The biography of Prophet Muhammad – Month 3

Admin August 14, 2022 No Comments

The biography of Prophet Muhammad – Month 3

Mahabba Campaign Part-61/365

ಅಂರ್ ಬಿನ್ ಅಬಸ (ರಲಿಯಲ್ಲಾಹು ಅನ್’ಹು):
ಪ್ರವಾದಿಯವರ ﷺ ಪ್ರಭೋಧನೆಯ ಆರಂಭಿಕ ಹಂತದಲ್ಲೇ ಇಸ್ಲಾಮ್ ಸ್ವೀಕರಿಸಿದ ಗಣ್ಯರಲ್ಲಿ ಇನ್ನೊಬ್ಬರಾಗಿದ್ದರು ಅಂರ್ (ರ). ಮಕ್ಕಾ ಸ್ವದೇಶಿಯಲ್ಲದ ಕಾರಣ ಇವರು, ಪ್ರಥಮವಾಗಿ ಇಸ್ಲಾಮ್ ಸ್ವೀಕರಿಸಿದ ವಿದೇಶಿ ಎನ್ನುವ ಮೆಚ್ಚುಗೆಗೂ ಪಾತ್ರವಾಗಿದ್ದರು. ಇಮಾಮ್ ಮುಸ್ಲಿಂ (ರ) ಉಲ್ಲೇಖಿಸಿದ ಹದೀಸಿನಲ್ಲಿ ಇಸ್ಲಾಮಿನ ನಾಲ್ಕರಲ್ಲಿ ನಾಲ್ಕನೇ ಸ್ಥಾನದಲ್ಲಿ ಇರುವುದು ಅಂರ್’ರವರಾಗಿದ್ದಾರೆ (ರ) ಎಂದು ಹೇಳಿರುವುದು ಕಾಣಬಹುದು.

ಪ್ರತಿ ದಿನ ಒಬ್ಬೊಬ್ಬರಾಗಿ ಇಸ್ಲಾಮ್ ಸ್ವೀಕರಿಸುವಾಗ, ಕಳೆದ ದಿನದವರೆಗಿನ ಸಂಖ್ಯೆಯನ್ನು ಸೇರಿಸಿ ಎಲ್ಲರಿಗೂ ತಮ್ಮ ಇಸ್ಲಾಮ್ ಸ್ವೀಕರಣೆಯ ಸಂಖ್ಯೆಯ ಕುರಿತು ಹೇಳಬಹುದಲ್ಲವೇ.? ಅಥವಾ ಪ್ರತಿಯೊಬ್ಬರೂ, ಅವರವರಿಗೆ ಸಿಕ್ಕಿದ ಮಾಹಿತಿಗೆ ಅನುಗುಣವಾಗಿ ಪರಿಚಯಿಸಿದ್ದು ಆಗಿರಬಹುದು. ಏನೇ ಆಗಲಿ, ಅಂರ್’ರವರು (ರ) ಇಸ್ಲಾಮ್ ಸ್ವೀಕರಿಸಿದ ಆ ಅಪೂರ್ವ ಘಟನೆಯನ್ನು ಸ್ವತಃ ಅವರೇ ವಿವರಿಸಿರುವುದಾಗಿ, ಅಬೂಸಲಾಂ ಅಲ್’ಹಬರಿರವರು ಉಲ್ಲೇಖಿಸಿರುತ್ತಾರೆ. ಅಂರ್ (ರ) ಆರಂಭಿಸುವುದು ಈ ರೀತಿಯಾಗಿದೆ. ವಿಗ್ರಹ ಆರಾಧನೆಯಿಂದ ಯಾವುದೇ ಪ್ರಯೋಜನವಿಲ್ಲವೆಂದು ಮೊದಲೇ ನನ್ನ ಮನಸ್ಸಿಗೆ ಅನಿಸಿತ್ತು. ಅದನ್ನು ನಾನು ಬಹಳಷ್ಟು ಜನರೊಂದಿಗೂ ಕೂಡ ಹಂಚಿಕೊಂಡಿದ್ದೆನು. ಒಮ್ಮೆ ನಾನು ವಿಗ್ರಹ ಆರಾಧನೆಯ ವಿರುದ್ಧ ಮಾತೆತ್ತಿದಾಗ, ನನ್ನ ಜನಾಂಗದ ಒಬ್ಬ ವ್ಯಕ್ತಿ ನನ್ನ ಬಳಿ ಬಂದು, ನಿಮ್ಮ ಇದೇ ಆದರ್ಶವನ್ನು ಹೇಳುತ್ತಿರುವ ಒಬ್ಬರು ಮಕ್ಕಾದಲ್ಲಿ ಇರುವುದಾಗಿ ನಾನು ಕೇಳಿದ್ದೇನೆ ಎಂದು ಹೇಳಿದರು.

ನಾನು ತಕ್ಷಣವೇ, ಮಕ್ಕಾ ನಗರಕ್ಕೆ ಬಂದೆನು. ವಿಗ್ರಹ ಆರಾಧನೆಯ ಕುರಿತು ಮಾತಾಡುತ್ತಿದ್ದ ಆ ವ್ಯಕ್ತಿಯನ್ನು ಹುಡುಕುತ್ತಾ ಹೊರಟಿದ್ದಾಗ, ಈಗ ಪ್ರವಾದಿಯವರು ﷺ ನಿಗೂಢವಾಗಿ ಪ್ರಭೋಧನೆ ನಡೆಸುತ್ತಿದ್ದಾರೆ, ಅವರನ್ನು ರಾತ್ರಿ ಮಾತ್ರವೇ ಕಾಣಲು ಸಾಧ್ಯವಾಗುವುದು. ಅವರು ರಾತ್ರಿ ಸಮಯದಲ್ಲಿ ಕಅಬಾಲಯವನ್ನು ಪ್ರದಕ್ಷಿಣೆ ಹಾಕಲು ಬರುವರು ಎನ್ನುವ ಮಾಹಿತಿ ನನಗೆ ಲಭಿಸಿತು. ನಾನು ಪ್ರವಾದಿಯವರನ್ನು ﷺ ಕಾಯುತ್ತಾ, ಕಅಬಾಲಯದ ಮೇಲೆ ಹೊದಿಸಲಾಗಿದ್ದ ಬಟ್ಟೆಯ (ಕಿಸ್’ವ) ಒಳ ಭಾಗದಲ್ಲಿ ಕುಳಿತು ಕಾಯುತ್ತಿದ್ದೆನು. ಹೀಗಿರುವಾಗ ”ಲಾ ಇಲಾಹ ಇಲ್ಲಲ್ಲಾಹ್” ಎಂದು ಜೋರಾಗಿ ಉಚ್ಛರಿಸುತ್ತಾ ಪ್ರವಾದಿಯವರು ﷺ ಆಗಮಿಸಿದರು. ನಾನು ಅವರು ಬಳಿ ಹೋಗಿ ನೀವು ಏನಾಗಿರುತ್ತೀರಿ ಎಂದು ಕೇಳಿದನು.

ಪ್ರವಾದಿಯವರು ﷺ: ನಾನು ಅಲ್ಲಾಹುವಿನ ಪ್ರವಾದಿಯಾಗಿರುವೆನು

ಅಂರ್: ಹಾಗೆಂದರೆ.?

ಪ್ರವಾದಿಯವರು ﷺ: ಅಲ್ಲಾಹನು ಅವನ ಸಂದೇಶವನ್ನು ಜನರಿಗೆ ತಲುಪಿಸಲೆಂದು ನನ್ನನ್ನು ನಿಯೋಗಿಸಿದ್ದಾನೆ.

ಅಂರ್: ಯಾವ ಸಂದೇಶವನ್ನು ತಲುಪಿಸಲೆಂದು ನಿಮ್ಮನ್ನು ನಿಯೋಗಿಸಿದ್ದು.?

ಪ್ರವಾದಿಯವರು ﷺ: ನೀವು ಅಲ್ಲಾಹನನ್ನು ಮಾತ್ರವೇ ಆರಾಧನೆ ಮಾಡಿರಿ, ಅವನ ಜೊತೆಯಲ್ಲಿ ಇತರರನ್ನು ಪಾಲುದಾರರನ್ನಾಗಿ ಮಾಡಬೇಡಿರಿ, ಕುಟುಂಬ ಸಂಬಂಧಗಳನ್ನು ನೆಲೆ ನಿಲ್ಲಿಸಿರಿ ಎಂದು.

ಅಂರ್: ಈಗ ಯಾರೆಲ್ಲ ತಮ್ಮನ್ನು ಒಪ್ಪಿಕೊಂಡಿದ್ದಾರೆ.?

ಪ್ರವಾದಿಯವರು ﷺ: ಇಬ್ಬರು ಅದರಲ್ಲಿ ಒಬ್ಬರು ಗುಲಾಮನಾಗಿರುವರು,

ಇದನ್ನು ಕೇಳಿದ ತಕ್ಷಣವೇ ನಾನು ಅವರನ್ನು ಅಂಗೀಕರಿಸಲು ತಯಾರದೆನು. ಪ್ರವಾದಿಯವರು ﷺ ತಮ್ಮ ಕೈಯನ್ನು ಮುಂದೆ ಚಾಚಿದಾಗ, ನಾನು ಅವರ ಕೈಯನ್ನು ಹಿಡಿದು ಸತ್ಯ ವಿಶ್ವಾಸದ ಒಪ್ಪಂದವನ್ನು ಅಂಗೀಕರಿಸಿದೆನು. ನಂತರ ನಾನು ಅವರಲ್ಲಿ, ಓ ಪ್ರವಾದಿಯವರೆ ﷺ ಈಗ ನಾನು ನಿಮ್ಮನ್ನು ಸಂಪೂರ್ಣವಾಗಿ ಅಂಗೀಕರಿಸಿದೆ ಅಲ್ವೇ, ಹಾಗಾಗಿ ಇನ್ನುಮುಂದೆ ಇಲ್ಲಿಯೇ ಇರಬಹುದೇ ಎಂದು ಕೇಳಿದೆನು. ಅದಕ್ಕೆ ಪ್ರವಾದಿಯವರು ﷺ, ಸದ್ಯಕ್ಕೆ ಬೇಡ, ಈಗ ನಿಮಗೆ ಇಲ್ಲಿ ಮುಂದುವರೆಯಲು ಬಹಳಷ್ಟು ಕಷ್ಟಕರ ಆಗಬಹುದು, ಸಮಸ್ಯೆಗಳನ್ನು ಎದುರಿಸಬೇಕಾಗಿಯೂ ಬರಬಹುದು ಹಾಗಾಗಿ ನಾನು ಬಹಿರಂಗವಾಗಿ ಘೋಷಣೆ ಮಾಡಿದ ಬಳಿಕ ನೀವು ವಾಪಸು ಬನ್ನಿರಿ. ಈಗ ನೀವು ನಿಮ್ಮ ಊರಿಗೆ ತಿರುಗಿ ಮರಳಿರಿ ಎಂದು ಹೇಳಿದರು.

ನಾನು ತಿರುಗಿ ನನ್ನ ಊರಿಗೆ ಮರಳಿ ಬಂದು, ಒಳ್ಳೆಯ ರೀತಿಯಲ್ಲಿ ಸತ್ಯ ವಿಶ್ವಾಸದೊಂದಿಗೆ ಜೀವಸ ತೊಡಗಿದೆನು. ಪ್ರವಾದಿಯವರ ﷺ ಪ್ರತಿಯೊಂದು ವಿಷಯಗಳನ್ನು ನಾನು ತಿಳಿಯುತ್ತಲೇ ಇದ್ದೆನು. ಹೀಗಿರುವಾಗ ಪ್ರವಾದಿಯವರು ﷺ ಮದೀನಕ್ಕೆ ಹಿಜಿರ (ಪಲಾಯನ) ನಡೆಸಿರುವರು ಎಂಬ ಮಾಹಿತಿಯು ನನಗೆ ಲಭಿಸಿತು. ನಾನು ಮದೀನಕ್ಕೆ ತೆರಳಿ ಅಲ್ಲಿ ಪ್ರವಾದಿಯವರಲ್ಲಿ ﷺ ನನ್ನ ಪರಿಚಯವಿದೆಯೆ.? ಎಂದು ಕೇಳಿದಾಗ. ನೀವು ನನ್ನನ್ನು ಭೇಟಿಯಾಗಲು ಮಕ್ಕಾ ನಗರಕ್ಕೆ ಬಂದಿದ್ರಿ ಅಲ್ವಾ.? ಎಂದು ಹೇಳಿದರು. ತಮಗೆ ಲಭಿಸಿದ ಜ್ಞಾನಗಳನ್ನು ನನಗೆ ಕಲಿಸಿರಿ ಎಂದು ವಿನಂತಿಸಿದಾಗ ಪ್ರವಾದಿಯವರು ﷺ ಕಲಿಸಲು ಮುಂದಾದರು.

Mahabba Campaign Part-62/365

ಖಾಲಿದ್ ಬಿನ್ ಸಈದ್ (ರಲಿಯಲ್ಲಾಹ್ ಅನ್’ಹು)
ಇಸ್ಲಾಮ್ ಸ್ವೀಕರಿಸಿದ ನಾಲ್ಕನೆ ವ್ಯಕ್ತಿ ಎನ್ನುವ ಪ್ರಯೋಗ ಇತಿಹಾಸದಲ್ಲಿ ಬಹಳಷ್ಟು ಜನರಿಗೆ ಕಾಣಬಹುದು. ಅದರಲ್ಲಿ ಒಬ್ಬರಾಗಿದ್ದರು ಖಾಲಿದ್ ಬಿನ್ ಸಈದ್ (ರ). ಇವರು ಇಸ್ಲಾಮ್ ಸ್ವೀಕರಿಸುವುದರ ಹಿಂದೆ ಅಬೂಬಕ್ಕರ್’ರವರ (ರ) ಸಹಾಯವೂ ಬಹಳಷ್ಟಿದೆ. ಖುರೈಷಿಗಳಲ್ಲಿ ಗಣ್ಯ ವ್ಯಕ್ತಿಯಾಗಿದ್ದ ಆಸ್ ಬಿನ್ ಉಮಯ್ಯರವರ ಮಗನಾಗಿದ್ದರು ಖಾಲಿದ್’ರ (ರ) ತಂದೆ ಸಈದ್. ಹಾಗಾಗಿ ಅವರೂ ಕೂಡ ಬಹಳಷ್ಟು ಗೌರವಿಸಲ್ಪಡುವ ವ್ಯಕ್ತಿಯೂ ಕೂಡ ಆಗಿದ್ದರು.

ಖಾಲಿದ್’ರ ಮನ ಪರಿವರ್ತನೆಗೆ ಕಾರಣವಾದ, ಅವರಿಗೆ ಬಿದ್ದ ಕನಸಿನ ಕುರಿತು ತಿಳಿಯೋಣ. ಬಹಳ ರಾಕ್ಷಸಿಯವಾಗಿ ಹೊತ್ತಿ ಉರಿಯುತ್ತಿರುವ ಬೆಂಕಿಯ ಮುಂದೆ ಖಾಲಿದ್ (ರ) ನಿಂತಿದ್ದರು. ಅವರ ತಂದೆ ಸಈದ್ ಆ ಅಗ್ನಿಕುಂಡಕ್ಕೆ ಅವರನ್ನು ದೂಡಿ ಹಾಕಲು ಪ್ರಯತ್ನಿಸುತ್ತಿದ್ದರು, ಅಷ್ಟರಲ್ಲೇ ಮುಹಮ್ಮದ್’ರು ﷺ ಬಂದು ಅವರ ಸೊಂಟವನ್ನು ಹಿಡಿದು ಆ ಅಗ್ನಿಕುಂಡದಿಂದ ಅವರನ್ನು ರಕ್ಷಿಸಿದರು. ಈ ಭಯಾನಕವಾದ ದೃಶ್ಯವನ್ನು ಕಂಡ ಖಾಲಿದ್ (ರ) ಬಹಳಷ್ಟು ಭಯಗೊಂಡಿದ್ದರು. ಅವರು ಈ ಕನಸನ್ನು ತನ್ನ ಗೆಳೆಯನಾದ ಅಬೂಬಕ್ಕರ್’ರವರ (ರ) ಬಳಿ ತಿಳಿಸಿದರು. ಅಬೂಬಕ್ಕರ್’ರವರು ಇಸ್ಲಾಮ್ ಸ್ವೀಕರಿಸಿದ ಮರುದಿವಸವಾಗಿತ್ತು ಈ ಘಟನೆ ನಡೆದಿದ್ದು. ಅವರು ಖಾಲಿದ್’ರ (ರ) ಬಳಿ ಬಂದು, ಓ ಖಾಲಿದ್ ನಿಮಗೆ ಅಲ್ಲಾಹನು ಒಳಿತನ್ನು ವಿಧಿಸಿದ್ದಾನೆಂದು ನನಗೆ ಅನಿಸುತ್ತಿದೆ. ಕಾರಣ ಮುಹಮ್ಮದ್ ﷺ ಬಿನ್ ಅಬ್ದುಲ್ಲಾಹ್’ರವರು ಅಲ್ಲಾಹನ ಸಂದೇಶ ವಾಹಕರಾಗಿ ನಿಯೋಗಿಸಲ್ಪಟ್ಟಿದ್ದಾರೆ. ನೀವು ತಕ್ಷಣವೇ ಅವರ ಬಳಿ ಹೋಗಿ, ಪ್ರವಾದಿಯವರನ್ನು ﷺ ಹಿಂಬಾಲಿಸಿರಿ. ನಿಮ್ಮ ಎಲ್ಲಾ ಸಮಸ್ಯೆಗಳಿಗೂ ಆಗಲೇ ಪರಿಹಾರ ಸಿಗುತ್ತದೆ ಎಂದು ಹೇಳಿದರು. ಖಾಲಿದ್ ತಕ್ಷಣವೇ ಅಲ್ಲಿಂದ ಹೊರಟು, ಪ್ರವಾದಿಯವರು ﷺ ಸನ್ನಿಧಿಗೆ ಬಂದು, ಇಸ್ಲಾಮ್ ಸ್ವೀಕರಿಸಿದರು.
ಅಬೂಬಕ್ಕರ್’ರವರ (ರ) ನಂತರ ಇಸ್ಲಾಮ್ ಸ್ವೀಕರಿಸಿದ ವ್ಯಕ್ತಿ ಎಂಬ ಸ್ಥಾನ ಇರುವುದು ಖಾಲಿದ್’ಗೆ (ರ) ಆಗಿದೆ. ಅವರ ಪತ್ನಿ ಉಮೈರ ಬಿಂತ್ ಖಲಫ್ ಕೂಡ ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರು.

ಅಬ್ದುಲ್ಲಾಹಿ ಬಿನ್ ಮಸ್’ವೂದ್’ರಿಗೆ (ರ) ಆರಂಭದಲ್ಲೇ ಇಸ್ಲಾಮ್ ಸ್ವೀಕರಿಸುವ ಭಾಗ್ಯ ಲಭಿಸಿತ್ತು. ನಂತರ ಪ್ರವಾದಿಯವರ ﷺಆತ್ಮೀಯ ಆತ್ಮೀಯ ಮಿತ್ರರ ಸಾಲಿನಲ್ಲಿ ಸೇರುವ ಭಾಗ್ಯವೂ ಲಭಿಸಿತು. ಅಬ್ದುಲ್ಲಾಹಿ ಬಿನ್ ಮಸ್’ವೂದ್ (ರ) ಅವರು ಇಸ್ಲಾಮ್ ಸ್ವೀಕರಿಸಿದ ಘಟನೆಯ ಕುರಿತು ಕೂಡ ತಿಳಿಯೋಣ. ಇಮಾಮ್ ಅಹ್ಮದ್ (ರ) ಮುಸ್’ನದ್’ರವರಿಂದ ಉಲ್ಲೇಖಿಸುವ ಹದೀಸ್’ನಲ್ಲಿ , ಸ್ವತಃ ಇಬ್’ನು ಮಸ್’ವೂದರೆ (ರ) ವಿವರಿಸುವುದು ಕಾಣಬಹುದು. ನಾನು ಹದಿಹರೆಯದ ಬಾಲಕನಾಗಿದ್ದ ಸಂದರ್ಭದಲ್ಲಿ, ಉಖ್’ಬತ್ ಬಿನ್ ಅಬೀ ಮುಐತಿನಬಳಿ ಬಳಿ ಮೇಕೆಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದೆ. ಹೀಗಿರುವಾಗ ಒಮ್ಮೆ ನಾನು ಹುಲ್ಲುಗಾವಲಿನಲ್ಲಿ ಮೇಕೆಗಳನ್ನು ಮೇಯಿಸುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಒಬ್ಬರು ಓಡಿ ಬಂದರು. ಅದು ಮುಹಮ್ಮದ್’ರು ﷺ ಹಾಗೂ ಅಬೂಬಕ್ಕರ್ (ರ) ಆಗಿರುವರೆಂದು ನಂತರ ಅರ್ಥವಾಯಿತು. ಮಕ್ಕಾದ ವಿಗ್ರಹ ಆರಾಧಕರ ಕಿರುಕುಳದಿಂದ ಪಾರಾಗಿ ಬಂದಿದ್ದರು. ಅವರು ನನ್ನ ಬಳಿ ಬಂದು, ಮಗನೇ ನಮಗೆ ಕುಡಿಯಲು ಹಾಲು ಸಿಗಬಹುದೇ ಎಂದು ಕೇಳಿದಾಗ, ನಾನು ಈ ಮೇಕೆಗಳ ಯಜಮಾನನಲ್ಲ, ಕಾವಲುಗಾರ ಮಾತ್ರವಾಗಿರುವುದರಿಂದ ಹಾಲು ಕೊಡಲು ಸಾಧ್ಯವಿಲ್ಲ ಅಂದೆನು. ಅದಕ್ಕೆ ಇನ್ನೂ ಕೂಡ ಮರಿ ಹಾಕದ, ಕೆಚ್ಚಲಲ್ಲಿ ಹಾಲಿಲ್ಲದ ಮೇಕೆಗಳು ನಿನ್ನ ಬಳಿ ಇದೆಯೇ ಎಂದು ಕೇಳಿದರು. ನಾನು ಹಾಲಿಲ್ಲದ, ಕೆಚ್ಚಲು ಹಿಗ್ಗಿ ಹೋಗಿದ್ದ ಒಂದು ಮೇಕೆಯನ್ನು ತೋರಿಸಿ ಕೊಟ್ಟೆನು. ಪ್ರವಾದಿಯವರು ﷺ ಆ ಮೇಕೆಯ ಬಳಿ ಹೋಗಿ, ಏನೋ ಕೆಲವು ಮಂತ್ರಗಳನ್ನು ಹೇಳುತ್ತಾ, ಅವುಗಳ ಕೆಚ್ಚಲನ್ನು ಮೆಲ್ಲಗೆ ಕೈಗಳಿಂದ ಉಜ್ಜಿದರು. ಅಬೂಬಕ್ಕರ್’ರವರು (ರ) ಒಳ ಭಾಗಕ್ಕೆ ಸ್ವಲ್ಪ ಕುಗ್ಗಿ ಹೋಗಿದ್ದ ಪಾತ್ರೆಯ ರೂಪದ ಸಣ್ಣ ಬಂಡೆ ಕಲ್ಲನ್ನು, ಪಾತ್ರೆಯ ಬದಲಿಗೆ ಚಾಚಿ ಹಿಡಿದರು. ಏನದ್ಭುತ ಆ ಪಾತ್ರೆಯ ರೂಪದ ಕಲ್ಲಿನ ಒಳಗೆ ಹಾಲು ತುಂಬಿ ಹೋಯಿತು. ಪ್ರವಾದಿಯವರು ﷺ ಸಂತೋಷದಿಂದ ಹಾಲು ಕುಡಿದರು, ನಂತರ ಅಬೂಬಕ್ಕರ್’ರವರು (ರ) ಕೂಡ ಹಾಲು ಕುಡಿದು ನನ್ನ ಬಳಿ ಆ ಕಲ್ಲಿನ ಪಾತ್ರೆಯನ್ನು ಚಾಚಿದರು. ನಾನು ಕೂಡ ಹೊಟ್ಟೆ ತುಂಬಾ ಹಾಲು ಕುಡಿದೆನು. ನಂತರ ಪ್ರವಾದಿಯವರು ﷺ ಮೇಕೆಯ ಕೆಚ್ಚಲ ಬಳಿ ಬಂದು ಮೊದಲಿನ ಹಾಗೆ ಆಗಲಿ ಎಂದು ಹೇಳಿದಾಗ, ಮೇಕೆಯ ಕೆಚ್ಚಲು ಪೂರ್ವ ಸ್ಥಿತಿಗೆ ಮರಳಿತು.

ಈ ದೃಶ್ಯವು ಇಬ್’ನು ಮಸ್’ವೂದ್’ರವರ (ರ) ಮನಸ್ಸಿಗೆ ಆಳವಾಗಿ ಪರಿಣಾಮ ಬೀರಿತು. ಅವರು ಇಸ್ಲಾಮ್ ಸ್ವೀಕರಿಸಿದರು. ಅಂದು ಇದ್ದ ಕೇವಲ ಆರು ಜನ ಮುಸ್ಲಿಮರಲ್ಲಿ, ನಾನು ಆರನೇ ವ್ಯಕ್ತಿ ಆಗಿದ್ದೆನು ಎಂದು ಅವರು ಖುದ್ದಾಗಿ ಪರಿಚಯ ಪಡಿಸುತ್ತಿದ್ದರು.
ಸಾಮಾನ್ಯ ಎತ್ತರವೂ ಇಲ್ಲದ, ಗಿಡ್ಡ ಮನುಷ್ಯರಾಗಿದ್ದರು ಅವರು. ಒಮ್ಮೆ ಅವರ ಕಾಲಿನ ಪಾದರಕ್ಷೆಯನ್ನು ಕಂಡು ಅವರ ಕೆಲವು ಗೆಳೆಯರು ಗೇಲಿ ಮಾಡಿದಾಗ, ಪ್ರವಾದಿಯವರು ﷺ ಬಂದು ಅಲ್ಲಾಹನಾಣೆ.! ಅವರ ಕಾಲಿನ ಮಹತ್ವವು ನಾಳೆ ಪರಲೋಕದಲ್ಲಿ ಉಹ್’ದ ಪರ್ವತಕ್ಕಿಂತಲೂ ಅಧಿಕ ಭಾರವಾಗಿರುತ್ತದೆ ಎಂದು ಹೇಳಿದ್ದರು. ಜಿಬ್’ರೀಲ್’ರವರು (ಅ) ತಲುಪುಸಿದ ಪವಿತ್ರ ಕುರ್’ಆನನ್ನು ಅದೇ ರೀತಿಯಲ್ಲಿ ಕಲಿಯಬೇಕಾದರೆ, ಇಬ್’ನು ಮಸ್’ವೂದರಿಂದ ಕಲಿಯಿರಿ ಎಂದು ಪ್ರವಾದಿಯವರು ﷺ ಅವರ ಕುರಿತು ಪ್ರಶಂಸಿಸಿದ್ದರು.

Mahabba Campaign Part-63/365

ಅಬೂದರ್ರ್ ಅಲ್ ಗಿಫಾರಿ (ರಲಿಯಲ್ಲಾಹ್)
ಮಕ್ಕಾ ಹಾಗೂ ಮದೀನದ ನಡುವೆ ಇರುವ ಸಫ್’ರಾಅ್ ಕಣಿವೆಯಲ್ಲಿ ಜೀವಿಸುತ್ತಿದ್ದ ಜನಾಂಗವಾಗಿತ್ತು ಗಿಫಾರ್. ಆ ಜನಾಂಗದ ಗಣ್ಯ ವ್ಯಕ್ತಿಯಾಗಿದ್ದರು ಅಬೂದರ್ರ್ (ರ). ಮಕ್ಕಾದಲ್ಲಿ ಮುಹಮ್ಮದ್’ರು ﷺ ಪ್ರವಾದಿತ್ವದ ಘೋಷಣೆ ಮಾಡಿದ ವಿಷಯವು ಅವರಿಗೆ ತಿಳಿದಾಗ, ಅವರು ತನ್ನ ಸಹೋದರ ಅನೀಸನ್ನು ಕರೆದು, ನೀನು ತಕ್ಷಣವೇ ಮಕ್ಕಾ ನಗರಕ್ಕೆ ತೆರಳಿ ಪ್ರವಾದಿತ್ವದ ಘೋಷಣೆ ಮಾಡಿದ ಪ್ರವಾದಿಯ ಕುರಿತು ಸ್ಪಷ್ಟವಾದ ಮಾಹಿತಿ ಪಡೆದು ಬರಬೇಕು. ಎಂದು ಹೇಳಿ, ಮಕ್ಕಾ ನಗರಕ್ಕೆ ಕಳುಹಿಸಿದರು. ಮಕ್ಕದಿಂದಾ ಹಿಂತಿರುಗಿ ಬಂದ ಅನೀಸ್’ನಿಂದ ಎಲ್ಲಾ ವಿವರಗಳನ್ನು ಕೇಳಿದಾಗ, ಎಲ್ಲವನ್ನು ವಿವರಿಸ ತೊಡಗಿದರು. ನಾನು ಆ ಪ್ರವಾದಿಯವರನ್ನು ಭೇಟಿಯಾದೆನು, ಅಲ್ಲಾಹನು ನಿಯೋಗಿಸಿದ ಪ್ರವಾದಿ ಆಗಿರುವರು ಎಂದೂ, ಏಕನಾದ ಅಲ್ಲಾಹನನ್ನು ಮಾತ್ರವೇ ಆರಾಧನೆ ನಡೆಸಬೇಕು, ಉತ್ತಮ ಸ್ವಭಾವದೊಂದಿಗೆಯೇ ಜೀವಿಸಬೇಕು ಎಂದಾಗಿದೆ ಅವರು ಹೇಳುತ್ತಿರುವುದು, ಎಂದು ಹೇಳಿದರು. ಸರಿ, ಜನರು ಅವರು ಕುರಿತು ಏನು ಹೇಳುತ್ತಿದ್ದಾರೆ.? ಎಂದು ಅಬೂದರ್ರ್ ಕೇಳಿದಾಗ, ಅವರೊಬ್ಬ ಕವಿ ಆಗಿರಬಹುದು ಅಥವಾ, ಜ್ಯೋತಿಷಿ, ಮಾಟಗಾರ ಆಗಿರಬಹುದು ಹೀಗೆ ಏನೇನೋ ಹೇಳ್ತಾರೆ. ಆದರೆ ಆ ಜನರು ಹೇಳುವುದು ಶುದ್ಧ ಸುಳ್ಳಾಗಿದೆ, ಎಂದು ಕವಿಯೂ ಕೂಡ ಆಗಿದ್ದ ಅನೀಸ್ ಹೇಳಿದಾಗ, ನೀನು ಹೇಳಿದ ಮಾತು ನನಗೆ ಸಮಾಧಾನ ತರಿಸಲಿಲ್ಲ ಹಾಗಾಗಿ ನಾನೇ ಖುದ್ದಾಗಿ ಮಕ್ಕ ನಗರಕ್ಕೆ ಹೋಗುತ್ತೇನೆ ಎಂದು ಹೇಳಿದರು. ಅದಕ್ಕೆ ಅನೀಸ್, ಸರಿ ಆದರೆ ಒಂದು ಮಾತು. ನೀವು ಬಹಳ ಗಮನ ಹರಿಸಿ ಹೋಗಬೇಕು, ಕಾರಣ ಮಕ್ಕಾ ನಿವಾಸಿಗಳು ಪ್ರವಾದಿಯವರನ್ನು ﷺ ಒಬ್ಬ ಶತ್ರುವಿನ ರೂಪದಲ್ಲಾಗಿದೆ ನೋಡುತ್ತಿರುವುದು. ನೀವು ಅವರಲ್ಲಿ ಪ್ರವಾದಿಯವರ ﷺ ಕುರಿತು ಕೇಳಿದರೆ, ಬಹುಶಃ ನಿಮಗೂ ಅವರು ತೊಂದರೆ ಕೊಡಬಹುದು ಎಂದು ಹೇಳಿದರು. ಅಬೂದರ್ರ್ (ರ) ಕುಡಿಯಲು ಸ್ವಲ್ಪ ನೀರು ಹಾಗೂ ಒಂದು ಊರುಗೋಲಿನ ಜೊತೆಯಲ್ಲಿ ಮಕ್ಕಾ ನಗರಕ್ಕೆ ಯಾತ್ರೆ ತೆರಳಿದರು. ಮಕ್ಕಾ ನಗರಕ್ಕೆ ತಲುಪಿದ ನಂತರ, ಮಸ್ಜಿದಿಗೆ ಹೋದರೂ ಯಾರಲ್ಲೂ ಕೇಳುವ ಧೈರ್ಯ ಅವರಿಗೆ ಬರಲಿಲ್ಲ.

ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು. ಅಬೂದರ್ರ್ ಒಬ್ಬರ ಬಳಿ ಹೋಗಿ, ‘ಸಾಬಿಈ’ ಎಂದು ಹೇಳುವ ಆ ವ್ಯಕ್ತಿಯನ್ನು ಒಮ್ಮೆ ಕಾಣಲು ಸಾಧ್ಯವಿದೆಯೇ.? ಎಂದು ಬಹಳ ರಹಸ್ಯವಾಗಿ ಕೇಳಿದರು. ಸತ್ಯ ವಿಶ್ವಾಸಿಗಳನ್ನು ಕರೆಯುವ ಪ್ರಯೋಗವಾಗಿತ್ತು ‘ಸಾಬಿಈ’ ಎಂದು. ಇದನ್ನು ಕೇಳಿದ ತಕ್ಷಣವೇ, ಆ ವ್ಯಕ್ತಿ ಇಲ್ಲೊಬ್ಬ ಸಾಬಿಈ ಬಂದಿದ್ದಾನೆಂದು ಕೂಗಿ ಹೇಳತೊಡಗಿದರು. ಅಲ್ಲಿ ನೆರೆದಿದ್ದ ಎಲ್ಲಾ ಜನರು ಅಬೂದರ್ರ್ (ರ) ಅವರ ಮೇಲೆ ಹಲ್ಲೆ ಮಾಡಲು ಮುಂದಾದರು. ಆ ಕಣಿವೆಯಲ್ಲಿ ನೆರೆದಿದ್ದ ಜನರೆಲ್ಲರೂ ಸೇರಿ ಅಬೂದರ್ರ್’ರವರ (ರ) ಮೇಲೆ ಕಲ್ಲು ತೂರಾಟ ನಡೆಸಿದಾಗ, ಅವರು ಪ್ರಜ್ಞೆ ತಪ್ಪಿ ಬಿದ್ದು ಬಿಟ್ಟರು. ಎಚ್ಚರಗೊಂಡಾಗ ಶರೀರದ ಮೇಲೆ ಸಂಪೂರ್ಣವಾಗಿ ಕೆಂಪು ಮಣ್ಣು ಕವಿದಿತ್ತು. ನಂತರ ಅಲ್ಲಿಂದ ಎದ್ದು ಝಮ್ ಝಮ್ ಬಾವಿಯ ಬಳಿ ತೆರಳಿ ಸ್ನಾನ ಮಾಡಿ, ಹೊಟ್ಟೆ ತುಂಬಾ ನೀರು ಕುಡಿದರು. ಹೀಗೆ ಮೂವತ್ತು ದಿವಸವೂ ಕೂಡ ಅದೇ ಬಾವಿಯ ಪಕ್ಕದಲ್ಲಿ ಕಾಲ ಕಳೆದರು. ಅಲ್ಲಿ ಅವರು ಕೇವಲ ಝಮ್ ಝಮ್ ನೀರು ಮಾತ್ರವಾಗಿತ್ತು ಕುಡಿಯುತ್ತಿದ್ದದ್ದು. ಅವರಿಗೆ ಹಸಿವಿನ ಯಾವುದೇ ಸಂಕಟವೂ ಕೂಡ ಇರಲಿಲ್ಲ, ಬದಲಾಗಿ ಅವರ ಶರೀರವು ದಷ್ಟ ಪುಷ್ಟವಾಗಿ ಬೆಳೆದಿತ್ತು.

ಅಬೂದರ್ರ್ (ರ) ವಿವರಿಸುತ್ತಾರೆ, ಒಂದು ಹುಣ್ಣಿಮೆಯ ರಾತ್ರಿಯಲ್ಲಿ, ಖುರೈಷಿಗಳು ಗಾಢವಾಗಿ ನಿದ್ರಿಸುತ್ತಿರುವ ಸಂದರ್ಭವಾಗಿತ್ತು ಅದು. ನಾನು ಕಅಬಾಲಯದ ಬಳಿ ತೆರಳಿದಾಗ, ಇಬ್ಬರು ಮಹಿಳೆಯರನ್ನು ಬಿಟ್ಟು ಅಲ್ಲಿ ಯಾರು ಕೂಡ ಇರಲಿಲ್ಲ. ಅವರು ಮಾತ್ರ ‘ಇಸಾಫ್’, ‘ನಾಯಿಲ’ ಎನ್ನುವ ದೇವರನ್ನು ಕರೆದು ಪ್ರಾರ್ಥಿಸುತ್ತಿದ್ದರು. ಅವರು ಕಅಬಾದ ಪ್ರದಕ್ಷಿಣೆ ಹಾಕುತ್ತಾ ನನ್ನ ಬಳಿ ತಲುಪಿದಾಗ. ನಾನು ಅವರಲ್ಲಿ, ನೀವು ಈ ಕರೆದು ಪ್ರಾರ್ಥಿಸುವ ಎರಡು ದೇವರನ್ನು ಪರಸ್ಪರ ಮದುವೆ ಮಾಡಿ ಕೊಟ್ಟು ಬಿಡಿ ಎಂದು ಗೇಲಿ ಮಾಡಿದಾಗ, ಅವರು ಏನೂ ಪ್ರತಿಕ್ರಿಯೆ ನೀಡಲಿಲ್ಲ. ಪುನಃ ಪ್ರದಕ್ಷಿಣೆ ಹಾಕುತ್ತಾ, ನನ್ನ ಬಳಿ ತಲುಪಿದಾಗ ನಾನು ಪುನಃ ಅದೇ ರೀತಿ ಅಂದೆನು. ಇದನ್ನು ಕೇಳಿದ ಅವರು ನಮ್ಮ ಜನರನ್ನು ಇಲ್ಲಿ ಸುತ್ತಮುತ್ತಲು ಕಾಣುತ್ತಿಲ್ಲವಲ್ಲ ಎಂದು ಹೇಳುತ್ತಾ, ಅವರು ಹೊರಗೆ ನಡೆದರು.

ಆದೇ ಸಮಯಕ್ಕೆ ಮುಹಮ್ಮದ್’ರು ಹಾಗೂ ಅಬೂಬಕ್ಕರ್’ರವರು ಕಅಬಾಲಯದ ಬಳಿ ಬಂದು ನಿಂತರು. ಅವರು ಆ ಮಹಿಳೆಯರಲ್ಲಿ ಏನಾಯಿತು ಎಂದು ಕೇಳಿದಾಗ, ಅವರು ಕಅಬಾಲಯದ ಬಳಿ, ಒಬ್ಬ ಸಾಬಿಈ ಇದ್ದಾರೆ. ಅವರು ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ ಎಂದು ಹೇಳಿದರು.
ಪ್ರವಾದಿಯವರು ಕಅಬಾದ ಬಳಿ ಬಂದು, ಹಜರುಲ್ ಅಸ್’ವದನ್ನು ಚುಂಬಿಸಿ, ಇಬ್ಬರೂ ಕೂಡ ಕಅಬಾದ ತ್ವವಾಫ್ (ಪ್ರದಕ್ಷಿಣೆ) ಮಾಡಿದ ನಂತರ, ನಮಾಝ್ ಮಾಡಲು ಆರಂಭಿಸಿದರು. ನಾನು ಅವರ ಬಳಿ ಹೋಗಿ, ಅಸ್ಸಲಾಂ ಅಲೈಕುಂ ಯಾ ರಸೂಲಲ್ಲಾಹ್, ಓ ಅಲ್ಲಾಹುವಿನ ಸಂದೇಶ ವಾಹಕರೇ ನಿಮಗೆ ಸಲಾಂ…

Mahabba Campaign Part-64/365

ಸಲಾಂ ಹೇಳಿ, ಸತ್ಯ ವಿಶ್ವಾಸದ ವಚನವನ್ನು ಹೇಳಿದರು. “ಅಶ್’ಹದು ಅನ್ ಲಾಇಲಾಹ ಇಲ್ಲಲ್ಲಾಹ್… ವ ಅಶ್’ಹದು ಅನ್ನ ಮುಹಮ್ಮದರ್’ರಸೂಲುಲ್ಲಾಹ್ ﷺ…” ಇದನ್ನು ಕೇಳಿದ ತಕ್ಷಣವೇ ಪ್ರವಾದಿಯವರ ﷺ ಮುಖವು ಮಂದಹಾಸ ಭೀರಿತು. ‘ಅಸ್ಸಲಾಂ ಅಲೈಕುಂ’ ಎನ್ನುವ ಶುಭಾಶಯದ ವಾಕ್ಯವನ್ನು ಹೇಳಿದ ಮೊದಲ ವ್ಯಕ್ತಿ ನಾನಾಗಿದ್ದೆನು. ಅದಕ್ಕೆ ಪ್ರವಾದಿಯವರು ﷺ ‘ವಅಲೈಕುಂ ಸಲಾಂ’ ಎಂದು ಹೇಳಿ, ಎಲ್ಲಿಂದ ಬರುತಿದ್ದೀರಿ.? ಎಂದು ಕೇಳಿದರು. ಗಿಫಾರ್ ಜನಾಂಗದ ವ್ಯಕ್ತಿಯಾಗಿರುವೆನು ಎಂದು ಹೇಳಿದಾಗ. ಪ್ರವಾದಿಯವರು ﷺ ಕೈಯಿಂದ ಸನ್ನೆ ಮಾಡುತ್ತಾ, ಬೆರಳನ್ನು ಹಣೆಯ ಮೇಲೆ ಇಟ್ಟರು. ನಾನು ಗಿಫಾರ್ ಬುಡಕಟ್ಟು ಜನಾಂಗಕ್ಕೆ ಸೇರಿದ್ದ ವ್ಯಕ್ತಿಯಾದ ಕಾರಣ ಬಹುಶಃ ಅವರಿಗೆ ಇಷ್ಟವಾಗಲಿಲ್ಲ ಕಾಣಬೇಕು.? ಅಂದುಕೊಂಡು ಪ್ರವಾದಿಯವರ ﷺ ಕೈ ಹಿಡಿಯಲು ಹೋದಾಗ, ಅವರ ಜೊತೆಯಲ್ಲಿದ್ದ ವ್ಯಕ್ತಿ ನನ್ನನ್ನು ತಡೆದರು. ನನಗಿಂತ ಚೆನ್ನಾಗಿ ಪ್ರವಾದಿಯವರ ﷺ ಕುರಿತು ತಿಳಿದಿದ್ದ ವ್ಯಕ್ತಿ ಅವರೇ ಅಲ್ಲವೆ.! ತಕ್ಷಣವೇ ಅವರು ತಲೆ ಎತ್ತಿ, ಎಷ್ಟು ದಿನ ಆಯಿತು ಇಲ್ಲಿಗೆ ಬಂದು, ಎಂದು ಕೇಳಿದರು.? ಮೂವತ್ತು ದಿನವಾಯಿತು ಅಂದಾಗ, ಆಹಾರ ಪಾನೀಯ ಎಲ್ಲಿಂದ ಸಿಕ್ಕಿತು.? ಎಂದು ಕೇಳಿದರು. ಝಮ್ ಝಮ್ ನೀರಲ್ಲದೆ ಇನ್ನೇನು ಸಿಗಲಿಲ್ಲ, ಆದರೂ ಸ್ವಲ್ಪವೂ ಕೂಡ ಹಸಿವು ಆಗಲೇ ಇಲ್ಲ ಎಂದು ಹೇಳಿದೆನು. ಅದಕ್ಕೆ ಪ್ರವಾದಿಯವರು ಝಮ್ ಝಮ್ ಅನುಗ್ರಹಿತ ನೀರಾಗಿದೆ, ಅದು ಆಹಾರಕ್ಕೆ ಆಹಾರವೂ ಆಗುತ್ತದೆ, ಔಷಧಿಗೆ ಔಷಧಿಯೂ ಆಗುತ್ತದೆ ಎಂದು ಹೇಳಿದರು.

ಇಬ್’ನು ಅಬ್ಬಾಸ್’ರವರ (ರ) ಒಂದು ಉಲ್ಲೇಖದಲ್ಲಿ ಅಬೂದರ್ರ್ (ರ) ಹೇಳುವ ಮಾತುಗಳು ಈ ರೀತಿಯಾಗಿದೆ. ನಾನು ಮಕ್ಕಾ ಪಟ್ಟಣಕ್ಕೆ ತಲುಪಿದೆನು. ನನಗೆ ಪ್ರವಾದಿಯವರ ﷺ ಪರಿಚಯವೂ ಇರಲಿಲ್ಲ, ಯಾರಲ್ಲೂ ಕೇಳುವ ಧೈರ್ಯವೂ ಇರಲಿಲ್ಲ. ನಾನು ನೇರವಾಗಿ ಝಮ್ ಝಮ್ ಬಾವಿಯ ಬಳಿ ತೆರಳಿ, ನೀರು ಕುಡಿದು, ಮಸ್ಜಿದಿಗೆ ಹೋಗಿ ಮಲಗಿದೆನು. ಅಷ್ಟೊತ್ತಿಗೆ ಅಲಿಯವರು (ರ) ಬಂದಿದ್ದರು, ಪರ ಊರಿನಿಂದ ಬಂದ ವ್ಯಕ್ತಿಯ ಹಾಗೆ ಕಾಣುತ್ತೀರಿ ಅಲ್ವಾ.? ಎಂದು ಕೇಳಿದಾಗ, ಹೌದು ಎಂದು ಉತ್ತರಿಸಿದೆನು. ಅದಕ್ಕೆ ಅಲಿಯವರು (ರ), ಸರಿ ಹಾಗಾದರೆ ನಡಿರಿ ನಾವು ಮನೆಗೆ ಹೋಗೋಣ, ಎಂದು ಹೇಳಿ ಮನೆಗೆ ಕರೆದುಕೊಂಡು ಹೋದರು. ಅವರು ನನ್ನಲ್ಲಿ ಏನು ಕೇಳದ ಕಾರಣ, ನಾನು ಕೂಡ ಏನೂ ಹೇಳಲಿಲ್ಲ. ಬೆಳಿಗ್ಗೆ ನನ್ನ ವಸ್ತುಗಳನ್ನು ಎತ್ತಿ ಪುನಃ ಮಸ್ಜಿದಿಗೆ ವಾಪಸು ಬಂದು, ಪ್ರವಾದಿಯವರ ﷺ ಬಗ್ಗೆ ಕೆಲವರಲ್ಲಿ ಕೇಳಿದೆನು. ಏನು ಪ್ರಯೋಜನವಾಗಲಿಲ್ಲ, ಹಾಗಾಗಿ ನಾನು ಅಂದೂ ಕೂಡ ಹಾಗೆ ಮಸ್ಜಿದ್’ನಲ್ಲೇ ಮಲಗಿದೆನು. ಅಷ್ಟೊತ್ತಿಗೆ ಪುನಃ ಅಲಿಯವರು (ರ) ಮಸ್ಜಿದ್’ಗೆ ಬಂದು, ಇವತ್ತೂ ಕೂಡ ನಿಮಗೆ ಉಳಿದುಕೊಳ್ಳಲು ಸ್ಥಳ ಸಿಗಲಿಲ್ವಾ.? ಎಂದು ಕೇಳಿದಾಗ, ನಾನು ಇಲ್ಲ ಎಂದು ಉತ್ತರಿಸಿದೆನು. ಸರಿ ಹಾಗಾದರೆ ನನ್ನ ಜೊತೆಯಲ್ಲಿ ಬನ್ನಿ, ಎಂದು ಹೇಳಿ ಅವರು ಜೊತೆಯಲ್ಲಿ ಕರೆದುಕೊಂಡು ಹೋದರು. ಅವತ್ತು ಕೂಡ ಏನೂ ಕೇಳಿರಲಿಲ್ಲ. ಮರು ದಿನವು ಕೂಡ ಅದೇ ರೀತಿ ಪುನರಾವರ್ತನೆಯಾಗಿತ್ತು. ಅಂದು ಅಲಿಯವರು (ರ) ನೀವು ಈ ಊರಿಗೆ ಬಂದ ಉದ್ದೇಶ ಏನೆಂದು ಹೇಳಿಲ್ವಾ.? ಅಲ್ವಾ ಎಂದು ಕೇಳಿದಾಗ, ನೀವು ಅದನ್ನು ಗುಟ್ಟಾಗಿ ಇಡುವುದಾದರೆ ನಾನು ಹೇಳುತ್ತೇನೆ ಎಂದು ಹೇಳಿದೆನು. ಇನ್ನೊಂದು ಉಲ್ಲೇಖದ ಪ್ರಕಾರ ನೀವು ನನಗೆ ಮಾರ್ಗದರ್ಶನ ನೀಡುವುದಾದರೆ ನಾನು ಹೇಳುತ್ತೇನೆ ಎಂದು ಹೇಳಿದರು. ಅಲಿಯವರು (ರ) ಅದಕ್ಕೆ ಸಮ್ಮತಿಸಿದರು. ನಾನು ಎಲ್ಲಾ ವಿಷಯವನ್ನು ವಿವರಿಸಿದಾಗ, ನಿಮಗೆ ಮಾರ್ಗದರ್ಶನ ಖಂಡಿತ ಲಭಿಸುತ್ತದೆ. ನೀವು ಹುಡುಕಿ ಬಂದ ವ್ಯಕ್ತಿ ಅಲ್ಲಾಹನ ಸಂದೇಶ ವಾಹಕರಾಗಿರುತ್ತಾರೆ. ಬೆಳಿಗ್ಗೆ ನನ್ನ ಜೊತೆಯಲ್ಲಿ ಬನ್ನಿ, ದಾರಿಯಲ್ಲಿ ಏನಾದರೂ ಅಪಾಯ ಬಂದರೆ.? ನಾನು ನೀರು ತರಲು ಬಂದವರ ಹಾಗೆ ಪಕ್ಕಕ್ಕೆ ಸರಿದು ಹೋಗುತ್ತೇನೆ, ಆದರೆ ನೀವು ಮಾತ್ರ ಮುಂದೆ ಹೋಗುತ್ತಲೇ ಇರಬೇಕು. ಅಥವಾ ಚಪ್ಪಲು ಸರಿ ಮಾಡಲು ನಿಂತವರ ಹಾಗೆ ದಾರಿಯ ಪಕ್ಕಕ್ಕೆ ಸರಿದು, ಸ್ವಲ್ಪ ಕಳೆದು ನಾನು ಮುಂದೆ ಹೋದಾಗ ನನ್ನನ್ನು ಹಿಂಬಾಲಿಸುತ್ತಾ, ನಾನು ಹೋದ ದಾರಿಯಲ್ಲೇ ಬರಬೇಕು ಎಂದು ಹೇಳಿದರು.

