The biography of Prophet Muhammad – Month 4

Admin September 24, 2022 No Comments

The biography of Prophet Muhammad – Month 4

Mahabba Campaign Part-91/365

ಮಕ್ಕಾದಲ್ಲಿ ನಡೆಯುತ್ತಿದ್ದ ಸಮಸ್ಯೆ ಹಾಗೂ ಯುಟೋಪಿಯದಿಂದ ಹಿಂತಿರುಗಿ ಬಂದವರ ದುಃಖಗಳನ್ನು ಕಂಡು ಪ್ರವಾದಿಯವರು ﷺ ಬಹಳಷ್ಟು ಬೇಸರ ಪಟ್ಟಿದ್ದರು. ಹಾಗಾಗಿ ಸಧ್ಯಕ್ಕೆ ಏನಾದರೂ ಒಂದು ಪರಿಹಾರ ಹುಡುಕಲೇ ಬೇಕೆಂದು ಆಲೋಚಿಸಿ, ಹೃದಯವಂತರಾದ ನೇಗಸ್ ರಾಜರ ಬಳಿಯೇ ಮತ್ತೊಂದು ಬಾರಿಯೂ ಕೂಡ ವಿಶ್ವಾಸಿಗಳನ್ನು ಕಳುಹಿಸುವ ತೀರ್ಮಾನಕ್ಕೆ ಬಂದರು. ಹಾಗಾಗಿ ಪುನಃ ಮತ್ತೊಂದು ಸಂಘ ಯೋಟೋಪಿಯ ( ಹಬ್’ಶ) ನಗರಕ್ಕೆ ಯಾತ್ರೆ ಹೊರಡಲು ಸಿದ್ಧರಾದರು. ಎಂಬತ್ಮೂರು ಪುರುಷರು ಹಾಗೂ ಹದಿಮೂರು ಮಹಿಳೆಯರು ಈ ಗುಂಪಿನಲ್ಲಿ ಇದ್ದರು. ಪ್ರವಾದಿಯವರ ﷺ ಅಳಿಯನಾದ ಉಸ್ಮಾನ್’ರವರು ◌ؓ ಪ್ರವಾದಿಯವರ ﷺ ಬಳಿ ಬಂದು, ನಾವು ಕಳೆದ ಬಾರಿ ಹೋಗಿದ್ದ ಯಾತ್ರೆಯಲ್ಲಿಯೂ ಇದ್ದೆವು, ಈಗ ಪುನಃ ನಾವು ಯಾತ್ರೆ ಹೋಗುತ್ತಿದ್ದೇವೆ. ಆದರೆ ನೀವು ಮಾತ್ರ ಇಲ್ಲಿಯೇ ನಿಂತಿದ್ದೀರಿ ಅಲ್ವಾ.? ಎಂದು ಹೇಳಿದಾಗ, ಪ್ರವಾದಿಯವರು ﷺ, ನೀವು ಯಾತ್ರೆ ಮಾಡುತ್ತಿರುವುದು ಅಲ್ಲಾಹನಿಗಾಗಿ ಹಾಗೂ ನನಗಾಗಿ ಆಗಿದೆ. (ಅವನ ಹಾಗೂ ಅವನ ಪ್ರವಾದಿಯವರ ﷺ ಸಂತೃಪ್ತಿಯನ್ನು ಬಯಸಿ ಆಗಿದೆ.) ಹಾಗಾಗಿ ನೀವು ಬೇಸರ ಮಾಡಬೇಡಿ, ಈಗ ನಿಮಗೆ ಎರಡು ಹಿಜ್’ರ (ಪಲಾಯನ) ಮಾಡಿದ ಪ್ರತಿಫಲ ಲಭಿಸುತ್ತದೆ ಎಂದು ಹೇಳಿದರು. ಅದನ್ನು ಕೇಳಿ ಉಸ್ಮಾನ್’ರವರಿಗೆ ಬಹಳಷ್ಟು ಸಂತೋಷವಾಯಿತು.

ಹಬ್’ಶದ ಯಾತ್ರೆಯ ಕುರಿತು ಜಅಫರ್’ರವರು ವಿವರಿಸುವುದು ಕಾಣಬಹುದು, ನಾವು ಹಬ್’ಶಾದಲ್ಲಿ ಯಾವುದೇ ತೊಂದರೆಯಿಲ್ಲದೆ ದಿನ ಕಳೆಯುತ್ತಿದ್ದೆವು. ನಾವು ನಮ್ಮ ಆರಾಧನೆಗಳನ್ನು, ಯಾರದೇ ಭಯವಿಲ್ಲದೆ ಮಾಡುತ್ತಿದ್ದೆವು, ಯಾರೂ ನಮಗೆ ತೊಂದರೆ ನೀಡುತ್ತಿರಲಿಲ್ಲ. ಆದರೆ ಈ ವಿಷಯ ಖುರೈಷಿಗಳಿಗೆ ತಿಳಿದಾಗ, ಅವರಿಗೆ ಅದು ಸಹಿಸಲು ಆಗಲಿಲ್ಲ. ಅವರು ತಕ್ಷಣವೇ ಸಭೆ ಕರೆದು, ಇಬ್ಬರು ಸಮರ್ಥರಾದ ಪ್ರತಿನಿಧಿಗಳನ್ನು, ನಗೀಸ್ ಚಕ್ರವರ್ತಿಯ ಬಳಿ ಕಳುಹಿಸಿ, ಅವರಿಗೆ ಅತ್ಯುನ್ನತ ಉಡುಗೊರೆಗಳನ್ನು ನೀಡುವ ಮೂಲಕ, ಅವರ ಮನ ಹೊಲಿಸಿ, ಮುಸ್ಲಿಮರಿಗೆ ನೀಡಿದ ಆಶ್ರಯಗಳನ್ನು ನಿಲ್ಲಿಸಲು ಹೇಳುವುದಾಗಿ ತೀರ್ಮಾನಿಸಿದರು.

ಹಾಗಾಗಿ ಉಮಾರತ್ ಬಿನ್ ಅಲ್ ವಲೀದ್ ಹಾಗೂ ಅಂರ್ ಬಿನ್ ಅಲ್ ಆಸ್ ಯುಟೋಪಿಯಕ್ಕೆ ಯಾತ್ರೆ ಹೊರಟರು. ಅವರು ರಾಜರ ಅರಮನೆಗೆ ಬಂದು ತಲುಪಿದ ಕೂಡಲೇ, ಅಲ್ಲಿದ್ದ ಎಲ್ಲಾ ಸೇವಕರಿಗೂ ಒಂದೊಂದು ಉಡುಗೊರೆಗಳನ್ನು ಕೊಟ್ಟು ಸೇವಕರ ಮನ ಹೋಲಿಸಿಕೊಂಡರು. ರಾಜರೊಂದಿಗಿನ ಸಂಭಾಷಣೆಗೆ ಅವಕಾಶ ನೀಡಲು ಹಾಗೂ, ಅದೇ ರೀತಿ ಮುಸ್ಲಿಮರಿಗೆ ಮಾತಾಡಲು ಯಾವುದೇ ಅವಕಾಶ ನೀಡದೆ ಖುರೈಷಿಗಳಿಗೆ ಬಿಟ್ಟು ಕೊಡಬೇಕು. ಎನ್ನುವ ಉದ್ದೇಶದಿಂದಾಗಿತ್ತು, ಈ ರೀತಿಯ ಷಡ್ಯಂತ್ರಗಳನ್ನು ರೂಪಿಸಿದ್ದು.
ಆಕರ್ಷಕ ಉಡುಗೊರೆಗಳೊಂದಿಗೆ ರಾಜದರ್ಬಾರಿಗೆ ತಲುಪಿದ ಅವರು, ರಾಜರಿಗೆ ಬಹಳ ವಿನಮ್ರತೆಯಿಂದ ವಂದಿಸಿ, ಬಂದ ವಿಷಯವನ್ನು ತಿಳಿಸಲು ಮುಂದಾದರು. ಮಹಾರಾಜ.! ನಮ್ಮ ಊರಿನಿಂದ (ಮಕ್ಕದಿಂದ) ಕೆಲವೊಂದು ಬುದ್ಧಿಹೀನರಾದ ಜನರು ಇಲ್ಲಿಗೆ ಬಂದಿರುತ್ತಾರೆ. ಅವರು, ಅವರ ಜನತೆಯನ್ನು ವಿರೋಧಿಸಿ, ನಮಗಾಗಲಿ, ನಿಮಗಾಗಲಿ ಪರಿಚಯವೇ ಇಲ್ಲದ ಧರ್ಮವನ್ನು ಸ್ವೀಕರಿಸಿರುತ್ತಾರೆ. ನಾವು ಇಲ್ಲಿಗೆ ಬಂದದ್ದು, ನಮ್ಮ ಊರಿನ ನಾಯಕರ ಅನುಮತಿಯಿಂದಾಗಿದೆ. ಹಾಗಾಗಿ ಅವರನ್ನು ನಮ್ಮ ಜೊತೆಯಲ್ಲಿ ಕಳುಹಿಸಿ ಕೊಡಬೇಕು. ಅವರ ಬಗ್ಗೆ ಚೆನ್ನಾಗಿ ತಿಳಿದವರಾಗಿದ್ದೇವೆ ನಾವು, ಎಂದು ಹೇಳುವಾಗ, ರಾಜರ ಸೇವಕನೊಬ್ಬ ಬಂದು, ಹೌದು ಮಹಾರಾಜ, ಇವರು ಮಕ್ಕಾದ ನಾಯಕರಾಗಿರುತ್ತಾರೆ. ಅವರ ಬಗ್ಗೆ ಚೆನ್ನಾಗಿ ತಿಳಿದಿರುವ ವ್ಯಕ್ತಿಗಳಾದ ಕಾರಣ, ನಮಗೆ ಅವರನ್ನು ಇವರ ಜೊತೆಯಲ್ಲೇ ಕಳುಹಿಸಿ ಕೊಡೋಣ ಎಂದು ಹೇಳಿದರು.

