗೆ ಬಂದು ಉತುಬನ ಸೇವನಾಗಿದ್ದ ಅದ್ದಾಸ್ ಎನ್ನುವ ವ್ಯಕ್ತಿಯನ್ನು ಭೇಟಿಯಾದರು. ನೀನವ ಪ್ರದೇಶದ ಶುದ್ಧ ಕ್ರೈಸ್ತ ವಿಶ್ವಾಸಿಯಾದ ವ್ಯಕ್ತಿಯಾಗಿದ್ದರು ಅದ್ದಾಸ್. ಖದೀಜ (ರ) ಅದ್ದಾಸ್’ನ ಬಳಿ ಬಂದು ಓ ಅದ್ಸಾಸ್ ನಿಮ್ಮಿಂದ ಒಂದು ವಿಷಯಕ್ಕೆ ಸ್ಪಷ್ಟವಾದ ಉತ್ತರ ಬೇಕಾಗಿತ್ತು, ನಿಮಗೆ ಜಿಬ್’ರೀಲರ (ಅ) ಕುರಿತು ಏನಾದರೂ ತಿಳಿದಿದಿಯೇ ಎಂದು ಕೇಳಿದರು. ತಕ್ಷಣವೇ ಅದ್ದಾಸ್ ಖುದ್ದೂಸುನ್.. ಪರಿಶುದ್ಧನು ಪರಿಶುದ್ಧನು. ವಿಗ್ರಹಗಳನ್ನು ಆರಾಧಿಸುವ ಈ ಸ್ಥಳದಲ್ಲಿ ಜಿಬ್’ರೀಲಿಗೆ (ಅ) ಏನು ಕೆಲಸ.? ಎಂದು ಅದ್ದಾಸ್ ಹೇಳಿದರು. ನಿಮಗೆ ಜಿಬ್’ರೀಲರ (ಅ) ಕುರಿತು ತಿಳಿದಿರುವಷ್ಟು ಹೇಳುವಿರ.? ಎಂದು ಖದೀಜ (ರ) ಪುನಃ ಕೇಳಿದಾಗ, ಅಲ್ಲಾಹುವಿನ ನಂಬಿಕಸ್ತ ದೂತರಾಗಿದ್ದಾರೆ ಅವರು. ಅವನ ಸಂದೇಶಗಳನ್ನು ಪ್ರವಾದಿಯರಿಗೆ ತಲುಪಿಸುವ ಮಲಕ್. ಪ್ರವಾದಿ ಮೂಸ (ಅ) ಹಾಗೂ ಈಸಾರ(ಅ) ಆತ್ಮೀಯ ಮಿತ್ರ, ಹೀಗೆ ಬಹಳಷ್ಟು ಪ್ರಾಮುಖ್ಯತೆ ಹೊಂದಿದ ಮಲಕ್ ಆಗಿದ್ದಾರೆ ಎಂದು ಅದ್ದಾಸ್ ಹೇಳಿ ನಿಲ್ಲಿಸಿದರು. ಖದೀಜ (ರ) ಅಲ್ಲಿಂದ ತಮ್ಮ ಮನೆಗೆ ಹಿಂತಿರುಗಿ ಬಂದ ನಂತರ, ಪತಿಯನ್ನು ಕರೆದುಕೊಂಡು ವೇದ ಜ್ಞಾನಿಯಾದ ವರಕತ್ ಬಿನ್ ನೌಫಲ್’ರನ್ನು ಭೇಟಿಯಾಗಳು ಹೊರಟರು. ನೌಫಲ್ ವಿವರಣೆಯನ್ನು ಕೇಳಿದಾಗ ಪ್ರವಾದಿವರ್ಯರು ﷺ ಎಲ್ಲವನ್ನು ಸ್ಪಷ್ಟವಾಗಿ ವಿವರಿಸಿದರು. ನೌಫಲ್ ಎಲ್ಲವನ್ನು ಕೇಳಿದ ನಂತರ, ನೀವು ಸಂತೋಷ ಪಡಿ, ಮರ್’ಯಮಿನ ಮಗನಾದ ಈಸ (ಅ) ಮುನ್ಸೂಚನೆ ನೀಡಿದ ಪ್ರವಾದಿಯಾಗಿರುತ್ತೀರಿ ನೀವು. ಪ್ರವಾದಿ ಮೂಸರ (ಅ) ಬಳಿ ಬರುತ್ತಿದ್ದ ನಾಮುಸ್ ಅಥವಾ ಜಿಬ್’ರೀಲರೇ ಆಗಿರುತ್ತಾರೆ ನಿಮ್ಮನ್ನು ಕೂಡ ಭೇಟಿಯಾದದ್ದು.

ಖಂಡಿತವಾಗಿಯೂ ಪ್ರಬೋಧನೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಪ್ರವಾದಿಯಾಗಿರುತ್ತೀರಿ ನೀವು ಅದರಲ್ಲಿ ಯಾವುದೇ ಸಂದೇಹವಿಲ್ಲ. ಜಿಹಾದಿಗಾಗಿ ಆದೇಶ ನೀಡಲಾಗುವುದು, ಜನರು ನಿಮ್ಮನ್ನು ಬಹಳಷ್ಟು ಟೀಕಿಸುವರು, ಈ ಊರಿನಿಂದ ಪಲಾಯನ ಮಾಡಬೇಕಾಗಿ ಬರುವುದು, ಬಹಳಷ್ಟು ತೊಂದರೆಗಳು ಎದುರಿಸಬೇಕಾಗಿ ಬರುವುದು. ಬಹುಶಃ ಅಂದು ನಾನಿರುತಿದ್ದರೆ ಸಂಪೂರ್ಣ ಬೆಂಬಲ ನೀಡುತ್ತಿದ್ದೆ. ಎಂದು ನೌಫಲ್ ಹೇಳಿದರು. ನಾನು ಈ ಊರು ಬಿಟ್ಟು ಹೋಗಬೇಕಾಗಿ ಬರುವುದೇ.? ಎಂದು ಪ್ರವಾದಿಯವರು ﷺ ಕೇಳಿದಾಗ. ಹೌದು.! ಸತ್ಯ ಸಂದೇಶವಾಹಕರಾಗಿ ಬಂದ ಎಲ್ಲಾ ಪ್ರವಾದಿಯರೂ ಕೂಡ ಟೀಕಿಸಲ್ಪಟ್ಟಿದ್ದಾರೆ, ತೊಂದರೆಗಳನ್ನು ಅನುಭವಿಸಿದ್ದಾರೆ, ಎಂದು ಹೇಳಿ ನೌಫಲ್ ಎದ್ದು ನಿಂತು ಪ್ರವಾದಿಯವರ ﷺ ತಲೆಯನ್ನು ಸ್ಪರ್ಶಿಸಿ ವಂದನೆ ಸಲ್ಲಿಸಿದರು. (ಹೆಚ್ಚು ಕಾಲ ಉಳಿಯಲಿಲ್ಲ ಅವರು ಇಹಲೋಕ ತ್ಯಜಿಸಿದರು) ಖದೀಜ (ರ) ಹಾಗೂ ಪ್ರವಾದಿಯವರು ﷺ ಮನೆಗೆ ಹಿಂತಿರುಗಿದರು.

ಪ್ರವಾದಿಯವರು ﷺ ಮೂರು ದಿನಗಳ ವರೆಗೆ ಮನೆಯಲ್ಲೇ ಕಾಲ ಕಳೆದರು. ತನ್ನ ಜವಾಬ್ದಾರಿಯ ಹಿರಿಮೆಯ ಕುರಿತು ಚಿಂತನೆಗಳು ಅಧಿಕವಾಯಿತು. ಜಿಬ್’ರೀಲರನ್ನು (ಅ) ಭೇಟಿಯಾಗುವ ಭಯವು ದೂರವಾಗಿ ಇನ್ನೂ ಯಾವಾಗ ಅವರನ್ನು ನೋಡುವುದೋ ಎನ್ನುವ ಆಲೋಚನೆ ಬರತೊಡಗಿತು. ಭಯವನ್ನು ಬಿಟ್ಟು ಜಿಬ್’ರೀಲರನ್ನು (ಅ) ಭೇಟಿಯಾಗಲು ಕಾಯುವ ಮಟ್ಟಕ್ಕೆ ತಲುಪಿದರು. ಪ್ರವಾದಿಯವರು ﷺ ಮನೆಯಿಂದ ಹೊರಗೆ ಬಂದು ಕಅಬಾಲಯದ ಕಡೆಗೆ ನಡೆದರು. ತಕ್ಷಣವೇ ಅದೋ ಒಂದು ಶಬ್ದ ಕೇಳಿಸಿತು, ಹಿಂತಿರುಗಿ ನೋಡಿದಾಗ ಯಾರನ್ನು ಕಾಣಲಿಲ್ಲ. ಯಾ ಮುಹಮ್ಮದ್ ﷺ.. ಓ ಮುಹಮ್ಮದರೇ ﷺ.. ಎಂದು ಕೂಗುವುದು ಕೇಳಿ ಪ್ರವಾದಿಯವರು ﷺ ಮೇಲೆ ನೋಡಿದರು. ಹಿರಾ ಗುಹೆಯಲ್ಲಿ ಕಂಡ ಮಲಕ್ ಜಿಬ್’ರೀಲ್ (ಅ) ಆಗಿದ್ದರು. ಅದ್ಭುತವಾದ ನೋಟವಾಗಿತ್ತು ಅದು. ಆಕಾಶ, ಭೂಮಿಯ ನಡುವೆ ಒಂದು ಗಂಭೀರವಾದ ಹಾಸನದಲ್ಲಿ ಕುಳಿತಿದ್ದ ದೃಶ್ಯವಾಗಿತ್ತು ಅದು. ಪ್ರವಾದಿಯವರಲ್ಲಿ ﷺ ಪುನಃ ಉತ್ಸಾಹ ಅಧಿಕಗೊಂಡಿತು. ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-46/365

ಪ್ರವಾದಿಯವರು ﷺ ಖದೀಜರನ್ನು (ರ) ಕರೆದರು. ಪ್ರಿಯೆ ನನ್ನನ್ನು ಒಮ್ಮೆ ತಂಪು ಗೊಳಿಸಿರಿ, ತುಂಬಾ ಬಿಸಿಯಿದೆ. ಜ್ವರ ಬಂದ ಹಾಗೆ ಅನಿಸುತ್ತದೆ. ಬೀವಿಯವರು ಸ್ನಾನ ಮಾಡಲು ಒಳ್ಳೆಯ ತಣ್ಣಗಿನ ನೀರನ್ನು ತಯಾರು ಮಾಡಿ ಕೊಟ್ಟರು. ಪ್ರವಾದಿಯವರು ﷺ ಸ್ನಾನ ಮುಗಿಸಿ, ವಿಶ್ರಾಂತಿ ಪಡೆಯಲು ಮುಂದಾದರು. ಮಲಗಿದ ಸ್ವಲ್ಪ ಸಮಯದ ನಂತರ ಜಿಬ್’ರೀಲ್ (ಅ) ಆಗಮಿಸಿದರು. ಪ್ರವಾದಿಯವರ ﷺ ತಲೆಯ ಬಳಿ ಬಂದು ಓ ಹೊದ್ದುಕೊಂಡು ನಿದ್ರಿಸುವ ಪ್ರಭುವೆ ಎದ್ದೇಳಿ. (ಜನರನ್ನು) ಎಚ್ಚರಿಕೆ ನೀಡಿರಿ, ತಮ್ಮ ಒಡೆಯನ ಹಿರಿಮೆಯನ್ನು ಪ್ರಕೀರ್ತಿಸಿರಿ, ತಮ್ಮ ವಸ್ತುಗಳನ್ನು ಶುಚಿಗೊಳಿಸಿರಿ, ಪಾಪಗಳಿಂದ ದೂರ ಸರಿಯಿರಿ, ಲಾಭಕ್ಕಾಗಿ ಉಪಕಾರವನ್ನು ಮಾಡಬೇಡಿರಿ, ಸೃಷ್ಟಿಕರ್ತನ ತೃಪ್ತಿಗಾಗಿ ತಾಳ್ಮೆಯಿಂದ ವರ್ತಿಸಿರಿ, ಆದರೆ ಕಹಳೆ ಮೊಳಗಿಸಿದರೆ, ಅದೊಂದು ಬಹಳ ಪ್ರಯಾಸ ದಾಯಕವಾದ ದಿನವಾಗಿರುತ್ತದೆ. ಎನ್ನುವ ಪವಿತ್ರ ಕುರ್’ಆನಿನ ಎಪ್ಪತ್’ನಾಲ್ಕನೇ ಅಧ್ಯಾಯ ‘ಅಲ್ ಮುದ್ದಸಿರ್’ ಓದಿ ತಿಳಿಸಿದರು.

ಹಿರಾ ಗುಹೆಯಲ್ಲಿ ಜಿಬ್’ರೀಲರೊಂದಿಗೆ (ಅ) ನಡೆದ ಘಟನೆಯನ್ನು ಇಮಾಮ್ ಝೈನಿ ದಹ್’ಲಾನಿಯವರು (ರ) ಈ ರೀತಿ ವಿವರಿಸುತ್ತಾರೆ. ದ್ರವಿಸುವ ಸುವಾಸನೆಯೊಂದಿಗೆ ಸುಂದರ ರೂಪದಲ್ಲಿ ಜಿಬ್’ರೀಲ್ (ಅ) ಪ್ರವಾದಿಯವರಿಗೆ ﷺ ಕಾಣಿಸಿಕೊಂಡರು. ನಂತರ ಓ ಮುಹಮ್ಮದರೇ ﷺ ಅಲ್ಲಾಹನು ನಿಮಗೆ ಶುಭಾಶಯ ನೀಡಿರುವನು, ನೀವು ಮನುಷ್ಯ, ಭೂತ ಸಮೂಹಕ್ಕಿರುವ ಸಂದೇಶ ವಾಹಕರಾಗಿರುತ್ತೀರಿ. “ಅಲ್ಲಾಹು ಅಲ್ಲದೆ ಇನ್ಯಾರು ಆರಾಧನೆಗೆ ಅರ್ಹರಲ್ಲ, ಮುಹಮ್ಮದ್ ﷺ ಅಲ್ಲಾಹನ ದೂತನಾಗಿರುವರು.” (ಸಂದೇಶ ವಾಹಕ) ಈ ಆದರ್ಶಗಳಿಗೆ ಅವರನ್ನು ಆಹ್ವಾನಿಸಿರಿ. ಎಂದು ಹೇಳಿ ತಮ್ಮ ಕಾಲಿನಿಂದ ಭೂಮಿಯ ಮೇಲೆ ಒಮ್ಮೆ ಬಡಿದರು. ತಕ್ಷಣವೇ ಒಂದು ಚಿಲುಮೆ ಚಿಮ್ಮಿತು, ಅದರಿಂದ ಜಿಬ್’ರೀಲ್ (ಅ) ಅಂಗಸ್ನಾನ (ಉಳೂಹ್) ಮಾಡಿದರು. ಅದನ್ನು ನೋಡುತ್ತಾ ನಿಂತ್ತಿದ್ದ ಪ್ರವಾದಿಯವರಲ್ಲಿ ﷺ ಅದೇ ರೀತಿ ಮಾಡಲು ಹೇಳಿದರು. ನಮಾಝ್ ಮಾಡಲು, ಅಂಗಸ್ನಾನ ಮಾಡಲು ಕಲಿಸಿ ಕೊಡುವುದಾಗಿತ್ತು ಅದು. ನಂತರ ಜಿಬ್’ರೀಲ್ (ಅ) ಕಅಬಾಲದ ಕಡೆಗೆ ಮುಖ ಮಾಡಿ ನಿಂತರು. ಜೊತೆಯಲ್ಲಿ ನಿಂತು, ಆರಾಧನೆಗಳನ್ನು ಮಾಡುವ ರೀತಿಯಲ್ಲೇ ಹಿಂಬಾಲಿಸಲು ಪ್ರವಾದಿಯವರಿಗೆ ﷺ ಹೇಳಿದರು. ಜಿಬ್’ರೀಲ್ ನಮಾಝ್ ಮಾಡಿದ ರೀತಿಯಲ್ಲೇ ಪ್ರವಾದಿಯವರು ﷺ ಕೂಡ ನಮಾಝ್ ಮಾಡಿದರು. ನಮಾಝ್ ಮುಗಿದ ನಂತರ ಮಲಕ್ ಜಿಬ್’ರೀಲ್ (ಅ) ಆಕಾಶಕ್ಕೆ ಹಾರಿ ಹೋದರು. ಪ್ರವಾದಿಯವರು ﷺ ಅಲ್ಲಿಂದ ಎದ್ದು ಮನೆಗೆ ಹಿಂತಿರುಗಿದರು. ದಾರಿಯುದ್ದಕ್ಕೂ ಕಲ್ಲುಗಳು, ಸಸ್ಯಗಳು ಕೂಡ ಸಲಾಂ ಹೇಳುತ್ತಿದ್ದವು. ಪ್ರವಾದಿಯವರು ﷺನೇರವಾಗಿ ಖದೀಜರ ಬಳಿ ಬಂದು ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದರು. ವಿಷಯ ತಿಳಿದ ಖದೀಜರಿಗೂ ﷺ ಬಹಳಷ್ಟು ಸಂತೋಷವಾಯಿತು. ಪ್ರವಾದಿಯವರು ﷺ ಪತ್ನಿಯ ಜೊತೆಯಲ್ಲಿ ಝಮ್ ಝಮ್ ಬಾವಿಯ ಕಡೆಗೆ ತೆರಳಿದರು. ಅಂಗಸ್ನಾನ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು. ಅದೇ ರೀತಿ ಬೀವಿಯು ಕೂಡ ಮಾಡಿದರು. ನಂತರ ಪ್ರವಾದಿಯವರು ﷺ ನಮಾಝ್ ಮಾಡಿದ ರೀತಿಯಲ್ಲೇ ಖದೀಜರು (ರ) ಕೂಡ ನಮಾಝ್ ಮಾಡಿದರು. ಹೀಗೆ ಖದೀಜ (ರ) ಬೀವಿಯವರು ಒಂದನೇ ವಿಶ್ವಾಸಿಯಾಗಿ, ಪ್ರಥಮವಾಗಿ ಉಳೂಹ್, ನಮಾಝ್ ಮಾಡಿದ ವ್ಯಕ್ತಿಯ ಸಾಲಿಗೆ ಸೇರಿದರು. ಪ್ರವಾದಿಯವರ ﷺ ಧರ್ಮಪತ್ನಿಯವರಿಗೆ ಒಂದೂವರೆ ದಶಕಗಳ ಕಾಲದ ಕುಟುಂಬ ಜೀವನವು ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಪುರಾವೆಯಾಗಿತ್ತು.

ಇಷ್ಟೆಲ್ಲ ಘಟನೆ ನಡೆದ ನಂತರ ಹೊರಗೆ ಬಹಳಷ್ಟು ಚರ್ಚೆ ನಡೆಯತೊಡಗಿತು. ಪ್ರವಾದಿತ್ವದ ನಿಯೋಗದ ವಿಷಯವು ಬಹಳಷ್ಟು ಕಡೆಗಳಲ್ಲಿ ಚರ್ಚಾ ವಿಷಯವಾಯಿತು. ಪ್ರವಾದಿ ಮುಹಮ್ಮದರಿಂದ ﷺ ಆದ ಬದಲಾವಣೆಗಳನ್ನು ಮಕ್ಕಾ ನಿವಾಸಿಗಳು ಗಮನಿಸ ತೊಡಗಿದರು. ಯುಗ ಪುರುಷನಿಗಾಗಿ ಕಾಯುತ್ತಿದ್ದವರು ಸಮಯ ನಿರ್ಧರಿಸಿ ಮಾಹಿತಿ ಹಂಚ ತೊಡಗಿದರು. ಹಲವು ಕಡೆಗಳಲ್ಲಿ ಮಕ್ಕಾ ನಿವಾಸಿಗಳನ್ನು ಹುಡುಕಿ ವಿಷಯವನ್ನು ತಿಳಿದುಕೊಂಡರು. ವಿದೇಶದಲ್ಲಿದ್ದವರು ಮಕ್ಕಾ ಪಟ್ಟಣಕ್ಕೆ ಮರಳಿ ವಿಷಯವನ್ನು ಖಚಿತ ಪಡಿಸಿಕೊಂಡರು. ಕೆಲವರು ದೂತರನ್ನು ಕಳುಹಿಸಿ ವಿವರಗಳನ್ನು ಪಡೆದುಕೊಂಡರು.

ಮಾರುಕಟ್ಟೆಯಲ್ಲೂ, ಹುಲ್ಲುಗಾವಲಿನಲ್ಲಿ ಚರ್ಚೆಗಳು ಹುಟ್ಟಿಕೊಂಡವು. ಮನುಷ್ಯರು ಮಾತ್ರವಲ್ಲದೆ ಭೂತ ವರ್ಗವೂ, ಜಾನುವಾರುಗಳೂ ಕೂಡ ಸಂದೇಶ ತಲುಪಿಸ ತೊಡಗಿದವು. ಪ್ರಪಂಚಕ್ಕೆ ಕರುಣೆ ತೋರುವ ಒಬ್ಬ ಮಹಾತ್ಮರಿಗಾಗಿ ಎಲ್ಲಾ ಜೀವಿಗಳು ಕಾಯುತ್ತಿರುವಂತೆ. ನ್ಯಾಯ, ನೀತಿ ಇಲ್ಲದ ಎಲ್ಲಾ ಕ್ಷೇತ್ರಗಳಲ್ಲೂ ಒಬ್ಬ ನ್ಯಾಯ ದೂತನಿಗಾಗಿ ಕಾಯುತ್ತಿರುವ ಹಾಗೆ. ಗುಲಾಮರ ಮಾರುಕಟ್ಟೆಯಲ್ಲಿ ಮಾರಲ್ಪಡುವ ಮನುಷ್ಯರೂ, ಶಕ್ತಿಗಿಂತ ಮೀರಿ ಬಾರ ಹೊರೆಸಲ್ಪಡುವ ಪ್ರಾಣಿಗಳೂ ಕೂಡ ತಮ್ಮ ಹಕ್ಕುಗಳಿಗಾಗಿ ಹಾತೊರೆಯುತಿದ್ದವು. ಕೆಲವು ದಿನಗಳಿಂದ ಅವುಗಗಳಿಗೆ ಏನೋ ಒಂದು ಆಶ್ವಾಸನೆ ಮೂಡಿತ್ತು. ಅವುಗಳಿಗೆ ಮೋಚನೆ ನೀಡಲು ಯಾರೋ ಒಬ್ಬ ಮಹಾನ್ ವ್ಯಕ್ತಿಯ ಉದಾಯವಾಗಿದೆ ಎಂದು.

ಕಾಲವು ಕಾಯುತ್ತಿದ್ದ ಪ್ರವಾದಿಯವರ ﷺ ನಿಯೋಗದ ಭವ್ಯ ಮುಹೂರ್ತವನ್ನು ಪ್ರಪಂಚದ ವಿವಿಧ ಭಾಗಗಳಲ್ಲಿ ನಡೆದ ಘಟನೆಗಳ ಮೂಲಕ ತಿಳಿಯೋಣ…

Mahabba Campaign Part-47/365

ಪ್ರವಾದಿಯವರ ﷺ ಚಿಕ್ಕಪರಾದ ಅಬ್ಬಾಸ್ ಬಿನ್ ಅಬ್ದುಲ್ ಮುತ್ತಲಿಬ್’ರವರು ಈ ರೀತಿ ಹೇಳುತ್ತಾರೆ. ನಾವು ವ್ಯಾಪಾರಕ್ಕಾಗಿ ಯಮನಿಗೆ ಹೋಗಿದ್ದೆವು. ಖುರೈಷಿಗಳ ನಾಯಕನಾಗಿದ್ದ ಅಬೂ ಸೂಫಿಯಾನ್ ಕೂಡ ಜೊತೆಯಲ್ಲಿದ್ದರು. ಅವರಿಗೆ ಮಕ್ಕಾದಿಂದ ಒಂದು ಪತ್ರ ಬಂದಿತು. ಮಗನು ಹನ್’ಳಲ ಮನೆಯಿಂದ ಕಳಿಸಿದ ಪಾತ್ರವಾಗಿತ್ತದು. ಪತ್ರದಲ್ಲಿ ಬರೆದ ವಿಷಯವು ಈ ರೀತಿಯಾಗಿತ್ತು. ಮಕ್ಕಾದ ಕಣಿವೆಯಲ್ಲಿ ಮುಹಮ್ಮದ್ ﷺ ಪ್ರವಾದಿಯಾಗಿ ಆಗಮಿಸಿದ್ದಾರೆ, ಮುಹಮ್ಮದ್’ರವರು ﷺ ಅಲ್ಲಾಹನ ಸಂದೇಶವಾಹಕರೆಂದು ಹೇಳಿಕೊಳ್ಳುತ್ತಿದ್ದಾರೆ, ಹಾಗೂ ನಮ್ಮೆಲ್ಲರನ್ನೂ ಅವರ ಆದರ್ಶಕ್ಕೆ ಆಹ್ವಾನಿಸುತ್ತಿದ್ದಾರೆ.

ಪತ್ರದ ವಿಷಯವನ್ನು ಅಬೂ ಸುಫಿಯಾನ್ ಇತರರಲ್ಲಿ ಹಂಚಿಕೊಂಡರು. ಹೀಗೆ ಯಮನಿನಲ್ಲಿ ಆ ವಿಷಯವು ಸಂಪೂರ್ಣವಾಗಿ ಹರಡಿತು. ವಿಷಯ ತಿಳಿದ ಯಮನಿನ ಪ್ರತಿಷ್ಠಿತ ಪುರೋಹಿತರೊಬ್ಬರು ನಮ್ಮನ್ನು ಹುಡುಕಿ ಬಂದರು. ಮಕ್ಕಾದಲ್ಲಿ ಆಗಮಿಸಿದ ಪ್ರವಾದಿಯವರ ﷺ ಚಿಕ್ಕಪ್ಪ ನಿಮ್ಮ ಜೊತೆಯಲ್ಲಿ ಇರುವುದಾಗಿ ತಿಳಿಯಿತು ಅದು ಸತ್ಯವೇ.? ಎಂದು ಕೇಳಿದಾಗ, ಹೌದು ನಾನಾಗಿದ್ದೇನೆ ಅವರು ಎಂದು ಹೇಳಿದೆನು. ಸರಿ ಹಾಗಾದರೆ ಕೆಲವೊಂದು ವಿಷಯವನ್ನು ಕೇಳುತ್ತಾನೆ ನೀವು ಸರಿಯಾಗಿ ಉತ್ತರಿಸಬೇಕು ಎಂದು ಹೇಳಿದಾಗ, ನಾನು ಅನುಮತಿ ನೀಡಿದೆನು. ಅವರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದರು. ನಿಮ್ಮ ಅಣ್ಣನ ಮಗ ಯಾವತ್ತಾದರೂ ಸುಳ್ಳು ಹೇಳಿದ್ದಾರ.? ಇಲ್ಲ ಒಂದೇ ಒಂದು ಬಾರಿಯೂ ಕೂಡ ಸುಳ್ಳು ಹೇಳುವುದಾಗಲಿ, ವಂಚನೆ ಮಾಡುದಾಗಲಿ ಮಾಡಲಿಲ್ಲ. ಮಕ್ಕಾ ನಿವಾಸಿಗಳು ಅವರನ್ನು ‘ಅಲ್ ಅಮೀನ್’ ಅಥವಾ ನಂಬಿಕಸ್ಥ ಎಂದಾಗಿದೆ ಕರೆಯುವುದು. ಮಗನು ವಿದ್ಯಾರ್ಜನೆ ಮಾಡಿದ್ದಾರ.? ಎಂದು ಮತ್ತೊಂದು ಪ್ರಶ್ನೆ ಕೇಳಿದಾಗ, ಮಾಡಿದ್ದಾರೆ ಎಂದು ಹೇಳೋಣ ಅಂದು ಕೊಂಡೆ ಆದರೆ ಅಬೂ ಸುಫಿಯಾನ್ ಸತ್ಯ ಹೇಳಿದರೆ ಎಂದು ಇಲ್ಲಾ ಅವರಿಗೆ ಓದಲು, ಬರೆಯಲು ಬರುವುದಿಲ್ಲ ಎಂದು ಹೇಳಿದೆನು. ಅದನ್ನು ಕೇಳಿದ ತಕ್ಷಣವೇ ಒಮ್ಮೆಲೇ ಜಿಗಿದು ಎಂದು ನಿಂತು, ತನ್ನ ಮೇಲ್ಮೈ ಉಡುಪುವನ್ನು ತೆಗೆದು, ‘ಯುಹೂದಿಗಳ ಕಥೆ ಮುಗಿದ ಹಾಗೆ’ ಎನ್ನುತ್ತಾ ನಗತೊಡಗಿದರು.