ನಾವು ಬೆಳಿಗ್ಗೆ ನಡೆದು ಪ್ರವಾದಿಯವರ ﷺ ಬಳಿ ತಲುಪಿದೆವು. ನಾನು ಪ್ರವಾದಿಯವರಲ್ಲಿ ﷺ ಇಸ್ಲಾಮಿನ ಕುರಿತು ಹೇಳಿ ಕೊಡುವಿರ.? ಎಂದು ಕೇಳಿದಾಗ, ಪ್ರವಾದಿಯವರು ﷺ ಹೇಳಿ ಕೊಟ್ಟರು. ನಾನು ಇಸ್ಲಾಂ ಸ್ವೀಕರಿಸಿದೆನು. ನಂತರ ನನ್ನಲ್ಲಿ ನೀವು ಇದನ್ನು ಸದ್ಯಕ್ಕೆ ಗುಟ್ಟಾಗಿ ಇಡಬೇಕು, ಈಗ ಊರಿಗೆ ಹಿಂತಿರುಗಿ ಹೋಗಿ, ಊರಲ್ಲಿಯೂ ಕೂಡ ವಿಷಯವನ್ನು ತಿಳಿಸಿರಿ. ನಾವು ಸಾರ್ವಜನಿಕವಾಗಿ ಘೋಷಣೆ ಮಾಡಿದ ನಂತರ ನೀವು ಇಲ್ಲಿಗೆ ಬಂದರೆ ಸಾಕು ಎಂದು ಹೇಳಿದರು. ನಿಮ್ಮನ್ನು ಸಂದೇಶ ವಾಹಕನಾಗಿ ನಿಯೋಗಸಿದವನ ಮೇಲಾಣೆ.! ನಾನು ಅವರ ಮುಂದೆ ಸಾರ್ವಜನಿಕವಾಗಿಯೇ ಕೂಗಿ ಹೇಳುವೆನು ಎಂದು ಹೇಳಿದೆನು.

Mahabba Campaign Part-65/365

ಸಲಾಂ ಹೇಳಿ ಅಲ್ಲಿಂದ ಹಿಂತಿರುಗಿ ಬಂದೆನು. ಕಅಬಾದ ಬಳಿ ತಲುಪಿದಾಗ, ಅಲ್ಲಿ ಬಹಳಷ್ಟು ಖುರೈಶ್ ನಾಯಕರು ಇದ್ದರು. ನಾನು ಅಲ್ಲಿಗೆ ಬಂದು ಉಚ್ಛ ಸ್ವರದಲ್ಲಿ ‘ಅಶ್’ಹದು ಅನ್’ಲಾಯಿಲಾಹ ಇಲ್ಲಲ್ಲಾಹ್…’ ಎಂದು ಹೇಳಿ, ನಾನು.ಅಲ್ಲಾಹನನ್ನು ಆರಾಧನಾಗ್ಯ ಸ್ವೀಕರಿಸುತ್ತಿದ್ದೇನೆ, ಅಲ್ಲಾಹನಲ್ಲದೆ ಬೇರಾರು ಆರಾಧನೆಗೆ ಅರ್ಹರು ಇಲ್ಲವೆಂದೂ, ಮುಹಮ್ಮದ್’ರು ﷺ ಅಲ್ಲಾಹನ ಸಂದೇಶ ವಾಹಕರಾಗಿರುವರೆಂದೂ ನಾನು ಒಪ್ಪಿಕ್ಕೊಳ್ಳುತ್ತೇನೆ ಎಂದೂ ಉಚ್ಛ ಧ್ವನಿಯಲ್ಲಿ ಹೇಳಿದಾಗ. ತಕ್ಷಣವೇ ಅವರು ಆ ‘ಸಾಬಿಯಿ’ಯನ್ನು ಹಿಡಿಯಿರಿ ಎಂದೂ ಹೇಳುತ್ತಾ, ಒಂದು ಗುಂಪೇ ಅಲ್ಲಿಗೆ ಬಂದು ಬಿಟ್ಟಿತು. ನನ್ನನ್ನು ಸಾಯಿಸುವಷ್ಟು ನನ್ನ ಮೇಲೆ ಹಲ್ಲೆ ಮಾಡಿ, ನನ್ನನ್ನು ಕೆಳಗೆ ಹಾಕಿ ಬಿಟ್ಟರು. ತಕ್ಷಣವೇ ಆ ಸ್ಥಳಕ್ಕೆ ಅಬ್ಬಾಸ್’ರವರು (ರ) ಬಂದು ನೀವು ಇವರನ್ನು ತಕ್ಷಣವೇ ಬಿಟ್ಟು ಬಿಡದಿದ್ದರೆ, ಖಂಡಿತ ನೀವು ದೊಡ್ಡ ಅಪಾಯವನ್ನೇ ಎದುರಿಸಬೇಕಾಗುತ್ತದೆ. ಕಾರಣ ಇವರು ಗಿಫಾರಿ ಜನಾಂಗದ ವ್ಯಕ್ತಿಯಾಗಿದ್ದಾರೆ, ಇವರ ಊರಿನ ಮೂಲಕವೇ ನಮ್ಮ ವ್ಯಾಪಾರ ಸಂಘವು ಹಾದು ಹೋಗಬೇಕಾಗಿದೆ. ಎಂದು ಹೇಳಿದಾಗ ನನ್ನನ್ನು ಬಿಟ್ಟು ಬಿಟ್ಟರು.

ಮರು ದಿನವೂ ಕೂಡ ನಾನು ಕಅಬಾದ ಬಳಿ ಬಂದು ಉಚ್ಛ ಧ್ವನಿಯಲ್ಲಿ ಹೇಳಿದಾಗ, ಪುನಃ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಆಗಲೂ ಅಬ್ಬಾಸ್’ರವರೇ ಬಂದು ನನ್ನ ರಕ್ಷಿಸಿದರು.
ಅಂದು ರಾತ್ರಿ ಅಬೂಬಕ್ಕರ್’ರವರು (ರ) ನನಗೆ ಆತಿಥ್ಯ ನೀಡಲು, ಪ್ರವಾದಿಯವರಲ್ಲಿ ﷺ ﷺ ಅನುಮತಿ ಪಡೆದರು. ಹೀಗೆ ಪ್ರವಾದಿಯವರ ﷺ ಜೊತೆಯಲ್ಲಿ ನಾನು ಕೂಡ ಅಬೂಬಕ್ಕರ್’ರವರ (ರ) ಮನೆಗೆ ತಲುಪಿದೆನು. ತ್ವಾಹಿಫಿನ ಒಣ ದ್ರಾಕ್ಷಿ ನೀಡುವ ಮೂಲಕವಾಗಿತ್ತು ನನ್ನನ್ನು ಸ್ವೀಕಾರ ಮಾಡಿದ್ದು. ಮಕ್ಕಾದಲ್ಲಿ ಸೇವಿಸುವ ಮೊದಲ ಆಹಾರವೂ ಕೂಡ ಅದುವೇ ಆಗಿತ್ತು. ನಂತರ ಪ್ರವಾದಿಯವರ ﷺ ಬಳಿ ತೆರಳಿದಾಗ, ಅವರು ಖರ್ಜುರ ತುಂಬಿದ ಊರಿಗೆ ಹೋಗಲು ನನಗೆ ನಿರ್ದೇಶನ ಬಂದಿರುತ್ತದೆ, ಅದು ಬಹುಶಃ ಯಸ್’ರಿಬ್ ಆಗಿರಬಹುದೆಂದು ನನ್ನ ಊಹೆ, ನೀವು ನಿಮ್ಮ ಜನರಿಗೆ ಈ ಸಂದೇಶವನ್ನು ತಲುಪಿಸಿ ಅವರಿಗೊಂದು ಉಪಕಾರ ಮಾಡುವಿರ? ಎಂದು ಕೇಳಿದರು.

ನಾನು ಅಲ್ಲಿಂದ ತಕ್ಷಣವೇ ಊರಿಗೆ ಹಿಂತಿರುಗಿ ಬಂದೆನು. ಉನೈಸ್ ನನ್ನ ಬಳಿ ಬಂದು ಏನಾಯಿತು.? ಎಂದು ಕೇಳಿದಾಗ, ನಾನು ಇಸ್ಲಾಮ್ ಸ್ವೀಕರಿಸಿದೆನು, ಪ್ರವಾದಿಯವರು ﷺ ಸತ್ಯ ದೂತರೆ ಆಗಿರುವರು. ನಾನು ಅವರನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದೆನು. ಅದಕ್ಕೆ ಉನೈಸ್ ನೀವು ಸ್ವೀಕರಿಸಿದ ನಂತರ ನನಗೂ ಯಾವುದೇ ಅಭ್ಯಂತರವಿಲ್ಲ, ನಾನು ಕೂಡ ಇಸ್ಲಾಮ್ ಸ್ವೀಕರಿಸುತ್ತೇನೆ ಎಂದು ಹೇಳಿದರು. ಅಷ್ಟೊತ್ತಿಗಾಗಲೇ ನಮ್ಮ ತಾಯಿ ಕೂಡ ಅಲ್ಲಿಗೆ ಬಂದು ಬಿಟ್ಟರು. ಅವರಿಗೂ ಕೂಡ ಎಲ್ಲಾ ವಿಷಯವನ್ನು ತಿಳಿಸಿಕೊಟ್ಟೆವು, ನಂತರ ನಮ್ಮ ತಾಯಿಯೂ ಕೂಡ ಇಸ್ಲಾಮ್ ಸ್ವೀಕರಿಸಿದರು.

ಸಂಪೂರ್ಣ ಗಿಫಾರ್ ಜನಾಂಗವನ್ನೇ ಇಸ್ಲಾಮಿಗೆ ಆಹ್ವಾನಿಸಿದೆನು, ಅದರಲ್ಲಿ ಅರ್ಧದಷ್ಟು ಜನರು ತಕ್ಷಣವೇ ಇಸ್ಲಾಮ್ ಸ್ವೀಕರಿಸಿದರೇ, ಇನ್ನೂ ಕೆಲವರು ಪ್ರವಾದಿಯವರು ﷺ ಯಸ್’ರಿಬಿಗೆ ಬರಲಿ, ಆ ನಂತರ ನಾವೂ ಕೂಡ ಇಸ್ಲಾಮ್ ಸ್ವೀಕರಿಸುತ್ತೇವೆ ಎಂದು ಹೇಳಿದರು. ಪ್ರವಾದಿಯವರು ﷺ ಹಿಜ್’ರ ನಡೆಸಿ, ಯಸ್’ರಿಬಿಗೆ ತಲುಪಿದಾಗ ಅವರೆಲ್ಲರೂ ಇಸ್ಲಾಮ್ ಸ್ವೀಕರಿಸಿದರು. ಈ ವಿಷಯವನ್ನು ತಿಳಿದ ಪಕ್ಕದ ‘ಅಸ್’ಲಂ’ ಜನಾಂಗವೂ ಕೂಡ ಪ್ರವಾದಿಯವರನ್ನು ﷺ ಭೇಟಿಯಾದರು. ಅವರು ಕೂಡ ಪ್ರವಾದಿಯವರಲ್ಲಿ, ಗಿಫಾರ್ ಜನಾಂಗ ಅಂಗೀಕರಿಸಿದ ಹಾಗೆ ನಾವೂ ಕೂಡ ಅಂಗೀಕರಿಸುತ್ತೇವೆ.! ಎಂದು ಹೇಳುತ್ತಾ, ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು. ಇದನ್ನು ಕೇಳಿದ ಪ್ರವಾದಿಯವರಿಗೆ ﷺ ಬಹಳಷ್ಟು ಸಂತೋಷವಾಯಿತು. ಅವರು ಗಿಫಾರ್ ಜನಾಂಗದ ಜನರಿಗೆ ಅಲ್ಲಾಹನು ಗುಫ್’ರಾನ್ (ಪಾಪ ಮೋಚನೆ) ನೀಡಲಿ ಎಂದೂ, ಅಸ್’ಲಂ ಜನಾಂಗಕ್ಕೆ ಅಲ್ಲಾಹನು ಸಲಾಮತ್ (ರಕ್ಷಣೆ) ನೀಡಲಿ ಎಂದು ಪ್ರಾರ್ಥನೆ ಮಾಡಿದರು. (ಜನಾಂಗದ ಹೆಸರು ಎತ್ತಿ ಹಿಡಿದು ಆಗಿತ್ತು ಪ್ರಾರ್ಥನೆ ನಡೆಸಿದ್ದು.)

ಇಮಾಮ್ ಬುಖಾರಿಯವರು ಉಲ್ಲೇಖಿಸಿದ ಹದೀಸಿನಲ್ಲಿ ಈ ರೀತಿ ಕಾಣಬಹುದು. ಅಬ್ದುಲ್ಲಾಹಿಬಿನ್ ಸ್ವಾಮಿತ್’ರಲ್ಲಿ ಅಬೂದರ್ರ್’ರವರು, (ರ) ನಾನು ಪ್ರವಾದಿಯವರನ್ನು ﷺ ಭೇಟಿಯಾಗುದಕ್ಕೂ ಮುಂಚೆಯೇ ಮೂರು ವರ್ಷದವರೆಗೆ ನಮಾಝ್ ಮಾಡಿದ್ದೆನು ಎಂದು ಹೇಳಿದಾಗ, ನೀವು ಯಾರಿಗಾಗಿ ಆಗಿತ್ತು ನಮಾಝ್ ಮಾಡಿದ್ದು.? ಎಂದು ಅವರು ಪುನಃ ತಿರುಗಿ ಕೇಳಿದ್ದರು. ನಾನು ಅಲ್ಲಾಹನಿಗಾಗಿ, ಅವನು ತಿರುಗಿಸಿದ ಕಡೆಗೆ ಮುಖ ಮಾಡಿ ನಿಂತು, ರಾತ್ರಿ ದೀರ್ಘ ಕಾಲದವರೆಗೆ ನಮಾಝ್ ಮಾಡುತ್ತಿದ್ದೆನು. ನಂತರ ಸೂರ್ಯೋದಯ ಆಗುವವರೆಗೆ ವಿಶ್ರಾಂತಿ ಪಡೆಯುತ್ತಿದ್ದೆನು ಎಂದು ಹೇಳಿದರು.
ಇಸ್ಲಾಮ್ ಸ್ವೀಕರಿಸಿದ ಐದನೇ ವ್ಯಕ್ತಿ ಎಂಬ ಪ್ರಯೋಗವೂ ಕೂಡ ಮಹಾನರ ಕುರಿತು ಗ್ರಂಥಗಳಲ್ಲಿ ಕಾಣಬಹುದು. ಪ್ರವಾದಿಯವರ ﷺ ಜೀವನ ಚರಿತ್ರೆಯಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ ಅಬೂದರ್ರ್’ರವರನ್ನು ನಮಗೆ ಕಾಣಲು ಸಾಧ್ಯವಾಗುತ್ತದೆ.

Mahabba Campaign Part-66/365

ಮಕ್ಕಾದಲ್ಲಿ ದಿವಸಗಳು ಕಳೆಯುತ್ತಾ ಹೋದಂತೆ ಪ್ರವಾದಿಯವರ ﷺ ಪ್ರಭೋಧನೆಯು ಬಹಳಷ್ಟು ಚರ್ಚೆಯಾಗ ತೊಡಗಿತು. ಪ್ರವಾದಿಯವರು ﷺ ಹಾಗೂ ಅವರ ಅನುಯಾಯಿಗಳು ಬಹಳ ರಹಸ್ಯವಾಗಿಯೇ ಆರಾಧನೆಗಳನ್ನು ಮಾಡುತ್ತಿದ್ದರೂ, ಜನರು ಮಾತ್ರ ಇಸ್ಲಾಮಿಗೆ ಆಕರ್ಷಿತರಾಗುತ್ತಲೇ ಇದ್ದರು. ಪ್ರವಾದಿಯವರು ﷺ ಅರ್’ಖಂ ಬಿನ್ ಅಲ್’ಖಮಿನ ಮನೆಯಲ್ಲಿ ಅಥವಾ ‘ದಾರುಲ್ ಅರ್’ಖಮ್’ ಎನ್ನುವ ಮನೆಯನ್ನು ಕೇಂದ್ರವಾಗಿರಿಸಿ ಪ್ರಭೋಧನೆ ಮಾಡುತಿದ್ದರು. ಕಅಬಾಲಯದಿಂದ ಕೇವಲ ನೂರ ಮೂವತ್ತು ಮೀಟರ್ ದೂರದಲ್ಲಿರುವ ಸ್ವಫ ಪರ್ವತಕ್ಕೆ ಸಮೀಪವಾಗಿಯಾಗಿತ್ತು ಈ ಮನೆ ಇರುವುದು.

ಸುಮಾರು ಮೂವತ್ತೆಂಟು ಜನರು ಇಸ್ಲಾಮ್ ಸ್ವೀಕರಿಸಿ, ಸತ್ಯ ವಿಶ್ವಾಸಿಗಳ ಸಾಲಿನಲ್ಲಿ ಸೇರಿಕೊಂಡಾಗ, ಅಬೂಬಕ್ಕರ್’ರವರು ◌ؓ ಪ್ರವಾದಿಯವರಲ್ಲಿ ﷺ ನಾವು ಇಸ್ಲಾಮನ್ನು ಸಾರ್ವಜನಿಕವಾಗಿ ಘೋಷಣೆ ಮಾಡಿದರೆ ಹೇಗೆ.? ಎಂದು ಕೇಳಿದರು. ಅದಕ್ಕೆ ಪ್ರವಾದಿಯವರು ﷺ, ಓ ಅಬೂಬಕ್ಕರ್’ರವರೇ ◌ؓ ನಾವು ಬೆರಳೆಣಿಕೆಯಷ್ಟು ಜನರು ಮಾತ್ರವಲ್ಲವೇ ಇರುವುದು ಎಂದು ಹೇಳಿದರು. ಆದರೆ ಅಬೂಬಕ್ಕರ್’ರವರು ◌ؓ ಸಾರ್ವಜನಿಕವಾಗಿ ಘೋಷಣೆ ಮಾಡಲು ಬಹಳ ಹಾತೊರೆಯುತಿದ್ದರು. ಹಾಗಾಗಿ ಅವರು ಪದೇ ಪದೇ ಬಂದು ಪ್ರವಾದಿಯವರಲ್ಲಿ ﷺ ತಮ್ಮ ಆಗ್ರಹವನ್ನು ತಿಳಿಸುತ್ತಲೇ ಇದ್ದರು. ಕೊನೆಗೆ ಪ್ರವಾದಿಯವರು ದಾರುಲ್ ಅರ್’ಖಮಿನಿಂದ ಹೊರಗೆ ಬಂದರು. ಪ್ರವಾದಿಯವರ ﷺ ಅನುಯಾಯಿಗಳು ಮಸ್ಜಿದ್’ನ ಸುತ್ತಮುತ್ತಲಿನಲ್ಲಿ ನಿಂತಿದ್ದರು, ಅಷ್ಟೊತ್ತಿಗೆ ಅಬೂಬಕ್ಕರ್’ರವರು ◌ؓ ಆಗಮಿಸಿದರು. ತಕ್ಷಣವೇ ಭಾಷಣ ಮಾಡಲು ತಯಾರಾಗಿ ನಿಂತರು. ಇಸ್ಲಾಮಿನ ಮೊದಲ ಭಾಷಣವಾಗಿತ್ತು ಅದು. ಪ್ರವಾದಿಯವರು ﷺ ಸ್ವಲ್ಪ ದೂರದಲ್ಲಿ ಕುಳಿತು ಕೇಳುತಿದ್ದರು. ಅಬೂಬಕ್ಕರ್’ರವರು ◌ؓ ಜನರಿಗೆ ಅಲ್ಲಾಹನ ಬಳಿ, ಅವನ ಸಂದೇಶ ವಾಹಕರ ಬಳಿ ಆಹ್ವಾನ ನೀಡಲು ಆರಂಭಿಸಿದರು. ಅದನ್ನು ಕೇಳಿದ ಅವಿಶ್ವಾಸಿಗಳಾದ ಜನರು ಒಟ್ಟಾಗಿ ಸೇರಿ ಅವರ ಮೇಲೆ ದಾಳಿ ನಡೆಸಿದರು, ಕಾಲಿನಿಂದ ತುಳಿಯಲು ಆರಂಭಿಸಿದರು. ಇದರ ನಡುವೆ ಉತ್’ಬ ಬಿನ್ ರಬೀಅ ಎನ್ನುವ ದುಷ್ಟನು ತನ್ನ ಆಣಿ ಚುಚ್ಚಿದ್ದ ಚಪ್ಪಲಿಯಿಂದ ಮುಖಕ್ಕೆ ಹೊಡೆದಾಗ, ಮೂಗಿನ ಮೇಲೆ ಗಾಯ ಆಗಿ ಬಿಟ್ಟಿತು. ಅಷ್ಟರಲ್ಲೇ ಅಬೂಬಕ್ಕರ್’ರವರ ◌ؓ ಜನಾಂಗದ ಜನರೆಲ್ಲರೂ ಸ್ಥಳಕ್ಕೆ ಆಗಮಿಸಿದರು. ಬಹುಶಃ ಈ ಹಲ್ಲೆಯಿಂದ ಅಬೂಬಕ್ಕರ್ ◌ؓ ಸಿದ್ದೀಕ್’ರವರು ಮರಣ ಹೊಂದಬಹುದೋನೋ ಎನ್ನುವ ಆತಂಕ ಎಲ್ಲರಿಗೂ ಉಂಟಾಯಿತು. ಪ್ರಜ್ಞೆ ತಪ್ಪಿ ಬಿದ್ದ ಅಬೂಬಕ್ಕರ್’ರವರನ್ನು ◌ؓ ಒಂದು ಬಟ್ಟೆಯಲ್ಲಿ ಸುತ್ತಿ ಮನೆಗೆ ಕೊಂಡು ಹೋದರು. ಬಹುಶಃ ಈ ಹಲ್ಲೆಯಿಂದ ಅಬೂಬಕ್ಕರ್’ರವರ ◌ؓ ಮರಣ ಉಂಟಾದರೆ, ಖಂಡಿತ ನಾವು ಉತ್’ಬನನ್ನು ಕೊಲೆ ಮಾಡುತ್ತೇವೆ ಎಂದು ಬನೂ ತೈಂ ಘೋಷಣೆ ಮಾಡಿದರು.

ಅಬೂಬಕ್ಕರ್’ರವರ ◌ؓ ತಂದೆ ಅಬೂಖುಹಾಫ ಹಾಗೂ ಅವರ ಸಂಬಂಧಿಕರೆಲ್ಲರೂ, ಅವರಿಗೆ ಪ್ರಜ್ಞೆ ಬರುವುದನ್ನು ಕಾಯುತ್ತಾ ಕುಳಿತರು. ಸಂಜೆಯ ವೇಳೆಗೆ ಅಬೂಬಕ್ಕರ್’ರವರು ಮೆಲ್ಲನೆ ತಮ್ಮ ಕಣ್ಣು ತೆರದರು. ಕಣ್ಣು ತೆರೆದ ಕೂಡಲೇ ಅಬೂಬಕ್ಕರ್’ರವರು ◌ؓ ಕೇಳಿದ್ದು ಪ್ರವಾದಿಯವರು ﷺ ಹೇಗಿದ್ದಾರೆ.? ಎಂದಾಗಿತ್ತು. ಇದನ್ನು ಕಂಡ ಸಂಬಂಧಿಕರು ಆಶ್ಚರ್ಯದಿಂದ ನೋಡುತ್ತಾ, ಎಲ್ಲರೂ ಅಬೂಬಕ್ಕರ್’ರವರನ್ನು ◌ؓ ಗದರಿಸ ತೊಡಗಿದರು. (ಈಗಲೂ ಪ್ರವಾದಿಯವರ ﷺ ಕುರಿತು ಕೇಳುತಿದ್ದೀರಿ ಅಲ್ವಾ ಎಂದು) ಅವರು ಅಬೂಬಕ್ಕರ್’ರವರ ◌ؓ ತಾಯಿ, ಉಮ್ಮುಲ್ ಖೈರ್’ರವರಲ್ಲಿ, ನೀವು ಅಬೂಬಕ್ಕರಿಗೆ ◌ؓ ಏನಾದರೂ ತಿನ್ನಲು ಆಹಾರ ನೀಡಿರಿ ಎಂದು ಹೇಳಿದಾಗ, ಅವರ ತಾಯಿ ಹತ್ತಿರ ಹೋದರು. ತಕ್ಷಣವೇ ಅಬೂಬಕ್ಕರ್’ರವರು ◌ؓ ತಾಯಿಯಲ್ಲೂ ಕೂಡ ಪ್ರವಾದಿಯವರಿಗೆ ﷺ ಏನಾಯಿತು ಎಂದು ಕೇಳಿದರು. ನನಗೆ ಏನು ಗೊತ್ತಿಲ್ಲ ಮಗನೇ ಎಂದು ಹೇಳುತ್ತಾ, ಪಾನೀಯ ಕುಡಿಯಲು ಒತ್ತಾಯಿಸಿದಾಗ, ಅಮ್ಮ ನೀವು ಉಮರಿನ ಸಹೋದರಿಯಾದ ಉಮ್ಮು ಜಮೀಲರ ಬಳಿಯೊಮ್ಮೆ ಹೋಗಿ ಕೇಳಿ ಬರುತ್ತೀರ.? ಎಂದು ಹೇಳಿದಾಗ, ತಾಯಿ ಅಲ್ಲಿಂದ ಹೊರಟರು. ಉಮ್ಮು ಜಮೀಲರ ಬಳಿ ಅಬೂಬಕ್ಕರ್ ◌ؓ ಹುಡುಕುತ್ತಿರುವ ಮುಹಮ್ಮದ್’ರ ﷺ ಕುರಿತು ನಿಮಗೆ ತಿಳಿದಿದಿಯೇ.? ಎಂದು ಕೇಳಿದಾಗ, ನನಗೆ ಅಬೂಬಕ್ಕರ್ ◌ؓ ಕೂಡ ಗೊತ್ತಿಲ್ಲ, ಮುಹಮ್ಮದ್ ﷺ ಕೂಡ ಗೊತ್ತಿಲ್ಲ, ನಿಮಗೆ ಇಷ್ಟವಿದ್ದರೆ ನಿಮ್ಮ ಜೊತೆಯಲ್ಲೇ ಬರುತ್ತೇನೆ ಎಂದು ಹೇಳಿ, ಅವರ ಜೊತೆಯಲ್ಲೇ ಹೊರಟರು. ಅಬೂಬಕ್ಕರ್’ರವರನ್ನು ◌ؓ ಕಂಡಾಗ, ನಿಮ್ಮ ಮೇಲೆ ಹಲ್ಲೆ ಮಾಡಿದವರು ಕ್ರೂರಿಗಳು, ರಕ್ಕಸರು ಆಗಿರುತ್ತಾರೆ. ಅವರು ಇನ್ನೂ ಕೂಡ ಖಂಡಿತ ನಿಮಗೆ ಹಲ್ಲೆ ಮಾಡುವರು ಎಂದು ಉಮ್ಮು ಜಮೀಲ ಹೇಳಿದಾಗಲೂ, ಅಬೂಬಕ್ಕರ್’ರವರು ◌ؓ ಕೇಳಿದ್ದು ಪ್ರವಾದಿಯವರು ﷺ ಹೇಗಿದ್ದಾರೆ ಎಂದಾಗಿತ್ತು. ಅದಕ್ಕೆ ಜಮೀಲ ನಿಮ್ಮ ತಾಯಿಗೆ ಕೇಳುತ್ತದೆ ಎಂದು ಹೇಳಿದರು. (ಆಗಲೇ ನನಗೆ ಗೊತ್ತಿಲ್ಲ ಎಂದು ಹೇಳಿದ್ದೂ, ಈಗ ಈ ರೀತಿ ಹೇಳಿದ್ದು ಎಲ್ಲವೂ, ಇಸ್ಲಾಮ್ ಸ್ವೀಕರಿಸದ ತಾಯಿಗೆ ಅವರ ರಹಸ್ಯ ತಿಳಿಯಬಾರದು ಎನ್ನುವ ಉದ್ದೇಶದಿಂದಾಗಿತ್ತು.) ಅದು ಪರವಾಗಿಲ್ಲ ನೀವು ಹೇಳಿ ಎಂದು ಹೇಳಿದಾಗ, ಪ್ರವಾದಿಯವರಿಗೆ ﷺ ಏನು ಆಗಿಲ್ಲ. ಅವರು ಸುರಕ್ಷಿತವಾಗಿ ದಾರುಲ್ ಅರ್’ಖಮಿನಲ್ಲಿ ಇದ್ದಾರೆ ಎಂದು ಉಮ್ಮು ಜಮೀಲ ಹೇಳಿದರು. ಅಲ್ಲಾಹನ ಮೇಲಾಣೆ ಇನ್ನೂ ಪ್ರವಾದಿಯವರನ್ನು ﷺ ಕಂಡ ನಂತರವೇ, ನಾನು ಅನ್ನ ನೀರು ಕುಡಿಯುವುದು ಎಂದು ಹಠ ಹಿಡಿದರು.

ಜೊತೆಯಲ್ಲಿರುವವರು ಅಬೂಬಕ್ಕರ್’ರವರನ್ನು ◌ؓ ಸಮಾಧಾನ ಪಡಿಸಿದರು. ನಂತರ ಅಬೂಬಕ್ಕರ್’ರವರು ◌ؓ ತಾಯಿಯ ಭುಜಕ್ಕೆ ಹೊರಗಿ ಪ್ರವಾದಿಯವರ ﷺ ಸನ್ನಿಧಿಗೆ ಬಂದು ಬಿಟ್ಟರು. ಅಬೂಬಕ್ಕರ್’ರವರನ್ನು ◌ؓ ಕಂಡ ತಕ್ಷಣವೇ ಪ್ರವಾದಿಯವರು ﷺ ಹೊರಗೆ ಬಂದು ಗಟ್ಟಿಯಾಗಿ ಅಪ್ಪಿಕೊಂಡು, ಕಣ್ಣೀರು ಸುರಿಸುತ್ತಾ ಚುಂಬಿಸಿದರು. ಅಲ್ಲಿದ್ದ ಇತರ ಸತ್ಯವಿಶ್ವಾಸಿಗಳು ಕೂಡ ಕಣ್ಣೀರು ಸುರಿಸುತ್ತಾ ಅಪ್ಪಿಕೊಂಡು, ಚುಂಬಿಸಿದರು. ತಕ್ಷಣವೇ ಅಬೂಬಕ್ಕರ್’ರವರು, ◌ؓ ನನ್ನ ತಂದೆ ತಾಯಿಗಿಂತ ನಾನು ಹೆಚ್ಚು ಪ್ರೀತಿಸುವ ಪ್ರವಾದಿಯವರೇ ﷺ ನನಗೆ ಏನೂ ಆಗಲಿಲ್ಲ. ಅವರು ನನ್ನ ಮುಖಕ್ಕೆ ಹೊಡೆದು ಗಾಯ ಮಾಡಿದರು ಅಷ್ಟೇ, ಅದು ಪರವಾಗಿಲ್ಲ. ಇದು ನನ್ನ ತಾಯಿ ಉಮ್ಮುಲ್ ಖೈರ್. ಅವರಿಗೆ ಮಗನ ಮೇಲೆ ತುಂಬಾ ಮಮಕಾರ ಇದೆ, ನೀವು ನನ್ನ ತಾಯಿಯನ್ನು ನರಕಾಗ್ನಿಯಿಂದ ರಕ್ಷಣೆ ಮಾಡಬೇಕು. ಎಂದು ಹೇಳಿದರು. ಪ್ರವಾದಿಯವರು ﷺ ಅವರಿಗೆ ಬೇಕಾಗಿ ಪ್ರಾರ್ಥನೆ ನಡೆಸಿದರು. ನಂತರ ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು.

Mahabba Campaign Part-67/365

ಪ್ರವಾದಿಯವರು ﷺ ಪ್ರಭೋಧನೆಯ ದಾರಿಯಲ್ಲೇ ಮುಂದುವರಿದರು. ಇಸ್ಲಾಮಿಗೆ ಜನರು ಆಕರ್ಷಿತರಾಗುತ್ತಲೇ ಇದ್ದರು. ಅದೇ ರೀತಿ ಮತ್ತೊಂದು ಭಾಗದಲ್ಲಿ ಶತ್ರುಗಳೂ ಕೂಡ ಬಹಳಷ್ಟು ಷಡ್ಯಂತ್ರಗಳನ್ನು ನಡೆಸುತ್ತಿದ್ದರು. ಕೊನೆಗೆ ಅವರು ಪ್ರವಾದಿಯವರ ﷺ ಚಿಕ್ಕಪ್ಪರಾದ ಅಬೂತ್ವಾಲಿಬರನ್ನು ಭೇಟಿಯಾಗಿ, ಮುಹಮ್ಮದ್’ರಿಗೆ ﷺ ಎಚ್ಚರಿಕೆ ನೀಡಲು ಹೇಳೋಣ, ಎಂದು ತೀರ್ಮಾನಿಸಿದರು. ಹೀಗೆ ಅಬೂತ್ವಾಲಿಬರ ಬಳಿ ಹೋಗಿ ಮಾತುಕತೆ ಆರಂಭಿಸಿದರು. ನೀವು ನಮ್ಮ ನಡುವೆ ಅತ್ಯುನ್ನತ ಸ್ಥಾನ ಪಡೆದ ವ್ಯಕ್ತಿಯಾಗಿರುತ್ತೀರಿ, ನಿಮ್ಮನ್ನು ನಾವು ಸಂಪೂರ್ಣವಾಗಿ ಅಂಗೀಕರಿಸುತ್ತೇವೆ, ಈಗ ನಾವು ಎದುರಿಸುತ್ತಿರುವ ಸಮಸ್ಯೆ ಏನೆಂದು ನಿಮಗೆ ಚೆನ್ನಾಗಿ ಗೊತ್ತಿದೆ ತಾನೇ.? ನಿಮ್ಮ ಅಣ್ಣನ ಮಗ ಆರಂಭಿಸಿದ ಈ ಪ್ರಭೋಧನೆಯಿಂದ ನಮ್ಮೆಲ್ಲರನ್ನು ಕಡೆಗಣಿಸಲಾಗುತ್ತಿದೆ. ನಮ್ಮ ಆರಾಧ್ಯ ವಸ್ತುಗಳನ್ನು ವಿರೋಧಿಸಲಾಗುತ್ತಿದೆ, ನಮ್ಮ ಪೂರ್ವಿಕರನ್ನು ಧಿಕ್ಕರಿಸಲಾಗುತ್ತಿದೆ. ನಿಮಗೂ ಕೂಡ ಇದರಲ್ಲಿ ಬೇಸರವಿದೆ ಎಂದು ನಮಗೆ ತಿಳಿದಿದೆ. ಕಾರಣ ನೀವು ಆ ಧರ್ಮವನ್ನು ಸ್ವೀಕರಿಸಲಿಲ್ಲ ಅಲ್ಲವೇ.? ಒಂದೋ ನೀವು ನಿಮ್ಮ ಅಣ್ಣನ ಮಗನಿಗೆ ಉಪದೇಶ ನೀಡಿರಿ. ಅದು ಆಗದಿದ್ದರೆ ನಮಗೆ ಒಪ್ಪಿಸಿ, ನಾವೇ ಸರಿ ಮಾಡುತ್ತೇವೆ ಎಂದು ಹೇಳಿದಾಗ. ಅಬೂತ್ವಾಲಿಬರು ಅವರನ್ನು ಸಮಾಧಾನ ಪಡಿಸಿ ಅವರನ್ನು ಮರಳಿ ಕಳುಹಿಸಿದರು.

ಪ್ರವಾದಿಯವರು ﷺ ತಮ್ಮ ಪ್ರಭೋಧನೆಯನ್ನು ಮುಂದುವರಿಸಿದರು. ಖುರೈಷಿಗಳು ಪ್ರವಾದಿಯವರ ﷺ ಕುರಿತು ಸುಳ್ಳು ಆರೋಪಗಳನ್ನು ಹೊರಿಸ ತೊಡಗಿದರು. ಪ್ರವಾದಿಯವರನ್ನು ﷺ ವಿರೋಧಿಸಲು ವ್ಯತ್ಯಸ್ಥವಾದ ದಾರಿಗಳನ್ನು ಹುಡುಕುತ್ತಿದ್ದರು. ಮತ್ತೊಮ್ಮೆ ಅಬೂತ್ವಾಲಿಬರನ್ನು ಭೇಟಿಯಾಗೋಣ ಎಂದು ತೀರ್ಮಾನಿಸಿ ಅಬೂತ್ವಾಲಿಬರ ಬಳಿ ತೆರಳಿದರು, ನೀವು ನಮಗೆ ವಯಸ್ಸಿನಲ್ಲೂ, ಘನತೆಯಲ್ಲೂ, ಮನೆತನ ಹಿರಿಮೆಯಲ್ಲೂ ಹಿರಿಯರು. ಆದರೆ ನೀವು ನಿಮ್ಮ ಅಣ್ಣನ ಮಗನನ್ನು ನಿಯಂತ್ರಿಸಲು ಹೇಳಿದಾಗ, ಅದರ ಬಗ್ಗೆ ಗಮನವೇ ಕೊಡುತ್ತಿಲ್ಲ. ಇನ್ನು ನಮಗೆ ಸಹಿಸಲು ಸಾಧ್ಯವಿಲ್ಲ, ನಮ್ಮ ದೇವರುಗಳ ಬಗ್ಗೆ ಕೇವಲವಾಗಿ ಮಾತಾಡುತ್ತಿದ್ದಾರೆ, ನಮ್ಮ ಪೂರ್ವಿಕರನ್ನು ವಿರೋಧಿಸುತ್ತಿದ್ದಾರೆ. ಇದೆಲ್ಲವನ್ನು ನಿಮಗೆ ನಿಯಂತ್ರಣ ಮಾಡಲು ಸಾಧ್ಯವಾಗದಿದ್ದರೆ ಹೇಳಿ ನಾವೇ ನಿಯಂತ್ರಣ ಮಾಡುತ್ತೇವೆ. ಇನ್ನೂ ಇದು ಯಾವುದೇ ಕಾರಣಕ್ಕೂ ಮುಂದುವರಿಯಲೇ ಬಾರದು. ಎರಡರಲ್ಲಿ ಒಂದು ತೀರ್ಮಾನ ಆಗಲೇ ಬೇಕು ಎಂದು ಹೇಳಿದರು.

ಈ ಮಾತನ್ನು ಕೇಳಿದ ಅಬೂತ್ವಾಲಿಬರಿಗೆ ಬಹಳ ಬೇಸರವಾಯಿತು. ಊರಿನ ಗಣ್ಯರ ವಿರೋಧವು, ಅವರ ಮನಸ್ಸಿಗೆ ಬಹಳಷ್ಟು ನೋವುಂಟುಮಾಡಿತು. ಜೊತೆಯಲ್ಲಿ ಮುಹಮ್ಮದ್ ﷺ ಮಗನ ಆದರ್ಶವನ್ನು ಹಿಂಬಾಲಿಸುವುದರ ಕುರಿತು ಹಾಗೂ ಅದನ್ನು ವಿರೋಧಿಸೂದರ ಕುರಿತೂ ಅಬೂತ್ವಲಿಬರು ಬಹಳಷ್ಟು ಚಿಂತಿತರಾದರು. ಏನೇ ಇರಲಿ ಮುಹಮ್ಮದ್’ರನ್ನು ﷺ ಮಾತುಕತೆ ನಡೆಸಲು ಕರೆಸೋಣ ಎಂದು, ಪ್ರವಾದಿಯವರ ﷺ ಬಳಿ ಒಬ್ಬ ವ್ಯಕ್ತಿಯನ್ನು ಕಳುಹಿಸಿದರು. ಅವರು ಬಂದಾಗ, ಮಗನೇ ಊರಿನ ಗಣ್ಯರು ಬಂದು ನನ್ನ ಭೇಟಿಯಾಗಿ ಹೋದರು. ಎಲ್ಲಾ ವಿಷಯವನ್ನು ನನ್ನಲ್ಲಿ ತಿಳಿಸಿ ಹೋದರು, ನನ್ನಿಂದ ಸಾಧ್ಯವಾಗದ ಕೆಲಸವನ್ನು ಮಾಡಿಸದಿರು ಮಗನೇ ಎಂದು ಅಬೂತ್ವಲಿಬರು, ಪ್ರವಾದಿಯವರಲ್ಲಿ ﷺ ಬಹಳ ವಿನಮ್ರವಾಗಿ ಹೇಳಿಕೊಂಡರು.
ಅಬೂತ್ವಾಲಿಬರ ಮಾತಿನಲ್ಲಿ ಎದ್ದು ಕಾಣುತ್ತಿದ್ದ, ಒತ್ತಡ ಅಸಹಾಯಕತೆಯೂ ಪ್ರವಾದಿಯವರಿಗೆ ﷺ ಅರ್ಥವಾಗಿತ್ತು. ತಕ್ಷಣವೇ ಪ್ರವಾದಿಯವರು ﷺ, ಅವರು ನನ್ನ ಬಲ ಕೈಯಲ್ಲಿ ಸೂರ್ಯನನ್ನೂ, ಎಡ ಕೈಯಲ್ಲಿ ಚಂದ್ರನನ್ನು ಕೊಡುತ್ತೇನೆ ಎಂದು ಹೇಳಿದರೂ ಕೂಡ, ನಾನು ನನ್ನ ಜವಾಬ್ದಾರಿಯಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ಒಂದೋ ಈ ಆದರ್ಶವು ಜಯಶಾಲಿ ಆಗಬೇಕು, ಅಲ್ಲದಿದ್ದರೆ ಮರಣದವರೆಗೂ ನಾನು ಈ ಆದರ್ಶದಲ್ಲೇ ಗಟ್ಟಿಯಾಗಿ ನಿಲ್ಲುವೆನು ಎಂದು ಹೇಳಿ, ಪ್ರವಾದಿಯವರು ﷺ ಅಲ್ಲಿಂದ ಹೊರಗೆ ಬಂದರು. ತಕ್ಷಣವೇ ಅಬೂತ್ವಾಲಿಬರು ಪ್ರವಾದಿಯವರನ್ನು ಪುನಃ ಕರೆದು, ಮಗನೇ ನೀವು ನಿಮ್ಮ ಆದರ್ಶದಲ್ಲೇ ಮುಂದೆ ಸಾಗಿರಿ, ನಾನು ಯಾರಿಗೂ ನಿಮ್ಮನ್ನು ಬಿಟ್ಟು ಕೊಡುವುದಿಲ್ಲ ಎಂದು ಹೇಳಿ ಅಬೂತ್ವಾಲಿಬರು ಈ ರೀತಿ ಹಾಡಿದರು.

(ವಲ್ಲಾಹಿ ಲನ್ ಯಸ್ವಿಲೂ ಇಲೈಕ…)
“ಅಲ್ಲಾಹನ ಮೇಲಾಣೆಗೂ ಅವರು ಗುಂಪಾಗಿ ಬಂದರೂ
ಬಿಟ್ಟು ಕೊಡುವುದಿಲ್ಲ ಶರೀರದಲ್ಲಿ ಜೀವ ಇರುವವರೆಗೂ
ಉದಾಸೀನ ತೋರಿಸಿದರೆ ಮುಂದೆ ಹೋಗಿರಿ
ಸಂತೋಷದಿಂದ ಕಣ್ಣುಗಳಲ್ಲಿ ಆನಂದಬಾಷ್ಪ ಬರುವವರೆಗೂ
ನನ್ನನ್ನೂ ಕೂಡ ಆಹ್ವಾನಿಸಿದರು ಸದುದ್ದೇಶದಿಂದ
ನೀವು ಸರಿಯಾಗಿರುವಿರಿ ಕಾರಣ ನೀವು ಅಲ್ ಅಮೀನಲ್ಲವೇ
ಆದರೆ ನನಗೆ ಅಪಹಾಸ್ಯದ ಭಯ ಇರದೇ ಇರುತ್ತಿದ್ದಿದ್ದರೆ
ನಾನು ಕೂಡ ಅಂಗೀಕರಿಸುತಿದ್ದೆ ಈ ಸತ್ಯವನ್ನು.”

ಅಬೂತ್ವಾಲಿಬರ ಈ ತೀರ್ಮಾನದಿಂದ ಖುರೈಷಿಗಳಿಗೆ ತೃಪ್ತಿಯಾಗಿರಲಿಲ್ಲ. ಅವರು ಮತ್ತೊಂದು ಅಭಿಪ್ರಾಯದೊಂದಿಗೆ ಪುನಃ ಭೇಟಿಯಾಗಲು ಅಬೂತ್ವಾಲಿಬರ ಬಳಿ ತಲುಪಿದರು.

Mahabba Campaign Part-68/365

ಪ್ರವಾದಿಯವರಿಗೆ ﷺ ಅವಮಾನ ಮಾಡುವುದನ್ನು ಅಬೂತ್ವಲಿಬ್’ರು ಯಾವುದೇ ಕಾರಣಕ್ಕೂ ಅನುಮತಿಸುವುದಿಲ್ಲ ಎಂದು ಅವರಿಗೆ ಅರ್ಥವಾಗಿತ್ತು. ಹಾಗಾಗಿ ಅವರು ಉಮಾರತ್ ಬಿನ್ ವಲೀದ್ ಎನ್ನುವ ಸುಂದರ ಯುವಕನನ್ನು ಜೊತೆಯಲ್ಲಿ ಸೇರಿಸಿ, ಅಬೂತ್ವಾಲಿಬರನ್ನು ಭೇಟಿಯಾಗಲು ತೆರಳಿದರು. ಬಹಳಷ್ಟು ಸುಂದರನೂ, ಯುವಕನೂ ಆದ, ಉಮಾರನನ್ನು ನಿಮ್ಮ ಮಗನಾಗಿ ಸ್ವೀಕರಿಸಿ, ಆ ಮುಹಮ್ಮದ್’ರನ್ನು ﷺ ನಮಗೆ ಬಿಟ್ಟು ಕೊಡಿ, ನಾವು ಮುಂದಿನ ತೀರ್ಮಾನ ಆಲೋಚಿಸುತ್ತೇವೆ. ಎಂದು ಹೇಳಿದಾಗ, ಅಬೂತ್ವಾಲಿಬರು ಛೇ ಇದೆಂಥ ನೀಚ ಮನಸ್ಥಿತಿ.! ನನ್ನ ಮಗನನ್ನು ನಿಮಗೆ ಸಾಯಿಸಲು ಬಿಟ್ಟು ಕೊಟ್ಟು, ನಿಮ್ಮ ಮಗನನ್ನು ನಾನು ಸಾಕಬೇಕಾ.? ಪ್ರಾಣಿಗಳು ಕೂಡ ಇಂತಹ ವರ್ತನೆ ಮಾಡುವುದಿಲ್ಲ, ಅವುಗಳು ಯಾವತ್ತಾದರೂ ಇತರ ಜೀವಿಗಳ ಮರಿಗಳ ತನ್ನ ಮರಿಯಾಗಿ ಕಂಡದ್ದು ನೀವು ನೋಡಿದ್ದೀರಾ.? ಎಂದು ಹೇಳಿದರು.

ಮುತ್ವ್’ಇಮು ಬಿನ್ ಅದಿಯ್ ಮುಂದೆ ಬಂದು, ಅದು ಹಾಗೆ ಅಲ್ಲ ಅಬೂತ್ವಾಲಿಬ್’ರವರೇ, ನಾವು ನಿಮ್ಮಲ್ಲಿ ನ್ಯಾಯವಾಗಿ ಅಲ್ಲವೇ ವರ್ತಿಸಿದ್ದು, ನೀವು ಯಾಕೆ ಸಮಸ್ಯೆ ಪರಿಹಾರ ಮಾಡಲು ಮುಂದಾಗುವುದಿಲ್ಲ .?ಎಂದು ಹೇಳಿದಾಗ, ಇಲ್ಲ.! ನೀವು ನ್ಯಾಯವಾಗಿ ವರ್ತಿಸಲೇ ಇಲ್ಲ, ಬದಲಾಗಿ ಅವಮಾನ ಮಾಡಲು ಬಂದದ್ದು. ಸಾರ್ವಜನಿಕವಾಗಿ ಎಲ್ಲರೂ ನನ್ನನ್ನು ಎದುರಿಸಲೆಂದೇ ಜನರನ್ನು ಕೆರಳಿಸಿ ಇಲ್ಲಿಗೆ ಬಂದದ್ದು, ಸರಿ ಇನ್ನೂ ನೀವು ಇಷ್ಟಬಂದದ್ದು ಮಾಡಿ ಎಂದು ರೋಷದಿಂದಲೇ ಹೇಳಿದರು.

ಹೀಗೆ ಅವರೆಲ್ಲರೂ ಸಾರ್ವಜನಿಕವಾಗಿಯೇ ವಿರೋಧಿಸಲು ಆರಂಭಿಸಿದರು. ಅವಮಾನದ ಮಾತುಗಳು ಕೇಳಲು ಆರಂಭಿಸಿದವು. ಪ್ರತಿಯೊಂದು ಜನಾಂಗವೂ ಕೂಡ ಅವರ ನಡುವೆ ಇಸ್ಲಾಮ್ ಸ್ವೀಕರಿಸಿದ ಜನರಿಗೆ ಕಿರುಕುಳ ನೀಡಲು ಮುಂದಾದರು. ಆದರೆ ಅಬೂತ್ವಾಲಿಬ್ ಮಾತ್ರ ಮುಹಮ್ಮದ್’ರಿಗೆ ﷺ ಸುರಕ್ಷತೆ ನೀಡಲು ತೀರ್ಮಾನಿಸಿದರು. ಅವರ ಕುಟುಂಬದ ಬನೂ ಹಾಷಿಂ, ಬನುಲ್ ಮುತ್ವಲಿಬ್’ನ ಎಲ್ಲಾ ಸದಸ್ಯರನ್ನು ಜೊತೆ ಸೇರಿಸಿ, ನಮ್ಮ ಕುಟುಂಬದ ಸದಸ್ಯನಾದ ಮುಹಮ್ಮದ್’ರನ್ನು ﷺ ನಾವು ರಕ್ಷಣೆ ಮಾಡಬೇಕು ಎಂದು ಅವರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದಾಗ ಅಬೂಲಹಬನ್ನು ಬಿಟ್ಟು ಬಾಕಿ ಎಲ್ಲರೂ ಅದಕ್ಕೆ ಸಮ್ಮತಿ ನೀಡಿದರು.
ಪ್ರವಾದಿಯವರ ﷺ ಗುಣಗಾನ ಹೇಳುತ್ತಾ, ಅಬೂತ್ವಾಲಿಬರು ಹೀಗೆ ಹಾಡಿದರು, (ಇದಜ್’ತಮಅತ್ ಯೌಮನ್ ಖುರೈಶುನ್…)
ಖುರೈಶಿಗಳೆಲ್ಲರೂ ಒಂದು ದಿನ ಒಟ್ಟು ಸೇರಿದರೆ,
ಅಬ್’ದುಮನಾಫಲ್ಲವೇ ಅವರಲ್ಲಿ ಉನ್ನತರು.
ಅಬ್’ದುಮನಾಫಿನ ಗಣ್ಯರು ಮಾತ್ರ ಬಂದಾಗ,
ಹಾಷಿಮಲ್ಲವೇ ಅವರಲ್ಲಿ ಉನ್ನತರು.
ಅವರಲ್ಲೂ ಉನ್ನತ ವ್ಯಕ್ತಿ ಯಾರೆಂದು ನೋಡುವುದಾದರೆ
ಅತ್ಯುನ್ನತ ವ್ಯಕ್ತಿತ್ವವಾದ ಮುತ್ತು ಮುಹಮ್ಮದ್ ﷺ ಆಗಿರುವರು.