ಅದಕ್ಕೆ ನಗೀಸ್ ಚಕ್ರವರ್ತಿಯು ಅವರು ಈಗ ಎಲ್ಲಿದ್ದಾರೆ.? ಎಂದು ಕೇಳಿದಾಗ, ನಿಮ್ಮ ಉರಿನಲ್ಲೇ ಇದ್ದಾರೆ ಮಹಾರಾಜ ಎಂದು ಅಲ್ಲಿ ಬಂದಿದ್ದ ಖುರೈಷಿಗಳು ಹೇಳಿದರು. ಅದನ್ನು ಕೇಳಿದ ಕೂಡಲೇ, ರಾಜರಿಗೆ ಬಹಳಷ್ಟು ಕೋಪ ಬಂದಿತು. ಅವರು ಕೋಪದಲ್ಲೇ, ಓಹೋ.! ನನ್ನ ಊರಿಗೆ ನನ್ನ ಆಶ್ರವನ್ನು ಪಡೆದು ಬಂದ ವ್ಯಕ್ತಿಗಳನ್ನು, ನಾನು ಯಾವತ್ತೂ ಬಿಟ್ಟು ಕೊಡುವುದಿಲ್ಲ. ಬೇರೆ ಯಾವುದಾದರೂ ರಾಜರ ಬಳಿ ಹೋಗದೆ, ನನ್ನ ಬಳಿ ಬಂದವರನ್ನು, ನಾನು ಬಿಟ್ಟು ಕೊಡುವುದಿಲ್ಲ. ನಾನು ಅವರನ್ನು ಕರೆದು, ಎಲ್ಲವನ್ನೂ ಕೇಳುತ್ತೇನೆ. ಬಹುಶಃ ನೀವು ಹೇಳಿದ್ದು ಸತ್ಯವಾದಲ್ಲಿ ಅದರ ಬಗ್ಗೆ ಆಲೋಚಿಸುತ್ತೇನೆ. ಅಲ್ಲದಿದ್ದರೆ ನಾವು ಅವರನ್ನು ಖಂಡಿತ ರಕ್ಷಿಸುತ್ತೇನೆ ಎಂದು ಹೇಳಿದರು.

ಪ್ರವಾದಿಯವರ ﷺ ಅನುಯಾಯಿಗಳಿಗೆ, ರಾಜರ ಕಡೆಯಿಂದ ಅಧಿಕೃತವಾಗಿ ಮಾಹಿತಿ ತಿಳಿಸಲಾಯಿತು. ಅವರು ಪರಸ್ಪರ ಜೊತೆಗೂಡಿ, ರಾಜದರ್ಬಾರಿನಲ್ಲಿ ಏನು ಉತ್ತರ ನೀಡಬೇಕು ಎಂದು ಆಲೋಚಿಸಿದರು. ಕೊನೆಗೆ, ಎಲ್ಲವನ್ನೂ ನಾವು ಸರಿಯಾಗಿ ವಿವರಿಸೋಣ, ನಮ್ಮ ವಿಶ್ವಾಸವನ್ನು ಸ್ಪಷ್ಟವಾಗಿ ತಿಳಿಸೋಣ ಎಂದು ತೀರ್ಮಾನಿಸಿದರು. ಅಷ್ಟರಲ್ಲಿ ಜಅಫರ್ ಬಿನ್ ಅಬೀತ್ವಾಲಿಬ್’ರವರು ◌ؓ ಇಂದು ನಿಮ್ಮೆಲ್ಲರ ಪ್ರತಿನಿಧಿಯಾಗಿ, ನಾನು ಅವರ ಬಳಿ ಹೋಗುತ್ತೇನೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-92/365

ನಗೀಸ್ ರಾಜರು, ತಮ್ಮ ಮಂತ್ರಿಗಳನ್ನೂ, ಇತರ ಸೇವಕರನ್ನೂ ದರ್ಬಾರಿಗೆ ಕರೆಸಿಕೊಂಡರು. ಮುಸ್ಲಿಮರ ಪ್ರತಿನಿಧಿಗಳನ್ನೂ ಕೂಡ ಕರೆಸಿದರು. ಅವರು ಸಲಾಂ ಹೇಳುತ್ತಾ (ಶುಭಾಶಯ ತಿಳಿಸುತ್ತಾ) ಒಳಗೆ ಬಂದಾಗ, ರಾಜನು ಇದೇನು ರಾಜರಿಗೆ ಸಾಷ್ಟಾಂಗ ಮಾಡುತ್ತಿದ್ದೀರೇ.? ಎಂದು ಕೇಳಿದರು. ಅದಕ್ಕೆ ಆ ಪ್ರತಿನಿಧಿಗಳು, ಇಲ್ಲ ನಾವು ಅಲ್ಲಾಹನಿಗೆ ಮಾತ್ರವೇ ಸಾಷ್ಟಾಂಗ ಮಾಡುವುದು, ಅಲ್ಲದೆ ಸೃಷ್ಟಿಗಳಿಗೆ ಮಾಡುವುದಿಲ್ಲ ಎಂದು ಹೇಳಿದರು. ಮಹಾರಾಜ ಮಾತು ಮುಂದುವರಿಸುತ್ತಾ, ನೀವು ನಿಮ್ಮ ಜನತೆಯಿಂದ ದೂರ ಮಾಡಿದ ಧರ್ಮ ಯಾವುದು.? ನೀವು ನಿಮ್ಮ ಪೂರ್ವಿಕರ ಧರ್ಮವನ್ನೇನೋ ವಿರೋಧಿಸಿದಿರಿ, ಆದರೆ ನೀವುಗಳು, ನಮ್ಮ ಧರ್ಮವನ್ನಾಗಲಿ, ಇತರ ಧರ್ಮವನ್ನಾಗಲಿ ಸ್ವೀಕರಿಸಲಿಲ್ಲ, ಹಾಗಾದರೆ ಇದ್ಯಾವುದು ಹೊಸ ಧರ್ಮ ಎಂದು ಕೇಳಿದರು.

ರಾಜರ ಮಾತುಗಳಿಗೆ, ಜಾಫರ್’ರವರು ◌ؓ ಉತ್ತರಿಸಲು ಮುಂದಾದರು. ಮಹಾರಾಜ.! ನಾವು ಅಜ್ಞಾನದಲ್ಲಿ ಮುಳುಗಿದ್ದ (ಅಥವಾ ಜ್ಞಾನವೇ ಇಲ್ಲದ) ಜನತೆಯಾಗಿದ್ದೆವು, ವಿಗ್ರಹಗಳನ್ನು ಆರಾಧಿಸುತ್ತಾ, ಶವವನ್ನು ತಿನ್ನುತ್ತಾ, ಕೊಳಕು ಕೆಲಸಗಳನ್ನು ಮಾಡುತ್ತಾ, ಕುಟುಂಬ ಸಂಬಂಧವನ್ನು ಬೇರ್ಪಡಿಸುತ್ತಾ, ನೆರೆಯವರನ್ನು ತಾತ್ಸಾರವಾಗಿ ಕಂಡು, ಬಲಿಶಾಲಿ ವ್ಯಕ್ತಿಗಳು ದುರ್ಬಲರನ್ನು ಹಿಂಸಿಸುತ್ತಾ, ಬೇಕಾಬಿಟ್ಟಿಯಾಗಿ ಜೀವಿಸುತ್ತಿದ್ದೆವು. ಹೀಗಿರುವಾಗ ಅಲ್ಲಾಹನು, ನಮ್ಮ ಜನತೆಯಿಂದಲೇ ಒಬ್ಬರು ಪ್ರವಾದಿಯವರನ್ನು ﷺ ನಮಗಾಗಿ ಕಳುಹಿಸಿ ಕೊಟ್ಟನು. ಸತ್ಯವಂತರಾದ, ನೀತಿವಂತರಾದ, ವಿಶ್ವಾಸದಲ್ಲಿಯೂ ಕೂಡ ಹೆಸರುವಾಸಿಯಾದ ವ್ಯಕ್ತಿ, ಪ್ರಸಿದ್ಧ ಮನೆತನದ ಉನ್ನತ ವ್ಯಕ್ತಿಯೊಬ್ಬರು ನಮ್ಮೆಲ್ಲರನ್ನೂ ” ಏಕನಾದ ಅಲ್ಲಾಹನನ್ನು ಮಾತ್ರ ಆರಾಧಿಸಬೇಕು, ಅವನಿಗೆ ಯಾರನ್ನು ಜೊತೆ ಸೇರಿಸಬೇಡಿರಿ, ಅವನಲ್ಲದೆ ಆರಾಧಿಸುವ ಎಲ್ಲಾ ವಿಗ್ರಹಗಳನ್ನು ವಿರೋಧಿಸಿರಿ” ಎಂಬ ಸಂದೇಶದೊಂದಿಗೆ ನಮ್ಮೆಲ್ಲರನ್ನು ಅವರು ಒಳಿತಿನೆಡೆಗೆ ಆಹ್ವಾನಿಸಿದರು. ನಮಾಝ್, ದಾನಧರ್ಮ, ಉಪವಾಸ ಎಲ್ಲವನ್ನೂ ಕಲಿಸಿದರು. ಜೊತೆಯಲ್ಲಿ ಎಲ್ಲರಲ್ಲೂ ನಂಬಿಕೆಯಿಂದ ವರ್ತಿಸಬೇಕು. ಕುಟುಂಬದ ನಡುವೆ ಬಿರುಕುಗಳನ್ನು ಹೋಗಲಾಡಿಸಿ ಸಂತೋಷದಿಂದ ಜೊತೆಯಲ್ಲೇ ಜೀವಿಸಬೇಕು. ನೆರೆಯವರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಬೇಕು, ಅವರ ಸಂಪತ್ತಗಳನ್ನು ಅಪಹರಿಸುದಾಗಲಿ, ಅವರ ಪ್ರಾಣಕ್ಕೆ ಧಕ್ಕೆ ತರುವುದಾಗಲಿ, ಅವರಿಗೆ ತೊಂದರೆ ನೀಡುವುದಾಗಲಿ ಮಾಡಬಾರದು. ಸುಳ್ಳು ಸಾಕ್ಷಿಗಳನ್ನು ಹೇಳಬೇಡಿರಿ, ಸುಶೀಲೆಯರಾದ ಮಹಿಳೆಯರ ಮಾನಹಾನಿ ಮಾಡಬೇಡಿರಿ, ಮುಂತಾದ ಹಲವಾರು ಉಪದೇಶಗಳನ್ನು ನೀಡಿದರು.
ಹೀಗೆ ಒಳ್ಳೆಯ ರೀತಿಯಲ್ಲಿ ಯಾರಿಗೂ ತೊಂದರೆ ನೀಡದೆ ಜೀವಿಸುತ್ತಿದ್ದಾಗ, ನಮ್ಮ ಮೇಲೆ ಬಲ ಪ್ರಯೋಗಿಸಿ ನಮ್ಮನ್ನು ಹಳೆಯ ಸಂಪ್ರದಾಯಕ್ಕೆ ಹಿಂತಿರುಗಳು ಒತ್ತಾಯಿಸಿ, ನಮಗೆ ಬಹಳಷ್ಟು ಹಿಂಸೆಯನ್ನು ನೀಡಲು ಆರಂಭಿಸಿದರು. ನಮಗೆ ಅಲ್ಲಿ ಶಾಂತಿಯಿಂದ ಜೀವಿಸಲು ಕಷ್ಟವಾದಾಗ, ನಾವು ಇಲ್ಲಿಗೆ ಬಂದು ನೆಲೆಸಬೇಕಾಯಿತು. ನಿಮ್ಮ ಆಶ್ರಯದಲ್ಲಿ ಯಾವುದೇ ತೊಂದರೆ ಸಿಗುತ್ತಿಲ್ಲ ಎಂದು ಮನಗಂಡು, ಇಲ್ಲಿಗೂ ಕೂಡ ಬಂದಿದ್ದಾರೆ ಎಂದು ಜಅಫರ್’ರವರು ◌ؓ ಎಲ್ಲವನ್ನೂ ಸವಿಸ್ತಾರವಾಗಿ ತಿಳಿಸಿದರು.