ನಾವು ಸ್ವವಸತಿಗೆ ಮರಳಿ ಬಂದೆವು. ತಕ್ಷಣವೇ ಅಬೂ ಸುಫಿಯಾನ್ ನಿಮ್ಮ ಅಣ್ಣನ ಮಗನ ವಿಷಯವು ಯಹೂದಿಗಳಿಗೂ ಕೂಡ ಭಯ ಹುಟ್ಟಿಸಿತು ಅಲ್ಲವೇ.? ಎಂದು ಹೇಳಿದರು. ಅದಕ್ಕೆ ಹೌದು ನಾನು ಕೂಡ ಅದನ್ನು ಗಮನಿಸಿದೆನು, ಓ ಅಬೂ ಸುಫಿಯಾನರೇ ತಮಗೂ ಕೂಡ ಆ ಪ್ರವಾದಿತ್ವವನ್ನು ಅಂಗೀಕರಿಸಬಹುದಲ್ವಾ.? ಎಂದು ಕೇಳಿದಾಗ. ಇಲ್ಲ ಆ ಪ್ರವಾದಿಯವರ ﷺ ಸೈನ್ಯವು ಕುದಾಯ್ ಕಣಿವೆಯಿಂದ ಮಕ್ಕಾವನ್ನು ವಶಪಡಿಸಿಕೊಳ್ಳುವವರೆಗೂ ನಾನು ಅಂಗೀಕರಿಸುವುದಿಲ್ಲ ಎಂದು ಹೇಳಿದರು. ನೀವು ಏನು ಹೇಳುತ್ತಿದ್ದೀರ.? ಎಂದು ಕೇಳಿದಾಗ. ಕುದಾಯಿ ಮೂಲಕ ಅಶ್ವದಳ ಬರುತ್ತೋ ಇಲ್ವೋ ನನಗೆ ಗೊತ್ತಿಲ್ಲ ತಕ್ಷಣ ನಾಳಗೆಯಲ್ಲಿ ಬಂದದ್ದನ್ನು ಹೇಳಿ ಬಿಟ್ಟೆ ಎಂದರು.

(ಸುಮಾರು ಎರಡು ದಶಕದ ನಂತರ ಮಕ್ಕಾ ವಿಜಯ ನಡೆಯಿತು. ಕುದಾಯ್ ಕಣಿವೆಯ ಮೂಲಕ ಇಸ್ಲಾಮಿನ ಅಶ್ವದಳ ಮಕ್ಕಾ ನಗರಕ್ಕೆ ಪ್ರವೇಶಿಸಿತು. ಅದನ್ನು ನೋಡಿ ನಿಂತಿದ್ದ ಅಬ್ಬಾಸ್, ಅಬೂ ಸುಫಿಯಾನ್’ರಲ್ಲಿ ನೀವು ಅಂದು ಹೇಳಿದ್ದ ಆ ಸೈನ್ಯವು ಬಂದು ನಿಂತಿದೆ. ನಿಮ್ಮ ಸರದಿ ಹತ್ತಿರವಾಯಿತು ಎಂದು ಹೇಳಿದಾಗ. ಹೌದು ನನಗೆ ಚೆನ್ನಾಗಿ ನೆನಪಿದೆ, ಅಂದು ಹೇಳಿದ ಮಾತುಗಳನ್ನು ನಾನು ಮರೆಯಲಿಲ್ಲ. ನಾನು ಇಸ್ಲಾಮ್ ಸ್ವೀಕರಿಸುತ್ತಿದ್ದೇನೆ ಎಂದು ಹೇಳಿ, ಮಕ್ಕಾ ವಿಜಯದ ದಿವಸ ಅವರು ಇಸ್ಲಾಮ್ ಸ್ವೀಕರಿಸಿದರು.)

ಮತ್ತೊಂದು ಘಟನೆಯನ್ನು ಇಬ್’ನು ಅಸಾಕಿರ್’ರವರು ಈ ರೀತಿ ವಿವರಿಸುತ್ತಾರೆ. ಪ್ರವಾದಿ ಮುಹಮ್ಮದರ ﷺ ಪ್ರವಾದಿತ್ವದ ಘೋಷಣೆಯ ಸ್ವಲ್ಪ ದಿನದ ಮುಂಚೆ ನಾವು ಯಮನಿಗೆ ತೆರಳಿದ್ದೆವು. ನಾವು ರಾಜಮನೆತನದಲ್ಲಾಗಿತ್ತು ತಂಗುತ್ತಿದ್ದದ್ದು. ಅಸ್’ಕಲಾನ್ ಅಲ್ ಹಿಂಯರಿ ಎಂಬ ರಾಜಮನೆತನದ ಹಿರಿಯ ವ್ಯಕ್ತಿಯಾಗಿದ್ದರು ನಮ್ಮಗೆ ಅತಿಥಿ ಸತ್ಕಾರ ನೀಡುತ್ತಿದ್ದದ್ದು. ನಾವು ಯಾವಾಗ ಹೋದರೂ ಅವರ ಜೊತೆಯಲ್ಲಿಯೇ ತಂಗುತ್ತಿದ್ದದ್ದೆವು. ಅವರು ಮಕ್ಕಾದ ಸಮಾಚಾರಗಳನ್ನು ಕೇಳಿ ತಿಳಿಯುತ್ತಿದ್ದರು. ಸುದೀರ್ಘವಾದ ಮಾತುಕತೆಯ ನಂತರ ಏನಾದರೂ ವಿಶೇಷ ಸಮಾಚಾರದೊಂದಿಗೆ ಯಾರಾದರೂ ಆಗಮಿಸಿದ್ದಾರ ಎಂದು ಕೇಳುತ್ತಿದ್ದರು. ನಾವು ಇಲ್ಲ ಎಂದು ಉತ್ತರಿಸುತ್ತಿದ್ದೆವು.

ರೂಢಿಯಂತೆ ಈ ಬಾರಿಯೂ ಕೂಡ ನಾವು ಹಿಂಯರಿಯವರ ಬಳಿ ಹೋಗಿದ್ದೆವು. ಅವರಿಗೆ ದೃಷ್ಟಿ ದೋಷ ಹಾಗೂ ಅಲ್ಪ ಕಿವುಡುತನ ಬಾಧಿಸಿತ್ತು. ಮಕ್ಕಳು, ಮೊಮ್ಮಕ್ಕಳೊಂದಿಗೆ ಕುರ್ಚಿಯಲ್ಲಿ ಕುಳಿತಿದ್ದರು. ನಾವು ಅಲ್ಲಿಗೆ ತಲುಪಿದ್ದೇ ತಡ, ಓ ಖುರೈಷಿ ಸಹೋದರ ಹತ್ತಿರ ಬನ್ನಿ, ನಿಮ್ಮ ಹೆಸರು ಹಾಗೂ ಮನೆತನವನ್ನು ಸ್ಪಷ್ಟವಾಗಿ ತಿಳಿಸಿ ಎಂದು ಹೇಳಿದರು. ನಾನು ತಂದೆಯ ಪರಂಪರೆ ಸಮೇತವಾಗಿ ತಿಳಿಸಿದಾಗ, ತಕ್ಷಣವೇ ಸಾಕು ಸಾಕು ನೀವು ಬನೂ ಸಹ್’ರ್ ಜನಾಂಗದ ವ್ಯಕ್ತಿಯಲ್ಲವೇ.? ಹಾಗಾದರೆ ನಿಮಗೊಂದು ವಿಚಾರ ತಿಳಿಸಲಿದೆ, ವ್ಯಾಪಾರಕ್ಕಿಂತಲೂ ಅಧಿಕ ಸಂತೋಷ ತರುವ ವಿಷಯವಾಗಿದೆ ಎಂದು ಹೇಳಿದರು. ಅದೇನು ಅಂತಹ ವಿಷಯ ಎಂದು ಕೇಳಿದಾಗ…

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-48/365

ಹಿಂಯರಿ ಮಾತು ಮುಂದುವರಿಸಿದರು. ಬಹಳಷ್ಟು ಅಚ್ಚರಿ ಮೂಡಿಸುವ ವಿಷಯವಾಗಿದೆ ಇದು. ಒಂದು ತಿಂಗಳ ಹಿಂದೆ ನಿಮ್ಮ ಊರಿನಲ್ಲಿ ಒಬ್ಬರು ಪವಿತ್ರ ವ್ಯಕ್ತಿಯನ್ನು ಅಲ್ಲಾಹುವಿನ ಸಂದೇಶವಾಹಕರಾಗಿ ನಿಯೋಜಿಸಲಾಗಿದೆ. ಅಲ್ಲಾಹುವಿನ ಪ್ರೀತಿಯ ದಾಸನಾಗಿದ್ದಾರೆ ಅವರು. ಒಂದು ಪವಿತ್ರವಾದ ಗ್ರಂಥವೂ ಕೂಡ ಅವರಿಗೆ ಲಭಿಸಿದೆ. ವಿಗ್ರಹಾರಾಧನೆಯನ್ನು ಅವರು ತಡೆಯಲಿದ್ದಾರೆ, ಸತ್ಯ ಪ್ರಭೋಧನೆ ನೀಡುವರು. ನೀತಿಯನ್ನು ಪಾಲಿಸುವರು, ಕೆಡುಕಿನಿಂದ ದೂರ ಸರಿದು, ಕೆಡುಕಿನ ವಿರುದ್ಧ ಹೋರಾಟ ಕೂಡ ಮಾಡುವರು. ಇಸ್ಲಾಮಿಗೆ ಜನರನ್ನು ಆಹ್ವಾನಿಸುವರು. ಎಂದು ಹಿಂಯರಿ ಹೇಳಿದಾಗ. ಯಾರಾಗಿದ್ದಾರೆ ಅವರು.? ಯಾವ ಮನೆತನೆಯಿಂದ ಬಂದವರಾಗಿದ್ದಾರೆ ಆ ಪ್ರವಾದಿಯವರು.? ಎಂದು ಪುನಃ ಕೇಳಿದೆನು. ಅದಕ್ಕೆ ಹಿಂಯರಿ ಅಸದ್, ಸುಮಾಲ, ಸರ್ವ, ತಬಾಲ ಇದ್ಯಾವ ಜನಾಂಗದಿಂದ ಅಲ್ಲವೇ ಅಲ್ಲ. ಹಾಷಿಂ ಪರಂಪರೆಯಿಂದಾಗಿದೆ ಆ ಪ್ರವಾದಿಯವರು ﷺ ಜನಿಸಿದ್ದು. ಹಾಗಾದರೆ ನೀವು ಅವರ ಚಿಕ್ಕಪರ ಸಾಲಿನಲ್ಲಿ ಸೇರುತ್ತೀರ. ಓ ಅಬ್ದುಲ್ ರಹ್ಮಾನ್ ತಕ್ಷಣವೇ ಊರಿಗೆ ಮರಳಿರಿ. ಒಳ್ಳೆಯ ರೀತಿಯಲ್ಲಿ ಆ ವ್ಯಕ್ತಿಯನ್ನು ಭೇಟಿಯಾಗಿರಿ. ಅವರ ಜೊತೆಯಲ್ಲಿ ಸೇರಿ ಅವರಿಗೆ ಬೇಕಾದ ಸಹಾಯ ನೀಡಿರಿ. ನೀವು ಅವರನ್ನು ಭೇಟಿಯಾದರೆ ನನ್ನ ಒಂದು ಶುಭಾಶಯವನ್ನು ಕೂಡ ಅವರಿಗೆ ತಿಳಿಸಿರಿ ಎಂದು ಹೇಳಿದರು. ನಂತರ ಪ್ರವಾದಿಯವರಿಗೆ ﷺ ವಂದಿಸುವ ಕವಿತೆಯನ್ನು ಹಾಡಿದರು.

ಅಬ್ದುರಹ್ಮಾನ್ ಬಿನ್ ಔಫ್ ಈ ರೀತಿ ವಿವರಿಸುತ್ತಾರೆ, ನಾನು ಆ ಕವಿತೆಯನ್ನು ಮರೆಯದ ಹಾಗೆ ನೆನಪಿನಲ್ಲಿ ಇರಿಸಿಕೊಂಡೆನು. ನನ್ನ ವ್ಯಾಪಾರಗಳನ್ನು ವೇಗವಾಗಿ ಪೂರ್ತಿಕರಿಸಿ ತಕ್ಷಣವೇ ಊರಿಗೆ ಮರಳಿದೆವು. ಊರಿಗೆ ತಲುಪಿದ ಕೂಡಲೇ ಆಪ್ತಮಿತ್ರ ಅಬೂಬಕ್ಕರ್’ರವರನ್ನು (ರ) ಭೇಟಿಯಾಗಿ ಎಲ್ಲಾ ವಿಷಯಗಳನ್ನು ಅವರಲ್ಲಿ ಹಂಚಿಕೊಂಡನು. ಅದಕ್ಕೆ ಅಬೂಬಕ್ಕರ್ (ರ) ಈ ರೀತಿ ಹೇಳಿದರು ನಮ್ಮ ಆತ್ಮೀಯರಾದ ಮುಹಮ್ಮದ್ ﷺ ಬಿನ್ ಅಬ್ದುಲ್ಲಾಹ್ ಆಗಿದ್ದಾರೆ, ಪ್ರವಾದಿತ್ವವನ್ನು ಘೋಷಣೆ ಮಾಡಿದ್ದು. ನಾನು ಖದೀಜರನ್ನು(ರ) ಹುಡುಕಿ ಅವರ ಮನೆಗೆ ತೆರಳಿದೆನು. ಕೆಲವು ಗೆಳೆಯರೊಂದಿಗೆ ಮುಹಮ್ಮದ್ ﷺ ಕುಳಿತಿದ್ದರು. ಮುಹಮ್ಮದ್ ﷺ ನನ್ನನ್ನು ಕಂಡ ತಕ್ಷಣ ಮುಗುಳ್ನಗೆಯೊಂದಿಗೆ ಸ್ವೀಕರಿಸಿ. ಸತ್ಯವನ್ನು ಸ್ವೀಕರಿಸುವ ವ್ಯಕ್ತಿಯನ್ನು ನಿಮ್ಮ ಮುಖದಲ್ಲಿ ಕಾಣುತಿದ್ದೇನೆ, ನಿಮ್ಮ ಬಳಿ ಏನಿದೆ ವಿಶೇಷ ಎಂದು ಕೇಳಿದರು.

ನಾನು ಆಶ್ಚರ್ಯದಿಂದ ನೀವು ಯಾಕೆ ಹೀಗೆ ಕೇಳುತ್ತಿದ್ದೀರಿ ಎಂದು ಪುನಃ ಕೇಳಿದೆನು. ನನಗೆ ತಿಳಿಸಿರುವ ಒಂದು ಒಳ್ಳೆಯ ಸಂದೇಶದ ಜೊತೆಯಲ್ಲಿಯಲ್ಲವೇ.? ನೀವು ನನ್ನ ಬಳಿ ಬಂದದ್ದು ಎಂದು ಅವರು ಹೇಳಿದರು. ಇದನ್ನು ಕೇಳಿದ ತಕ್ಷಣ ನಾನು ಬಹಳ ಆವೇಶದಿಂದ ಎಲ್ಲಾ ವಿಷಯಗಳನ್ನು ತಿಳಿಸಿದೆನು. ಅದಕ್ಕೆ ಅವರು ಅಲ್ ಹಿಂಯರಿ ಒಬ್ಬರು ವಿಶೇಷವಾದ ವ್ಯಕ್ತಿಯಾಗಿರುತ್ತಾರೆ, ನನಗೆ ತಿಳಿಯದೆ ನನ್ನನ್ನು ವಿಶ್ವಾಸವಿರಿಸುವ ಅದೆಷ್ಟೋ ಜನರಿದ್ದಾರೆ. ನನ್ನನ್ನು ಒಮ್ಮೆಯೂ ಕೂಡ ಕಾಣದ ಅದೆಷ್ಟೋ ವ್ಯಕ್ತಿಗಳು ನನ್ನನ್ನು ಹಿಂಬಾಲಿಸುತ್ತಿದ್ದಾರೆ. ಅವರಾಗಿದ್ದರೆ ನಿಜವಾಗಿಯೂ ನನ್ನ ಸಹೋದರರು ಎಂದು ಹೇಳಿದರು.

ಇಬ್’ನು ಹೌಫ್ ಕೂಡ ಪ್ರವಾದಿಯವರ ﷺ ಅನುಯಾಯಿಯಾದರು. ಬುಸ್’ರ ಪಟ್ಟಣದಲ್ಲಿ ನಡೆದ ಘಟನೆಯನ್ನು ಕೂಡ ನಾವು ತಿಳಿಯೋಣ. ಮಕ್ಕಾದ ಹೆಸರಾಂತ ವ್ಯಾಪರಿಯಾಗಿದ್ದ ತ್ವಲ್’ಹತ್ ಬಿನ್ ಉಬೈದಿಲ್ಲಾಹ್ ಈ ರೀತಿ ವಿವರಿಸುತ್ತಾರೆ. ಪ್ರವಾದಿತ್ವದ ನಿಯೋಗದ ಸಂದರ್ಭದಲ್ಲಿ ನಾನು ಬುಸ್’ರ ಪಟ್ಟಣದಲ್ಲಿದ್ದೆ. ಅಲ್ಲಿಯ ಯಹೂದಿ ದೇವಾಲಯದಿಂದ ಒಂದು ಘೋಷಣೆ ಕೇಳಿ ಬಂತು. ವ್ಯಾಪಾರ ಉತ್ಸವದಲ್ಲಿ ಸೇರಿದವರೆ, ಇತ್ತ ಗಮನಿಸಿ. ಹರಮ್ ಪ್ರದೇಶದ ಯಾರಾದರೂ ಇಲ್ಲಿ ಉಪಸ್ಥಿತರಿದ್ದಾರ.? ಎಂದು ಕೇಳಿದಾಗ ನಾನು ಅತ್ತ ಕಡೆ ತೆರಳಿ ನಾನು ಹರಮ್ ಪ್ರದೇಶದ ವ್ಯಕ್ತಿಯಾಗಿದ್ದೇನೆ, ಯಾಕೆ ಹೀಗೆ ಕೇಳಿದ್ದು.? ಎಂದು ಕೇಳಿದೆನು. ಅದಕ್ಕೆ ಪುರೋಹಿತರು ಅಹ್ಮದ್ ﷺ ಪ್ರವಾದಿಯವರು ಪ್ರವಾದಿತ್ವದ ಘೋಷಣೆ ಮಾಡಿದರೆ.? ಎಂದು ಕೇಳಿದಾಗ ಅಹ್ಮದ್.? ಅದು ಯಾರೆಂದು ನಾನು ಪುನಃ ಅವರಲ್ಲೇ ಕೇಳಿದೆನು.
ಅಬ್ದುಲ್ ಮುತ್ತಲಿಬರ ಮಗನಾದ ಅಬ್ದುಲ್ಲಾಹ್’ರ ಮಗನಾದ ಅಹ್’ಮದ್ ﷺ. ಆ ಪ್ರವಾದಿಯವರು ಘೋಷಣೆ ಮಾಡುವ ಮಾಸವಾಗಿದೆ ಇದು. ಅಂತ್ಯ ಪ್ರವಾದಿಯಾಗಿದ್ದಾರೆ ಅವರು. ಹರಮ್ ಪ್ರದೇಶದಲ್ಲಾಗಿದೆ ಅವರು ಜನನ. ಖರ್ಜೂರ ತುಂಬಿದ ಊರಿಗೆ ಅವರು ಪಲಾಯನ ಮಾಡುವರು. ನೀವು ತಕ್ಷಣವೇ ಮಕ್ಕಾ ಪಟ್ಟಣಕ್ಕೆ ಹಿಂತಿರುಗಿ ಹೋಗಿ ಇತರರಿಗಿಂತ ಮುಂಚೆ ನೀವೆ ಅವರ ಅನುಯಾಯಿಯಾಗಿರಿ ಎಂದು ಹೇಳಿದರು.

ತ್ವಲ್’ಹತ್ ಮಾತು ಮುಂದುವರಿಸಿದರು. ಆ ಮಾತುಗಳು ನನ್ನ ಹೃದಯದಲ್ಲಿ ಆಳವಾಗಿ ಬೇರೂರಿತು. ನಾನು ಬಹಳ ವೇಗವಾಗಿ ವ್ಯಾಪಾರವನ್ನು ಮುಗಿಸಿ ಊರಿಗೆ ಮರಳಿದೆನು. ಯಾತ್ರೆಯುದ್ದಕ್ಕೂ ಆ ಪುರೋಹಿತನ ಮಾತುಗಳು ನನ್ನನ್ನು ಕಾಡುತ್ತಿದ್ದವು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-49/365

ತ್ವಲ್’ಹ: ಮಾತು ಮುಂದುವರಿಸಿದರು. ನಾನು ಊರಿಗೆ ತಲುಪಿದ ನಂತರ ಊರವರಲ್ಲಿ ಏನಿದೆ ಸಮಾಚಾರ ಎಂದು ಕೇಳಿದೆನು. ಅದಕ್ಕೆ ಅವರು ಒಳ್ಳೆಯ ಸಮಾಚಾರವೇ ಇದೆ, ನಮ್ಮ ಅಬ್ದುಲ್ಲಾಹ್’ರ ಮಗನಾದ ಮುಹಮ್ಮದ್ ﷺ ಅಥವಾ ‘ಅಲ್ ಅಮೀನ್’ ಪ್ರವಾದಿತ್ವದ ಘೋಷಣೆ ಮಾಡಿರುವರು. ಅಬೂಖುಹಾಫರ ಮಗನಾದ ಅಬೂಬಕ್ಕರ್ (ರ) ಅವರ ಮೊದಲ ಅನುಯಾಯಿ ಆಗಿದ್ದಾರೆ ಎಂದು ಹೇಳಿದರು. ನಾನು ನೇರವಾಗಿ ಅಬೂಬಕ್ಕರ್’ರವರನ್ನು ಭೇಟಿಯಾಗಲು ಹೋಗಿ ಬಸ್ವ್’ರಾದಲ್ಲಿ ನಡೆದ ಎಲ್ಲಾ ಘಟನೆಯ ಬಗ್ಗೆ ತಿಳಿಸಿದೆನು.
ನಾವು ಇಬ್ಬರೂ ಸೇರಿ ಮುಹಮ್ಮದ್ ﷺ ಪ್ರವಾದಿಯವರ ಸನ್ನಿಧಿಗೆ ತೆರಳಿದೆವು. ಅಬೂಬಕ್ಕರ್ (ರ) ನಾನು ತಿಳಿಸಿದ ಎಲ್ಲಾ ಘಟನೆಯನ್ನು ಪ್ರವಾದಿಯವರಿಗೆ ﷺ ತಿಳಿಸಿದಾಗ ಅವರಿಗೆ ಬಹಳ ಸಂತೋಷವಾಯಿತು. ತ್ವಲ್’ಹಃ (ರ) ಅದೇ ಕ್ಷಣದಲ್ಲಿ ಇಸ್ಲಾಮ್ ಸ್ವೀಕರಿಸಿ ನಂತರ ಸ್ವರ್ಗ ಸಿಗುವ, ಸಂತೋಷ ವಾರ್ತೆ ಲಭಿಸಿದ ಹತ್ತು ಅನುಯಾಯಿಗಳಲ್ಲಿ ಒಬ್ಬರಾದರು.

ನಜ್’ರಾನಿನಲ್ಲಿ ನಡೆದ ಘಟನೆಯನ್ನು ಕೂಡ ತಿಳಿಯೋಣ. ಪರಂಪರಾಗತವಾಗಿ ವೇದ ಜ್ಞಾನಿಗಳು ಕಳೆದ ಬಂದ ಊರಾಗಿದೆ ನಜ್’ರಾನ್. ಪ್ರತಿಯೊಂದು ಪುರೋಹಿತರು ಕೂಡ ತಮ್ಮ ಕಾಲದ ನಂತರ ಮುದ್ರೆಹಾಕಿ ಹಸ್ತಾಂತರಿಸಲಾಗುತ್ತಿದ್ದ ದಾಖಲೆಗಳನ್ನು ಭದ್ರವಾಗಿ ಇರಿಸಲಾಗಿತ್ತು. ಪ್ರವಾದಿತ್ವದ ನಿಯೋಗದ ಸಂದರ್ಭದಲ್ಲಿ ಅಲ್ಲಿದ್ದ ಪ್ರಧಾನ ಪಾದ್ರಿಯು ಒಂದು ದಿನ ಕಾಲು ಜಾರಿ ಬಿದ್ದರು. ತಕ್ಷಣವೇ ಅವರ ಮಗ “ದೂರದಿಂದ ಉದಯಿಸಿ ಬರುವವನಿಗೆ ನಾಶ ಉಂಟಾಗಲಿ” ಎಂದು ಹೇಳಿದರು. ಅದಕ್ಕೆ ತಂದೆಯು ಹಾಗೆ ಹೇಳಬಾರದು ಮಗನೇ, ಬರಲಿರುವುದು ಸತ್ಯ ಪ್ರವಾದಿಯಾಗಿರುತ್ತಾರೆ. ಆ ಪುಣ್ಯ ಪುರುಷರ ಕುರಿತು ನಮ್ಮ ವೇದ ಗ್ರಂಥಗಳಲ್ಲಿ ಬಹಳಷ್ಟು ಉಲ್ಲೇಖವಿದೆ.
ದಿವಸಗಳ ನಂತರ ತಂದೆಯು ಮರಣ ಹೊಂದಿದರು. ಮಗನು ವೇದ ಗ್ರಂಥಗಳನ್ನೂ, ಪ್ರಾಚೀನ ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು, ಪ್ರವಾದಿ ಮುಹಮ್ಮದರ ﷺ ಕುರಿತು ಬಹಳಷ್ಟು ಮಾಹಿತಿಗಳು ಆಧಾರ ಸಮೇತವಾಗಿ ಲಭಿಸಿದವು. ಅವರು ಪ್ರವಾದಿಯವರನ್ನು ﷺ ಅಂಗೀಕರಿಸಿ, ಮಕ್ಕಾ ನಗರಕ್ಕೆ ಹಜ್ಜ್ ಮಾಡಲು ಹೊರಟರು. ಕವಿತೆಗಳನ್ನು ಹಾಡುತ್ತಾ ಪ್ರವಾದಿಯವರನ್ನು ﷺ ಸ್ವೀಕರಿಸಲು ಹೋದರು.
ಮಕ್ಕಾದಲ್ಲಿ ಪ್ರವಾದಿತ್ವದ ಘೋಷಣೆಯಾದಾಗ, ಪ್ರಪಂಚದ ಇತರ ಭಾಗಗಳಲ್ಲಿ ನಡೆದ ಘೋಷಣೆಗಳು, ಹಾಗೂ ಪ್ರವಾದಿಯವರ ﷺ ಕುರಿತು ಇದ್ದ ಪರಿಚಯದ ಕುರಿತಾಗಿದೆ. ನಾವು ಇಷ್ಟೊತ್ತು ತಿಳಿದದ್ದು, ಇನ್ನೂ ನಾವು ಮಕ್ಕಾ ನಗರಕ್ಕೆ ತಿರುಗಿ ಬರೋಣ.