ಹೀಗಿರುವಾಗ ಒಂದು ದಿನ ಪ್ರವಾದಿಯವರು ﷺ ಕಅಬಾಲದ ಪಕ್ಕದಲ್ಲಿ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ, ಅಬೂಜಹಲ್ ಅವರ ಮುಂದೆ ಬಂದು, ಪ್ರವಾದಿಯವರ ﷺ ಬಳಿ ಅಹಂಕಾರದಿಂದ ವರ್ತಿಸತೊಡಗಿದನು, ಬಹಳಷ್ಟು ಕಿರುಕುಳ ನೀಡಿದನು. ಆದರೆ ಪ್ರವಾದಿಯವರು ﷺ ಯಾವುದಕ್ಕೂ ಪ್ರತಿಕ್ರಿಯೆ ನೀಡದೆ ಅಲ್ಲಿಂದ ಮುಂದೆ ಹೋದರು. ಸುತ್ತಮುತ್ತಲಿನ ಜನರೆಲ್ಲರೂ ಅದನ್ನು ನೋಡುತ್ತಾ ನಿಂತಿದ್ದರು.
ಅಷ್ಟರಲ್ಲೇ ಪ್ರವಾದಿಯವರ ﷺ ಚಿಕ್ಕಪ್ಪ ಹಂಝ’ರವರು ಬೇಟೆ ಮುಗಿಸಿ ಬರುತ್ತಿದ್ದರು. ಅವರ ಮುಂದಿನಿಂದ ಹಾದು ಹೋದ ಇಬ್ಬರು ಮಹಿಳೆಯರು, ಅಬೂಜಹಲ್ ಮುಹಮ್ಮದ್’ರಿಗೆ ﷺ ಕಿರುಕುಳ ಕೊಟ್ಟದ್ದು ಇವರಿಗೆ ತಿಳಿದರೆ ಏನಾಗಬಹುದು.? ಎಂದು ಮಾತಾಡುತ್ತಿದ್ದದ್ದು ಅವರ ಕಿವಿಗೆ ಬಿತ್ತು. ತಕ್ಷಣವೇ ಹಂಝ ಅವರಲ್ಲಿ ಎಲ್ಲಾ ವಿಷಯಗಳನ್ನು ಕೇಳಿ ತಿಳಿದುಕೊಂಡರು. ಅದನ್ನು ಕೇಳಿದ ಹಂಝರ ರಕ್ತ ಕುದಿಯತೊಡಗಿತು. ಅವರು ನೇರವಾಗಿ ಕಅಬಾಲಯದ ಬಳಿ ಹೆಜ್ಜೆ ಹಾಕಿದರು. ಸಾಮಾನ್ಯವಾಗಿ ಬೇಟೆ ಮುಗಿಸಿ ಕಅಬಾಲಯದ ಪ್ರದಕ್ಷಿಣೆ ಹಾಕಿ ಮನೆಗೆ ಹೋಗುವುದು ರೂಢಿಯಾಗಿತ್ತು.
ಅದೋ ಮಸ್ಜಿದ್’ನ ಒಂದು ಮೂಲೆಯಲ್ಲಿ ಅಬೂಜಹಲ್ ನಿಂತಿದ್ದನು. ಹಂಝ ನೇರವಾಗಿ ಅವನ ಬಳಿ ಹೋಗಿ ಬಿಲ್ಲಿನಿಂದ ಅವನ ತಲೆಯನ್ನು ಎತ್ತಿ, ನಾನು ಮುಹಮ್ಮದ್’ರ ﷺ ಧರ್ಮವನ್ನು ಸೇರುತ್ತಿದ್ದೇನೆ. ನೀವು ನಿಜಾವಾಗಿಯೂ ಸತ್ಯವಂತರೆ ಆಗಿದ್ದಲ್ಲಿ ನನ್ನನ್ನು ತಡೆಯಿರಿ ನೋಡೋಣ. ಎಂದು ಹೇಳಿದಾಗ, ಖುರೈಷಿಗಳ ಅವರ ಮೇಲೆ ಮುಗಿ ಬಿದ್ದು, ಇದೇನು ಹೇಳುತ್ತಿದ್ದೀರ.? ಅಬೂಯಅಲಾ.. ಅಬೂಯಅಲಾ. (ಇದೇನು ಹೇಳುತ್ತಿದ್ದೀರ ಹಂಝ)

ಈ ಘಟನೆಯ ಕುರಿತು ಇನ್ನೊಂದು ಉಲ್ಲೇಖದಲ್ಲಿ ಈ ರೀತಿ ಕಾಣಬಹುದು. ಪ್ರವಾದಿಯವರು ﷺ ಸಫಾ ಪರ್ವತದ ಬಳಿ ಕುಳಿತಿದ್ದರು. ಅಷ್ಟೊತ್ತಿಗೆ ಅಬೂಜಹಲ್ ಆ ದಾರಿಯಲ್ಲಿ ಬಂದವನೇ, ಪ್ರವಾದಿಯವರನ್ನು ﷺ ಬಾಯಿಗೆ ಬಂದಂತೆ ನಿಂದಿಸಲು ಆರಂಭಿಸಿದನು. ಆದರೂ ಪ್ರವಾದಿಯವರು ﷺ ಸುಮ್ಮನೆ ಕುಳಿತಿದ್ದರು. ಈ ದೃಶ್ಯವನ್ನು ಅಬ್ದುಲ್ಲಾಹಿಬಿನ್ ಜೂದಆನ್’ರ ಸೇವಕಿ ಅವರ ಮನೆಯಲ್ಲಿ ಕುಳಿತು ಕಾಣುತ್ತಿದ್ದರು. ಸ್ವಲ್ಪ ಸಮಯದ ನಂತರ ಹಂಝರವರು ತಮ್ಮ ಬೇಟೆ ಮುಗಿಸಿ ಆ ದಾರಿಯಲ್ಲಿ ನಡೆದು ಬಂದು, ಕಅಬಾಲಯದ ಪ್ರದಕ್ಷಿಣೆ ಹಾಕಿ ಸಾಮಾನ್ಯವಾಗಿ ಹೋಗುವ ಹಾಗೆ ಖುರೈಷಿಗಳು ಮಾತುಕತೆ ನಡೆಸುವ ಕಟ್ಟೆಯ ಬಳಿ ತೆರಳಿದರು. ತಕ್ಷಣವೇ ಆ ಸೇವಕಿ ಅವರ ಬಳಿ ಬಂದು, ಓ ಅಬೂಉಮಾರಃ ಸ್ವಲ್ಪ ಹೊತ್ತಿಗೆ ಮುಂಚೆ, ಅಬುಲ್ ಹಕಮ್ ನಿಮ್ಮ ಅಣ್ಣನ ಮಗನಿಗೆ ಏನು ಮಾಡಿದನು ಎಂದು ನಿಮಗೆ ಗೊತ್ತೇ.? ಎಂದು ಹೇಳಿದಾಗ…

Mahabba Campaign Part-69/365

ಸೇವಕಿಯು ನಡೆದ ಎಲ್ಲಾ ಘಟನೆಯನ್ನು ವಿವರಿಸಿದಳು. ಅದನ್ನು ಕೇಳಿದ ಹಂಝರ ◌ؓ ಕೋಪವು ನೆತ್ತಿಗೇರಿತು. ಅವರು ನೇರವಾಗಿ ಮಸ್ಜಿದಿಗೆ ಲಕ್ಷ್ಯವಿಟ್ಟು ಹೆಜ್ಜೆ ಹಾಕಿದರು. ಅಬೂಜಹಲ್ ತನ್ನ ಗೆಳೆಯರೊಂದಿಗೆ ಹರಟೆ ಹೊಡೆಯುತ್ತಾ ಕುಳಿತಿದ್ದನು. ಅವನ ಬಳಿ ಹೋದ ಹಂಝರವರು, ◌ؓ ತಮ್ಮ ಕೈಯಲ್ಲಿದ್ದ ಬಿಲ್ಲಿನಿಂದ ಅವನ ತಲೆಗೊಂದು ಏಟು ಕೊಟ್ಟು ಸಿಟ್ಟಿನಿಂದ, ನೀನು ಮುಹಮ್ಮದ್’ರನ್ನು ﷺ ನಿಂದಿಸುತ್ತೀಯ.? ಸರಿಯಾಗಿ ಕೇಳು ಈಗ ನಾನು ಕೂಡ ಅವರ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ. ನಿನಗೆ ತಾಕತ್ತಿದ್ದರೆ ನನ್ನನ್ನು ಎದುರಿಸು ನೋಡೋಣ.! ಎಂದು ಹೇಳಿದರು. ಅದನ್ನು ಕೇಳಿದ ತಕ್ಷಣವೇ ಅಬೂಜಹಲಿನ ಸಂಬಂಧಿಕರಾದ ಬನೂಮಖ್’ಸೂಗಳು ಅವರನ್ನು ಎದುರಿಸಲು ಮುಂದಾದಾಗ, ಅಬೂಜಹಲ್ ಅವರನ್ನು ತಡೆದು ನಿಲ್ಲಿಸಿ, ಅವರನ್ನು ಬಿಟ್ಟು ಬಿಡಿ. ಅವರ ಸಿಟ್ಟಿನಲ್ಲೂ ಅರ್ಥವಿದೆ, ನಾನು ಅವರ ಅಣ್ಣನ ಮಗನನ್ನು ಬಹಳಷ್ಟು ನಿಂದಿಸಿದ್ದೇನೆ ಎಂದು ಹೇಳಿದನು.

ನಂತರ ಅಲ್ಲಿಂದ ಮನೆಕಡೆ ಹೊರಟಿದ್ದ ಹಂಝರಲ್ಲಿ ◌ؓ ಬಹಳಷ್ಟು ಜನರು ಬಂದು, ನೀವು ಕೂಡ ಆ ಸಾಬಿಯಿಗಳ ಧರ್ಮವನ್ನು ಸೇರುತಿದ್ದೀರಾ.? ಖುರೈಷಿಗಳ ನಾಯಕರಾದ ನೀವು ತಮ್ಮ ಪೂರ್ವಿಕರನ್ನು ವಿರೋಧಿಸುತ್ತಿದ್ದೀರ.? ಅದಕ್ಕಿಂತ ಸಾಯುವುದೇ ಒಳ್ಳೆಯದು ಅಲ್ವಾ.? ಎಂದು ಹೇಳುತ್ತಿದ್ದ ಚುಚ್ಚುಮಾತುಗಳು, ಹಂಝರವರ ◌ؓ ಮನಸ್ಸಿಗೆ ನಾಟಿತ್ತು. ನಂತರದ ದಿನಗಳಲ್ಲಿ ಹಂಝರವರು ◌ؓ ಈ ಘಟನೆಯ ಕುರಿತು, ನಾನು ಅವತ್ತಿನ ದಿನ ಅನುಭವಿಸಿದಷ್ಟು ನೋವು ಯಾವತ್ತೂ ಉಂಟಾಗಿರಲಿಲ್ಲ. ಪಿಶಾಚಿಯೂ ನನ್ನನ್ನು ದಾರಿ ತಪ್ಪಿಸುವ ಹಲವಾರು ಯೋಚನೆಗಳನ್ನು ನನ್ನ ತಲೆಯಲ್ಲಿ ಹಾಕಿದ್ದವು, ಕೊನೆಗೆ ನಾನು ಅಲ್ಲಾಹನಲ್ಲಿ ನಾನು ಸ್ವೀಕರಿಸಿದ ದಾರಿ ಸತ್ಯವಾದ ಧರ್ಮವಾಗಿದ್ದರೆ.? ನನ್ನ ಮನಸ್ಸಿನಲ್ಲಿ ಅದರ ವಿಶ್ವಾಸವನ್ನು ಗಟ್ಟಿಗೊಳಿಸಬೇಕು. ಇಲ್ಲದಿದ್ದರೆ ಸರಿಯಾದ ದಾರಿಯನ್ನು ತೋರಿಸಿ ಕೊಡಬೇಕು ಎಂದು ಪ್ರಾರ್ಥಿಸಿದೆನು. ಮರು ದಿನ ಪ್ರವಾದಿಯವರ ﷺ ಬಳಿ ತೆರಳಿ, ನಾನು ಬಹಳಷ್ಟು ಗೊಂದಲದಲ್ಲಿದ್ದೇನೆ, ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ. ದಯವಿಟ್ಟು ನನ್ನನ್ನು ಸಮಾಧಾನ ಪಡಿಸಿರಿ ಎಂದು ವಿನಮ್ರವಾಗಿ ಹೇಳಿದೆನು. ಪ್ರವಾದಿಯವರು ﷺ ನನಗೆ ಇಸ್ಲಾಮಿನ ಸುಂದರ ಆದರ್ಶಗಳನ್ನು ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ಅದನ್ನು ಕೇಳಿದ ನಂತರ ನನ್ನ ಮನಸ್ಸಿನಲ್ಲಿ ಇಸ್ಲಾಮ್ ಬಲವಾಗಿ ಬೇರೂರಿತು. ನಂತರ ನಾನು ಅವರಲ್ಲಿ, ನಿಜವಾಗಿಯೂ ನೀವು ಅಲ್ಲಾಹನ ಸಂದೇಶವಾಹಕರೇ ಆಗಿರುವಿರಿ, ನಾನೂ ಇನ್ನೂ ಕೂಡ ಅದೇ ಹಳೆಯ ಧರ್ಮವನ್ನು ಸ್ವೀಕರಿಸಿದರೆ ಆಕಾಶದಿಂದ ಲಭಿಸುವ ಯಾವುದೇ ಅನುಗ್ರಹವನ್ನೂ ಅನುಭವಿಸಲು, ನನಗೆ ಅರ್ಹತೆ ಇರಲಾರದು ಎಂದು ಹೇಳಿದೆನು. ಹಂಝರವರು ◌ؓ ತಮ್ಮ ಆದರ್ಶವನ್ನು ಗಟ್ಟಿಗೊಳಿಸಿ, ಪ್ರವಾದಿಯವರ ﷺ ಜೊತೆಯಲ್ಲೇ ನಿಂತರು. ಇದರೊಂದಿಗೆ ಶತ್ರುಗಳ ಎಲ್ಲಾ ಕುತಂತ್ರವೂ ಕೂಡ ಮಣ್ಣು ಪಾಲಾಯಿತು. ಧೀರನೂ ಪರಾಕ್ರಮಿಯೂ ಆದ ಹಂಝರವರು ◌ؓ ಪ್ರವಾದಿಯವರ ﷺ ಜೊತೆ ಸೇರಿರುತ್ತಾರೆ, ಎನ್ನುವ ಸತ್ಯವು ಎಲ್ಲರಿಗೂ ಅರ್ಥ ಆಗಿತ್ತು.

ಹಂಝರವರು ◌ؓ ಇಸ್ಲಾಮ್ ಸ್ವೀಕರಿಸಿದ ಘಟನೆಯನ್ನು ನೆನೆಪಿಸುತ್ತಾ, ಪವಿತ್ರ ಕುರ್’ಆನಿನ ಅಲ್’ಫತ್’ಹ್ ಅಧ್ಯಾಯದ ಇಪ್ಪತ್ತಾರನೇ ಸೂಕ್ತವೂ ಅವತರಿಸಿತು. ಅದರ ಅನುವಾದವು ಈ ರೀತಿಯಾಗಿದೆ. “ಸತ್ಯ ನಿಷೇಧಿಗಳು ಅವರ ಮನಸ್ಸಿನಲ್ಲಿ, ಅಜ್ಞಾನ ತುಂಬಿದ ಸಮಯದಲ್ಲಿದ್ದ ದುರಾಭಿಮಾನಗಳನ್ನು ಎತ್ತಿಹಿಡಿದು ವಂಚಿಸಲು ಪ್ರಯತ್ನಿಸಿದಾಗ, ಅಲ್ಲಾಹನು ಅವನ ದೂತರ ಹಾಗೂ ಸತ್ಯ ವಿಶ್ವಾಸಿಗಳ ಮನಸ್ಸಿಗೆ ಸಮಾಧಾನ ನೀಡಿದನು. ಅವರನ್ನು ಬಯಭಕ್ತಿಯ ವಚನದ ಮೇಲೆ ಬದ್ಧರಾಗುವಂತೆ ಮಾಡಿದನು. ಏಕೆಂದರೆ ಅದಕ್ಕವರು ಅರ್ಹತೆ ಇರುವವರು ಆಗಿದ್ದರು, ಅಲ್ಲಾಹನು ಎಲ್ಲಾ ವಿಷಯಗಳನ್ನು ಚೆನ್ನಾಗಿ ಬಲ್ಲವನಾಗಿರುತ್ತಾನೆ”.

ಇಸ್ಲಾಂ ಸ್ವೀಕರಿಸಿದ ಹಂಝರವರು ◌ؓ ಅಭಿಮಾನದಿಂದ ಸುಂದರ ಕವಿತೆಯನ್ನು ಹೀಗೆ ಹಾಡಿದರು.
(ಹಮಿದ್ ತುಲ್ಲಾಹ್ ಹೀನ ಹದಾ ಫುಆದಿ…)
ಸೃಷ್ಟಿಕರ್ತನು ನನಗೆ ಇಸ್ಲಾಮನ್ನು ಅನುಗ್ರಹಿಸಿ ಕೊಟ್ಟನು
ಸತ್ಯ ದಾರಿ ತೋರಿಸಿದ ನಿನಗೆ ಸ್ತುತಿಸುತ್ತಿರುವೆನು ಒಡೆಯ
ಅಭಿಮಾನ ಪಡುತ್ತೇನೆ, ನೀನು ಸತ್ಯದ ದಾರಿ ತೋರಿಸಿದ್ದರಲ್ಲಿ
ಅವನು ಗುಲಾಮರಿಗೆ ಯಾವತ್ತೂ ಪರಿಹಾರ ನೀಡುತ್ತಲೇ ಇರುವನು .
ಅಲ್ಲಾಹನ ಸಂದೇಶವನ್ನು ತಿಳಿಸುವ ಜ್ಞಾನಿಯನ್ನು
ಹೃದಯದಲ್ಲಿ ಇರಿಸಿದರೆ ಆನಂದ ಭಾಷ್ಪವು ಹರಿಯುವುದು.
ಅಹ್’ಮದರ ﷺ ಸಂದೇಶವನ್ನು ಸ್ಪಷ್ಟವಾಗಿ ಉಲ್ಲೇಖಿಸಿದರೆ
ಮಾತು ಕೂಡ ಜಗಳವಾಡಿ, ಮೊಳಗಿಸುತ್ತದೆ ವ್ಯಂಜನಾಕ್ಷರಗಳನ್ನು.
ಹಿಂಬಾಲಿಸುವರು ಜನರು ಅಹ್’ಮದ್ ಮುಸ್ತಫರನ್ನು ﷺ
ಅದನ್ನು ತಡೆಯಲು ಸಾಧ್ಯವಿಲ್ಲ ದುರ್ಬಲ ಮಾತುಗಳಿಂದ .

Mahabba Campaign Part-70/365

ಹಂಝರವರು ◌ؓ ಇಸ್ಲಾಮ್ ಸ್ವೀಕರಿಸಿದ್ದು ಖುರೈಷಿಗಳ ಭಾವನೆಗೆ ಬಹಳಷ್ಟು ಧಕ್ಕೆ ಉಂಟಾಗಿತ್ತು. ಕುರ್’ಆನಿನ ಸಂದರ್ಭೋಚಿತ ಅವತರಣೆಯೂ ಕೂಡ ಅವರನ್ನು ಬಹಳಷ್ಟು ಕಾಡಿತ್ತು. ಹೇಗಾದರೂ ಪ್ರವಾದಿಯವರನ್ನು ﷺ ಎದುರಿಸಲೇ ಬೇಕು, ಅದಕ್ಕಾಗಿ ಹಲ್ಲೆ ನಡೆಸುವುದಕ್ಕೂ ಸಿದ್ಧ, ಅಪವಾದ ಹೊರೆಸುವುದಕ್ಕೂ ಸಿದ್ಧ ಎನ್ನುವಷ್ಟರ ಮಟ್ಟಿಗೆ ತಲುಪಿದ್ದರು. ಅದಕ್ಕಾಗಿ ಖುರೈಷಿಗಳಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಸೇರಿ, ಸಭೆ ನಡೆಸಿ ಒಂದು ತೀರ್ಮಾನಕ್ಕೆ ಬಂದರು. ನಮ್ಮ ಭಾಗದಿಂದ ವಾಮಾಚಾರ, ಜ್ಯೋತಿಷ್ಯ ವಿದ್ಯೆ, ಕವಿತೆ, ಮುಂತಾದ ಕಲೆಗಳಲ್ಲಿ ಪ್ರಾವೀಣ್ಯತೆ ಹೊಂದಿರುವ ಒಬ್ಬ ವ್ಯಕ್ತಿಯನ್ನು ಮುಹಮ್ಮದ್’ರ ﷺ ಮುಂದೆ ನಿಲ್ಲಿಸಿ, ಅವರನ್ನು ಪರೀಕ್ಷಿಸೋಣ. ಮುಹಮ್ಮದ್’ರಿಂದ ﷺ ಏನು ಉತ್ತರ ಬರುತ್ತದೆ ಎಂದು ನೋಡೋಣ. ಅದಕ್ಕಾಗಿ ಈಗ ಮುಹಮ್ಮದ್’ರಿಗೆ ﷺ ಇವುಗಳಲ್ಲಿ ಯಾವುದೇ ಕುರಿತು ಅರಿವಿದೆ ಎಂದು ತಿಳಿಯಲು, ಒಬ್ಬ ವ್ಯಕ್ತಿಯು ಹೋಗಿ ಭೇಟಿಯಾಗಬೇಕು. ಎಂದು ಹೇಳಿದಾಗ, ಎಲ್ಲರೂ ಒಂದೇ ಧ್ವನಿಯಲ್ಲಿ ಉತ್’ಬತ್ ಬಿನ್ ರಬೀಅ ಅಲ್ಲದೆ ಇನ್ಯಾರಿದ್ದಾರೆ ಇದಕ್ಕೆ ಯೋಗ್ಯವಾದ ವ್ಯಕ್ತಿ. ಅವರು ಉತ್’ಬತ್ ಬಿನ್ ರಬೀಅರನ್ನು ನೋಡಿದ ಕೂಡಲೇ ನೀವು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.

ಉತ್’ಬ ಪ್ರವಾದಿಯವರನ್ನು ﷺ ಭೇಟಿಯಾಗಿ, ಪರಸ್ಪರ ಮಾತಾಡಲು ಆರಂಭಿಸಿದರು. ಓ ಮುಹಮ್ಮದ್’ರೇ ﷺ ನೀವು ಉತ್ತಮ ಮನೆತನದಿಂದ ಬಂದಿರುವ, ಒಳ್ಳೆಯ ಸ್ಥಾನವನ್ನು ಹೊಂದಿರುವ ವ್ಯಕ್ತಿ ಆಗಿರುವಿರಿ. ಆದರೆ ನಿಮ್ಮ ಪ್ರವಾದಿತ್ವದ ಘೋಷಣೆಯಿಂದ, ಎಷ್ಟು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಬೇಕು ಎನ್ನುವುದು ಗೊತ್ತೇ ನಿಮಗೆ.? ನೀವು ಪೂರ್ವಿಕರನ್ನು ವಿರೋಧಿಸಿದ್ರಿ, ಅವರ ದೇವರುಗಳನ್ನು ನಿಷೇಧ ಮಾಡಿದ್ರಿ, ಇನ್ನೂ ಏನೇನೋ ಮಾಡಿದ್ರಿ. ಸರಿ ಹಾಗಿದ್ರೆ ನಾನೊಂದು ವಿಷಯ ಕೇಳಲೇ.? ನಿಮ್ಮ ತಂದೆ ಅಬ್ದುಲ್ಲಾಹ್’ರಿಗಿಂತ ನೀವು ಶ್ರೇಷ್ಠರೇ.? ಅಬ್ದುಲ್ ಮುತ್ತಲಿಬರಿಗಿಂತ ಮಹಾ ವ್ಯಕ್ತಿಯೋ ನೀವು.? ಬಹುಶಃ ಅವರೇ ಅತ್ಯುನ್ನತ ವ್ಯಕ್ತಿ ಆಗಿದ್ದಲ್ಲಿ, ಅವರ್ಯಾರೂ ಇಂತಹ ಕೆಲಸಗಳನ್ನು ಮಾಡಿಲ್ಲವಲ್ಲ.? ಇನ್ನೂ ಅವರಿಗಿಂತ ಶ್ರೇಷ್ಠತೆ ನಿಮಗಿದ್ದರೆ ಹೇಳಿ ನಾವು ಕೇಳುತ್ತೇವೆ. ಯಾವುದೇ ಜನಾಂಗದಲ್ಲೂ ಇಂತಹ ವ್ಯಕ್ತಿ ಇರಲಿಕ್ಕಿಲ್ಲ. ದೇವರುಗಳನ್ನು ವಿರೋಧಿಸಿ, ಸಾಮರಸ್ಯವನ್ನು ನಷ್ಟಪಡಿಸಿ, ಕೊನೆಗೆ ಅರಬಿಗಳ ನಡುವೆ ತಮ್ಮ ಘನತೆಯನ್ನೂ ಕಳೆದುಕೊಂಡು, ಎಲ್ಲರಿಂದಲೂ ತಮಾಷೆಗೆ ಒಳಗಾಗುತ್ತಿದ್ದೀರಿ. ಖುರೈಷಿಗಳಲ್ಲಿ ಈಗ ಒಬ್ಬ ಜ್ಯೋತಿಷಿ ಬಂದಿದ್ದಾರೆ, ವಾಮಾಚಾರಿ ಬಂದಿದ್ದಾರೆ ಎಂದು. ಇದು ಹೀಗೆ ಮುಂದುವರಿದರೆ ಸಮಸ್ಯೆ ಇನ್ನಷ್ಟು ಗಂಭೀರವಾಗಿ ಇನ್ನೇನೋ ಅನಾಹುತ ಆಗುವ ಸಾಧ್ಯತೆ ಅಧಿಕವಿದೆ. ಹಾಗಾಗಿ ನಾನು ಕೆಲವು ವಿಷಯಗಳನ್ನು ಕೇಳುತ್ತೇನೆ. ಅದರಲ್ಲಿ ನಿಮಗೆ ಯಾವುದರ ಅಗತ್ಯವಿದೆ ಎಂದು ಹೇಳಿದರೆ ಸಾಕು ಎಂದು ಹೇಳಿದಾಗ, ಪ್ರವಾದಿಯವರು ﷺ ಅದಕ್ಕೆ ಸಮ್ಮತಿ ನೀಡಿದರು.

ಉತ್’ಬ ಮಾತು ಮುಂದುವರೆಸಿ, ಓ ಮುಹಮ್ಮದರೇ ﷺ, ನಿಮ್ಮ ಈ ಹೊಸ ಆದರ್ಶದ ತಾತ್ಪರ್ಯ ಹಣ ಸಂಪಾದನೆ ಆಗಿದಿಯೇ.? ಹಾಗಿದ್ದಲ್ಲಿ ನಿಮ್ಮನ್ನು ಇಲ್ಲಿರುವ ಅತೀ ದೊಡ್ಡ ಶ್ರೀಮಂತ ವ್ಯಕ್ತಿಯಾಗಿ ನಾವು ಮಾಡುತ್ತೇವೆ. ಅಥವಾ ನೀವು ಬಯಸುತ್ತಿರುವುದು ನಾಯಕತ್ವವಾಗಿದೆಯೇ.?, ಹಾಗಿದ್ದಲ್ಲಿ ನಾವೆಲ್ಲರೂ ನಿಮ್ಮನ್ನೇ ನಮ್ಮ ನಾಯಕನಾಗಿ ಅಂಗೀಕಾರ ಮಾಡುತ್ತೇವೆ. ಅದೂ ಅಲ್ಲ ರಾಜನ ಪದವಿ ಬೇಕಾಗಿದೆಯೇ ನಿಮಗೆ.? ನಾವೆಲ್ಲರೂ ನಿಮ್ಮನ್ನು ರಾಜನಾಗಿ ಅಂಗೀಕರಿಸುತ್ತೇವೆ. ಅದೇನು ಅಲ್ಲದೆ ಏನಾದರೂ ಸಮಸ್ಯೆಗೆ ಒಳಗಾಗಿ ಹೀಗೆ ಹೇಳುವುದಾದರೆ, ಎಷ್ಟೇ ಖರ್ಚಾದರೂ ಚಿಂತೆಯಿಲ್ಲ ನಾವು ಸರಿ ಮಾಡುತ್ತೇವೆ. ಎಂದು ಹೇಳಿದರು.

ಪ್ರವಾದಿಯವರು ﷺ ಎಲ್ಲವನ್ನು ಬಹಳ ಶ್ರದ್ಧೆಯಿಂದ ಕೇಳಿದ ನಂತರ, ಓ ಅಬುಲ್ ವಲೀದ್ ನಿಮಗೆ ಕೇಳಲಿದ್ದ ಎಲ್ಲಾ ಮಾತುಗಳನ್ನು ಕೇಳಿ ಆಯಿತೆ.? ಹಾಗಿದ್ದಲ್ಲಿ ನಾನು ಮಾತು ಮುಂದುವರಿಸಲೇ ಎಂದು ಕೇಳಿದಾಗ, ಉತ್’ಬಃ ಸಮ್ಮತಿಸಿದರು.
ಪ್ರವಾದಿಯವರು ﷺ ಬಿಸ್ಮಿಲ್ಲಾಹಿ… ಎಂದು ಪವಿತ್ರ ಕುರ್’ಆನಿನ ನಲ್ವತ್ತೊಂದನೇ ಅಧ್ಯಾಯದ ಮೊದಲ ಭಾಗವನ್ನು ಪಠಿಸಿದರು. (ಹಾಮೀಂ…) ಸೂಕ್ತದ ಅರ್ಥವನ್ನು ಈ ರೀತಿ ತಿಳಿಯೋಣ. “ಹಾಮೀಂ.. ಗ್ರಹಿಸಿಕೊಳ್ಳಲು ಸಾಮರ್ಥ್ಯವಿರುವ ಜನರಿಗಾಗಿ ಅರಬಿ ಭಾಷೆಯಲ್ಲಿ ವಾಚಿಸಲ್ಪಡುವ, ವಚನಗಳನ್ನು ವಿವರಿಸಿದ ಒಂದು ವೇದ ಗ್ರಂಥ. ಸುವಾರ್ತೆಯನ್ನೂ ಮುನ್ನೆಚ್ಚರಿಕೆಯನ್ನೂ ನೀಡುವ ಈ ಗ್ರಂಥ, ಆದರೆ ಹೆಚ್ಚಿನವರು ಕೇಳಿಯೂ ಅರ್ಥ ಮಾಡಿಕೊಳ್ಳದೇ ವಿರೋಧಿಸಿದ್ದಾರೆ”.

ಹೀಗೆ ಮುಂದುವರೆದು ಹದಿಮೂರನೇ ಸೂಕ್ತದ ಬಳಿ ತಲುಪಿದರು. ಅದರ ಅನುವಾದವು ಈ ರೀತಿಯಾಗಿದೆ. “ಅವರು ವಿರೋಧಿಸಿದರೆ, ಪ್ರವಾದಿಯವರೇ ﷺ ನೀವು ಅವರಲ್ಲಿ ಆದ್, ಸಮೂದ್ ಜನಾಂಗಕ್ಕೆ ನೀಡಿದ ಹಾಗೆ ಘೋರವಾದ ಶಿಕ್ಷೆಯನ್ನು ನಿಮಗೂ ಸಿಗಬಹುದು ಎಂದು ಎಚ್ಚರಿಕೆ ನೀಡಿರಿ.” ಎಂದು ಹೇಳುತ್ತಾ ಮುಂದುವರಿಯುತ್ತಿದ್ದಾಗ,
ಅಷ್ಟರವರೆಗೆ ಶಾಂತವಾಗಿ ಕೇಳುತ್ತಿದ್ದ ಆ ವ್ಯಕ್ತಿ ಪ್ರವಾದಿಯವರ ﷺ ಬಾಯಿ ಮುಚ್ಚಲು ಮುಂದಾಗಿ, ಪ್ರವಾದಿಯವರಲ್ಲಿ ﷺ ಇನ್ನೂ ಮುಂದೆ ಹೋಗಬೇಡಿ ಎಂದು ವಿನಂತಿಸಿದರು.
ನಂತರ ಪ್ರವಾದಿಯವರು ﷺ ಸಾಷ್ಟಾಂಗ ಮಾಡಬೇಕಾದ ಸೂಕ್ತದವರೆಗೆ ಪಠಿಸಿ, ಸಾಷ್ಟಾಂಗ (ಸುಜೂದ್) ಮಾಡಿದರು.

Mahabba Campaign Part-71/365

ಪ್ರವಾದಿಯವರು ﷺ ಖುರ್’ಆನ್ ಪಠಿಸಿದ ನಂತರ, ಉತ್’ಬಃ ಪ್ರವಾದಿಯವರಲ್ಲಿ , ನನಗೆ ಹೇಳಲಿಕ್ಕಿರುವುದನ್ನು ನಾನು ಹೇಳಿದನು. ಇನ್ನೂ ನಿಮ್ಮ ಇಷ್ಟದಂತೆ ಮಾಡಿ, ಇದಲ್ಲದೆ ಇನ್ನೇನಾದರೂ ಹೇಳಲಿಕ್ಕಿದೆಯೇ.? ಎಂದು ಉತ್’ಬಃ ಕೇಳಿದಾಗ ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು.

ಉತ್’ಬಃ ಅಲ್ಲಿಂದ ಹೊರಟು ಹೋದರು, ಆದರೆ ತನ್ನನ್ನು ನಿಯೋಗಿಸಿದ ಖುರೈಷಿಗಳ ಬಳಿ ಹೋಗಿರಲಿಲ್ಲ. ಅದಕ್ಕೆ ಅಬೂಜಹಲ್ ಇತರ ಗೆಳೆಯರೊಂದಿಗೆ, ಉತ್’ಬಃ ಮುಹಮ್ಮದ್’ರ ﷺ ಬಲೆಯಲ್ಲಿ ಬಿದ್ದನೋ.? ಎಂದು ಅನಿಸುತ್ತದೆ. ಬಹುಶಃ ಒಳ್ಳೆಯ ಊಟೋಪಚಾರ ಮಾಡಿ ಒಳ್ಳೆಯ ಆತಿಥ್ಯ ನೀಡಿರಬೇಕು, ಹಾಗಾಗಿ ಅವರ ಬಲೆಯಲ್ಲಿ ಬಿದ್ದರಬೇಕು. ಇಲ್ಲದಿದ್ದರೆ ನೇರವಾಗಿ ಇಲ್ಲಿಗೆ ಬರಬೇಕಿತ್ತಲ್ವಾ.? ಸರಿ ನಾವೊಮ್ಮೆ ನೋಡಿ ಬರೋಣ ಎಂದು ಹೇಳಿದಾಗ, ಅವನ ಜೊತೆಯಲ್ಲಿದ್ದವರೂ ಕೂಡ ಎದ್ದು ಅವನ ಜೊತೆಯಲ್ಲಿ ಉತ್’ಬರನ್ನು ಹುಡುಕುತ್ತಾ ನಡೆದರು. ಅವರ ಬಳಿ ತಲುಪಿದಾಗ, ಅಬೂಜಹಲ್ ಮುಂದೆ ಬಂದು, ನೀನು ಆ ಪ್ರವಾದಿಯವರ ﷺ ಬಲೆ ಬಿದ್ದು ಬಿಟ್ಟಿಯ ಹೇಗೆ.? ಅಥವಾ ಅವರು ನೀಡಿದ ಆತಿಥ್ಯ ನಿನ್ನನ್ನು ವಿಸ್ಮಯಗೊಳಿಸಿದಿಯ ಹೇಗೆ.? ನಿನ್ನ ಆಗ್ರಹ ಏನಂತ ಹೇಳು, ನಾವೆಲ್ಲರೂ ಚಂದಾ ವಸೂಲಿ ಮಾಡಿಯಾದ್ರು ನಿನಗೆ ಮೃಷ್ಟಾನ್ನ ಭೋಜನ ತಯಾರು ಮಾಡುತ್ತೇವೆ ಅಂದನು.

ಅದನ್ನು ಕೇಳಿದ ಉತ್’ಬರ ಕೋಪವು ನೆತ್ತಿಗೇರಿತು. ಅವರು ಶಪಥ ಮಾಡುತ್ತಾ ನಾನು ಇನ್ನೂ ಯಾವತ್ತೂ ಮುಹಮ್ಮದ್’ರಲ್ಲಿ ﷺ ಮಾತಾಡುದಿಲ್ಲ ಎಂದು ಹೇಳಿದನು. ಬಹುಶಃ ನೀವುಗಳು ನಾನೂ ಕೂಡ ಒಬ್ಬ ಶ್ರೀಮಂತ ವ್ಯಕ್ತಿ ಎನ್ನುವ ಸತ್ಯವನ್ನು ಮರೆತಿರುವ ಹಾಗೆ ಕಾಣುತ್ತಿದೆ ಎಂದು ಹೇಳುತ್ತಾ, ಅಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿದರು. ಅದನ್ನು ಕೇಳಿದ ಜನರು ನೀವು ಅದಕ್ಕೆ ಏನೆಂದು ಉತ್ತರ ನೀಡಿದಿರಿ.? ಎಂದು ಕೇಳಿದಾಗ. ಮುಹಮ್ಮದ್’ರು ﷺ ಪಠಿಸಿದ ವಾಕ್ಯಗಳು ಬಹಳ ಸ್ಪಷ್ಟವಾಗಿತ್ತು ಆದರೆ ಅದರ ಅನುವಾದ ಮಾತ್ರ ನನಗೆ ಸ್ಪಷ್ಟವಾಗಿ ಅರ್ಥವಾಗಿಲ್ಲ. ಆದರೆ ಅವರು ಆದ್, ಸಮೂದ್, ಜನಾಂಗಕ್ಕೆ ಲಭಿಸಿದ ಹಾಗೆ ಕಠಿಣ ಶಿಕ್ಷೆ ಬರಬಹುದು ಎಂದು ಕೇಳಿದಾಗ, ಮಾತ್ರ ನಾನು ಅವರ ಬಾಯಿ ಮುಚ್ಚಲು ಪ್ರಯತ್ನ ಮಾಡಿದೆನು. ಕಾರಣ ನಿಮಗೆ ಗೊತ್ತಿದೆ ಅಲ್ಲವೇ ಮುಹಮ್ಮದ್’ರು ﷺ ಹೇಳಿದ ಒಂದೇ ಒಂದು ಮಾತು ಕೂಡ ಇವತ್ತಿನವರೆಗೂ ಸುಳ್ಳು ಆಗಲೇ ಇಲ್ಲ ಎಂದು. ಅವರೊಂದು ಮಾತು ಹೇಳಿದರೆ ಅದು ಖಂಡಿತ ವಾಸ್ತವವಾಗಿ ನಡೆದೇ ನಡೆಯುತ್ತದೆ ಎಂದು ಹೇಳಿದರು.

ಉತ್’ಬರ ಮಾತು ಕೇಳಿದ ಜನರು ಕೋಪದಿಂದ, ಇದೇನು ಹೇಳುತ್ತಿದ್ದೀರ.? ಅರಬಿ ಭಾಷೆಯಲ್ಲಿ ಹೇಳಿದ ವಾಕ್ಯಗಳು, ಒಬ್ಬ ಅರಬಿ ಪ್ರಜೆಯಾದ ನಿಮಗೆ ಅರ್ಥ ಆಗಿಲ್ವಾ.? ಎಂದು ಕೇಳಿದಾಗ. ಆ ವಾಕ್ಯಗಳನ್ನು ನಾನು ಗಮವಿಟ್ಟು ಕೇಳಿದ್ದೆ, ಅದೊಂದು ಕವಿತೆಯಾಗಲಿ, ವಾಮಾಚಾರವಾಗಲಿ, ಜ್ಯೋತಿಷ್ಯವಾಗಲಿ, ಆಗಿರಲಿಲ್ಲ. ಓ ಖುರೈಷಿಗಳೇ ನೀವು ಅವರನ್ನು ಅವರಷ್ಟಕ್ಕೆ ಬಿಟ್ಟು ಬಿಡಿ, ಆ ಪ್ರವಾದಿಯವರ ﷺ ಮಾತಿನಲ್ಲಿ ಚಿಂತಿಸುವ ವಿಷಯಗಳಿವೆ. ಅದು ಸಾಕ್ಷಾತ್ಕಾರವಾದರೆ ಅರಬಿಗಳು ಕೂಡ ಉನ್ನತ ಸ್ಥಾನಕ್ಕೆ ತಲುಪುವರು. ಜಯ ಶಾಲಿಗಳಾದರೆ, ಅರಬಿಗಳ ಜಯ, ಅಧಿಕಾರ ಎಲ್ಲವೂ ನಿಮ್ಮ ಪಾಲಿಗೆ ಬಂದು ಸೇರುತ್ತದೆ. ಎಂದು ಉತ್’ಬಃ ಅವರಲ್ಲಿ ಹೇಳಿದರು.

ಅಷ್ಟೇ ಯಾಕೆ ಬೇರೆ ವಿಷಯಗಳನ್ನು ಬಿಟ್ಟು ಬಿಡಿ, ಈ ವಿಷಯದಲ್ಲಿ ಸ್ವತಃ ನನ್ನನ್ನೇ ನೋಡಿ. ಜಗದೊಡೆಯನಾಣೆಗೂ ನಾನು ಇವತ್ತಿನವರೆಗೂ ಅಂತಹ ಒಂದು ವಾಕ್ಯಗಳನ್ನು ಕೇಳಲೇ ಇಲ್ಲ. ಅದನ್ನು ಕೇಳಿದ ನನಗೆ ಉತ್ತರಿಸಲೇ ಮಾತೇ ಇರಲಿಲ್ಲ, ಎಂದು ಕೂಡ ಹೇಳಿದರು.
ಅದನ್ನು ಕೇಳಿದ ಜನರು, ಓ ಅಬುಲ್ ವಲೀದ್ ನಿಮ್ಮ ಮೇಲೂ ಆ ವ್ಯಕ್ತಿಯ ವಾಮಾಚಾರ ಪ್ರಭಾವ ಬೀರಿದೆ ಎಂದು ಹೇಳಿದರು.
ಇಷ್ಟೆಲ್ಲಾ ಚಿಂತನಾರ್ಹ ಘಟನೆಗಳು ಅವರ ಕಣ್ಣು ಮುಂದೆ ನಡೆದರೂ, ಅವರು ಮಾತ್ರ ಅದರ ಬಗ್ಗೆ ಅಧ್ಯಯನ ನಡೆಸಲು ಮುಂದಾಗಲೇ ಇಲ್ಲ. ಬದಲಾಗಿ ಹಗೆಯ, ದ್ವೇಷದ ದಾರಿಯನ್ನೇ ಆಯ್ಕೆ ಮಾಡಿಕೊಂಡರು. ಹೇಗೆ ಮುಹಮ್ಮದ್’ರನ್ನು ﷺ ಮೂಲೆ ಗುಂಪು ಮಾಡಬೇಕು ಎನ್ನುವ ಬಗ್ಗೆಯೇ ಚಿಂತಿಸುತ್ತಿದ್ದರು.

ಒಂದು ದಿನ ಮುಸ್ಸಂಜೆಯ ವೇಳೆಯಲ್ಲಿ ಖುರೈಷಿಗಳ ಗಣ್ಯ ವ್ಯಕ್ತಿಗಳು ಮತ್ತೊಮ್ಮೆ ಕಅಬಾದ ಬಳಿ ಸಭೆ ನಡೆಸಿದರು. ಮುಹಮ್ಮದ್’ರ ﷺ ಕುರಿತು ಚರ್ಚೆ ನಡೆಸಿ ಹೊಸದೊಂದು ತೀರ್ಮಾನಕ್ಕೆ ಬಂದರು. ಮುಹಮ್ಮದ್’ರನ್ನು ﷺ ಆಮಂತ್ರಣ ನೀಡಿ ಕರೆಸೋಣ, ನಂತರ ಅವರಲ್ಲಿ ನೇರವಾಗಿ ಚರ್ಚೆ ನಡೆಸೋಣ, ಪ್ರಶ್ನೆಗಳನ್ನು ಕೇಳೋಣ ಎಂದಾಗಿತ್ತು ಅವರು ತೀರ್ಮಾನಿಸಿದ್ದು. ಹಾಗೆ ಮುಹಮ್ಮದ್’ರನ್ನು ﷺ ಕರೆತರಲು ವ್ಯಕ್ತಿಯನ್ನು ಕಳುಹಿಸಿದರು. ಅವರ ಮಾತಿಗೆ ಬೆಲೆ ಕೊಟ್ಟು ತಕ್ಷಣವೇ ಪ್ರವಾದಿಯವರು ﷺ ಆಗಮಿಸಿದರು. ಕಾರಣ ಬಯಸದೆ ಬಂದ ಭಾಗ್ಯ, ಅವಕಾಶ ಸಿಕ್ಕರೆ ಪ್ರಭೋಧನೆ ನಡೆಸಿ, ಸಮಯವನ್ನು ಸದುಪಯೋಗ ಮಾಡಬಹುದು, ವಾಸ್ತವವಾದ ವಿಷಯಗಳನ್ನು ತಿಳಿಸಿ ಕೊಟ್ಟು, ತಪ್ಪು ತಿಳಿವಳಿಕೆಗಳನ್ನು ದೂರಿಕರಿಸಬಹುದು, ಎನ್ನುವ ಉದ್ದೇಶದಿಂದಾಗಿತ್ತು ತಕ್ಷಣವೇ ಬಂದದ್ದು.
ಹೀಗೆ ಅಲ್ಲಿ ಸೇರಿದ್ದ ಜನರು ಪ್ರವಾದಿಯವರ ﷺ ಬಳಿ ಬಂದು, ಓ ಪ್ರವಾದಿಯವರೇ.! ﷺ ನಿಮ್ಮ ಬಳಿ ಮಾತುಕತೆ ನಡೆಸಲು ನಾವು ಪ್ರತಿನಿಧಿಯೊಬ್ಬರನ್ನು ಕಳುಹಿಸಿ ಕೊಟ್ಟಿದ್ದೆವು. ನೀವು ಈ ಜನಾಂಗಕ್ಕೆ ನೀಡಿದಷ್ಟು ಭಾರವನ್ನು ಬೇರೆ ಯಾರೂ ಕೂಡ ಅವರ ಜನಾಂಗಕ್ಕೆ ನೀಡಿರಲಿಕ್ಕಿಲ್ಲ, ಪೂರ್ವಿಕರನ್ನು ವಿರೋಧ ಮಾಡಿದಿರಿ, ಅವರ ವಿಶ್ವಾಸಗಳ ಕುರಿತು ಅಸಡ್ಡೆ ಮಾಡಿದಿರಿ, ಇದರಿಂದ ಬಹಳಷ್ಟು ಜನರು ಗೊಂದಲಕ್ಕೀಡಾಗಿದ್ದಾರೆ. ಎಂದು ಹೇಳುತ್ತಾ, ಉತ್’ಬ ಹೇಳಿದ್ದ ಆ ಆಮೀಷಗಳನ್ನು ಪುನಃ ಪ್ರವಾದಿಯವರ ﷺ ಮುಂದೆ ಇಟ್ಟರು. ಪ್ರವಾದಿಯವರು ﷺ ಎಲ್ಲವನ್ನೂ ಬಹಳ ಸೂಕ್ಷ್ಮವಾಗಿ ಕೇಳುತ್ತಿದ್ದರು, ನಂತರ…

Mahabba Campaign Part-72/365

ನಂತರ ಪ್ರವಾದಿಯವರು ﷺ ಮಾತು ಮುಂದುವರಿಸಿದರು. ನೀವು ಏನು ಹೇಳುತ್ತಿದ್ದೀರೋ.? ಒಂದೂ ಅರ್ಥ ಆಗುತ್ತಿಲ್ಲ. ನಾನು ನಿಮ್ಮ ಈ ಸಂಪತ್ತಿಗಾಗಲಿ, ಅಧಿಕಾರಕ್ಕಾಗಲಿ ಇಲ್ಲಿಗೆ ಬಂದಿಲ್ಲ. ನನ್ನನ್ನು ಅಲ್ಲಾಹನು ಅವನ ದೂತನಾಗಿ ನಿಯೋಗಿಸಿರುವನು, ನನಗಾಗಿ ಒಂದು ಗ್ರಂಥವನ್ನೂ ಕೂಡ ಅವತರಿಸಿ, ನೀವುಗಳಿಗೆ ಸುವಾರ್ತೆ, ಹಾಗೂ ಮುನ್ನೆಚ್ಚರಿಕೆಯನ್ನು ನೀಡಲು ನನ್ನನ್ನು ಇಲ್ಲಿಗೆ ಕಳುಹಿಸಿರುವನು. ನನಗೆ ವಹಿಸಿದ್ದ ಜವಾಬ್ದಾರಿಯನ್ನು ನಾನು ನಿಭಾಯಿಸುವ ಕೆಲಸ ಮಾಡುತ್ತಿದ್ದೇನೆ ಅಷ್ಟೇ. ಅದಕ್ಕಾಗಿಯೇ ನಾನು ನಿಮ್’ಗಳಿಗೆ ಉಪದೇಶವನ್ನು ನೀಡುತ್ತಿರುವುದು. ಅದನ್ನು ನೀವು ಪಾಲಿಸಿದರೆ ಎರಡು ಲೋಕದಲ್ಲೂ ನಿಮಗೆ ಒಳಿತು ಸಿಗಲಿದೆ. ಇನ್ನೂ ನೀವು ನನ್ನನ್ನು ನಿರ್ಲಕ್ಷಿಸುದಾದರೆ, ನಾನು ಎಲ್ಲವನ್ನು ಅಲ್ಲಾಹನಿಗೆ ಬಿಟ್ಟು ಬಿಡುತ್ತೇನೆ. ಎಲ್ಲಾ ವಿಷಯಗಳನ್ನು ನಾನು ತಾಳ್ಮೆಯಿಂದಲೇ ಎದುರಿಸುತ್ತೇನೆ ಅಷ್ಟೇ. ಇದನ್ನು ಕೇಳಿದ ತಕ್ಷಣವೇ ಅವರ ಮುಖ ಭಾವವೇ ಬದಲಾಯಿತು. ಜೊತೆಯಲ್ಲಿ ಅವರು ಉತ್ತರಿಸುವ ದಾಟಿಯು ಕೂಡ ಬದಲಾಯಿತು. ನಿಮಗೆಯೇ ಗೊತ್ತಿದೆಯಲ್ಲವೇ, ನಾವೀಗ ಎಷ್ಟೊಂದು ಒತ್ತಡಗಳಲ್ಲಿದ್ದೇವೆ ಎಂದು. ಆರ್ಥಿಕವಾಗಿಯೂ, ಪ್ರದೇಶಿಕವಾಗಿಯೂ ನಾವು ಬಹಳಷ್ಟು ಸಮಸ್ಯೆಗಳನ್ನು ಎದುರಿಸುತಿದ್ದೇವೆ. ನೀವೊಮ್ಮೆ ನಿಮ್ಮ ದೇವನಲ್ಲಿ ಹೇಳಿ, ಇರಾಕಿನವರಿಗೆ ಹಾಗೂ ಶಾಂಮಿನ ಜನತೆಗೆ ನೀಡಿದ ಹಾಗೆ ನಮಗೂ ಕೂಡ ಒಂದು ಹೊಳೆಯನ್ನು ನೀಡಲು. ಮರಣ ಹೊಂದಿರುವ ನಮ್ಮ ಪೂರ್ವಿಕರಿಗೆ ಪುನರ್ಜೀವ ನೀಡಲು, ಖಿಲಾಬಿನ ಮಗನಾದ ಖುಸೈಯ್’ಯವರಿಗೂ ಪುನರ್ಜೀವ ನೀಡಿ, ನಾವೊಮ್ಮೆ ಅವರಲ್ಲಿ ಕೇಳುತ್ತೇವೆ ಇವರು ಹೇಳುತ್ತಿರುವುದು ಎಲ್ಲವೂ ಸರಿಯ ಎಂದು. ಕಾರಣ ಅವರೊಬ್ಬರು ನೀತಿವಂತ ವ್ಯಕ್ತಿಯಾಗಿದ್ದರು ಅದಕ್ಕೆ ಹೇಳಿದ್ದು.
ನಾವು ಹೇಳಿದ ಈ ಎಲ್ಲಾ ವಿಷಯಗಳನ್ನು ನೀವು ನಡೆಸಿ ಕೊಡಿ. ಆಗ ನಾವು ಅಂಗೀಕರಿಸುತ್ತೇವೆ, ನೀವು ಹೇಳುತ್ತಿರುವುದು ಸತ್ಯ ಎಂದು ಹೇಳಿದರು.