ಜಅಫರ್’ರವರ ◌ؓ ಮಾತುಗಳನ್ನು, ನಗೀಸ್ ರಾಜರು ಬಹಳ ಶ್ರದ್ಧೆಯಿಂದಲೇ ಕೇಳುತಿದ್ದರು. ನಂತರ ಅವರು, ನಿಮ್ಮ ಪ್ರವಾದಿಯವರಿಗೆ ﷺ ಅವತರಿಸಿದ ಗ್ರಂಥದ ಯಾವುದಾದರೂ ಭಾಗ ನಿಮಗೆ ನೆನಪಿದೆಯಾ.? ಎಂದು ಕೇಳಿದಾಗ, ಜಅಫರ್ ◌ؓ ಇದೆ ಎಂದು ಉತ್ತರಿಸಿದರು. ಹಾಗಾದರೆ ಅದನ್ನು ಸ್ವಲ್ಪ ಇಲ್ಲಿ ಪಠಿಸಿರಿ ಎಂದು ರಾಜರು ಕೇಳಿ ಕೊಂಡರು. ತಕ್ಷಣವೇ ಜಅಫರ್, ◌ؓ ಪವಿತ್ರ ಖುರ್’ಆನಿನ ಮರ್’ಯಂ ಅಧ್ಯಾಯದ ಪ್ರಾರಂಭದ ಭಾಗವನ್ನು ಪಠಿಸಿದರು. ಖುರ್’ಆನಿನ ಕೇಳುತ್ತಿದ್ದ ರಾಜರು, ಅದರ ಅರ್ಥವನ್ನು ಚಿಂತಿಸಿ ಕಣ್ಣೀರು ಹಾಕುತ್ತಿದ್ದರು. ಅವರ ಜೊತೆಯಲ್ಲೇ, ಸುತ್ತಲೂ ಇದ್ದ ಪಾದ್ರಿಗಳು ಕೂಡ ಕಣ್ಣೀರು ಸುರಿಸಿ, ಅವರ ಬಳಿಯಿದ್ದ ಗ್ರಂಥಗಳೆಲ್ಲವೂ ಒದ್ದೆಯಾಯಿತು. ಮರ್’ಯಂ ಅಧ್ಯಾಯದ ಅನುವಾದವೇ ಪ್ರವಾದಿ ಈಸ ಹಾಗೂ ಅವರ ತಾಯಿ ಮರ್’ಯಮ್’ರವರ ◌ؓ ಕುರಿತಲ್ಲವೇ.? ಮೂಲತಃ ಕ್ರೈಸ್ತರಾಗಿದ್ದ ರಾಜರ ಮನಸ್ಸಿಗೂ ಕೂಡ ಆ ಸೂಕ್ತಗಳು ಬಲವಾಗಿ ನಾಟಿತು.

ಅದನ್ನು ಕೇಳಿದ ರಾಜರು, ಪ್ರವಾದಿ ಈಸ, ಮೂಸರವರು (ಅ) ಅವತರಿಸಿದ ಗ್ರಂಥಗಳು ಹಾಗೂ ಈಗ ಕೇಳಿದ ಸೂಕ್ತಗಳು ಒಂದೇ ರೀತಿ ಇದ್ದ ಹಾಗೆ ಇದೆಯಲ್ಲವೇ.? ಒಂದೇ ಅರ್ಥವನ್ನು ಸೂಚಿಸುವ ಬೇರೆ ಬೇರೆ ವಾಕ್ಯಗಳು ಎಂದು ಹೇಳಿದರು. ನಂತರ ಮಾತು ಮುಂದುವರಿಸುತ್ತಾ, ಖುರೈಷಿ ಪ್ರತಿನಿಧಿಯಾಗಿ ಬಂದ ಅಂರ್’ರವರಲ್ಲಿ, ಇಲ್ಲಿ ಬಂದಿರುವ ಮುಸ್ಲಿಮರಲ್ಲಿ ನಿಮ್ಮ ಸೇವಕರು ಯಾರಾದರೂ ಇದ್ದಾರಾ.? ಎಂದು ಕೇಳಿದಾಗ, ಅಂರ್ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಪುನಃ ರಾಜ, ನೀವುಗಳಿಗೆ ಏನಾದರೂ ಸಾಲ ಏನಾದರೂ ನೀಡಲು ಬಾಕಿಯಿದೆಯೇ.? ಎಂದು ಕೇಳಿದಾಗಲೂ, ಇಲ್ಲ ಎಂದೇ ಅಂರ್ ಉತ್ತರಿಸಿದರು. ಹಾಗಿದ್ದರೆ ಖಂಡಿತ ನಾನು, ನಿಮಗೆ ಇವರನ್ನು ಬಿಟ್ಟು ಕೊಡುವುದಿಲ್ಲ. ನಿಮಗಿನ್ನು ಇಲ್ಲಿಂದ ಹಿಂತಿರುಗಿ ಹೋಗಬಹುದು ಎಂದು ಹೇಳಿದರು.

ಹೊರಗೆ ಬಂದಾಗ, ನಾಳೆ ಕೊನೆದಾಗಿ ಮತ್ತೊಮ್ಮೆ ಹೋಗಿ ಮಾತಾಡಬೇಕು ಎಂದು ಅಂರ್ ಹೇಳಿದಾಗ, ಆಮಿರ್ ಬೇಡ ಪರವಾಗಿಲ್ಲ, ಅವರು ನಮ್ಮ ಸಂಬಂಧಿಕರೇ ಅಲ್ಲವೇ ಎಂದು ಹೇಳಿದರು. ಅದಕ್ಕೆ ಅಂರ್, ಅವರಿಗೆ ಈಸ (ಅ) ಪ್ರವಾದಿಯವರ ಕುರಿತು ಇರುವ ಅಭಿಪ್ರಾಯ ಸರಿಯಿಲ್ಲ ಎಂಬ ವಿಷಯವನ್ನು ನಾನು ನಾಳೆ ತಿಳಿಸುತ್ತೇನೆ, ಅದರೊಂದಿಗೆ ಎಲ್ಲವೂ ತಲೆಕೆಳಗಾಗುತ್ತದೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-93/365

ಮರುದಿವಸ ಅಂರ್ ರಾಜ ದರ್ಬಾರಿಗೆ ತೆರಳಿ, ಮುಸ್ಲಿಮರು ಪ್ರವಾದಿ ಈಸರವರ (ಅ) ಕುರಿತು ಕೆಟ್ಟ ಅಭಿಪ್ರಾಯಗಳನ್ನಾಗಿದೆ ಹೇಳುತ್ತಿರುವುದು ಎಂದು ಹೇಳಿದರು. ಅದಕ್ಕೆ ರಾಜರು ಜಅಫರನ್ನು ದರ್ಬಾರಿಗೆ ಬರಲು ಆಜ್ಞೆ ನೀಡಿದರು. ಅದರ ನಡುವೆ ಮುಸ್ಲಿಮರು ಜೊತೆ ಸೇರಿ ಪರಸ್ಪರ ಚರ್ಚಿಸಲು ಆರಂಭಿಸಿದರು. ಏನಾಗಿರಬಹುದು ಸಮಸ್ಯೆ.? ಇನ್ನೂ ಪ್ರವಾದಿ ಈಸರವರ (ಅ) ಕುರಿತು ಕೇಳುವುದಾದರೆ.? ಏನು ಉತ್ತರ ನೀಡಬೇಕು.? ಎಂದು ಕೇಳಿದಾಗ, ಎಲ್ಲರೂ ಒಟ್ಟಾಗಿ, ಪುಣ್ಯ ಪ್ರವಾದಿಯವರು ﷺ ಏನನ್ನು ಕಲಿಸಿ ಕೊಟ್ಟಿದ್ದರೋ, ಅದನ್ನೇ ಧೈರ್ಯವಾಗಿ ಹೇಳೋಣ ಎಂದು ಹೇಳಿದರು.

ಸ್ವಹಾಬಿಗಳು, ರಾಜ ದರ್ಬಾರಿಗೆ ತಲುಪಿದರು. ದರ್ಬಾರಿನ ಮತ್ತೊಂದು ಭಾಗದಲ್ಲಿ ಆಮಿರ್, ಅಂರ್ ಹಾಗೂ ಕ್ರೈಸ್ತ ಪಾದ್ರಿಗಳು ಕೂಡ ಜೊತೆಯಲ್ಲಿ ಕುಳಿತುಕೊಂಡರು. ರಾಜರು, ಜಅಫರ್ ◌ؓ ಹಾಗೂ ಅವರ ಸಂಗಡಿಗರಲ್ಲಿ, ನಿಮಗೆ ಈಸ ಪ್ರವಾದಿಯವರ (ಅ) ಕುರಿತು ಇರುವ ಅಭಿಪ್ರಾಯವೇನು.? ನಿಮ್ಮ ಪ್ರವಾದಿಯವರು ﷺ ಇದರ ಬಗ್ಗೆ ಏನು ಹೇಳಿದ್ದಾರೆ.? ಎಂದು ತಿಳಿಸುವಿರ.? ಎಂದು ಕೇಳಿದರು. ಅದಕ್ಕೆ ಜಅಫರ್’ರವರು ◌ؓ, ನಮಗೆ ನಮ್ಮ ಪ್ರವಾದಿಯವರು ﷺ, ಈಸ ಪ್ರವಾದಿಯವರ (ಅ) ಬಗ್ಗೆ ಕಲಿಸಿ ಕೊಟ್ಟದ್ದು, ಅವರೊಬ್ಬರು ಅಲ್ಲಾಹನ ದೂತರೂ, ಸೇವಕನೂ ಆಗಿರುವರು. ಆ ಪವಿತ್ರಆತ್ಮವನ್ನು ಅಲ್ಲಾಹನು, ಅವನ ಪವಿತ್ರ ಸೇವಕಿಯಾದ ಮರ್’ಯಮಿನ ◌ؓ ಗರ್ಭದಲ್ಲಿ ಸೇರಿಸಿದನು ಎಂದು ಹೇಳಿದರು. ಅದನ್ನು ಕೇಳಿದ್ದೇ ತಡ, ರಾಜರು ಕೈಯನ್ನು ನೆಲಕ್ಕೆ ಬಡಿಯುತ್ತಾ, ಜಅಫರ್ ◌ؓ ಹೇಳಿದ್ದು, ಅಕ್ಷರಶಃ ಸತ್ಯ. ಅವರ ಮಾತಿನಲ್ಲಿ ಯಾವುದೇ ಸುಳ್ಳು ಕಾಣುತ್ತಿಲ್ಲ, ಓ ಪಾದ್ರಿಗಳೇ ಇದರ ಬಗ್ಗೆ ಇನ್ನೇನು ಹೇಳಲಿಕ್ಕಿಲ್ಲ ಎಂದು ಹೇಳಿದಾಗ, ಕೆಲವು ಪಾದ್ರಿಗಳಿಗೆ ಕಸಿವಿಸಿ ಉಂಟಾಯಿತು. ಅದನ್ನು ಕಂಡ ರಾಜರು, ತಕ್ಷಣವೇ ಎದ್ದು ನಿಂತು ನೀವೇನೇ ಹೇಳಿದರೂ ಅಷ್ಟೇ, ಇದುವೇ ಸತ್ಯ. ವೇದ ಗ್ರಂಥವನ್ನು, ಪ್ರವಾದಿತ್ವದ ಅದರ್ಶವೆಲ್ಲವೂ ಚೆನ್ನಾಗಿ ತಿಳಿದಿದ್ದ ವ್ಯಕ್ತಿಯಾಗಿದ್ದರು, ಅವರು ಎಂದು ಹೇಳಿದರು.