ಪ್ರವಾದಿತ್ವದ ಘೋಷಣೆ ಕಳೆದು ಒಂದು ತಿಂಗಳವರೆಗೆ ಮನೆಯಲ್ಲೇ ಇದ್ದರು. ನಿರಂತರವಾಗಿ ಆರಾಧನೆಯಲ್ಲಿ ಮುಳುಗಿದ್ದರು. ಜವಾಬ್ದಾರಿ ನಿರ್ವಹಿಸಲು ಬೇಕಾದ ಸ್ವಯಂ ತಯಾರಿ ನಡೆಸುವ ಹಾಗೆ. ಪ್ರವಾದಿಯವರ ﷺ ಏಕಾಂತ ವಾಸದ ಕುರಿತು ಎಲ್ಲಾ ಕಡೆಯೂ ಚರ್ಚೆಯಾಯಿತು. ಸಾಮಾನ್ಯವಾಗಿ ಕಅಬಾದ ಪರಿಸರದಲ್ಲಿ ಇರುತ್ತಿದ್ದ ಅಲ್ ಅಮೀನ್ ಈಗ ಅವರನ್ನು ಕಾಣುತ್ತಿಲ್ಲವಲ್ಲ.? ಎಂದು ಕೆಲವರು ಹೇಳಿದರೇ, ಊರಿನಲ್ಲಿ ಜೀವ ಕಾರುಣ್ಯ ಸೇವೆಯನ್ನು ಮಾಡುತಿದ್ದ ನಾಯಕನನ್ನು ಈಗ ಕಾಣುತ್ತಿಲ್ಲವಲ್ಲ ಎಂದು ಇನ್ನೂ ಕೆಲವರು ಹೇಳಿದರು. ಅವರವರೇ ಪರಸ್ಪರ ಏನೇನೋ ಕಾರಣಗಳನ್ನು ಕೊಟ್ಟು ಚರ್ಚೆ ನಡೆಸುತ್ತಿದ್ದರು. ಪ್ರವಾದಿಯವರ ﷺ ಮನೆಯಲ್ಲಿ ಚಿಕ್ಕಪ್ಪ ಹಾಗೂ ಚಿಕ್ಕಮ್ಮಂದಿರು ಕೂಡ ಚರ್ಚೆ ಮಾಡತೊಡಗಿದರು. ಅಷ್ಟೊತ್ತಿಗಾಗಲೇ ಅಲ್ಲಾಹನ ಆಜ್ಞೆಯು ಬಂದು ಬಿಟ್ಟಿತು. “ವ ಅನ್’ದಿರ್….” ನಿಮ್ಮ ಆತ್ಮೀಯ ಗೆಳೆಯರಿಗೆ ಎಚ್ಚರಿಕೆ ನೀಡಿರಿ, ಪ್ರಭೋಧನೆ ಹೇಗೆ ಆರಂಭಿಸಬೇಕು, ಎಲ್ಲಿಂದ ಆರಂಭಿಸಬೇಕು, ಎಂದು ಸ್ಪಷ್ಟಪಡಿಸುವ ಸೂಕ್ತವಾಗಿತ್ತು ಅದು. ಪ್ರವಾದಿಯವರು ﷺ ಈ ಘೋಷಣೆಯನ್ನು ಪಾಲಿಸಿ, ಕುಟುಂಬದ ಗಣ್ಯರನ್ನು ಕರೆಸಿದರು. ಉತ್ತಮವಾದ ಔತಣವನ್ನು ಆಯೋಜಿಸಿದರು. ನಲ್ವತ್ತರಿಂದ ನಲ್ವತೈದರ ಒಳಗೆ ಅತಿಥಿಗಳು ಸೇರಿದ್ದರು. ಸಫಾ ಬೆಟ್ಟದ ಮೇಲೆ ನಿಂತು ಪ್ರತಿಯೊಂದು ವಿಭಾಗದ ಪ್ರತಿನಿಧಿಗಳನ್ನು ಕೂಗಿ ಕರೆದರು. ಓ ಅಬ್ದು ಮನಾಫಿನ ಸಂತತಿಗಳೇ.. ಹಾಶಿಮಿನ ಮಕ್ಕಳೇ, ಮುಹಮ್ಮದ್ ﷺ ಪ್ರವಾದಿಯವರ ಚಿಕ್ಕಪ್ಪರಾದ ಅಬ್ಬಾಸ್’ರವರೇ.. ಚಿಕ್ಕಮ್ಮ ಸ್ವಫೀಯರವರೇ.. ಅಬ್ದುಲ್ ಮುತ್ತಲಿಬರ ಕುಟುಂಬಸ್ಥರೇ.. ಮಗಳೇ ಫಾತಿಮಾ.. ನಾನು ನಿಮಗಾಗಿ ಅಲ್ಲಾಹುವಿನಿಂದ ಏನನ್ನೂ ಸಂಪಾದಿಸಿಲ್ಲ, ನನ್ನ ಸಂಪತ್ತಿನಿಂದ ನಿಮಗೆ ಏನೂ ಬೇಕಾದರೂ ಕೇಳಬಹುದು.

ಒಂದು ವಿಷಯ ಕೇಳಲೇ.. ಈ ಬೆಟ್ಟದ ಹಿಂದಿನಿಂದ ಒಂದು ಅಶ್ವಸೇನೆ ಬರುತ್ತಿದೆ ಎಂದು ನಾನು ಹೇಳಿದರೆ ನೀವು ನಂಬುತ್ತೀರೆ.? ಎಂದು ಕೇಳಿದಾಗ. ಹೌದು ನಾವು ನಂಬುತ್ತೇವೆ, ಇವತ್ತಿನವರೆಗೂ ಮುಹಮ್ಮದ್ ﷺ ಸುಳ್ಳು ಹೇಳಿದ್ದನ್ನು ನಾವು ಕಂಡಿಲ್ಲ ಎಂದು ಹೇಳಿದರು. ಹಾಗಾದರೆ ನಾನು ಘೋಷಿಸುತ್ತಿದ್ದೇನೆ. ಅಲ್ಲಾಹನು ನಿಮಗಾಗಿ ನಿಯೋಗಿಸಿದ ಎಚ್ಚರಿಕೆಗಾರಾನಾಗಿದ್ದೇನೆ ನಾನು….

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-50/365

ನಾನು ನಿಮಗೆ ನೀಡುತ್ತಿರುವಷ್ಟು ಒಳಿತನ್ನು ಅರಬಿಗಳಲ್ಲಿ ಯಾರೂ ಕೂಡ ಅವರ ಕುಟುಂಬಕ್ಕೆ ನೀಡಲಿಲ್ಲ. ಎರಡು ಲೋಕದಲ್ಲೂ ನಿಮಗೆ ಒಳಿತು ಮಾತ್ರವಾಗಿದೆ ನಾನು ನೀಡುತ್ತಿರುವುದು. ನಾನು ನಿಮ್ಮನ್ನು ವಿಜಯದ ಕಡೆಗೆ ಆಹ್ವಾನಿಸುತ್ತಿದ್ದೇನೆ. ಈ ವಿಷಯದಲ್ಲಿ ನೀವು ನನ್ನ ಜೊತೆ ಇರಬೇಕು ಎಂದು ಪ್ರವಾದಿಯವರು ﷺ ಹೇಳಿದರು. ಜೊತೆ ಸೇರಿದ್ದ ಪ್ರತಿಯೊಬ್ಬರೂ ಕೂಡ ಬಹಳ ಗಂಭೀರವಾಗಿಯೇ ಪ್ರವಾದಿಯವರ ﷺ ಮಾತನ್ನು ಕೇಳುತ್ತಿದ್ದರು. ಆದರೆ ಅಬೂಲಹಬ್ ಎನ್ನುವ ವ್ಯಕ್ತಿಗೆ ಮಾತ್ರ ಅದು ಇಷ್ಟವಾಗಲಿಲ್ಲ. ಇದನ್ನು ಹೇಳಲಾಗಿತ್ತೋ ನಮ್ಮನ್ನು ಇಲ್ಲಿಗೆ ಕರಿಸಿದ್ದು ಮುಹಮ್ಮದರೇ ﷺ ನಿಮಗೆ ನಾಶ ಎಂದು ಹೇಳುತ್ತಾ ‘ತಬ್ಬಲ್ಲಕ ಯಾ….’ ಎನ್ನುವ ಪದವನ್ನು ಬಳಸಿದರು. ಪ್ರವಾದಿಯವರಿಗೆ ﷺ ಆ ಪದವು ಬಹಳ ನೋವುಂಟು ಮಾಡಿತು. ತಕ್ಷಣವೇ ಅಲ್ಲಾಹನು ಪ್ರವಾದಿಯವರನ್ನು ﷺ ಸಮಾಧಾನ ಪಡಿಸಲು ಅಬೂಲಹಬಿಗೆ ಅದೇ ದಾಟಿಯಲ್ಲಿ ಕುರ್’ಆನ್ ಸೂಕ್ತವನ್ನು ಅವತರಿಸಿ ಉತ್ತರ ನೀಡಿದನು. ತಬ್ಬತ್ ಯದಾ – ಎನ್ನುವ ಖುರ್’ಆನಿನ ನೂರಾ ಹನ್ನೊಂದನೇ ಅಧ್ಯಾಯವು ಅವತರಿಸಿತು. ಅದರ ಅನುವಾದ ಈ ರೀತಿಯಾಗಿದೆ. “ಅಬೂಲಹಬಿನ ಎರಡು ಕೈಗಳಿಗಾಗಿದೆ ನಾಶ, ಅವನು ಗಳಿಸಿದ ಹೆಸರಾಗಲಿ, ಅವನ ಸಂಪತ್ತಾಗಲಿ ಅವನಿಗೆ ಪ್ರಯೋಜನವಾಗುವುದಿಲ್ಲ. ಅವನು ಸುಡುವ ನರಕವನ್ನು ಪ್ರವೇಶಿಸುವನು, ಅವನ ಜೊತೆಯಲ್ಲಿದ್ದ ಪತ್ನಿಯ ಕತ್ತಿನಲ್ಲಿ ತಾಳೆ ನಾರಿನ ಹಗ್ಗ ಇರುತ್ತದೆ.” (ಇದೆಲ್ಲವೂ ನಂತದ ಕಾಲದಲ್ಲಿ ವಾಸ್ತವವಾಗಿ ನಡೆಯಿತು) ಆದರೆ ಅದೇ ಸಭೆಯಲ್ಲಿದ್ದ ಕುಟುಂಬದ ಸದಸ್ಯನಾಗಿದ್ದ ಅಲಿ ತಮ್ಮ ಸತ್ಯ ವಿಶ್ವಾಸವನ್ನು ಧೈರ್ಯದಿಂದ ಘೋಷಣೆ ಮಾಡಿದರು. ಯಾವುದೇ ಸಂದರ್ಭದಲ್ಲಿಯೂ ನಾನು ನಿಮ್ಮ ಜೊತೆಯಲ್ಲೇ ಇರುತ್ತೇನೆ ಎಂದೂ ಕೂಡ ಹೇಳಿದರು.
ಪ್ರವಾದಿಯವರು ﷺ ತಮ್ಮ ಮನೆಗೆ ಮರಳಿದರು. ತಮ್ಮ ಸಮಯವನ್ನು ಆರಾಧನೆಯಲ್ಲಿಯೂ, ಆಲೋಚನೆಯಲ್ಲಿಯೂ ಉಪಯೋಗಿಸಿದರು. ಪ್ರಭೋಧನೆಯ ಫಲವು ಕಾಣಲು ಆರಂಭಿಸಿತು. ಮಕ್ಕಾದ ಎಲ್ಲಾ ಭಾಗಗಳಲ್ಲೂ ಪ್ರವಾದಿಯವರ ﷺ ಆದರ್ಶದ ಕುರಿತು ಚರ್ಚೆಗಳು ಆರಂಭವಾಯಿತು. ಪ್ರವಾದಿ, ರಸೂಲ್, ದಿವ್ಯಸಂದೇಶ ಅಥವಾ ವಹಿಯ್ ಎಂದು.

ವಹಿಯ್ ಅಂದರೆ ಏನು.? ಪ್ರವಾದಿ ಅಂದರೆ ಯಾರು.? ಎಂಬುದನ್ನು ನಾವು ತಿಳಿಯೋಣ.
ವಹಿಯ್ ಎನ್ನುವ ಅರಬಿಕ್ ಪದದ ಪ್ರಾಥಮಿಕ ಅರ್ಥ ದಿವ್ಯಸಂದೇಶ ಎಂದಾಗಿದೆ. ಆದರೆ ಪರೋಕ್ಷವಾಗಿ ಮಾಹಿತಿ ನೀಡುವುದು ಎಂದಾಗಿದೆ ಅದರ ಸಾಮಾನ್ಯ ಅರ್ಥ. ಸೃಷ್ಟಿಕರ್ತನಾದ ಅಲ್ಲಾಹನು ತನ್ನ ಎಲ್ಲಾ ಪ್ರವಾದಿಯರಿಗೆ ಸಂದೇಶಗಳನ್ನು ತಲುಪಿಸುವ ವಿಶೇಷವಾದ ರೀತಿಯಾಗಿದೆ ವಹಿಯ್ ಎನ್ನುವ ಪದದ ಸಂಕೇತವಾದ ಅರ್ಥ. ಸ್ಪಷ್ಟವಾಗಿ ಹೇಳಬೇಕಾದರೆ ವಹಿಯ್’ಯನ್ನು ಅರ್ಥ ಮಾಡಿಕೊಳ್ಳಲು ಸಾಮಾನ್ಯ ಜನರಿಗೆ ಪರಿಮಿತಿಗಳಿವೆ. ಅನುಭವಿಸಿ ತಿಳಿಯಲೋ, ಅನುಭವಿಸಿದವರಿಂದ ನೇರವಾಗಿ ಅರ್ಥ ಮಾಡಿಕೊಳ್ಳಲೋ, ಜನರಿಗೆ ಅವಕಾಶವಿಲ್ಲ ಎಂಬುದಾಗಿದೆ ಅದರ ಒಂದು ಕಾರಣ.
ವಹಿಯ್’ಗೆ ವಿಭಿನ್ನವಾದ ರೀತಿಗಳಿವೆ
ಒಂದು: ಕನಸಿನ ಮೂಲಕ ತಿಳಿಯುವ ವಿಶೇಷ ಸಂದೇಶಗಳು. ಪ್ರವಾದಿಯವರ ﷺ ಪ್ರತಿಯೊಂದು ಕನಸುಗಳೂ ಕೂಡ ಸೂರ್ಯ ಪ್ರಕಾಶದಂತೆ ಸತ್ಯವಾಗುತ್ತಿತ್ತು. ಪ್ರವಾದಿ ಇಬ್ರಾಹಿಂರವರಿಗೆ (ಅ) ಮಗನನ್ನು ಬಲಿ ಕೊಡಲು ಲಭಿಸಿದ ಸಂದೇಶವು ಕನಸಿನ ಮೂಲಕವಾಗಿತ್ತು.

ಎರಡು: ಮಲಕ್’ಗಳ ಮೂಲಕ ಪ್ರವಾದಿಯವರ ﷺ ಮನಸ್ಸಿಗೆ ಅಥವಾ, ಸ್ಮೃತಿಗೆ ಸಂದೇಶವನ್ನು ಹಾಕಿ ಕೊಡುವುದು. ಆ ಸಂದರ್ಭದಲ್ಲಿ ಮಲಕ್’ಗಳು ಪ್ರತ್ಯಕ್ಷವಾಗಿ ಇರಬೇಕೆಂದಿಲ್ಲ. ಹದೀಸ್’ಗಳಲ್ಲಿ ಈ ರೀತಿಯ ಪದ ಪ್ರಯೋಗದ ಕುರಿತು ಕಾಣಬಹುದು. ಪ್ರವಾದಿಯವರು ﷺ ಈ ರೀತಿ ವಿವರಿಸುತ್ತಾರೆ. ಒಮ್ಮೆ ನನ್ನ ಹೃದಯಕ್ಕೆ ಪವಿತ್ರಾತ್ಮವು ಬಂದು ಸಂದೇಶ ಹಾಕಿತು, ಯಾವುದೇ ಶರೀರವೂ ಕೂಡ ಅದಕ್ಕೆ ನಿಶ್ಚಯಿಸಿದ ಆಹಾರವನ್ನು ಸೇವಿಸದೆ ಮರಣ ಹೊಂದುದಿಲ್ಲ, ಹಾಗಾಗಿ ನೀವ ಭಕ್ತಿ ಉಳ್ಳವರಾಗಿರಿ, ಸಂಪತ್ತನ್ನು ಒಳ್ಳೆಯ ರೀತಿಯಲ್ಲಿ ಸಂಪಾದನೆ ಮಾಡಿರಿ. ಆಹಾರದ ಕೊರತೆ ಬಂದಾಗ ಸೃಷ್ಟಿಕರ್ತನು ಅನುಮತಿಸದ ದಾರಿಯನ್ನು ಆಯ್ಕೆ ಮಾಡಬೇಡಿರಿ, ಅಲ್ಲಾಹನನ್ನು ಅನುಸರಿಸುವ ಮೂಲಕ ಅವನಿಂದ ಎಲ್ಲವನ್ನು ಪಡೆಯಲು ಸಾಧ್ಯವಿದೆ ಎಂದು.
ಮೂರು: ಮಲಕ್ ಮಲಕಿನ ರೂಪದಲ್ಲೇ ಬಂದು ಸಂದೇಶ ತಿಳಿಸಿ ಹೋಗುವುದು. ಅದು ಕೆಲವೊಮ್ಮೆ ಗಂಟೆಯ ಶಬ್ದದ ರೂಪದಲ್ಲಾಗಿರುತ್ತದೆ. ಸಂದೇಶ ಪಡೆಯುವಾಗ ಬಹಳ ಕಷ್ಟಕರವಾಗುವುದು ಈ ವಿಧಾನದ ಮೂಲಕ ಪಡೆಯುವಾಗ ಆಗಿದೆಯೆಂದು ಹದೀಸ್’ಗಳಲ್ಲಿ ಕಾಣಬಹುದು. ಗಂಟೆಯ ಶಬ್ದ ಎನ್ನುವುದು ಕೇವಲ ಅದರ ಅನುವಾದ ಮಾತ್ರ, ಅದರ ಸರಿಯಾದ ರೂಪವನ್ನು ಅರ್ಥ ಮಾಡಿಕೊಳ್ಳಲು ಸಾದ್ಯವಿಲ್ಲ. ಹಾಗಾಗಿ ಇಂತಹ ವಿಷಯದಲ್ಲಿ ಉಲ್ಲೇಖಗಳನ್ನು ಅಂಗೀಕರಿಸದೇ ಬೇರೆ ದಾರಿಯೇ ಇಲ್ಲ.

ನಾಲ್ಕು: ಮಲಕ್ ಮನುಷ್ಯನ ರೂಪದಲ್ಲಿ ಬಂದು ಸಂದೇಶ ತಿಳಿಸುವ ರೀತಿ. ಹೀಗೆ ಬರುವಾಗ ಸಭೆಯಲ್ಲಿರುವವರಿಗೆ ಜಿಬ್’ರೀಲರನ್ನು (ಅ) ಕಾಣಲು ಸಾಧ್ಯವಾಗುತ್ತದೆ ಆದರೆ ಈ ಬಂದಿದ್ದ ವ್ಯಕ್ತಿ ಜಿಬ್’ರೀಲ್ (ಅ) ಆಗಿದ್ದರು ಎಂದು ಪ್ರವಾದಿಯವರೇ ﷺ ತಿಳಿಸಬೇಕಾಗಿತ್ತು. ಈಮಾನ್, ಇಸ್ಲಾಮಿನ ಕುರಿತು ವಿವರಿಸುವ ಪ್ರಸಿದ್ಧವಾದ ಹದೀಸಿನ ಉಲ್ಲೇಖದಲ್ಲಿ ಜಿಬ್’ರೀಲ್ (ಅ) ಮನುಷ್ಯನ ರೂಪದಲ್ಲಿ ಬಂದದ್ದು ಕಾಣಬಹುದು. ಪ್ರಸ್ತುತ ಹದೀಸನ್ನು ಹದೀಸುಜಿಬ್’ರೀಲ್ (ಜಿಬ್’ರೀಲರ (ಅ) ಹದೀಸ್) ಎನ್ನುವ ಹೆಸರಿನಿಂದ ಅರಿಯಲ್ಪಟ್ಟಿದೆ. ಬಹಳಷ್ಟು ಬಾರಿ ಜಿಬ್’ರೀಲರು (ಅ) ಪ್ರಮುಖ ಸ್ವಾಹಾಬಿಯಾದ ದಿಹ್ಯತುಲ್ ಕಲ್’ಬಿ ಎಂಬವರ ರೂಪದಲ್ಲಿ ಬರುತ್ತಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-51/365

ಐದು: ಜಿಬ್’ರೀಲ್’ರವರು (ಅ) ಜಿಬ್’ರೀಲರ ನಿಜವಾದ ರೂಪದಲ್ಲಿ ಪ್ರತ್ಯಕ್ಷರಾಗಿ ಸಂದೇಶ ತಿಳಿಸುವುದು. ಈ ವಿಧಾನವು ಬಹಳ ಅಪರೂಪವಾಗಿಯೇ ಕಾಣಲು ಸಿಗುವುದು. ಪ್ರವಾದಿಯರುಗಳಲ್ಲೇ ಜಿಬ್’ರೀಲ್’ರವರ ನಿಜವಾದ ರೂಪವನ್ನು ಕಂಡದ್ದು ಮುಹಮ್ಮದ್ ﷺ ಪ್ರವಾದಿಯವರು ಮಾತ್ರವಾಗಿದ್ದರು. ಅದು ಕೂಡ ಎರಡು ಬಾರಿ ಮಾತ್ರವಾಗಿತ್ತು ಎನ್ನುವ ಅಭಿಪ್ರಾಯಗಳನ್ನು ಹದೀಸ್’ಗಳಲ್ಲಿ ಉಲ್ಲೇಖಿಸಿದ್ದು ಕಾಣಬಹುದು.
ಆರು: ಯಾವುದೇ ಮಧ್ಯವರ್ತಿಗಳಿಲ್ಲದೆ ಅಲ್ಲಾಹನು ನೇರವಾಗಿ ಸಂದೇಶ ನೀಡುವುದಾಗಿದೆ. ಆದರೆ ಪ್ರವಾದಿಯವರು ﷺ ಹಾಗೂ ಅಲ್ಲಾಹನ ನಡುವೆ ಒಂದು ಪರದೆ ಇರುತ್ತಿತ್ತು. ಪ್ರವಾದಿ ಮೂಸ’ರೊಂದಿಗೆ (ಅ) ಅಲ್ಲಾಹುವಿನ ಸಂದೇಶ ಈ ರೀತಿಯಲ್ಲಾಗಿತ್ತು.
ಏಳು: ಮಧ್ಯವರ್ತಿಗಳಾಗಲಿ, ನಡುವೆ ಪರದೆಯಾಗಲಿ ಇಲ್ಲದೆ ಅಲ್ಲಾಹನೊಂದಿಗೆ ನೇರವಾದ ಸಂಭಾಷಣೆ. ಮಿಅರಾಜಿನ ಸಂದರ್ಭದಲ್ಲಿ ಅಲ್ಲಾಹನು ಹಾಗೂ ಪ್ರವಾದಿಯವರು ﷺ ಸಂಭಾಷಣೆ ನಡೆದದ್ದು ಈ ರೀತಿಯಲ್ಲಾಗಿತ್ತು. ಪ್ರಸ್ತುತ ರಾತ್ರಿಯಲ್ಲಿ ಪ್ರವಾದಿಯವರು ﷺ ಅಲ್ಲಾಹನನ್ನು ನೆರವಾಗಿ ಕಂಡು, ಸಂದೇಶ ಸ್ವೀಕರಿಸಿದ್ದರು. ಈ ಘಟನೆಯನ್ನು ಅನ್ನಜ್’ಮ್ ಅಧ್ಯಾಯದಲ್ಲಿ ಖುರ್’ಆನ್ ವಿವರಿಸಿದ್ದು ಈ ರೀತಿಯಾಗಿತ್ತು. “ಹೀಗೆ ಅವನ ದಾಸರಿಗೆ ವಹಿಯ್ ನೀಡಬೇಕಾದ್ದನ್ನು ನೀಡಿದ್ದರು ಎಂದು”.

ಎಂಟು: ನಿದ್ದೆಯಲ್ಲಿ ಅಲ್ಲಾಹನು ಪ್ರವಾದಿಯವರಿಗೆ ﷺ ಸಂದೇಶ ನೀಡುವ ರೀತಿ. ಕನಸಿನ ಮೂಲಕವಲ್ಲದ ವಿಶೇಷವಾದ ಒಂದು ದಾರಿಯಾಗಿದೆ ಅದು. ಇಮಾಮ್ ಅಹ್’ಮದ್’ರವರು ಉಲ್ಲೇಖಿಸಿದ ಈ ರೀತಿಯ ಬಹಳಷ್ಟು ಹದೀಸ್’ಗಳನ್ನು ಕಾಣಬಹುದು. ಇಮಾಮ್ ಇಬ್’ನು ಅಬ್ಬಾಸ್’ರವರು ಉಲ್ಲೇಖಿಸಿದ ಮತ್ತೊಂದು ಹದೀಸಿನಲ್ಲಿ ಕಾಣಬಹುದು. ಪ್ರವಾದಿಯವರು ﷺ ಈ ರೀತಿ ವಿವರಿಸುತ್ತಾರೆ. ನನ್ನ ಸೃಷ್ಟಿಕರ್ತನು ಬಹಳ ಸುಂದರವಾಗಿ ನನ್ನ ಬಳಿ ಬಂದನು. (ಕನಸಿನಲ್ಲಿ ಆಗಿತ್ತು ಎಂದು ಪ್ರವಾದಿಯವರು ﷺ ಹೇಳಿರಬಹುದು ಎಂದು ನನ್ನ ಅನಿಸಿಕೆ) ಓ ಮುಹಮ್ಮದ್ ﷺ ಎಂದು ನನ್ನನ್ನು ಕರೆದು.
ಅತ್ಯುತ್ತಮ ವಸ್ತುಗಳಲ್ಲಿ ಯಾವುದರ ಬಗ್ಗೆ ಚರ್ಚೆಯಾಗುತ್ತದೆ ಎಂದು ನಿಮಗೆ ಗೊತ್ತೇ.? ಎಂದು ನನ್ನಲ್ಲಿ ಕೇಳಿದಾಗ. ನನಗೆ ಗೊತ್ತಿಲ್ಲ ಪ್ರಭು ಎಂದು ಹೇಳಿದೆನು. ಅಷ್ಟರಲ್ಲೇ ಕೆಲವೊಂದು ಅನುಗ್ರಹಗಳನ್ನು ನನಗೆ ನೀಡಿದನು. ಅದರ ನಂತರ ಉದಯಾಸ್ತಮಾನದ ನಡುವಿನ ಎಲ್ಲಾ ವಿಷಯಗಳನ್ನು ನಾನು ತಿಳಿಯಲು ಸಾಧ್ಯವಾಯಿತು ಎಂದು.