ಅದನ್ನು ಕೇಳಿದ ಪ್ರವಾದಿಯವರು ﷺ, ನಾನು ನೀವು ಹೇಳಿದ ಹಾಗೆ ಮಾಡಲು ಅಲ್ಲ ನನ್ನನ್ನು ನಿಯೋಗಿಸಿದ್ದು. ನನಗೆ ನಿಯೋಗಿಸಿದ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ನೀವು ಅದನ್ನು ಒಪ್ಪಿಕೊಂಡರೆ ಎರಡು ಲೋಕದಲ್ಲೂ ಒಳಿತು ಸಿಗುತ್ತದೆ. ಇಲ್ಲದಿದ್ದರೆ ನಿಮಗೆ ಏನು ಬೇಕಾದರೂ ತೀರ್ಮಾನ ಮಾಡಬಹುದು, ನಾನು ಎಲ್ಲವನ್ನೂ ತಾಳ್ಮೆಯಿಂದಲೇ ಎದುರಿಸುತ್ತೇನೆ. ನಮ್ಮ ನಡುವೆ ಏನೇ ನಡೆಯುವುದಿದ್ದರೂ ಅದನ್ನು ಅಲ್ಲಾಹನೇ ತೀರ್ಮಾನಿಸುತ್ತಾನೆ ಎಂದು ಹೇಳಿದರು.
ಇದೆಲ್ಲವನ್ನೂ ಮಾಡಲು ಸಾಧ್ಯವಿಲ್ಲದಿದ್ದರೆ, ನೀವು ಹೇಳುತ್ತಿರುವುದು ಸತ್ಯ ಎಂದು ಹೇಳಲು ಒಂದು ಮಲಕನ್ನು ಬರಲು ಹೇಳಿರಿ. ಅಲ್ಲಾಹನಲ್ಲಿ ಹೇಳಿ, ನಿಮಗೊಂದು ಅರಮನೆ ನಿರ್ಮಿಸಲೂ, ಚಿನ್ನಾ ಬೆಳ್ಳಿಗಳಿಂದ ಕೂಡಿದ ರಾಶಿಯನ್ನು ಸೃಷ್ಟಿಮಾಡಲು ಹೇಳಿರಿ. ಈಗ ನೀವು ಮಾರುಕಟ್ಟೆಯಲ್ಲಿ ನಡೆಯುತ್ತಿರುತ್ತೀರಿ, ನಮ್ಮ ಹಾಗೆ ಸಾಮಾನ್ಯ ಜೀವನ ನಡೆಸುತ್ತಿದ್ದೀರಿ, ಇದೆಲ್ಲವನ್ನೂ ನಿಲ್ಲಿಸಿ ನೇರವಾಗಿ ಅಲ್ಲಾಹನಿಂದಲೇ ನೀಡಲು ಹೇಳಿರಿ. ನಿಮಗಿರುವ ಶ್ರೇಷ್ಠತೆ, ವಿಶೇಷತೆಗಳನ್ನು ನಮಗೂ ಸ್ವಲ್ಪ ತೋರಿಸಿ ಎಂದು, ಅವರು ಕೂಡ ಹೇಳಿದರು.
ಅದಕ್ಕೆ ಪ್ರವಾದಿಯವರು ﷺ ನೀವು ಹೇಳಿದ ಈ ಕಾರ್ಯಗಳನ್ನು ಮಾಡಲು ಇಷ್ಟಪಡುವ ವ್ಯಕ್ತಿಯಾಗಲಿ. ಅದಕ್ಕಾಗಿ ಬಂದ ವ್ಯಕ್ತಿಯೂ ಕಾಣುತ್ತಿಲ್ಲ, ನನ್ನ ಜವಾಬ್ದಾರಿಯನ್ನು ನಾನು ನಿಮ್ಮೊಂದಿಗೆ ತಿಳಿಸಿದ್ದೇನೆ, ಅದನ್ನು ಸ್ವೀಕರಿಸಿದರೆ ಎರಡು ಲೋಕದಲ್ಲೂ ಸೌಭಾಗ್ಯ ಲಭಿಸುತ್ತದೆ. ಅದು ಆಗದಿದ್ದರೆ ಅಲ್ಲಾಹನು ವಿಧಿಸಿದ ಹಾಗೆ ಎಲ್ಲವೂ ನಡೆಯುತ್ತದೆ, ನಮಗೆ ಅದನ್ನು ತಾಳ್ಮೆಯಿಂದ ಕಾಣಲು ಮಾತ್ರವೇ ಸಾಧ್ಯ ಎಂದು ಪುನಃ ಹೇಳಿದರು.

ಇದನ್ನು ಕೇಳಿದಾಗ ಅವರು, ನಿಮ್ಮ ಅಲ್ಲಾಹನಿಗೆ ಏನು ಬೇಕಾದರೂ ಮಾಡಲು ಸಾಧ್ಯವಿದೆ ಎಂದು ಹೇಳಿದರಲ್ವಾ.? ಸರಿ ಹಾಗಿದ್ರೆ ನಮ್ಮ ಮೇಲೆ ಆಕಾಶದ ಒಂದು ಭಾಗವನ್ನೇ ಬೀಳಿಸಲು ಹೇಳಿರಿ. ಆಗ ನಾವು ಕೂಡ, ನೀವು ಹೇಳುವುದು ಸತ್ಯ ಎಂದು ಅಂಗೀಕರಿಸುತ್ತೇವೆ. ಇಲ್ಲದಿದ್ದರೆ ಇಲ್ಲ ಎಂದು ಕೂಡ ಹೇಳಿದರು.
ಅದನ್ನು ಕೇಳಿದ ಪ್ರವಾದಿಯವರು ﷺ, ಅದೆಲ್ಲವೂ ಅಲ್ಲಾಹನ ತೀರ್ಮಾನ. ಅವನು ನಿಮ್ಮನ್ನು ಏನು ಮಾಡಬೇಕೆಂದು ತೀರ್ಮಾನಿಸುತ್ತಾನೋ.? ಅದನ್ನು ಖಂಡಿತ ಮಾಡುತ್ತಾನೆ ಎಂದು ಹೇಳಿದರು.
ಅವರು ಪುನಃ ಮಾತು ಮುಂದುವರಿಸುತ್ತಾ, ಓ ಮುಹಮ್ಮದ್’ರೇ ﷺ ನಾವು ಇಲ್ಲಿ ಜೊತೆ ಸೇರಿದ್ದು, ನೀವು ಇಲ್ಲಿಗೆ ಬಂದದ್ದು, ಇವೆಲ್ಲವೂ ನಿಮ್ಮ ಅಲ್ಲಾಹನಿಗೆ ತಿಳಿದಿದೆ ಅಲ್ವಾ.? ನಿಮಗೆ ಇದೆಲ್ಲವೂ ತಿಳಿಸುತ್ತಿರುವುದು, ಯಮಾಯಗಾರನಾದ ಯಾವುದೋ “ರಹ್ಮಾನ್” ಆಗಿರಬೇಕೆಂದು ನಮಗೆ ಅನಿಸುತ್ತದೆ. ನಾವು ಅದನ್ನು ಅಂಗೀಕರಿಸಲು ತಯಾರಿಲ್ಲ, ಕ್ಷಮಿಸಿ ಮುಹಮ್ಮದ್’ರೇ ﷺ ಅದು ನಮ್ಮಿಂದ ಸಾಧ್ಯವಿಲ್ಲ. ದೇವನಾಣೆಗೂ ನಾವು ಇದನ್ನು ಖಂಡಿತವಾಗಿಯೂ ಅಂಗೀಕರಿಸುವುದಿಲ್ಲ. ಇದರಿಂದ ಒಂದೋ ನಾವು ನಾಶವಾಗಿ ಹೋಗ್ತೇವೆ, ಇಲ್ಲದಿದ್ದರೆ ನೀವು ಕೂಡ ಎಂದು ಹೇಳಿದಾಗ. ಅವರಲ್ಲೇ ಕೆಲವರು ಮುಂದೆ ಬಂದು, ನಾವು ಅಲ್ಲಾಹುವಿನ ಹೆಣ್ಣುಮಕ್ಕಳಾದ ಮಲಕ್’ಗಳನ್ನು ಆರಾಧನೆ ಮಾಡುವವರಾಗಿದ್ದೇವೆ. ಹಾಗಾಗಿ ಅಲ್ಲಾಹನನ್ನೂ, ಅವನ ಹೆಣ್ಣು ಮಲಕ್’ಗಳನ್ನೂ ಒಮ್ಮೆ ಕರೆದುಕೊಂಡು ಬಂದರೆ ಖಂಡಿತ ನಾವು ಅಂಗೀಕರಿಸುತ್ತೇವೆ ಎಂದು ಹೇಳಿದರು.
ಅದನ್ನು ಕೇಳಿದ ಪ್ರವಾದಿಯವರು ﷺ ಅಲ್ಲಿಂದ ಎದ್ದು ನಿಂತರು. ಅಬೂ ಉಮಯ್ಯರ ಮಗನಾದ ಅಬ್ದುಲ್ಲಾಹ್ ಕೂಡ ಅವರ ಜೊತೆಯಲ್ಲಿ ಎದ್ದು ನಿಂತು ಹೋದರು.

Mahabba Campaign Part-73/365

ಪ್ರವಾದಿಯವರ ﷺ ಅತ್ತೆಯ ಮಗನೂ ಕೂಡ ಆಗಿದ್ದರು ಅವರು. ಅವರು ಪ್ರವಾದಿಯವರ ﷺ ಬಳಿ ಬಂದು, ಓ ಮುಹಮ್ಮದ್’ರೆ ﷺ ನಮ್ಮ ಜನರು ನಿಮ್ಮ ಮುಂದೆ ಬಹಳಷ್ಟು ಬೇಡಿಕೆಗಳನ್ನು ಮುಂದಿಟ್ಟರು. ನೀವು ಯಾವುದನ್ನು ಪರಿಗಣಿಸಲಿಲ್ಲ. ನಂತರ ಅವರ ಬೇಡಿಕೆಗಳನ್ನು ನಿಮ್ಮಲ್ಲಿ ತಿಳಿಸಿದರು, ಅದನ್ನೂ ನೀವು ನೇರೆವೇರಿಸಲಿಲ್ಲ. ಆಗ ನೀವು ಕೆಲವೊಂದು ಪವಾಡ ತೋರಿಸಿ ನಿಮ್ಮ ಶಕ್ತಿಯನ್ನು ತೋರಿಸಲು ಹೇಳಿದಾಗಲೂ ನೀವು ನಿರಾಕರಿಸಿದಿರಿ. ಅದು ಯಾವುದಕ್ಕೂ ಒಪ್ಪದ್ದೆ ಇದ್ದಾಗ ಕೊನೆಗೆ ನೀವೇ ಹೇಳಿದ ಹಾಗೆ ಶಿಕ್ಷೆಯನ್ನು ಅವತರಿಸಿ, ತೋರಿಸಿ ಕೊಡಿ ಎಂದು ಹೇಳಿದಾಗಲೂ, ನೀವು ಒಪ್ಪಲಿಲ್ಲ. ಸರಿ ಈಗ ನಾನೊಂದು ಒಂದು ವಿಷಯ ಹೇಳುತ್ತೇನೆ, ಕೊನೆಯ ಪಕ್ಷ ಅದನ್ನಾದರು ಮಾಡಿ ತೋರಿಸಿ. ಆಕಾಶಕ್ಕೆ ಒಂದು ಮೆಟ್ಟಿಲು ನಿರ್ಮಿಸಿ, ಅದರ ಮೂಲಕ ಆಕಾಶಕ್ಕೆ ತೆರಳಿ, ಅಲ್ಲಿಂದ ನಾಲ್ಕು ಮಲಕ್’ಗಳ ಜೊತೆಯಲ್ಲಿ ಒಂದು ಗ್ರಂಥದೊಂದಿಗೆ ತಿರುಗಿ ಬನ್ನಿ, ನಾನು ಖಂಡಿತ ನಿಮ್ಮನ್ನು ಅಂಗೀಕರಿಸುತ್ತೇನೆ, ಆದರೆ ಇದೆಲ್ಲವೂ ನನಗೆ ಕಾಣುವ ಹಾಗೆ ಹಾಗಿರಬೇಕು, ಇಲ್ಲದಿದ್ದರೆ ನಿಮ್ಮನ್ನು ನಾನು ಅಂಗೀಕರಿಸುವುದಿಲ್ಲ. ಎಂದು ಹೇಳಿ ಅಲ್ಲಿಂದ ಹೊರಟು ಹೋದರು.

ಪ್ರವಾದಿಯವರು ﷺ ಬಹಳಷ್ಟು ಚಿಂತಿತರಾದರು. ಇವರನ್ನು ಹೇಗೆ ಸತ್ಯ ವಿಶ್ವಾಸದ ಆದರ್ಶಕ್ಕೆ ಕರೆತರುವುದು ಎಂದು ಆಲೋಚಿಸುತ್ತಾ ಮನೆ ಕಡೆ ಹೊರಟರು.
ಅಬೂಜಹಲ್ ಪುನಃ ಅವನ ಕುತಂತ್ರ ಬುದ್ದಿಯನ್ನು ತೋರಿಸತೊಡಗಿದನು. ಖುರೈಷಿಗಳ ಬಳಿ ಬಂದು, ಮುಹಮ್ಮದ್ ﷺ ನಮ್ಮ ಪೂರ್ವಿಕರ ಧರ್ಮವನ್ನು ವಿರೋಧಿಸಿ ಮುಂದೆ ಹೋಗುತ್ತಿದ್ದಾರೆ. ನಾವೆಷ್ಟೇ ಬೇಡಿಕೆಯನ್ನು ಮುಂದಿಟ್ಟರೂ, ಯಾವುದೇ ಪ್ರಯೋಜನವಾಗಲಿಲ್ಲ. ಅದಕ್ಕೆ ನಾನೊಂದು ಉಪಾಯ ಮಾಡಿದ್ದೇನೆ, ನಾಳೆ ನಮಾಝ್ ಮಾಡಲು ಮುಹಮ್ಮದ್ ﷺ ಕಅಬಾಲಯದ ಬಳಿ ಬರುತ್ತಾರೆ. ಆಗ ನನಗೆ ಎತ್ತಲು ಸಾಧ್ಯವಾಗುವ ದೊಡ್ಡ ಗಾತ್ರದ ಬಂಡೆಕಲ್ಲು ತೆಗೆದು, ಅವರು ಸುಜೂದ್ (ಸಾಷ್ಟಾಂಗ) ಹೋದ ಸಂದರ್ಭದಲ್ಲಿ ಅವರ ತಲೆಯ ಮೇಲೆ ಹಾಕುತ್ತೇನೆ, ಆಮೇಲೆ ಅಬ್ದುಮನಾಫಿನ ಮಕ್ಕಳು ನನ್ನನ್ನು ಏನು ಮಾಡಿದರೂ ನನಗೆ ಯಾವುದೇ ಚಿಂತೆಯಿಲ್ಲ ಎಂದು ಹೇಳಿದಾಗ, ಅಲ್ಲಿದ್ದ ಜನರು ನಿಮಗೆ ಇಷ್ಟ ಬಂದಾಗೆ ಮಾಡಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು.

ಮರುದಿನ ಸೂರ್ಯೋದಯದ ನಂತರ, ಅಬೂಜಹಲ್ ಹೇಳಿದ ಹಾಗೆ ಒಂದು ದೊಡ್ಡ ಬಂಡೆಕಲ್ಲನ್ನು ತಯಾರು ಮಾಡಿ ಇಟ್ಟಿದ್ದನು. ಅಷ್ಟೊತ್ತಿಗೆ ಪ್ರವಾದಿಯವರು ﷺ ಕಅಬಾಲಯದ ಬಳಿ ಬಂದು, ಶಾಮ್ ನಗರದ ಕಡೆಗೆ ತಿರುಗಿ, ರುಕುನುಲ್ ಯಮಾನಿನ ಹಾಗೂ ಹಜರುಲ್ ಅಸ್’ವದಿನ ನಡುವೆ, ಕಅಬಾಲಯಕ್ಕೆ ಮುಖ ಮಾಡಿ ನಿಂತರು. ಅಥವಾ ಕಅಬಾಲಯದ ಉತ್ತರ ದಿಕ್ಕಿಗೆ ಮುಖ ಮಾಡಿ, ದಕ್ಷಿಣ ಭಾಗದಲ್ಲಿ ನಿಂತು ನಮಾಝ್ ಮಾಡಲು ಆರಂಭಿಸಿದರು. ಖುರೈಷಿಗಳ ಗಣ್ಯರೆಲ್ಲರೂ ಅವರ ಕಟ್ಟೆಯಲ್ಲಿ ಜೊತೆ ಸೇರಿದ್ದರು. ಅವರೆಲ್ಲರೂ ಬಹಳ ಗಮವಿಟ್ಟು ಅಲ್ಲಿ ನಡೆಯುತ್ತಿರುವ ದೃಶ್ಯವನ್ನು ನೋಡುತ್ತಿದ್ದರು. ಪ್ರವಾದಿಯವರು ﷺ ಸುಜೂದ್’ಗೆ ಹೋದಾಗ, ಅಬೂಜಹಲ್ ಬಂಡೆಕಲ್ಲನ್ನು ಹೊತ್ತು ಪ್ರವಾದಿಯವರು ﷺ ಹತ್ತಿರ ಹೋದರು. ಹತ್ತಿರ ತಲುಪಿದ್ದೇ ತಡ ಅವನ ಮನಸ್ಸಿನಲ್ಲಿ ಅದೇನೋ ಒಂದು ಭಯ ಆವರಿಸಿತು. ಯಾರೋ ಹಿಂದಿನಿಂದ ಬಂಡೆಯನ್ನು ಹಿಡಿದು ಎಳೆದ ಹಾಗೆ ಅನಿಸಿ, ಅವನ ಮುಖದ ಭಾವನೆಯೇ ಬದಲಾಯಿತು. ತಕ್ಷಣವೇ ಅವನು ಆ ಬಂಡೆಯನ್ನು ದೂರಕ್ಕೆ ಎಸೆದನು.

ದೃಶ್ಯವನ್ನು ನೋಡುತ್ತಾ ನಿಂತಿದ್ದ ಖುರೈಷಿಗಳಲ್ಲಿ ಕೆಲವರು, ತಕ್ಷಣವೇ ಓಡಿ ಬಂದು ಓ ಅಬುಲ್ ಹಕಮ್ ಏನಾಯಿತು ಎಂದು ಕೇಳಿದರು. ಅದಕ್ಕೆ ಅಬೂಜಹಲ್, ನಾನು ನಿನ್ನೆ ಹೇಳಿದ ಹಾಗೆ ಬಂಡೆ ತೆಗೆದುಕೊಂಡು ಮುಹಮ್ಮದ್’ರ ﷺ ಬಳಿ ತೆರಳಿದ್ದಾಗ, ಅದೋ ಅಲ್ಲಿತ್ತು ಒಂದು ಬಹಳ ದೊಡ್ಡ ಆಕಾರದ ಒಂದು ಗಂಡು ಒಂಟೆ, ನಾನು ಅಂತಹ ಭೀಕರವಾದ ಒಂದು ಒಂಟೆಯನ್ನು ಇವತ್ತಿನವರೆಗೆ ನೋಡಿಯೇ ಇರಲಿಲ್ಲ. ಅದು ನನ್ನನ್ನೇ ತಿನ್ನುವ ಹಾಗೆ ನಿಂತಿತ್ತು, ಎಂದು ಹೇಳಿದನು.
(ನಂತರ ಪ್ರವಾದಿಯವರು ﷺ ಅದು ಜಿಬ್’ರೀಲ್ (ಅ) ಆಗಿದ್ದರು. ಬಹುಶಃ ಅಬೂಜಹಲ್ ಇನ್ನೂ ಹತ್ತಿರ ಬಂದಿರುತಿದ್ದರೆ, ಖಂಡಿತ ಜಿಬ್’ರೀಲ್ ಅವನನ್ನು ಹಿಡಿಯುತಿದ್ದರು ಎಂದು ಹೇಳಿದರು)

ಅಧಿಕ ತಡಮಾಡದೆ ಖುರೈಷಿಗಳು ಹೇಳಿದ್ದ ಒಂದೊಂದು ಸಮಸ್ಯೆಗಳ ಕುರಿತೂ ಕುರ್’ಆನ್ ತಿಳಿಸ ತೊಡಗಿತು. ಮರಣ ಹೊಂದಿದ ವ್ಯಕ್ತಿಗಳು ತಿರುಗಿ ಬಂದು ಹೇಳಲಿ ಎಂದಾಗಿತ್ತು ಅವರು ಹೇಳಿದ್ದು. ಅದಕ್ಕೆ ಕುರ್’ಆನ್ ನೀಡಿದ ಉತ್ತರವು ಈ ರೀತಿಯಾಗಿತ್ತು. ” ಪರ್ವತಗಳನ್ನು ಚಲಿಸುವ ಹಾಗೆ ಮಾಡುವುದು, ಭೂಮಿಯನ್ನು ಸೀಳು ಮಾಡುವುದು, ಮರಣ ಹೊಂದಿದ ವ್ಯಕ್ತಿಗಳನ್ನು ಪುನರ್ಜೀವ ಕೊಟ್ಟು ಮಾತಾಡುವ ಹಾಗೆ ಮಾಡುವುದು. ಈ ರೀತಿಯಾಗಿ ಕುರ್’ಅನ್ ಅವತರಿಸಿದರೆ ಏನಾಗಬಹುದು.? (ಇದ್ಯಾವುದೂ ಕಷ್ಟವಿರುವ ಕಾರ್ಯವೇ ಅಲ್ಲ) ಆದರೆ, ಸರ್ವವಸ್ತುಗಳ ಅಧಿಕಾರವೂ ಕೂಡ ಅಲ್ಲಾಹನಿಗೆ ಮಾತ್ರವಾಗಿದೆ. (ಸತ್ಯ ನಿಷೇಧಿಗಳಿಗೆ ಉತ್ತರವಾಗಿ ಏನಾದರೂ ವಿಸ್ಮಯಕಾರಿ ಘಟನೆಗಳು ನಡೆಯಬಹುದೆಂದು ಕಾದು ಕುಳಿತಿದ್ದ) ಸತ್ಯ ವಿಶ್ವಾಸಿಗಳು, ಅಲ್ಲಾಹನು ಉದ್ದೇಶಿಸಿದರೆ ಎಲ್ಲರನ್ನೂ ಸತ್ಯ ವಿಶ್ವಾಸಿಗಳಾಗಿ ಮಾಡಬಹುದಿತ್ತಲ್ಲವೇ, ಎಂದು ಚಿಂತಿಸಿ ಆ ಚಿಂತೆಯಿಂದ ಹಿಂದೆ ಸರಿದಿಲ್ಲವೇ.? ಅಲ್ಲಾಹನಲ್ಲಿ ದ್ರೋಹ ಎಸಗಿದವರಿಗೆ, ಕರ್ಮ ಪ್ರತಿಫಲವಾಗಿ ವಿಪತ್ತುಗಳು ಖಂಡಿತ ಬರುತ್ತಲೇ ಇರುತ್ತದೆ. ಅಥವಾ ಅವರ ಮನೆಯ ಬಳಿ ವಿಪತ್ತುಗಳು ಬರುತ್ತಲೇ ಇರುತ್ತದೆ. ಅಲ್ಲಾಹನ ವಾಗ್ದಾನವು ಖಂಡಿತವಾಗಿ ನಡೆಯುತ್ತಲೇ ಇರುತ್ತದೆ. ಅವನು ಯಾವತ್ತೂ ವಾಗ್ದಾನ ಮುರಿದವನೇ ಅಲ್ಲ” ಅಲ್ ರಅದ್ ಅಧ್ಯಾಯದ ಮೂವತ್ತೊಂದನೆ ಸೂಕ್ತದ ಅನುವಾದವಾಗಿದೆ ಇದು.

Mahabba Campaign Part-74/365

ನಂತರ ಅವರು ಪ್ರವಾದಿಯವರ ﷺ ಜೀವನದ ಕುರಿತಾಗಿತ್ತು ತಮಾಷೆ ಮಾಡಿದ್ದು. ಅಲ್ಲಿಯೂ ಕೂಡ ಕುರ್’ಆನ್ ಉತ್ತರಿಸಿತು. ಅಲ್’ಫುರ್’ಖಾನ್ ಅಧ್ಯಾಯದ ಏಳರಿಂದ ಹತ್ತರವರೆಗಿನ ಸೂಕ್ತಗಳಲ್ಲಿ ಅದರ ಕುರಿತು ವಿವರಿಸಿದ್ದು ಕಾಣಬಹುದು. “ಅವರು ಕೇಳುತ್ತಾರೆ ಇದೆಂತಹ ದೂತರು.? ಆಹಾರ ಸೇವನೆ ಮಾಡುತ್ತಾರೆ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾರೆ, ಇವರೊಂದಿಗೆ ಮುನ್ನೆಚ್ಚರಿಕೆ ನೀಡಲು (ಸತ್ಯ ನಿಷೇಧಿಗಳಿಗೆ) ಒಬ್ಬ ಮಲಕ್ ಕೂಡ ಇಲ್ಲವಲ್ಲ.? ಒಂದು ಖಜಾನೆಯೋ ಅಥವಾ ಯಾವುದೇ ಕಷ್ಟವಿಲ್ಲದೆ ಆಹಾರ ಸೇವಿಸಲು ಒಂದು ತೋಟವನ್ನೋ (ಈ ಪ್ರವಾದಿಯವರು ﷺ) ಯಾಕೆ ನಿರ್ಮಿಸಲಿಲ್ಲ.? ಬುದ್ದಿ ಮಂಕು ಬಡಿದ ವ್ಯಕ್ತಿಯನ್ನಲ್ಲವೇ ನೀವು ಅನುಸರಿಸುವುದು ಎಂದು ದ್ರೋಹಿಗಳು ಕೇಳುತ್ತಿದ್ದರು. (ಓ ಪ್ರವಾದಿಯವರೇ ﷺ) ಅವರು ನಿಮ್ಮ ಬಗ್ಗೆ ಏನೆಲ್ಲ ಆರೋಪಗಳನ್ನು ಮಾಡಿದ್ದರು. ಆದರೆ ಅದು ಯಾವುದನ್ನು ಸಾಬಿತುಪಡಿಸಲು ಅವರಿಂದ ಸಾಧ್ಯವಾಗಿಲ್ಲ. ಅವರು ಅಷ್ಟೊಂದು ದಾರಿ ತಪ್ಪಿದವರಾಗಿದ್ದಾರೆ. ಅವನಿಚ್ಚಿಸಿದರೆ, ಅವರು ಹೇಳಿದ್ದಕ್ಕಿಂತಲೂ ಉತ್ತಮವಾದ ಅರಮನೆಗಳನ್ನೂ, ಕಣಿವೆಗಳಲ್ಲಿ ಹರಿಯುವ ತೊರೆಗಳ ಉದ್ಯಾನಗಳನ್ನೇ ನೀಡಲು ಸಮರ್ಥನಾಗಿರುವವನು (ಅಲ್ಲಾಹನು) ಎಷ್ಟೊಂದು ಪರಿಶುದ್ಧನು”. ಎಂದು.

ಇದಕ್ಕೆ ಹೋಲಿಕೆಯಾಗುವ ಅಲ್ ಫುರ್’ಖಾನ್ ಅಧ್ಯಾಯದ ಇಪ್ಪತ್ತನೇ ಸೂಕ್ತವನ್ನೂ ಸೇರಿಸಿ ಹೇಳಿದರು. “ಪ್ರೀತಿಯ ದೂತರೇ, ನಿಮಗಿಂತ ಮುಂಚೆ ನಿಯೋಗಿಸಲ್ಪಟ್ಟಿದ್ದ ಎಲ್ಲಾ ದೂತರೂ ಕೂಡ ಆಹಾರ ಸೇವನೆ ಮಾಡುವವರೂ, ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರೇ ಆಗಿದ್ದರು” ಎಂದು.
ಖುರೈಷಿಗಳು ಹೇಳಿದ್ದ ಪ್ರತಿಯೊಂದು ವಿಷಯದ ಕುರಿತು ಖುರ್’ಆನ್ ಸ್ಪಷ್ಟವಾಗಿ ಹೇಳಿತ್ತು. ಪ್ರವಾದಿಯವರ ﷺ ಪ್ರತಿಕ್ರಿಯೆಯನ್ನು ಕುರ್’ಆನ್ ಸ್ಪಷ್ಟವಾಗಿ ನೀಡಿತ್ತು. ಪ್ರವಾದಿಯವರನ್ನು ﷺ ಚರ್ಚೆ ಕರೆದಿದ್ದ ಖುರೈಷಿಗಳು, ಪ್ರವಾದಿಯವರು ﷺ ಚರ್ಚೆಯ ನಂತರ ಬೇಸರದಿಂದ ಕುಳಿತರಬಹುದೆಂದು ಅಂದುಕೊಂಡಿದ್ದರು. ಆದರೆ ಅವರು ಕಂಡದ್ದು ಸ್ಪಷ್ಟವಾದ ಉತ್ತರವನ್ನು ಹೇಳುತ್ತಿದ್ದ ಪ್ರವಾದಿಯವರನ್ನಾಗಿತ್ತು. ﷺ

ಅಲ್ ಇಸ್’ರಾಅ್ ಅಧ್ಯಾಯದ ತೊಂಬತ್ತರ ನಂತರದ ಸೂಕ್ತದಲ್ಲಿ, “ಭೂಮಿಯನ್ನು ಸೀಳಿ ನಮಗಾಗಿ ಒಂದು ಹೊಳೆಯನ್ನು ನಿರ್ಮಿಸುವವರೆಗೂ ನಾವು ಅಂಗೀಕರಿಸುದಿಲ್ಲ, ಅಥವಾ ನಿಮಗಾಗಿ ಖರ್ಜೂರ, ದ್ರಾಕ್ಷಿ ತುಂಬಿದ ಒಂದು ತೋಟವನ್ನು ನಿರ್ಮಿಸಿ. ಅದರ ನಡುವಿನಿಂದ ನದಿಗಳು ಹರಿಯುತ್ತಿರಬೇಕು. ಅದೂ ಆಗದಿದ್ದರೆ ಆಕಾಶವನ್ನು ತುಂಡರಿಸಿ ನಮ್ಮ ಮೇಲೆ ಬೀಳುವ ಹಾಗೆ ಮಾಡಬೇಕು ಅಥವಾ ದೇವನನ್ನೋ, ಮಲಕ್’ಗಳನ್ನೋ ನಮ್ಮ ಮುಂದೆ ಪ್ರಸ್ತುತ ಪಡಿಸಬೇಕು. ಅದೂ ಆಗದಿದ್ದರೆ ನಿಮಗಾಗಿ ಒಂದು ಚಿನ್ನದ ಅರಮನೆ ಮಾಡಬೇಕು ಅಥವಾ ಆಕಾಶಕ್ಕೆ ನಡೆದು ಹೋಗಬೇಕು…” ಎಂದು ಅವರು ಹೇಳಿದ್ದನ್ನು, ವಿವರಿಸಿದ್ದು ಕಾಣಬಹುದು.

ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ, ಪ್ರವಾದಿಯವರ ﷺ ಮೇಲೆ ಕಲ್ಲು ಹಾಕಿ ಕೊಲ್ಲಲು ಪ್ರಯತ್ನಿಸಿದ ಅಬೂಜಹಲಿಗೂ ಕೂಡ ಕುರ್’ಆನ್ ಉತ್ತರಿಸಿತು. ಅಲ್ ಅಲಖ್ ಅಧ್ಯಾಯದ ಒಂಬತ್ತನೇ ಸೂಕ್ತವು ಅವತರಿಸಿದ್ದು ಈ ವಿಷಯದಲ್ಲಾಗಿತ್ತು.
ಇಮಾಮ್ ಅಹ್’ಮದ್’ರವರು ◌ؓ ಮುಸ್’ನದ್ ಎನ್ನುವ ಗ್ರಂಥದಲ್ಲಿ ಉಲ್ಲೇಖಿಸಿದ ವಾಕ್ಯಗಳಲ್ಲಿ ನಮಗೆ ಕಾಣಬಹುದು. ಇಬ್’ನು ಅಬ್ಬಾಸ್’ರವರು ◌ؓ ಹೇಳುತ್ತಾರೆ. ಸ್ವಫಾ ಪರ್ವತವನ್ನು ಚಿನ್ನವಾಗಿ ಪರಿವರ್ತನೆ ಮಾಡಲೂ, ಮಕ್ಕಾದಲ್ಲಿರುವ ಇತರ ಪರ್ವತಗಳನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಲು, ಪ್ರವಾದಿಯವರಲ್ಲಿ ﷺ ಮಕ್ಕಾ ನಿವಾಸಿಗಳು ಆಗ್ರಹಿಸಿದ್ದರು. ತಕ್ಷಣವೇ ಜಿಬ್’ರೀಲ್ (ಅ) ಪ್ರವಾದಿಯವರ ﷺ ಬಳಿ ಬಂದು, ಅಲ್ಲಾಹನು ನಿಮಗೆ ಸಲಾಂ ಹೇಳಿರುವನು. ನೀವು ಇಚ್ಛಿಸುದಾದರೆ ಸ್ವಫ ಪರ್ವತವನ್ನು ಚಿನ್ನ ಮಾಡಿ ಕೊಡುತ್ತೇನೆ. ಆದರೆ ಅದರ ನಂತರವೂ ಸತ್ಯವನ್ನು ಅಂಗೀಕರಿಸದೆ ನಿಷೇಧ ಮಾಡಿದರೆ, ಈ ಹಿಂದೆ ಯಾವುದೇ ಜನತೆಗೂ ನೀಡಿರದ ಹಾಗೆ ಅತೀ ಕ್ರೂರವಾದ ಶಿಕ್ಷೆಯನ್ನೇ ನೀಡಬೇಕಾಗುತ್ತದೆ. ಅಥವಾ ನೀವು ಬಯಸುದಾದರೆ ಅವರಿಗೆ ಪಾಪ ಮೋಚನೆಯ, ಕರುಣೆಯ ದಾರಿಯನ್ನು ತೋರಿಸಿ ಕೊಡುವೆನು. ಎಂದು ಜಿಬ್’ರೀಲ್ ಹೇಳಿದಾಗ, ಅಲ್ಲಾಹನೇ ಕರುಣೆಯ ದಾರಿಯನ್ನು ಮಾತ್ರ ತೆರೆದು ಕೊಟ್ಟರೆ ಸಾಕು ಎಂದು ಪ್ರವಾದಿಯವರು ﷺ ಹೇಳಿದರು.

ಪ್ರವಾದಿಯವರು ﷺ ಯಾವಾಗಲೂ ಜನರ ಮೇಲೆ ಕರುಣೆಯ ದೃಷ್ಟಿಯಿಂದ ಮಾತ್ರವಾಗಿತ್ತು ತೀರ್ಮಾನಗಳನ್ನು ತೆಗೆಯುತ್ತಿದ್ದದ್ದು. ಜನರು ಆಗ್ರಹಿಸುವ ವಿಸ್ಮಯಗಳನ್ನು ತೋರಿಸಳಲ್ಲ ಪ್ರವಾದಿಯವರನ್ನು ﷺ.ನಿಯೋಗಿಸಿದ್ದು. ಅವರನ್ನು ಸರಿಯಾದ ಆದರ್ಶಕ್ಕೆ ಆಹ್ವಾನಿಸಿ, ಅವರಿಗೆ ಮಾದರಿಯೋಗ್ಯ ಜೀವನನ್ನು ನೀಡಿ, ಎಲ್ಲರನ್ನು ಸ್ವರ್ಗಕ್ಕೆ ಆಹ್ವಾನಿಸಿ ಉದ್ದೇಶದಿಂದಾಗಿತ್ತು ಅವರನ್ನು ಪ್ರವಾದಿಯಾಗಿ ನಿಯೋಗಿಸಿದ್ದು. ಅದನ್ನು ಪ್ರವಾದಿಯವರು ﷺ ಸ್ಪಷ್ಟವಾಗಿ ನಿರ್ವಹಿಸಿದ್ದರು. ಪ್ರವಾದಿತ್ವಕ್ಕೆ ಸಾಕ್ಷಿಯಾಗಿ ಅಗತ್ಯವಾದ ವಿಸ್ಮಯಗಳನ್ನು ಪ್ರದರ್ಶಿಸಿದ್ದರು. ಎಂದೆಂದೂ ಶಾಶ್ವತವಾಗಿ ನೆಲೆನಿಲ್ಲುವ ಸಾಕ್ಷಿಯಾಗಿ ಖುರ್’ಆನನ್ನು ಅವತರಿಸಿದರು.

ದಿವಸಗಳ ಕಳೆಯುತ್ತಿದ್ದಂತೆ, ಪ್ರವಾದಿಯವರನ್ನು ﷺ ಯಾವುದೇ ರೀತಿಯಲ್ಲೂ ಸೋಲಿಸಲು ಸಾಧ್ಯವಿಲ್ಲ ಎಂದು ಅವರಿಗೆ ಅರ್ಥವಾಗಿತ್ತು. ಆದರೂ ಅವರು ಹೊಸ ದಾರಿಗಳನ್ನು ಹುಡುಕತ್ತಲೇ ಇದ್ದರು.

Mahabba Campaign Part-75/365

ಖುರೈಷಿಗಳಲ್ಲೇ ಪೈಶಾಚಿಕ ಕೃತ್ಯಗಳಲ್ಲಿ ತನ್ನನ್ನು ತಾನೇ ತೊಡಗಿಸಿದ್ದ ವ್ಯಕ್ತಿಯಾಗಿದ್ದರು ನಳ್’ರ್ ಬಿನ್ ಅಲ್’ಹಾರಿಸ್ ಎನ್ನುವ ವ್ಯಕ್ತಿ. ಅವರು ಪ್ರವಾದಿಯವರಿಗೆ ﷺ ಬಹಳಷ್ಟು ಕಿರುಕುಳ ಕೊಟ್ಟಿದ್ದರು.

ಒಮ್ಮೆ ಅವರು ಖುರೈಷಿಗಳನ್ನು ಕರೆಸಿ, ಓ ಖುರೈಷಿಗಳೇ ನಿಮಗೆ ಬಂದಿರುವ ಸಂಕಟ ಬಹಳ ದೊಡ್ಡ ಸಮಸ್ಯೆಯಾಗಿದೆ. ಬಹುಶಃ ಅದರಿಂದ ರಕ್ಷೆ ಹೊಂದಬಹುದು ಎಂದು ನನಗೆ ಅನಿಸುವುದಿಲ್ಲ. ಮುಹಮ್ಮದ್ ﷺ ಚಿಕ್ಕ ವಯಸ್ಸಿನಿಂದಲೇ, ನಿಮ್ಮ ಕಣ್ಣ ಮುಂದೆಯೇ ಬೆಳೆದ ಒಬ್ಬ ಒಳ್ಳೆಯ ವ್ಯಕ್ತಿ, ಎಲ್ಲರಿಗೂ ಅಚ್ಚುಮೆಚ್ಚಿನ, ಸತ್ಯವಂತನಾಗಿದ್ದ, ನೀತಿವಂತನಾಗಿದ್ದ ವ್ಯಕ್ತಿಯಾಗಿದ್ದರು ಅವರು. ಬೆಳೆದು ದೊಡ್ಡವನಾದಾಗ ಒಂದು ಹೊಸ ಆದರ್ಶದೊಂದಿಗೆ ಅವರು ನಮ್ಮ ಮುಂದೆ ಬಂದಿದ್ದರು. ಅದನ್ನು ನೀವು ವಾಮಾಚಾರ ಅಂತ ಹೇಳಿದ್ರಿ, ಆದರೆ ಅದರಲ್ಲಿ ಯಾವುದೇ ವಾಮಾಚಾರದ ಸುಳಿವೇ ಕಾಣುತ್ತಿಲ್ಲ. ವಮಾಚಾರದಲ್ಲಿ ಬಳಸುವ ಎಲ್ಲಾ ಕಟ್ಟುಗಳ ಕುರಿತು ನಮಗೆಯೇ ತಿಳಿದಿದೆ ಅಲ್ಲವೇ.? ಆಮೇಲೆ ನೀವು ಹೇಳಿದಿರಿ ಅದು ಜೋತಿಷ್ಯ ಅಂತ, ಆದರೆ ಅದು ಕೂಡ ಅಲ್ಲ. ಅವರ ಎಲ್ಲಾ ಶೈಲಿಗಳ ಬಗ್ಗೆಯೂ ನಮಗೆ ತಿಳಿದಿದೆ ಅಲ್ಲವೇ.? ನಂತರ ಅದೊಂದು ಕವಿತೆ ಆಗಿದೆ ಅಂತನೂ ಹೇಳಿದ್ರಿ ಆದರೆ ಅದೂ ಕೂಡ ಅಲ್ಲ. ದೇವನಾಣೆಗೂ ಅದೊಂದು ಕವಿತೆಯೂ ಅಲ್ಲ, ಕಾರಣ ನಾವು ಎಷ್ಟೊಂದು ಕವಿತೆಗಳನ್ನು ಹಾಡಿದ್ದೇವೆ, ಅದರ ಬಗ್ಗೆ ನಮ್ಮಷ್ಟು ಯಾರಿಗೆ ಗೊತ್ತಿರಬಹುದು.? ಆಮೇಲೆ ನೀವು ಹೇಳಿದಿರಿ, ಅವರಿಗೆ ಹುಚ್ಚು ಹಿಡಿದಿದೆ ಎಂದು, ಆದರೆ ಅದೂ ಕೂಡ ಅಲ್ಲ, ನಾವೆಷ್ಟು ಹುಚ್ಚರನ್ನು ನೋಡಿದ್ದೇವೆ. ಅವರು ತೋರಿಸುವ ಹುಚ್ಚುತನ ಯಾವುದೂ ಕೂಡ ಇಲ್ಲಿ ಕಾಣುತ್ತಿಲ್ಲ.
ಹಾಗಾದರೆ ಇಲ್ಲಿ ಬಂದಿರುವ ಆಪತ್ತು ಅತೀ ದೊಡ್ಡ ವಿಪತ್ತೇ ಆಗಿದೆ. ನೀವು ಅದಕ್ಕಾಗಿ ಬಹಳಷ್ಟು ತಯಾರಿಗಳನ್ನು ನಡೆಸಿರಿ. (ನಳ್’ರ್ ನಂತರದ ಕಾಲದಲ್ಲಿ ಬದ್’ರ್ ಯುದ್ಧದಲ್ಲಿ ಅಲಿಯವರ ◌ؓ ಮುಂದೆ ಯುದ್ಧದಲ್ಲಿ ಮರಣಹೊಂದಿದ್ದರು.)

ಪ್ರವಾದಿಯವರು ﷺ ನಮ್ಮ ಪೂರ್ವಿಕರ ಬಗ್ಗೆ ಹೇಳುತ್ತಿದ್ದ ಸಭೆಗಳಲ್ಲಿ ನಾನೂ ಕೂಡ ಹೋಗಿ ಕುಳಿತು ಕೇಳುತಿದ್ದೆನು. ಅವರು ಕೂಡ ರಾಜರುಗಳ ಕಥೆಗಳನ್ನು ಹೇಳುತ್ತಿದ್ದರು. ನಂತರ ಅದರ ವಿವರಣೆಯನ್ನು ನಾನು ವಿವರಿಸುತ್ತಿದ್ದ ಅದೇ ರೀತಿಯಲ್ಲಾಗಿತ್ತು ಅವರೂ ಕೂಡ ವಿವರಿಸುತ್ತಿದ್ದದ್ದು ಎಂದು ಹೇಳಿದರು. ಕಾರಣ ನಳ್’ರ್ ಹಿಯರ ಎನ್ನುವ ಊರಿಗೆ ಹೋಗಿದ್ದಾಗ, ಅಲ್ಲಿ ಪರ್ಷಿಯನ್ ರಾಜರುಗಳ ಕಥೆಗಳನ್ನು ಕೇಳಿದ್ದರು, ಹಾಗಾಗಿ ಅವರಿಗೆ ಅದರ ಬಗ್ಗೆ ಮಾಹಿತಿ ಇತ್ತು. ನಳ್’ರ್’ನ ಈ ಮಾತು ಕೇಳಿ, ಅಲ್ಲಿ ನೆರೆದಿದ್ದ ಜನರೆಲ್ಲರೂ ಗೊಂದಲಕ್ಕೀಡಾದರು. ‘ಅಲ್ ಖಲಂ’ ಅಧ್ಯಾಯದಲ್ಲಿ ಇದರ ಬಗ್ಗೆ ಕುರ್’ಆನ್ ಉಲ್ಲೇಖಿಸಿದ್ದು ಕಾಣಬಹುದು.

ನಳ್’ರ್’ನ ಮಾತುಗಳನ್ನು ಕೇಳಿದ ಖುರೈಷಿಗಳು, ಉಖ್’ಮತ್ ಬಿನ್ ಅಬೀ ಮುಐತ್ವಿನ ಜೊತೆಯಲ್ಲಿ ನಳ್’ರನ್ನು ಕೂಡ ಮದೀನಕ್ಕೆ ಕಳುಹಿಸಿ ಅಲ್ಲಿರುವ ವೇದ ಜ್ಞಾನಿಗಳನ್ನು ಭೇಟಿಯಾಗಲು ಹೇಳಿದರು. ಅಲ್ಲಿದ್ದ ವೇದ ಜ್ಞಾನಿಗಳನ್ನು ಭೇಟಿಯಾಗಿ, ಮುಹಮ್ಮದ್’ರ ﷺ ಬಗ್ಗೆ ಸಂಪೂರ್ಣ ವಿವರಣೆಯನ್ನು ಪಡೆಯಿರಿ. ಅವರಲ್ಲಿರುವ ದಾಖಲೆಗಳ, ಆಧಾರದ ಮೂಲಕ ಪ್ರವಾದಿಯವರ ﷺ ನಿಜ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು ಎನ್ನುವುದಾಗಿತ್ತು, ಅವರ ಯಾತ್ರೆಯ ಉದ್ದೇಶ. ಇಬ್ಬರೂ ಮದೀನಕ್ಕೆ ತಲುಪಿದ ನಂತರ, ಯಹೂದಿ ಪುರೋಹಿತರನ್ನು ಭೇಟಿಯಾದರು. ಅಲ್ಲಿಯ ತನಕ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿ, ಅವರ ಉತ್ತರಕ್ಕಾಗಿ ಕಾದು ಕುಳಿತಿದ್ದರು. ನಾವು ಕೇಳುವ ಮೂರು ವಿಷಗಳ ಕುರಿತು ನೀವು ಮುಹಮ್ಮದ್’ರಲ್ಲಿ ﷺ ಕೇಳಿರಿ, ಒಂದು ವೇಳೆ ಅವರು ಸರಿಯಾಗಿ ಉತ್ತರ ನೀಡಿದರೆ ಅವರು ನಿಜವಾಗಿಯೂ ಸತ್ಯ ಸಂದೇಶವಾಹಕರೇ ಆಗಿರುವರು, ಅಲ್ಲದಿದ್ದರೆ ಅವರು ಹೇಳುವುದೆಲ್ಲವೂ ಸುಳ್ಳಾಗಿದೆ ಎಂದು ಹೇಳಿ, ಮೂರು ವಿಷಯಗಳನ್ನು ತಿಳಿಸಿದರು. ಒಂದು, ಹಿಂದಿನ ಕಾಲದಲ್ಲಿ ವಿಸ್ಮಯಗಳನ್ನು ತೋರಿಸಿ ಮರಣ ಹೊಂದಿ ಹೋಗಿದ್ದ ಯುವಕರು ಯಾರು.? ಎರಡು, ಜಗತ್ತನ್ನು ಸುತ್ತಿದ್ದ ವ್ಯಕ್ತಿ ಯಾರು.? ಹಾಗೂ ಅವರು ಹೇಳುತ್ತಿದ್ದ ವಿಷಯಗಳು ಏನು.? ಮೂರು, ಆತ್ಮ ಕುರಿತು ನೀವೇನು ಹೇಳುತ್ತೀರಿ.? ಎಂದು ಪ್ರವಾದಿಯವರಲ್ಲಿ ﷺ ಕೇಳಿರಿ ಎಂದು, ಯಹೂದಿ ಪಂಡಿತನು ಹೇಳಿ ಕೊಟ್ಟರು.

ಈ ಮೂರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ನೀಡಿದರೆ, ಅಲ್ಲಿರುವ ವ್ಯಕ್ತಿಯೂ ನಿಜವಾಗಿಯೂ ಸತ್ಯ ಸಂದೇಶ ವಾಹಕರೇ ಆಗಿರುವರು, ಅಲ್ಲದಿದ್ದರೆ ಅವರು ಹೇಳುವುದು ಸುಳ್ಳಾಗಿದೆ ಎಂದು ಹೇಳಿ ನಳ್’ರ್ ಹಾಗೂ ಜೊತೆಯಲ್ಲಿ ಬಂದಿದ್ದ ವ್ಯಕ್ತಿಯನ್ನು ಅಲ್ಲಿಂದ ಕಳುಹಿಸಿದರು. ಇಬ್ಬರೂ ಅಲ್ಲಿಂದ ವಾಪಸ್ಸು ಬಂದ ನಂತರ, ಖುರೈಷಿಗಳಲ್ಲಿ ನಡೆದ ಎಲ್ಲಾ ಘಟನೆಗಳನ್ನು ಸಂಪೂರ್ಣವಾಗಿ ವಿವರಿಸಿ ಕೊಟ್ಟರು. ನಂತರ ಪ್ರವಾದಿಯವರನ್ನು ﷺ ಭೇಟಿಯಾಗಿ ಈ ಮೂರು ಪ್ರಶ್ನೆಗಳನ್ನು ಕೇಳಿಯೇ ಬಿಟ್ಟರು. ಅದಕ್ಕೆ ಪ್ರವಾದಿಯವರು ﷺ ನಾಳೆ ಹೇಳುತ್ತೇನೆ ಎಂದು ಹೇಳಿ, ‘ಇನ್ಷಾ ಅಲ್ಲಾಹ್’ ಅಲ್ಲಾಹನ ಇಚ್ಛೆ ಇದ್ದರೆ ಎಂದು ಜೊತೆಯಲ್ಲಿ ಹೇಳುವುದಕ್ಕೆ ಮರೆತುಹೋಗಿದ್ದರು. ಹಾಗಾಗಿ ಐದು ದಿವಸ ಕಳೆದರೂ ಪ್ರವಾದಿಯವರಿಗೆ ﷺ ಉತ್ತರ ಸಿಕ್ಕಿರಲಿಲ್ಲ. ನಂತರ ಅವಿಶ್ವಾಸಿಗಳು ಪ್ರವಾದಿಯವರ ﷺ ಬಳಿ ಬಂದು, ಏನಾಯಿತು.? ನಾಳೆ ಉತ್ತರ ಹೇಳುತ್ತೇನೆ ಎಂದು ಹೇಳಿ ದಿವಸಗಳು ಕಳೆಯಿತಲ್ಲವೇ.? ಇನ್ನೂ ಉತ್ತರ ಸಿಗಲಿಲ್ಲ ಎಂದು ಕೇಳಿದಾಗ, ಪ್ರವಾದಿಯವರು ﷺ ಒಳಗೊಳಗೆ ಬಹಳಷ್ಟು ಚಿಂತಿತರಾಗ ತೊಡಗಿದರು. ತಕ್ಷಣವೇ ಮಲಕ್ ಜಿಬ್’ರೀಲ್’ರವರು (ಅ) ಬಂದು, ಅಲ್ಲಾಹನಿಂದ ಲಭಿಸಿದ ಸಂದೇಶವನ್ನು ತಿಳಿಸಿದರು. ನಾಳೆ ಹೇಳುತ್ತೇನೆ ಎಂದು ಹೇಳುವಾಗ ‘ಇನ್ಷಾ ಅಲ್ಲಾಹ್’ ಎಂದು ಕೂಡ ಹೇಳಬೇಕಿತ್ತು ಎನ್ನುವ ವಿಷಯವನ್ನೂ ಕೂಡ ನೆನೆಪಿಸಿದರು. ನಂತರ ಅವರು ಕೇಳಿದ ಮೂರು ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರದೊಂದಿಗೆ ಪವಿತ್ರ ಖುರ್’ಆನಿನ ಹದಿನೆಂಟನೇ ಅಧ್ಯಾಯವಾದ ‘ಅಲ್ ಕಹ್’ಫ್’ ಅಧ್ಯಾಯವನ್ನು ವಿವರಿಸಿ ಕೊಟ್ಟರು.