ನಂತರ ವಿಶ್ವಾಸಿಗಳ ಕಡೆ ತಿರುಗಿ, ನಿಮಗೆಲ್ಲರಿಗೂ ಸ್ವಾಗತ, ಮುಹಮ್ಮದ್’ರು ﷺ ಅಲ್ಲಾಹನ ಪ್ರವಾದಿ ಆಗಿರುವರು ಎಂದು ನಾನೂ ಕೂಡ ಸಾಕ್ಷಿ ವಹಿಸುತ್ತೇನೆ. ತೌರಾತ್ ಗ್ರಂಥದಲ್ಲೂ, ಇಂಜೀಲ್ ಗ್ರಂಥದಲ್ಲೂ ಪ್ರತ್ಯೇಕವಾಗಿ ಹೇಳಿದ ಸತ್ಯ ದೂತರಾಗಿರುತ್ತಾರೆ ಅವರು. ನೀವೆಲ್ಲರೂ ಈ ರಾಜ್ಯದಲ್ಲಿ ಯಾವುದೇ ಭಯವಿಲ್ಲದೆ ಜೀವಿಸಬಹುದು. ಬಹುಶಃ ನನಗೆ ಈ ರಾಜಧಿಕಾರ ಇಲ್ಲದೆ ಇರುತ್ತಿದ್ದರೆ.? ನಾನು ಆ ಪ್ರವಾದಿಯವರ ﷺ ಸೇವಕನಾಗುತ್ತಿದ್ದೆ. ಅಷ್ಟು ಹೇಳಿ, ಎಲ್ಲಾ ವಿಶ್ವಾಸಿಗಳಿಗೆ ಒಳ್ಳೆಯ ಬಟ್ಟೆ, ಆಹಾರ ಕೊಟ್ಟು ಕಳುಹಿಸಲು ಆಜ್ಞೆ ನೀಡಿದರು. ನಂತರ ಮಾತು ಮುಂದುವರಿಸುತ್ತಾ, ಯಾರಾದರೂ ನಿಮಗೆ ಇಲ್ಲಿ ತೊಂದರೆ ನೀಡಿದರೆ, ಯಾವುದೇ ಭಯವಿಲ್ಲದೆ ನನ್ನಲ್ಲಿ ತಿಳಿಸಿರಿ. ನಾನು ಅವರಿಗೆ ಖಂಡಿತ ದಂಡ ವಿಧಿಸುತ್ತೇನೆ ಎಂದು ಮೂರು ಬಾರಿ ಅದನ್ನು ಹೇಳಿದರು. ಅಷ್ಟೇ ಅಲ್ಲ, ನನ್ನ ಬಳಿ ಬಂದು ಒಂದು ಪರ್ವತದಷ್ಟು ತೂಕದಲ್ಲಿ, ಉಡುಗೊರೆಯಾಗಿ ಚಿನ್ನ ಕೊಡುತ್ತೇನೆ ಎಂದು ಆಮಿಷ ತೋರಿಸಿದರೂ, ನಾನು ಮಾತ್ರ ನಿಮ್ಮನ್ನು ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಹೇಳಿದರು.

ಈ ಘಟನೆಯ ಕುರಿತು ಮತ್ತೊಂದು ಉಲ್ಲೇಖವು ಈ ರೀತಿಯಾಗಿದೆ. ರಾಜರು, ಮುಸ್ಲಿಮರಲ್ಲಿ ನಿಮಗೆ ಇಲ್ಲಿ ಯಾರಾದ್ರೂ ತೊಂದರೆ ಮಾಡುತ್ತಿದ್ದಾರ.? ಎಂದು ಕೇಳಿದರು. ಅದಕ್ಕೆ ಕೆಲವರು ಮುಂದೆ ಬಂದು, ಹೌದು ಎಂದು ಉತ್ತರಿಸಿದರು. ಅದನ್ನು ಕೇಳಿ, ತನ್ನ ಸೈನಿಕನೊಬ್ಬನನ್ನು ಕರೆದು, ಇನ್ನುಮುಂದೆ ಯಾರಾದರೂ ಮುಸ್ಲಿಮರಿಗೆ ತೊಂದರೆ ನೀಡಿದರೆ.? ಅವರಿಗೆ ನಾಲ್ಕು ದಿರ್’ಹಂ ದಂಡ ವಿಧಿಸಿ ಎಂದು ಹೇಳುತ್ತಾ, ವಿಶ್ವಾಸಿಗಳ ಕಡೆ ತಿರುಗಿ ಇಷ್ಟು ಸಾಕಲ್ಲವೇ.? ಎಂದು ಕೇಳಿದರು. ಅದಕ್ಕೆ ವಿಶ್ವಾಸಿಗಳು ಅಷ್ಟು ಸಾಕಾಗದು ಎಂದು ಹೇಳಿದಾಗ, ಸರಿ ಹಾಗಾದ್ರೆ ಅದರ ದುಪ್ಪಟ್ಟು ಅಂದರೆ ಎಂಟು ದಿರ್’ಹಂ ದಂಡ ವಸೂಲಿ ಮಾಡಿ ಎಂದು ಆಜ್ಞೆ ನೀಡಿದರು. ಮೂಸ ಬಿನ್ ಉಖ್’ಬರವರ ಅಭಿಪ್ರಾಯದ ಪ್ರಕಾರ, ಯಾರಾದರೂ ಮುಸ್ಲಿಮರಿಗೆ ತೊಂದರೆ ಕೂಡುವುದು ಬಿಡಿ, ಅದರ ಬಗ್ಗೆ ಆಲೋಚಿಸಿದರೂ ಕೂಡ ಅವರು ನನ್ನ ವಿರೋಧ ಕಟ್ಟಕೊಂಡ ಹಾಗೆ ಎಂದು ಅವರು ಜೊತೆಯಲ್ಲಿ ಹೇಳಿದ್ದರು.

ನಿರಾಸೆಯಿಂದ ಕೂಡಿದ ನಿರಾಶ್ರಿತರೇ ಇರುವ ಪ್ರಸ್ತುತ ಈ ಕಾಲದಲ್ಲಿ, ಈ ಐತಿಹಾಸಿಕ ಘಟನೆಗಳನ್ನು ಬಹಳ ಆಸಕ್ತಿಯಿಂದ ತಿಳಿಯಬೇಕಿದೆ. ಸಾಮರಸ್ಯದ ಜೊತೆಯಲ್ಲಿ, ನ್ಯಾಯವಾದ ರೀತಿಯಲ್ಲಿ ಸಮಸ್ಯೆಗಳನ್ನು ಯಾವ ರೀತಿ ನಿವಾರಿಸಬಹುದು ಎನ್ನುವುದನ್ನು, ಇಲ್ಲಿ ನಮಗೆ ಈ ಘಟನೆಗಳ ಮೂಲಕ ತಿಳಿಯಬಹುದು.

ಖುರೈಷಿ ಪ್ರತಿನಿಧಿಗಳಾದ, ಅಂರ್ ಹಾಗೂ ಆಮಿರ್’ರನ್ನು ಹಿಂತಿರುಗಿ ಹೋಗಲು ಆಜ್ಞೆ ನೀಡಿದರು. ಜೊತೆಯಲ್ಲಿ ಅವರ ನೀಡಿದ್ದ ಉಡುಗೊರೆಗಳನ್ನೂ ಕೂಡ ತಿರುಗಿ ಕೊಂಡುಹೋಗಲು ಹೇಳಿದರು. ನಂತರ ಮಾತು ಮುಂದುವರಿಸುತ್ತಾ, ನನಗೆ ನನ್ನ ಅಧಿಕಾರವನ್ನು ತಿರುಗಿ ನೀಡಿದ ಅಲ್ಲಾಹನು, ನನ್ನಿಂದ ಲಂಚ ಪಡೆಯದೆ ಇರುವಾಗ, ನಾನು ಹೇಗೆ ಇನ್ನೊಬ್ಬರಿಂದ ಲಂಚ ಪಡೆಯಲಿ.? ಜನರ ವಿಷಯದಲ್ಲಿ, ಜನರನ್ನು ನನಗೆ ವಿಧೇಯರಾಗುವಂತೆ ಮಾಡಿದ ಅಲ್ಲಾಹನಿಗೆ, ನಾನೂ ಕೂಡ ವಿಧೇಯನಾಗಿದ್ದೇನೆ ಎಂದು ಹೇಳಿದರು. ಅದನ್ನು ಕೇಳಿದ ಖುರೈಷಿಗಳು ನಿರಾಸೆಯಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಬಂದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-94/365