ಒಂಬತ್ತು: ಜೇನುನೊಣಗಳ ಝೇಂಕಾರದ ಶಬ್ದಗಳನ್ನು ಕೇಳುವ ಹಾಗೆ ದಿವ್ಯ ಸಂದೇಶವನ್ನು ಪಡೆಯುವ ರೀತಿ. ಈ ರೀತಿಯ ಅನುಭವವನ್ನು ಉಮರ್’ರವರು (ರ) ವಿವರಿಸಿದ್ದನ್ನು, ಇಮಾಮ್ ಅಹ್’ಮದ್’ರವರು ಉಲ್ಲೇಖಿಸಿದ್ದು ಕಾಣಬಹುದು.
ಹತ್ತು: ಸಂಶೋಧನೆಯ ವಿಷಯಗಳು ಹತ್ತಿರವಾಗುವಾಗ ಪ್ರವಾದಿಯವರ ﷺ ಹೃದಯದಲ್ಲಿ ಉಂಟಾಗುವ ತೀರ್ಮಾನಗಳು. ಇಜ್’ತಿಹಾದನ್ನು ವಹಿಯ ಸಾಲಿನಲ್ಲಿ ಸೇರಿಸಬಹುದೋ ಎನ್ನುವುದರಲ್ಲಿ ಚರ್ಚೆಗಳಿವೆ. ಆದರೆ ಅವರು ಹೇಳುವುದೆಲ್ಲವು ವಹಿಯ ಆಧಾರದ ಮೇಲೆ ಎನ್ನುವುದರಲ್ಲಿ ಇದು ಕೂಡ ಸೇರುತ್ತದೆ. ದಿವ್ಯ ಸಂದೇಶಗಳಿಗೆ ಇನ್ನು ಕೂಡ ಬೇರೆ ರೀತಿಗಳಿವೆ. ವಹಿಯನ್ನು ತಲುಪಿಸುವ ಭಾವಗಳಿಗುಣವಾಗಿ ಆಗಿದೆ ಅದನ್ನು ವಿವರಿಸುವುದು. ವಹಿಯ್’ಗೆ (ದಿವ್ಯ ಸಂದೇಶಕ್ಕೆ) ನಾಲ್ವತ್ತಾರು ವಿಧಗಳಿವೆ ಎಂದು ಹದೀಸಿನಲ್ಲಿ ಉಲ್ಲೇಖಿಸಲಾಗಿದೆ.

ಪ್ರವಾದಿಯವರಿಗೆ ﷺ ಲಭಿಸುತ್ತಿದ್ದ ದಿವ್ಯ ಸಂದೇಶಗಳ ಮಹತ್ವದ ಕುರಿತು 53 ನೇ ಅಧ್ಯಾಯವಾದ ಅನ್ನಜ್’ಮುನಲ್ಲಿ ಒಂದರಿಂದ ಐದರ ವರೆಗಿನ ಸೂಕ್ತಗಳಲ್ಲಿ ವಿವರಿಸುವುದು ಈ ರೀತಿಯಾಗಿದೆ. “ಅಸ್ತಮಿಸಿದ ನಕ್ಷತ್ರದ ಮೇಲಾಣೆ, ನಿಮ್ಮ ಸ್ನೇಹಿತನು (ಪ್ರವಾದಿಯವರು ﷺ) ದಾರಿಯೂ ತಪ್ಪಲಿಲ್ಲ. (ಸತ್ಯದಿಂದ) ದೂರ ಸರಿದೂ ಇಲ್ಲ. ಅವರು ತನ್ನಿಚ್ಛೆಯಂತೆ ಮಾತಾಡುವುದು ಇಲ್ಲ. (ಅವರಾಡುವ ಮಾತು) ಅವರಿಗೆ ಲಭಿಸುವ ದಿವ್ಯ ಸಂದೇಶದಿಂದ ಮಾತ್ರವಾಗಿದೆ. ಮಹಾಶಕ್ತಿಶಾಲಿಯಾದ ಒಬ್ಬರು ಅವರಿಗೆ ಅದನ್ನು ಕಲಿಸಿರುತ್ತಾರೆ” ಎಂದು.

ಪ್ರವಾದಿಯವರ ﷺ ಜ್ಞಾನದ ಹೇಳಿಕೆಗಳು ಕೂಡ ವಹಿಯ್ ಮೂಲಕ ಮಾತ್ರವಾಗಿತ್ತು. ಎಂಬುದನ್ನು ವಿವರಿಸುವ ಒಂದು ಹದೀಸನ್ನು ಇಮಾಮ್ ಅಬೂದಾವೂದ್’ರವರು (ರ) ಉಲ್ಲೇಖಿಸಿದ್ದು ಕಾಣಬಹುದು. ಅಬ್ದುಲ್ಲಾಹಿ ಬಿನ್ ಅಂರ್’ರವರು ಈ ರೀತಿ ವಿವರಿಸುತ್ತಾರೆ. ಪ್ರವಾದಿಯವರಿಂದ ﷺ ಕೇಳಿದ ಎಲ್ಲಾ ವಿಷಯಗಳನ್ನೂ ನಾನು ಬರೆದು ಇಡುತ್ತಿದ್ದೆ. ಕಂಠಪಾಠ ಮಾಡುವ ಉದ್ದೇಶದಿಂದಾಗಿತ್ತು ಹಾಗೆ ಮಾಡುತಿದ್ದದ್ದು. ಅದನ್ನು ಕೆಲವು ಖುರೈಷಿಗಳು ವಿರೋಧಿಸಿದರು. ಪ್ರವಾದಿಯವರು ﷺ ಕೋಪ ಬಂದಾಗಲೂ ಇಲ್ಲದಿದ್ದರೂ ಮಾತಾಡುವ ವ್ಯಕ್ತಿಯಲ್ಲವೇ.? ಹಾಗಾಗಿ ಎಲ್ಲವನ್ನು ಬರೆದಿಡುವ ಅಗತ್ಯವಿದೆಯೇ.? ಎಂದು ಹೇಳಿದಾಗ ನಾನು ಬರೆಯುವುದನ್ನು ನಿಲ್ಲಿಸಿದೆನು. ಈ ವಿಷಯವನ್ನು ನಂತರ ಪ್ರವಾದಿಯವರಲ್ಲಿ ﷺ ಹಂಚಿಕೊಂಡಾಗ, ನೀವು ಬರೆಯಿರಿ ನನ್ನ ಆತ್ಮವನ್ನು ನಿಯಂತ್ರಿಸುವ ಒಡೆಯ ಮೇಲಾಣೆ, ನನ್ನಿಂದ ಸತ್ಯವಲ್ಲದ ಒಂದು ಮಾತು ಕೂಡ ಬರುವುದಿಲ್ಲ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّم

Mahabba Campaign Part-52/365

ವಹಿಯ್ ಅಥವಾ ದಿವ್ಯ ಸಂದೇಶದ ಕುರಿತು ತಿಳಿದುಕೊಂಡೆವು. ಇನ್ನೂ ‘ಪ್ರವಾದಿ’ ಅಂದರೆ ಯಾರು.? ಎಂಬುದನ್ನು ತಿಳಿಯೋಣ. ಯಾವುದಾದರೂ ಸಾಧನೆ ಮಾಡಿ ಪಡೆಯುವ ಪದವಿಯಲ್ಲ, ಈ ಪ್ರವಾದಿತ್ವ ಎನ್ನುವುದು. ವಿದ್ಯೆ ಕಲಿಯುವ ಮೂಲಕವೋ, ಅಥವಾ ಹಲವಾರು ವರ್ಷಗಳ ಕಾಲ ತಪ್ಪಸ್ಸು ಮಾಡುವ ಮೂಲಕವೋ, ಪಡೆಯಬಹುದಾದ ಒಂದು ಪದವಿಯೂ ಅಲ್ಲ ಈ ಪ್ರವಾದಿತ್ವ ಎನ್ನುವುದು. ಬದಲಾಗಿ ಸೃಷ್ಟಿಕರ್ತನಾದ ಅಲ್ಲಾಹನು ಮೊದಲೇ ತೀರ್ಮಾನಿಸಿ ನಿಶ್ಚಯಿಸಿದವರಾಗಿದ್ದಾರೆ ಪ್ರವಾದಿಗಳು. ವಿಶೇಷವಾದ ಸಂದೇಶಗಳನ್ನು (ವಹಿಯ್) ಲಭಿಸಿದ ಪುಣ್ಯ ಪುರುಷರಾಗಿರುತ್ತಾರೆ ಪ್ರವಾದಿ ಎನ್ನುವವರು. ಇದಾಗಿದೆ ಪ್ರವಾದಿ ಎನ್ನುವ ಪದದ ಸರಳವಾದ ಅರ್ಥ. ದಿವ್ಯ ಸಂದೇಶದೊಂದಿಗೆ ಪ್ರಭೋಧನೆಯ (ಉಪದೇಶ) ಜವಾಬ್ದಾರಿಯೂ ಕೂಡ ಲಭಿಸಿದವರನ್ನು ‘ರಸೂಲ್’ ಎಂದು ಕರೆಯುತ್ತೇವೆ. ಎಲ್ಲಾ ರಸೂಲ್’ಗಳು (ಸಂದೇಶ ವಾಹಕರು) ಕೂಡ ಪ್ರವಾದಿಯಾಗಿರುತ್ತಾರೆ, ಆದರೆ ಎಲ್ಲಾ ಪ್ರವಾದಿಗಳೂ ರಸೂಲ್ ಆಗಿರುದಿಲ್ಲ. ಒಬ್ಬರು ಪ್ರವಾದಿಗೆ ಇರಬೇಕಾದ ಎಲ್ಲಾ ಗುಣಗಳನ್ನು ಮೊದಲೇ ಅಲ್ಲಾಹನು ಅವರಿಗೆ ನೀಡಿರುತ್ತಾನೆ. ಪ್ರವಾದಿತ್ವದ ನಿಯೋಗದ ಮೊದಲಾಗಲಿ, ನಂತರವಾಗಲಿ ಅವರು ಪಾಪಗಳಿಂದ ಮುಕ್ತರಾಗಿರುತ್ತಾರೆ. ಯಾವುದೇ ಕಾರಣಕ್ಕೂ ಅವರಿಂದ ಸಣ್ಣ ತಪ್ಪು ಕೂಡ ಉಂಟಾಗುವುದಿಲ್ಲ. ಅವರ ನೋಟವಾಗಲಿ, ಶ್ರವಣ ಶಕ್ತಿಯಾಗಲಿ ಹಾಗೂ ಅವರ ಜೀವನವೂ ಕೂಡ ಅಸಾಮಾನ್ಯವಾಗಿರುತ್ತದೆ. “ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ, ಯಾರಿಗೆ ರಿಸಾಲತ್ತಿನ ಪದವಿ ನೀಡಬೇಕೆಂದು” ಎನ್ನುವ ಆದರ್ಶವನ್ನು ಪವಿತ್ರ ಕುರ್’ಆನಿನ ಅನ್’ಆಂ ಅಧ್ಯಾಯದ ನೂರ ಇಪ್ಪತ್ನಾಲ್ಕನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು. ಅಥವಾ ಅಲ್ಲಾಹನು ಎಲ್ಲದಕ್ಕೂ ಅರ್ಹತೆ ಇರುವ, ಯೋಗ್ಯತೆ ಇರುವ, ಪರಿಪೂರ್ಣರಾದ ವ್ಯಕ್ತಿಗಳನ್ನು ಪ್ರವಾದಿಗಳಾಗಿ ಆಯ್ಕೆ ಮಾಡುತ್ತಾನೆ ಎಂಬುವುದಾಗಿದೆ ಆ ಸೂಕ್ತದ ಅರ್ಥ.

ಒಟ್ಟು ಪ್ರವಾದಿಗಳು ಎಷ್ಟಿದ್ದಾರೆ, ಎನ್ನುವುದರಲ್ಲಿ ಕೆಲವು ಅಭಿಪ್ರಾಯಗಳಿದ್ದರೂ. ಪ್ರಧಾನ ಅಭಿಪ್ರಾಯದ ಪ್ರಕಾರ ‘ಒಂದು ಲಕ್ಷದ ಇಪ್ಪತ್ತನಾಲ್ಕು ಸಾವಿರ’ ಪ್ರವಾದಿಗಳಾಗಿರುತ್ತಾರೆ ಇರುವುದು. ಇದಕ್ಕೆ ಪುರಾವೆಯಾಗಿ ಅಬೂದರ್ರ್’ರವರು (ರ) ಉಲ್ಲೇಖಿಸುವ ಹದೀಸ್’ನಲ್ಲಿ ಈ ರೀತಿ ಕಾಣಬಹುದು. ಮಹಾನರು ಹೇಳುತ್ತಾರೆ, ನಾನು ಮುಹಮ್ಮದ್ ﷺ ಪ್ರವಾದಿಯವರಲ್ಲಿ ಒಟ್ಟು ಪ್ರವಾದಿಗಳು ಎಷ್ಟಿದ್ದಾರೆ ಎಂದು ಕೇಳಿದೆನು. ಒಂದು ಲಕ್ಷದ ಇಪ್ಪತ್ನಾಲ್ಕು ಸಾವಿರ ಎಂದು ಹೇಳಿದಾಗ, ಅದರಲ್ಲಿ ರಸೂಲ್ ಎಷ್ಟಿದ್ದಾರೆ ಎಂದು ಕೇಳಿದೆನು, ಮುನ್ನೂರ ಹದಿಮೂರು ಎಂದು ಹೇಳಿದರು. ಅವರಲ್ಲಿ ಮೊದಲು ಬಂದ ವ್ಯಕ್ತಿ ಯಾರೆಂದು ಕೇಳಿದಾಗ ಪ್ರವಾದಿ ಆದಂ (ಅ) ಎಂದು ಹೇಳಿದರು. ಆದಂ (ಅ) ಪ್ರವಾದಿಯವರು ರಸೂಲ್ ಆಗಿರುತ್ತಾರೆಯೇ.? ಎಂದು ಕೇಳಿದಾಗ ಹೌದು ಅವರು ರಸೂಲ್ ಆದ ಪ್ರವಾದಿಯಾಗಿರುತ್ತಾರೆ ಎಂದು ಉತ್ತರಿಸಿದರು. ಈ ಹದೀಸ್’ನ ಕುರಿತು ವಿಮರ್ಶೆಗಳಿದ್ದರೂ, ಇಮಾಮ್ ಅಹ್ಮದ್ ಬಿನ್ ಹಂಬಲ್’ರವರು (ರ) ಸೇರಿದಂತೆ ಹಲವಾರು ಜನರು ಈ ಹದೀಸನ್ನು ನಿರೂಪಿಸಿದ್ದಾರೆ.

ಪ್ರವಾದಿಗಳ ಪರಂಪರೆಯಲ್ಲಿ ಕೊನೆಯ ವ್ಯಕ್ತಿಯಾಗಿದ್ದರೂ, ಎಲ್ಲರಿಗೂ ನಾಯಕರಾಗಿರುತ್ತಾರೆ ಮುಹಮ್ಮದ್ ﷺ ಪ್ರವಾದಿಯವರು. ರಸೂಲ್’ಗಳಲ್ಲಿ ಐದು ಜನರು ‘ಉಲುಲ್ ಅಝ್’ಮುಗಳೆಂಬ’, ವಿಶೇಷವಾದ ಸ್ಥಾನ ಪಡೆದ ಪ್ರವಾದಿಗಳಿಗಿರುತ್ತಾರೆ. ನೂಹ್ (ಅ), ಇಬ್ರಾಹಿಂ (ಅ), ಮೂಸ (ಅ), ಈಸ (ಅ) ಮುಹಮ್ಮದ್ ﷺ ಎಂಬವರಾಗಿದ್ದಾರೆ ಆ ಐದು ಜನ ಪ್ರವಾದಿಗಳು. ಈ ಪದವಿಯು ಅಸಾಧಾರಣವಾದ ಕ್ಷಮೆಯನ್ನು ಹಾಗೂ ನಿರ್ಣಯವನ್ನು ಹೊಂದಿರುವ ಕಾರಣಕ್ಕಾಗಿದೆ ಅವರಿಗೆ ಲಭಿಸಿದ್ದು. ಮುಹಮ್ಮದ್ ﷺ ಪ್ರವಾದಿಯವರು ಭೌತಿಕವಾಗಿ ಹಾಗೂ ಜವಾಬ್ದಾರಿ ವಹಿಸೂದರಲ್ಲಿ ಕೊನೆಯ ಪ್ರವಾದಿಯಾಗಿದ್ದರೂ, ಆಧ್ಯಾತ್ಮಿಕವಾದ ನಿಯೋಗದಲ್ಲಿ ಎಲ್ಲಾ ಪ್ರವಾದಿಗಳ ನಾಯಕರಾಗಿರುತ್ತಾರೆ ಅವರು. ಇತರ ಎಲ್ಲಾ ಪ್ರವಾದಿಗಳೂ ಕೂಡ ಕೆಲವೊಂದು ನಿರ್ದಿಷ್ಟ ಕಾಲಘಟ್ಟಕ್ಕೆ, ಕೆಲವು ಪ್ರದೇಶಗಳಿಗೆ ಹಾಗೂ ಕೆಲವೊಂದು ಸಮೂಹಕ್ಕೆ ಮಾತ್ರ ಸೀಮಿತವಾಗಿ ನಿಯೋಗಿಸಿದ ಪ್ರವಾದಿಗಳಾಗಿರುತ್ತಾರೆ. ಹೂದ್ (ಅ) ಪ್ರವಾದಿಯವರು ಯಮನಿನ ‘ಆದ್’ ಸಮೂಹಕ್ಕೆ ನಿಯೋಗಿಸಿದ ಪ್ರವಾದಿಯಾಗಿದ್ದರು, ಹಾಗೂ ಸ್ವಾಲಿಹ್ (ಅ) ಪ್ರವಾದಿಯವರು ‘ಸಮೂದ್’ ಎನ್ನುವ ಸಾಮೂಹಿಕ ನಿಯೋಗಿಸಿದ ಪ್ರವಾದಿಯಾಗಿದ್ದರು ಎಂದು ಖುರ್’ಆನ್ ತಿಳಿಸುತ್ತದೆ. ಆದರೆ ಮುಹಮ್ಮದ್ ﷺ ಪ್ರವಾದಿಯವರು ಮಾತ್ರ ಇಡೀ ಪ್ರಪಂಚಕ್ಕೆ ನಿಯೋಗಿಸಿದ ಪ್ರವಾದಿಯಾಗಿರುತ್ತಾರೆ. ಈ ವಿಷಯವನ್ನು ತಿಳಿಸಲು ಖುರ್’ಆನಿನಲ್ಲಿ “ಕಾಫತುಲ್ ಲಿನಾಸ್…” ಎನ್ನುವ ಪದಪ್ರಯೋಗವಾಗಿತ್ತು ನಡೆಸಿದ್ದು. ಕೇವಲ ಮನುಷ್ಯ ವರ್ಗಕ್ಕೆ ಮಾತ್ರವಲ್ಲದೆ, ಭೂತ ವರ್ಗಕ್ಕೂ ಕೂಡ ಮುಹಮ್ಮದರನ್ನು ﷺ ಪ್ರವಾದಿಯಾಗಿ ನಿಯೋಜಿಸಲಾಗಿದೆ. ಜಿನ್ನ್’ಗಳು ಅಥವಾ ಭೂತ ವರ್ಗವು ಕೂಡ ಪ್ರವಾದಿಯವರಿಂದ ﷺ ಖುರ್’ಆನ್ ಕೇಳಿ ಆಶ್ಚರ್ಯವಾಗುತ್ತಿತ್ತು, ಎಂದು ತಿಳಿಸುವ ಅಧ್ಯಾಯವಾಗಿದೆ ಪವಿತ್ರ ಖುರ್’ಆನಿನ ‘ಸೂರ ಜಿನ್ನ್’ ಎಂಬ
ಅಧ್ಯಾಯ. ಪ್ರವಾದಿಯವರಿಂದ ﷺ ಖುರ್’ಆನ್ ಕೇಳಿದ ಸ್ಥಳದಲ್ಲಿ ನಿರ್ಮಿಸಿದ ಮಸ್ಜಿದ್ ಆಗಿತ್ತು ಮಕ್ಕ ಪಟ್ಟಣದ ಪ್ರಸಿದ್ಧವಾದ ‘ಮಸ್ಜಿದುಲ್ ಜಿನ್ನ್’ ಎಂಬ ಮಸ್ಜಿದ್.

ಎಲ್ಲಾ ಪ್ರವಾದಿಗಳು ಕೂಡ ಉತ್ತಮವಾದ ಶಬ್ದವನ್ನು ಹೊಂದಿರುವ, ಒಳ್ಳೆಯ ಸೌಂದರ್ಯವನ್ನು ಹೊಂದಿರುವ ವ್ಯಕ್ತಿಗಳಾಗಿದ್ದರು. ಎಲ್ಲರೂ ಕೂಡ ಅವರ ಸ್ವಂತ ಊರಿನಲ್ಲೇ ಪ್ರವಾದಿತ್ವದ ಘೋಷಣೆ ಮಾಡಿದವರಾಗಿದ್ದರು. ಆಯಾಯ ಊರಿನ ಪ್ರಸಿದ್ಧವಾದ ಉನ್ನತ ಮನೆತನಕ್ಕೆ ಸೇರಿದ ವ್ಯಕ್ತಿಗಳಾಗಿದ್ದರು. ಇಡೀ ಪ್ರಪಂಚದಲ್ಲೇ ಪ್ರಸಿದ್ಧವಾದ ಮನೆತನವಾಗಿತ್ತು ಪುಣ್ಯ ಪ್ರವಾದಿಯವರ ﷺ ಮನೆತನ. ಅಷ್ಟೇ ಪವಿತ್ರವಾದ ಕುಟುಂಬ ಪರಂಪರೆಯೂ ಆಗಿತ್ತು ಪ್ರವಾದಿಯವರ ﷺ ಕುಟುಂಬ ಪರಂಪರೆ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-53/365

ವಹಿಯ್, ಪ್ರವಾದಿತ್ವದ ಕುರಿತು ನಾವು ತಿಳಿದುಕೊಂಡೆವು. ಆದರೆ ಪ್ರವಾದಿಗಳನ್ನು ನಿಯೋಗಿಸುವುದರ ಹಿಂದಿನ ಉದ್ದೇಶವಾದರು ಏನು.? ಎನ್ನುವ ಪ್ರಶ್ನೆಗಳು ಸಾಮಾನ್ಯವಾಗಿ ಉದ್ಭವಿಸಬಹುದು, ಅದರ ಉತ್ತರವು ಬಹಳ ಸರಳವಾಗಿದೆ. ಮನುಷ್ಯನ್ನು ಸೃಷ್ಟಿಸಿ, ಸಾಕಿ ಸಲಹಿದ ಜಗದೊಡೆಯನಾದ ಅಲ್ಲಾಹನು. ಅವನು ಉದ್ದೇಶಿಸುವ ಕೆಲವೊಂದು ವಿಷಯಗಳನ್ನು ಮನುಷರಿಗೆ ತಿಳಿಸಲು, ಮನುಷ್ಯರಿಂದಲೇ ಆಯ್ಕೆ ಮಾಡಿದ ಸಂದೇಶ ವಾಹಕರಾಗಿದ್ದಾರೆ ಈ ಪ್ರವಾದಿಗಳು. ತನ್ನ ಸೃಷ್ಟಿಗಳಾದ ಮನುಷ್ಯರಿಗೆ ಯಾವ ರೀತಿ ಉಪದೇಶ ನೀಡಬೇಕೆಂದು ತೀರ್ಮಾನಿಸುವ ಅಧಿಕಾರ ಇರುವುದು ಅಲ್ಲಾಹನಿಗೆ ಮಾತ್ರವಾಗಿದೆ. ಹಾಗಾಗಿ ಅವನು ಮನುಷ್ಯರಿಂದಲೇ ಉತ್ತಮರಾದ ಪುಣ್ಯ ಪುರುಷರನ್ನು ಆಯ್ಕೆ ಮಾಡಿ, ಅವರನ್ನು ಸಂದೇಶವಾಹಕರಾಗಿ ಆಯ್ಕೆ ಮಾಡಿಕೊಂಡನು. ಪ್ರಪಂಚದ ಎಲ್ಲಾ ಸೃಷ್ಟಿಗಳಲ್ಲೂ ಮನುಷ್ಯನನ್ನು ಮಾತ್ರ ಅತ್ಯುತ್ತಮವಾದ ಸ್ವಾಭಾವ ನೀಡಿ ಅನುಗ್ರಹಿಸಿದ್ದು ಕೂಡ ಅವನೇ ಆಗಿರುವನು. ಅದಕ್ಕನುಗುಣವಾದ ಜೀವನವನ್ನಾಗಿದೆ ಅವನು ಮನುಷ್ಯನಿಗೆ ನೀಡಿದ್ದು.