Mahabba Campaign Part-76/365

ಗುಹೆಯಲ್ಲಿ ಜೀವಿಸಿದ್ದ “ಅಸ್’ಹಾಬುಲ್ ಕಹ್’ಫ್’ರ” ಕುರಿತಾಗಿತ್ತು ಅವರು ಮೊದಲು ಕೇಳಿದ್ದು. “ಝುಲ್’ಕರ್’ನೈನ್’ರವರ” ಕುರಿತಾಗಿತ್ತು ಎರಡನೇ ಬಾರಿ ಪ್ರಶ್ನೆ ಕೇಳಿದ್ದು. ಆತ್ಮದ ಕುರಿತು ಪ್ರವಾದಿಯವರು ﷺ ಏನು ಹೇಳಬಹುದೆಂದು? ಕಾದು ಕುಳಿತಿದ್ದರು. ಅದಕ್ಕೆ ಸಂಪೂರ್ಣವಾದ ವಿವರಣೆಯೊಂದಿಗೆ, ಸ್ಪಷ್ಟವಾದ ಉತ್ತರ ಕುರ್’ಆನ್ ನೀಡಿತು.

ಇಸ್ಲಾಮ್ ಚರ್ಚೆಗಳನ್ನು ಹೇಗೆ ನಿಭಾಯಿಸುತ್ತದೆ ಎನ್ನುವುದಕ್ಕೆ ಸಾಕ್ಷಿಯೂ ಕೂಡ ಆಗಿದೆ ಇದು. ಆಧುನಿಕ ಯುಗದ ಇಸ್ಲಾಮ್ ವಿರೋಧಿಗಳು ಇತಿಹಾಸವನ್ನು ಸ್ಪಷ್ಟವಾಗಿ ಪರಿಶೀಲಿಸಲಿ. ಇಷ್ಟೊಂದು ಸೈದ್ಧಾಂತಿಕವಾದ ಚರ್ಚೆಗಳನ್ನು ಎದುರಿಸಿದ ಬೇರೆ ಯಾವ ಸಿದ್ದಾಂತವೂ ಕೂಡ ಬಹುಶಃ ಇರಲಿಕ್ಕಿಲ್ಲ. ಪ್ರವಾದಿಯವರ ﷺ ಪ್ರಭೋಧನೆಯ ಆರಂಭದಲ್ಲೇ, ಮುಕ್ತವಾದ ಚರ್ಚೆಗಳಾನ್ನಾಗಿತ್ತು ಎದುರಿಸಿದ್ದು.
ಸೈದ್ಧಾಂತಿಕವಾಗಿ ಸೋಲುವಾಗ ಹಿಂಸೆ ಮಾಡುವುದು ಅವತ್ತೂ ಕೂಡ ಇದ್ದ ಪದ್ಧತಿಯಾಗಿತ್ತು. ಮಕ್ಕಾದ ಅವಿಶ್ವಾಸಿಗಳು ಹಿಂಸೆಯನ್ನು ಅಧಿಕವಾಗಿ ಇಷ್ಟಪಡುವವರಾಗಿದ್ದರು. ಕಅಬಾಲಯದ ಸುತ್ತಮುತ್ತಲಿನಲ್ಲಿ ನಮಾಝ್ ಮಾಡುತಿದ್ದವರ ಮೇಲೆ ಕ್ರೂರವಾಗಿ ಹಿಂಸಿಸ ತೊಡಗಿದರು. ಖುರ್’ಆನ್ ಕಲಿಯುತ್ತಿದ್ದವರ ಮೇಲೆ ಬಹಳ ರಾಕ್ಷಸಿಯವಾಗಿ ವರ್ತಿಸತೊಡಗಿದರು. ಪ್ರವಾದಿಯವರು ﷺ ನಮಾಝಿನಲ್ಲಿ ಕುರ್’ಆನ್ ಪಠಿಸುವುದು ಕೇಳಿಯಾಗಿತ್ತು, ಹಲವಾರು ಜನರು ಕುರ್’ಆನ್ ಕಲಿತದ್ದು. ಇದು ಅವಿಶ್ವಾಸಿಗಳಿಗೆ ಅಸಹನೀಯವಾಗಿತ್ತು. ಇದರ ಬಗ್ಗೆ ಅಲ್ಲಾಹನು ತನ್ನ ಸೃಷ್ಟಿಗಳಿಗೆ ಪ್ರವಾದಿಯವರ ﷺ ಮೂಲಕ ಒಂದು ಒಳ್ಳೆಯ ಸಂದೇಶವನ್ನು ನೀಡಿದನು. “ನೀವು ನಮಾಝ್’ನಲ್ಲಿ ಅಧಿಕ ಶಬ್ದದಿಂದ ಪಠಿಸಿಬೇಕಾಗಿಲ್ಲ, ಹಾಗಂತ ಅಧಿಕವಾಗಿ ಕಡಿಮೆಯೂ ಮಾಡದಿರಿ” ಎಂದು. (ಇಸ್’ರಾಅ್ 110) ಶತ್ರುಗಳ ಹಿಂಸೆಯಿಂದ ರಕ್ಷೆ ಹೊಂದಲು, ಹಾಗು ವಿಶ್ವಾಸಿಗಳ ಕುರ್’ಆನ್ ಪಠಣೆಗೆ ಅಡ್ಡಿಯಾಗಬಾರದು ಎನ್ನುವ ಉದ್ದೇಶದಿಂದಾಗಿತ್ತು ಈ ತಂತ್ರವನ್ನು ಪ್ರಯೋಗಿಸಿದ್ದು.

ಆದರೆ ವಿಶ್ವಾಸಿಗಳ ಮನಸ್ಸಿನಲ್ಲಿ ಖುರ್’ಆನ್ ಆಳವಾಗಿ ಬೇರೂರಿತ್ತು. ಅವರಿಗೆ ಕುರ್’ಆನ್ ಕೇಳದೆ, ಅದನ್ನು ಪಠಿಸದೆ ಇರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಸ್ವಾಹಾಬಿಗಳೆಲ್ಲರೂ ಜೊತೆ ಸೇರಿ ಒಂದು ತೀರ್ಮಾನಕ್ಕೆ ಬಂದರು. ವಿಮರ್ಶೆ ಮಾಡುವವರ ಮುಂದೆ, ಮೇಲು ಧ್ವನಿಯಲ್ಲಿ ಒಮ್ಮೆ ಕುರ್’ಆನ್ ಪಠಿಸಿದರೆ ಹೇಗೆ.? ಎಂದು. ಸರಿ ಆದರೆ ಅದನ್ನು ಪಠಿಸುವವರು ಯಾರು.? ಎಂದು ಚರ್ಚೆ ಬಂದಾಗ, ಅಬ್ದುಲ್ಲಾಹ್ ಬಿನ್ ಮಸ್’ಊದ್’ರವರು ◌ؓ ನಾನು ಪಠಿಸುತ್ತೇನೆ ಎಂದು ಹೇಳಿದರು. ಅದಕ್ಕೆ ಅವರ ಗೆಳೆಯರಲ್ಲರು, ನೀವು ಪಠಿಸಿದರೆ ಖಂಡಿತ ಅವರು ನಿಮ್ಮ ಮೇಲೆ ಹಿಂಸೆ ಮಾಡಬಹುದು. ನಾವು ಅಂದುಕೊಂಡದ್ದು ಉನ್ನತ ಮನೆತನದ ವ್ಯಕ್ತಿಗಳು ಯಾರಾದ್ರೂ ಪಠಿಸಿದರೆ ಅವರು ಅಷ್ಟು ಬೇಗ ಹಿಂಸೆ ಮಾಡಲು ಬರುವುದಿಲ್ಲ. ಎಂದಾಗಿತ್ತು ಎಂದು ಹೇಳಿದಾಗ, ನಾನೇ ಹೋಗಿ ಪಠಿಸುತ್ತೇನೆ. ಅಲ್ಲಾಹನು ನನ್ನನ್ನು ರಕ್ಷಿಸುವನು ಎಂದು ಹೇಳಿದರು.

ಹೀಗೆ ಮರು ದಿನ ಮುಂಜಾನೆ ಸೂರ್ಯೋದಯ ಕಳೆದ ನಂತರ (ಲುಹಾ), ಅವರು ಕಅಬಾಲಯದ ಬಳಿ ಬಂದು, ಮಖಾಮ್ ಇಬ್ರಾಹಿಮಿನ ಸಮೀಪ ಬಂದು ನಿಂತರು. ಪವಿತ್ರ ಕುರ್’ಆನ್’ನಿನ ಅರ್ರಹ್’ಮಾನ್ ಅಧ್ಯಾಯವನ್ನು ಪಠಿಸಲು ಆರಂಭಿಸಿದರು. ಕಟ್ಟೆಯಲ್ಲಿ ಕುಳಿತಿದ್ದ ಖುರೈಷಿಗಳು ಆಶ್ಚರ್ಯದಿಂದ ನೋಡುತ್ತಾ, ಉಮ್ಮು ಅಬ್’ದಿನ ಮಗ ಏನೋ ಹೇಳ್ತಿದ್ದಾರೆ ಅಲ್ವಾ.? ಅದೇನು ಎಂದು ಕೇಳಿದರು. ಓಹ್ ಅದಾ.! ಅದು ಮುಹಮ್ಮದ್’ರಿಗೆ ﷺ ಅವತರಿಸಿದ ಗ್ರಂಥದ ಕೆಲವು ಭಾಗವನ್ನು ಅವರನ್ನು ಪಠಿಸುತ್ತಿದ್ದಾರೆ ಎಂದು ಯಾರೋ ಒಬ್ಬ ಹೇಳಿದ್ದೆ ತಡ, ಅವರೆಲ್ಲರೂ ಜೊತೆ ಸೇರಿ ಇಬ್’ನು ಮಸ್’ವೂದ್’ರ ◌ؓ ಮೇಲೆ ಹಲ್ಲೆ ಮಾಡಲು ಆರಂಭಿಸಿದರು. ಕೆಲವರು ಮುಖಕ್ಕೂ ಕೂಡ ಹೊಡೆದರು, ಆದರೂ ಇಬ್’ನು ಮಸ್’ವೂದ್ ◌ؓ ಕುರ್’ಆನ್ ಪಠಿಸುತ್ತಲೇ ಇದ್ದರು. ಸ್ವಲ್ಪ ಸಮಯದ ನಂತರ ಇಬ್’ನು ಮಸ್’ವೂದ್ ◌ؓ ಅಲ್ಲಿಂದ ಹೊರಟು ಗೆಳೆಯರ ಕಡೆಗೆ ಹೋದರು. ಮುಖಕ್ಕೆ ಗಾಯ ಮಾಡಿಕೊಂಡು ಬರುತ್ತಿದ್ದ ಇಬ್’ನ್ ಮಸ್’ವೂದ್’ರನ್ನು ◌ؓ ಕಂಡು, ಇದನ್ನೇ ಆಗಿತ್ತು ನಾವು ಕೂಡ ಭಯ ಪಟ್ಟಿದ್ದು ಎಂದು ಹೇಳಿದರು. ಅದಕ್ಕೆ ಇಬ್’ನು ಮಸ್’ವೂದ್’ರವರು ◌ؓ ನನಗೆ ಅವರ ಹಿಂಸೆ ಕ್ಷುಲ್ಲಕವಾಗಿ ಕಾಣುತ್ತಿದೆ. ಅವಕಾಶ ಸಿಕ್ಕರೆ ನಾಳೆಯು ಕೂಡ ಖಂಡಿತ ಪಠಿಸುತ್ತೇನೆ ಎಂದು ಹೇಳಿದರು. ಹೀಗೆ ಇಸ್ಲಾಮಿನ ಇತಿಹಾಸದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕುರ್’ಆನ್ ಪಠಿಸಿದ ವ್ಯಕ್ತಿ ಎನ್ನುವ ಅಮರ ನಾಮವನ್ನು ಇಬ್’ನು ಮಸ್’ವೂದ್ ◌ؓ ತಮ್ಮದಾಗಿಸಿಕೊಂಡರು.

ಕುರ್’ಆನಿನ ಸೌಂದರ್ಯ ಹಾಗೂ ಅದರ ಪ್ರಭಾವವು ಖುರೈಷಿಗಳ ನಡುವೆ ಬಹಳಷ್ಟು ಚರ್ಚೆ ಮಾಡಿ ಕೊಟ್ಟಿತು. ಕಟು ಶತ್ರುಗಳು ಕೂಡ ಒಮ್ಮೆ ಅದನ್ನು ಕೇಳಿ ನೋಡಿದರೆ ಹೇಗೆ.? ಎನ್ನುವಷ್ಟರ ಮಟ್ಟಿಗೆ ಅವರ ಮೇಲೆ ಪ್ರಭಾವ ಬೀರಿತ್ತು. ಹಾಗಾಗಿ ಮೂರು ಖುರೈಷಿಗಳ ಗಣ್ಯ ವ್ಯಕ್ತಿಗಳು ಪ್ರವಾದಿಯವರು ﷺ ಪಠಿಸುವ ಕುರ್’ಆನ್’ನನ್ನು ಕದ್ದು ಕೇಳಲು ತೀರ್ಮಾನಿಸಿದರು. ಹೀಗೆ ಅಬೂಜಹಲ್, ಅಬೂಸುಫಿಯಾನ್ ಹಾಗೂ ಅಖ್’ನಸ್ ಬಿನ್ ಶರೀಖ್ ರಾತ್ರಿ ಹೊತ್ತು ಪ್ರವಾದಿಯವರು ﷺ ನಮಾಝ್ ಮಾಡುವ ಸಂದರ್ಭದಲ್ಲಿ, ಕುರ್’ಆನ್ ಕದ್ದು ಕೇಳಲು ಮುಂದಾದರು. ತಿರುಗಿ ಹೋಗುವ ದಾರಿಯಲ್ಲಿ ಮೂವರು ಕೂಡ ಆಕಸ್ಮಿಕವಾಗಿ ಭೇಟಿಯಾದರು. ಇನ್ನುಮುಂದೆ ಇದು ಪುನರಾವರ್ತನೆ ಆಗಬರದು, ನಮ್ಮ ಅನುಯಾಯಿಗಳು ಯಾರಾದ್ರೂ ನೋಡಿದ್ರೆ ತಪ್ಪು ತಿಳಿಯಬಹುದು ಎಂದು ಹೇಳಿ, ಅವರು ಮೂವರೂ ಅಲ್ಲಿಂದ ಹೊರಟು ಹೋದರು.

Mahabba Campaign Part-77/365

ಮರುದಿನವೂ ಕೂಡ ಅವರು ಅದೇ ರೀತಿ ಯಾರಿಗೂ ತಿಳಿಯದ ಹಾಗೆ ಕುರ್’ಆನ್ ಕೇಳಲು ಬಂದಿದ್ದರು. ಆದರೆ ಮರಳಿ ಹೋಗುವಾಗ ಮಾತ್ರ ಪುನಃ ಭೇಟಿಯಾದರು. ಕಳೆದ ದಿನ ಹೇಳಿದ ಹಾಗೆ ಇವತ್ತೂ ಕೂಡ ಹೇಳಿ ಅಲ್ಲಿಂದ ಹೊರಟರು.
ಮೂರನೇ ದಿನವೂ ಕೂಡ ಇದೇ ರೀತಿ ಪುನರಾವರ್ತನೆಯಾಗಿತ್ತು. ಅವರು ಪರಸ್ಪರ, ಇನ್ನು ಇದು ಯಾವುದೇ ಕಾರಣಕ್ಕೂ ಮುಂದುವರಿಯಲೇ ಬಾರದು, ನಾವು ಒಪ್ಪಂದ ಮಾಡಿದರೆ ಅದನ್ನು ಖಂಡಿತ ಪಾಲಿಸಬೇಕು ಎಂದು ಹೇಳಿ ಅಲ್ಲಿ ಹೊರಟು ಹೋದರು. ಮರುದಿನ ಅಖ್’ನಸ್ ತನ್ನ ಊರುಗೋಲು ತೆಗೆದುಕೊಂಡು ನೇರವಾಗಿ ಅಬುಸೂಫಿಯಾನ್’ರ ಮನೆಕಡೆ ಹೊರಟರು. ಅವರನ್ನು ಭೇಟಿಯಾಗಿ, ನಿಮಗೆ ಮುಹಮ್ಮದ್’ರಿಂದ ﷺ ಕೇಳಿದ ಕುರ್’ಆನಿನ ಕುರಿತು ಏನು ಅನಿಸುತ್ತದೆ ಎಂದು ಕೇಳಿದರು. ಅದಕ್ಕೆ ಅಬೂಸುಫಿಯಾನ್ ನಿಮಗೆ ಏನು ಅನಿಸುತ್ತದೆ ಎಂದು ತಿರುಗಿ ಅವರಲ್ಲೇ ಕೇಳಿದರು. ಅದಕ್ಕೆ ಅಖ್’ನಸ್ ನನಗೆ ಅದು ಸತ್ಯವಾಗಿರಬಹುದು ಎಂದು ಅನಿಸುತ್ತದೆ ಎಂದು ಹೇಳಿದರು. ಅಬೂಸುಫಿಯಾನ್ ಮಾತು ಮುಂದುವರಿಸುತ್ತಾ, ನನಗೆ ಅದರಲ್ಲಿ ಕೆಲವೊಂದು ಚೆನ್ನಾಗಿ ಅರ್ಥ ಆಗಿದೆ. ಕೆಲವೊಂದರ ಅನುವಾದದಲ್ಲಿ ಸಂಶಯವಿದೆ, ಇನ್ನೂ ಕೆಲವೊಂದಂತೂ ಅರ್ಥವೇ ಆಗಲಿಲ್ಲ ಎಂದು ಹೇಳಿದಾಗ, ಅಖ್’ನಸ್ ಕೂಡ ನನಗೂ ಅದೇ ರೀತಿ ಅನಿಸಿದೆ ಎಂದು ಹೇಳಿದರು.

ನಂತರ ಅಲ್ಲಿಂದ ಅಖ್’ನಸ್ ಅಬೂಜಹಲಿನ ಮನೆಗೆ ತೆರಳಿದರು. ಅವರೊಂದಿಗೆ ನಿನ್ನೆ ಮುಹಮ್ಮದ್’ರ ﷺ ಕುರ್’ಆನ್ ಪಠನೆ ಕೇಳಿದ ನಿಮಗೆ ಅದರ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದರು. ಅದಕ್ಕೆ ಅಬೂಜಹಲ್, ನಮಗೂ ಅಬ್ದುಮನಾಫಿನ ಕುಟುಂಬಕ್ಕೂ (ಪ್ರವಾದಿಯವರ ﷺ ಕುಟುಂಬ) ಹಿಂದಿನಿಂದಲೂ ಸ್ಪರ್ಧೆಯಲ್ಲಿರುವ ಕುದುರೆಯ ಹಾಗೆ ಸ್ಪರ್ಧೆ ನಡೆಯುತ್ತಲೇ ಇರುತ್ತದೆ. ಅವರೇನೇ ಮಾಡಲು ಪ್ರಯತ್ನಿಸಿದರೂ ನಾವೂ ಕೂಡ ಅದನ್ನು ಮಾಡಲು ಮುಂದಾಗುತ್ತೇವೆ. ಹೀಗಿರುವಾಗ ಅಬ್ದುಮನಾಫಿನ ಕುಟುಂಬದ ಒಬ್ಬ ವ್ಯಕ್ತಿಗೆ ಉನ್ನತ ಪದವಿ ಲಭಿಸಿತು, ಪ್ರವಾದಿತ್ವ ಲಭಿಸಿತು ಎಂದು ಹೇಳಿದರೆ ನಾನು ಅದನ್ನು ಯಾವುದೇ ಕಾರಣಕ್ಕೂ ಅಂಗೀಕರಿಸುವುದಿಲ್ಲ ಎಂದು ಹೇಳಿದರು.

ಮೂವರಿಗೂ ಖುರ್’ಆನ್ ಅಲೌಕಿಕವಾಗಿದೆ ಎಂದೂ, ಪ್ರವಾದಿತ್ವ ಸತ್ಯವಾಗಿದೆ ಎಂದು ಅರ್ಥವಾಗಿತ್ತು, ಆದರೆ ಅವರ ಸ್ವಂತ ಹಿತಾಸಕ್ತಿಯಿಂದ ಅವರಿಗೆ ಒಪ್ಪಿಕೊಳ್ಳಲು ಸಾಧ್ಯವಾಗಿಲ್ಲ. ಅದರಲ್ಲಿ ಹೆಚ್ಚು ಕಟ್ಟುನಿಟ್ಟು ಪಾಲಿಸಿದ್ದು ಅಬೂಜಹಲ್ ಆಗಿದ್ದರು. ಅವರು ಕೊನೆಯವರೆಗೂ ವಿರೋಧಿಸುತ್ತಲೇ ಬದ್’ರ್ ಯುದ್ಧದಲ್ಲಿ ಕೊಲೆಯಾದರು. ಅಬೂಸುಫಿಯಾನ್ ಮಕ್ಕಾವಿಜಯದ ಸಂದರ್ಭದಲ್ಲಿ ಇಸ್ಲಾಮ್ ಸ್ವೀಕರಿಸಿದರು. ಅಖ್’ನಸ್ ಕೂಡ ಇಸ್ಲಾಂ ಸ್ವೀಕರಿಸಿದ್ದರು ಎನ್ನುವ ಅಭಿಪ್ರಾಯವೂ ಇದೆ.

ಅಬೂಜಹಲ್’ನ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಒಂದು ಘಟನೆಯನ್ನು ಇಬ್’ಕಸೀರ್’ರವರು ◌ؓ ಉಲ್ಲೇಖಿಸಿದ್ದಾರೆ. ಮುಗೀರತ್ ಬಿನ್ ಶುಅಬ ◌ؓ ಎಂಬ ಸ್ವಾಹಾಬಿಯವರು ವಿವರಿಸುವುದು ಈ ರೀತಿಯಾಗಿದೆ. ನನಗೆ ಇಸ್ಲಾಮಿನ ಕುರಿತು ಕಲಿಯುವ ಮೊದಲ ಅವಕಾಶ ಸಿಕ್ಕಿದ್ದೂ ಕೂಡ ಇಲ್ಲಿಯೇ ಆಗಿತ್ತು, ನಾನು ಅಬೂಜಹಲರ ಜೊತೆಯಲ್ಲಿ ಮಕ್ಕಾದ ಒಂದು ಸಣ್ಣ ದಾರಿಯಲ್ಲಿ ಹೋಗುತ್ತಿದ್ದ ಸಂದರ್ಭವಾಗಿತ್ತು ಅದು. ಅದೇ ಸಂದರ್ಭದಲ್ಲಿ ಪ್ರವಾದಿಯವರು ﷺ ನಮ್ಮನ್ನು ಭೇಟಿಯಾದರು. ಅವರು ಅಬೂಜಹಲ್’ರ ಬಳಿ ಬಂದು , ಓ ಅಬುಲ್’ಹಕಮ್ ನಾನು ನಿಮ್ಮನ್ನು ಅಲ್ಲಾಹನ ಕಡೆಗೆ ಆಹ್ವಾನ ನೀಡುತ್ತಿದ್ದೇನೆ, ಹಾಗಾಗಿ ಬನ್ನಿ ಈ ಸುಂದರ ಸಿದ್ಧಾಂತಕ್ಕೆ ಎಂದು ಹೇಳಿದರು. ಅದಕ್ಕೆ ಅಬೂಜಹಲ್, ಓ ಮುಹಮ್ಮದ್’ರೇ ﷺ ನೀವು ನಮ್ಮ ದೇವರುಗಳನ್ನು ವಿರೋಧಿಸುವುದು ನಿಲ್ಲಿಸುತ್ತೀರ.? ಮತ್ತೇ, ನಾವು ನಿಮಗೆ ಪ್ರವಾದಿತ್ವದ ಜವಾಬ್ದಾರಿ ಸಿಕ್ಕಿದೆ ಎನ್ನುವುದನ್ನು ಮಾತ್ರ ಒಪ್ಪಿಕೊಳ್ಳಬೇಕು ಅಲ್ವಾ.? ಅಲ್ಲಾಹನ ಮೇಲಾಣೆ.! ನನಗೆ ನೀವು ಹೇಳುವುದು ಸತ್ಯ ಎಂದು ಯಾವಾಗ ಅನಿಸುತ್ತೋ ಅಂದು ಖಂಡಿತ ನಿಮ್ಮನ್ನು ಒಪ್ಪಿಕ್ಕೊಳ್ಳುತ್ತೇನೆ ಎಂದು ಹೇಳಿದಾಗ, ಪ್ರವಾದಿಯವರು ﷺ ಅಲ್ಲಿಂದ ಹೊರಟು ಹೋದರು. ತಕ್ಷಣವೇ ನನ್ನ ಮುಖ ನೋಡುತ್ತಾ, ಅಲ್ಲಾಹನಾಣೆಗೂ ಮುಹಮ್ಮದ್ ﷺ ಹೇಳುವುದು ಸತ್ಯ ಎಂದು ನನಗೆ ಗೊತ್ತಿದೆ. ಆದರೆ, ಬನೂ ಕುಸಯ್ಯ್ ಕಅಬಾಲಯದ ಕೀಲಿಯ ಪಾಲಕರು ಅವರಾಗಬೇಕು ಎಂದು ಹೇಳಿದ್ದಾಗ, ನಾವು ಅದಕ್ಕೆ ಒಪ್ಪಿಗೆ ನೀಡಿದ್ದೆವು. ಆಮೇಲೆ ಅವರು, “ನದ್’ವ” ಅಥವಾ ಮೀಟಿಂಗ್’ನ ನಾಯಕತ್ವವೂ ನಮಗೆಯೇ ಬೇಕು ಅಂದಾಗಲೂ, ನಾವು ಅದಕ್ಕೆ ಒಪ್ಪಿಗೆ ನೀಡಿದ್ದೆವು. ನಂತರ ಧ್ವಜಾರೋಹಣದ ಉಸ್ತುವಾರಿತ್ವವು ನಮಗೆ ಬೇಕು ಅಂದಾಗಲೂ ನಾವು ಅದಕ್ಕೂ ಒಪ್ಪಿಗೆ ನೀಡಿದ್ದೆವು. ನಂತರ ಅವರು ಯಾತ್ರಾರ್ಥಿಗಳಿಗೆ ಔತಣಕೂಟವನ್ನು ಏರ್ಪಡಿಸಿದ್ದರು, ನಾವು ಕೂಡ ಏರ್ಪಡಿಸಿದೆವು. ಹೀಗೆ ಪ್ರತಿಯೊಂದರಲ್ಲೂ ಸ್ಪರ್ಧೆ ನಡೆಸುತ್ತಿರುವ ನಮ್ಮೊಂದಿಗೆ, ಇನ್ನು ಈ ಪ್ರವಾದಿತ್ವದ ಪದವಿಯೂ ಕೂಡ ಅವರಿಗೆಯೇ ಸಿಕ್ಕಿದೆ ಎಂದು ಹೇಳುವಾಗ ಮನಸ್ಸು ಒಪ್ಪುತ್ತಿಲ್ಲ ಎಂದು ಅಬೂಜಹಲ್ ಹೇಳಿದರು. ಇದಾಗಿತ್ತು ಅಬೂಜಹಲ್’ನ ಸಮಸ್ಯೆ, ಅಸೂಯೆ ಹಾಗೂ ಸ್ಪರ್ಧಾತ್ಮಕ ಬುದ್ದಿ ಆದರೆ ಇದಕ್ಕೆ ಔಷಧವೇ ಇಲ್ಲ.

ಆಧುನಿಕ ಯುಗದ ವಿಮರ್ಶೆಕಾರರು, ಇಸ್ಲಾಮನ ಕುರಿತು ವಿಮರ್ಶೆಗಳನ್ನು ಉದ್ಧರಿಸುವುದು ಸೈದ್ಧಾಂತಿಕವಾದ ಚರ್ಚೆ ನಡೆಸುವ ಉದ್ದೇಶದಿಂದ ಅಲ್ಲ. ಬದಲಾಗಿ ಇಸ್ಲಾಮಿನ ವಿರುದ್ಧ ಟೀಕಿಸಲು, ಹಾಗೂ ಆಧಾರ ರಹಿತ ಆರೋಪಿಗಳನ್ನು ಮಾಡುವ ಉದ್ದೇಶದಿಂದಾಗಿದೆ. ಇಸ್ಲಾಮಿನ ನ್ಯಾಯ, ನೀತಿ, ಪ್ರಾಮಾಣಿಕತೆ ಅವರನ್ನು ಬಹಳಷ್ಟು ಕಾಡುತ್ತಿದೆ ಎಂಬುದಾಗಿದೆ ಇದರ ಪ್ರಮುಖ ಕಾರಣ.
ಬಹಳಷ್ಟು ಪರೀಕ್ಷೆಗಳನ್ನು ಎದುರಿಸಿ, ಸುಮಾರು ಹದಿನೈದು ಶತಮಾನಗಳನ್ನು ದಾಟಿ ಬಂದ ಇಸ್ಲಾಮನ್ನು ಈಗ ಸುಲಭವಾಗಿ ಬೇಟೆಯಾಡಬಹುದು ಎಂದು ಅಂದುಕೊಂಡಿದ್ದರೆ, ಅದು ಅವರಿಗೆ ಇಸ್ಲಾಮಿನ ಇತಿಹಾಸದ ಕುರಿತು ಜ್ಞಾನದ ಕೊರತೆಯಿದೆ ಎಂದು ಮಾತ್ರವೇ ಹೇಳಲು ಸಾಧ್ಯ.
ಖುರ್’ಆನಿನ ಸಾರ ಹಾಗೂ ಅದರ ಕಾಂತಿಯನ್ನು ಅರ್ಥೈಸಿಕೊಂಡ ಮತ್ತೊಂದು ಖುರೈಷಿ ನಾಯಕನ ಕುರಿತು ನಾವು ತಿಳಿಯೋಣ…

Mahabba Campaign Part-78/365

ಇಬ್’ನು ಅಬ್ಬಾಸ್’ರವರು ◌ؓ ಹೇಳುವುದು ಕಾಣಬಹುದು. ಪ್ರವಾದಿಯವರಿಗೆ ﷺ ಪವಿತ್ರ ಕುರ್’ಆನಿನ ಅಲ್ ಗಾಫಿರ್ ಅಧ್ಯಯವು ಅವತರಿಸಿತು. ಅವರು ಅದನ್ನು ಕಅಬಾಲಯದ ಸಮೀಪ ಕುಳಿತು ಪಠಿಸುತ್ತಿದ್ದರು. ಅದನ್ನು ವಲೀದ್ ಬಿನ್ ಮುಗೀರ ಎನ್ನುವ ವ್ಯಕ್ತಿಯು ಬಹಳ ಶ್ರದ್ಧೆಯಿಂದಲೇ ಕೇಳುತ್ತಿದ್ದರು. ನಂತರ ಅಲ್ಲಿಂದ ಎದ್ದು ಬನೂ ಮಖ್’ಸೂಮಿಗಳ ಸಭೆಗೆ ಹೋಗಿ, ಅಲ್ಲಿ ನಾನು ಈಗ ದಾರಿಯಲ್ಲಿ ಬರುವಾಗ ಮುಹಮ್ಮದ್ ﷺ ಪಠಿಸುತ್ತಿದ್ದ ವಾಕ್ಯಗಳನ್ನು ಕೇಳಲು ಸಾಧ್ಯವಾಯಿತು. ನನಗೆ ಅದರ ಬಗ್ಗೆ ಏನು ಹೇಳಬೇಕೆಂದು ತಿಳಿಯುತ್ತಿಲ್ಲ, ಕವಿತೆಯಾಗಲಿ, ಜಿನ್ನ್’ಗಳ ಪದ್ಯ ಆಗಲಿ, ಅಥವಾ ಇತರ ಯಾವುದೇ ಅರಬಿ ಭಾಷೆಯ ಯಾವುದೇ ಸಾಹಿತ್ಯ ಭರಿತವಾದ ಕಾವ್ಯಗಳೇ ಆಗಲಿ ನಿಮಗಿಂತ ಜಾಸ್ತಿ ನನಗೆ ಗೊತ್ತಿದೆ. ದೇವನಾಣೆಗೂ ಮುಹಮ್ಮದ್ ﷺ ಹೇಳುತಿದ್ದ ಯಾವುದೇ ವಾಕ್ಯಗಳು ಕೂಡ ಅವುಗಳಿಗೆ ಹೋಲಿಕೆಯಾಗುತ್ತಿರಲಿಲ್ಲ. ಆ ವಾಕ್ಯಗಳಲ್ಲಿ ಏನೋ ಒಂದು ಸೆಳೆತವಿತ್ತು, ಏನೋ ಒಂದು ಸೌಂದರ್ಯವಿತ್ತು. ನಿಜವಾಗಿಯೂ ಅದು ಇತರ ವಾಕ್ಯಗಳಿಗಿಂತ ಉತ್ತಮವಾಗಿತ್ತು. ಅದನ್ನು ಸೋಲಿಸಲು ಇನ್ಯಾವುದಕ್ಕೂ ಸಾಧ್ಯವೇ ಇಲ್ಲ. ಅದರ ಮುಂದೆ ಬೇರೆ ಏನೇ ನಿಂತರು ಎಲ್ಲವನ್ನು ಅದು ಖಂಡಿತ ಸೋಲಿಸಿ ಬಿಡುತ್ತದೆ. ಎಂದು ಹೇಳಿ ವಲೀದ್ ಅಲ್ಲಿಂದ ಹೊರ ನಡೆದರು.

ಇದು ಖುರೈಷಿಗಳ ನಡುವೆ ಬಹಳಷ್ಟು ಚರ್ಚೆಯಾಯಿತು. ಕೆಲವರು ವಲೀದ್ ಸಾಬಿಯಿಯಾಗಿದ್ದಾರೆ ಅಥವಾ ಮತಾಂತರವಾಗಿದ್ದಾರೆ ಎಂದು ಹೇಳ ತೊಡಗಿದರು. ‘ಖುರೈಷಿಗಳ ಸುವಾಸನೆ’ ಎಂದು ಪ್ರಸಿದ್ಧಿ ಪಡೆದಿದ್ದ ವಲೀದ್ ಧರ್ಮ ಬದಲಾಯಿಸಿದರೆ, ಬಹುಶಃ ಖುರೈಷಿಗಳು ಕೂಡ ತಮ್ಮ ಧರ್ಮವನ್ನು ಬದಲಾಯಿಸುವರು ಎಂದು ಭಯಪಟ್ಟು, ಅಬೂಜಹಲ್ ಈ ವಿಷಯದಲ್ಲಿ ಮಧ್ಯಪ್ರವೇಶ ಮಾಡಿ ನಾನು ಸರಿ ಮಾಡುತ್ತೇನೆ ಎಂದು ಹೇಳಿದರು.
ಹೀಗೆ ಅಬೂಜಹಲ್ ದುಃಖದ ನಟನೆ ಮಾಡುತ್ತಾ, ವಲೀದ್’ರ ಮನೆಗೆ ತಲುಪಿದರು. ಅಬೂಜಹಲ್, ಮಾವ ಖುರೈಷಿಗಳು ನಿಮಗೆ ಕೊಡಲು ಸಂಪತ್ತು ಒಟ್ಟು ಮಾಡುತ್ತಿದ್ದಾರೆ, ನೀವು ಮುಹಮ್ಮದ್’ರ ﷺ ನೂತನವಾದಗಳನ್ನು ಅದೊಂದು ಅಸಂಬದ್ಧ ವಾದವಾಗಿದೆ ಎಂದು ಹೇಳಬೇಕು. ಎಂದು ಹೇಳಿದಾಗ ನಾನು ಈಗಾಗಲೇ ಶ್ರೀಮಂತ ವ್ಯಕ್ತಿಯೆಂದು ಖುರೈಷಿಗಳಿಗೆ ಗೊತ್ತಿದೆ ಅಲ್ವಾ.? ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಅದೇ ಏನೇ ಇರಲಿ ನೀವು ಮಾತ್ರ ಅದಕ್ಕೆ ಭಿನ್ನಾಭಿಪ್ರಾಯ ಹೇಳಲೇ ಬೇಕು ಎಂದು ಪುನಃ ಹೇಳಿದಾಗ, ನಾನು ಏನಂತ ಹೇಳಬೇಕು.? ಮುಹಮ್ಮದ್’ರು ﷺ ಹೇಳುತ್ತಿದ್ದ ವಾಕ್ಯಗಳು, ಅದು ಮನುಷ್ಯರದ್ದಾಗಲಿ, ಜಿನ್ನ್’ಗಳ ಮಾತುಗಳಾಗಲಿ ಅಲ್ಲವೇ ಅಲ್ಲ. ಎಂದು ವಲೀದ್ ಹೇಳಿದರು. ಅದಕ್ಕೆ ಅಬೂಜಹಲ್, ಜನರು ನಿಮ್ಮನ್ನು ಒಪ್ಪಿಕೊಳ್ಳಬೇಕಾದರೆ ನೀವು ಭಿನ್ನಾಭಿಪ್ರಾಯ ಹೇಳಲೇ ಬೇಕು ಎಂದು ಹೇಳಿದರು. ಸರಿ ನಾನೊಮ್ಮೆ ಯೋಚಿಸುತ್ತೇನೆ ಎಂದು ವಲೀದ್ ಹೇಳಿದರು.

ವಲೀದ್ ಜನರನ್ನು ಉದ್ದೇಶಿಸಿ. ಓ ಪ್ರೀತಿಯ ಜನರೇ, ಮಕ್ಕಾದಲ್ಲಿ ಹಜ್ಜ್ ನಿರ್ವಹಿಸುವ ಸಮಯವು ಹತ್ತಿರವಾಗುತ್ತಿದೆ. ಎಲ್ಲಾ ಊರಿನಿಂದಲೂ ಜನರು ಇಲ್ಲಿಗೆ ಬಂದಿರಬಹುದು, ಸ್ವಾಭಾವಿಕವಾಗಿ ಅವರು ಇಲ್ಲಿ ಕಾಣಿಸಿಕೊಂಡ ವ್ಯಕ್ತಿಯ (ಮುಹಮ್ಮದ್ ﷺ) ಬಗ್ಗೆ ಖಂಡಿತ ಕೇಳಬಹುದು. ಆಗ ಎಲ್ಲರೂ ಹೇಳುವ ಅಭಿಪ್ರಾಯ ಒಂದೇ ಆಗಿರಬೇಕು, ಬೇರೆ ಬೇರೆ ಅಭಿಪ್ರಾಯವಾದರೆ ಜನರಿಗೆ ನಂಬಿಕೆ ಬರಲಿಕ್ಕಿಲ್ಲ, ಹಾಗಾದರೆ ನಾವೇನು ಹೇಳಬೇಕು.? ಎಂದು ಕೇಳಿದಾಗ, ಅವರೆಲ್ಲರೂ ಒಟ್ಟಾಗಿ ನೀವೇ ಹೇಳಿ ವಲೀದ್ ಎಂದು ಹೇಳಿದರು. ಬೇಡ ನೀವೇ ಹೇಳಿ ನಾನು ಕೇಳುತ್ತೇನೆ ಎಂದು ಪುನಃ ವಲೀದ್ ಹೇಳಿದರು.

ಕೆಲವರು ಅವರೊಬ್ಬ ಜ್ಯೋತಿಷಿ ಎಂದು ಹೇಳಿದರೆ ಹೇಗೆ.?
ವಲೀದ್: ದೇವನಾಣೆಗೂ.! ಅದು ಬೇಡ, ಜ್ಯೋತಿಷಿಗಳ ಯಾವುದೇ ಲಕ್ಷಣವೂ ಕೂಡ ಮುಹಮ್ಮದ್’ರಲ್ಲಿ ﷺ ಕಾಣುತ್ತಿಲ್ಲ.
ಕೆಲವರು: ಬುದ್ಧಿಮಾಂದ್ಯ ಎಂದು ಹೇಳಿದರೆ ಹೇಗೆ.?
ವಲೀದ್: ನಾವೆಷ್ಟು ಹುಚ್ಚರನ್ನು ಕಂಡಿದ್ದೇವೆ, ಅವರ ಒಂದೇ ಒಂದು ಲಕ್ಷಣವೂ ಕೂಡ ಇಲ್ಲಿ ಕಾಣುತ್ತಿಲ್ಲ.
ಕೆಲವರು: ಅವರೊಬ್ಬ ಕವಿ ಎಂದು ಹೇಳಿದರೆ ಹೇಗೆ.?
ವಲೀದ್: ಕವಿತೆಯ ಅಲಂಕಾರ, ಅದರ ರಚನೆ, ಅದರ ಕಲ್ಪನೆ ಎಲ್ಲವೂ ನಮಗೆ ಗೊತ್ತಿದೆ ಹೀಗಿರುವಾಗ ಅದನ್ನು ಹೇಗೆ ಹೇಳುವುದು.
ಕೆಲವರು: ಹಾಗಿದ್ದರೆ ವಾಮಾಚಾರಿ ಎಂದು ಹೇಳೋಣ.
ವಲೀದ್: ಇದು ಯಾವುದೇ ವಾಮಾಚಾರ ಅಲ್ಲವೇ ಅಲ್ಲ, ಅದರಲ್ಲಿ ಬಳಸುವ ಯಾವುದೇ ಶೈಲಿಯಾಗಲಿ, ಕಟ್ಟಾಗಲಿ ಇದರಲ್ಲಿ ಕಾಣುತ್ತಿಲ್ಲ.

ನಂತರ ಮಾತು ಮುಂದುವರಿಸುತ್ತಾ, ಖುರ್’ಆನಿನ ವಿಶೇಷತೆಗಳನ್ನು ಹೇಳಿ, ಈಗ ನಮಗೆ ಇರುವ ಒಂದೇ ಒಂದು ದಾರಿ ಅಂದ್ರೆ ಅದು ವಾಮಾಚಾರ ಅಂತ ಹೇಳುವುದು ಮಾತ್ರ. ಯಾಕೆಂದ್ರೆ ಇಲ್ಲಿ ಸತ್ಯ ವಿಶ್ವಾಸಿಗಳು, ಅಲ್ಲದವರು ಎಂಬ ಹೆಸರಿನಲ್ಲಿ, ತಂದೆ, ಮಕ್ಕಳು, ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದೆ. ಅದನ್ನೇ ಮುಂದೆ ಇಟ್ಟು ವಾಮಾಚಾರಿ ಎನ್ನುವ ಅಪವಾದ ಹೊರೆಸೋಣ ಎಂದು ಹೇಳಿದಾಗ, ಎಲ್ಲರೂ ಅದಕ್ಕೆ ಸಮ್ಮತಿ ನೀಡಿದರು.

Mahabba Campaign Part-79/365

ಖುರ್’ಆನ್ ಮದ್ಯ ಪ್ರವೇಶಿಸಿ, ವಲೀದ್’ನ ಎಲ್ಲಾ ಕುತಂತ್ರಗಳನ್ನೂ ತಲೆಕೆಳಗೆ ಮಾಡಿ, ಅದ್ಭುತ ಶೈಲಿಯಲ್ಲಿ ಉತ್ತರ ನೀಡಿತು. ಅಲ್’ಮುದಸ್ಸಿರ್ ಅಧ್ಯಾಯದ ಹತ್ತನೇ ಸೂಕ್ತದ ನಂತರದ ಅನುವಾದವು ಈ ರೀತಿಯಾಗಿದೆ. “ನಾನೇ ಸೃಷ್ಟಿ ಮಾಡಿದ ಅವನನ್ನು ನನಗೆ ಬಿಟ್ಟು ಕೊಡಿ, ನಾನವನಿಗೆ ಬಹಳಷ್ಟು ಸಂಪತ್ತು ನೀಡಿದೆನು. ಯಾವುದಕ್ಕೂ ಅವನ ಜೊತೆಯಲ್ಲೇ ನಿಲ್ಲುವ ಮಕ್ಕಳನ್ನೂ ನೀಡಿದೆನು. ಅವನಿಗೆ ನಾಯಕತ್ವದ ಸ್ಥಾನವನ್ನೂ ನೀಡಿದೆನು. ಅವನು ಇನ್ನೂ ಬೇಕೆಂದು ಅತೀ ಆಸೆ ಪಡುತ್ತಿದ್ದಾನೆ, ಇಲ್ಲ ಖಂಡಿತ ನೀಡುವುದಿಲ್ಲ. ಅವನು ನಮ್ಮ ವಚನಗಳ ವಿರೋಧಿಯಾಗಿರುತ್ತಾನೆ. ಹತ್ತಿರದಲ್ಲೇ ಅವನಿಗೆ ನಾವು ಪಾಠ ಕಲಿಸಲಿದ್ದೇವೆ. ಅವನು ಕೆಲವೊಂದು ತಂತ್ರಗಳನ್ನು ರೂಪಿಸಿದ್ದನು, ಅದರೊಂದಿಗೆ ಅವನು ಸೃಷ್ಟಿಕರ್ತನ ಶಾಪವನ್ನು ಪಡೆದುಕೊಂಡನು. ಹಾಗಾಗಿ ಅವನು ಖಂಡಿತ ನಾಶ ಹೊಂದುವನು. ಅವನು ಏನೋ ಯೋಜನೆ ಹಾಕಿದ್ದನು.? ನಂತರ ಅವನು ಜನರನ್ನು ನೋಡಿ ಕೋಪದ ಮುಖದೊಂದಿಗೆ, ಹಿಂದೆ ಸರಿದು ಅಹಂಕಾರದಿಂದ ಇದು ವಾಮಾಚಾರವಲ್ಲದೆ ಇನ್ನೇನು ಇಲ್ಲ, ಇದು ಖಂಡಿತವಾಗಿಯೂ ಮನುಷ್ಯನ ವಾಕ್ಯಗಳೇ ಆಗಿದೆ ಎಂದು ಹೇಳಿದನು. ಬರಲಿ ಅವನು, ನಾನವನನ್ನು (ಸಖರ್) ನರಕಾಗ್ನಿಯಲ್ಲಿ ಹಾಕಿ ಬಿಡುವೆನು. ಸಖಾರ್ ನರಕಾಗ್ನಿಯ ಕುರಿತು ನಿಮಗೆ ತಿಳಿದಿದೆಯೇ.? ಅದು ಯಾವುದನ್ನು ಬಾಕಿ ಬಿಡುವುದೂ ಇಲ್ಲ, ಉಳಿಸುವುದೂ ಇಲ್ಲ. ಅದು ಚರ್ಮವನ್ನು ಸುಟ್ಟು ಕರಕಲು ಮಾಡುತ್ತದೆ….”

ವಲೀದ್’ನ ಜೊತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದ ಆತನ ಸಹಚರರಿಗೂ ಖುರ್’ಆನ್ ಉತ್ತರಿಸಿತು. ಅಲ್ ಹಿಜ್’ರ್ ಅಧ್ಯಾಯದ ತೊಂಬತ್ತೊಂದರ ನಂತರದ ಸೂಕ್ತದಲ್ಲಿ ಕಾಣಬಹುದು. “ನಿಮ್ಮ ಪ್ರಭುವಿನ ಮೇಲಾಣೆ, ಖುರ್’ನಿನ ಕುರಿತು ವಿಮರ್ಶೆ ಮಾಡಿದವರೆಲ್ಲರನ್ನೂ ಖಂಡಿತವಾಗಿಯೂ ನಾವು ವಿಚಾರಿಸಿಯೇ ತೀರುವೆವು”
ಖುರ್’ಆನಿನ ಸಂದರ್ಭಕ್ಕನುಗುಣವಾದ ಉತ್ತರವನ್ನು ಕಂಡು ಶತ್ರುಗಳು ದಿಗ್ಭ್ರಮೆಗೊಂಡರು. ಯಾತ್ರಿಕರಲ್ಲಿ ಹೇಳಿದ್ದ ಮಾತುಗಳೆಲ್ಲವೂ ಪ್ರವಾದಿಯವರ ﷺ ಕುರಿತು ಎಲ್ಲಾ ಕಡೆಗಳಲ್ಲೂ ತಿಳಿಯಲು ಸಹಾಯಕವಾಯಿತು. ಮಕ್ಕಾ ನಗರಕ್ಕೆ ಬರುತ್ತಿದ್ದ ಜನರಲ್ಲಿ ಖುರೈಷಿಗಳು ಹೇಳುತ್ತಿದ್ದ ಮಾತುಗಳು, ಪ್ರವಾದಿಯವರ ﷺ ಕುರಿತು ಕಲಿಯಲು ಕಾರಣವಾದವು.
ಏನೇ ಮಾಡಿದರೂ ಗೆಲ್ಲದೆ ಇದ್ದಾಗ, ಶತ್ರುಗಳು ಪುನಃ ಹಿಂಸೆ ಮಾಡಲು ತಯಾರಾದರು. ವಿಶೇಷವಾಗಿ ದುರ್ಬಲ ವಿಶ್ವಾಸಿಗಳ ಮೇಲೆ ಹಲ್ಲೆ ಮಾಡಲು ಆರಂಭಿಸಿದರು, ಅಬೂಜಹಲ್ ಸಿಕ್ಕಿದ ಅವಕಾಶವನ್ನು ಚೆನ್ನಾಗಿ ಬಳಸ ತೊಡಗಿದನು. ಯಾರಾದರೂ ಗೌರವಾನ್ವಿತ ವ್ಯಕ್ತಿ ವಿಶ್ವಾಸಿಯಾದರೆ, ಅವರ ಮಾನ ಹರಾಜು ಮಾಡುತಿದ್ದರು. ವ್ಯಾಪರಿಯಾಗಿದ್ದಲ್ಲಿ ಅವರ ವ್ಯಾಪಾರವನ್ನು ಕೆಡಿಸುತ್ತಿದ್ದರು. ಅವರು ಬಡವನಾಗಿದ್ದರೆ ಅವರ ಮೇಲೆ ಹಲ್ಲೆ ನಡೆಸುತ್ತಿದ್ದರು. ಹೀಗೆ ಹಲವಾರು ದುಷ್’ಕೃತ್ಯವನ್ನು ಮಾಡತೊಡಗಿದರು.

ಪವಿತ್ರ ಹೃದಯದ, ಬಡವನಾದ ಸೇವಕನಾಗಿದ್ದರು ಬಿಲಾಲ್. ಅವರು ಇಸ್ಲಾಮ್ ಸ್ವೀಕರಿಸಿದರು. ಅದನ್ನು ತಿಳಿದ ಒಡೆಯನಾದ ಉಮಯತ್ತಿಗೆ ಅದು ಇಷ್ಟವಾಗಲಿಲ್ಲ. ಅವರು ಬಿಲಾಲನ್ನು ◌ؓ ಹಿಂತಿರುಗಿ ಬರಲು ಬಹಳಷ್ಟು ಹೇಳಿದರೂ ಬಿಲಾಲ್ ◌ؓ ಕೇಳದಿದ್ದಾಗ, ಬಿಲಾಲ್’ರ ◌ؓ ಮೇಲೆ ಹಲ್ಲೆ ಮಾಡಲು ಮುಂದಾದರು. ಬಿಲಾಲನ್ನು ◌ؓ ಕಟ್ಟಿಹಾಕಿ ಸುಡುವ ಮರಳಿನಲ್ಲಿ ಬೆನ್ನ ಮೇಲೆ ಮಲಗಿಸಿ, ಅವರ ಎದೆಯ ಮೇಲೆ ಬಹಳಷ್ಟು ಭಾರವಾದ ಕಲ್ಲನ್ನು ಇಟ್ಟು, ಚಾಟಿಯಿಂದ ಹೊಡೆಯತೊಡಗಿದರು. ಉಮಯತ್ತ್ ಕೋಪದಿಂದ ಕುದಿಯುತ್ತಾ, ಒಂದೋ ನಿನ್ನ ಮರಣ, ಇಲ್ಲದಿದ್ದರೆ ಮುಹಮ್ಮದ್’ರ ﷺ ದೇವನನ್ನು ವಿರೋಧಿಸಿ, ಲಾತ, ಉಝ್ಝವನ್ನು ದೇವರಾಗಿ ಅಂಗೀಕರಿಸಬೇಕು ಎಂದು ಹೇಳಿದರು. ಆದರೂ ಬಿಲಾಲ್ ಏನು ಮಾತಾಡಲಿಲ್ಲ. ಉಮಯತ್ತ್ ಪುನಃ ಹಾಗೆ ಹೇಳುತ್ತಲೇ ಇದ್ದಾಗ, ಬಿಲಾಲ್ ಅಹದ್, ಅಹದ್ ಅಥವಾ ಒಡೆಯನಾದ ಒಬ್ಬನು ನಾನು ಲಾತ, ಉಝ್ಝವನ್ನು ವಿರೋಧಿಸುತ್ತೇನೆ ಎಂದು ಹೇಳಿದರು. ಅದನ್ನು ಕೇಳಿದ ಉಮೈಯತ್ತಿಗೆ ಕೋಪವು ನೆತ್ತಿಗೇರಿತು, ಅವರು ಇನ್ನು ಕ್ರೂರವಾಗಿ ಹಿಂಸಿಸತೊಡಗಿದರು. ಆದರೂ ಬಿಲಾಲರ ಅಹದ್ ಎನ್ನುವ ಧ್ವನಿ ಕೇಳುತ್ತಲೇ ಇತ್ತು.