ಅಧಿಕಾರ ತಿರುಗಿ ನೀಡಿದಕ್ಕೆ ನಾನು ಅಲ್ಲಾಹನಿಗೆ ಲಂಚ ನೀಡಲಿಲ್ಲ, ಎಂಬ ಮಾತಿನ ಹಿಂದೆ ಒಂದು ನಿಗೂಢವಾದ ರಹಸ್ಯವಿತ್ತು. ನಜ್ಜಾಶಿ (ನೇಗಿಸ್) ಎನ್ನುವುದು ಹಬ್’ಷವನ್ನು ಆಳುತ್ತಿದ್ದ ರಾಜರನ್ನು ಕರೆಯುವ ಹೆಸರಾಗಿತ್ತು. ಪ್ರವಾದಿಯವರ ﷺ ಕಾಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ನಜ್ಜಾಶಿಯ ಹೆಸರು, ಅಸ್’ಹಮತ್ ಬಿನ್ ಅಬ್’ಜರ್ ಎಂಬುದಾಗಿತ್ತು. ಅವರ ಮುಂಚೆ ರಾಜನಾಗಬೇಕಾದದ್ದು ಅಸ್’ಹಮತಿನ ತಂದೆ ಅಬ್’ಜರ್ ಆಗಬೇಕಿತ್ತು. ಆದರೆ ಅಬ್’ಜರನ್ನು ಕೊಂದು ಅವರ ಸಹೋದರ ರಾಜನಾದರು. ಆದರೂ ಅವರಿಗೆ, ಅಸ್’ಹಮತಿನ ಮೇಲೆ ಬಹಳಷ್ಟು ಪ್ರೀತಿ ಇತ್ತು. ಆದರೆ ಅವರ ಹನ್ನೆರಡು ಮಕ್ಕಳಿಗೆ ಅದು ಇಷ್ಟವಿರಲಿಲ್ಲ, ಅವರು ಅಸ್’ಹಮ್’ನನ್ನು ಕೂಡ ಕೊಳ್ಳಬೇಕೆಂದು ಒತ್ತಾಯಿಸಿದರು. ಅಸ್’ಹಮ್ ಬೆಳೆದು ದೊಡ್ಡವನಾದರೆ ಖಂಡಿತ, ತನ್ನ ತಂದೆಯ ಕೊಲೆಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂದು, ಅವರು ತಂದೆಯಲ್ಲಿ ಹೇಳ ತೊಡಗಿದರು. ಈಗಷ್ಟೇ ತನ್ನ ಸಹೋದರನನ್ನು ಕೊಲೆ ಮಾಡಿದ ಕಾರಣ, ಮುದ್ದಾದ ಆ ಸಣ್ಣ ಮನಗನ್ನು ಕೊಲ್ಲಲು ಮನಸ್ಸು ಬರಲಿಲ್ಲ. ಆದರೆ ತನ್ನ ಮಕ್ಕಳ ಒತ್ತಾಯಕ್ಕೆ ಮಣಿದು ಆರ್ನೂರು ದಿರ್’ಹಂಗೆ ಆ ಮಗನನ್ನು ಮಾರಾಟ ಮಾಡಿ, ಬೇರೆ ಊರಿಗೆ ಕಳುಹಿಸಿ ಕೊಟ್ಟರು.

ಕೆಲವು ವರ್ಷಗಳ ಕಳೆದ ನಂತರ, ಅಲ್ಲಿನ ರಾಜ ಅಕಾಲಿಕ ಮರಣಕ್ಕೆ ತುತ್ತಾದರು. ಆದರೆ ಆತನ ಮಕ್ಕಳಿಗೆ, ಅಧಿಕಾರ ನೀಡಲು ಅಲ್ಲಿನ ಪ್ರಜೆಗಳಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಅಸ್’ಹಮನ್ನು ಹುಡುಕಿ ತಂದು, ಅವರಿಗೆ ಪಟ್ಟಾಭಿಷೇಕ ಮಾಡಿ, ಹಬ್’ಶದ ಸಿಂಹಾಸನದಲ್ಲಿ ಕುಳ್ಳಿರಿಸಿದರು. ಅಸ್’ಹಮನ್ನು ಖರೀದಿಸಿದ ವ್ಯಕ್ತಿಯೂ ಹಬ್’ಶಕ್ಕೆ ಬಂದು, ಒಂದೋ ನಾನು ಕೊಟ್ಟ ಹಣ ವಾಪಸ್ಸು ಕೊಡಬೇಕು, ಇಲ್ಲದಿದ್ದರೆ ಅಸ್’ಹಮನ್ನು ವಾಪಸ್ಸು ಕಳುಹಿಸಿಬೇಕು ಎಂದು ಹಠ ಹಿಡಿದರು. ತಕ್ಷಣವೇ ಅಲ್ಲಿನ ಪ್ರಜೆಗಳು ಈ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಿ, ಅವರಿಗೆ ಆಗಬೇಕಿದ್ದ ಹಣವನ್ನು ಕೊಟ್ಟು ಅಲ್ಲಿಂದ ಕಳುಹಿಸಿದರು.
ಕುತೂಹಲಕಾರಿಯಾದ ಈ ಘಟನೆಯನ್ನು ನೆನೆಪಿಸಿ ಆಗಿತ್ತು, ಯಾವುದೇ ಲಂಚ ನೀಡದೆ ಅಲ್ಲಾಹನು ನನಗೆ ಅಧಿಕಾರ ತಿರುಗಿ ನೀಡಿದನು ಎಂದು ನಜ್ಜಾಶಿ ಚಕ್ರವರ್ತಿಯು ಹೇಳಿದ್ದು.

ಮುಸ್ಲಿಮರಿಗೆ ಬೆಂಬಲ ನೀಡಿದ ಕಾರಣಕ್ಕೆ ಹಬ್’ಷ ನಗರದ ಕ್ರೈಸ್ತರಾದ ಒಂದು ಗುಂಪಿಗೆ ರಾಜರ ಮೇಲೆ ಅಸಮಾಧಾನ ಉಂಟಾಯಿತು. ಇದನ್ನು ತಿಳಿದ ನಗೀಸ್ ಚಕ್ರವರ್ತಿಯು, ಬಹುಶಃ ಅವರನ್ನು ಸೋಲಿಸಿದರೂ, ಯಾವುದೇ ಕಾರಣಕ್ಕೂ ಮುಸ್ಲಿಮರಿಗೆ ಮಾತ್ರ ಅನ್ಯಾಯ ಆಗಬಾರದು ಎಂದು ಅಂದುಕೊಂಡು, ಅವರು ಜಅಫರನ್ನು ◌ؓ ಕರೆದರು, ನಾನು ಇಲ್ಲೊಂದು ಹಡಗು ತಯಾರಿಸಿ ಇಟ್ಟಿದ್ದೇನೆ, ಒಂದು ವೇಳೆ ನಾನು ಸೋತರೆ ನೀವು ಈ ಹಡಗಿನ ಮೂಲಕ ಎಲ್ಲಿಯಾದರೂ ಸುರಕ್ಷಿತ ಸ್ಥಳಕ್ಕೆ ಹೋಗಬೇಕು, ನಾನು ಗೆದ್ದ ನಂತರವೇ ಇಲ್ಲಿಗೆ ಬಂದರೆ ಸಾಕು ಎಂದು ಹೇಳಿ, “ಅಲ್ಲಾಹು ಅಲ್ಲದೆ ಬೇರೆ ಆರಾಧ್ಯನಿಲ್ಲ ಎಂದು ಸಾಕ್ಷಿ ವಹಿಸುತ್ತೇನೆ, ಮುಹಮ್ಮದ್’ರು ﷺ ಅವನ ಸೇವಕರೂ, ದೂತರೂ ಆಗಿರುವರು. ಮರ್’ಯಮಿನ ◌ؓ ಮಗನಾದ ಈಸ ಪ್ರವಾದಿಯವರು (ಅ), ಕೂಡ ಅಲ್ಲಾಹನ ಸೇವಕರೂ, ದೂತರೂ ಆಗಿರುವರು.” ಎನ್ನುವ ವಚನವನ್ನು ಬರೆದು, ಒಂದು ಕವಚದ ಒಳಗೆ ಹಾಕಿ ಬಲಬಾಗದ ಭುಜದ ಮೇಲೆ ಇಟ್ಟರು. ಆಮೇಲೆ ಅವರು ಜನರ ಬಳಿ ಬಂದು, ಓ ಹಬ್’ಶ ವಾಸಿಗಳೇ.! ನಾನು ನಿಮಗೆ ಯೋಗ್ಯನಾದ ರಾಜನಲ್ಲವೇ.? ಎಂದು ಕೇಳಿದರು. ಅದಕ್ಕೆ ಅವರೆಲ್ಲರೂ, ಹೌದು ನೀವು ಒಳ್ಳೆಯ ರಾಜರೇ ಆಗಿರುವಿರಿ ಎಂದು ಹೇಳಿದರು. ಹಾಗಾದರೆ ನಾನು ತೆಗೆದುಕೊಂಡ ತೀರ್ಮಾನಗಳಲ್ಲಿ ಏನಾದರೂ ಅಸಮಾಧಾನವಿದೆಯೆ.? ಎಂದು ಪುನಃ ರಾಜ ಕೇಳಿದರು. ಅದಕ್ಕೂ ಇಲ್ಲ ಎಲ್ಲವೂ ಒಳ್ಳೆಯ ತೀರ್ಮಾನಗಲೇ ಎಂದು ಉತ್ತರಿಸಿದರು. ಹಾಗಿದ್ದರೆ ನಿಮ್ಮ ಸಮಸ್ಯೆ ಏನೆಂದು.? ಹೇಳುವಿರ, ಎಂದು ರಾಜ ಕೇಳಿದಾಗ, ಮಹಾರಾಜ, ನೀವು ಧರ್ಮವನ್ನು ಬಿಟ್ಟು ಬಿಟ್ಟಿದೀರ, ನೀವು ಈಸ ಅಲ್ಲಾಹುವಿನ ಪ್ರವಾದಿ ಎಂದು ಹೇಳುತ್ತಿದ್ದೀರ, ಆದರೆ ಅವರು ಅಲ್ಲಾಹನ ಮಗನಾಗಿದ್ದಾರೆ, ಎಂದು ಅಲ್ಲಿದ್ದ ಜನರು ಹೇಳಿದಾಗ, ರಾಜರು ತಾನು ಬರೆದಿದ್ದ ಆ ವಚನದ ಮೇಲೆ ಕೈ ಇಟ್ಟು, ಇದರ ಮೇಲೆ ಇನ್ನೇನು ಇಲ್ಲ ಎಂದು ಹೇಳಿದರು. ಆದರೆ ಜನರು ಅಂದುಕೊಂಡದ್ದು, ಅವರು ಹೇಳಿದ ಹಾಗೆ ದೇವರ ಮಗ ಎಂಬುದರ ಮೇಲೆ ಇನ್ನೇನು ಇಲ್ಲ ಎಂದು. ಹಾಗಾಗಿ ಅವರು ಅಲ್ಲಿಂದ ಹಿಂತಿರುಗಿ ಹೋದರು. ಆದರೆ ರಾಜರ ಉದ್ದೇಶ, ತಾನು ಬರೆದಿದ್ದ ವಚನದ ಕುರಿತಾಗಿತ್ತು.