ಸರಿ ಹಾಗಿದ್ದರೆ ಮುಹಮ್ಮದ್’ರವರು ﷺ ಅಲ್ಲಾಹನು ನಿಯೋಗಿಸಿದ ಪ್ರವಾದಿಯಾಗಿರುವವರು ಎನ್ನುವುದನ್ನು ತಾರ್ಕಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಮುಹಮ್ಮದರು ﷺ ಮಕ್ಕಾದ ಉನ್ನತ ಮನೆತನದಲ್ಲಾಗಿದೆ ಜನಿಸಿದ್ದು, ತಂದೆ, ತಾಯಿಯೂ ಕೂಡ ಅತ್ಯುತ್ತಮ ಸ್ವಭಾವದ ವ್ಯಕ್ತಿಗಳಾಗಿದ್ದರು. ಮುಹಮ್ಮದರು ﷺ ಹುಟ್ಟಿದ ನಾಡಿನಲ್ಲೇ, ಸಮೂಹದ ನಡುವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿಯೇ ಬೆಳೆದರು. ತನ್ನ ಹದಿಹರೆಯದ ಪ್ರಾಯ ಹಾಗೂ ಯೌವನವನ್ನು ಮಾದರಿಯೋಗ್ಯವಾಗಿ ಕಳೆದರು. ತಮ್ಮ ಸುತ್ತಮುತ್ತಲಿನ ಜನತೆ ಮುಹಮ್ಮದರನ್ನು ﷺ ಸತ್ಯವಂತನೆಂದೂ, ನೀತಿವಂತನೆಂದೂ ಕರೆಯುತ್ತಿದ್ದರು. ಯಾವುದೇ ಕಾರಣಕ್ಕೂ, ತಮಾಷೆಗೂ ಕೂಡ ಸುಳ್ಳು ಹೇಳುತ್ತಿರಲಿಲ್ಲ. ತನ್ನ ಜೀವನದಲ್ಲಿ ಯಾರೊಬ್ಬರಿಗೂ ಮೋಸ ಮಾಡದೇ, ಯಾವುದೇ ದುಷ್’ಕೃತ್ಯವನ್ನೂ ಮಾಡದೆ, ಉತ್ತಮ ಸ್ವಾಭಾವದ ವ್ಯಕ್ತಿಯಾಗಿ, ನಲ್ವತ್ತು ವರ್ಷಗಳ ಕಾಲ ತನ್ನ ತಾಯ್ನಾಡಿನಲ್ಲೇ ಜೀವನ ಕಳೆದರು. ಮಕ್ಕಾ ಜನತೆಯ ಗಣ್ಯರ ಅತ್ಯಮೂಲ್ಯ ವಸ್ತುಗಳನ್ನು ಭದ್ರವಾಗಿ ನೋಡಿಕೊಳ್ಳುವ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರು ಅವರು. ಸಮಸ್ಯೆಯ ಸಂದರ್ಭಗಳಲ್ಲಿ ಜನರ ನಡುವೆ ಮಧ್ಯಸ್ಥಿಕೆ ವಹಿಸುವ ಕಾರ್ಯವನ್ನು ಮಾಡುತಿದ್ದರು. ಈ ರೀತಿಯಾಗಿ ಬಹಳ ಸೂಕ್ಷ್ಮತೆಯಿಂದ ಬೆಳೆದು ಬಂದ ವ್ಯಕ್ತಿಯಾಗಿರುತ್ತಾರೆ, ತನ್ನೊಬ್ಬ ಅಂತ್ಯ ಪ್ರವಾದಿಯಾಗಿರುವೆನು ಎಂದು ಘೋಷಣೆ ಮಾಡುವುದು. ನಲ್ವತ್ತು ವರ್ಷಗಳ ಕಾಲ ಒಂದೇ ಒಂದು ಕಾರಣಕ್ಕೂ ಕೂಡ ಸುಳ್ಳು ಹೇಳದ ವ್ಯಕ್ತಿ ಇಂತಹ ವಿಷಯದಲ್ಲಿ ಸುಳ್ಳು ಹೇಳಲು ಸಾಧ್ಯವೇ.? ಸಾಮಾನ್ಯವಾಗಿಯೇ ಅದನ್ನು ವಿಶ್ವಾಸವಿರಿಸಲು ಸಾಧ್ಯವೇ.? ಇಲ್ಲ ಯಾವತ್ತೂ ಸಾಧ್ಯವಿಲ್ಲ, ಹಾಗಾದರೆ ಆ ವಾದವೇ ತಪ್ಪು ಅಲ್ಲವೇ.?

ಇಂದೂ ಕೂಡ ನಮಗೆ ಆಲೋಚನೆ ಮಾಡಬಹುದು. ನಾನು ಅಲ್ಲಾಹನ ಸಂದೇಶವಾಹಕನಾಗಿರುವೆನು (ಪ್ರವಾದಿ) ಎಂದು ಹೇಳುವಾಗ ಏನಾದರೂ ಸಾಕ್ಷಿ ನೀಡಿರಬಹುದಲ್ಲವೇ?. ಹೌದು ಖುರ್’ಆನ್ ಎಂಬ ಪವಿತ್ರವಾದ ಗ್ರಂಥವನ್ನು ಪ್ರಸ್ತುತಪಡಿಸಿದ್ದರು. ಅದು ಜಗದೊಡೆಯನ ವಾಕ್ಯಗಳಾಗಿವೆ ಎಂದೂ ಕೂಡ ಹೇಳಿದ್ದರು. ಅವರೇ ಸ್ವಂತವಾಗಿ ಒಂದು ಗ್ರಂಥವನ್ನು ಬರೆದು ಅದು ಅಲ್ಲಾಹನಿಂದ ಬಂದ ಗ್ರಂಥವಾಗಿದೆ ಎಂದು ಹೇಳಬಹುದಲ್ಲವೇ.? ಎಂದು ಯಾರಾದರೂ ಕೇಳಿದರೆ ಆ ಮಾತಿಗೆ ಅರ್ಥವೇ ಇಲ್ಲ. ಕಾರಣ ಒಂದೇ ಒಂದು ಅಕ್ಷರವನ್ನೂ ಕಲಿಯದ ಒಬ್ಬ ವ್ಯಕ್ತಿ ಅದು ಹೇಗೆ ತಾನೇ ಬರೆಯಲು ಸಾಧ್ಯ.? ಇನ್ನೂ ವಿದ್ಯೆ ಕಲಿತಿದ್ದರೂ ಕೊನೆಯ ಪಕ್ಷ ಕಲಿಸಿದ ಗುರುವಾದರೂ ಬೇಕಲ್ಲವೆ? ಹಾಗಾದರೆ ಎಲ್ಲಿಂದಲೋ ನಕಲು ಮಾಡಿರಬಹುದಲ್ಲವೇ.? ಎಂದು ಹೇಳಿದರೆ, ಅದಕ್ಕೂ ಯಾವುದೇ ಸಾಧ್ಯತೆ ಇಲ್ಲ. ಕಾರಣ, ಪ್ರಪಂಚದ ಯಾವುದೇ ಭಾಗದಲ್ಲೂ ಕೂಡ ಖುರ್’ಆನಿನ ಶೈಲಿಯನ್ನಾಗಲಿ, ರೀತಿಯನ್ನಾಗಲಿ, ಅಥವಾ ಅದರ ಭಾಷೆಯನ್ನಾಗಲಿ ಹೋಲಿಕೆಯಾಗುವ ಯಾವುದೇ ವೇದ ಗ್ರಂಥವನ್ನೂ ಕಾಣಲು ಸಾಧ್ಯವಿಲ್ಲ. ಇನ್ನೂ ವರ್ತಮಾನ ಕಾಲದ ಬಗ್ಗೆ ಹೇಳುವುದಾದರೆ, ಒಂದೂವರೆ ಸಹಸ್ರಮಾನ ಕಳೆದರೂ, ಕೋಟ್ಯಾಂತರ ಜನರು ತಮ್ಮ ದೈನಂದಿನ ಜೀವನದಲ್ಲಿ ಎಲ್ಲಾ ದಿನವೂ ಕೂಡ ಪಠಿಸುತ್ತಿರುವ, ಚರ್ಚಿಸುತ್ತಿರುವ ಒಂದು ಗ್ರಂಥವಾಗಿದೆ ಖುರ್’ಆನ್. ಇಂಥಹ ಒಂದು ಗ್ರಂಥವನ್ನು ವಿಷೇವಾದ ಗ್ರಂಥ ಅನ್ನದೆ ಇನ್ನೇನು ಹೇಳಬೇಕು.? ಈ ರೀತಿಯ ಏನೇ ಪ್ರಶ್ನೆಗಳನ್ನು ಕೇಳಿದರೂ ಉತ್ತರ ಮಾತ್ರ ಅವರನ್ನು ಈ ಗ್ರಂಥದ ದೈವಿಕ ಚಿಂತನೆಯತ್ತ ಕೊಂಡೊಯ್ಯುತ್ತದೆ. ಅಷ್ಟೇ ಅಲ್ಲ ಇವತ್ತಿನ ವರೆಗೂ ಈ ಗ್ರಂಥಕೆ ಸಮಾನವಾದ ಒಂದೇ ಒಂದು ಗ್ರಂಥವನ್ನು ಕೂಡ ಪ್ರಸ್ತುತಪಡಿಸಲು ವಿಮರ್ಶಕರಿಗೆ ಸಾಧ್ಯವಾಗಿಲ್ಲ ಎನ್ನುವುದು ಮಾತ್ರ ಅಕ್ಷರಶಃ ಸತ್ಯ.

ಬೇರೆ ಯಾವುದಾದರೂ ಪುರಾವೆ ಇರಬಹುದೇ.? ಸರಿ ಹಾಗೆಯೂ ಕೂಡ ಒಮ್ಮೆ ನೋಡೋಣ. ಪ್ರವಾದಿಯವರ ﷺ ಭವಿಷ್ಯವಾಣಿಯು ಕೂಡ ಒಂದು ದಾಖಲಾಗಿದೆ. ಭೌತಿಕವಾದ ಯಾವುದೇ ತೀರ್ಮಾನಗಳಿಂದ ವಿವರಿಸಲಾಗದ ಅನೇಕ ವಿಷಯಗಳ ಕುರಿತು ಭವಿಷ್ಯವಾಣಿ ಹೇಳಿದ್ದರು. ಅದೆಲ್ಲವೂ ಸೂರ್ಯ ಪ್ರಕಾಶದಂತೆ ವಾಸ್ತವಾಗಿತ್ತು ಕೂಡ. ಅವುಗಳ ಪಟ್ಟಿಯನ್ನೇ ಸಿದ್ಧಪಡಿಸಬಹುದು.
ಇನ್ನೂ ಯಾರಾದರೂ ಬಂದು, ಸಾವಿರದ ನಾನೂರು ವರ್ಷಗಳ ಹಿಂದೆ ಮುಹಮ್ಮದ್ ﷺ ಎನ್ನುವ ವ್ಯಕ್ತಿ ನಿಜವಾಗಿಯೂ ಬದುಕಿದ್ದರೆ? ಅಥವಾ ಅದೊಂದು ಕೇವಲ ಕಾಲ್ಪನಿಕ ಕಥೆ ಮಾತ್ರವಾಗಿತ್ತೆ.? ಎಂದೂ ಕೇಳಬಹುದು. ಅದಕ್ಕು ಉತ್ತರ ಬಹಳ ಸರಳವಾಗಿದೆ. ಇತಿಹಾಸದಲ್ಲಿ ಒಬ್ಬರು ವ್ಯಕ್ತಿ ಬದುಕಿದ್ದರು ಎಂಬುದಕ್ಕೆ ತೋರಿಸಲಾಗುವ ಪ್ರಬಲ ಪುರಾವೆ ಪ್ರವಾದಿ ಮುಹಮ್ಮದರಿಗೆ ﷺ ಮಾತ್ರವೇ ಇರುವುದು. ಮುಹಮ್ಮದ್ ﷺ ಪ್ರವಾದಿಯವರಿಂದ ಬರುವ ಎಲ್ಲಾ ವೈಜ್ಞಾನಿಕ ಪರಂಪರೆಯನ್ನೂ, ಸಂತಾನ ಪರಂಪರೆಯನ್ನೂ ನಡುವೆ ಒಬ್ಬರೂ ಕೂಡ ತಪ್ಪದ ರೀತಿಯಲ್ಲಿ ಎಲ್ಲವನ್ನು ದಾಖಲಿಸಿಲಾಗಿದೆ. ಅದನ್ನು ದಾಖಲಿಸಿದವರ ಇತಿಹಾಸವನ್ನೂ ಕೂಡ ದಾಖಲಿಸಲಾಗಿದೆ. ಇತಿಹಾಸದ ವಿಜ್ಞಾನವು ತಿಳಿಸುವ ಮಾನದಂಡಗಳ ಮೂಲಕ ಇವೆಲ್ಲವನ್ನೂ ಪರಿಶೀಲಿಸಲು ಸಾಧ್ಯವಿದೆ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-54/365

ನಾವು ಮಕ್ಕಾದ ಇತಿಹಾಸಕ್ಕೆ ಮರಳಿ ಬರೋಣ. ಪ್ರವಾದಿಯವರ ﷺ ಪ್ರಭೋಧನೆಯ ಆರಂಭದ ದಿನಗಳಾಗಿತ್ತು ಅದು. ತಮ್ಮ ಕುಟುಂಬಸ್ಥರನ್ನು ಇಸ್ಲಾಮಿಗೆ ಆಹ್ವಾನಿಸಿದರು. ಕುಟುಂಬಸ್ಥರೊಂದಿಗೆ ನಡೆಸಿದ ಮಾತುಕತೆಯು ಈ ರೀತಿಯಾಗಿತ್ತು. “ಪ್ರಪಂಚದಲ್ಲಿ ಯಾವುದೇ ನಾಯಕನೂ ಕೂಡ ತನ್ನ ಕುಟುಂಬಸ್ಥರಲ್ಲಿ ಯಾವತ್ತೂ ಸುಳ್ಳು ಹೇಳುವುದಿಲ್ಲ. ನಾನು ಜಗತ್ತಿನ ಯಾರೊಂದಿಗೆ ಸುಳ್ಳು ಹೇಳಿದರೂ ನಿಮ್ಮೊಂದಿಗೆ ಸುಳ್ಳು ಹೇಳಲು ಸಾಧ್ಯವೇ ಇಲ್ಲ.? ನಾನು ಈ ಲೋಕದಲ್ಲಿ ಯಾರನ್ನು ವಂಚಿಸಿದರೂ ನಿಮ್ಮನ್ನು ವಂಚಿಸಲು ಸಾಧ್ಯವೇ ಇಲ್ಲ.? ಸೃಷ್ಟಿಕರ್ತನಾದ ಅಲ್ಲಾಹನಾಣೆಗೂ ನಾನು ನಿಮಗಾಗಿ, ಪ್ರತ್ಯೇಕವಾಗಿ ಈ ಸಂಪೂರ್ಣ ಸಮೂಹಕ್ಕಾಗಿ ನಿಯೋಗಿಸಿದ ಅಲ್ಲಾಹನ ಸಂದೇಶ ವಾಹಕನಾಗಿರುವೆನು. ಅಲ್ಲಾಹನಾಣೆಗೂ ನೀವು ನಿದ್ರಿಸುವ ಹಾಗೆ ಮರಣ ಹೊಂದುವಿರಿ, ಎಚ್ಚರ ಆಗುವ ಹಾಗೆ ಪುನಃ ಜನಿಸುವಿರಿ. ನೀವು ಮಾಡಿದ ಸತ್ಕರ್ಮಗಳಿಗೆ ಪ್ರತಿಫಲವಾಗಿ ಒಳಿತು ಸಿಗುವುದು. ಪಾಪಗಳಿಗೆ ಪ್ರತಿಫಲವಾಗಿ ಶಿಕ್ಷೆ ಲಭಿಸುವುದು. ಒಂದೋ ಶಾಶ್ವತವಾದ ಸ್ವರ್ಗ ಅಥವಾ ಶಾಶ್ವತವಾದ ನರಕ..” ಎಂದು ಪ್ರವಾದಿಯವರು ﷺ ಹೇಳಿದರು.

ನಾಲ್ಕು ದಿಕ್ಕುಗಳಿಂದಲೂ ವಿಮರ್ಶೆಗಳು ಅಧಿಕವಾಯಿತು. ಅದರ ನಡುವೆ ಭಾಗ್ಯವಂತರಾದ ಕೆಲವು ಜನರು ಪ್ರವಾದಿಯವರ ﷺ ಬಳಿ ಬಂದು ಸನ್ಮಾರ್ಗದ ದಾರಿಯಲ್ಲಿ ಸೇರಿಕೊಂಡರು. ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದ ವಿಶ್ವಾಸಿಗಳಿಗೆ ಖುರ್’ಆನ್ ಪ್ರತ್ಯೇಕವಾದ ಅಭಿನಂದನೆ ತಿಳಿಸಿದ್ದವು. ಪವಿತ್ರ ಖುರ್’ಆನಿನ ತೌಬಾದ ಅಧ್ಯಾಯದಲ್ಲಿ, ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದ ಮುಹಾಜಿರ್ ಹಾಗೂ ಅನ್ಸಾರ್’ಗಳ ಕುರಿತು ಹೇಳುವುದು ಕಾಣಬಹುದು. “ಅವರು ಒಳಿತನ್ನು ಸ್ವೀಕರಿಸಿದವರಾಗಿದ್ದಾರೆ. ಅವರನ್ನು ಅಲ್ಲಾಹನೂ, ಅಲ್ಲಾಹನನ್ನೂ ಅವರೂ ಕೂಡ ಪರಸ್ಪರ ಇಷ್ಟಪಟ್ಟವರಾಗಿರುತ್ತಾರೆ. ಅಲ್ಲಾಹನು ಅವರಿಗಾಗಿ ಕಣಿವೆಯಲ್ಲಿ ತೊರೆಗಳು ಹರಿಯುವ, ತೋಟಗಳನ್ನು ನಿರ್ಮಿಸಿದ್ದಾನೆ. ಅವರು ಅದರಲ್ಲಿ ಶಾಶ್ವತವಾಗಿ ಇರುವರು, ಅದಾಗಿದೆ ಮಹತ್ವವಾದ ಗೆಲುವು” ಎಂದು.

ಆರಂಭಿಕ ಹಂತದಲ್ಲಿ ಇಸ್ಲಾಮ್ ಸ್ವೀಕರಿಸಿದವರ ಪಟ್ಟಿಯನ್ನು ಕ್ರಮನುಸಾರವಾಗಿ ತಯಾರು ಮಾಡುವುದು ಕಷ್ಟಕರವಾಗಿದೆ. ಅದೆಷ್ಟೋ ಸಹಾಬಿಗಳು (ಪ್ರವಾದಿಯವರನ್ನು ﷺ ನೇರವಾಗಿ ಕಂಡ ಅನುಯಾಯಿಗಳು) ಸ್ವತಃ ತಮ್ಮನ್ನು ಪರಿಚಯಿಸುವಾಗ, ನಾನು ಆರಂಭದಲ್ಲಿ ವಿಶ್ವಾಸವಿರಿಸಿದ ಇಷ್ಟನೇ ವ್ಯಕ್ತಿಯಾಗಿದ್ದೇನೆ ಎಂದು ಪರಿಚಯಿಸುದವರೂ ಇದ್ದಾರೆ. ಆದರೆ ಅವರು ಹೇಳಿದ ಆ ಕ್ರಮ ವಾಸ್ತವ ಆಗಬೇಕೆಂದಿಲ್ಲ. ಕಾರಣ ಅವರಿಗೆ ತಿಳಿದ ಜ್ಞಾನದ ಆಧಾರದ ಮೇಲೆ ಹೇಳಿರಲೂಬಹುದು. ಉದಾಹರಣೆಗೆ ಸಅದ್ ಬಿನ್ ಅಬೀ ವಖಾಸ್’ರವರನ್ನು (ರ) ತೆಗೆಯೋಣ. ಮಹಾನರು ನಾನು ಇಸ್ಲಾಮಿನ ಮೂರು ಸದಸ್ಯನಲ್ಲಿ ಒಬ್ಬನಾಗಿದ್ದೆ ಎಂದು ಹೇಳಿದ್ದರು. ಇಮಾಮ್ ಬುಖಾರಿಯವರಾಗಿದೆ ಈ ಹದೀಸನ್ನು ಉಲ್ಲೇಖಿಸಿದ್ದು. ಆದರೆ ಐತಿಹಾಸಿಕವಾಗಿ ಹೇಳುವುದಾದರೆ ಮೊದಲ ನಾಲ್ಕು ಜನರಲ್ಲಿ ಸಅದ್ (ರ) ಸೇರುವುದಿಲ್ಲ ಎಂಬುವುದು ಮಾತ್ರ ಖಚಿತ. ಹಾಗಾದರೆ ಪುರುಷರಲ್ಲಿ ಮೂರನೇ ವ್ಯಕ್ತಿ ಎನ್ನುವ ವೀಕ್ಷಣೆಯಲ್ಲಾಗಿರಬಹುದು ಅವರು ಹೇಳಿದ್ದು. ಅಥವಾ ಸ್ತ್ರೀಯರನ್ನು, ಮಕ್ಕಳನ್ನು, ಸೇವಕರನ್ನು ಸೇರಿಸದೆ ಹೇಳಿದ್ದು ಆಗಿರಬಹುದು. ಅದೂ ಅಲ್ಲದಿದ್ದರೆ ಅವರಿಗೆ ಸಿಕ್ಕಿದ ಮಾಹಿತಿಗೆ ಅನುಗುಣವಾಗಿಯೂ ಆಗಿರಬಹುದು.
ಆರಂಭದಲ್ಲಿ ಮೊದಲು ಇಸ್ಲಾಮ್ ಸ್ವೀಕರಿಸಿದ ನಾಲ್ಕು ಜನ ಅನುಯಾಯಿಗಳು, ಬೀವಿ ಖದೀಜ, ಅಬೂಬಕ್ಕರ್ ಸಿದ್ದೀಕ್, ಅಲಿ ಬಿನ್ ಅಬೀತ್ವಾಲಿಬ್, ಝೈದ್ ಬಿನ್ ಹಾರಿಸ್ (ರ) ಎಂಬುವವರಾಗಿದ್ದರು. ಇದರಲ್ಲಿ ಮಹಿಳೆಯರು, ಪುರುಷರು, ಮಕ್ಕಳು, ಸೇವಕರು ಎಂದು ವಿಂಗಡಿಸಿದರೆ ಪ್ರತಿ ವಿಭಾಗದಲ್ಲೂ ಮೊದಲ ಸ್ಥಾನದಲ್ಲಿ ನಿಲ್ಲುವುದು ಈ ನಾಲ್ಕು ಜನರಾಗಿರುತ್ತಾರೆ. ಉಮರ್’ರವರನ್ನು (ರ) ಇಸ್ಲಾಮ್ ಸ್ವೀಕರಿಸಿದವರ ಸಾಲಿನಲ್ಲಿ ನಲ್ವತ್ತನೇ ವ್ಯಕ್ತಿಯಾಗಿ ಆಗಿದೆ ಎಣಿಸಲ್ಪಡುವುದು.

ಆರಂಭಿಕ ಹಂತದಲ್ಲಿ ಇಸ್ಲಾಂ ಸ್ವೀಕರಿಸಿದ ಎಪ್ಪತ್ತಮೂರು ಜನರ ಸಂಖ್ಯೆಗಳು ಈ ರೀತಿಯಾಗಿದೆ. 1 ಅಬೂಬಕರ್ 2 ಖದೀಜಾ 3 ಅಲಿ 4 ಸೈದ್ ಬಿನ್ ಹಾರಿಸ 5 ಬಿಲಾಲ್ 6 ಆಮೀರ್ ಬಿನ್ ಫುಹೈರಾ 7 ಅಬೂ ಫುಕೈಹಾ 8 ಶಕ್’ರಾನ್ 9 ಅಮ್ಮಾರ್ ಬಿನ್ ಯಾಸಿರ್ 10 ಸುಮಯ್ಯ 11 ಯಾಸಿರ್ 12 ಉಮ್ಮು ಐಮನ್ 13 ಖಾಲಿದ್ ಬಿನ್ ಸಯೀದ್ ಬಿನ್ ಅಲ್ ಆಸ್ 14 ಉಸ್ಮಾನ್ ಬಿನ್ ಅಫ್ಫಾನ್ 15 ಆಮಿನ ಬಿಂತ್ ಖಲಫ್ 16 ಸಅದ್ ಬಿನ್ ಅಬೀ ವಖಾಸ್ 17 ತ್ವಲ್’ಹತ್ ಬಿನ್ ಉಬೈದಿಲ್ಲಾಹ್ 18 ಝುಬೈರ್ ಬಿನ್ ಅಲ್ ಅವಾಮ್ 19 ಅಬ್ದುರ್ರಹ್ಮಾನ್ ಬಿನ್ ಔಫ್ 20 ಅಯ್ಯಾಶ್ ಬಿನ್ ರಬಿಅಃ 21 ಮಿಸ್ಅಬ್ ಬಿನ್ ಉಮೈರ್ 22 ಸುಹೈಲ್ ಬಿನ್ ಸಿನಾನ್ 23 ಉಸ್ಮಾನ್ ಬಿನ್ ಮಳ್’ಗೂನ್ 24 ಮಿಖ್’ದಾದ್ 25 ಅಲ್’ಖಂ ಬಿನ್ ಅಲ್ ಅಲ್’ಖಂ 26 ಉಮ್ಮುಲ್ ಫಳ್’ಲ್ 27 ಅಬೂ ರಾಫಿಅ್ 28 ಅಬೂಸಲಮಃ 29 ಉಮ್ಮುಸಲಮ (ಹಿಂದ್) 30 ಅಬೂ ಉಬೈದಃ 31 ಖಬ್ಬಾ ಬಿನ್ ಅಲ್ ಅರತ್ 32 ಖುದಾಮಃ ಬಿನ್ ಮಳ್’ಗೂನ್ 33 ಸಯೀದ್ ಬಿನ್ ಝೈದ್ 34 ಫಾತ್ವಿಮ ಬಿಂತ್ ಖತ್ತಾಬ್ 35 ಉತ್ಬತ್ ಬಿನ್ ಘಝ್’ವಾನ್ 36 ಅಬ್ದುಲ್ಲಾಹ್ ಬಿನ್ ಮಸ್’ವೂದ್ 37 ಉಮೈರ್ ಬಿನ್ ಅಬಿವಖಾಸ್ 38 ಉಬೈದತ್ ಬಿನ್ ಹಾರಿಸ್ 39 ಖುದಾಮತ್ ಬಿನ್ ಮಳ್’ಗೂನ್ 40 ಅಬ್ದುಲ್ಲಾಹ್ ಬಿನ್ ಮಳ್’ಗೂನ್ 41 ಅಬ್ದುಲ್ಲಾಹ್ ಬಿನ್ ಖೈಸ್ 42 ಖುನೈಸ್ ಬಿನ್ ಹುದಾಫ 43 ಅಸ್ಮಾ ಬಿಂತ್ ಸಿದ್ದೀಕ್ 44 ಸಲೀತ್ವ್ ಬಿನ್ ಅಮ್ರ್ 45 ಇಬ್ನ್ ಖುಸೈಮತುಲ್ ಖಾರ್ರ 46 ಉತ್ಬತ್ ಬಿನ್ ಮಸ್’ವೂದ್ 47 ಅಮ್ರ್ ಬಿನ್ ಅಬಸ 48 ಅಮೀರ್ ಬಿನ್ ರಬಿಅ ಅಲ್ ಅನಸಿ 49 ಅಬೂದರ್ ಅಲ್ ಗಿಫಾರಿ 50 ಮಾಸಿಲ್ ಬಿನ್ ಮಾಲಿಕ್ 51 ಹಾತ್ವಿಬ್ ಬಿನ್ ಅಲ್ ಹಾರಿಸ್ 52 ಜಅ್’ಫರ್ ಬಿನ್ ಅಬೀತ್ವಾಲಿಬ್ 53 ಅಸ್ಮಾ ಬಿಂತ್ ಉಮೈಸ್ 54 ಅಬ್ದುಲ್ಲಾಹ್ ಬಿನ್ ಜಹ್’ಶ್ 55 ಅನೀಸ್ ಬಿನ್ ಜುನಾದ ಅಲ್ ಗಿಫಾರಿ 56 ಅಲ್ ಮತ್ವಲಿಬ್ ಬಿನ್ ಅಝ್’ಹರ್ 57 ಸಾಇಬ್ ಬಿನ್ ಉಸ್ಮಾನ್ 58 ಖತ್ವಾಬ್ ಬಿನ್ ಅಲ್ ಹಾರಿಸ್ 59 ಮಅ್’ಮರ್ ಬಿನ್ ಅಲ್’ಹಾರಿಸ್ 60 ಫಾತ್ವಿಮ ಬಿಂತ್ ಮುಜಲ್ಲಲ್ 61 ಅಬೂ ಹುದೈಫತ್ ಬಿನ್ ಅಲ್ ಮುಗೀರ 62 ಹಾತ್ವಿಬ್ ಬಿನ್ ಉಮರ್ 63 ಇಬ್’ನು ಮುಲೈಹ್ 64 ನುಐಮ್ ಬಿನ್ ಅಬ್’ದಿಲ್ಲಾಹ್ 65 ರಂಲ ಬಿಂತ್ ಅಬೀ ಔಫ್ 66 ಖಾಲಿದ್ ಬಿನ್ ಬುಕೈರ್ 67 ಆಮಿರ್ ಬಿನ್ ಬುಕೈರ್ 68 ಮಸ್’ವೂದ್ ಬಿನ್ ಅಲ್ ಖಾರಿ 69 ಇಯಾಸ್ ಬಿನ್ ಅಬ್ದುಯಾಲಿಲ್ 70 ವಾಖಿದ್ ಬಿನ್ ಅಬ್’ದಿಲ್ಲಾಹ್ 71 ಆಖಿಲ್ ಬಿನ್ ಬುಕೈರ್ 72 ಅಸ್’ಮಾಅ್ ಬಿಂತ್ ಸಲಾಮಃ 73 ಫಕ್’ಹ ಬಿಂತು ಯಸಾರ್ ರಲಿಯಲ್ಲಾಹು ಅನ್’ಹುಂ….