ಅಂರ್ ಬಿನ್ ಅಲ್ಆಸ್ವ್ ಈ ಘಟನೆಯನ್ನು ಉದ್ದೇಶಿಸಿ ಈ ರೀತಿ ವಿವರಿಸುತ್ತಾರೆ. ನಾನು ಮಕ್ಕಾದ ಮೂಲಕ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ ಬಿಲಾಲ್’ಗೆ ಥಳಿಸುವುದು ನನಗೆ ಕಾಣಲು ಸಾಧ್ಯವಾಯಿತು. ಅಹದ್, ಅಹದ್ ಎಂದು ಹೇಳಿದಾಗಂತೂ ಉಮೈಯ್ ಕ್ರೂರಿಯಾದನು. ಬಿಲಾಲ್’ರ ಶರೀರವು ಬಿಸಿ ಮರಳಿನಿಂದ ಸುಡುತಿತ್ತು, ಆಗಾಗ ತಮ್ಮ ಪ್ರಜ್ಞೆ ಕಳೆದುಕೊಳ್ಳುತ್ತಿದ್ದರು. ಪ್ರಜ್ಞೆ ಬಂದಾಗ ಪುನಃ ಅಹದ್, ಅಹದ್ ಎಂದು ಹೇಳುತ್ತಲೇ ಇದ್ದರು.
ಹಸಾನ್ ಬಿನ್ ಸಾಬಿತ್’ರವರು ಈ ಘಟನೆಯನ್ನು ಉದ್ದೇಶಿಸಿ ಈ ರೀತಿ ವಿವರಿಸುತ್ತಾರೆ. ನಾನು ಉಮ್ರ ಮಾಡಲು ಕಅಬಾಲಯದ ಹತ್ತಿರ ಹೋಗಿದ್ದೆ. ಆಗ ಅಲ್ಲಿ ಒಂದು ಹಗ್ಗದಿಂದ ಬಿಲಾಲನ್ನು ಕಟ್ಟಿ ಎಳೆಯಲಾಗುತ್ತಿತ್ತು. ಅವರು ಉಚ್ಛ ಸ್ವರದಲ್ಲಿ ಲಾತ, ಉಝ್ಝ, ಮನಾತ, ಹುಬುಲ್, ನಾಯಿಲ, ಬುವಾನ ಎನ್ನುವ ದೇವರನ್ನು ನಾನು ವಿರೋಧಿಸುತ್ತೇನೆ ಎಂದು ಹೇಳುತ್ತಿದ್ದರು. ತಕ್ಷಣವೇ ಉಮೈಯತ್ ಬಂದು ಸುಟ್ಟು ಉರಿಯುತ್ತಿರುವ ಮರಳಿನ ಮೇಲೆ ಬಿಲಾಲನ್ನು ಮಲಗಿಸಿ….

Mahabba Campaign Part-80/365

ಮುಜಾಹೀದ್’ರವರು ◌ؓ ವಿವರಿಸುವುದು ಈ ರೀತಿಯಾಗಿದೆ. ಖುರೈಷಿಗಳು ಬಿಲಾಲರ ◌ؓ ಕತ್ತಿಗೆ ಹಗ್ಗ ಹಾಕಿ, ಪರ್ವತಗಳ ನಡುವಿನಿಂದ ಎಳೆದುಕೊಂಡು ಹೋಗಲು ಚಿಕ್ಕ ಮಕ್ಕಳಲ್ಲಿ ಹೇಳಿದರು. ಅವರು ಅದೇ ರೀತಿ ಎಳೆಯುತ್ತಿರುವಾಗಲೂ, ಬಿಲಾಲ್ ◌ؓ ಮಾತ್ರ ಅಹದ್, ಅಹದ್ ಅಂತ ಹೇಳುತ್ತಲೇ ಇದ್ದರು. ಈ ಘಟನೆಯ ಕುರಿತಾಗಿ, ಸ್ವತಃ ಬಿಲಾಲರೇ ◌ؓ ನಂತರದ ಕಾಲದಲ್ಲಿ ಹೇಳುತ್ತಿದ್ದರು. ನನ್ನನ್ನು ಅವರು ಒಂದು ದಿನ, ರಾತ್ರಿ ಸಂಪೂರ್ಣವಾಗಿ ಕಟ್ಟಿ ಎಳೆದಿದ್ದರು. ನನ್ನ ಗಂಟಲು ಒಣಗಿ, ಒಂದೇ ಒಂದು ಅಕ್ಷರವೂ ಕೂಡ ಮಾತಾಡಲು ಆಗುತ್ತಿರಲಿಲ್ಲ.
ಬಿಲಾಲ್’ಗೆ ◌ؓ ಚಿತ್ರಹಿಂಸೆ ನೀಡುತ್ತಿದ್ದ ದೃಶ್ಯವನ್ನು ಕಂಡ ವರಖತ್ ಬಿನ್ ನೌಫಲ್ ಹತ್ತಿರ ಬಂದು, ಬಿಲಾಲರೆ ಸತ್ಯವಾಗಿದೆ ನೀವು ಹೇಳುತ್ತಿರುವುದು. ಅಹದ್, ಅಹದ್, ಅಲ್ಲಾಹು ಸತ್ಯ ಎಂದು. ನಂತರ ಉಮೈಯತ್ತಿನ ಬಳಿ ಬಂದು, ನೀವೇನು ಅವರನ್ನು ಕೊಂದು ಹಾಕುತ್ತೀರೆ.? ಒಂದು ವೇಳೆ ಹಾಗೆ ಏನಾದರೂ ಆದರೆ, ನಾನು ಅವರ ಅಂತ್ಯಕ್ರಿಯೆ ಬಹಳ ಗೌರವದಿಂದ, ಕರುಣೆಯಿಂದ ಮಾಡುವೆನು ಎಂದು ಹೇಳಿದರು.

ಕೊನೆಗೆ ಆ ದಾರಿಯಲ್ಲಿ ನಡೆದು ಬಂದ ಅಬೂಬಕ್ಕರ್’ರವರು ◌ؓ ಉಮೈಯತ್ತಿನಲ್ಲಿ, ನಿನಗೆ ಈ ಬಡ ಮನುಷ್ಯನನ್ನು ಈ ರೀತಿ ಹಿಂಸೆ ನೀಡಿದ್ದಕ್ಕಾಗಿ ಸೃಷ್ಟಿಕರ್ತನ ಭಯವಿಲ್ಲವೇ.? ನೀನು ಈ ಬಡ ವ್ಯಕ್ತಿಯನ್ನು ಎಲ್ಲಿಯವರೆಗೆ ಹಿಂಸೆ ನೀಡುತ್ತೀಯ.? ಎಂದು ಕೇಳಿದಾಗ. ಉಮೈಯತ್, ನೀವೆ ಇವನನ್ನು ನಾಶಮಾಡಿದ್ದು, ಈಗ ನೀವೆ ಇವನಿಗೆ ರಕ್ಷಣೆ ನೀಡಿ ಎಂದು ಹೇಳಿದನು. ಅದಕ್ಕೆ ಅಬೂಬಕ್ಕರ್’ರವರು ◌ؓ, ಹಾಗಾದರೆ ನನ್ನ ಒಳ್ಳೆಯ ಆರೋಗ್ಯವಂತನಾದ, ನಿನ್ನದೆ ಧರ್ಮದ ವಿಶ್ವಾಸಿಯಾದ ಒಬ್ಬ ಸೇವಕನಿದ್ದಾನೆ, ಅವನನ್ನು ನಾನು ನಿನಗೆ ನೀಡುತ್ತೇನೆ. ಬದಲಾಗಿ ಬಿಲಾಲರಿಗೆ ◌ؓ ಮೋಚನೆ ನೀಡು ಎಂದು ಹೇಳಿದಾಗ, ಉಮೈಯತ್ ಸಮ್ಮತಿಸಿದನು. ಅಬೂಬಕ್ಕರ್’ರವರು ◌ؓ ಬಿಲಾಲ್’ರನ್ನು ಸೇವಕರಿಂದ ವಿಮೋಚನೆ ನೀಡಿದರು. ಹೀಗೆ ಬಿಲಾಲ್ ◌ؓ ಸೇವಕನ ಜೀವನದಿಂದ, ಸ್ವಾತಂತ್ರ್ಯದ ಜೀವನಕ್ಕೆ ಕಾಲಿಟ್ಟರು.

ಮುಹಮ್ಮದ್ ಬಿನ್ ಸೀರೀನಿಯವರ ಮತ್ತೊಂದು ಉಲ್ಲೇಖವನ್ನು ತಿಳಿಯೋಣ. ಬಿಲಾಲ್ ◌ؓ ಇಸ್ಲಾಂ ಸ್ವೀಕರಿಸಿದಾಗ, ಶತ್ರುಗಳು ಅವರನ್ನು ಮರುಭೂಮಿಯಲ್ಲಿ ಮಲಗಿಸಿ, ಚಿತ್ರಹಿಂಸೆ ನೀಡುತ್ತಾ, ನಿನ್ನ ದೇವರು ಲಾತ, ಉಝ್ಝ ಎಂದು ಹೇಳು ಎಂದು ಬಹಳಷ್ಟು ಒತ್ತಾಯ ಮಾಡುತಿದ್ದರು. ಆದರೆ ಬಿಲಾಲ್ ◌ؓ ಅಹದ್, ಅಹದ್ ನನ್ನ ದೇವನು ಏಕನಾದ ಅಲ್ಲಾಹನಾಗಿದ್ದಾನೆ. ಎಂದು ಹೇಳಿದರು. ತಕ್ಷಣವೇ ಅದೇ ದಾರಿಯಲ್ಲಿ ಅಬೂಬಕ್ಕರ್’ರವರು ◌ؓ ನಡೆದು ಬರುತ್ತಿದ್ದರು. ಅವರು ಬಿಲಾಲರ ◌ؓ ಬಳಿ ಬಂದು, ನೀವು ಯಾಕೆ ಈ ಬಡಪಾಯಿಯನ್ನು ಹಿಂಸೆ ನೀಡುತ್ತಿದ್ದೀರ.? ಎಂದು ಹೇಳಿ, ಏಳು ಊಖಿಯ ಬೆಲೆ ನೀಡಿ ಬಿಲಾಲನ್ನು ◌ؓ ಅವರಿಂದ ಖರೀದಿಸಿ, ಮೋಚನೆ ನೀಡಿದರು. ಪ್ರವಾದಿಯವರಿಗೆ ﷺ ಮಾಹಿತಿ ತಿಳಿಸಿದರು. ಅದಕ್ಕೆ ಪ್ರವಾದಿಯವರು ﷺ ನಾನು ಕೂಡ ಅದರಲ್ಲಿ ಜೊತೆ ಸೇರುತ್ತೇನೆ ಅಂದಾಗ, ಈಗಾಗಲೇ ಅವರಿಗೆ ಮೋಚನೆ ನೀಡಿಯಾಯಿತು ಎಂದು ಹೇಳಿದರು. ಐದು ಉಖಿಯ ಆಗಿತ್ತು ನೀಡಿದ್ದು ಎನ್ನುವ ಅಭಿಪ್ರಾಯ ಕೂಡ ಇದೆ.
ಒಂದು ಕಡೆ ವಿಶ್ವಾಸಿಗಳು ಹಿಂಸೆಗಳನ್ನು ಎದುರಿಸುತ್ತಾ, ದಿನಗಳು ಕಳೆಯುತ್ತಿರುವಾಗ, ಮತ್ತೊಂದು ಕಡೆ ನಂಬಿಕೆ, ಆತ್ಮ ಧೈರ್ಯಗಳಿಂದ ಕೂಡದ ಘೋಷಣೆಗಳಾಗಿತ್ತು.

ವಿಶ್ವಾಸ ಸಂರಕ್ಷಣೆಗಾಗಿ, ಪ್ರಾಣ ತ್ಯಾಗ ಮಾಡಿದ ಖಬ್ಬಾಬ್ ಬಿನ್ ಅಲ್ ಅರತ್ತಿಯವರ ◌ؓ ಕುರಿತು ತಿಳಿಯೋಣ. ಸಿಬಾವು ಬಿನ್ ಅಬ್ದುಲ್ ಉಝ್ಝ ಹಾಗೂ ಅವನ ಗೆಳೆಯರು ಸೇರಿ, ಖಬ್ಬಾಬ್’ರವರ ◌ؓ ಬಳಿ ಬಂದು, ನೀನು ದಾರಿ ತಪ್ಪಿದ್ದೀಯ ಎಂದೂ, ಹಾಷಿಂ ವಂಶದ ಆ ನೂತನವಾದದೊಂದಿಗೆ ಬಂದ ವ್ಯಕ್ತಿಯನ್ನು ಹಿಂಬಾಲಿಸುತ್ತಿದ್ದೀಯ, ಎಂದು ಕೇಳಲು ಸಾಧ್ಯವಾಯಿತು. ಅದು ನಿಜವಾ.? ಎಂದು ಕೇಳಿದರು. ಆಲಯದಲ್ಲಿ ಆಯುಧಗಳ ಕೆಲಸ ಮಾಡುತ್ತಿದ್ದ, ಖಬ್ಬಾಬ್ ◌ؓ “ನಾನು ಯಾವ ದಾರಿಯೂ ತಪ್ಪಲಿಲ್ಲ. ನೀವು ಆರಾಧಿಸುವ ದೇವರನ್ನು ಬಿಟ್ಟು, ಏಕನಾದ ಅಲ್ಲಾಹನನ್ನು ಆರಾಧಿಸುತ್ತಿದ್ದೇನೆ. ಅಷ್ಟೇ” ಎಂದು ಹೇಳಿದರು. ಸೇವಕನಾಗಿದ್ದ, ಲೋಹಕಾರನಾದ ಖಬ್ಬಾಬ್’ನ ◌ؓ ಈ ಮಾತು ಸಿಬಾವುಗೆ ಹಿಡಿಸಲಿಲ್ಲ, ಅವನು ಹೊಡೆಯಲು ಮುಂದಾದನು. ಆತನು ಆಲಯದಲ್ಲಿದ್ದ ಆಯುಧಗಳನ್ನು ತೆಗೆದು ಹೊಡೆಯಲು ಆರಂಭಿಸಿದನು. ಖಬ್ಬಾಬ್’ನ ◌ؓ ಶರೀರವು ಸಂಪೂರ್ಣವಾಗಿ ರಕ್ತದಿಂದ ತೊಯ್ದುಬಿಟ್ಟಿತು. ವಿಷಯವು ಇಡೀ ಮಕ್ಕಾ ನಗರಕ್ಕೆ ಕಾಲ್ಗಿಚ್ಚಿನಂತೆ ತಲುಪಿತು. ಒಬ್ಬ ಸೇವಕನಾಗಿದ್ದ ಖಬ್ಬಾಬ್ ◌ؓ ತಾನು ಇಸ್ಲಾಮ್ ಸ್ವೀಕರಿಸಿದ ವಿಷಯವನ್ನು ಸಾರ್ವಜನಿಕವಾಗಿ ತಿಳಿಸಿದ್ದು, ಅವರಿಗೆ ಸಹಿಸಲು ಆಗಲಿಲ್ಲ. ವಿಷಯ ತಿಳಿದ ಖುರೈಷಿ ಗಣ್ಯರಾದ ಅಬೂಜಹಲ್, ಅಬೂಸೂಫಿಯಾನ್, ವಲೀದ್ ಎಲ್ಲರೂ ಸೇರಿ ದಾರುನ್ನದುವದಲ್ಲಿ ಸಭೆ ಸೇರಿ, ಹಿಂಸೆಯನ್ನು ಇನ್ನೂ ಕ್ರೂರವಾಗಿ ನೀಡಲು ತೀರ್ಮಾನಿಸಿದರು. ಖಬ್ಬಾಬ್’ನ್ನು ಕೆಳಗೆ ನಿಲ್ಲಿಸಲು, ಅವರ ಒಡತಿ ಉಮ್ಮು ಅನ್’ಮಾರಿನ ಸಹೋದರನಾದ ಸಿಬಾಯಿಯನ್ನು ಕರೆದು, ಖಬ್ಬಾಬನ್ನು ◌ؓ ಉರಿಯುವ ಬಿಸಿಲಿನಲ್ಲಿ, ಸುಡುವ ಮರಳಿನ ಮೇಲೆ ನಗ್ನವಾಗಿ ಮಲಗಿಸಿ, ಭಾರವಿರುವ ಕಲ್ಲನ್ನು ಅವರ ಎದೆಯ ಮೇಲಿಟ್ಟು, ಈಗ ನೀನು ಮುಹಮ್ಮದ್’ರ ಕುರಿತು ಏನು ಹೇಳುವೆ ಎಂದು ಕೇಳಿದರು. ಅದಕ್ಕೆ ಖಬ್ಬಾಬ್, “ಅಲ್ಲಾಹುವಿನ ಸಂದೇಶ ವಾಹಕರು, ನನ್ನ ಪ್ರವಾದಿಯವರು ﷺ” ಎಂದು ಹೇಳಿದರು. ಖಬ್ಬಾಬ್’ರ ◌ؓ ಶರೀರದ ಮೇಲೆ ಕಬ್ಬಿಣ ಕವಚವನ್ನು ಧರಿಸಿ, ಲಾತ ಉಝ್ಝನ ಕುರಿತು ನೀನು ಏನು ಹೇಳುವೆ ಎಂದು ಕೇಳಿದರು.. ಅದಕ್ಕೆ ಖಬ್ಬಾಬ್ ◌ؓ ಏನು ಹೇಳುವುದು.? ಅದೊಂದು ಕಲ್ಲು ಮಾತ್ರ ಎಂದು ಹೇಳಿದರು. ಅದರೊಂದಿಗೆ ಅವರಿಗೆ ನೀಡುತ್ತಿದ್ದಾ ಚಿತ್ರಹಿಂಸೆಯೂ ಕೂಡ ಕಠಿಣವಾಯಿತು…

Mahabba Campaign Part-81/365

ಒಮ್ಮೆ ಖಬ್ಬಾಬ್’ರವರಿಗೆ ಚಿತ್ರಹಿಂಸೆ ನೀಡುತ್ತಿರುವ ದೃಶ್ಯವು ಪ್ರವಾದಿಯವರ ﷺ ಕಣ್ಣಿಗೆ ಬಿದ್ದಿತ್ತು. ಅದನ್ನು ಕಂಡ ಪ್ರವಾದಿಯವರ ﷺ ಕಣ್ಣಿಂದ ಕಂಬನಿ ಜಾರತೊಡಗಿತು. ಪ್ರವಾದಿಯವರು ﷺ ಅಲ್ಲಾಹನಲ್ಲಿ, “ನೀನು ಖಬ್ಬಾಬಿಗೆ ◌ؓ ರಕ್ಷೆ ನೀಡು ಅಲ್ಲಾಹ್” ಎಂದು ಮನ ನೊಂದು ಪ್ರಾರ್ಥನೆ ಮಾಡಿದರು.

ತಮೀಮ್ ಜನಾಂಗದ ಅರತ್ತಿಯವರ ಮಗನಾಗಿದ್ದರು ಖಬ್ಬಾಬ್. ◌ؓ ಅವರು ಜನಿಸಿದ್ದು ನಜ್’ದ್ ಎನ್ನುವ ಸ್ಥಳದಲ್ಲಾಗಿತ್ತು. ದರೋಡೆ ಕೋರರ ವಂಚನೆಗೆ ಬಲಿಯಾಗಿ, ಮಕ್ಕಾ ನಗರದ ಮಾರುಕಟ್ಟೆಗೆ ತಲುಪಿದರು. ಖುಸಾಅ ಜನಾಂಗದ ಶ್ರೀಮಂತಳಾದ ಉಮ್ಮು ಅನ್’ಮಾರ್ ಎನ್ನುವ ಯುವತಿಯು, ಖಬ್ಬಾಬನ್ನು ◌ؓ ಖರೀದಿಸಿದರು. ಆಯುಧ ನಿರ್ಮಾಣದಲ್ಲಿ ನಿಪುಣನಾಗಿದ್ದ ಸೇವಕನನ್ನು ಲೋಹಕಾರನಾಗಿ ಬದಲಾಯಿಸಿದರು. ಹೀಗೆ ಖಬ್ಬಾಬ್ ◌ؓ ಮಕ್ಕದಲ್ಲೇ ಸುಪ್ರಸಿದ್ಧ ಲೋಹಕಾರನಾಗಿ ಪರಿಚಿತಗೊಂಡರು. ಆ ಕಾರಣದಿಂದ ಉಮ್ಮು ಅನ್’ಮಾರ್ ಇನ್ನಷ್ಟು ಶ್ರೀಮಂತರಾದರು. ಮೂರ್ತಿ ಪೂಜೆಯಲ್ಲಿ ಹಿಂದಿನಿಂದಲೂ ಆಸಕ್ತಿ ಇಲ್ಲದ ವ್ಯಕ್ತಿಯಾಗಿದ್ದ ಖಬ್ಬಾಬ್, ಮೋಕ್ಷದ ದಾರಿಯನ್ನು ಕಾಯುತ್ತಿದ್ದ ಸಂದರ್ಭದಲ್ಲಾಗಿತ್ತು ಪ್ರವಾದಿತ್ವದ ಘೋಷಣೆಯಾಗುವುದು. ಅದರಲ್ಲಿ ಆಕರ್ಷಿತನಾದ ಖಬ್ಬಾಬ್ ◌ؓ ಇಸ್ಲಾಮ್ ಸ್ವೀಕರಿಸಿದರು. ಆದರೆ ಅದು ಉಮ್ಮು ಅನ್’ಮಾರಿಗೆ ಇಷ್ಟವಾಗಲಿಲ್ಲ, ಅವರು ಖಬ್ಬಾಬ್’ಗೆ ◌ؓ ಬಹಳಷ್ಟು ಥಳಿಸಿದರು. ಆದರೆ ವಿಧಿಯ ಆಟವೇ ಬೇರೆಯಿತ್ತು, ಉಮ್ಮು ಅನ್’ಮಾರ್ ರೋಗ ಪೀಡಿತರಾದರು. ಅವರ ಚಿಕಿತ್ಸೆಗಾಗಿ ಕಬ್ಬಿಣದ ದಂಡನ್ನು ಬಿಸಿ ಮಾಡಿ ತಲೆಗೆ ಇಡಬೇಕೆಂದು ವೈದ್ಯರು ನಿರ್ದೇಶಿಸಿ, ಅದರ ಜವಾಬ್ದಾರಿಯನ್ನು ಖಬ್ಬಾಬಿಗೆ ◌ؓ ವಹಿಸಲಾಯಿತು. ನೋವಿನಿಂದ, ಕಬ್ಬಿಣ ಬಿಸಿಯನ್ನು ಸಹಿಸಲಾಗದೆ ಅತ್ತಿತ್ತ ಓಡಾಡುವ ದೃಶ್ಯವನ್ನಾಗಿತ್ತು ಖಬ್ಬಾಬ್ ◌ؓ ನೋಡುತಿದ್ದದ್ದು. ವಿಧಿಯ ಕುತೂಹಲಕಾರಿ ಪ್ರತೀಕಾರವಾಗಿತ್ತು ಅದು .

ಚಿತ್ರಹಿಂಸೆಗಳಿಂದ ಕಾಲ ಕಳೆಯುತ್ತಿದ್ದ ಘಟನೆಯನ್ನು ನೆನಪಿಸುವ, ಇಮಾಮ್ ಬುಖಾರಿಯವರ ◌ؓ ಉಲ್ಲೇಖವು ಈ ರೀತಿಯಾಗಿದೆ. ಖಬ್ಬಾಬ್ ಹೇಳುವುದು, ಕಾಣಬಹುದು. “ಮಕ್ಕಾದಲ್ಲಿ ನಾವು ಬಹಳಷ್ಟು ಚಿತ್ರಹಿಂಸೆ ಅನುಭವಿಸುತ್ತ ಸಂದರ್ಭವಾಗಿತ್ತು ಅದು. ನಾನು ಪ್ರವಾದಿಯವರನ್ನು ﷺ ಭೇಟಿಯಾಗಲು ಬಂದೆನು. ಪ್ರವಾದಿಯವರು ﷺ ಕಅಬಾಲಯದ ನೆರಳಿನಲ್ಲಿ, ಮಲಗಿದ್ದರು. ನಾನು ಅವರ ಹತ್ತಿರ ಬಂದು, ಓ ಪ್ರವಾದಿಯವರೇ ﷺ ನೀವು ನಮಗಾಗಿ ಪ್ರಾರ್ಥನೆ ಮಾಡುವುದಿಲ್ಲವೇ.? ಎಂದು ಕೇಳಿದಾಗ, ಪ್ರವಾದಿಯವರು ﷺ ಎದ್ದು ಕುಳಿತುಕೊಂಡರು. ಅವರ ಮುಖ ಭಾವವು ಸಂಪೂರ್ಣವಾಗಿ ಬದಲಾಗಿತ್ತು. ನಂತರ ಪ್ರವಾದಿಯವರು ﷺ, ನಿಮ್ಮ ಪೂರ್ವಿಕರು ಎಷ್ಟೆಲ್ಲಾ ಕಷ್ಟಗಳನ್ನು ಅನುಭವಿಸಿದ್ದಾರೆ ಗೊತ್ತೇ.?, ಅವರಲ್ಲಿ ಕೆಲವರನ್ನು ಕಬ್ಬಿಣದ ಬಾಚಣಿಗೆಯಿಂದ ಅವರ ಶರೀರವನ್ನು ಬಾಚಿದಾಗ, ಎಲುಬುಗಳಿಂದ ಮಾಂಸಗಳು ಬೇರೆ ಬೇರೆಯಾಗಿ ಬರುತಿತ್ತು. ಕೆಲವರನ್ನು ತಲೆಯಿಂದ ನೇರವಾಗಿ ಮರವನ್ನು ತುಂಡರಿಸುವ ಹಾಗೆ ತುಂಡರಿಸಲಾಗಿತ್ತು. ಆಗಲೂ ಅವರು ತಮ್ಮ ಆದರ್ಶದಿಂದ ಹಿಂದೆ ಸರಿದಿರಲಿಲ್ಲ. ಈ ಚಳುವಳಿಯು ಖಂಡಿತವಾಗಿಯೂ ಬೆಳೆಯಲಿದೆ. ಅಂದು ಸನ್’ಆದಿಂದ ಹಲರ್’ಮೌತ್ ವರೆಗೆ ಒಬ್ಬ ವ್ಯಕ್ತಿಯೂ ಯಾತ್ರೆ ಮಾಡುವಾಗ, ಕೇವಲ ಅಲ್ಲಾಹನನ್ನು ಹಾಗೂ ತನ್ನ ಜೊತೆಯಲ್ಲಿರುವ ಮೇಕೆಯನ್ನು ನರಿ ಹಿಡಿಯಬಹುದೇ.? ಎಂದು ಮಾತ್ರ ಭಯಗೊಂಡರೆ ಸಾಕು ಎಂದು ಹೇಳಿದರು.

ಪೂರ್ವಿಕರು ಅನುಭವಿಸಿದ್ದ ಚಿತ್ರಹಿಂಸೆಗಳ ಬಗ್ಗೆ ಹೇಳಿ, ಪ್ರವಾದಿಯವರು ﷺ ತಮ್ಮ ಅನುಯಾಯಿಗಳಿಗೆ ಸಮಾಧಾನ ನೀಡುತ್ತಾ, ಭವಿಷ್ಯದಲ್ಲಿ ಬರಲಿರುವ ಬೆಟ್ಟದಂತ ಸಮಸ್ಯೆಗಳಿಗಾಗಿ ಮಾನಸಿಕವಾಗಿ ಇನ್ನಷ್ಟು ಸಿದ್ಧಗೊಳಿಸುತ್ತಿದ್ದರು. ಅನಿವಾರ್ಯವಾಗಿ ಮಾಡಲೇಬೇಕಾದ ತ್ಯಾಗಗಳ ಕುರಿತು ಆಳವಾಗಿ ತಿಳಿಸಿದರು.
ಹೀಗೆ ಖಬ್ಬಾಬ್ ◌ؓ ಖುರ್’ಆನ್ ಚೆನ್ನಾಗಿ ಕಲಿತು, ಇತರರಿಗೂ ಕಲಿಸಿ ಕೊಡುವ ಗುರುವಾಗಿ ಬದಲಾದರು.
ಮಕ್ಕಾದಲ್ಲಿ ಹಿಂಸೆಗಳು ಮುಂದುವರಿಯುತ್ತಲೇ ಇತ್ತು. ಬಡವರಾದ ವಿಶ್ವಾಸಿಗಳನ್ನು ನಿರಂತರವಾಗಿ ಖುರೈಷಿಗಳು ತಮ್ಮ ವಿಕೃತ ಆಟಕ್ಕೆ ಗುರಿಯಾಗಿಸುತ್ತಲೇ ಇದ್ದರು. ಅದರಲ್ಲಿ ಸುಹೈಬ್ ಬಿನ್ ಸಿನಾನ್ ಅರ್’ರೂಮಿ, ಆಮಿರ್ ಬಿನ್ ಫುಹೈರ, ಅಬೂ ಫುಕೈಹ, ಎನ್ನುವವರು ಪ್ರಮುಖರಾಗಿದ್ದರು.

ಇಸ್ಲಾಮ್ ಸ್ವೀಕರಿಸಿದ ಕಾರಣದಿಂದ ಅತೀ ಕ್ರೂರವಾದ ಹಿಂಸೆಯನ್ನು ಎದುರಿಸಿದ್ದು, ಅಮ್ಮಾರ್’ರವರ ◌ؓ ಕುಟುಂಬವಾಗಿತ್ತು. ಅವರ ತಂದೆ ಯಾಸಿರ್, ತಾಯಿ ಸುಮಯ್ಯ, ಸಹೋದರ ಅಬ್ದುಲ್ಲಾಹ್ ಎಲ್ಲರೂ ಕೂಡ ಚಿತ್ರಹಿಂಸೆಯನ್ನು ಅನುಭವಿಸಬೇಕಾಗಿ ಬಂದಿತು.
ಒಂದು ದಿನ ಅಮ್ಮಾರ್’ರವರ ◌ؓ ಮೇಲೆ ಖುರೈಷಿಗಳು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದರು. ಅವರ ಶರೀರಕ್ಕೆ ಬಹಳಷ್ಟು ಗಾಯಗಳಾದವು. ಆ ಗಾಯದೊಂದಿಗೆ ಸುಡುವ ಮರುಭೂಮಿಯ ಮೇಲೆ ಮಲಗಿಸಿ, ಸ್ವಲ್ಪ ಕಳೆದು ನೀರಿಗೆ ಮುಳುಗಿಸಿದರು. ಪ್ರಜ್ಞೆ ತಪ್ಪಿ ಬಹಳ ಹೊತ್ತು ಮಲಗಿದ್ದರು. ಪ್ರಜ್ಞೆ ಬಂದ ನಂತರ, ಅವರ ದೇವರುಗಳನ್ನು ಹೋಗಳುತ್ತಾ ಅದೇ ರೀತಿ ಹೇಳಲು ಹೇಳಿದಾಗ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅಮ್ಮಾರ್ ◌ؓ ಅದಕ್ಕೆ ಸಮ್ಮತಿಸಿದ್ದರು. ಆದರೆ ಸಂಪೂರ್ಣವಾಗಿ ಪ್ರಜ್ಞೆ ಬಂದಾಗಾಗಿತ್ತು ತನ್ನ ತಪ್ಪಿನ ಅರಿವಾದದ್ದು, ಅವರು ಅದನ್ನು ನೆನೆಯುತ್ತಾ ಬಹಳಷ್ಟು ದುಃಖಿತನಾಗಿ, ನಿರಂತರವಾಗಿ ಪಶ್ಚತಾಪ ಭಾವನೆಯಿಂದ ಕಣ್ಣೀರು ಸುರಿಸುತ್ತಲೇ ಇದ್ದರು.

Mahabba Campaign Part-82/365

ಅಮ್ಮಾರ್’ರವರು ◌ؓ ಬೇಸರದಿಂದ ಪ್ರವಾದಿಯವರ ﷺ ಬಳಿ ಬಂದರು. ಅಮ್ಮಾರ್’ನ ಕಣ್ಣೀರು ಒರೆಸಿ, ಸತ್ಯ ನಿಷೇಧಿಗಳು ನಿಮ್ಮನ್ನು ನೀರೊಳಗೆ ಮುಳುಗಿಸಿ ಏನೇನೋ ಹೇಳಲು ಒತ್ತಾಯಿಸಿದರು ಅಲ್ವಾ.? ಬೇಸರ ಮಾಡಬೇಡಿ ಎಂದು ಹೇಳುತ್ತಾ, ಪವಿತ್ರ ಕುರ್’ಆನಿನ ಅನ್ನಹ್’ಲ್ ಅಧ್ಯಾಯದ ನೂರಾ ಆರನೇ ಸೂಕ್ತವನ್ನು ಪಠಿಸಿದರು. “ವಿಶ್ವಾಸ ಗಟ್ಟಿಯಾದ ನಂತರ, ಸತ್ಯ ನಿಷೇಧದ ವಚನಗಳನ್ನು ಹೇಳಲು ಒತ್ತಾಯಿಸಿದರೆ, ಅವರು ತಪ್ಪಿತಸ್ಥರಲ್ಲ” ಎನ್ನುವ ಸೂಕ್ತವನ್ನು ಅಮ್ಮಾರ್ ◌ؓ ಕೇಳಿದಾಗ, ಅವರಿಗೆ ತುಸು ಸಮಾಧಾನ ಆಯಿತು.
ಕಳೆದುಹೋಗಿದ್ದ ಸಹೋದರನಾದ ಅಬ್ದುಲ್ಲಾಹ್’ರನ್ನು ಹುಡುಕಿಕೊಂಡು ಯಮನಿನಿಂದ ಮಕ್ಕಾ ನಗರಕ್ಕೆ ಬಂದ ವ್ಯಕ್ತಿಯಾಗಿದ್ದರು ಯಾಸಿರ್ ಬಿನ್ ಆಮಿರ್. ತನ್ನ ಜೊತೆಯಲ್ಲಿ ಬಂದಿದ್ದ ಇಬ್ಬರು ಸಹೋದರರಾದ ಮಾಲಿಕ್ ಹಾಗೂ ಹಾರಿಸ್ ಯಮನಿಗೆ ಹಿಂತಿರುಗಿ ಹೋದರು. ಯಾಸಿರ್ ಮಾತ್ರ ಮಕ್ಕದಲ್ಲೇ ಉಳಿದುಕೊಂಡರು. ಮಕ್ಕಾದಲ್ಲಿ ಯಾಸಿರ್’ಗೆ ಆಶ್ರಯ ನೀಡಿದ್ದ ಅಬೂಹುದೈಫ ಎನ್ನುವ ವ್ಯಕ್ತಿಯು ತನ್ನ ಜನಾಂಗದ ಒಬ್ಬಳು ಸೇವಕಿಯನ್ನು ಯಾಸಿರ್’ಗೆ ನೀಡಿದರು. ಆ ಸೇವಕಿಯಾಗಿದ್ದರು ಯಾಸಿರ್’ನ ಪತ್ನಿಯಾದ ಸುಮಯ್ಯಃ ಬಿಂತ್ ಖಯ್ಯಾತ್. ಅವರಿಬ್ಬರ ಮಗನಾಗಿದ್ದರು ಈ ಅಮ್ಮಾರ್ ◌ؓ.

ಅಮ್ಮಾರ್ ◌ؓ ದಾರುಲ್ ಅರ್’ಖಮಿಗೆ ಹೋಗಿ ಕುರ್’ಆನ್ ಕೇಳಿ ಕಲಿತು, ಮನೆಗೆ ಬಂದು ತಾಯಿಯ ಜೊತೆಯಲ್ಲಿ ಹಂಚಿಕೊಂಡರು. ಕುರ್’ಆನ್ ಕೇಳಿದ ತಕ್ಷಣವೇ ತಾಯಿಯ ಹೃದಯದಲ್ಲಿ ಸತ್ಯವಿಶ್ವಾಸದ ಬೆಳಕು ಹರಿಯಿತು. ಅವರು ಒಂದೊಂದೇ ಸೂಕ್ತವನ್ನೇ ಕೇಳುತ್ತಾ ಹೋದಂತೆ, ಅವರು ಅದಕ್ಕೆ ಆಕರ್ಷಿತರಾಗುತ್ತಾ ಹೋದರು. ಮನುಷ್ಯ ಕುಲವು ಒಂದು ಗಂಡು ಹಾಗೂ ಹೆಣ್ಣಿನಿಂದಾಗಿದೆ ಸೃಷ್ಟಿಸಲ್ಪಟ್ಟದ್ದು ಎಂಬ ಅರ್ಥವಿರುವ ಸೂಕ್ತವು ಅವರನ್ನು ಬಹಳಷ್ಟು ಆಕರ್ಷಿಸಿತು. ಪ್ರವಾದಿಯವರನ್ನು ﷺ ಕಾಣಬೇಕೆಂಬ ಆಸೆಯನ್ನು ಮಗನಿಗೆ ತಿಳಿಸಿದರು. ತಾಯಿಯ ಒತ್ತಾಯಕ್ಕೆ ಮಣಿದು, ತಾಯಿಯ ಜೊತೆಯಲ್ಲಿ ಎರಡು ದಿನದ ನಂತರ ದಾರುಲ್ ಅರ್’ಖಮಿಗೆ ಬಂದಾಗ, ಪ್ರವಾದಿಯವರು ﷺ ಅವರಿಬ್ಬರನ್ನೂ ಬಹಳ ಆದರದಿಂದ ಬರಮಾಡಿಕೊಂಡರು. ಪವಿತ್ರ ಕುರ್’ಆನಿನ ವಾಕ್ಯಗಳನ್ನು ಹೇಳಿ ಕೊಟ್ಟಾಗ, ಬಹಳ ಸಂತೋಷದಿಂದ ಸುಮಯ್ಯರು ಹೇಳತೊಡಗಿದರು. ಸುಮಯ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ದಾರುಲ್ ಅರ್’ಖಮಿನಿಂದ ಹಿಂತಿರುಗಿ ಹೋಗಿ ತನ್ನ ಪತಿಗೂ ಕೂಡ ವಿಷಯ ತಿಳಿಸಿದಾಗ, ಅವರೂ ಕೂಡ ಇಸ್ಲಾಮ್ ಸ್ವೀಕರಿಸಿದರು. ಅದರೊಂದಿಗೆ ಇಸ್ಲಾಮ್ ಸ್ವೀಕರಿಸಿದ ಮೊದಲ ಹತ್ತರ ಸಾಲಿನಲ್ಲಿ ಯಾಸಿರ್ ಹಾಗೂ ಅವರ ಕುಟುಂಬ ಸೇರಿ ಕೊಂಡವು.

ಸುಮಾರು ಒಂದು ವರ್ಷದವರೆಗೆ ಅವರು ಇಸ್ಲಾಮನ್ನು ಗುಟ್ಟಾಗಿ ಇಟ್ಟಿದ್ದರು. ನಂತರ ಅದು ಎಲ್ಲರಿಗೂ ತಿಳಿಯಿತು. ಆದರೆ ಬನೂ ಮಖ್’ಸೂಮ್ ಜನಾಂಗಕ್ಕೆ ಮಾತ್ರ ಅದು ಇಷ್ಟವಾಗಲಿಲ್ಲ. ಅವರನ್ನು ಅದನ್ನು ಬಹಳಷ್ಟು ವಿರೋಧಿಸಿದರು, ಕೇಳದಿದ್ದಾಗ ಇಡೀ ಕುಟುಂಬಕ್ಕೆ ಚಿತ್ರಹಿಂಸೆ ನೀಡಿದರು. ಆದರೂ ಅವರು ತಮ್ಮ ವಿಶ್ವಾಸದಿಂದ ಹಿಂದೆ ಸರಿಯಲಿಲ್ಲ.
ಯಾಸಿರ್’ರವರ ಕುಟುಂಬದ ಒಬ್ಬೊಬ್ಬರ ಮೇಲೆ ಖುರೈಷಿಗಳು ಚಿತ್ರಹಿಂಸೆ ನೀಡಿದರು, ಸುಮಯ್ಯ ಬೀವಿಯಂತೂ ಬಹಳ ಧೈರ್ಯದಿಂದಾಗಿತ್ತು ಪರಿಸ್ಥಿತಿಯನ್ನು ಎದುರಿಸಿದ್ದು. ಈ ಕುಟುಂಬದ ಕುರಿತು ಪ್ರವಾದಿಯವರು ﷺ, “ಓ ಯಾಸಿರ್’ರವರೇ ನೀವು ಕ್ಷಮಿಸಿರಿ ನಿಮಗೆ ಸ್ವರ್ಗವಿದೆ” ಎಂದು ಹೇಳಿದ್ದರು.

ಹೆತ್ತ ಮಗನ ಮೇಲೆ ಬಿಸಿ ದಂಡನ್ನು ಇಟ್ಟು, ಮಗನು ಪ್ರಜ್ಞೆ ಕಳೆದುಕೊಂಡಾಗ, ಹೆತ್ತ ತಾಯಿಯ ಮನಸ್ಸು ಹೊಡೆದು ಹೋಯಿತು, ಬಹಳ ದುಃಖದಿಂದ ಕಣ್ಣೀರು ಸುರಿಸಿದರು. ಆದರೂ ತಮ್ಮ ವಿಶ್ವಾಸದಿಂದ ಹಿಂದೆ ಸರಿದಿರಲಿಲ್ಲ. ಖುರೈಷಿಗಳು ಅವರಿಗೆ ಇನ್ನಷ್ಟು ಚಿತ್ರಹಿಂಸೆ ನೀಡಿದರು. ಎಷ್ಟೇ ಚಿತ್ರಹಿಂಸೆ ನೀಡಿದರೂ ಯಾವುದೇ ಪ್ರಯೋಜನವಿಲ್ಲವೆಂದು ತಿಳಿದಾಗ, ಅಬೂಜಾಹಿಲಿನ ಕೋಪವು ನೆತ್ತಿಗೇರಿತು. ಅವನು ಕೋಪದಿಂದ ಒಂದು ಕಂಬವನ್ನು ತೆಗೆದು ಸುಮಯ್ಯ ಬಿವಿಯವರ ಹೊಟ್ಟೆಗೆ ಚುಚ್ಚಿದನು. ಅವರು ಸ್ವಲ್ಪವೂ ಕೂಡ ಹೆದರದೆ ಎಲ್ಲಾ ನೋವನ್ನೂ ಸಹಿಸಿಕೊಂಡು, ಇಸ್ಲಾಮಿನ ಮೊದಲ ಶಹೀದ್ (ರಕ್ತಸಾಕ್ಷಿ) ಆಗಿ, ಸ್ವರ್ಗಕ್ಕೆ ಹಾರಿ ಹೋದರು. ಬನೂ ಮಖ್’ಸೂಮ್ ಜನಾಂಗದ ಒಬ್ಬರು ಸೇವಕಿಯಾದ ಮಹಿಳೆ, ಅಂತ್ಯ ದಿನದವರೆಗೆ ಬರುವ ಎಲ್ಲಾ ವಿಶ್ವಾಸಿಗಳಿಗೆ ಮಾದರಿಯಾಗಿ ಬದಲಾದರು. ಇತಿಹಾಸದ ಪುಟಗಳಲ್ಲಿ ಧೀರವನಿತೆ ಎನ್ನುವ ಸ್ಥಾನವನ್ನು ಪಡೆದುಕೊಂಡರು.

ಸ್ವಲ್ಪ ಸಮಯದ ನಂತರ ಯಾಸಿರ್ ◌ؓ ಕೂಡ ಇಹಲೋಕ ತ್ಯಜಿಸಿದರು. ಯಾಸಿರ್’ನ ◌ؓ ಸಹೋದರ ಅಬ್ದುಲ್ಲಾಹ್ ಕೂಡ ಬಾಣ ತಾಗಿ ಮರಣ ಹೊಂದಿದರು. ಇದರೊಂದಿಗೆ ಅಮ್ಮಾರ್’ರವರು ◌ؓ ಒಬ್ಬಂಟಿಯಾದರು. ಅಬೂಜಹಲ್ ಬದ್’ರ್ ಯುದ್ಧದಲ್ಲಿ ಕೊಲ್ಲಲ್’ಪಟ್ಟಾಗ, ಪ್ರವಾದಿಯವರು ﷺ ಅಮ್ಮಾರನ್ನು ◌ؓ ಕರೆದು, “ನಿಮ್ಮ ತಾಯಿಯನ್ನು ಕೊಂದ ದುಷ್ಟನನ್ನು ಅಲ್ಲಾಹು ಕೊಂದು ಬಿಟ್ಟನು” ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-83/365

ಸುಮಯ್ಯರ ◌ؓ ಇಸ್ಲಾಮ್ ಸ್ವೀಕರಿಸಿದ ಕಾರಣ, ಅವರ ರೀತಿಯಲ್ಲೇ ಚಿತ್ರಹಿಂಸೆ ಎದುರಿಸಬೇಕಾಗಿ ಬಂದ ಮತ್ತೊಂದು ಯುವತಿಯಾಗಿದ್ದರು ಲಬೀಬಃ ◌ؓ. ಅವರು ಬನುಲ್ ಮುಅಮ್ಮಲ್ ಜನಾಂಗದ ಸೇವಕಿಯಾಗಿದ್ದರು. ಖುರೈಷಿಗಳು ನೀಡಿದ್ದ ಚಿತ್ರಹಿಂಸೆಗೆ, ಅವರ ಪ್ರಾಣ ಹೋಗುವ ಪರಿಸ್ಥಿತಿಗೆ ಬಂದು ತಲುಪಿತ್ತು, ಅಷ್ಟರಲೇ ಅಬೂಬಕ್ಕರ್ ◌ؓ ಬಂದು, ಅವರನ್ನು ಖರೀದಿಸಿ, ರಕ್ಷಿಸಿದರು.
ಅವರ ಅದೇ ಸಾಲಿನಲ್ಲಿ ಬರುವ, ಸಿನೀರ ಅಥವಾ ಸನ್’ಬರ ಎಂಬ ಹೆಸರಿನ ರೋಮನ್ ವಂಶದ ಒಬ್ಬರು ಧೀರ ಯುವತಿಯನ್ನು ಕೂಡ ಇಲ್ಲಿ ತಿಳಿಯಬೇಕಿದೆ. ಖುರೈಷಿಗಳು ಅವರಿಗೂ ಕೂಡ ಸಾಕಷ್ಟು ಚಿತ್ರಹಿಂಸೆ ನೀಡಿದಾಗ ಅವರು ಕಣ್ಣಿನ ದೃಷ್ಟಿ ಕಳೆದುಕೊಂಡರು, ಅದನ್ನು ಕಂಡು ಇದು ಲಾತ, ಉಝ್ಝ ಎಂಬ ದೇವರು ಕೋಪ ಮಾಡಿರುವುದರ ಪರಿಣಾಮವಾಗಿದೆ ಎಂದು ಹೇಳಿದರು. ಅದಕ್ಕೆ ಯುವತಿಯು ತಕ್ಷಣ ಅಲ್ಲಾಹನ ಮಹಿಮೆಯನ್ನು ಎತ್ತಿ ಹೇಳಿದರು. ಮರುದಿನ ಅವರಿಗೆ ದೃಷ್ಟಿಯು ವಾಪಸ್ಸು ಸಿಕ್ಕಿತು, ಅದನ್ನು ಕಂಡ ಶತ್ರುಗಳು ಇದು ವಾಮಾಚಾರ ಎಂದು ಆರೋಪಿಸಿದರು. ಕೊನೆಗೆ ಅವರನ್ನೂ ಕೂಡ ಅಬೂಬಕ್ಕರ್’ರವರೇ ◌ؓ ಖರೀದಿಸಿ ಸ್ವಾತಂತ್ರ್ಯಗೊಳಿಸಿದರು.

ಅವರ ಜೊತೆಯಲ್ಲಿ ಉಮ್ಮು ಉನೈಸ್, ನಹ್’ದಿಯ, ನಹ್’ದಿಯರ ಮಗಳು, ಉಮ್ಮು ಬಿಲಾಲ್, ಹಮಾಮ, ಎನ್ನುವ ಇತರ ಯುವತಿಗಳನ್ನೂ ಅಬೂಬಕ್ಕರ್’ರವರೇ ◌ؓ ವಿಮೋಚಿಸಿದರು. ಇವರಲ್ಲಿ ಬಹಳಷ್ಟು ಜನರು ಚಿತ್ರಹಿಂಸೆ ಅನುಭವಿಸುವುದು ಅಬೂಬಕ್ಕರ್’ರವರ ◌ؓ ಕಣ್ಣಿಗೆ ಕಂಡಾಗ, ಅವರನ್ನು ಖರೀದಿಸಿ ಸ್ವತಂತ್ರ್ಯ ನೀಡಿದಾಗಿತ್ತು. ದುರ್ಬಲರಾದ ಬಡ ಸೇವಕರನ್ನು ಖರೀದಿಸಿ ಸ್ವತಂತ್ರ್ಯ ನೀಡುವುದನ್ನು ಕಂಡ ಅಬೂಬಕ್ಕರ್’ರವರ ತಂದೆಯಾದ ಅಬೂಖುಹಾಫರು ಮಗನನ್ನು ಕರೆದು, ಈ ರೀತಿ ದುರ್ಬಲರಾದ ವ್ಯಕ್ತಿಗಳನ್ನು ಹೀಗೆ ಸ್ವತಂತ್ರ್ಯ ನೀಡಿ ಏನು ಲಾಭ.? ಸ್ವಲ್ಪವಾದ್ರೂ ಶಕ್ತಿಶಾಲಿ ವ್ಯಕ್ತಿಗಳನ್ನು ಮೋಚನೆ ನೀಡುವುದರಿಂದ ನಿನಗೆ ಸ್ವಲ್ಪ ಉಪಯೋಗಕ್ಕಾದ್ರು ಬರುತಿದ್ರು ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್’ರವರು ◌ؓ ನಾನು ಈ ಬಡವರಿಗೆ ವಿಮೋಚನೆ ನೀಡುತ್ತಿರುವುದು ನನ್ನ ವೆಯ್ಯುಕ್ತಿಕ ಲಾಭಕ್ಕಾಗಿ ಅಲ್ಲ, ಬದಲಾಗಿ ಅಲ್ಲಾಹನ ತೃಪ್ತಿಗಾಗಿ ಮಾತ್ರವಾಗಿದೆ ಎಂದು ಹೇಳಿದರು. ಈ ಒಳ್ಳೆಯ ಕಾರ್ಯವನ್ನು ಅಭಿನಂದಿಸುವ ಸಲುವಾಗಿ ಆಗಿತ್ತು, ಖುರ್’ಆನಿನ ಅಲ್ ಲೈಲ್ ಅಧ್ಯಾಯದ ಐದರ ನಂತರದ ಸೂಕ್ತವು ಅವತರಿಸಿದ್ದು.