ಉಮ್ಮು ಸಲಮ ಬೀವಿಯವರು ◌ؓ ವಿವರಿಸುವುದು ಕಾಣಬಹುದು. ನಾವು ಹಬ್’ಶ ನಗರದಲ್ಲಿ, ನಗೀಸ್ ರಾಜರ ಆಶ್ರಯದಲ್ಲಿ ಜೀವಿಸುತ್ತಿದ್ದ ಸಂದರ್ಭದಲ್ಲಿ, ಹಬ್’ಷದ ಮತ್ತೊಂದು ವ್ಯಕ್ತಿಯೂ, ರಾಜಧಿಕಾರಕ್ಕಾಗಿ ದಂಗೆ ಎಬ್ಬಿಸಿ ಮುಂದೆ ಬಂದಿದ್ದನು. ಅದನ್ನು ಕಂಡು ನಮಗೆ ತುಂಬಾ ಬೇಸರವಾಗಿತ್ತು, ನೈಲ್ ನದಿಯ ದಡದಲ್ಲಿ ನಡೆಯುವ ಈ ಯುದ್ಧದಲ್ಲಿ, ಎಲ್ಲಿ ಆ ವ್ಯಕ್ತಿ ಗೆಲ್ಲುವರೋ ಎಂಬ ಭಯ ನಮ್ಮನ್ನು ಕಾಡುತ್ತಿತ್ತು. ಸ್ವಾಹಾಬಿಗಳೆಲ್ಲರೂ ಜೊತೆಗೂಡಿ ಆಲೋಚಿಸುತ್ತಿದ್ದೆವು, ನಮ್ಮಲ್ಲಿ ಯಾರು ಹೋಗಿ ಅಲ್ಲಿ ನಡೆಯುವ ದೃಶ್ಯವನ್ನು ನೇರವಾಗಿ ನೋಡುವ ಸಾಹಸ ಮಾಡುತ್ತಾರೆ.? ಎಂದು. ತಕ್ಷಣವೇ ನಮ್ಮ ಜೊತೆಯಲ್ಲಿದ್ದ, ಹದಿಹರೆಯದ ಯುವಕ ಝುಬೈರ್ ಬಿನ್ ಅಲ್ ಅವ್ವಾಮ್ ◌ؓ ಮುಂದೆ ಬಂದು, ನಾನು ಹೋಗುತ್ತೇನೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-95/365

ಉಮ್ಮುಸಲಮ ◌ؓ ಮಾತು ಮಾತು ಮುಂದುವರಿಸುತ್ತಾ, ನಾವು ಝುಬೈರಿಗಾಗಿ ◌ؓ ಒಂದು ದೋಣಿಯನ್ನು ನಿರ್ಮಿಸಿ, ಅವರನ್ನು ಅದರಲ್ಲಿ ಕಳುಹಿಸಿದೆವು. ಅವರು ಅದರಲ್ಲಿ ಹತ್ತಿ, ನೈಲ್ ನದಿಯಲ್ಲಿ ಸಂಚರಿಸಿ ಹೋದರು. ಅವರು ಅತ್ತ ರಣರಂಗದಲ್ಲಿ ನಡೆಯುವ ದೃಶ್ಯಗಳ ಗಮನವಿಟ್ಟು ನೋಡುತ್ತಿದ್ದರೆ, ಇತ್ತ ನಾವೆಲ್ಲರೂ ನಜ್ಜಾಶಿ ರಾಜನಿಗೆ ಬೇಕಾದ ಪ್ರಾರ್ಥನೆ ಮಾಡುತ್ತಿದ್ದೆವು. ಅಲ್ಲಿ ಏನು ನಡೆಯುತ್ತಿರಬಹುದು ಎಂದು ಬಹಳ ಚಿಂತೆಯಿಂದಲೇ ಕಾಯುತ್ತಿದ್ದೆವು, ಅಷ್ಟರಲ್ಲೇ ಝುಬೈರ್ ◌ؓ ಬಹಳ ಆವೇಶದಿಂದ ನೀವೆಲ್ಲರೂ ಸಂತೋಷ ಪಡಿರಿ, ನೇಗಿಸ್ ರಾಜ ಗೆದ್ದಿದ್ದಾರೆ ಎಂದು ಹೇಳುತ್ತಾ ಒಳಗೆ ಬಂದರು. ಅದನ್ನು ಕೇಳಿ ನಮಗೆ ಬಹಳಷ್ಟು ಸಂತೋಷವಾಗಿತ್ತು, ನಾವು ಅಷ್ಟೊಂದು ಸಂತೋಷ ಪಟ್ಟ ವಿಷಯ ಹಬ್’ಷದಲ್ಲಿ ಬೇರೆ ನಡೆದಿರಲಿಲ್ಲ.

ಬಹಳ ಕುತೂಹಲಕಾರಿಯಾದ, ಖುರೈಷಿ ಪ್ರತಿನಿಧಿಗಳಾಗಿ ಹಬ್’ಶ ನಗರಕ್ಕೆ ಬಂದಿದ್ದ ಅಂರ್ ಹಾಗೂ ಉಮಾರರ ಒಂದು ಕಥೆಯನ್ನು, ಇಲ್ಲಿ ಇಮಾಮ್ ತ್ವಬ್’ರಾನಿಯವರು ◌ؓ ವಿವರಿಸುತ್ತಾರೆ. ಅಂರ್ ಅಷ್ಟೊಂದು ಸೌಂದರ್ಯವಿರುವ ವ್ಯಕ್ತಿಯಾಗಿರಲಿಲ್ಲ, ಆದರೆ ಉಮಾರ ಬಹಳಷ್ಟು ಸುಂದರನಾದ ವ್ಯಕ್ತಿಯಾಗಿದ್ದರು, ಹಾಗಾಗಿ ಅಂರ್’ನ ಪತ್ನಿಯು ಉಮಾರನನ್ನು ಇಷ್ಟ ಪಟ್ಟರು. ದಾರಿ ಮಧ್ಯೆ ಅವರಿಬ್ಬರೂ ಸೇರಿ ಅಂರ್’ನನ್ನು ಸಮುದ್ರಕ್ಕೆ ದೂಡಿ ಹಾಕಿದರು. ಅಂರ್ ಈಜಿ ದಡ ಸೇರಲು ಬಹಳಷ್ಟು ಪ್ರಯತ್ನ ಪಟ್ಟರು. ಇದನ್ನು ನೋಡುತ್ತಿದ್ದ ಹಡಗಿನ ನಾವಿಕರು, ಅವರನ್ನು ರಕ್ಷಿಸಿ ಪುನಃ ಹಡಗಿಗೆ ಹತ್ತಿಸಿದರು. ಆದರೆ ಅಂರ್ ತನ್ನ ಪತ್ನಿಯ ವಿರುದ್ಧ ಯಾವುದೇ ವಿರೋಧ ವ್ಯಕ್ತಪಡಿಸದೆ, ಬದಲಾಗಿ ಉಮಾರ ಜೊತೆಯಲ್ಲಿ ಇರಲು ಅನುಮತಿ ಕೊಟ್ಟರು. ಹೀಗೆ ಯಾತ್ರೆ ಮುಂದುವರಿಯುತಿದ್ದವು.

ಅಂರ್ ಒಳಗೊಳಗೆ ಉಮಾರನ ವಿರುದ್ಧ, ಸೇಡಿಗಾಗಿ ಕಾಯುತ್ತಿದ್ದರು, ಹಬ್’ಷದಲ್ಲಿ ಅವರ ಯೋಜನೆಗಳೆಲ್ಲವೂ ಕೈ ಕೊಟ್ಟಾಗ, ಅಂರ್, ಉಮಾರನ ಬಳಿ ಬಂದು, ನೀನು ಬಹಳ ಸುಂದರನಾದ ವ್ಯಕ್ತಿ ಅಲ್ಲವೇ.? ನಿನ್ನ ಸೌಂದರ್ಯಕ್ಕೆ ಯಾರೂ ಬೇಕಾದರೂ ಬೀಳ್ತಾರೆ ಅಲ್ವಾ.? ನೀನು ರಾಜನ ಪತ್ನಿಯನ್ನು ಕೂಡ ನಿನ್ನ ಜಾಲದಲ್ಲಿ ಬೀಳಿಸು, ಇದರಿಂದ ನಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಹಾಯವಾಗಬಹುದು ಎಂದು ಹೇಳಿದಾಗ, ಉಮಾರ ಅವರ ಕುತಂತ್ರಕ್ಕೆ ಬಲಿಯಾಗಿ ರಾಣಿಯನ್ನು ವಶೀಕರಿಸಲು, ಅವರಿಗೆ ಇಷ್ಟವಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಇತ್ತ ಅಂರ್ ರಾಜನ ಬಳಿ ಬಂದು, ಉಮಾರ ರಾಣಿಯನ್ನು ವಶೀಕರಿಸಲು ಬಹಳಷ್ಟು ಪ್ರಯತ್ನ ಮಾಡುತ್ತಿದ್ದಾನೆ, ಎಂದು ತಿಳಿಸಿದರು. ಅದನ್ನು ಕೇಳಿದ ತಕ್ಷಣ ರಾಜನ ಕೋಪವು ನೆತ್ತಿಗೇರಿತು. ರಾಜನು ಕೋಪದಿಂದ, ನನ್ನ ಊರಿಗೆ ಅತಿಥಿಯಾಗಿ ಬಂದು, ನನ್ನ ರಾಣಿಯ ಮೇಲೆಯೇ ಕಣ್ಣು ಹಾಕಿದ ಅಲ್ವಾ.? ನಾವು ಅತಿಥಿಗಳನ್ನು ಸಾಯಿಸುವುದಿಲ್ಲ, ಆದರೆ ಸಾಯಿಸುದಕ್ಕಿಂತ ಒಳ್ಳೆಯ ಶಿಕ್ಷೆಯನ್ನೇ ನಾವು ಅವನಿಗೆ ನೀಡುತ್ತೇವೆ ಎಂದು, ರಾಜರು ವಾಮಾಚಾರಿಯನ್ನು ಕರಿಸಿ, ಮೂತ್ರನಾಳದ ಮೇಲೆ ವಾಮಾಚಾರ ಮಾಡಿಯೇ ಬಿಟ್ಟರು. ಇದರಿಂದ ಉಮಾರ ಮನುಷ್ಯರನ್ನು ಕಂಡ ಕ್ಷಣವೇ, ಓಡಿ ಹೋಗಿ ಅಡಗಿಕೊಳ್ಳಲು ಆರಂಭಿಸಿದರು. ಹಾಗಾಗಿ ಅವರು ನೇರವಾಗಿ ಕಾಡಿಗೆ ಓಡಿ ಹೋಗಿ ಅಲ್ಲಿಯೇ ಉಳಿದುಕೊಂಡರು.