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-55/365

ಆರಂಭಿಕ ಹಂತದಲ್ಲಿ ಇಸ್ಲಾಮ್ ಸ್ವೀಕರಿಸಿದ ಎಪ್ಪತ್ಮೂರು ಜನರ ಹೆಸರನ್ನು ತಿಳಿದುಕೊಂಡೆವು. ನಮಗೆ ಲಭಿಸಿದ ಉಲ್ಲೇಖಗಳ ಆಧಾರದ ಮೇಲೆ ಒಂದು ಪಟ್ಟಿಯನ್ನು ತಯಾರಿಸಿದೆವು ಎಂದು ಮಾತ್ರ. ಆದರೆ ಇದು ಇಸ್ಲಾಮ್ ಸ್ವೀಕರಿಸಿದ ಸರಿಯಾದ ಕ್ರಮದಲ್ಲಿ ತಯಾರಿಸಿದ ಪಟ್ಟಿಯಲ್ಲ, ಆ ಕಾರಣದಿಂದಲೇ ಕೆಲವು ಪ್ರಸಿದ್ಧ ವ್ಯಕ್ತಿಗಳ ಹೆಸರು ಈ ಪಟ್ಟಿಯಲ್ಲಿ ಕಾಣಲು ಸಾಧ್ಯವಾಗಿಲ್ಲ. ಉಮರ್, ಹಂಝ (ರ) ಹಾಗೂ ಪ್ರವಾದಿಯವರ ﷺ ಮಕ್ಕಳು ಹೀಗೆ ಬಹಳಷ್ಟು ಜನರು ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸಿದವರಾಗಿದ್ದರು.
ಪ್ರಸಿದ್ಧರಾದ ಕೆಲವರು ಇಸ್ಲಾಮ್ ಸ್ವೀಕರಿಸಿದ ಆ ಸುಂದರ ಕ್ಷಣಗಳು ಬಹಳ ರೋಮಾಂಚನಕಾರಿಯಾಗಿದೆ. ಅವುಗಳ ಕುರಿತು ಸ್ವಲ್ಪ ತಿಳಿಯೋಣ.

ಪ್ರವಾದಿಯವರನ್ನು ﷺ ಮೊಟ್ಟ ಮೊದಲು ಅಂಗೀಕರಿಸಿದ್ದು ಖದೀಜ (ರ) ಬೀವಿಯಾಗಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕೂ ಮುಂಚೆ ಯಾವುದೇ ಪುರುಷನಾಗಲಿ, ಸ್ತ್ರೀಯಾಗಲಿ ಮುಹಮ್ಮದ್ ﷺ ಪ್ರವಾದಿಯವರ ಅನುಯಾಯಿ ಆಗಿರಲಿಲ್ಲ. ಈ ವಿಷಯದಲ್ಲಿ ಯಾರಿಗೂ ಯಾವುದೇ ಅಭಿಪ್ರಾಯ ವ್ಯತ್ಯಾಸವಿಲ್ಲವೆಂದು ಇಮಾಮ್ ಇಬ್’ನುಲ್ ಅಸೀರ್’ರವರು (ರ) ಉಲ್ಲೇಖಿಸಿದ್ದು ಕಾಣಬಹುದು. ಈ ಅಂಗೀಕಾರವು ಪತ್ನಿಯಾದ ಕಾರಣ ತಮ್ಮ ಪತಿಯನ್ನು ಕುರುಡಾಗಿ ಒಪ್ಪಿಕೊಂಡರು ಎನ್ನುವ ಅರ್ಥದಲ್ಲಿ ಆಗಿರಲಿಲ್ಲ, ಬದಲಾಗಿ ಪ್ರವಾದಿಯವರ ﷺ ಜೀವನವನ್ನು ಸಂಪೂರ್ಣವಾಗಿ ತಿಳಿದ ನಂತರವೇ ಆಗಿತ್ತು ಅವರೂ ಕೂಡ ವಿಶ್ವಾಸವಿರಿಸಿದ್ದು. ಪ್ರವಾದಿಯವರನ್ನು ﷺ ಸಮಾಧಾನ ಪಡಿಸುತ್ತಿದ್ದದ್ದು ಸಾಮಾನ್ಯವಾಗಿ ಒಬ್ಬರು ಸಂಗಾತಿಯನ್ನು ಸಮಾಧಾನ ಪಡಿಸುವ ರೀತಿಯಲ್ಲಿ ಆಗಿರಲಿಲ್ಲ. ಬದಲಾಗಿ ಪ್ರವಾದಿಯವರ ﷺ ಜೀವನದಲಿದ್ದ ಮಹತ್ವಗಳನ್ನು ಹೇಳುವ ಮೂಲಕವಾಗಿತ್ತು. ಸ್ವಂತ ಪತಿಯಾದರೂ ಹೇಳುತ್ತಿದ್ದ ಮಾತುಗಳನ್ನು ಖಚಿತ ಪಡಿಸಲು ಅಗತ್ಯವಾದ ವಿಚಾರಣೆಗಳನ್ನು ನಡೆಸುತ್ತಿದ್ದರು. ಅದರ ಭಾಗವಾಗಿತ್ತು ವೇದ ಪಂಡಿತ ವರಕತ್’ರನ್ನು ಹಾಗೂ ವೇದದ ಬಗ್ಗೆ ಅರಿವಿದ್ದ ಅದ್ದಾಸನ್ನು ಭೇಟಿಯಾದದ್ದು ಕೂಡ.

ಪ್ರೀತಿಯ ಪತಿಯವರನ್ನು ಭೇಟಿಯಾಗಿ, ಮಾಹಿತಿಯನ್ನು ನೀಡುವುದು ನಿಜವಾಗಿಯೂ ಜಿಬ್’ರೀಲರೇ ಆಗಿದ್ದಾರೆಯೇ.? ಎಂದು ತಿಳಿಯಲು ಸ್ವತಃ ಅವರೇ ಒಂದು ಅವಲೋಕನೆ ನಡೆಸಿದರು. ಪ್ರವಾದಿತ್ವದ ಆರಂಭಿಕ ಸಮಯದ ಸಂಭಾಷಣೆ ನಡೆಯುತ್ತಿದ್ದ ಸಂದರ್ಭದಲ್ಲಿ ತಮ್ಮ ಪ್ರೀತಿಯ ಪತಿಯೊಂದಿಗೆ ಖದೀಜ (ರ) ಬಂದು ಮುಂದಿನ ಬಾರಿ ತಮಗೆ ದಿವ್ಯ ಸಂದೇಶ ನೀಡುವ ನಿಮ್ಮ ಆ ಸನ್ಮಿತ್ರನ ಆಗಮನವಾದರೆ ನನ್ನ ಬಳಿ ಒಮ್ಮೆ ತಿಳಿಸಲು ಸಾಧ್ಯವೇ.? ಎಂದು ಕೇಳಿದಾಗ ಪ್ರವಾದಿಯವರು ﷺ ಅದಕ್ಕೆ ಸಮ್ಮತಿಸಿದರು. ಸ್ವಲ್ಪ ಸಮಯದ ನಂತರ ಜಿಬ್’ರೀಲ್’ರ (ಅ) ಆಗಮನವಾದಾಗ ತಕ್ಷಣವೇ ಖದೀಜರನ್ನು (ರ) ಕರೆದರು. ಖದೀಜ (ರ) ಪ್ರವಾದಿಯವರಲ್ಲಿ ﷺ ನೀವು ಎದ್ದು ಒಮ್ಮೆ ನನ್ನ ಬಲ ಕಾಲಿನ ಮೇಲಿನ ಮೇಲೆ ಕುಳಿತು ಕೊಳ್ಳುತ್ತೀರ.? ಎಂದು ಕೇಳಿದಾಗ ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗ ಅವರು ಇಲ್ಲೇ ಇದ್ದಾರಾ.? ಎಂದು ಖದೀಜ (ರ) ಕೇಳಿದಾಗ. ಹೌದು ಇದ್ದಾರೆ ಎಂದು ಪ್ರವಾದಿಯವರು ﷺ ಉತ್ತರಿಸಿದರು. ಈಗ ಎಡ ಕಾಲಿನ ಮೇಲೆ ಕುಳಿತು ಕೊಳ್ಳುವಿರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗ ಅವರು ಇಲ್ಲೇ ಇದ್ದಾರಾ.? ಎಂದು ಕೇಳಿದಾಗ, ಹೌದು ಇದ್ದಾರೆ ಎಂದು ಉತ್ತರಿಸಿದರು. ಸರಿ ಆಗಿದ್ದರೆ ಈಗ ನನ್ನ ಮಡಿಲಿನಲ್ಲಿ ಕುಳಿತು ಕೊಳ್ಳುತ್ತೀರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಅದೇ ರೀತಿ ಮಾಡಿದರು. ಈಗಲೂ ಅಲ್ಲೇ ಇದ್ದಾರಾ.? ಎನ್ನುವ ಪ್ರಶ್ನೆಗೆ ಅದೇ ಉತ್ತರವಾಗಿತ್ತು. ಆಗ ಖದೀಜರು (ರ) ಮೆಲ್ಲ ತಮ್ಮ ತಲೆಯ ಮೇಲೆ ಧರಿಸಿದ್ದ ಶಾಲನ್ನು ಸ್ವಲ್ಪ ಕೆಳಗೆ ಸರಿಸಿ ಈಗ ಅವರು ಅಲ್ಲೇ ಇದ್ದಾರಾ.? ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಇಲ್ಲ ಅವರು ಮಾಯವಾದರು ಎಂದು ಹೇಳಿದರು.
ಅದಕ್ಕೆ ಖದೀಜ (ರ) ನೀವು ಯಾವುದೇ ಭಯವಿಲ್ಲದೆ, ಸಂತೋಷದಿಂದ ಮುಂದೆ ಸಾಗಿರಿ. ನಿಮ್ಮನ್ನು ಭೇಟಿಯಾಗುವುದು ನಿಜವಾಗಿಯೂ ಅಲ್ಲಾಹನ ಮಲಕ್ಕೇ (ದೇವ ದೂತ) ಆಗಿದ್ದಾರೆ ಎಂದು, ನನಗೆ ಸಂಪೂರ್ಣವಾಗಿ ಅರ್ಥವಾಯಿತು ಎಂದು ಹೇಳಿದರು.

ಈ ಘಟನೆಯನ್ನು ಇಮಾಮ್ ಹಲಬಿ ಈ ರೀತಿ ವಿವರಿಸುತ್ತಾರೆ. “ಪ್ರವಾದಿತ್ವದ ಘೋಷಣೆಯ ತಕ್ಷಣವೇ ನಡೆದ ಘಟನೆಯಾಗಿತ್ತು ಅದು. ಪ್ರವಾದಿಯವರಿಗೆ ﷺ ಲಭಿಸುತ್ತಿದ್ದ ಸಂದೇಶಗಳು ಯಾರಿಂದಾಗಿದೆ ಲಭಿಸುತ್ತಿರುವುದು ಎಂದು ಅರ್ಥ ಮಾಡಿಕೊಳ್ಳಲು ಬೀವಿಯವರು ಮಾಡಿದ ತಂತ್ರವಾಗಿತ್ತು”. ಬುದ್ದಿವಂತರು ಯಾವತ್ತೂ ಹಾಗೆ ಅಲ್ಲವೇ. ಸಾಕ್ಷಿ ಸಮೇತವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುದಾದರೆ ಆ ದಾರಿಯನ್ನೇ ಆಯ್ಕೆ ಮಾಡುವರು. ಅದರರ್ಥ ಪ್ರವಾದಿಯವರ ﷺ ಮಾತಿನಲ್ಲಿ ಖದೀಜರಿಗೆ (ರ) ವಿಶ್ವಾಸ ಇರಲಿಲ್ಲ ಎಂದು ಅಲ್ಲ, ಬದಲಾಗಿ ಸ್ವತಃ ಖುದ್ದಾಗಿ ಅರ್ಥ ಮಾಡಿಕೊಳ್ಳುವುದರಿಂದ ಭವಿಷ್ಯದಲ್ಲಿ ಇತರರಿಗೆ ಸಂಶಯ ಪಡಲು ಯಾವುದೇ ಕಾರಣ ಸಿಗುವುದಿಲ್ಲ ಎನ್ನುವ ಉದ್ದೇಶದಿಂದಾಗಿತ್ತು.
ತನ್ನಲ್ಲಿರುವ ಎಲ್ಲಾ ಸರ್ವಸ್ವವನ್ನೂ ಪ್ರವಾದಿಯವರಿಗೆ ﷺ ನೀಡಲು ಭಾಗ್ಯ ಲಭಿಸಿದ ಯುವತಿಯಾಗಿದ್ದರಲ್ಲವೇ ಖದೀಜ ﷺ ಬೀವಿಯವರು. ಇಸ್ಲಾಮ್ ಸ್ವೀಕರಿಸಲು, ಮೊದಲ ಬಾರಿ ನಮಾಝ್ ಮಾಡಲು ಎಲ್ಲದಕ್ಕೂ ಭಾಗ್ಯ ಲಭಿಸಿದ್ದು ಕೂಡ ಖದೀಜ (ರ) ಬೀವಿಯವರಿಗೆ ಮಾತ್ರವಾಗಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-56/365

ಎರಡನೆದಾಗಿ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದು ಅಲಿರವರು (ರ) ಆಗಿದ್ದರು. ಪುರುಷರ ಸಾಲಿನಲ್ಲಿ ಮೊದಲನೆದಾಗಿ ವಿಶ್ವಾಸವಿರಿಸಿದ ವ್ಯಕ್ತಿ ಅಲಿಯಾಗಿದ್ದರು (ರ), ಎನ್ನುವ ಇಬ್’ನು ಇಸ್’ಹಾಕರ ಅಭಿಪ್ರಾಯವು, ಮಕ್ಕಳ ಸಾಲಿನಲ್ಲಿ ಮೊದಲಿಗರು ಅಲಿಯಾಗಿದ್ದರು (ರ) ಎನ್ನುವ ಅದೇ ಅಭಿಪ್ರಾಯಕ್ಕೆ ಬಂದು ಸೇರುತ್ತದೆ. ಸಣ್ಣ ವಯಸ್ಸಿನಿಂದಲೂ ಪ್ರವಾದಿಯವರ ﷺ ಜೊತೆಯಲ್ಲೇ ಜೀವಿಸಲು ಅವರಿಗೆ ಅವಕಾಶ ಲಭಿಸಿತ್ತು. ಅದಕ್ಕಿರುವ ಕಾರಣ ಇದಾಗಿತ್ತು. ಪ್ರವಾದಿಯವರಿಗೆ ﷺ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿ ಸಾಕಿ ಸಲಹಿದ್ದ, ಚಿಕ್ಕಪ್ಪ ಅಬೂತ್ವಾಲಿಬರು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು. ಪ್ರವಾದಿಯವರಿಗೆ ﷺ ಈ ವಿಷಯವು ತಿಳಿದಾಗ, ಏನಾದರು ಪರಿಹಾರ ಹುಡುಕಿ ಚಿಕ್ಕಪ್ಪರಿಗೆ ಸಹಾಯ ಮಾಡಬೇಕೆಂದು ಅಂದುಕೊಂಡು, ಒಂದು ಉಪಾಯವನ್ನು ಹುಡುಕಿದರು. ಅಬೂತ್ವಾಲಿಬರ ಸಹೋದರ ಅಬ್ಬಾಸ್’ರವರು ತಕ್ಕ ಮಟ್ಟಿಗೆ ಶ್ರೀಮಂತರಾಗಿದ್ದರು. ಪ್ರವಾದಿಯವರು ﷺ ಅಬ್ಬಾಸ್’ರವರನ್ನು ಭೇಟಿಯಾಗಿ ಓ ಅಬುಲ್ ಫಳ್’ಲ್’ರವರೇ ನಿಮ್ಮ ಸಹೋದರನಾದ ಅಬೂತ್ವಾಲಿಬರು ಸಂಕಷ್ಟಕ್ಕೆ ಸಿಲುಕಿರುವ ವಿಷಯ ನಿಮಗೆ ತಿಳಿದಿದೆ ಅಲ್ಲವೇ.? ಸಾಮಾನ್ಯವಾಗಿ ಈಗ ಎಲ್ಲಾ ಜನರು ಬಹಳಷ್ಟು ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಬೂತ್ವಾಲಿಬರಾದರೆ ತಮ್ಮ ಮಕ್ಕಳು ಹಾಗೂ ಸುತ್ತಮುತ್ತಲಿನ ಜವಾಬ್ದಾರಿಯನ್ನು ಹೊತ್ತುಕೊಂಡಿರುತ್ತಾರೆ. ನಾನು ಇದಕ್ಕೊಂದು ಪರಿಹಾರ ಸೂಚಿಸುತ್ತೇನೆ. ನಾವು ಅವರ ಬಳಿ ತೆರಳಿ, ಅವರ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡರೆ ಹೇಗೆ.? ಎಂದು ಕೇಳಿದರು. ಅದಕ್ಕೇನಂತೆ ಒಳ್ಳೆಯ ಕಾರ್ಯವಲ್ಲವೇ.? ಅದರಲ್ಲಿ ಬಹಳ ಸಂತೋಷವಿದೆ ಎಂದು ಅಬ್ಬಾಸ್’ರವರು ಉತ್ತರಿಸಿ, ಇಬ್ಬರೂ ಕೂಡ ಅಬೂತ್ವಾಲಿಬರನ್ನು ಭೇಟಿಯಾಗಲು ಹೊರಟರು.

ಅಬೂತ್ವಾಲಿಬರನ್ನು ಭೇಟಿಯಾಗಿ ಯೋಗಕ್ಷೇಮವನ್ನು ವಿಚಾರಿಸಿದರು. ನೀವು ಬಹಳಷ್ಟು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿರುವುದು ನಮಗೆ ತಿಳಿದಿರುವ ವಿಚಾರವೆ, ಹಾಗಾಗಿ ನಾವೊಂದು ಪರಿಹಾರದೊಂದಿಗೆ ಬಂದಿದ್ದೇವೆ. ನಿಮ್ಮ ಆರ್ಥಿಕ ಸಮಸ್ಯೆಯನ್ನು ನಿವಾರಿಸುವುದು ಅಲ್ಲ, ಬದಲಾಗಿ ನಿಮ್ಮ ಈ ಆರ್ಥಿಕ ಸಂಕಷ್ಟ ಸರಿಯಾಗುವ ವರೆಗೂ ನಿಮ್ಮ ಕೆಲವೊಂದು ಮಕ್ಕಳನ್ನು ನಾವು ಕರೆದುಕೊಂಡು ಹೋಗುತ್ತೇವೆ. ಇದಕ್ಕೆ ನೀವೇನು ಹೇಳುತ್ತೀರ.? ಎಂದು ಕೇಳಿದರು. ಅಬೂತ್ವಾಲಿಬರು ಅಧಿಕ ಯೋಚಿಸಿದೆ, ಕಿರಿಯ ಮಗನಾದ ಅಖೀಲನ್ನು ಬಿಟ್ಟು ಬೇರೆಯವರನ್ನು ಕರೆದುಕೊಂಡು ಹೋಗಲು ಒಪ್ಪಿಗೆ ನೀಡಿದರು. ಅದರ ಪ್ರಕಾರ ಅಬ್ಬಾಸ್’ರವರು ಜಅ್’ಫರನ್ನು, ಪ್ರವಾದಿಯವರು ﷺ ಅಲಿಯವರನ್ನು ಜೊತೆಯಲ್ಲಿ ತಮ್ಮ ಮನೆಗೆ ಕರೆದುಕೊಂಡು ಹೋದರು.
ಅಲಿಯವರ ಜವಾಬ್ದಾರಿ ತೆಗೆಯುವ ಮೂಲಕ ಅಬೂತ್ವಲಿಬರಿಗೆ ಪ್ರತ್ಯುಪಕಾರ ಮಾಡಲು ಒಂದು ಅವಕಾಶ ಲಭಿಸಿತ್ತು. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ, ಮುಹಮ್ಮದ್’ರನ್ನು ﷺ ನಾನಲ್ಲವೇ ಸಾಕಿದ್ದು ಎಂದು ಹೇಳಿಕೊಳ್ಳುವ ಅವಕಾಶವೂ ಇಲ್ಲದ ಹಾಗಾಯಿತು. ಕಾರಣ ಹಾಗೆ ಹೇಳುವಾಗ ನಿಮ್ಮ ಮಗನಾದ ಅಲಿಯನ್ನು ಸಾಕಿದ್ದು ನಾನಲ್ಲವೇ.? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಅಲ್ಲಿ ಉದ್ಭವಿಸುತ್ತದೆ.

ಸರಿ ಇನ್ನೂ ಅಲಿಯವರು (ರ) ಇಸ್ಲಾಮ್ ಸ್ವೀಕರಿಸಿದ ಘಟನೆಯ ಕುರಿತು ತಿಳಿಯೋಣ. ಪ್ರವಾದಿತ್ವದ ಘೋಷಣೆಯಾದ ಮರುದಿನ ಅಲಿಯವರು (ರ) ಪ್ರವಾದಿಯವರ ﷺ ಬಳಿ ಬಂದಾಗ, ಖದೀಜ (ರ) ಹಾಗೂ ಪ್ರವಾದಿಯವರು ﷺ ನಮಾಝ್ ಮಾಡುತಿದ್ದರು. ಬಹಳ ಕುತೂಹಲದಿಂದ ಅದನ್ನು ನೋಡುತ್ತಾ ನಿಂತರು, ನಂತರ ಇದೇನು ಮಾಡುತ್ತಿದ್ದೀರಿ ನೀವಿಬ್ಬರು.? ಎಂದು ಕೇಳಿದಾಗ. ಇದು ಅಲ್ಲಾಹನ ಧರ್ಮವಾಗಿದೆ, ಅವನು ಅವನ ಪ್ರವಾದಿಗಳನ್ನು ನಿಯೋಗಿಸುವ ಮೂಲಕ ಪ್ರಭೋಧನೆ ಮಾಡಿಸಿದ ಧರ್ಮ. ಮಗನೇ ಅಲೀ.. ಏಕನಾದ ಅಲ್ಲಾಹನ ಬಳಿ ನಿನ್ನನ್ನು ಆಹ್ವಾನಿಸುತ್ತಿದ್ದೇನೆ, ಲಾತ, ಉಝ್ಝನನ್ನು ತಿರಸ್ಕರಿಸಿ ಅಲ್ಲಾಹನನ್ನು ಆರಾಧಿಸಬೇಕು ಎಂದು ಪ್ರವಾದಿಯವರು ﷺ ಹೇಳಿದರು. ಅದಕ್ಕೆ ಇದು ಇಲ್ಲಿಯವರೆಗೆ ಕೇಳದ ವಿಷಯವಲ್ಲವೇ.? ನಾನು ತಂದೆಯ ಬಳಿ ಕೇಳಿ ನಿರ್ಧರಿಸುತ್ತೇನೆ, ಸಾಮಾನ್ಯವಾಗಿ ಹಾಗೆ ಅಲ್ಲವೇ ಮಾಡುವುದು ಎಂದು ಅಲಿಯವರು (ರ) ಹೇಳಿದಾಗ. ಮಗನೇ ಈಗ ನೀನು ಸ್ವೀಕರಿಸದಿದ್ದರೂ ಪರವಾಗಿಲ್ಲ ಆದರೆ ಸಧ್ಯಕ್ಕೆ ಈ ವಿಷಯವನ್ನು ಯಾರಿಗೂ ತಿಳಿಸಬೇಡ ಎಂದು ಪ್ರವಾದಿಯವರು ﷺ ಪುನಃ ಅಲಿಯವರಲ್ಲಿ (ರ) ಹೇಳಿದರು.

ಅಲಿಯವರು (ರ) ರಾತ್ರಿ ಅಲ್ಲಿಯೇ ಕಳೆದರು. ಬೆಳಗಾಗುವುದರೊಳಗೆ ಅಲ್ಲಾಹನು ಅಲಿಯವರ (ರ) ಹೃದಯಕ್ಕೆ ಸನ್ಮಾರ್ಗದ ಬೆಳಕು ಹಾಕಿದ್ದನು. ಮುಂಜಾನೆ ಎದ್ದ ತಕ್ಷಣವೇ ಪ್ರವಾದಿಯವರ ﷺ ಬಳಿ ಹೋಗಿ, ಇಸ್ಲಾಮಿನ ಕುರಿತು ಬಹಳ ಕುತೂಹಲದಿಂದ ಕೇಳಿದರು. ಪ್ರವಾದಿಯವರು ﷺ ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಅವನಿಗೆ ಲಾತ, ಉಝ್ಝ ಎನ್ನುವ ಇನ್ಯಾವ ಪಾಲುದಾರರು ಇಲ್ಲವೆಂದು ಘೋಷಣೆ ಮಾಡಬೇಕು ಎಂದು ಹೇಳಿದಾಗ , ಅಲಿಯವರು (ರ) ಅದೆಲ್ಲವನ್ನೂ ಅಂಗೀಕರಿಸಿ ಇಸ್ಲಾಮ್ ಸ್ವೀಕರಿಸಿದರು. ಅಬೂತ್ವಾಲಿಬರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಿಳಿಯದ ಕಾರಣ ಸದ್ಯಕ್ಕೆ ಈ ವಿಷಯವನ್ನು ತಂದೆಗೆ ತಿಳಿಸಲು ಹೋಗಲಿಲ್ಲ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-57/365

ಅಂದು ಅಲಿಯವರಿಗೆ (ರ) ಹತ್ತು ವರ್ಷ ಪ್ರಾಯವಾಗಿತ್ತು. ಅಲ್ಲ ಎಂಟು ವರ್ಷವಾಗಿತ್ತು ಎನ್ನುವ ಅಭಿಪ್ರಾಯವು ಇದೆ. ಬಾಲ್ಯದಿಂದಲೇ ಪ್ರವಾದಿಯವರ ﷺ ಜೊತೆಯಲ್ಲಿ ಇರುವ ಕಾರಣ ಒಂದು ಬಾರಿಯೂ ಕೂಡ ವಿಗ್ರಹಾರಾಧನೆ ನಡೆಸುವುದಾಗಲಿ, ಅವುಗಳ ಉತ್ಸವಗಳಲ್ಲಿ ಜೊತೆ ಸೇರುವುದಾಗಲಿ ಮಾಡಿರಲಿಲ್ಲ. ಆರಂಭಿಕ ಹಂತದಲ್ಲಿ ಬಹಳ ರಹಸ್ಯವಾಗಿ ಆಗಿತ್ತಲ್ಲವೇ ಪ್ರವಾದಿಯವರು ﷺ ಆರಾಧನೆ ನಡೆಸುತ್ತಿದ್ದದ್ದು. ಕೆಲವೊಮ್ಮೆ ಏಕಾಂತವಾಗಿ ಆರಾಧನೆ ಮಾಡಲು ಕಾಡಿಗೆ ಹೋಗುತ್ತಿದ್ದರು. ಆರಾಧನೆ ಮುಗಿದ ನಂತರವೆ ಮನೆಗೆ ಹಿಂತಿರುಗಿ ಬರುತ್ತಿದ್ದರು. ತಮ್ಮ ಚಿಕ್ಕಪ್ಪಂದಿರಿಗೆ ವಿಷಯ ತಿಳಿಯಬಾರದು ಎಂಬ ಉದ್ದೇಶವು ಕೂಡ ಆಗಿತ್ತು. ಆ ಸಂದರ್ಭಗಳಲ್ಲಿ ಅಲಿಯವರು (ರ) ಕೂಡ ಜೊತೆಯಲ್ಲಿ ಸೇರಿ ಗೌಪ್ಯತೆಯನ್ನು ಕಾಪಾಡಿಕೊಂಡಿದ್ದರು.