ಮಕ್ಕಾದಲ್ಲಿ ವಿಶ್ವಾಸಿಗಳ ಪರಿಸ್ಥಿತಿಯು ಬಹಳ ಹೀನಾಯವಾಗಿತ್ತು. ಎಲ್ಲೇ ಹೋದರು ಚಿತ್ರಹಿಂಸೆಗಳ ಸರಮಾಲೆಯಾಗಿತ್ತು. ಇದನ್ನು ಕಂಡ ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರವಾಗಿತ್ತು. ಪರಿಹಾರಕ್ಕಾಗಿ ಅಲ್ಲಾಹನಲ್ಲಿ ಪ್ರಾರ್ಥನೆ ಸಲ್ಲಿಸಿ, ತಮ್ಮ ಅನುಯಾಯಿಗಳನ್ನು ಕರೆದು, ನೀವು ಯುಟೋಪಿಯ ನಗರಕ್ಕೆ ಹೋಗಿರಿ. ಅಲ್ಲಿನ ರಾಜನಾದ ನಜ್ಜಾಶ್ ನೀತಿವಂತನಾಗಿರುವರು. ಅಲ್ಲಿ ಯಾರು ಕೂಡ ತೊಂದರೆ ನೀಡಲು ಬರಲಾರರು, ಅಲ್ಲಾಹನು ಒಂದು ಪರಿಹಾರ ನೀಡುವವವರೆಗೂ ನೀವು ಅಲ್ಲಿಯೇ ವಾಸವಾಗಿರಿ ಎಂದು ಹೇಳಿದರು.

ಇದು ಇಸ್ಲಾಮಿನ ಇತಿಹಾಸದಲ್ಲಿ ಮೊದಲ ಪಲಾಯನವಾಗಿತ್ತು. ಹಿಜ್’ರ ಐದನೇ ವರ್ಷದ ರಜಬ್ ತಿಂಗಳಲ್ಲಾಗಿತ್ತು ಪಲಾಯನ ಮಾಡಿದ್ದು. ಹನ್ನೆರಡು ಪುರುಷರು ಹಾಗೂ, ನಾಲ್ಕು ಮಹಿಳೆಯರಾಗಿತ್ತು ಯುಟೋಪಿಯಕ್ಕೆ ತೆರಳಿದ್ದು.
ಅವರ ಹೆಸರುಗಳು ಈ ಕೆಳಗಿನಂತಿದೆ.

1. ಉಸ್ಮಾನ್ ಬಿನ್ ಅಫ್ಫಾನ್ ◌ؓ
2. ಅವರ ಪತ್ನಿ ರುಖಿಯ ◌ؓ (ಪ್ರವಾದಿಯವರ ಮಗಳು)
3. ಅಬೂಹುದೈಫ ಬಿನ್ ಉತ್’ಬ ◌ؓ
4. ಅವರ ಪತ್ನಿ ಸಹ್’ಲ ಬಿಂತ್ ಸುಹೈಲ್ ◌ؓ
5. ಝುಬೈರ್ ಬಿನ್ ಅಲ್ ಅವ್ವಾಮ್ ◌ؓ
6. ಮಿಸ್’ಅಬ್ ಬಿನ್ ಉಮೈರ್ ◌ؓ
7. ಅಬ್ದುಲ್ ರಹ್ಮಾನ್ ಬಿನ್ ಔಫ್ ◌ؓ
8. ಉಸ್ಮಾನ್ ಬಿನ್ ಮಳ್’ಗೂನ್ ◌ؓ
9. ಅಬೂಸಬ್’ರ ಬಿನ್ ಅಬೂರಹಂ ◌ؓ
10. ಹತ್ವಾಬ್ ಬಿನ್ ಅಂರ್ ◌ؓ
11. ಸುಹೈಲ್ ಬಿನ್ ಬೈಳಾ ◌ؓ
12. ಅಬ್ದುಲ್ಲಾಹ್ ಬಿನ್ ಮಸ್’ವೂದ್ ◌ؓ
13. ಅಬೂಸಲಮ ಬಿನ್ ಅಬ್ದುಲ್ ಅಸದ್ ◌ؓ
14. ಅವರ ಪತ್ನಿ ಉಮ್ಮು ಸಲಮ ಬಿಂತ್ ಅಬೀಉಮಯಃ ◌ؓ
15. ಆಮಿರ್ ಬಿಂತ್ ರಬೀಅಃ ◌ؓ
16. ಅವರ ಪತ್ನಿ ಲೈಲಾ ಬಿಂತ್ ಅಬೀ ಹಸ್’ಮಃ ◌ؓ ಎನ್ನುವವರು ಆಗಿದ್ದರು.

ಅಬೂಹಸ್’ಮರ ಮಗಳಾದ ಲೈಲಾರವರು ◌ؓ ಹೇಳುವುದು ಕಾಣಬಹುದು. ನಾವು ಇಸ್ಲಾಮ್ ಸ್ವೀಕರಿಸಿದಾಗ ನಮ್ಮ ಮೇಲೆ ಬಹಳಷ್ಟು ಶತ್ರುತ್ವ ತೋರಿಸಿದ್ದು ಉಮರ್ ಆಗಿದ್ದರು. ನಾವು ಯುಟೋಪಿಯಕ್ಕೆ ಹೊರಡುವ ಸಂದರ್ಭದಲ್ಲಿ, ಒಂಟೆಯ ಮೇಲೆ ಕುಳಿತಿದ್ದ ನನ್ನ ಬಳಿ ಬಂದು, ಇದು ನೀವು ಎಲ್ಲಿಗೆ ಹೋಗುವುದು.? ಉಮ್ಮು ಅಬ್ದುಲ್ಲಾಹ್ ಎಂದು ಕೇಳಿದರು. ಅದಕ್ಕೆ, ನಾವು ಇಸ್ಲಾಮ್ ಸ್ವೀಕರಿಸಿದ ಕಾರಣಕ್ಕಾಗಿ ನೀವುಗಳು ಸೇರಿ ನಮಗೆ ಬಹಳಷ್ಟು ತೊಂದರೆ ನೀಡುತ್ತಿದ್ದೀರಿ, ಹಾಗಾಗಿ ಯಾವುದೇ ತೊಂದರೆಯಿಲ್ಲದ ಸುರಕ್ಷಿತ ಸ್ಥಳವನ್ನು ಹುಡುಕಿ ಹೋಗುತ್ತಿದ್ದೇವೆ ಎಂದು ಹೇಳಿದೆನು. ಅದಕ್ಕೆ ಉಮರ್ ಅಲ್ಲಾಹು ನಿಮಗೆ ಸಹಾಯ ಮಾಡಲಿ ಎಂದು ಹೇಳಿದರು. ನಾನು ಆ ವಿಷಯವನ್ನು ನನ್ನ ಪತಿಯಲ್ಲಿ ಹೇಳುತ್ತಾ, ಉಮರಿನ ವರ್ತನೆಯಲ್ಲಿ ಏನೋ ಬದಲಾವಣೆ ಎದ್ದು ಕಾಣುತ್ತಿದೆ ಅಲ್ಲವೇ.? ಎಂದು ಹೇಳಿದೆನು. ಅದಕ್ಕೆ ನನ್ನ ಪತಿಯು, ನಿನಗೆ ಅನಿಸುತ್ತಾ ಉಮರ್ ಇಸ್ಲಾಮ್ ಸ್ವೀಕರಿಸಬಹುದು ಎಂದು.? ಬಹುಶಃ ಉಮರಿನ ಕತ್ತೆ ಇಸ್ಲಾಮ್ ಸ್ವೀಕರಿಸಿದರೂ ಉಮರ್ ಮಾತ್ರ ಇಸ್ಲಾಮ್ ಸ್ವೀಕರಿಲಿಕ್ಕಿಲ್ಲ.! ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-84/365

ಇದು ಕೇವಲ ಆಮೀರ್ ಬಿನ್ ರಬೀಅರ ಅಭಿಪ್ರಾಯ ಮಾತ್ರವಾಗಿರಲಿಲ್ಲ, ಉಮರನ್ನು ಹತ್ತಿರದಿಂದ ತಿಳಿದ ಎಲ್ಲರ ಅಭಿಪ್ರಾಯವೂ ಅದೇ ಆಗಿತ್ತು. ಆದರೆ ಸತ್ಯವಿಶ್ವಾಸಿಗಳ ಯುಟೋಪಿಯಕ್ಕೆ ಹೊರಟಿದ್ದ ಯಾತ್ರೆಯ ನಂತರ ಉಮರ್ ಬಿನ್ ಖತ್ವಾಬ್’ರವರು ◌ؓ ಇಸ್ಲಾಮ್ ಸ್ವೀಕರಿಸಿದ ದೃಶ್ಯಕ್ಕೆ ಮಕ್ಕಾ ನಗರವು ಸಾಕ್ಷಿಯಾಯಿತು.
ಇಸ್ಲಾಮ್ ಸ್ವೀಕರಿಸಿದವರಲ್ಲಿ ನಲ್ವತ್ತನೆ ವ್ಯಕ್ತಿಯಾಗಿದ್ದರು ಉಮರ್ ◌ؓ. ಅಥವಾ ನಲ್ವತ್ತನೆ ಪುರುಷನಾಗಿದ್ದರು, ಅಥವಾ ಪ್ರಮುಖ ವ್ಯಕ್ತಿ ಎನ್ನುವ ಅಭಿಪ್ರಾಯವು ಇದೆ.

ಉಮರ್’ರವರು ◌ؓ ಇಸ್ಲಾಮ್ ಸ್ವೀಕರಿಸಿದ ಕುರಿತು, ಬಹಳಷ್ಟು ವಿಭಿನ್ನವಾದ ಅಭಿಪ್ರಾಯಗಳು ಕಾಣಬಹುದು. ಖುದ್ದಾಗಿ ಉಮರ್’ರವರೇ ◌ؓ ಹೇಳುವ ಒಂದು ಅಭಿಪ್ರಾಯವು ಈ ರೀತಿಯಾಗಿದೆ. ಉಮರ್’ರವರು ◌ؓ ತನ್ನ ಸೇವಕನಾದ ಅಸ್’ಲಮ್’ರಲ್ಲಿ ನಾನು ಇಸ್ಲಾಮ್ ಸ್ವೀಕರಿಸಿರುವುದರ ಬಗ್ಗೆ ತಿಳಿಸುತ್ತೇನೆ ಕೇಳು ಎಂದು ಹೇಳಿದಾಗ, ಸರಿ ನೀವು ಹೇಳಿ ಎಂದು ಉತ್ತರಿಸಿದರು. ಒಂದು ದಿನ ಅಬೂಜಹಲ್, ಶೈಬತ್ ಹಾಗೂ ಇತರ ಜನರು ಒಟ್ಟಿಗೆ ಕುಳಿತು ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಅಬೂಜಹಲ್ ಖುರೈಷಿಗಳನ್ನು ಕರೆದು, ಓ ಖುರೈಷಿಗಳೇ, ಮುಹಮ್ಮದ್ ﷺ ನಿಮ್ಮ ದೇವರುಗಳನ್ನು ವಿರೋಧಿಸುತ್ತಿದ್ದಾರೆ. ಸಹಿಷ್ಣುತೆಗಳಿಗೆ ಬೆಲೆಯೇ ನೀಡದೆ, ನಿಮ್ಮ ಪೂರ್ವಿಕರು ನರಕಲ್ಲಿದ್ದಾರೆ ಎಂದು ವಾದಿಸುತ್ತಿದ್ದಾರೆ. ಹಾಗಾಗಿ ಆ ಮುಹಮ್ಮದ್’ರನ್ನು ﷺ ಯಾರಾದರೂ ಕೊಲೆ ಮಾಡಿದರೆ, ಅವರಿಗೆ ಕಪ್ಪು ಹಾಗೂ ಬಿಳಿ ಬಣ್ಣದ ನೂರು ಒಂಟೆಯನ್ನು, ಹಾಗೂ ಸಾವಿರ ಉಖಿಯ ಬೆಳ್ಳಿಯನ್ನು ಕೂಡ ಉಡುಗೊರೆಯಾಗಿ ನೀಡುತ್ತೇನೆ ಎಂದು ಹೇಳಿದನು. ಅದನ್ನು ಕೇಳಿದ ನಾನು ಬಿಲ್ಲು ಬಾಣದ ಜೊತೆಯಲ್ಲಿ, ಹರಿತವಿರುವ ಖಡ್ಗವನ್ನು ಹಿಡಿದು ಅಲ್ಲಿಂದ ಹೊರೆಟೆನು. ದಾರಿ ಮಧ್ಯದಲ್ಲಿ ಕೆಲವು ಜನರು ಒಂದು ಪ್ರಾಣಿಯನ್ನು ಖುರ್ಬಾನಿ ಮಾಡಲು ತಯಾರಿ ಮಾಡುತಿದ್ದರು, ನಾನದನ್ನೇ ನೋಡುತ್ತಾ ನಿಂತಿದ್ದೆನು. ಅಷ್ಟೊತ್ತಿಗೆ ಅಲ್ಲಾಹನ ಬಳಿ ಆಹ್ವಾನಿಸುವ ಪುಣ್ಯ ಪುರುಷನ ಆಗಮನವಾಗಿದೆ ಎಂದು ಯಾರೋ ಒಬ್ಬರು ಹೇಳಿದ್ದು ಕೇಳಲು ಸಾಧ್ಯವಾಯಿತು. ಅದನ್ನು ಕೇಳಿದ ನನಗೆ ಇದು ನನ್ನನ್ನು ಉದ್ದೇಶಿಸಿ ಹೇಳಿದ ಹಾಗೆ ಇದೆಯಲ್ವಾ.? ಎಂದು ಅಂದುಕೊಳ್ಳುತ್ತಾ ಅಲ್ಲಿಂದ ಮುಂದೆ ನಡೆದನು. ಸ್ವಲ್ಪ ದೂರ ಹೋದಾಗ ಅಲ್ಲಿದ್ದ, ಮೇಕೆಗಳ ಗುಂಪಿನ ನಡುವೆ ಒಂದು ಕವಿತೆಯು ಕೇಳಲು ಸಾಧ್ಯವಾಯಿತು. ಅದರ ಅರ್ಥ ಏಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಿರಿ, ಉದಾಸೀನತೆ ತೋರಿಸದೆ ಇಸ್ಲಾಮಿಗೆ ಬನ್ನಿರಿ ಎಂದಾಗಿತ್ತು. ಅದನ್ನು ಕೇಳಿದಾಗಲೂ ನನಗೆ ಪುನಃ ಅನಿಸಿದ್ದು ಇದು ನನ್ನನ್ನೇ ಉದ್ದೇಶಿಸಿ ಹೇಳಿದ ಹಾಗೆ ಕಾಣುತ್ತಿದೆ ಅಲ್ವಾ ಎಂದು.

ಇನ್ನೊಂದು ಉಲ್ಲೇಖದ ಪ್ರಕಾರ, ಉಮರ್’ರವರು ◌ؓ ಹರಿತವಾದ ಖಡ್ಗವನ್ನು ಹಿಡಿದು ಮುಂದೆ ನಡೆದು ಹೋಗುತ್ತಿದ್ದ ಸಂದರ್ಭದಲ್ಲಿ, ದಾರಿಯಲ್ಲಿ ನುಐಂ ಬಿನ್ ಅಬ್ದಿಲ್ಲಾಹ್ ಅನ್’ಹಾಂ’ರವರನ್ನು ಕಾಣಲು ಸಾಧ್ಯವಾಯಿತು. ಅವರು ಇಸ್ಲಾಮ್ ಸ್ವೀಕರಿಸಿದ್ದ ವ್ಯಕ್ತಿಯಾಗಿದ್ದರು. ಉಮರ್’ರವರನ್ನು ◌ؓ ಕಂಡಾಗ, ಎಲ್ಲಿಗೆ ಹೋಗುತ್ತಿದ್ದೀರ ಎಂದು ಕೇಳಿದರು. ಅದಕ್ಕೆ ಉಮರ್’ರವರು ◌ؓ ನಾನು ಆ ‘ಸಿಬಾಯಿ’ ಅಥವಾ ಪ್ರವಾದಿಯವರನ್ನು ﷺ ಹುಡುಕಿ, ನಮ್ಮ ದೇವರನ್ನು ವಿರೋಧಿಸುವ ಅವರನ್ನು ಕೊಲೆ ಮಾಡಲು ಹೋಗುತ್ತಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ನುಐಂ, ನೀವು ನಿಮ್ಮನ್ನೇ ವಂಚಿಸಲು ಆಗಿದೆ ಹೋಗುತ್ತಿರುವುದು. ಬಹುಶಃ ನೀವು ಅವರನ್ನು ಸಾಯಿಸಿದರೆ, ಅಬ್ದುಮಾನಾಫಿನ ಕುಟುಂಬವು ನಿಮ್ಮನ್ನು ಈ ಭೂಮಿಯಲ್ಲಿ ಶಾಂತಿಯಿಂದ ಇರಲು ಬಿಡುವರೆಂದು ಆಲೋಚಿಸಿದ್ದೀರ.? ಅದು ಬಿಡಿ ನೀವು ನಿಮ್ಮ ಸ್ವಂತ ಮನೆಯ ವಿಷಯವನ್ನು ಸರಿ ಮಾಡುದಿಲ್ವಾ.? ಎಂದು ಹೇಳಿದರು. ಅದಕ್ಕೆ ಉಮರ್, ಏನು ನನ್ನ ಮನೆಯಲ್ಲಾ.?ಎಂದು ಪುನಃ ಅವರಲ್ಲೇ ಕೇಳಿದಾಗ, ಹೌದು ನಿಮ್ಮ ಮಾವನ ಮಗನಾದ, ನಿಮ್ಮ ಬಾವ ಸಯೀದ್ ಬಿನ್ ಝೈದ್ ಹಾಗೂ ನಿಮ್ಮ ಸಹೋದರಿ ಫಾತಿಮ ಕೂಡ ಇಸ್ಲಾಮ್ ಸ್ವೀಕರಿಸಿದ್ದಾರೆ, ಮೊದಲು ಅವರನ್ನು ಸರಿ ಮಾಡಿ, ಆಮೇಲೆ ಬೇಕಾದರೆ ಬೇರೆ ನೋಡಿ ಎಂದು ಹೇಳಿದರು. ನುಐಂ ಹೀಗೆ ಯಾಕೆ ಹೇಳಿದ್ದೆಂದರೆ, ಪ್ರವಾದಿಯವರಿಗೆ ﷺ ಏನು ಮಾಡದೆ ಬಿಟ್ಟು ಬಿಡಲಿ ಎನ್ನುವ ಉದ್ದೇಶದಿಂದಾಗಿತ್ತು. ಅದನ್ನು ಕೇಳಿದ ತಕ್ಷಣವೇ ಉಮರ್ ತನ್ನ ಸಹೋದರಿ ಫಾತಿಮರ ಮನೆ ಕಡೆ ಹೊರಟರು.

ಅಂದು ಪ್ರವಾದಿಯವರು, ﷺ ಬಡವರು ಯಾರಾದರೂ ಇಸ್ಲಾಮ್ ಸ್ವೀಕರಿಸಿದರೇ, ಸ್ವಲ್ಪ ಶ್ರೀಮಂತರ ಬಳಿ ರಹಸ್ಯವಾಗಿ ಕಳಿಸಿ ಅವರ ಆಶ್ರಯದಲ್ಲಿ ಉಳಿದುಕೊಳ್ಳವ ವ್ಯವಸ್ಥೆ ಮಾಡುತಿದ್ದರು. ಇದು ಅವತ್ತಿನ ಒಂದು ಪದ್ಧತಿಯಾಗಿತ್ತು, ಅದೇ ರೀತಿ ಸಈದ್’ರವರಿಗೆ ◌ؓ ಇಬ್ಬರು ಸತ್ಯ ವಿಶ್ವಾಸಿಗಳ ಜವಾಬ್ದಾರಿ ನೀಡಲಾಗಿತ್ತು, ಅದರಲ್ಲಿ ಒಬ್ಬರಾಗಿದ್ದರು, ಖಬ್ಬಾಬ್ ಬಿನ್ ಅಲ್ ಅರತ್ ◌ؓಎನ್ನುವ ವ್ಯಕ್ತಿಯಾಗಿದ್ದರು.
ಉಮರ್ ಕೆಂಡದಂತಾಹ, ಮುಖದೊಂದಿಗೆ ತನ್ನ ಸಹೋದರಿಯ ಮನೆ ಕಡೆ ಹೊರಟರು. ಅಲ್ಲಿ ಅವರ ಸಹೋದರಿ ಫಾತಿಮ ಒಳಗೆ ಕುಳಿತು ಖುರ್’ಆನ್ ಪಠಿಸುತ್ತಿದ್ದರು. ತಕ್ಷಣವೇ ಮನೆಯ ಬಾಗಿಲು ತೆರೆಯಿತು, ಅದನ್ನು ಕಂಡ ತಕ್ಷಣವೇ ಖಬ್ಬಾಬ್ ◌ؓ ಎಲ್ಲೋ ಅಡಗಿ ಕುಳಿತುಕೊಂಡರು. ಖುರ್’ಆನಿನ ತ್ವಹಾ ಅಧ್ಯಾಯವನ್ನು ಬರೆದಿದ್ದ ಆ ಫಲಕವನ್ನು ಫಾತಿಮ ಅಡಗಿಸಿ ಇಟ್ಟರು. ಒಳಗೆ ಬಂದ ಉಮರ್, ನಾನು ಈ ಕೇಳಿದ ಮಂತ್ರ ಯಾವುದು.? ಏನದು ಎಂದು ಕೇಳಿದರು. ಅದಕ್ಕೆ ಅವರು ಗಾಬರಿಯಿಂದ ಏನು.? ನೀವು ಕೇಳಿದ್ದ ಅಂತದ್ದು ಏನು ಇಲ್ಲವಲ್ಲ ಎಂದು ಹೇಳಿದರು. ಅದಕ್ಕೆ ಉಮರ್, ಏನು.! ಏನು ಇಲ್ವಾ.? ನೀವಿಬ್ಬರೂ ಮುಹಮ್ಮದ್’ರ ﷺ ಅನುಯಾಯಿಯಾದದ್ದು ನನಗೆ ಆಗಲೇ ತಿಳಿದಿದೆ ಎಂದು ಹೇಳುತ್ತಾ, ಸಈದನ್ನು ◌ؓ ಹೋಗಿ ಹಿಡಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-85/365

ಗಂಡನಿಗೆ ಹೊಡೆಯುತ್ತಿರುವುದನ್ನು ಕಂಡು, ತಕ್ಷಣವೇ ಫಾತಿಮ ◌ؓ ಬಂದು ಉಮರನ್ನು ತಡೆದರು. ಆಗ ಉಮರ್ ಅವರಿಗೂ ಕೂಡ ಹೊಡೆದರು. ಉಮರ್ ಹೊಡೆದ ಏಟಿಗೆ ರಕ್ತ ಬರುತಿತ್ತು. ಫಾತಿಮ ◌ؓ ಹಾಗೂ ಸಈದ್ ◌ؓ ಒಂದೇ ಧ್ವನಿಯಲ್ಲಿ ನಾವಿಬ್ಬರೂ ಇಸ್ಲಾಂ ಸ್ವೀಕರಿಸಿದ್ದೇವೆ, ನಾವು ಅಲ್ಲಾಹು ಹಾಗೂ ಅವನ ಪ್ರವಾದಿಯವರನ್ನು ﷺ ಅಂಗೀಕರಿಸುತ್ತೇವೆ, ನಿಮಗೆ ಇಷ್ಟಬಂದದ್ದು ಮಾಡಿ, ಎಂದು ಹೇಳಿದರು.

ತಂಗಿಯ ಮುಖದ ಮೇಲಿದ್ದ ರಕ್ತವನ್ನು ಕಂಡು ಉಮರಿಗೆ ತುಂಬಾ ಬೇಸರವಾಯಿತು. ನಂತರ ಕುತೂಹಲದಿಂದ ನೀವು ಏನೋ ಓದುತಿದ್ದೀರಿ ಅಲ್ವಾ, ಏನದು.? ಎಲ್ಲಿದೆ ಆ ಫಲಕ.? ನಾನೊಮ್ಮೆ ಅದನ್ನು ಓದಿ ನೋಡಲೇ ಮುಹಮ್ಮದ್ ﷺ ಏನನ್ನು ಕಲಿಸುತ್ತಿದ್ದಾರೆ ಎಂದು.? ಉಮರ್ ಓದು ಬರಹ ತಿಳಿದಿದ್ದ ವ್ಯಕ್ತಿಯಾಗಿದ್ದರು. ಅದಕ್ಕೆ ಅವರ ತಂಗಿ, ನಿಮಗೆ ನೀಡಲು ಹೆದರಿಕೆ ಆಗುತ್ತಿದೆ. ಒಂದೇ ವೇಳೆ ನೀವು ಅದನ್ನು ನಾಶ ಮಾಡಿದರೆ ಎಂದು ಹೇಳಿದಾಗ, ಇಲ್ಲ ಖಂಡಿತ ಇಲ್ಲ, ನೀವು ಹೆದರಬೇಡಿ, ದೇವರಾಣೆಗೂ ನಾನು ನಿಮಗೆ ತಿರುಗಿ ಕೊಡುತ್ತೇನೆ ಎಂದು ಹೇಳಿದರು. ಉಮರ್’ರವರ ಮನಸ್ಸಿನ ಬದಲಾವಣೆಯನ್ನು ಗಮನಿಸಿದ ಫಾತಿಮ ◌ؓ, ಅದನ್ನು ಹಾಗೆ ನೀಡಲು ಸಾಧ್ಯವಿಲ್ಲ. ಶುದ್ಧಿಯಿದ್ದಾಗ ಮಾತ್ರವೇ ಅದನ್ನು ನೀಡಲು ಆಗುವುದು, ಹಾಗಾಗಿ ನೀವು ಶುದ್ದಿಯಾಗಿ ಬನ್ನಿ ಆಮೇಲೆ ನೀಡುತ್ತೇನೆ ಎಂದು ಹೇಳಿದರು. ಉಮರ್ ಸ್ನಾನ ಮಾಡಿ ಶುದ್ದಿಯಾಗಿ ಬಂದ ನಂತರ ಅವರ ತಂಗಿ ಫಾತಿಮ ಖುರ್’ಆನ್ ಬರೆದ ಫಲಕವನ್ನು ನೀಡಿದರು. ತ್ವಾಹ ಅಧ್ಯಾಯವಾಗಿತ್ತು ಅದು, ಉಮರ್ ಮನಸ್ಸಿಟ್ಟು ಅದನ್ನು ಓದಲು ಆರಂಭಿಸಿದರು. ವಾಹ್ ಎಂತಹ ಅದ್ಬುತ ವಾಕ್ಯ, ಎಷ್ಟೊಂದು ಶ್ರೇಷ್ಠವಾದ ಗ್ರಂಥ ಎಂದು ಹೇಳಿದರು.

ಇನ್ನೊಂದು ಉಲ್ಲೇಖದ ಪ್ರಕಾರ, ಅಲ್ ಹದೀದ್ ಅಧ್ಯಾಯದ ಏಳನೇ ಸೂಕ್ತದವರೆಗೆ ಓದಿದರು, ಅದರ ಅನುವಾದ ಈ ರೀತಿಯಾಗಿದೆ. “ಅಲ್ಲಾಹನಲ್ಲೂ, ಅವನ ಪ್ರವಾದಿಯವರಲ್ಲೂ ﷺ ವಿಶ್ವಾಸ ಇರಿಸಿರಿ. ಅವನು ನಿಮ್ಮನ್ನು ಯಾವ ಸಂಪತ್ತಿನ ಮೇಲೆ ವರಿಸುದಾರನ್ನನಾಗಿ ಮಾಡಿರುವನೋ, ಅವುಗಳಿಂದಲೇ ನೀವು ಖರ್ಚು ಮಾಡಿರಿ.” ಈ ಸೂಕ್ತದ ವರೆಗೆ ಓದಿ ಮುಗಿಸಿದ್ದೇ ತಡ ಉಮರ್’ರವರು ◌ؓ ತಾನು ಇಸ್ಲಾಮ್ ಸ್ವೀಕರಿಸಿದ್ದಾಗಿ ಘೋಷಣೆ ಮಾಡಿದರು. ‘ಅಶ್’ಹದು ಅನ್ ಲಾಯಿಲಾಹ ಇಲ್ಲಲ್ಲಾಹ್, ವಅಶ್’ಹದು ಅನ್ನ ಮುಹಮ್ಮದ್ ﷺ ರಸೂಲುಲ್ಲಾಹ್’ (ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್’ರು ﷺ ಅವನ ಪ್ರವಾದಿ ಆಗಿರುವರು, ಎಂದು ನಾನು ಸಾಕ್ಷಿ ವಹಿಸುತ್ತೇನೆ.)

ಅದನ್ನು ಕೇಳಿದ್ದೆ ತಡ, ಅಡಗಿ ಕುಳಿತಿದ್ದ ಖಬ್ಬಾಬ್ ◌ؓ ಹೊರಗೆ ಬಂದು, ಓ ಉಮರ್’ರವರೇ ನಿಮಗೆ ಪ್ರವಾದಿಯವರ ﷺ ಪ್ರತ್ಯೇಕವಾದ ಪ್ರಾರ್ಥನೆ ಲಭಿಸಿರುತ್ತದೆ, ನಿನ್ನೆ ಪ್ರವಾದಿಯವರು ﷺ ನಿಮಗಾಗಿ ಪ್ರಾರ್ಥನೆ ಮಾಡಿದ್ದನ್ನು ನಾನೇ ಖುದ್ದಾಗಿ ಕೇಳಿದ್ದೆನು. ಅಲ್ಲಾಹನೇ ಅಬುಲ್’ಹಕಮ್ (ಅಬೂಜಹಲ್) ಅಥವಾ ಉಮರ್ ಬಿನ್ ಖತ್ವಾಬ್ ಇಬ್ಬರಲ್ಲಿ ಯಾರಾದ್ರೂ ಒಬ್ಬರ ಮೂಲಕವಾದ್ರೂ ನೀನು ಇಸ್ಲಾಮನ್ನು ಶಕ್ತಿಗೊಳಿಸು ಎಂದು ಪ್ರಾರ್ಥಿಸಿದ್ದರು, ಉಮರ್’ರವರೇ ◌ؓ ಅಲ್ಲಾಹನು ನಿಮ್ಮನ್ನು ಆಯ್ಕೆ ಮಾಡಿರುವನು ಎಂದು ಹೇಳಿದರು.

ಈ ಘಟನೆಯ ಕುರಿತು ಇನ್ನೊಂದು ಉಲ್ಲೇಖವು ಈ ರೀತಿಯಾಗಿದೆ. ಉಮರ್ ◌ؓ ಖಬ್ಬಾಬ್’ರನ್ನು ◌ؓ ಕರೆದು, ಮುಹಮ್ಮದ್’ರು ﷺ ಎಲ್ಲಿದ್ದಾರೆ.? ನನಗೆ ನೇರವಾಗಿ ಅವರ ಮುಂದೆಯೇ ಇಸ್ಲಾಮ್ ಸ್ವೀಕರಿಸಬೇಕು ಎಂದು ಹೇಳಿದಾಗ, ಖಬ್ಬಾಬ್ ◌ؓ, ಪ್ರವಾದಿಯವರು ﷺ ಅವರ ಅನುಯಾಯಿಗಳ ಜೊತೆಯಲ್ಲಿ ಸ್ವಫಾ ಪರ್ವತದ ಬಳಿಯಿರುವ ಮನೆಯಲ್ಲಿದ್ದಾರೆ ಎಂದು ಹೇಳಿದರು. ಉಮರ್ ◌ؓ ನೇರವಾಗಿ ಅಲ್ಲಿ ಹೋಗಿ, ದಾರುಲ್ ಅರ್’ಖಮಿನ ಬಾಗಿಲು ತಟ್ಟಿದರು. ಬಾಗಿಲು ತೆರೆಯಲು ಬಂದ ವ್ಯಕ್ತಿ, ಕಿಟಕಿಯಿಂದ ಉಮರನ್ನು ◌ؓ ಕಂಡ ಕೂಡಲೇ ಓಡಿ ಹೋಗಿ ಪ್ರವಾದಿಯವರಿಗೆ ﷺ ವಿಷಯ ತಿಳಿಸಿದರು. ಓ ಪ್ರವಾದಿಯವರೇ, ಹರಿತವಿರುವ ಖಡ್ಗದ ಜೊತೆಯಲ್ಲಿ ಉಮರ್ ಹೊರಗೆ ನಿಂತಿರುವರು ಎಂದು ಹೇಳಿದಾಗ, ಪಕ್ಕದಲ್ಲೇ ಭಯದಿಂದ ನಡುಗುತ್ತಿದ್ದ ಅನುಯಾಯಿಗಳಲ್ಲಿ, ಹಂಝರವರು ಹೆದರಬೇಡಿ, ಅವರು ಒಳಗೆ ಬರಲಿ, ಅವರ ಉದ್ದೇಶ ಒಳ್ಳೆದಾಗಿದ್ದರೆ ಅವರಿಗೆ ಸ್ವಾಗತ, ಅದಲ್ಲ ದುರುದ್ದೇಶ ಏನಾದರೂ ಆಗಿದ್ದಲ್ಲಿ, ಅವರ ಖಡ್ಗದಿಂದಲ್ಲೇ ಅವರಿಗೆ ಪಾಠ ಕಲಿಸುವೆನು ಎಂದು ಹೇಳಿದರು. ಪ್ರವಾದಿಯವರು ﷺ ಬಾಗಿಲು ತೆರೆಯಲು ಅನುಮತಿ ನೀಡಿ, ಅವರು ಒಳಗೆ ಬರಲಿ ಅವರಿಗೆ ಅಲ್ಲಾಹನು ಒಳಿತು ವಿಧಿಸಿದ್ದರೆ, ಖಂಡಿತ ಅದು ಅವರಿಗೆ ಲಭಿಸುತ್ತದೆ ಎಂದು ಹೇಳಿದರು.

ಬಾಗಿಲು ತೆರೆದು, ಉಮರ್ ಬಂದ ತಕ್ಷಣವೇ ಇಬ್ಬರು ಬಂದು, ಅವರ ಕೈಗಳನ್ನು ಎರಡು ಭಾಗದಿಂದ ಗಟ್ಟಿಯಾಗಿ ಹಿಡಿದು ಪ್ರವಾದಿಯವರ ﷺ ಮುಂದೆ ಹೋಗಿ ನಿಲ್ಲಿಸಿದರು. ಪ್ರವಾದಿಯವರು ﷺ ಅವರನ್ನು ಬಿಟ್ಟು ಬಿಡಲು ಹೇಳಿದಾಗ, ಉಮರ್ ಪ್ರವಾದಿಯವರಿದ್ದ ﷺ ಕೋಣೆಯೊಳಗೆ ಹೋದರು. ಅವರು ಒಳಗೆ ಬಂದಾಗ, ಪ್ರವಾದಿಯವರು ﷺ ಎದ್ದು ನಿಂತು, ಇಲ್ಲಿಗೆ ನೀವು ಯಾಕೆ ಬಂದದ್ದು.? ಎಂದು ಕೇಳಿದರು. ಅದಕ್ಕೆ ಉಮರ್ ನಾನು ಅಲ್ಲಾಹನನ್ನೂ, ಅವನ ಪ್ರವಾದಿಯವರನ್ನೂ ﷺ ಅಂಗೀಕರಿಸಲು ಬಂದಿದ್ದೇನೆ ಎಂದು ಹೇಳಿದರು, ಅದನ್ನು ಕೇಳಿದ ತಕ್ಷಣವೇ ಪ್ರವಾದಿಯವರು ﷺ, ಅಲ್ಲಾಹು ಅಕ್’ಬರ್ ಎಂದು ತಕ್’ಬೀರ್ ಉಚ್ಛರಿಸಿದರು. ಅದರೊಂದಿಗೆ ಎಲ್ಲರಿಗೂ ಉಮರ್ ◌ؓ ಇಸ್ಲಾಮ್ ಸ್ವೀಕರಿಸಿದ ವಿಷಯವು ತಿಳಿಯಿತು. ಅವರು ಕೂಡ ತಕ್’ಬೀರ್ ಹೇಳಲು ಆರಂಭಿಸಿದರು. ಮಕ್ಕಾದ ಬೀದಿ ಬೀದಿಗಳಲ್ಲಿ ಅದರ ಶಬ್ದವು ಪ್ರತಿಧ್ವನಿಸಿತ್ತಿತ್ತು, ಅದರೊಂದಿಗೆ ಸತ್ಯ ವಿಶ್ವಾಸಿಗಳ ಧೈರ್ಯವು ಇಮ್ಮಡಿಯಾಯಿತು. ಉಮರ್ ◌ؓ ಹಾಗೂ ಹಂಝ ◌ؓ ಈಗ ನಮ್ಮ ಜೊತೆಯಲ್ಲಿ ಇದ್ದಾರೆ ಎಂದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-86/365

ಉಮರ್’ರವರಿಗೆ ◌ؓ ಇಸ್ಲಾಮಿನ ಕುರಿತು ಬಗ್ಗೆ, ಒಲವು ಮೂಡಿದ ವಿಷಯನ್ನು ಸ್ವತಃ ಉಮರ್ ◌ؓ ವಿವರಿಸುವುದು ಕಾಣಬಹುದು. ನಾನು ಅಜ್ಞಾನದ ಕಾಲದಲ್ಲಿ ಮದ್ಯಕ್ಕೆ ದಾಸನಾಗಿದ್ದೆ, ಕುಡಿಯುವುದು, ಅದನ್ನು ಇನ್ನೊಬ್ಬರಿಗೆ ನೀಡುವುದು ಎಲ್ಲವನ್ನೂ ಮಾಡುತ್ತಿದ್ದೆ. ಆಲು ಉಮರಿನ ಮನೆಯ ಪಕ್ಕದ, ಹಸವ್ವರ ಎನ್ನುವ ಭಾಗದಲ್ಲಿ ನಾವೆಲ್ಲರೂ ಒಟ್ಟಿಗೆ ಸೇರುವ ಸ್ಥಳವಿತ್ತು. ಒಂದು ದಿನ, ರಾತ್ರಿ ನಾನಲ್ಲಿಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಅಲ್ಲಿಂದ ಮದ್ಯ ಮಾರಾಟ ಮಾಡುವ ವ್ಯಕ್ತಿ ಬಳಿ ಇರಬಹುದೇನೋ ಎಂದು ಅಲ್ಲಿಗೆ ಹೊರಟೆ, ಆದರೆ ಅಲ್ಲಿ ಮದ್ಯ ಮಾರಾಟ ಮಾಡುವ ವ್ಯಕ್ತಿಯೇ ಇರಲಿಲ್ಲ. ಇನ್ನೆಲ್ಲಿ ಹೋಗುವುದು ಎಂದು ಆಲೋಚಿಸಿ, ಕಅಬಾಲಯದ ಪರಿಸರಕ್ಕೂ ಬಂದು ನೋಡಿದನು, ಆದರೆ ಅಲ್ಲಿಯೂ ಯಾರೂ ಇರಲಿಲ್ಲ.

ಹೀಗೆ ಮಸ್ಜಿದ್’ಗೆ ತಲುಪಿದೆನು. ಅಲ್ಲಿ ಮುಹಮ್ಮದ್’ರು ﷺ ನಮಾಝ್ ಮಾಡ್ತಿದ್ರು. ಪ್ರವಾದಿಯವರು ﷺ ನಮಾಝ್ ಮಾಡುವಾಗ ಶಾಮಿನ ಭಾಗಕ್ಕೆ ತಿರುಗಿ ನಿಂತಿದ್ದರು. ಹೀಗೆ ಶಾಮಿನ ಭಾಗಕ್ಕೆ ತಿರುಗಿ ನಿಂತಾಗ ಪ್ರವಾದಿಯವರ ﷺ ನಡುವೆ ಕಅಬಾಲಯ ಇರುತ್ತಿತ್ತು. ಅಥವಾ ಕಅಬಾದ ಅಸ್’ವದ್ ಮೂಲೆ ಹಾಗೂ ಯಮಾನಿ ಮೂಲೆಯ ನಡುವೆ ನಿಂತಾಗಿತ್ತು ನಮಾಝ್ ಮಾಡುತ್ತಿದ್ದದ್ದು. ಪ್ರವಾದಿಯವರು ﷺ ನಮಾಝ್ ಮಾಡುವುದನ್ನು ಕಂಡಾಗ, ಇವತ್ತು ರಾತ್ರಿ ಮುಹಮ್ಮದ್’ರನ್ನು ﷺ ಒಮ್ಮೆ ವೀಕ್ಷಿಸಿದರೆ ಹೇಗೆ.? ಎಂಬ ಯೋಚನೆ ಬಂತು. ಆದರೆ ಅವರ ಹತ್ತಿರ ಹೋಗುವುದು ಬೇಡ ಕಾರಣ ಬಹುಶಃ ಅವರ ಏಕಾಗ್ರತೆ ತಪ್ಪಬಹುದು ಎಂದು. ಕಅಬಾಲಯದ ಉತ್ತರದಲ್ಲಿರುವ ಹಿಜ್’ರಿನ ಭಾಗದಲ್ಲಿದ್ದ ಪರದೆಯ ಹಿಂದೆ ಹೊದೆನು. ಮೆಲ್ಲ ಮೆಲ್ಲನೆ ಪ್ರವಾದಿಯವರು ﷺ ಹತ್ತಿರ ಬಂದೆನು, ನನ್ನ ಹಾಗೂ ಪ್ರವಾದಿಯವರು ﷺ ನಡುವೆ ಇದ್ದದ್ದು ಕೇವಲ ಪರದೆ ಮಾತ್ರವಾಗಿತ್ತು. ಪ್ರವಾದಿಯವರ ﷺ ಕುರ್’ಆನ್ ಪಠನೆಯನ್ನು ಶ್ರದ್ಧೆಯಿಂದ ಕೇಳುತಿದ್ದೆನು. ಅದು ನನ್ನನ್ನು ಬಹಳಷ್ಟು ಆಕರ್ಷಣೆ ಗೊಳಿಸಿತು. ಅದನ್ನು ಕೇಳುತ್ತಿದ್ದಾಗ ನಾನರಿಯದೆ ಕಂಬನಿ ಜಾರಿ ಬೀಳುತ್ತಿತ್ತು. ನನ್ನ ಹೃದಯಕ್ಕೆ ಇಸ್ಲಾಮಿನ ಪ್ರಕಾಶವು ಹತ್ತಿ ಬಂದಿತು. ಪ್ರವಾದಿಯವರ ﷺ ನಮಾಝ್ ಮುಗಿಯುವವರೆಗೂ ನಾನಲ್ಲೇ ಕುಳಿತು ನೋಡುತ್ತಿದ್ದೆನು. ಅವರು ನಮಾಝ್ ಮುಗಿಸಿ ಹಿಂತಿರುಗಿ ಹೋಗುವಾಗ, ನಾನು ಕೂಡ ಅವರನ್ನೇ ಹಿಂಬಾಲಿಸಿ ಹೋದೆನು. ದಾರುಲ್ ಅಬ್ಬಾಸ್ ಹಾಗೂ ದಾರುಲ್ ಬಿನ್ ಅಝ್’ಹರ್’ರವರ ಮನೆಯ ನಡುವೆ, ನಾನು ಪ್ರವಾದಿಯವರ ﷺ ಬಳಿ ಬಂದು ತಲುಪಿದೆನು. ನನ್ನನ್ನು ಗುರುತಿಸಿ, ಬಹುಶಃ ತೊಂದರೆ ನೀಡಲು ಬಂದದ್ದು ಆಗಿರಬಹುದು ಎಂದು, ಅಂದುಕೊಂಡು ನನ್ನನ್ನು ಗದರಿಸಲು ಮುಂದಾದರು. ನಂತರ ಓ ಖತ್ತಾಬಿನ ಮಗನೇ ಯಾಕೆ ಈ ರಾತ್ರಿ ಇಲ್ಲಿಗೆ ಬಂದದ್ದು.? ಎಂದು ಕೇಳಿದರು. ಅದಕ್ಕೆ ನಾನು ಅಲ್ಲಾಹನನ್ನೂ, ಅವನ ಪ್ರವಾದಿಯವರನ್ನು ﷺ ಅಂಗೀಕರಿಸಲು ಬಂದಿದ್ದೇನೆ, ಎಂದು ಹೇಳಿದೆನು. ಅದನ್ನು ಕೇಳಿ ಪ್ರವಾದಿಯವರು ﷺ ಅಲ್ಲಾಹನನ್ನು ಸ್ತುತಿಸಿ, ನಿಮಗೆ ಅಲ್ಲಾಹನು ಒಳಿತು ನೀಡಲಿ ಎಂದು ಹೇಳಿ, ನನ್ನ ಎದೆ ಮೇಲೆ ಕೈ ಇಟ್ಟು ಪ್ರಾರ್ಥಿಸಿದರು. ಆಮೇಲೆ ಅವರು ಅಲ್ಲಿಂದ ಮನೆಗೆ ಹೋದರು.

ಈ ಘಟನೆ ಹಿಂದೆ ನಡೆದಿಯಿತು, ಎನ್ನುವ ಕಾರಣಕ್ಕೆ ಈ ಹಿಂದೆ ತಿಳಿಸಿದ ಉಲ್ಲೇಖಕ್ಕೆ ಇದು ವಿರುದ್ಧವಾಗುವುದಿಲ್ಲ. ಕಾರಣ ಈ ಹಿಂದಿನ ಒಂದು ಅನುಭವದ ನಂತರ, ಬಹುಶಃ ಅವರ ಮನಸ್ಸಿನಲ್ಲಿ ಬದಲಾವಣೆ ಬಂದಿರಬಹುದು, ಅಥವಾ ವಶೀಕರಣ ಮಾಡಿಯೂ ಇರಬಹುದು. ಅಷ್ಟೇ ಅಲ್ಲ ಈ ಹಿಂದೆ ಅಬೂಜಹಲ್ ತೋರಿಸಿದ್ದ ಆಮಿಷದ ಆಸೆಗಾಗಿತ್ತು, ಉಮರ್ ಹರಿತವಾದ ಖಡ್ಗ ಹಿಡಿದು ಬಂದಿದ್ದು. ಅಂದಿನ ಕಾಲದಲ್ಲಿದ್ದ ಯಾವುದೇ ಯುವಕನನ್ನು ಮನ ಹೋಲಿಸಲು ಅಷ್ಟು ಆಮಿಷ ಸಾಕಾಗುತ್ತಿತ್ತು. ಇದೆಲ್ಲವನ್ನೂ ಪರಿಗಣಿಸಿ, ಉಮರ್’ರವರ ಎರಡು ಉಲ್ಲೇಖವನ್ನೂ ಒಟ್ಟಿಗೆ ಸೇರಿಸಿ ನಾವು ಹೀಗೆ ಅರ್ಥ ಮಾಡಬಹುದು.

ಉಮರ್’ರವರಿಗೆ ◌ؓ ಇಸ್ಲಾಮಿನ ಮೇಲೆ ಮೂಡಿದ ಒಲವಿನ ಬಗ್ಗೆ ಹೇಳುವುದಾದರೆ, ಅವರ ಮನಸ್ಸಿನಲ್ಲಿ ತಾನಾಗಿಯೇ ಇಸ್ಲಾಮಿನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡಿತ್ತು, ಅದರ ಬಗ್ಗೆ ಅವರೇ ಹೇಳುವ ಕವಿತೆಯೂ ಈ ರೀತಿಯಾಗಿದೆ.

“ನಿಶ್ಚಯವಾಗಿಯೂ ಹೇಳಲೇಬೇಕಾದ ಸ್ತುತಿಗಳನ್ನು ಜಗದೊಡೆಯನೇ ನಿನಗೆ ತಿಳಿಸುವೆನು.
ವಿಸ್ಮಯ ತುಂಬಿದ್ದ ದೂತರ ಸತ್ಯ ವಚನಗಳನ್ನು ಆರಂಭದಲ್ಲೇ ಸುಳ್ಳೆಂದು ಅಂದುಕೊಂಡಿದ್ದೆವು.
ಖತ್ತಾಬಿನ ಮಗಳಿಗೆ ಹೊಡೆದ ನಂತರ, ಸನ್ಮಾರ್ಗವನ್ನು ಸೃಷ್ಟಿಕರ್ತನು ಅನುಗ್ರಹಿಸಿದನು.
ಶತ್ರುಗಳೂ ಕೂಡ ಹೇಳಿದ್ದರು, ಉಮರ್ ಸಾಬಿಯಿಗಳ ದಾರಿಯಲ್ಲಿ ಸೇರಿಕೊಂಡನು ಎಂದು.
ಶ್ರೇಷ್ಠವಾದ ವಚನವನ್ನು ಅವಳು ಓದಿದ ಕಾರಣಕ್ಕೆ ನಾನು ಹೊಡೆದದ್ದು ಬಹಳಷ್ಟು ಬೇಸರ ತರಿಸುತ್ತಿದೆ ಎನಗೆ.
ಅರ್ಶ್’ನ ಒಡೆಯನಾದ ದೇವನಲ್ಲಿ ಕೇಳಿಕೊಂಡಳು ಅವಳು, ಅಹ್’ಮದ್’ರು ಇಂದು ನಮ್ಮ ಜೊತೆಯಲ್ಲಿರುವರು.
ವಾಸ್ತವವನ್ನು ತಿಳಿಸುವ ಸತ್ಯ ಸಂದೇಶವಾಹಕರು, ಎಚ್ಚರಿಕೆ ನೀಡುವ ನಂಬಿಕಸ್ಥ ನಾಯಕ..”

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-87/365

ಇಸ್ಲಾಮ್ ಸ್ವೀಕರಿಸಿದ ನಂತರ ಉಮರಿಗೆ ◌ؓ ಒಂದು ಆಗ್ರಹ ಉಂಟಾಯಿತು, ನಾನು ಇಸ್ಲಾಮ್ ಸ್ವೀಕರಿಸಿದ ವಿಷಯವನ್ನು ಅತೀ ಬಲಶಾಲಿ ವ್ಯಕ್ತಿಯ ಮುಂದೆ ನಿಂತು ಹೇಳಬೇಕು ಎಂದು. ಹಾಗಾಗಿ ಮರುದಿನ ಬೆಳಿಗ್ಗೆ ಅಬೂಜಹಲ್’ನ ಮನೆಗೆ ಹೋಗಿ, ಅವರ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲ ತೆರದ ಅಬೂಜಹಲ್, ಒಳಗೆ ಬಾ ಉಮರ್◌ؓ, ಏನು ಸಮಾಚಾರ ಯಾಕೆ ಬಂದಿದ್ದು.? ಎಂದು ಕೇಳಿದರು, ಉಮರ್ ◌ؓ, ನಾನು ಅಲ್ಲಾಹನನ್ನು ಹಾಗೂ ಅವನ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದೇನೆ. ಅಷ್ಟೇ ಅಲ್ಲ ಅವರಿಗೆ ಅವತರಿಸಿದ ಖುರ್’ನನ್ನೂ ಕೂಡ ಅಂಗೀಕರಿಸಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ಅಬೂಜಹಲ್’ನ ಕೋಪ ನೆತ್ತಿಗೇರಿತು, ನಿನ್ನನ್ನೂ, ನಿನ್ನ ಈ ಆದರ್ಶವನ್ನೂ ದೇವರು ನಾಶಮಾಡಲಿ ಎಂದು ಹೇಳಿ ಕೋಪದಲ್ಲೇ ಬಾಗಿಲು ಹಾಕಿದರು.