ಇದು ಹೀಗೆ ಉಮರ್’ರವರ ◌ؓ ಆಳ್ವಿಕೆಯ ವರೆಗೆ ಮುಂದುವರಿಯಿತು. ಒಂದು ದಿನ ಉಮಾರನ ಮಾವನ ಮಗನಾದ ಅಬ್ದುಲ್ಲಾಹ್ ಬಿನ್ ಅಬೀ ರಬೀಅ ಖಲೀಫರ ಅನುಮತಿಯಿಂದ ಹಬ್’ಷ ನಗರಕ್ಕೆ ಬಂದಿದ್ದರು. ದಾರಿ ಮಧ್ಯೆ ಅವರಿಗೆ ಅಲ್ಲಿ ಕಾಡು ಪ್ರಾಣಿಗಳ ಜೊತೆಯಲ್ಲಿದ್ದ ಉಮಾರನನ್ನು ಕಾಣಲು ಸಾಧ್ಯವಾಯಿತು. ಅವರ ದೇಹ ಸಂಪೂರ್ಣವಾಗಿ ಕೂದಲಿನಿಂದ ಮರೆಯಾಗಿತ್ತು, ಉದ್ದವಾದ ಉಗುರು, ಅಲ್ಲಲ್ಲಿ ಹರಿದಿರುವ ಬಟ್ಟೆ, ಒಟ್ಟಾರೆ ಹೇಳುವುದಾದರೆ ರಾಕ್ಷಸನ ಹಾಗೆ ಕಾಣುತ್ತಿದ್ದರು. ಕಾಡು ಪ್ರಾಣಿಗಳ ಜೊತೆಯಲ್ಲಿ ನೀರು ಕುಡಿಯಲು ಹೋಗುತ್ತಿದ್ದ ಸಂದರ್ಭದಲ್ಲಿ, ಅಬ್ದುಲ್ಲಾಹ್, ಅವರನ್ನು ಹೋಗಿ ಹಿಡಿದು, ಅವರ ಹೆಸರು, ಊರು ಎಲ್ಲವನ್ನೂ ತಿಳಿಸಿದರು. ಆದರೆ ಉಮಾರ ಅವರಿಂದ ತಪ್ಪಿಸಿ ಓಡಿ ಹೋದರು. ಮತ್ತೊಮ್ಮೆ ಹೋಗಿ ಹಿಡಿದುಕೊಂಡಾಗ, ಉಮಾರ ಜೋರಾಗಿ, ನನ್ನನ್ನು ಬಿಟ್ಟು ಬಿಡಿ ಬುಜೈರ್, ನನ್ನನ್ನು ಬಿಟ್ಟು ಬಿಡಿ ಬುಜೈರ್ ಎಂದು ಬೊಬ್ಬೆ ಹಾಕಲು ಆರಂಭಿಸಿದರು. ಅದನ್ನು ಕಂಡು ಅಬ್ದುಲ್ಲಾಹ್ ತನ್ನ ಹಿಡಿತವನ್ನು ಸ್ವಲ್ಪ ಬಿಗಿಗೊಳಿಸಿದರು. ಆದರೆ ಅಷ್ಟೊತ್ತಿಗಾಗಲೇ ಉಮಾರನ ಪ್ರಾಣ ಪಕ್ಷಿಯು ಹಾರಿ ಹೋಗಿತ್ತು.

ಯುದ್ಧದ ನಂತರ, ಸತ್ಯ ವಿಶ್ವಾಸಿಗಳು ಹಬ್’ಷ ನಗರದಲ್ಲಿ ಕ್ಷೇಮವಾಗಿ ಕಾಲ ಕಳೆಯುತಿದ್ದರು. ಅಲ್ಲಿನ ರಾಜ ಅವರಿಗೆ ಒಳ್ಳೆಯ ರೀತಿಯಲ್ಲಿ ಅತಿಥಿ ಸತ್ಕಾರ ನೀಡುತ್ತಿದ್ದರು. ಪ್ರವಾದಿಯವರು ﷺ, ನಗೀಸ್ ರಾಜನಿಗೆ ಬರೆದ ಪತ್ರದ ಕುರಿತು, ಇತಿಹಾಸದಲ್ಲಿ ಬಹಳಷ್ಟು ಚರ್ಚೆಗಳು ನಡೆದಿದೆ. ಅದರ ಕುರಿತು ಇಮಾಮ್ ಬೈಹಕಿಯವರು ◌ؓ ಈ ರೀತಿ ವಿವರಿಸುತ್ತಾರೆ.

“ಬಿಸ್ಮಿಲ್ಲಾಹ್.., ಅಲ್ಲಾಹನ ಸಂದೇಶ ವಾಹಕರಾದ ಮುಹಮ್ಮದ್ ﷺ ಬಿನ್ ಅಬ್’ದಿಲ್ಲಾಹ್ ಅವರಿಂದ, ನಜ್ಜಾಶಿಯಾದ ಅಲ್ ಅಸ್’ಹಂ ಅವರಿಗೆ, ನಿಮಗೆ ಸಂತೋಷ ಉಂಟಾಗಲಿ, ಅಲ್ಲಾಹನನ್ನು ಸ್ತುತಿಸುತ್ತಿದ್ದೇನೆ. ಈಸ (ಅ) ಪ್ರವಾದಿಯವರು ಅಲ್ಲಾಹುವಿನ ದೂತರೂ, ಸೇವಕರು, ಪವಿತ್ರ ಆತ್ಮವೂ ಕೂಡ ಆಗಿರುವರು ಎಂದು ನಾನು ಸಾಕ್ಷಿ ವಹಿಸುತ್ತೇನೆ. ಆ ಪವಿತ್ರ ಆತ್ಮಕ್ಕೆ, ಪವಿತ್ರಳಾದ ಮರ್’ಯಮಿನ ಮೂಲಕ ಜನ್ಮ ನೀಡಿದನು. ಪ್ರವಾದಿ ಆದಮರನ್ನು (ಅ), ನೇರವಾಗಿ ಅಲ್ಲಾಹನು ಸೃಷ್ಟಿಸಿದ ಹಾಗೆ , ಮರ್’ಯಮಿನ ಗರ್ಭಕ್ಕೆ ಆ ಪವಿತ್ರ ಆತ್ಮವನ್ನು ಹಾಕಿ, ಈಸ ಪ್ರವಾದಿಯವರಿಗೆ (ಅ) ಜನ್ಮ ನೀಡಿದನು. ಏಕನಾದ ಅಲ್ಲಾಹನನ್ನು ಆರಾಧಿಸಲು, ಅವನ್ನು ಅನುಸರಿಸಲು, ನಿಮಗೆ ನಾನು ಆಹ್ವಾನ ನೀಡುತ್ತಿದ್ದೇನೆ. ಅವನಿಗೆ ಯಾವುದೇ ಜೊತೆಗಾರರಿಲ್ಲ, ನಾನು ಅಲ್ಲಾಹನ ಸಂದೇಶ ವಾಹಕನಾಗಿರುವೆನು. ನನ್ನನ್ನು ಹಿಂಬಾಲಿಸಿ, ವಿಶ್ವಾಸವಿರಿಸಿ, ನಾನು ಹೇಳುವ ವಿಷಯಗಳನ್ನು ಸ್ವೀಕರಿಸಬೇಕಾಗಿ ವಿನಂತಿಸುತ್ತಿದ್ದೇನೆ. ನನ್ನ ದೊಡ್ಡಪ್ಪನ ಮಗನಾದ ಜಅಫರ್’ರವರ ◌ؓ ಜೊತೆಯಲ್ಲಿ ಒಂದು ಗುಂಪನ್ನು, ನಿಮ್ಮ ಬಳಿ ಕಳುಹಿಸಿದ್ದೇನೆ. ಅವರ ಮೇಲೆ ಕೋಪಿಸಿಕೊಳ್ಳದೆ, ಅವರಿಗೆ ಆಶ್ರಯ ನೀಡಿರಿ. ನಾನು ನಿಮ್ಮನ್ನು ಅಲ್ಲಾಹನ ದಾರಿಗೆ ಆಹ್ವಾನಿಸಿ, ನನಗೆ ಲಭಿಸಿದ ಒಳಿತುಗಳನ್ನು ನಿಮಗೆ ಉಪದೇಶ ಮಾಡುತ್ತಿದ್ದೇನೆ. ದಯವಿಟ್ಟು ಸ್ವೀಕರಿಸಿರಿ. ಸನ್ಮಾನ ಸ್ವೀಕರಿಸಿದವರಿಗೆ ಸಂತೋಷ ಉಂಟಾಗಲಿ.” ಎಂದಾಗಿತ್ತು ಆ ಪತ್ರದಲ್ಲಿ ಇದ್ದದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-96/365

ಬಹಳ ವಿನಮ್ರತೆಯಿಂದ ನಜ್ಜಾಶ್ ರಾಜ ಆ ಪತ್ರವನ್ನು ಸ್ವೀಕರಿಸಿದರು. ಅದನ್ನು ಓದಿದ ನಂತರ ಅವರು ಕೂಡ ತಿರುಗಿ ಅದಕ್ಕೆ ಪ್ರತಿಕ್ರಿಯೆ ನೀಡಿದರು, ಅದರ ವಿವರಣೆ ಈ ರೀತಿ ಆಗಿದೆ.