ಆದರೆ ಒಮ್ಮೆ ಇಬ್ಬರೂ ಸೇರಿ ಆರಾಧನೆ ನಡೆಸುತ್ತಿದ್ದು ಅಬೂತ್ವಾಲಿಬರ ಕಣ್ಣಿಗೆ ಬಿದ್ದಿತ್ತು. ತಕ್ಷಣವೇ ಓ ಮುಹಮ್ಮದ್ ﷺ ಮಗನೇ ನೀವು ಯಾವುದೋ ಧರ್ಮದ ಆಚರಣೆಯನ್ನು ಮಾಡುತ್ತಿದ್ದೀರಿ ಅಲ್ವಾ.? ಏನಿದು ಎಂದು ಕೇಳಿದರು. ಪ್ರವಾದಿಯವರು ﷺ ಇದನ್ನು ಒಳ್ಳೆಯ ಅವಕಾಶವಾಗಿ ಕಂಡು ಅಬೂತ್ವಾಲಿಬರಲ್ಲಿ ಮುಕ್ತವಾಗಿ ಮಾತಾಡಿದರು. ಇದು ಅಲ್ಲಾಹನ ಧರ್ಮವಾಗಿದೆ, ಅವನ ಮಲಕ್’ಗಳ, (ದೇವದೂತ) ಪ್ರವಾದಿಗಳ ಧರ್ಮ. ಅದರ ಜೊತೆಯಲ್ಲೇ ಪಿತಾಮಹ ಪ್ರವಾದಿ ಇಬ್ರಾಹಿಂರವರ (ಅ) ಧರ್ಮವೂ ಕೂಡ. ಈ ಧರ್ಮಕ್ಕೆ ಲೋಕದ ಜನತೆಯನ್ನು ಆಹ್ವಾನಿಸಲು ನನ್ನನ್ನು ಅಲ್ಲಾಹನು ನಿಯೋಗಿಸಿದ್ದಾನೆ. ನನಗೆ ಬಹಳಷ್ಟು ಶುಭಹಾರೈಕೆ ಬಯಸುವ ವ್ಯಕ್ತಿಯಾಗಿದ್ದೀರಿ ನೀವು, ಸನ್ಮಾರ್ಗಕ್ಕೆ ಆಹ್ವಾನಿಸಲು ಅತ್ಯಂತ ಸೂಕ್ತವಾದ ವ್ಯಕ್ತಿಯಾದ ಕಾರಣ ನಿಮ್ಮನ್ನು ಈ ಆದರ್ಶಕ್ಕೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದರು.

ಅಣ್ಣನ ಮಗನ ಮಾತನ್ನು ಬಹಳ ಶ್ರದ್ಧೆಯಿಂದ ಕೇಳುತ್ತಿದ್ದರು. ನಂತರ ಅಬೂತ್ವಾಲಿಬ್ ಈ ರೀತಿ ಹೇಳಿದರು. ಮಗನೇ ನನಗೆ ನನ್ನ ಹಳೆಯ ಧರ್ಮವನ್ನು ಬಿಡಲು ಸಾಧ್ಯವಿಲ್ಲ, ಆದರೆ ನಾನು ನಿಮಗೆ ಮಾತು ಕೊಡುತ್ತೇನೆ. ಖಂಡಿತ ನಾನು ನಿಮ್ಮ ರಕ್ಷಕನಾಗಿರುತ್ತೇನೆ. ಒಂದೇ ಒಂದು ಸಮಸ್ಯೆಯೂ ಬರದ ಹಾಗೆ ನೋಡಿಕೊಳ್ಳುತ್ತೇನೆ. ನಾನು ಬದುಕಿರುವವರೆಗೂ ಖಂಡಿತ ನಿಮಗೆ ಸಹಾಯ ಮಾಡುತ್ತೇನೆ ಎಂದು ಹೇಳಿದರು.
ಮತ್ತೊಮ್ಮೆ ಅಬೂತ್ವಾಲಿಬ್ ತಮ್ಮ ಮಗನಾದ ಅಲಿಯವರನ್ನು (ರ) ಕರೆದು, ಈಗ ನೀನು ಆಚರಿಸುತ್ತಿರುವ ಧರ್ಮ ಯಾವುದು.? ಎಂದು ಕೇಳಿದರು. ಅಪ್ಪ ನಾನು ಅಲ್ಲಾಹನನ್ನೂ, ಅವನ ಸಂದೇಶವಾಹಕರನ್ನೂ ಒಪ್ಪಿಕೊಂಡಿದ್ದೇನೆ. ಪ್ರವಾದಿಯವರು ﷺ ಏನನ್ನು ಪ್ರಸ್ತುತ ಪಡಿಸುತ್ತಾರೋ ಅದನ್ನು ಸತ್ಯವೆಂದು ನಾನು ಅಂಗೀಕರಿಸುತ್ತೇನೆ. ನಾನು ಅವರ ಜೊತೆಯಲ್ಲಿ ನಮಾಝ್ ಮಾಡುತ್ತಿದ್ದೇನೆ ಎಂದು ಹೇಳಿದರು. ಅದಕ್ಕೆ ಅಬೂತ್ವಾಲಿಬರು, ಮಗನೇ ನೀನು ಮುಹಮ್ಮದ್ ﷺ ಮಗನ ಜೊತೆಯಲ್ಲೇ ಇರು, ಏನೇ ಆದರೂ ಅವರು ನಿನ್ನನ್ನು ಒಳಿತಿಗೆ ಮಾತ್ರವೇ ಕೊಂಡು ಹೋಗುವರು ಎಂದು ಹೇಳಿದರು.

ನಂತರದ ಕಾಲದಲ್ಲಿ ಒಮ್ಮೆ ಅಲಿಯವರು (ರ) ಮಿಂಬರಿನಲ್ಲಿ (pulpit of arch) ನಿಂತು ಅಬೂತ್ವಾಲಿಬರು ಹೇಳಿದ್ದ ಮಾತನ್ನು ನೆನೆದು ಜೋರಾಗಿ ನಗುತ್ತಿದ್ದರು. ಅಲಿಯವರು (ರ) ಈ ವಿಷಯವನ್ನು ವಿವರಿಸತೊಡಗಿದರು . ನಾನು ಪ್ರವಾದಿಯವರ ﷺ ಜೊತೆಯಲ್ಲಿ ಮಕ್ಕಾದ ಉಪನಗರವಾದ “ನಖ್’ಲ” ಎನ್ನುವ ಸ್ಥಳದಲ್ಲಿ ರಹಸ್ಯವಾಗಿ ನಮಾಝ್ ಮಾಡುತ್ತಿದ್ದೆವು. ಅಚಾನಕ್ಕಾಗಿ ತಂದೆಯವರು ಬಂದು ಬಿಟ್ಟಿದ್ದರು, ಸ್ವಲ್ಪ ಹೊತ್ತು ನಾವು ಮಾಡುತಿದ್ದ ಆರಾಧನೆಗಳನ್ನು ನೋಡುತ್ತಾ ನಿಂತಿದ್ದರು. ನಂತರ ನಮ್ಮ ಬಳಿ ಬಂದು ಇದೇನು ಮಾಡುತ್ತಿದ್ದೀರಿ ನೀವು.? ಎಂದು ಕೇಳಿದರು, ಆಗ ಪ್ರವಾದಿಯವರು ﷺ ಎಲ್ಲವನ್ನು ಸಂಪೂರ್ಣವಾಗಿ ವಿವರಿಸಿ ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಎಲ್ಲವನ್ನು ಗಮನವಿಟ್ಟು ಕೇಳಿದ ನಂತರ, ನೀವು ಹೇಳಿದ್ದು ಎಲ್ಲವೂ ಸರಿ ಆದರೆ ನನ್ನ ಹಣೆಯನ್ನು ನೆಲದ ಮೇಲೆ ಇಡಲು ಯಾವತ್ತೂ ನಾನು ತಯಾರಿಲ್ಲ ಎಂದು ಹೇಳಿದರು. (ನಮಾಝಿನಲ್ಲಿ ಸುಜೂದ್ (ಸಾಷ್ಟಾಂಗ) ಹೋಗುವ ಸಂದರ್ಭದ ಕುರಿತಾಗಿತ್ತು ಅವರು ಹೇಳಿದ್ದು. ನಿಜ ಹೇಳಬೇಕೆಂದರೆ, ಸೃಷ್ಟಿಕರ್ತನ ಮುಂದೆ ಮನುಷ್ಯನ ಅತ್ಯುತ್ತಮ ಭಾಗವಾದ ಅಂಗವನ್ನು,(ಮುಖವನ್ನು) ನೆಲದ ಮೇಲಿಟ್ಟು ವಿನಮ್ರತೆಯಿಂದ ತೋರಿಸುವ ಕ್ರಿಯೆಯಾಗಿದೆ ಈ ಸುಜೂದ್.) ಈ ಹೇಳಿದ ಮಾತುಗಳನ್ನು ನೆನಪಿಸಿ ಆಗಿತ್ತು ಅಲಿಯವರು (ರ) ನಗುತ್ತಿದ್ದದ್ದು.

ಪುರುಷರ ಸಾಲಿನಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ್ದು ಅಬೂಬಕ್ಕರ್ (ರ) ಆಗಿದ್ದರು ಎನ್ನುವ ಅಭಿಪ್ರಾಯವನ್ನೂ, ಅದಲ್ಲ ಅಲಿ (ರ) ಆಗಿದ್ದರು ಎನ್ನುವ ಅಭಿಪ್ರಾಯವನ್ನು ಪರಿಗಣಿಸಿ ಈ ರೀತಿಯಾಗಿ ಅರ್ಥ ಮಾಡಿಕೊಳ್ಳಬಹುದು. ಪ್ರಥಮವಾಗಿ ಸ್ವೀಕರಿಸಿದ್ದು ಅಲಿಯವರೇ (ರ) ಆಗಿದ್ದರೂ, ಕೆಲವು ಸಮಯದವರೆಗೆ ಅವರು ಅದನ್ನು ರಹಸ್ಯವಾಗಿ ಇಟ್ಟಿದ್ದರು. ಆದರೆ ಅಬೂಬಕ್ಕರ್’ರವರು (ರ) ಇಸ್ಲಾಮ್ ಸ್ವೀಕರಿಸಿದ ಅದೇ ಕ್ಷಣದಲ್ಲೇ ಎಲ್ಲರಿಗೂ ತಿಳಿದಿತ್ತು. ಹಾಗಾಗಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿ ಅಬೂಬಕ್ಕರ್ (ರ) ಎಂದು ಎಲ್ಲರಿಗೂ ಅರಿಯಲ್ಪಟ್ತಿದ್ದರು, ಆದರೆ ವಾಸ್ತವದಲ್ಲಿ ಅಲಿಯಾಗಿದ್ದರು (ರ) ಪ್ರಥಮವಾಗಿ ಸ್ವೀಕರಿಸಿದ ವ್ಯಕ್ತಿ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-58/365

ಪ್ರವಾದಿಯವರು ﷺ ಹಾಗೂ ಅಲಿಯವರು (ರ) ಆರಂಭಿಕ ಹಂತದಲ್ಲಿ ಮಾಡಿದ್ದ ಆರಾಧನೆಯ ಕುರಿತು ತಿಳಿಯೋಣ. ಆ ಘಟನೆಯನ್ನು ಉದ್ದೇಶಿಸಿ ಯಮನಿನಿಂದ ವ್ಯಾಪಾರಕ್ಕಾಗಿ ಮಕ್ಕಾ ನಗರಕ್ಕೆ ಬಂದಿದ್ದ, ಅಫೀಫ್ ಅಲ್ ಕಿಂದಿಯವರು ಈ ರೀತಿ ವಿವರಿಸುತ್ತಾರೆ. ನಾನು ಒಮ್ಮೆ ಪವಿತ್ರವಾದ ಹಜ್ಜ್ ಸಂದರ್ಭದಲ್ಲಿ ಮಕ್ಕಾ ನಗರಕ್ಕೆ ತಲುಪಿದ್ದೆನು. ಅಬ್ಬಾಸ್’ರವರ ಜೊತೆಯಲ್ಲಿ ವ್ಯಾಪಾರ ವಹಿವಾಟು ಮಾಡುತಿದ್ದ ಕಾರಣ ಅವರ ಜೊತೆಯಲ್ಲೇ ಇರುತಿದ್ದನು. ಅವರು ಕೂಡ ವ್ಯಾಪಾರಕ್ಕಾಗಿ ಯಮನಿಗೆ ಬಂದಾಗ ನನ್ನ ಜೊತೆಯಲ್ಲೇ ಇರುತಿದ್ದರು. ಒಂದು ದಿನ ನಾವು ಮಿನ ಎನ್ನುವ ಸ್ಥಳದಲ್ಲಿ ಕುಳಿತಿದ್ದೆವು. ಅಷ್ಟೊತ್ತಿಗೆ ಒಬ್ಬ ಯುವಕ ತಮ್ಮ ಡೇರೆಯಿಂದ ಹೊರಗೆ ಬಂದು ಮಧ್ಯಾಹ್ನ ಆಗಿದ್ದನ್ನು ಖಚಿತ ಪಡಿಸಿ ನಮಾಝ್ ಆರಂಭಿಸಿದರು. ಸ್ವಲ್ಪ ಸಮಯದ ನಂತರ ಒಂದು ಯುವತಿ ಬಂದು, ಅವರ ಹಿಂದೆ ನಿಂತು ನಮಾಝ್ ಮುಂದುವರಿಸಿದರು. ತಕ್ಷಣವೇ ಒಬ್ಬ ಹದಿಹರೆಯದ ಬಾಲಕ ಕೂಡ ಬಂದು ಅವರ ಜೊತೆಯಲ್ಲಿ ಸೇರಿ ಕೊಂಡನು. ನಾನು ಅಬ್ಬಾಸನ್ನು ಕರೆದು, ಆ ಕಾಣುವ ವ್ಯಕ್ತಿ ಯಾರು.? ಅವರು ಮಾಡುತ್ತಿರುವುದು ಏನು.? ಎಂದು ಕೇಳಿದೆನು. ಅದಕ್ಕೆ ಅಬ್ಬಾಸ್, ಮೊದಲು ಹೊರಗೆ ಬಂದದ್ದು ನನ್ನ ಅಣ್ಣ ಅಬ್ದುಲ್ಲಾಹ್’ರ ಮಗನಾದ ಮುಹಮ್ಮದ್ ﷺ ಆಗಿರುವರು. ನಂತರ ಬಂದದ್ದು ಖುವೈಲಿದ್’ರ ಮಗಳಾದ, ಮುಹಮ್ಮದರ ﷺ ಪತ್ನಿ ಖದೀಜ (ರ) ಎಂದು ಹೇಳಿದಾಗ, ಆ ಹುಡುಗ ಯಾರು.? ಎಂದು ಕೇಳಿದೆನು. ಅದು ನನ್ನನ್ನು ಅಣ್ಣ ಅಬೂತ್ವಾಲಿಬರ ಮಗನಾದ ಅಲಿ (ರ), ಅವರು ಮಾಡುತ್ತಿರುವುದು ನಮಾಝ್ ಆಗಿದೆ. ಹಾಗೂ ಮುಹಮ್ಮದ್ ﷺ ತಾನೊಬ್ಬ ಪ್ರವಾದಿ ಆಗಿರುವೆನು ಎಂದಾಗಿದೆ ಹೇಳುತ್ತಿರುವುದು, ಸದ್ಯಕ್ಕೆ ಅವರನ್ನು ಒಪ್ಪಿಕೊಂಡಿರುವುದು ಅವರಿಬ್ಬರು ಮಾತ್ರ. ಆದರೆ ಈಗ, ಭವಿಷ್ಯದಲ್ಲಿ ಕಿಸ್ರಾ, ಕೈಸರಿನ ನಿಧಿಗಳನ್ನೂ ಕೂಡ ವಶಪಡಿಸಿಕೊಳ್ಳುವೆವು ಎಂದಾಗಿದೆ ಹೇಳುತ್ತಿರುವುದು.

ನಂತರದ ದಿನಗಳಲ್ಲಿ ಅಫೀಫ್ ಇಸ್ಲಾಮ್ ಸ್ವೀಕರಿಸಿದ್ದರು. ಅಂದು ಅವರೊಂದು ಮಾತನ್ನು ಹೇಳಿದ್ದರು, ನಾನು ನತದೃಷ್ಟ ಅಲ್ಲದೆ ಇನ್ನೇನು. ಅಂದೇ ನಾನೂ ಕೂಡ ಇಸ್ಲಾಮ್ ಸ್ವೀಕರಿಸಿದಿದ್ದರೆ ಅಲಿಯ (ರ) ನಂತರ ಸ್ವೀಕರಿಸಿದ ವ್ಯಕ್ತಿ ನಾನಾಗುತ್ತಿದ್ದೆ.
ಅಲಿಯವರು (ರ) ಇಸ್ಲಾಮ್ ಸ್ವೀಕರಿಸಿದ ವಿಶೇಷತೆಯನ್ನು ತಿಳಿಸುವ ಮತ್ತೊಂದು ಘಟನೆಯನ್ನು ತಿಳಿಯೋಣ. ಆ ಘಟನೆಯನ್ನು ಉಮರ್’ರವರು (ರ) ಈ ರೀತಿ ವಿವರಿಸುತ್ತಾರೆ. ನಾನೂ ಅಬೂಬಕ್ಕರ್, ಅಬೂ ಉಬೈದ (ರ) ಹಾಗೂ ಮುಂತಾದ ಹಲವಾರು ಜನರ ಒಂದು ಗುಂಪು ಪ್ರವಾದಿಯವರ ಬಳಿ ಕುಳಿತಿದ್ದೆವು. ಅಷ್ಟರಲ್ಲಿ ಅಲಿಯವರು (ರ) ಅಲ್ಲಿಗೆ ಆಗಮಿಸಿದಾಗ, ಪ್ರವಾದಿಯವರು ﷺ ಅಲಿಯವರ ಹೆಗಲನ್ನು ತಟ್ಟುತ್ತಾ ಈ ರೀತಿ ಹೇಳಿದರು. ಓ ಅಲೀ.. ನೀವಾಗಿರುತ್ತೀರಿ, ವಿಶ್ವಾಸಿಗಳಲ್ಲಿ ಮೊದಲನೇ ವ್ಯಕ್ತಿ. ನೀವು ಮಾತ್ರ ಆಗಿರುತ್ತೀರಿ ಮುಸ್ಲಿಮರಲ್ಲಿ ಒಂದನೇ ವ್ಯಕ್ತಿ, ಮೂಸ (ಅ) ಪ್ರವಾದಿಯವರಿಗೆ ಹಾರೂನ್’ರವರು (ಅ) ಇದ್ದ ಹಾಗೆ ಆಗಿದೆ, ನೀವು ಕೂಡ ನನಗೆ ಇರುವುದು.

ನಾಳೆ ಪರಲೋಕದಲ್ಲಿ ಪ್ರವಾದಿಯವರ ﷺ ಜೊತೆಯಲ್ಲಿ ಕೌಸರ್ ಪಾನೀಯದ ಬಳಿ ಮೊದಲು ತಲುಪುವುದು, ಮೊದಲು ವಿಶ್ವಾಸವಿರಿಸಿದ ವ್ಯಕ್ತಿಗಳಾಗಿರುವರು. ಈ ಭಾಗ್ಯವಿರುವ ವ್ಯಕ್ತಿ ಅಲಿಯಾಗಿದ್ದಾರೆ (ರ) ಎಂದು ಸಲ್ಮಾನುಲ್ ಫಾರಿಸ್’ರವರು (ರ) ಹೇಳುತ್ತಿದ್ದರು. ಇಬ್’ನು ಅಬ್ಬಾಸ್ ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಒಮ್ಮೆ ಪ್ರವಾದಿಯವರು ﷺ ಇತಿಹಾಸದಲ್ಲಿ ಮೊದಲು ಒಪ್ಪಿಕೊಂಡದ್ದು ಮೂರು ಜನ ವ್ಯಕ್ತಿಗಳಾಗಿರುತ್ತಾರೆ ಎಂದು ಹೇಳಿದ್ದರು. ಅವರು ಯಾರೆಂದರೆ, ಪ್ರವಾದಿ ಮೂಸರನ್ನು (ಅ) ಒಪ್ಪಿಕೊಂಡ ಯೂಶಅ ಬಿನ್ ನೂನ್ ಎಂಬ ವ್ಯಕ್ತಿ, ಈಸ (ಅ) ಪ್ರವಾದಿಯವರನ್ನು ಒಪ್ಪಿಕೊಂಡ ಹಬೀಬುನ್ನಜ್ಜಾರ್ (ಸ್ವಾಹಿಬ್ ಯಾಸೀನ್) ಎನ್ನುವ ವ್ಯಕ್ತಿ ಹಾಗೂ ನನ್ನನ್ನು ಒಪ್ಪಿಕೊಂಡ ವ್ಯಕ್ತಿ ಅಲಿ (ರ) ಆಗಿರುವರು ಎಂದು ಹೇಳಿದ್ದರು.
ಪ್ರವಾದಿಯವರ ﷺ ಜೊತೆಗಿನ ನಿರಂತರವಾದ ಸಂಪರ್ಕ ಅಲಿಯವರನ್ನು (ರ) ಜ್ಞಾನ ಸಂಪತ್ತಾಗಿ ಬದಲಾಯಿಸಿತ್ತು. ವಿಜ್ಞಾನ ಗೋಪುರದ ದಾರಿಯನ್ನಾಗಿಸಿತ್ತು. ಎಲ್ಲಾ ಸಂಕಷ್ಟದ ಸಂದರ್ಭಗಳಲ್ಲೂ ಪ್ರವಾದಿಯವರ ﷺ ಜೊತೆಯಲ್ಲೇ ನಿಂತು, ಅವರ ಸಂಪೂರ್ಣ ಜೀವನವನ್ನೇ ಪ್ರವಾದಿಯವರಿಗಾಗಿ ﷺ ತ್ಯಾಗಮಾಡಿದ್ದರು.

ಆಧ್ಯಾತ್ಮಿಕ ಚಿಂತನೆಯಲ್ಲೂ, ಆರಾಧನೆ ಕ್ರಮಗಳಲ್ಲೂ, ನಿಖರವಾದ ಶಿಸ್ತುಗಳನ್ನು ಪ್ರವಾದಿಯವರ ﷺ ಜೀವನದಿಂದ ಕಲಿತುಕೊಂಡಿದ್ದರು. ಪ್ರವಾದಿಯವರ ﷺ ಪ್ರೀತಿಯ ಮಗಳಾದ ಫಾತಿಮರನ್ನು (ರ) ವಿವಾಹವಾಗುವ ಮೂಲಕ, ಪ್ರವಾದಿಯವರ ﷺ ಅಳಿಯ ಕೂಡ ಆಗಿಬಿಟ್ಟರು. ಪ್ರವಾದಿಯವರ ﷺ ಸಂತಾನ ಪರಂಪರೆಯ ತಂದೆ ಎನ್ನುವ ಪದವಿಯನ್ನು ಅಲಂಕರಿಸಿದಾಗ, ಸಾಕು ಮಗನಿಂದ ಸ್ವಂತ ಮಗನ ಸ್ಥಾನಕ್ಕೆ ತಲುಪಿದರು. ಇತಿಹಾಸದಲ್ಲೇ ಅಲಿಯವರು ಬಹಳಷ್ಟು ಪದವಿಗಳನ್ನು ತಮ್ಮದಾಗಿಸಿಕೊಂಡಿದ್ದರು.