ಅಲ್ಲೇ ನಿಂತು ಉಮರ್, ಪುನಃ ಆಲೋಚಿಸ ತೊಡಗಿದರು, ಮಕ್ಕಾದಲ್ಲಿ ಅತೀ ವೇಗವಾಗಿ ಸುದ್ದಿ ಹಬ್ಬಿಸುವುದು ಯಾರು.? ತಕ್ಷಣ ನೆನಪಾಯಿತು, ಅದು ಜಮೀಲ್ ಬಿನ್ ಮಅಮರ್ ಅಲ್ವಾ.? ಹಾಗೆ ಅವರ ಬಳಿ ಹೋಗಿ, ನಿಮಗೆ ಒಂದು ವಿಷಯ ಗೊತ್ತಾ.? ನಾನು ಇಸ್ಲಾಮ್ ಸ್ವೀಕರಿಸಿದ್ದೇನೆ. ನಾನು ಮುಹಮ್ಮದ್ ಪ್ರವಾದಿಯವರನ್ನು ﷺ ಅಂಗೀಕರಿಸಿದ್ದೇನೆ ಎಂದು ಹೇಳಿದರು. ಆದರೆ ಆ ವ್ಯಕ್ತಿ ಅದನ್ನು ಕೇಳಿಯೂ ಕೇಳದಂತೆ ಮುಂದೆ ಹೋದರು. ಉಮರ್ ◌ؓ ಅವರನ್ನು ಹಿಂಬಾಲಿಸುತ್ತಾ ಕಅಬಾಲಯದ ಬಳಿ ನಡೆದರು. ಕಅಬಾದ ಬಳಿ ಖುರೈಷಿಗಳು ಹರಟೆ ಹೊಡಿಯುತ್ತಾ ಕುಳಿತಿದ್ದರು. ಅಲ್ಲಿಗೆ ತಲುಪಿದ ಜಮೀಲ್, ಓ ಖುರೈಷಿಗಳೇ ಖತ್ತಾಬಿನ ಮಗ ಉಮರ್ ◌ؓ ಸಾಬಿಯೀ ಆಗಿದ್ದಾನೆ ಎಂದು ಜೋರಾಗಿ ಕೋಗಿ ಹೇಳಿದರು. ಅವರ ಹಿಂದೆ ನಿಂತಿದ್ದ ಉಮರ್ ◌ؓ, ಅದು ಹಾಗೆ ಅಲ್ಲ ನಾನು ಮುಸ್ಲಿಮಾಗಿದ್ದೇನೆ, ಅಲ್ಲಾಹನಲ್ಲದೆ ಬೇರೆ ಆರಾಧ್ಯನಿಲ್ಲ, ಮುಹಮ್ಮದ್’ರು ﷺ ಅವನ ಪ್ರವಾದಿ ಆಗಿರುವರೆಂದು ನಾನು ಸಾಕ್ಷಿ ವಹಿಸುತ್ತೇನೆ, ಎಂದು ಘೋಷಣೆ ಮಾಡುವ ರೀತಿಯಲ್ಲಿ ಹೇಳಿದರು. ಅದನ್ನು ಕೇಳಿದ್ದೆ ತಡ ಅಲ್ಲಿದ್ದ ಖುರೈಷಿಗಳೆಲ್ಲರೂ ಅವರ ಹತ್ತಿರ ಓಡಿ ಬಂದು, ಬಹಳಷ್ಟು ವಿಮರ್ಶಿಸಿದರು, ಮದ್ಯಾಹ್ನದವರೆಗೆ ಅದು ಮುಂದುವರಿಯಿತು. ಅಷ್ಟೇ ಅಲ್ಲದೆ ಅವರಿಗೆ ಬಹಳಷ್ಟು ಹೊಡೆದರು. ಎಲ್ಲವನ್ನು ಸಹಿಸುತ್ತಾ ಉಮರ್ ◌ؓ, ಅಲ್ಲಾಹನ ಮೇಲಾಣೆ.! ಒಮ್ಮೆ ನಮ್ಮಲ್ಲಿ ಮುನ್ನೂರು ಜನ ವಿಶ್ವಾಸಿಗಳು ದಾಟಿದರೆ, ಖಂಡಿತ ಅಂದು ನಿಮಗೆ ಈ ರೀತಿ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿದರು.

ಅಷ್ಟೊತ್ತಿಗೆ, ಆ ಸ್ಥಳಕ್ಕೆ ಖುರೈಷಿಯಾದ ಒಬ್ಬರು ವಯಸ್ಸಾದ ವ್ಯಕ್ತಿ ಆಗಮಿಸಿ, ಏನು ವಿಷಯ ಎಂದು ಕೇಳಿದರು. ಅದಕ್ಕೆ ಅಲ್ಲಿರುವವರು ಉಮರ್ ◌ؓ ಸಾಬಿಯೀ ಆಗಿದ್ದಾನೆ ಎಂದು ಹೇಳಿದರು. ಅದನ್ನು ಕೇಳಿದ ಆ ವ್ಯಕ್ತಿ, ಛೇ ಇದೆಂಥ ಕಷ್ಟ.! ಒಬ್ಬ ಯುವಕ, ಆತನ ವೆಯ್ಯುಕ್ತಿಕ ವಿಷಯದಲ್ಲಿ ಒಂದು ತೀರ್ಮಾನ ತೆಗಿದಿದ್ದಾನೆ, ಅದಕ್ಕೆ ನೀವೇನು ಮಾಡುತ್ತಿದ್ದೀರ.? ಅವರ ಬನೂ ಅದಿಯ್ಯ್ ಜನಾಂಗದವರು ಸುಮ್ಮನೆ ಕುಳಿತುಕೊಳ್ಳಬಹುದೆಂದು ನೀವು ಅಂದುಕೊಂಡಿದ್ದೀರ.? ಎಂದು ಹೇಳಿದರು. ಅವರು ಅಷ್ಟು ಹೇಳಿದ್ದೆ ತಡ, ಉಳಿದವರೆಲ್ಲಾ ಕ್ಷಣ ಮಾತ್ರದಲ್ಲಿ ಅಲ್ಲಿಂದ ಹೊರಟು ಹೋದರು. ನಂತರದ ದಿನಗಳಲ್ಲಿ, ಈ ಘಟನೆಯನ್ನು ಉದ್ದೇಶಿಸಿ ಉಮರ್’ರವರ ◌ؓ ಮಗ ಅಬ್ದುಲ್ಲಾಹ್ ತನ್ನ ತಂದೆಯಲ್ಲಿ ಕೇಳಿದ್ದರು. ನೀವು ಅಂದು ಇಸ್ಲಾಮ್ ಸ್ವೀಕರಿಸಿದ ಸಂದರ್ಭದಲ್ಲಿ ಯಾರೋ ಒಬ್ಬರು ಬಂದು ನಿಮ್ಮನ್ನು ರಕ್ಷಿಸಿದ್ರು ಅಲ್ವಾ.? ಅವರು ಯಾರು. ಅದಕ್ಕೆ ಉಮರ್ ◌ؓ, ಅದು ಆಸ್ವ್ ಬಿನ್ ವಾಯಿಲ್ ಅಸ್ಸಹ್ಮಿ ಎಂಬ ವ್ಯಕ್ತಿಯಾಗಿದ್ದರು. ಅವರು ಮರಣ ಹೊಂದಿದ್ದು ಬಹು ದೈವ ವಿಶ್ವಾಸಿಯಾಗಿ ಆಗಿತ್ತು ಎಂದು ಹೇಳಿದರು.

ಇಬ್’ನು ಉಮರ್’ರವರಿಂದ ◌ؓ ಇಮಾಮ್ ಬುಖಾರಿಯವರು ◌ؓ ಉಲ್ಲೇಖಿಸಿದ ಮತ್ತೊಂದು ಘಟನೆಯು ಈ ರೀತಿಯಾಗಿದೆ. ಉಮರ್, ಖುರೈಷಿಗಳ ಕೊಲೆ ಬೆದರಿಕೆಯ ಆತಂಕದಲ್ಲಿ ಮನೆಯಲ್ಲೇ ಕೆಲವು ದಿನ ಕಳೆದಿದ್ದರು. ಅವರ ಮನೆಗೆ ಆಸ್ವ್ ಬಿನ್ ವಾಯಿಲ್ ಎನ್ನುವ ವ್ಯಕ್ತಿಯು ಬಂದರು. ಅವರು ಬನೂ ಸಹಮ್ ಜನಾಂಗದ ವ್ಯಕ್ತಿಯಾಗಿದ್ದರು. ಅವರು ಉಮರಿನ ◌ؓ ಬಳಿ ಬಂದು, ಸಮಸ್ಯೆ ಏನೆಂದು ಕೇಳಿದರು. ಅದಕ್ಕೆ ಉಮರ್ ◌ؓ ನಾನು ಮುಸ್ಲಿಮಾದ ಕಾರಣ ನಿಮ್ಮ ಜನತೆಯು ನನಗೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದರು. ತಕ್ಷಣವೇ ಆಸ್ವ್ ನಾನು ಅವರಲ್ಲಿ ಹೇಳುತ್ತೇನೆ, ಆ ನಂತರ ಯಾರೂ ಕೂಡ ನಿಮಗೆ ತೊಂದರೆ ಕೊಡುವುದಿಲ್ಲ, ಎಂದು ಹೇಳಿ ಅಲ್ಲಿಂದ ಹೊರಗೆ ಹೋದರು. ಅಷ್ಟೊತ್ತಿಗೆ ಕೆಲವು ಜನರು ಉಮರಿನ ◌ؓ ಮನೆ ಕಡೆ ಬರುತಿದ್ದರು. ಅದನ್ನು ಕಂಡ ಆಸ್ವ್ ನೀವೆಲ್ಲಿಗೆ ಹೋಗುತ್ತಿದ್ದೀರಿ.? ಎಂದು ಕೇಳಿದರು. ಅಲ್ಲಿದ್ದ ಜನರು, ನಮಗೆ ಉಮರ್ ◌ؓ ಬೇಕು ಎಂದು ಹೇಳಿದಾಗ, ನೀವು ಉಮರನ್ನು ◌ؓ ಯಾವುದೇ ಕಾರಣಕ್ಕೂ ಮುಟ್ಟಲೂ ಸಾಧ್ಯವಿಲ್ಲ ಎಂದು ಆಸ್ವ್ ಹೇಳಿದರು. ಅದನ್ನು ಕೇಳಿದ, ಜನರೆಲ್ಲರೂ ಹಿಂತಿರುಗಿ ಹೋದರು.

ಉಮರ್ ಇಸ್ಲಾಮ್ ಸ್ವೀಕರಿಸಿದ್ದು, ಸತ್ಯ ವಿಶ್ವಾಸಿಗಳಿಗೆ ಬಹಳಷ್ಟು ಸಂತೋಷ ತಂದಿತ್ತು. ಇಬ್’ನು ಮಸ್’ವೂದ್’ರವರು ◌ؓ ಹೇಳುವುದು ಕಾಣಬಹುದು, ಉಮರ್ ◌ؓ ಇಸ್ಲಾಮ್ ಸ್ವೀಕರಿಸುವ ವರೆಗೂ ನಮಗೆ ಕಅಬಾದ ಬಳಿ ಸಾರ್ವಜನಿಕವಾಗಿ ಪ್ರಾರ್ಥಿಸಲು ಸಾಧ್ಯವಾಗುತ್ತಿರಲಿಲ್ಲ. ಇಬ್’ನು ಅಬ್ಬಾಸ್’ರವರು ◌ؓ ಹೇಳುವುದು ಕಾಣಬಹುದು, ಉಮರ್ ◌ؓ ಇಸ್ಲಾಮ್ ಸ್ವೀಕರಿಸಿದ್ದನ್ನು ಕಂಡು ಆಕಾಶವಾಸಿಗಳು ಸಂತೋಷದಿಂದ ನಲಿಯುತ್ತಿದ್ದಾರೆ ಎಂದು ಜಿಬ್’ರೀಲ್ (ಅ) ಬಂದು ಹೇಳಿದ್ದರು.
ಇಬ್’ನು ಉಮರ್ ◌ؓ ಹೇಳುವುದು ಕಾಣಬಹುದು, ಅಬೂಜಹಲ್ ಹಾಗೂ ಉಮರ್ ಇಬ್ಬರಲ್ಲಿ ನಿನ್ನಿಷ್ಟದ ವ್ಯಕ್ತಿಯಿಂದ ಇಸ್ಲಾಮನ್ನು ಶಕ್ತಿಗೊಳಿಸು ಎಂದು ಪ್ರವಾದಿಯವರು ﷺ ಅಲ್ಲಾಹನಲ್ಲಿ ಪ್ರಾರ್ಥನೆ ನಡೆಸಿದ್ದರು. ಅಲ್ಲಾಹನು ಆಯ್ಕೆ ಮಾಡಿದ್ದು ಉಮರ್’ರವರನ್ನು ಆಗಿತ್ತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-88/365

ಯುಟೋಪಿಯಕ್ಕೆ ತಲುಪಿದ ಮುಸ್ಲಿಂಗಳನ್ನು ನೇಗಸ್ ಚಕ್ರವರ್ತಿಯು ಬಹಳ ಆದರದಿಂದ ಸ್ವಾಗತಿಸಿದರು. ಉಮರ್ ◌ؓ ಹಾಗೂ ಹಂಝರವರು ◌ؓ ಇಸ್ಲಾಂ ಸ್ವೀಕರಿಸಿದ್ದು, ಮುಸ್ಲಿಮರಿಗೆ ಬಹಳಷ್ಟು ಸಂತೋಷ ನೀಡಿತ್ತು. ಇತರ ಜನಾಂಗಕ್ಕೂ ಇಸ್ಲಾಮ್ ವ್ಯಾಪಿಸಲು ಆರಂಭವಾಯಿತು. ದಿನಗಳು ಕಳೆದಂತೆ ಹೊಸ ಹೊಸ ತಿರುವುಗಳು ಪಡೆಯುತ್ತಿದ್ದವು, ಇದೆಲ್ಲವು ಖುರೈಷಿಗಳಿಗೆ ಕಾಣಲು ಸಾಧ್ಯವಾಗದೇ ಹೊಸ ಷಡ್ಯಂತ್ರಗಳನ್ನು ರೂಪಿಸಲು ಆರಂಭಿಸಿದರು. ಅದರ ಭಾಗವಾಗಿ ಪ್ರವಾದಿಯವರನ್ನು ﷺ ಖುರೈಷಿ ಅಲ್ಲದ ಹೊರಗಿನ ವ್ಯಕ್ತಿಗಳ ಕೈಯಿಂದ ಕೊಲೆ ಮಾಡಿಸಬೇಕು, ಇದರಿಂದ ಆಂತರಿಕ ಕಲಹ ಆಗುವುದನ್ನುತಪ್ಪಿಸಬಹುದು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ, ಬನೂ ಹಾಷಿಂ ಹಾಗೂ ಬನೂ ಮುತ್ತಲಿಬ್ ವಂಶದ ಜನರು ಖಡಾಖಂಡಿತವಾಗಿ ವಿರೋಧಿಸಿದರು.

ಕೊಲೆ ಮಾಡುವ ತಂತ್ರ ಕೈತಪ್ಪಿದಾಗ, ಬಹಿಷ್ಕಾರ ವಿಧಿಸುವ ನಿರ್ಧಾರಕ್ಕೆ ಖುರೈಷಿಗಳು ಬಂದರು. ಅದಕ್ಕೆ ಅವಶ್ಯಕವಾದ ಬಹಿಷ್ಕಾರ ಒಪ್ಪಂದ ಪತ್ರವನ್ನು ಕೂಡ ತಯಾರು ಮಾಡಿದರು. ಇನ್ನುಮುಂದೆ ಬನೂ ಹಾಷಿಂ ಹಾಗೂ ಬನುಲ್ ಮುತ್ವಲಿಬ್ ವಂಶಗಳಿಂದ ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು, ಅವರಿಂದ ಯಾವುದೇ ವಿವಾಹ ಸಂಬಂಧವನ್ನು ಮಾಡಿಕೊಳ್ಳಬಾರದು, ಅವರಲ್ಲಿ ಯಾವುದೇ ರೀತಿಯ ವಸ್ತುಗಳ ವ್ಯಾಪಾರವೂ ನಡೆಯಬಾರದು, ಅವರಿಗೆ ಯಾವುದೇ ಕನಿಕರ ತೋರಿಸುವುದಾಗಲಿ, ಅಥವಾ ಇತರ ಒಪ್ಪಂದ ಮಾಡುವುದಾಗಲಿ ಯಾವುದೇ ಕಾರಣಕ್ಕೂ ಮಾಡಲೇ ಬಾರದು. ಈ ಬಹಿಷ್ಕಾರ ಮುಹಮ್ಮದ್’ರನ್ನು ﷺ ಕೊಲೆ ಮಾಡಲು ಅನುಮತಿ ನೀಡುವವರೆಗೂ ಮುಂದುವರಿಯಬೇಕು. ಇದಾಗಿತ್ತು ಅವರ ಅಸಹಕಾರ ಒಪ್ಪಂದ, ಅದನ್ನು ಬರೆದು, ಕಅಬಾಲಯಾದ ಒಳಗೆ ಭದ್ರವಾಗಿ ಇಟ್ಟುಕೊಂಡರು. ಈ ಒಪ್ಪಂದವನ್ನು ಬರೆದ ವ್ಯಕ್ತಿಗಳ ಕುರಿತು ಇತಿಹಾಸದಲ್ಲಿ ಹಲವಾರು ಅಭಿಪ್ರಾಯಗಳನ್ನು ಕಾಣಬಹುದು. ಮನ್ಸೂರ್ ಬಿನ್ ಇಕ್’ರಿಮ, ನಳ್’ರ್ ಬಿನ್ ಹಾರಿಸ್, ಬುಗೈಳ್ ಬಿನ್ ಆಮಿರ್, ಹಿಷಾಮ್ ಬಿನ್ ಅಂರ್ ಎಂಬ ಹೆಸರುಗಳನ್ನು ಬೇರೆ ಬೇರೆ ಗ್ರಂಥಗಳಲ್ಲಿ ಹೆಸರಿಸಿದ್ದು ಕಾಣಬಹುದು. ಒಪ್ಪಂದ ಬರೆದ ವ್ಯಕ್ತಿಯ ಕೆಲವೊಂದು ಬೆರಳುಗಳು ಬಲಹೀನವಾಗಿತ್ತು ಎನ್ನುವ ಅಭಿಪ್ರಾಯವೂ ನಮಗೆ ಕಾಣಬಹುದು.

ಹೀಗೆ ಒಪ್ಪಂದ ಪ್ರಕಾರ, ಬನೂ ಹಾಷಿಂ ಹಾಗೂ ಬನೂ ಮುತ್ವಲಿಬ್ ವಂಶವನ್ನು ಶಿಆಬ್ ಅಬೀತ್ವಾಲಿಬ್ ಅಥವಾ ಅಬೂತ್ವಾಲಿಬರ ಕಣಿವೆಯಲ್ಲಿ ಒಂಟಿಯಾಗಿಸಿದರು. ಸತ್ಯ ವಿಶ್ವಾಸಿಗಳು, ಅಲ್ಲದವರೂ ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದರು. ಇರುವ ಅಲ್ಪ ಸ್ವಲ್ಪ ಆಹಾರದಲ್ಲಿ ಹೇಗೋ ದಿನಗಳು ಕಳೆಯಿತು, ಅದೂ ಕೂಡ ಖಾಲಿಯಾದಾಗ ಸಂಪೂರ್ಣವಾಗಿ ಹಸಿವಿಂದ ಕಂಗಾಲಾದರು. ಹಸಿವಿನಿಂದ ವಿಧಿ ಇಲ್ಲದೆ ಕಣಿವೆಯಲ್ಲಿ ಸಿಗುತ್ತಿದ್ದ ಕಾಯಿಗಳನ್ನು, ಎಲೆಗಳನ್ನು ತಿಂದು ದಿನ ಕಳೆಯಬೇಕಾಗಿ ಬಂದಿತು.

ಖುರೈಷಿಗಳು, ಬಹಿಷ್ಕಾರವನ್ನು ಅತೀ ಕ್ರೂರವಾಗಿ ಮುಂದುವರಿಸಿದರು. ಯಾವುದೇ ಕಾರಣಕ್ಕೂ ಆಹಾರ ಧಾನ್ಯಗಳನ್ನು ಕಾಣಿವೆಗಳಿಗೆ ತಲುಪಿದ ರೀತಿಯಲ್ಲಿ ತಡೆಯುತ್ತಿದ್ದರು. ಹಕೀಮ್ ಬಿನ್ ಹಿಝಾಮ್ ತನ್ನ ಅತ್ತೆ ಖದೀಜರಿಗಾಗಿ ◌ؓ ಕೊಂಡುಹೋಗುತ್ತಿದ್ದ ಧಾನ್ಯವನ್ನು ಅಬೂಜಹಲ್ ದಾರಿಯಲ್ಲೇ ತಡೆ ನಿಲ್ಲಿಸಿ, ಇನ್ನು ಮುಂದೆ ಹೀಗೆ ಮುಂದುವರಿಸಿದರೆ ಸಾರ್ವಜನಿಕವಾಗಿಯೇ ಅವಮಾನ ಮಾಡಲಾಗುವುದು ಎಂದು ಹೆದರಿಸಿದರು. ಈ ದೃಶ್ಯವನ್ನು ಕಂಡ ಅಬುಲ್ ಬಕ್ತರಿ, ಅವರ ಅತ್ತೆಗೆ ಅವರು ಆಹಾರ ಧಾನ್ಯಗಳನ್ನು ಕೊಂಡುಹೋಗುತ್ತಿದ್ದದ್ದು ಅಲ್ಲವೇ.? ಎಂದು ಹೇಳಿದಾಗ, ಅಬೂಜಹಲ್ ಅವರ ಮಾತನ್ನು ಕೇಳಿಯೂ ಕೇಳದಂತೆ ನಟಿಸಿದರು. ಅವರ ನಡುವೆ ಮಾತಿನ ವಾಗ್ವಾದವೇ ನಡೆಯಿತು, ಕೊನೆಗೆ ಅಬುಲ್ ಬಕ್ತಾರಿ ಕೋಪದಿಂದ ಒಂಟೆಯ ಎಲುಬಿನಿಂದ ಬಲವಾಗಿ ಅಬೂಜಹಲಿಗೆ ಹೊಡೆದರು. ಈ ವಿಷಯವು ಪ್ರವಾದಿಯವರಿಗೆ ﷺ ತಿಳಿಯುವುದು ಖುರೈಷಿಗಳಿಗೆ ಮುಜುಗರ ತರುವ ವಿಷಯವಾಗಿತ್ತು. ಆದರೆ ಈ ದೃಶ್ಯವನ್ನು ಈಗಾಗಲೇ ಹಂಝರವರು ◌ؓ ನೋಡುತ್ತಿದ್ದರು.

ಬನೂ ಹಾಶಿಮ್ ವಂಶಸ್ಥನಾಗಿದ್ದ, ಅಬೂಲಹಬ್ ಕೂಡ ಪ್ರಾರಂಭದಲ್ಲಿ ಕಾಣಿವೆಯಲ್ಲೇ ವಾಸಿಸುತ್ತಿದ್ದರು. ಆದರೆ ಅವರು ಶತ್ರುಗಳ ಜೊತೆಯಲ್ಲಿ ಕೈ ಜೋಡಿಸಿ, ಮುಸ್ಲಿಮರ ವಿರುದ್ಧ ನಿಂತರು. ಹೀಗಿರುವಾಗ ಉತ್’ಬರ ಮಗಳಾದ ಹಿಂದ್’ರನ್ನು ಭೇಟಿಯಾಗಿ, ಲಾತ ಉಝ್ಝದೇವರಿಗೆ ನಾವು ಸಹಾಯ ಮಾಡಬೇಕಲ್ಲವೇ.? ಹಾಗಾಗಿ ಅವರನ್ನು ವಿರೋಧಿಸಿದವರನ್ನು ನಾವು ಕೂಡ ದೂರ ಇಟ್ಟೆವು ಎಂದು ಹೇಳಿದರು.
ಹೀಗೆ ಮೂರು ವರ್ಷದ ವರೆಗೆ ಈ ಬಹಿಷ್ಕಾರ ಮುಂದುವರಿಯಿತು. ಈ ಸಂದರ್ಭದಲ್ಲಿಯೂ ಅಬೂತ್ವಾಲಿಬ್ ಮಾತ್ರ ಪ್ರವಾದಿಯವರಿಗೆ ﷺ ನೇರವಾಗಿಯೇ ನಿಂತರು. ಎಲ್ಲಾ ರಾತ್ರಿಗಳಲ್ಲೂ ಪ್ರವಾದಿಯವರು ﷺ ನಿದ್ರೆ ಮಾಡಲು ಹೋಗುವ ಸಂದರ್ಭದಲ್ಲಿ, ಪ್ರವಾದಿಯವರ ﷺ ಬಳಿ ಹೋಗಿ ಅಬೂತ್ವಾಲಿಬರ ಮಕ್ಕಳಲ್ಲಿ ಒಬ್ಬರನ್ನು ಅಲ್ಲಿ ಮಲಗಿಸಿ, ಪ್ರವಾದಿಯರನ್ನು ﷺ ಬೇರೆ ಕಡೆ ಮಲಗಿಸುತ್ತಿದ್ದರು. ಹೀಗೆ ಹಲವಾರು ರೀತಿಯಲ್ಲಿ ಶತ್ರುಗಳ ನೆರಳು ಕೂಡ ತಾಗದ ಹಾಗೆ ಕಾಯುತ್ತಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-89/365

ಕಣಿವೆಯಲ್ಲಿ ದಿನ ನಿತ್ಯದ ಜೀವನವು ಬಹಳ ಕಷ್ಟಕರವಾಗಿತ್ತು, ಆದರೂ ಒಬ್ಬರೇ ಒಬ್ಬ ಸತ್ಯ ವಿಶ್ವಾಸಿಯೂ ಕೂಡ ಹಿಂತಿರುಗುವ ಆಲೋಚನೆಯೂ ಮಾಡಿರಲಿಲ್ಲ. ಎಲ್ಲವನ್ನೂ ತಾಳ್ಮೆಯಿಂದಲೇ ಸಹಿಸಿಕೊಂಡರು. ಹೀಗಿರುವಾಗ ಒಂದು ದಿನ ಪ್ರವಾದಿಯವರು ﷺ, ಅಬೂತ್ವಾಲಿಬರನ್ನು ಕರೆದು, ಖುರೈಷಿಗಳು ನಮ್ಮ ವಿರುದ್ಧವಾಗಿ ಬರೆದಿದ್ದ ಒಪ್ಪಂದ ಪತ್ರವನ್ನು ಗೆದ್ದಲು ತಿಂದಿರುತ್ತದೆ. ಅಲ್ಲಾಹನ ಹೆಸರು ಬಿಟ್ಟು ಬಾಕಿ ಇರುವ ಎಲ್ಲಾ ಭಾಗವು ನಾಶವಾಗಿದೆ. ಎಂದು ಹೇಳಿದಾಗ, ಇದು ನಿಮಗೆ ಹೇಗೆ ಗೊತ್ತಾಯಿತು.? ಈ ವಿಷಯವನ್ನು ನಿಮಗೆ ಅಲ್ಲಾಹನು ತಿಳಿಸಿದ್ದ.? ಎಂದು ಕೇಳಿದರು. ಪ್ರವಾದಿಯವರು ﷺ ಹೌದು ಎಂದು ಉತ್ತರಿಸಿದರು, ಅದಕ್ಕೆ ಅಬೂತ್ವಾಲಿಬರು ನಿಮ್ಮನ್ನು ವಿರೋಧಿಸಲು ಯಾರಿಗಾದರೂ ಸಾಧ್ಯವಿದೆಯೇ ಎಂದು ಹೇಳಿದರು.

ಅಬೂತ್ವಾಲಿಬ್ ಒಂದು ಗುಂಪಿನೊಂದಿಗೆ ಖುರೈಷಿಗಳ ಬಳಿ ತೆರಳಿದರು. ಅದನ್ನು ಕಂಡ ಖುರೈಷಿಗಳು, ಬಹುಶಃ ಜನರು ಅಸಹಾಯಕಯಿಂದ ಮುಹಮ್ಮದ್’ರನ್ನು ﷺ ಖುರೈಷಿಗಳಿಗೆ ಬಿಟ್ಟು ಕೊಡಲು ತೀರ್ಮಾನಿಸಿ, ಇಲ್ಲಿಗೆ ಬಂದಿರಬೇಕು ಎಂದು ಅಂದುಕೊಂಡರು. ಅಬೂತ್ವಾಲಿಬ್ ಮಾತುಕತೆ ಆರಂಭಿಸಿ, ನಮ್ಮ ನಡುವೆ ನಡೆದದ್ದೆಲ್ಲಾ ನಡೆಯಿತು. ಇನ್ನು ಅದರ ಬಗ್ಗೆ ಏನು ಹೇಳುವುದಿಲ್ಲ, ನಮ್ಮ ವಿರುದ್ಧ ಬರೆದ ಒಪ್ಪಂದ ಪತ್ರವನ್ನು ಒಮ್ಮೆ ತೆಗಿಯಿರಿ. ನಮ್ಮ ನಡುವೆ ಇರುವ ಎಲ್ಲಾ ಸಮಸ್ಯೆಗಳಿಗೆ ಏನಾದರೂ ಪರಿಹಾರ ಹುಡುಕೋಣ ಎಂದು ಹೇಳಿದರು. ಗೆದ್ದಲು ತಿಂದಿದ್ದ ವಿಷಯವನ್ನು ತಿಳಿಸಿದರೆ ಏನಾದ್ರು ಕುತಂತ್ರ ಬಳಸಿ ಪರ್ಯಾಯ ವ್ಯವಸ್ಥೆ ಮಾಡಿದರೆ ಎಂದು ಅದನ್ನು ಹೇಳದೆ ಮುಚ್ಚಿಟ್ಟಿದ್ದರು.

ಖುರೈಷಿಗಳು ಕಅಬಾಲಯದ ಒಳಗಿನಿಂದ ಒಪ್ಪಂದ ಪತ್ರದ ಪಟ್ಟಿಗೆಯನ್ನೇ ಸಭೆಯ ಮುಂದೆ ತಂದು ನಿಲ್ಲಿಸಿ, ಮಾತುಕತೆ ಆರಂಭಿಸಿದರು. ನೀವು ಹೊಸ ವಿಶ್ವಾಸದಿಂದ ಹಿಂತಿರುಗಿ ಬರುವ ಸಮಯವಾಗಿದೆ ಇದು ಎಂದು ಹೇಳಿದಾಗ, ಅಬೂತ್ವಾಲಿಬ್ ಮಾತು ಮುಂದುವರಿಸುತ್ತಾ, ನಾನು ಇಲ್ಲಿ ನಮ್ಮೆಡೆಯಲ್ಲಿ ಮಧ್ಯಸ್ಥಿಕೆ ವಹಿಸುವ ಉದ್ದೇಶದಿಂದಾಗಿದೆ ಬಂದದ್ದು. ಮುಹಮ್ಮದ್ ﷺ ಸುಳ್ಳು ಹೇಳದ ವ್ಯಕ್ತಿ ಅಲ್ಲವೇ.? ಅವರು ಹೇಳುವುದು ಏನೆಂದರೆ.? ನೀವು ಅವರುಗಳ ವಿರುದ್ಧವಾಗಿ ಬರೆದ ಒಪ್ಪಂದ ಪತ್ರದಲ್ಲಿ ಅಲ್ಲಾಹು ಎನ್ನುವ ಹೆಸರು ಬಿಟ್ಟು ಬಾಕಿ ಎಲ್ಲವೂ ಗೆದ್ದಲು ತಿಂದಿರುತ್ತದೆ. ಮುಹಮ್ಮದ್ ﷺ ಹೇಳಿದ ಈ ಮಾತು ಸತ್ಯವಾಗಿದ್ದಲ್ಲಿ, ಖಂಡಿತ ನಾವು ಮುಹಮ್ಮದ್’ರನ್ನು ﷺ ಬಿಟ್ಟುಕೊಡುವುದಿಲ್ಲ. ಇನ್ನು ಅವರು ಹೇಳಿದ್ದು ಸುಳ್ಳಾಗಿದ್ದಲ್ಲಿ ನಾವು ನಿಮಗೆ, ಅವರನ್ನು ಬಿಟ್ಟು ಕೊಡುತ್ತೇವೆ ಎಂದು ಹೇಳಿದಾಗ, ಅವರು ಅದಕ್ಕೆ ಸಮ್ಮತಿಸಿದರು. ಮೂರು ವರ್ಷಗಳ ಹಿಂದೆ ಬರೆದು, ಕಅಬಾಲಯಾದ ಒಳಗೆ ಅಡಗಿಸಿಟ್ಟ ಒಪ್ಪಂದ ಪತ್ರವನ್ನು ಪ್ರವಾದಿಯವರಿಗೆ ﷺ ತಿಳಿಯಲು ಯಾವುದೇ ದಾರಿ ಇಲ್ಲ ಎಂದು, ಬಾರಿ ಆವೇಶದಿಂದ ಪೆಟ್ಟಿಗೆಯನ್ನು ತೆರೆದರು. ಏನಾದ್ಭುತ.! ಪ್ರವಾದಿಯವರು ﷺ ಹೇಳಿದ ಹಾಗೆ, ಅಬೂತ್ವಾಲಿಬ್ ಹೇಳಿದ ವಿಷಯವು ಸತ್ಯವಾಗಿ ನಡೆದಿತ್ತು.
ವಾಸ್ತವದಲ್ಲಿ ಇಷ್ಟು ಸಾಕಿತ್ತು ಬುದ್ದಿವಂತರಿಗೆ ಅರ್ಥ ಮಾಡಿಕೊಳ್ಳಲು, ಆದರೆ ಕತ್ತಲ ಮರೆಯಲ್ಲಿ ಮುಲುಗಿದ್ದ ಆ ಅಜ್ಞಾನಿಗಳಿಗೆ ಇದು ಅರ್ಥವಾಗಲಿಲ್ಲ. ಅವರು, ಇದು ನಿಮ್ಮ ತಮ್ಮನ ಮಗನ ವಾಮಾಚಾರವಾಗಿದೆ ಎಂದು ಹೊಸ ಆರೋಪವನ್ನು ಹೊರಿಸಿದರು.

ಅದಕ್ಕೆ ತಕ್ಷಣವೇ, ಅಬೂತ್ವಾಲಿಬ್ ಸತ್ಯಾಸತ್ಯತೆ ಎಲ್ಲವೂ ಸ್ಪಷ್ಟವಾಗಿ ತಿಳಿದನಂತರವೂ ನೀವು ಯಾವ ಆಧಾರದಲ್ಲಾಗಿದೆ ವಿರೋಧಿಸುತ್ತಿರುವುದು.? ನಿಜವಾಗಿಯೂ ನೀವೆ ಅಲ್ವಾ.? ಅನ್ಯಾಯ ಅಕ್ರಮಾ ಮಾಡುತ್ತಿರುವುದು ಎಂದು ಕೇಳಿದರು. ನಂತರ ಅಬೂತ್ವಾಲಿಬ್ ಹಾಗೂ ಜೊತೆಯಲ್ಲಿರುವ ಜನರೆಲ್ಲರೂ ಸೇರಿ ಕಅಬಾಲಯದ ಒಳಗೆ ಹೋಗಿ “ಅಲ್ಲಾಹನೆ.. ನಮ್ಮನ್ನು ಬಹಿಷ್ಕರಿಸಿ, ಬಹಳಷ್ಟು ಹಿಂಸೆಗಳನ್ನು ನೀಡಿದವರ ವಿರುದ್ಧ ನಮಗೆ ನೀನು ಸಹಾಯ ನೀಡು” ಎಂದು ಪ್ರಾರ್ಥನೆ ನಡೆಸಿ ಅಲ್ಲಿಂದ ಪುನಃ ಕಣಿವೆಗೆ ಹೊರಟರು.

ಕಠಿಣವಾದ ಬಹಿಷ್ಕಾರದ ದಿನಗಳು ಕೊನೆಗೊಂಡಿತು. ಆದರೆ ಸಮಸ್ಯೆಗಳು ಅವರನ್ನು ಕಾಡುತ್ತಲೇ ಇತ್ತು.
ಇದರ ನಡುವೆ ಯುಟೋಪಿಯಕ್ಕೆ ತೆರಳಿದ್ದ ಮುಸ್ಲಿಮರಿಗೆ, ಮಕ್ಕಾದ ಪರಿಸ್ಥಿತಿಯು ಈಗ ಶಾಂತವಾಗಿದೆ, ಕೆಲವು ಗಣ್ಯ ವ್ಯಕ್ತಿಗಳು ಇಸ್ಲಾಂ ಸ್ವೀಕರಿಸಿದ್ದಾರೆ, ಎನ್ನುವ ವಾರ್ತೆ ಸಿಕ್ಕಿದಾಗ ಕೆಲವು ಜನರು ಮಕ್ಕಾ ನಗರಕ್ಕೆ ಹಿಂತಿರುಗಿ ಬಂದರು. ಊರಿಗೆ ತಲುಪಲು ಒಂದು ಗಂಟೆಯ ದೂರವೇ ಇದ್ದದ್ದು, ಅಲ್ಲಿ ಕಿನಾನ ಜನಾಂಗದ ಯಾತ್ರಿಕರನ್ನು ಭೇಟಿಯಾದರು. ಅವರಲ್ಲಿ ಮಕ್ಕಾದ ಸದ್ಯದ ಪರಿಸ್ಥಿತಿಯ ಕುರಿತು ಕೇಳಿದಾಗ, ಖುರೈಷಿಗಳು ಈಗಲೂ ಕೂಡ ಅದೇ ರೀತಿ ಕ್ರೂರವಾಗಿಯೇ ವರ್ತಿಸುತ್ತಿದ್ದಾರೆ, ಮಕ್ಕಾದ ವಿಶ್ವಾಸಿಗಳ ಜೀವನವು ಬಹಳಷ್ಟು ಕಷ್ಟಕರವಾಗಿದೆ ಎನ್ನುವ ನಿಜಾಂಶ ಮಕ್ಕಾದ ಬಳಿ ಅವರಿಗೆ ತಿಳಿದದ್ದು ಬಹಳಷ್ಟು ಬೇಸರ ತಂದಿತು. ಹೀಗೆ ಅವರಲ್ಲಿ ಕೆಲವರು, ಪರಿಚಯದವರ ಆಶ್ರಯ ಪಡೆದುಕೊಂಡರೆ, ಇನ್ನೂ ಕೆಲವರು ಗುಟ್ಟಾಗಿ ಅವರ ಸಂಬಂಧಿಕರ ಮನೆಗೆ ಹೊರಟರು. ಆದರೆ ಇಬ್’ನು ಮಸ್’ವೂದ್’ರವರು ◌ؓ ಮಾತ್ರ ಯುಟೋಪಿಯಕ್ಕೆ ವಾಪಸ್ಸು ಮರಳಿ ಹೋದರು. ಉಸ್ಮಾನ್ ಬಿನ್ ಮಳ್’ಗೂನ್’ರವರು ◌ؓ ವಲೀದ್ ಬಿನ್ ಮುಗೀರರ ಸಹಾಯದಿಂದ ಮಕ್ಕಾದಲ್ಲೇ ಉಳಿದುಕೊಂಡರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-90/365

ಖುರೈಷಿಗಳು ಇನ್ನೊಬ್ಬರು ಆಶ್ರಯ ನೀಡಿದ ವ್ಯಕ್ತಿಗಳಿಗೆ ತೊಂದರೆ ಕೊಡುತ್ತಿರಲಿಲ್ಲ. ಹಾಗಾಗಿ ಉಸ್ಮಾನ್ ಬಿನ್ ಮಳ್’ಗೂನ್ ◌ؓ ಯಾರ ಭಯವಿಲ್ಲದೆ ಓಡಾಡುತ್ತಿದ್ದರು. ಕೆಲವು ದಿನಗಳ ಬಳಿಕ ಅವರ ಮನಸ್ಸಿನಲ್ಲಿ ಅದೊಂದು ಬೇಸರವಾಗಿ ಕಂಡಿತು. ಕಾರಣ ನನ್ನ ಇತರ ಸ್ವಾಹಾಬಿ ಗೆಳೆಯರು ಇಲ್ಲಿ ತೊಂದರೆ ಅನುಭವಿಸುವಾಗ ನಾನು ಹೇಗೆ ಇನ್ನೊಬ್ಬರ ಆಶ್ರಯದಲ್ಲಿ ಸಂತೋಷದಿಂದ ತಿರುಗಾಡಲಿ. ಎಂದು ಅಂದುಕೊಂಡು, ಅವರು ನೇರವಾಗಿ ವಲೀದ್’ನ ಬಳಿ ತೆರಳಿ, ನಾನು ನಿಮ್ಮ ಆಶ್ರಯದಿಂದ ಹಿಂದೆ ಸರಿಯುತ್ತಿದ್ದೇನೆ ಎಂದು ಹೇಳಿದಾಗ, ವಲೀದ್ ಮಗನೇ ಯಾಕೆ ಈ ತೀರ್ಮಾನ ಮಾಡುತ್ತಿದ್ದೀಯ.? ಯಾರಾದರೂ ನಿನಗೆ ತೊಂದರೆ ನೀಡಿದರೆ.? ಎಂದು ಕೇಳಿದರು. ಅದಕ್ಕೆ ಉಸ್ಮಾನ್, ◌ؓ ನಾನು ಇನ್ನುಮುಂದೆ ಅಲ್ಲಾಹನ ಆಶ್ರಯವನ್ನು ಬಯಸುತ್ತಿದ್ದೇನೆ. ಹಾಗಾಗಿ ನೀವು ನನಗೆ ಆಶ್ರಯ ನೀಡಿದ್ದು ಘೋಷಣೆ ಮಾಡಿದ ಹಾಗೆ, ನಿಮ್ಮ ಆಶ್ರಯದಿಂದ ಹಿಂದೆ ಸರಿದದ್ದನ್ನು ಕೂಡ ಘೋಷಣೆ ಮಾಡಿರಿ ಎಂದು ಹೇಳಿದರು.

ಅವರಿಬ್ಬರೂ ಮಸ್ಜಿದ್’ಗೆ ತಲುಪಿ, ನಾನು ಉಸ್ಮಾನ್ ಬಿನ್ ಮಳ್’ಗೂನ್’ರವರಿಗೆ ◌ؓ ನೀಡುತ್ತಿದ್ದ ಆಶ್ರಯದಿಂದ ಹಿಂದೆ ಸರಿಯಲು ಅವರೇ ಆಗ್ರಹಿಸುತ್ತಿದ್ದಾರೆ, ಹಾಗಾಗಿ ಇವತ್ತಿನಿಂದ ನಾನು ಅವರಿಗೆ ಆಶ್ರಯ ನೀಡಿತ್ತಿಲ್ಲ ಎಂದು ಜೋರಾಗಿ ಹೇಳಿದರು. ತಕ್ಷಣವೇ ಉಸ್ಮಾನ್ ◌ؓ ಕೂಡ, ಹೌದು ವಲೀದ್ ಹೇಳಿದ್ದು ಸರಿ, ಅವರು ನನ್ನನ್ನು ಅವರ ಆಶ್ರಯದಲ್ಲಿರುವಾಗ ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ನಾನೇ ಖುದ್ದಾಗಿ ಅವರ ಆಶ್ರಯದಿಂದ ಹಿಂದೆ ಸರಿಯುತ್ತಿದ್ದೇನೆ, ನಾನು ಇನ್ನುಮುಂದೆ ಅಲ್ಲಾಹುವಿನ ಆಶ್ರಯವನ್ನು ಬಯಸುತ್ತೇನೆ ಎಂದು ಹೇಳುತ್ತಾ ಖುರೈಷಿಗಳ ಸಭೆಯಿಂದ ಹೊರ ನಡೆದರು.

ಅದನ್ನು ನೋಡುತ್ತಾ ನಿಂತಿದ್ದ ವಲೀದ್ ತಕ್ಷಣವೇ ಈ ರೀತಿ ಹಾಡಿದರು. “ಅಲಾ ಕುಲ್ಲು ಶೈಈನ್…”
“ಅಲ್ಲಾಹು ಅಲ್ಲದೆ ಬೇರೆ ಎಲ್ಲವು ನಿರಾರ್ಥಕ” ಎಂದು ಹೇಳಿದಾಗ, ಉಸ್ಮಾನ್ ◌ؓ ಅದುವೇ ಸತ್ಯ! ಎಂದು ಹೇಳಿದರು.
ಅದಕ್ಕೆ ವಲೀದ್ “ವ ಕುಲ್ಲು ನಈಮಿನ್…” ಎಲ್ಲಾ ಅನುಗ್ರಹವು ನಶಿಸಲ್ಪಡುತ್ತದೆ” ಎಂದು ಹೇಳಿದಾಗ, ತಕ್ಷಣವೇ ಉಸ್ಮಾನ್ ◌ؓ ಇಲ್ಲ “ಸ್ವರ್ಗದ ಅನುಗ್ರಹ ಯಾವತ್ತೂ ನಶಿಸಿ ಹೋಗುವುದಿಲ್ಲ..” ಎಂದು ಹಾಡಿದರು.

ಲಬೀದ್ ಮಾತು ಮುಂದುವರಿಸುತ್ತಾ, ಇಷ್ಟು ದಿನ ಉಸ್ಮಾನ್ ◌ؓ ವಲೀದ್’ನ ಸಂರಕ್ಷಣೆಯಲ್ಲಿ ಇದ್ದರು. ಆದರೆ ಇನ್ನುಮುಂದೆ ಅವರಿಗೆ ಏನಾದರೂ ತೊಂದರೆ ಆಗಬಹುದೇ.? ಎಂದು ಕೇಳಿದಾಗ, ತಕ್ಷಣವೇ ಖುರೈಷಿಗಳಲ್ಲಿ ಒಬ್ಬ ವ್ಯಕ್ತಿ ಎಂದು ನಿಂತು, ನಮ್ಮ ಧರ್ಮವನ್ನು ಬಿಟ್ಟು ಹೋದವರನ್ನು ನಾವೇ ಹಾಗೆ ಅಲ್ವಾ.? ಮಾಡುತ್ತಿದ್ದದ್ದು ಎಂದು ಹೇಳಿದರು. ನಂತರ ಆ ವ್ಯಕ್ತಿ ಹಾಗೂ ಉಸ್ಮಾನ್’ರ ◌ؓ ನಡುವೆ ವಾಗ್ವಾದ ನಡೆದು, ಆ ವ್ಯಕ್ತಿ ಉಸ್ಮಾನ್’ರ ಮುಖಕ್ಕೆ ಹೊಡೆದಾಗ, ಅವರು ಕಣ್ಣಿನ ಭಾಗವು ಊದುಕೊಂಡಿತು. ಅದನ್ನು ಕಂಡ ವಲೀದ್, ನೀವು ಈ ನಿಮಿಷದ ತನಕ ನನ್ನ ಆಶ್ರಯದಲ್ಲಿ ಎಷ್ಟು ಸುರಕ್ಷಿತವಾಗಿ ಇದ್ದಿರಿ ಅಲ್ವಾ.? ನೀವೇ ಅಲ್ವಾ ಅದನ್ನ ಬೇಡ ಅಂತ ಹೇಳಿದ್ದು.? ಎಂದು ಹೇಳಿದರು. ಅದಕ್ಕೆ ಉಸ್ಮಾನ್, ನನ್ನ ಇನ್ನೊಂದು ಕಣ್ಣು ಕೂಡ ಈ ರೀತಿಯಾದರೂ ನನಗೆ ಬೇಸರವಿಲ್ಲ, ಕಾರಣ ನಾನು ಆಶ್ರಯ ಆಗ್ರಹಿಸಿದ ಅಲ್ಲಾಹನು ಸರ್ವಶಕ್ತನಾಗಿರುವನು ಎಂದು ಹೇಳಿದರು. ಅದನ್ನು ಕೇಳಿದ ವಲೀದ್, ನೀವು ಒಪ್ಪುದಾದರೆ ನಾನು ಇನ್ನು ಮುಂದೆಯೂ ನಿಮಗೆ ಆಶ್ರಯ ನೀಡುತ್ತೇನೆ ಎಂದು ಹೇಳಿದರು. ಅದಕ್ಕೆ ಉಸ್ಮಾನ್ ಬೇಡ ಎಂದು ಹೇಳಿದರು.

ಅಬೂಸಲಮಃ’ರಿಗೆ ◌ؓ ಅಬೂತ್ವಾಲಿಬ್ ಆಶ್ರಯ ನೀಡುದಾಗಿ ಘೋಷಣೆ ಮಾಡಿದರು. ಅದನ್ನು ನೋಡುತ್ತಿದ್ದ ಬನೂಮಖ್’ಸೂಮ್ ಜನಾಂಗದ ವ್ಯಕ್ತಿಯೊಬ್ಬರು, ಅಬೂತ್ವಾಲಿಬರ ಬಳಿ ಬಂದು, ನೀವು ನಿಮ್ಮ ಸಹೋದರನ ಮಗನಾದ ಮುಹಮ್ಮದ್’ರನ್ನು ﷺ ತಡೆದ ಹಾಗೆ, ಯಾಕೆ ಅಬೂಸಲಮಃರನ್ನು ತಡೆಯಲಿಲ್ಲ ಎಂದು ಕೇಳಿದಾಗ, ಅಬೂತ್ವಾಲಿಬ್, ಅವರು ನನ್ನ ಸಹೋದರಿಯ ಮಗನಾಗಿದ್ದಾನೆ, ಅವರು ನನ್ನ ಬಳಿ ಬಂದು ಆಶ್ರಯ ಕೇಳಿದಾಗ, ಹೇಗೆ ನನಗೆ ನೀಡದೆ ಇರಲು ಸಾಧ್ಯ.? ನಾನು ನನ್ನ ಸಹೋದರನ ಮಗನನ್ನು ತಡೆದಿದ್ದರೆ, ಇವರನ್ನು ಕೂಡ ತಡೆಯುತ್ತಿದ್ದೆ, ಆದರೆ ನಾನು ಯಾರನ್ನು ಕೂಡ ತಡೆಯಲಿಲ್ಲ ಎಂದು ಹೇಳಿದರು. ಈ ದೃಶ್ಯವನ್ನು ನೋಡುತ್ತಿದ್ದ ಅಬೂಲಹಬ್ ಬಂದು, ಈ ವಯಸ್ಸಾದ ವ್ಯಕ್ತಿಯನ್ನು (ಅಬೂತ್ವಾಲಿಬ್) ಯಾಕೆ ಯಾವಾಗಲೂ ಜನರ ಮದ್ಯೆಯೆ ನೀವುಗಳು ಪ್ರಶ್ನೆ ಮಾಡುತ್ತೀರಿ.? ನಾನು ಅವರ ಜೊತೆಯಲ್ಲಿ ನಿಂತು, ಅವರ ಉದ್ದೇಶ ಪೂರ್ತಿಯಾಗಿಸಲು ಸಹಾಯ ಮಾಡುತ್ತೇನೆ ಎಂದು ಹೇಳಿದಾಗ, ಬನೂ ಮಖ್’ಸೂಮ್ ಜನಾಂಗದ ವ್ಯಕ್ತಿ, ಇಲ್ಲ ನಿಮಗೆ ಇಷ್ಟವಿಲ್ಲದ್ದು ಏನು ನಾವು ಯಾವತ್ತೂ ಮಾಡುದಿಲ್ಲ, ಎಂದು ಹೇಳಿ ಅಬೂತ್ವಲೀಬನ್ನು ಬಿಟ್ಟು ಅವರು ಹೋದರು. ಅಬೂಲಹಬಿನ ಈ ಮಧ್ಯಸ್ಥಿಕೆ ಅಬೂತ್ವಾಲಿಬಿಗೆ ಬಹಳಷ್ಟು ಸಂತೋಷ ನೀಡಿತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Leave a Reply