ಅಲಿಯವರ (ರ) ಬಾಲ್ಯ, ಯೌವನ, ದಾಂಪತ್ಯ ಜೀವನ ಎಲ್ಲವೂ ಕಳೆದದ್ದು ಪ್ರವಾದಿಯವರ ﷺ ನಿರೀಕ್ಷಣೆಯಲ್ಲಿ ಮಾತ್ರವಾಗಿತ್ತು. ಪ್ರವಾದಿಯವರು ﷺ ಅಲಿಯವರನ್ನು (ರ) ನೋಡಿಕೊಳ್ಳುವ ಜವಾಬ್ದಾರಿ ಎತ್ತಿಕೊಂಡಾಗ, ಅಬ್ಬಾಸ್’ರವರು ಜಅಫರನ್ನು ನೋಡಿಕೊಳ್ಳುವ ಜವಾಬ್ದಾರಿ ಎತ್ತಿಕೊಂಡಿದ್ದರು. ಜಅಫರ್ ಕೂಡ ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ್ದರು. ತನ್ನ ಇಬ್ಬರು ಮಕ್ಕಳು ಕೂಡ ಪ್ರವಾದಿಯವರ ﷺ ಜೊತೆಯಲ್ಲೇ ಇರಬೇಕು ಎಂಬುವುದು ಅಬೂತ್ವಾಲಿಬರ ಆಗ್ರಹವಾಗಿತ್ತು. ಅದಕ್ಕಾಗಿ ಅವರಿಗೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದರು. “ಉಸ್’ದುಲ್ ಗಾಬ” ಎಂಬ ಗ್ರಂಥದಲ್ಲಿರುವ ಒಂದು ಘಟನೆಯು ಈ ರೀತಿಯಾಗಿದೆ. ಒಮ್ಮೆ ಅಲಿ (ರ) ಹಾಗೂ ಪ್ರವಾದಿಯವರು ﷺ ಜೊತೆಯಲ್ಲಿ ನಮಾಝ್ ಮಾಡುತಿದ್ದರು, ಆ ಸಂದರ್ಭದಲ್ಲಿ ಅಬೂತ್ವಾಲಿಬರು ಜಅಫರನ್ನು ಕರೆದುಕೊಂಡು ಬಂದರು. ನಂತರ ಜಅಫರಲ್ಲಿ, ನಿಂತು ನೋಡದೆ ನೀನೂ ಕೂಡ ಅವರ ಜೊತೆಯಲ್ಲಿ ಸೇರಿ ನಮಾಜ್ ಮಾಡು ಎಂದು ಹೇಳಿದರು. ಅದೇ ರೀತಿ ಜಅಫರ್ ಕೂಡ ಅವರ ಜೊತೆಯಲ್ಲಿ ಸೇರಿ ನಮಾಝ್ ಮಾಡಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-59/365

ಅಬೂಬಕ್ಕರ್ (ರ):
ಪ್ರವಾದಿಯವರ ﷺ ನಂತರ ಮುಸ್ಲಿಂ ಸಮುದಾಯದ ಒಂದನೇ ವಿಶ್ವಾಸಿಯಾಗಿ ಪರಿಗಣಿಸುವುದು ಅಬೂಬಕ್ಕರ್’ರವರನ್ನಾಗಿದೆ. (ರ) ಹಿರಿಯ ಪುರುಷರಲ್ಲಿ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ್ದು ಕೂಡ ಅಬೂಬಕ್ಕರ್’ರವರೇ (ರ) ಆಗಿದ್ದರು. ಸ್ವಹಾಬಿಗಳು ಹಾಗೂ ಕೆಲವು ಇತಿಹಾಸಕರಾರು ಆರಂಭದಲ್ಲಿ ಇಸ್ಲಾಮ್ ಸ್ವೀಕರಿಸಿದವರ ಪಟ್ಟಿ ತಯಾರಿಸುವಾಗ, ಪ್ರವಾದಿಯವರ ಹತ್ತಿರದ ಬಂಧುಗಳನ್ನು ಆ ಸಾಲಿನಲ್ಲಿ ಸೇರಿಸುವುದಿಲ್ಲ, ಹೀಗೆ ನೋಡುವಾಗ ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದವರ ಸಾಲಿನಲ್ಲಿ ಮೊದಲು ಬರುವುದು ಅಬೂಬಕ್ಕರ್’ರವರು (ರ) ಆಗಿರುತ್ತಾರೆ. ಅತ್ವೀಖ್ ಅಥವಾ ಅಬ್ದುಲ್ಲಾಹ್ ಎಂದಾಗಿತ್ತು ಮಹಾನರ ನಿಜವಾದ ಹೆಸರು. ಬಾಲ್ಯದಿಂದಲೇ ಪ್ರವಾದಿಯವರ ﷺ ಜೊತೆಯಲ್ಲಿ ಹತ್ತಿರದ ಬಾಂಧವ್ಯ ಹೊಂದಿದ್ದ ಕಾರಣ, ಪ್ರವಾದಿತ್ವದ ಘೋಷಣೆಯ ನಂತರ ಖುರೈಶಿಗಳು ಅಬೂಬಕ್ಕರ್’ರವರ (ರ) ಬಳಿ ಬಂದು, ನಿಮ್ಮ ಗೆಳೆಯ ಬಹುದೈವ ವಿಶ್ವಾಸವನ್ನು ವಿರೋಧಿಸುತ್ತಿದ್ದಾರೆ. ನಮ್ಮ ಪರಂಪರೆಯ ವಿಶ್ವಾಸಗಳನ್ನು ವಿಮರ್ಷಣೆ ಮಾಡುತ್ತಿದ್ದಾರೆ, ಅದು ಬುದ್ದಿ ಶೂನ್ಯವೆಂದು ವಾದಿಸುತ್ತಿದ್ದಾರೆ, ಎಂದು ಹೇಳಿದಾಗ. ಅಬೂಬಕ್ಕರ್’ರವರು ಪ್ರವಾದಿಯವರಲ್ಲಿ ﷺ ಈ ಖುರೈಷಿಗಳು ಹೇಳಿದ್ದು ನಿಜವೇ.? ಎಂದು ಕೇಳಿದರು. ಅದಕ್ಕೆ ಅವರು ಹೇಳಿದ್ದು ಸತ್ಯವಾಗಿದೆ, ನಾನು ಅಲ್ಲಾಹುವಿನ ಪ್ರವಾದಿ ﷺ ಆಗಿರುತ್ತೇನೆ, ಅವನ ಜವಾಬ್ದಾರಿಯನ್ನು ಹೊತ್ತು ಕೊಂಡ ವ್ಯಕ್ತಿ ಆಗಿದ್ದೇನೆ, ನಾನು ನಿಮ್ಮನ್ನು ಕೂಡ ಸತ್ಯದ ಕಡೆಗೆ ಆಹ್ವಾನಿಸುತ್ತಿದ್ದೇನೆ ಎಂದು ಹೇಳಿದಾಗ. ತಕ್ಷಣವೇ ಅಬೂಬಕ್ಕರ್’ರವರು (ರ) ನಾನು ಸಂಪೂರ್ಣವಾಗಿ ಅಂಗೀಕರಿಸುದ್ದೇನೆ ಎಂದು ಹೇಳಿದರು, ಪ್ರವಾದಿಯವರು ﷺ ಕುರ್’ಆನ್ ಓದಿ ಕೊಟ್ಟಾಗ, ಬಹಳ ವಿನಮ್ರತೆಯಿಂದ ಅದನ್ನು ಕೇಳುತ್ತಿದ್ದರು.
ನಾನು ಯಾರನ್ನು ಇಸ್ಲಾಮಿಗೆ ಆಹ್ವಾನಿಸಿದರೂ, ಅವರು ಸಂಶಯ ಪಡುತ್ತಿದ್ದರು. ಆದರೆ ಅಬೂಬಕ್ಕರ್’ರವರು (ರ) ಕಿಂಚಿತ್ತೂ ಸಂಶಯ ತೋರಿಸದೆ, ತಕ್ಷಣವೇ ನನ್ನನ್ನು ಒಪ್ಪಿಕೊಂಡಿದ್ದರು ಎಂದು ಪ್ರವಾದಿಯವರು ನಂತರದ ಕಾಲದಲ್ಲಿ ಹೇಳುತ್ತಿದ್ದರು.

ಮತ್ತೊಮ್ಮೆ ಏನೋ ತೀರ್ಪು ನೀಡುತ್ತಿದ್ದ ಸಂದರ್ಭವಾಗಿತ್ತು ಅದು. ಅಲ್ಲಿ ಉಮರ್ (ರ) ಸಮೇತವಾದ ಬಹಳಷ್ಟು ಜನರು ಆ ಸಭೆಯಲ್ಲಿ ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಪ್ರವಾದಿಯವರು ಈ ರೀತಿ ಹೇಳಿದರು. “ಅಲ್ಲಾಹನು ನನ್ನನ್ನು ಪ್ರವಾದಿಯಾಗಿ ﷺ ನಿಯೋಗಿಸಿದಾಗ, ನಾನು ಅದೇ ರೀತಿ ಘೋಷಣೆ ಮಾಡಿದ್ದೆನು. ಆಗ ನಿಮ್ಮಲ್ಲಿ ಬಹಳಷ್ಟು ಜನರು ನನ್ನನ್ನು ವಿರೋಧಿಸಿದಾಗಲೂ, ಅಬೂಬಕ್ಕರ್ (ರ) ಮಾತ್ರ ನನ್ನ ಜೊತೆಯಲ್ಲೇ ನಿಂತು, ಸತ್ಯವಾಗಿದೆ ಅವರು ಹೇಳುತ್ತಿರುವುದು ಎಂದು ಹೇಳಿದ್ದರು.
ಅಬೂಬಕ್ಕರ್’ರವರು (ರ) ಹಿಂದಿನಿಂದಲೂ, ನೀತಿವಂತರಾದ ಉತ್ತಮ ವ್ಯಾಪಾರಿ, ಹಾಗೂ ದಾನಿಯೂ ಕೂಡ ಆಗಿದ್ದರು. ಜನ ಸೇವೆಯಲ್ಲಿ ಯಾವಾಗಲೂ ಮುಂಚೂಣಿಯಲ್ಲಿರುತ್ತಿದ್ದ ಕಾರಣ, ಸಾರ್ವಜನಿಕ ವ್ಯವಹಾರಗಳಲ್ಲಿ ಜನರು ಅವರನ್ನು ಅವಲಂಬಿಸಿದ್ದರು. ಅರಬ್ ದೇಶದ ಜನಾಂಗಗಳ ಕುರಿತು ಹಾಗೂ ಅವರ ಪರಂಪರೆಯ ಬಗ್ಗೆಯೂ ಕೂಡ ಅವರಿಗೆ ಬಹಳಷ್ಟು ಜ್ಞಾನವಿತ್ತು. ಅವರ ತಂದೆ ಅಬೂಖುರಾಫರ ಎಂಟನೇ ಪಿತಾಮಹಾನರ ಪರಂಪರೆ ಹಾಗೂ ಪ್ರವಾದಿಯವರ ﷺ ಏಳನೇ ಪಿತಾಮಹಾನರ ಪರಂಪರೆಯು, ‘ಮುರ್’ರ’ ಎನ್ನುವ ವ್ಯಕ್ತಿಗೆ ಬಂದು ಸೇರುತ್ತಿತ್ತು.

ಅಬೂಬಕ್ಕರ್’ರವರು (ರ) ಇಸ್ಲಾಮ್ ಸ್ವೀಕರಿಸಿದಾಗ, ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಗಿತ್ತು. ಸಿರಿಯಾದ ವೇದಜ್ಞಾನಿ ಹೇಳಿದ ಭವಿಷ್ಯವಾಣಿ, ಹಾಗೂ ಅಲ್ಲಿ ಉಂಟಾದ ಕನಸುಗಳೆಲ್ಲವೂ ಅಬೂಬಕ್ಕರ್’ರವರಿಗೆ (ರ) ಆವೇಶ ತರಿಸಿತ್ತು. ಈ ವಿಷಯವನ್ನು ಅಬೂಬಕ್ಕರ್’ರವರು (ರ) ಹೇಳುವ ಮುಂಚೆಯೇ ಪ್ರವಾದಿಯವರು ﷺ ತಿರುಗಿ ಹೇಳಿದ್ದನ್ನು ಕಂಡು, ಅಬೂಬಕ್ಕರ್’ರವರಿಗೆ (ರ) ಪ್ರವಾದಿಯವರ ﷺ ಮೇಲಿದ್ದ ಆತ್ಮವಿಶ್ವಾಸವು ಇಮ್ಮಡಿಯಾಯಿತು. ವಯ್ಯಸಿನಲ್ಲಿ ಪ್ರವಾದಿಯವರಿಗಿಂತ ﷺ ಮೂರು ವರ್ಷ ಚಿಕ್ಕವರಾದರೂ, ಹಿಂದಿನಿಂದಲೂ ಬಹಳಷ್ಟು ಅನ್ಯೋನ್ಯತೆಯಿಂದ ಇರುತಿದ್ದರು. ಕುಟುಂಬವೂ ಕೂಡ ಅವರ ಗೆಳೆತನದಲ್ಲಿ ಜೊತೆಯಲ್ಲಿರುತಿತ್ತು. ಪ್ರವಾದಿತ್ವದ ನಿಯೋಗದ ಕುರಿತು, ಖದೀಜ (ರ) ಬೀವಿ ಹಾಗೂ ಅಬೂಬಕ್ಕರ್’ರವರ (ರ) ಸಂಭಾಷಣೆಯ ಕುರಿತು ನಾವು ಈಗಾಗಲೇ ತಿಳಿದುಕೊಂಡಿದ್ದೇವೆ.

ಇಸ್ಲಾಮ್ ಸ್ವೀಕರಿಸಿದ ಅಂದಿನಿಂದಲೂ ತಾನು ಕೂಡ ಪ್ರಭೋಧನೆಯಲ್ಲಿ ತೊಡಗಿದ್ದರು. ಆತ್ಮೀಯ ಗೆಳೆಯರಿಗೂ, ಹಿತೈಷಿಗಳಿಗೂ ಕೂಡ ವಿಷಯ ತಿಳಿಸಿದ್ದರು, ಅವರ ಪ್ರಭೋಧನೆಯಿಂದ ಬಹಳಷ್ಟು ಜನ ಗಣ್ಯವ್ಯಕ್ತಿಗಳು, ಬುದ್ದಿಜೀವಿಗಳು ಇಸ್ಲಾಮಿನ ಕುರಿತು ತಿಳಿದುಕೊಂಡು ಪ್ರವಾದಿಯವರ ಬಳಿ ತಲುಪಿದರು. ಅವರಲ್ಲಿ ಬಹಳಷ್ಟು ಜನರು ಇಸ್ಲಾಮ್ ಸ್ವೀಕರಿಸಿದ್ದರು. ಅವರಲ್ಲಿ ಕೆಲವರ ಪಟ್ಟಿ ಈ ಕೆಳಗಿನಂತಿದೆ.
1. ಉಸ್ಮಾನ್ ಬಿನ್ ಅಫ್ಫಾನ್
2. ಝುಬೈರ್ ಬಿನ್ ಅಲ್ ಅವಾಂ
3. ತ್ವಲ್’ಹ ಬಿನ್ ಉಬೈದಿಲ್ಲಾಹ್
4. ಸಅದ್ ಬಿನ್ ಅಬೀ ವಖಾಸ್
5. ಅಬ್ದುಲ್ ರಹ್ಮಾನ್ ಬಿನ್ ಔಫ್
6. ಉಸ್ಮಾನ್ ಬಿನ್ ಮಳ್’ಗೂನ್
7. ಅಬೂಸಲಮತ್ ಬಿನ್ ಅಬ್ದುಲ್ ಅಸದ್
8. ಅಬೂಉಬೈದ್ ಅಲ್ ಜರ್ರಾಹ್
9. ಖಾಲಿದ್ ಬಿನ್ ಸಈದ್
10. ಅಲ್’ಖಂ ಬಿನ್ ಅಬಿಲ್ ಅಲ್’ಖಂ
(ರಲಿಯಲ್ಲಾಹು ಅನ್’ಹುಂ)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-60/365

ಉಸ್ಮಾನ್ (ರಲಿಯಲ್ಲಾಹು ಅನ್’ಹು):
ಅಬೂಬಕ್ಕರ್’ರವರು (ರ) ಪ್ರವಾದಿಯವರ ﷺ ಜೊತೆಯಲ್ಲಿ ಯಾವಾಗಲೂ ನೆರಳಿನ ಹಾಗೆ ಇರುತ್ತಿದ್ದರು. ಪ್ರವಾದಿಯವರ ﷺ ಜೀವನದ ಪ್ರತಿಯೊಂದು ವಿಷಯದಲ್ಲೂ ಅದರ ಪ್ರಾರಂಭದಲ್ಲೇ ಇರುತ್ತಿದ್ದರು. ಅವರ ಬಗ್ಗೆ ಮತ್ತೆ ಚರ್ಚಿಸೋಣ, ಈಗ ನಾವು ಉಸ್ಮಾನ್’ರವರ (ರ) ಕುರಿತು ತಿಳಿಯೋಣ.
ಆರಂಭ ಘಟ್ಟದಲ್ಲೇ ಇಸ್ಲಾಂ ಸ್ವೀಕರಿಸಿದ ಪ್ರಮುಖರಲ್ಲಿ ಒಬ್ಬರಾಗಿದ್ದರು ಉಸ್ಮಾನ್ ಬಿನ್ ಅಫ್ಫಾನ್’ರವರು (ರ). ಆರಂಭಿಕ ಘಟ್ಟದಲ್ಲಿ ಇಸ್ಲಾಮ್ ಸ್ವೀಕರಿಸಿದ ನಾಲ್ಕು ಜನರಲ್ಲಿ ನಾನು ನಾಲ್ಕನೆ ವ್ಯಕ್ತಿ ಆಗಿರುವೆನು ಎಂದು ಅವರು ಆಗಾಗ ಹೇಳುತ್ತಿದ್ದರು. ಉಸ್ಮಾನ್’ರವರು (ರ) ಇಸ್ಲಾಂ ಸ್ವೀಕರಿಸಿದ್ದ ಘಟನೆಯ ಕುರಿತು ಒಂದು ಉಲ್ಲೇಖವು ಹೀಗೆ ತಿಳಿಸುತ್ತದೆ. ಉಸ್ಮಾನ್’ರವರು ಕಅಬಾದ ನೆರಳಿನಲ್ಲಿ ಕುಳಿತು ಕೊಂಡಿದ್ದರು. ಆ ಸಂದರ್ಭದಲ್ಲಾಗಿತ್ತು, ಪ್ರವಾದಿಯವರ ﷺ ಮಗಳಾದ ರುಖಿಯ್ಯ (ರ) ಹಾಗೂ ಅಬೂಲಹಬಿನ ಮಗನಾದ ಉತ್’ಬರಿಗೂ ವಿವಾಹದ ನಡೆದ ವಿಷಯವು ತಿಳಿಯುವುದು. ಅದ್ವಿತೀಯ ಸುಂದರಿಯಾಗಿದ್ದ ರುಖಿಯರನ್ನು (ರ) ತಾನು ಮದುವೆಯಾಗಬೇಕೆಂದು ಬಹಳ ಆಸೆ ಪಟ್ಟಿದ್ದರು. ಆ ಕಾರಣದಿಂದ ಈ ವಾರ್ತೆಯು ಅವರ ಕಿವಿಗೆ ಬಿದ್ದಾಗ ಬಹಳ ಬೇಸರ ಪಟ್ಟಿದ್ದರು. ಉತ್’ಬರ ಮುಂಚೆಯೇ ನಾನು ವಿವಾಹ ಪ್ರಸ್ತಾವನೆ ನಡೆಸಬೇಕಿತ್ತೇನೋ ಎಂದು ತನ್ನಲ್ಲೇ ಹೇಳಿಕೊಂಡು, ಸ್ವಲ್ಪ ಸಮಯದ ಬಳಿಕ ತನ್ನ ಮನೆಯ ಕಡೆಗೆ ನಡೆದರು. ಅವರ ಮುಖ ಭಾವವನ್ನು ಕಂಡ ಅವರ ಅತ್ತೆ ಸಅದ ಬಿಂತ್ ಕುರೈಸ್ ವಿಷಯವನ್ನು ಕೇಳಿ ತಿಳಿದುಕೊಂಡರು. ಅವರಿಗೆ ಜೋತಿಷ್ಯ ವಿದ್ಯೆ ತಿಳಿದಿತ್ತು. ಅವರು ಉಸ್ಮಾನ್’ರವರ ಬಳಿ ಬಂದು, ನೀನೊಬ್ಬ ಭಾಗ್ಯಶಾಲಿ ಆಗಿರುವೆ, ಬಹಳಷ್ಟು ಅದೃಷ್ಟಗಳು ನಿನ್ನನ್ನು ಹುಡುಕಿ ಬರಲಿದೆ, ಸುಂದರಿಯಾದ ಆ ಪುಷ್ಪವು ನಿನಗೆ ಸಿಗಲಿದೆ, ಪುಣ್ಯ ಪುರುಷನ ಮಗಳಾಗಿರುವಳು ಅವಳು ಎಂದು ಹೇಳಿದರು. ಅದನ್ನು ಕೇಳಿದ ಉಸ್ಮಾನ್’ರವರು ಇದೇನು ಹೇಳುತ್ತಿದ್ದೀರಿ ನೀವು ಎಂದು ತಿರುಗಿ ಅವರಲ್ಲೇ ಕೇಳಿದರು.

ಅದೇ ಪ್ರೀತಿಯ ಮಗನೇ, ಮುಹಮ್ಮದ್’ರು ﷺ ಅಲ್ಲಾಹುವಿನ ಪ್ರವಾದಿಯಾಗಿರುವರು, ಸತ್ಯ ಸಂದೇಶವಾಹಕರಾಗಿರುವರು. ಸಾಕ್ಷಿಗಾಗಿ ಅವರು ತನ್ನ ಜೊತೆಯಲ್ಲಿ, ಸತ್ಯವನ್ನೂ, ಅಸತ್ಯವನ್ನು ಬಹಳ ಸ್ಪಷ್ಟವಾಗಿ ತಿಳಿಸುವ ಗ್ರಂಥದ ಜೊತೆಯಲ್ಲಾಗಿದೆ ಅವರು ಬಂದಿರುವುದು. ನೀನು ಆ ಪ್ರವಾದಿಯವರ ﷺ ಬಳಿ ಹೋಗಿ ಬಾ, ಅದಕ್ಕೆ ಆ ವಿಗ್ರಹಗಳು ನಿನಗೆ ಅಡಚಣೆ ಮಾಡದೆ ಇರಲಿ ಎಂದು ಹೇಳಿದಾಗ, ಇದೆಲ್ಲವೂ ಈ ಊರಿನ ವಿಷಯವೇ ಅಲ್ವೆ.? ಎಂದು ಉಸ್ಮಾನ್ ಕೇಳಿದರು.
ಅದಕ್ಕೆ ಸಅ್’ದ ಎಲ್ಲವನ್ನೂ ವಿವರಿಸ ತೊಡಗಿದರು. ಅಬ್ದುಲ್ಲಾಹ್’ರ ಮಗನಾದ ಮುಹಮ್ಮದ್’ರು ಅಲ್ಲಾಹನು ನಿಯೋಗಿಸಿದ ಪ್ರವಾದಿಯಾಗಿರುವರು. ಅವರು ಆಹ್ವಾನಿಸುತ್ತಿರುವುದು ಅಲ್ಲಾಹುವಿನ ಧರ್ಮಕ್ಕಾಗಿದೆ, ಎಂದು ಹೀಗೆ ಹಲವಾರು ವಿಶೇಷತೆಗಳನ್ನು ವಿವರಿಸಿ ಕೊಟ್ಟರು.
ಅವರು ಹೇಳಿದ ವಿಷಯಗಳನ್ನು ಆಲೋಚಿಸುತ್ತಾ ಮುಂದೆ ನಡೆಯುತ್ತಾ ಹೋಗುತ್ತಿರುವಾಗ, ಅಬೂಬಕ್ಕರ್’ರವರ (ರ) ಭೇಟಿಯಾದರು. ಎಲ್ಲಾ ವಿಷಯಗಳನ್ನು ಅವರಲ್ಲಿ ತಿಳಿಸಿದಾಗ, ಅಬೂಬಕ್ಕರ್’ರವರು ಈ ರೀತಿ ಹೇಳಿದರು. ಉಸ್ಮಾನ್ ನಿಮಗೂ ಕೂಡ ಪರಿಚಯ ಇರುವ ವ್ಯಕ್ತಿಯೇ ಅಲ್ಲವೇ ಅವರು, ನೀವೊಮ್ಮೆ ಸ್ವತಃ ಆಲೋಚಿಸಿರಿ ಈ ಆರಾಧಿಸುವ ಮೂರ್ತಿಗಳೆಲ್ಲವೂ ಕಲ್ಲುಗಳಲ್ಲವೇ.? ಒಳಿತಾಗಲಿ, ಕೆಡುಕಾಗಲಿ ಮಾಡದೆ, ಕಾಣಲೋ, ಕೇಳಲೋ ಸಾಧ್ಯವಾಗದ ಕೇವಲ ಕಲ್ಲುಗಳಲ್ಲವೇ ಅದು, ಎಂದು ಹೇಳಿದಾಗ. ಉಸ್ಮಾನ್’ರವರು ಅದು ಹೌದು ಎಂದು ಉತ್ತರಿಸಿದರು. ಅಬೂಬಕ್ಕರ್ (ರ) ಮುಂದುವರಿಸುತ್ತಾ, ನಿಮ್ಮ ಅತ್ತೆ ಹೇಳಿದ್ದು ಸತ್ಯವಾಗಿದೆ. ಮುಹಮ್ಮದರು ﷺ ಪ್ರವಾದಿತ್ವದ ಘೋಷಣೆ ಈಗಾಗಲೇ ಮಾಡಿದ್ದಾರೆ, ನಾವೊಮ್ಮೆ ಹೋಗಿ ಅವರನೊಮ್ಮೆ ಭೇಟಿಯಾಗೋಣ ಎಂದು ಹೇಳಿದರು. ಅದಕ್ಕೆ ಉಸ್ಮಾನ್ ಕೂಡ ಸಮ್ಮತಿಸಿದರು. ನಂತರ ಇಬ್ಬರೂ ಜೊತೆಯಲ್ಲಿ ಪ್ರವಾದಿಯವರ ﷺ ಸನ್ನಿಧಿಗೆ ತಲುಪಿದರು. ಪ್ರವಾದಿಯವರು ﷺ ಉಸ್ಮಾನ್’ರವರಲ್ಲಿ, ಓ ಉಸ್ಮಾನ್ ನಾನು ನಿಮ್ಮನ್ನೆಲ್ಲರನ್ನೂ ಅಲ್ಲಾಹುವಿನ ಬಳಿ ಆಹ್ವಾನಿಸಲು ನಿಯೋಗಿಸಿದ ಪ್ರವಾದಿಯಾಗಿರುತ್ತೇನೆ. ಹಾಗಾಗಿ ನೀವು ಅಲ್ಲಾಹುವಿನ ಆಮಂತ್ರಣವನ್ನು ಸ್ವೀಕರಿಸಿರಿ ಎಂದು ಹೇಳಿದ್ದೇ ತಡ, ಉಸ್ಮಾನ್’ರವರು ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರು.

ಪ್ರವಾದಿಯವರ ನಂಬಿಕಸ್ಥ ಅನುಯಾಯಿಯಾಗಿ ಬದಲಾದರು. ಕೆಲವು ದಿನಗಳ ನಂತರ ವಿವಾಹದ ಒಪ್ಪಂದ ಕಳೆದು ಜೊತೆಯಲ್ಲಿ ಜೀವಿಸುದಕ್ಕೂ ಮುಂಚೆಯೇ ಉತ್’ಬ, ರುಖಿಯರವರಿಗೆ(ರ) ವಿಚ್ಛೇದನ ನೀಡಿದರು. ಪ್ರವಾದಿಯವರು ರುಖಿಯರನ್ನು (ರ) ಉಸ್ಮಾನ್’ರಿಗೆ (ರ) ಮದುವೆ ಮಾಡಿ ಕೊಟ್ಟರು. ರುಖಿಯರ (ರ) ಮರಣದ ನಂತರ ಉಮ್ಮುಕುಲ್’ಸುವನ್ನು (ರ) ಕೂಡ ಉಸ್ಮಾನ್’ರಿಗೆ ಮದುವೆ ಮಾಡಿ ಕೊಟ್ಟರು. ಪ್ರವಾದಿಯವರಿಗೆ ﷺ ಅವರಲ್ಲಿದ್ದ ಪ್ರೀತಿಯ ಕಾರಣವಾಗಿತ್ತು ಅದು. ಉಸ್ಮಾನ್’ರವರು (ರ) ಇಸ್ಲಾಂ ಸ್ವೀಕರಿಸಿದ ಕಾರಣ ಬಹಳಷ್ಟು ತೊಂದರೆಗಳನ್ನು ಎದುರಿಸಿದ್ದರು. ಉಸ್ಮಾನ್’ರವರು (ರ) ತನ್ನ ಸಂಪತ್ತುಗಳೆಲ್ಲವನ್ನು ನಂತರದ ಕಾಲದಲ್ಲಿ ಇಸ್ಲಾಮಿನ ಅವಶ್ಯಕತೆಗಳಿಗಾಗಿ ಬಳಸಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Leave a Reply