“ಅಸ್’ಹಂ ಬಿನ್ ಅಬ್’ಜರ್ ಅನ್ನಜ್ಜಾಶಿ, ಅಲ್ಲಾಹುವಿನ ದೂತರಾದ ಮುಹಮ್ಮದ್ ﷺ ಪ್ರವಾದಿಯವರಿಗೆ, ಅಲ್ಲಾಹನ ಪ್ರವಾದಿಯವರ ﷺ ಮೇಲೆ ಅಲ್ಲಾಹನ ಕರುಣೆಯೂ, ರಕ್ಷಣೆಯೂ ಇರಲಿ. ನನ್ನನ್ನು ಸನ್ಮಾರ್ಗಕ್ಕೆ ಕರೆದು ತಂದ ಅಲ್ಲಾಹನಲ್ಲದೆ ಬೇರಾರು ಆರಾಧ್ಯನಿಲ್ಲ. ಓ ಪ್ರವಾದಿಯವರೇ ﷺ ತಾವು ಈಸ ಪ್ರವಾದಿಯವರ (ಅ) ಕುರಿತು ಬರೆದದ್ದನ್ನು ನಾನು ಓದಿದೆನು. ಜಗದೊಡೆಯನ ಮೇಲಾಣೆ.! ತಾವು ಹೇಳಿದ ಮಾತು ಅಕ್ಷರಶಃ ಸತ್ಯ, ತಮ್ಮ ದೊಡ್ಡಪ್ಪನ ಮಗನ ಕುರಿತು ಬರೆದು ವಿಷಯಗಳು ಕೂಡ ನನಗೆ ಅರ್ಥವಾಯಿತು. ನೀವು ನೀತಿವಂತರಾದ, ಸತ್ಯ ಸಂದೇಶವಾಹಕರೆಂದು ನಾನು ಸಾಕ್ಷಿ ವಹಿಸುತ್ತೇನೆ. ನಾನು ನಿಮ್ಮನ್ನು ಅನುಸರಿಸುತ್ತೇನೆ, ಅದನ್ನು ನಿಮ್ಮ ದೊಡ್ಡಪ್ಪನ ಮಗನ ಕೈ ಹಿಡಿದು ಈಗಾಗಲೇ ಹೇಳಿದ್ದೇನೆ. ನನ್ನ ಮಗ ಅರೀಹನನ್ನು ನೀವು ಒಪ್ಪುದಾದರೆ, ಅಲ್ಲಿಗೆ ಕಳುಹಿಸಿ ಕೊಡುತ್ತೇನೆ. ನಿಮ್ಮ ಎಲ್ಲಾ ಸಂದೇಶಗಳನ್ನು ಸಂಪೂರ್ಣವಾಗಿ ಅಂಗೀಕರಿಸುತ್ತೇನೆ.” ಎಂದು ಬರೆದಿದ್ದರು.

ಹಬ್’ಷದ ರಾಜ ಇಸ್ಲಾಮ್ ಸ್ವೀಕರಿಸಿದ ನಂತರ, ಸತ್ಯ ವಿಶ್ವಾಸಿಗಳು ಬಹಳ ಸಂತೋಷದಿಂದ ಅಲ್ಲಿ ಕಾಲ ಕಳೆಯುತ್ತಿದ್ದರು. ಮಕ್ಕಾದಲ್ಲಿ ಇರುವವರಿಗೂ ಈ ಸುದ್ದಿ ಬಹಳಷ್ಟು ಸಂತೋಷ ತಂದಿತ್ತು, ಅವರೂ ಕೂಡ ಒಂದು ಕ್ಷಣ ಹಬ್’ಷಕ್ಕೆ ಯಾತ್ರೆ ಹೋದರೆ ಹೇಗೆ ಎಂದು ಚಿಂತಿಸಿದರು, ಅಬೂಬಕ್ಕರ್’ರವರ ◌ؓ ಯೋಚನೆಯೂ ಕೂಡ ಇದಕ್ಕೆ ಹೊರೆತಾಗಿರಲಿಲ್ಲ.

ಇದರ ಬಗ್ಗೆ ಆಯಿಷಾ ◌ؓ ಬೀವಿಯವರು ಈ ರೀತಿ ವಿವರಿಸುತ್ತಾರೆ. ಪ್ರವಾದಿಯವರು ﷺ ಎಲ್ಲಾ ದಿವಸವೂ, ಬೆಳಿಗ್ಗೆ ಹಾಗೂ ಸಂಜೆ ನಮ್ಮ ತಂದೆಯ ಬಳಿ ಬರುತ್ತಿದ್ದರು. ಸಮಸ್ಯೆಗಳು ಅಧಿಕವಾದಾಗ ತಂದೆಯವರು ಕೂಡ ಹಬ್’ಷ ನಗರಕ್ಕೆ ಹೋಗಲು ತೀರ್ಮಾನಿಸಿ, ಯಾತ್ರೆ ಹೋಗಿಯೇ ಬಿಟ್ಟರು. ಬರ್’ಕುಲ್ ಗಿಮಾದ್’ವರೆಗೆ ತಲುಪಿದರು. ಅಷ್ಟರಲ್ಲೇ ಆ ಪ್ರಾಂತ್ಯದ ನಾಯಕನಾಗಿದ್ದ, ಇಬ್’ನುದ್ದುಗನ್ನ, ಇದು ನೀವುಗಳು ಎಲ್ಲಿಗೆ ಹೋಗುವುದು.? ಎಂದು ಕೇಳಿದರು. ಅದಕ್ಕೆ ಅಬೂಬಕ್ಕರ್ ◌ؓ, ಇಲ್ಲಿಯ ಜನತೆ ನಮ್ಮನ್ನು ಹೊರಗೆ ಹಾಕಿದ್ದಾರೆ, ಶಾಂತಿಯಿಂದ ಅಲ್ಲಾಹನನ್ನು ಆರಾಧಿಸಲು ಕೂಡ ಬಿಡುತ್ತಿಲ್ಲ. ಹಾಗಾಗಿ ಬೇರೆ ಕಡೆ ಹೋಗುತ್ತಿದ್ದೇವೆ ಎಂದು ಹೇಳಿದರು. ಅದನ್ನು ಕೇಳಿದ ಇಬ್’ನುದ್ದುಗುನ್ನ, ನೀವು ಊರು ಬಿಟ್ಟು ಹೋಗಬಾರದು. ಬಡವರನ್ನೂ, ನಿರಾಶ್ರಿತರನ್ನೂ ಸಮನವಾಗಿ ಕಂಡು, ಎಲ್ಲರಿಗೂ ಸಹಾಯ ಮಾಡುವ ನೀವು, ಎಲ್ಲಿಗೂ ಹೋಗಬಾರದು. ಬೇಕಿದ್ದರೆ ನಿಮಗೆ ನಾನು ಆಶ್ರಯ ನೀಡುತ್ತೇನೆ ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್’ರವರು ◌ؓ, ಸರಿ ಹಾಗೆ ಆಗಲಿ, ಆದರೆ ನನ್ನ ಜೊತೆಯಲ್ಲಿ ಹಾರಿಸ್ ಬಿನ್ ಖಾಲಿದ್ ◌ؓ ಕೂಡ ಇದ್ದಾರೆ ಎಂದು ಹೇಳಿದಾಗ, ಇಬ್’ನುದ್ದುಗನ್ನ ಅವರು ಯಾತ್ರೆ ಮುಂದುವರಿಸಲಿ, ನೀವು ಮಾತ್ರ ನಿಂತರೆ ಸಾಕು ಎಂದು ಹೇಳಿದರು. ಅದನ್ನು ಕೇಳಿ ಸಿದ್ದೀಕ್’ರು ◌ؓ, ಹಾಗಿದ್ದರೆ ಇಲ್ಲಿ ಸೌಹಾರ್ದತೆಗೆ ಏನು ಬೆಲೆಯಿದೆ.? ಎಂದು ಕೇಳಿದರು.

ಆದರೆ ಹಾರಿಸ್ ◌ؓ ಹಾಗೂ ಅವರ ಸಂಗಡಿಗರು ಅಲ್ಲಿಂದ ಯಾತ್ರೆ ಮುಂದುವರಿಸಿದರು. ನಂತರ ಇಬ್’ದ್ದುಗುನ್ನ ಅಲ್ಲಿಂದ ನೇರವಾಗಿ, ಖುರೈಷಿಗಳ ಬಳಿ ತೆರಳಿ, ಬಡವರನ್ನೂ, ನಿರಾಶ್ರಿತರನ್ನು ಸಹಾಯ ಮಾಡುವ ಅಬೂಬಕ್ಕರ್ ◌ؓ ಯಾವುದೇ ಕಾರಣಕ್ಕೂ ಈ ಊರನ್ನು ಬಿಟ್ಟು ಹೋಗಬಾರದು. ಹಾಗಾಗಿ ನಾನು ಅವರಿಗೆ ಆಶ್ರಯ ನೀಡುತ್ತಿದ್ದೇನೆ ಎಂದು ಹೇಳಿದಾಗ. ಖುರೈಷಿಗಳು ಅವರ ಆಶ್ರಯವನ್ನು ಸ್ವೀಕರಿಸಿದರು. ಈ ಘಟನೆಯ ಕುರಿತು ಇನ್ನೊಂದು ಅಭಿಪ್ರಾಯದ ಪ್ರಕಾರ, ಖುರೈಷಿಗಳು ಈ ರೀತಿ ಹೇಳಿದರು. ಅಬೂಬಕ್ಕರ್’ರವರು ◌ؓ ಮನೆಯಲ್ಲೇ ಕುಳಿತು ಆರಾಧನೆ, ಖುರ್’ಆನ್ ಪಠನೆ ಎಲ್ಲವನ್ನೂ ಮಾಡಲಿ ಆದರೆ ಸಾರ್ವಜನಿಕವಾಗಿ ಯಾವುದೇ ಕಾರಣಕ್ಕೂ ಮಾಡಬಾರದು, ಬಹುಶಃ ಆ ಕಾರಣದಿಂದ ನಮ್ಮ ಕುಟುಂಬದ ಇತರ ಸದಸ್ಯರಿಗೂ ಅದು ಪರಿಣಾಮ ಬೀರಬಹುದು ಎಂದು ಹೇಳಿದ್ದರು.

ಅಬೂಬಕ್ಕರ್ ◌ؓ ಮನೆಯೊಳಗಯೇ ಆರಾಧನೆಯಲ್ಲಿ ನಿರತರಾಗಿದರು. ಸ್ವಲ್ಪ ದಿನದ ಬಳಿಕ ಮನೆಯ ಪಕ್ಕದಲ್ಲೇ ಸಣ್ಣ ಮಸ್ಜಿದ್ ನಿರ್ಮಿಸಿ, ಅಲ್ಲಿಯೇ ನಮಾಝ್ ಮಾಡಿ ಖುರ್’ಆನ್ ಪಠನೆಯನ್ನೂ ಆರಂಭಿಸಿದರು. ಇವರ ಆರಾಧನೆ ಶೈಲಿಯನ್ನು ಕಂಡು ಸುತ್ತಮುತ್ತಲಿನ ಮಹಿಳೆಯರು, ಮಕ್ಕಳೂ ಕೂಡ ಆಕರ್ಷಿತರಾಗಿದ್ದರು. ಮಾಹನರು ಕುರ್’ಆನ್ ಪಠಿಸುವಾಗ ಅದರ ಅರ್ಥವನ್ನು ಗಂಭೀರವಾಗಿ ಚಿಂತಿಸಿ, ಬಹಳಷ್ಟು ಕಣ್ಣೀರು ಸುರಿಸುತ್ತಿದ್ದರು. ಅದನ್ನು ಕಂಡ ಸತ್ಯ ನಿಷೇಧಿಗಳಿಗೆ ಅದನ್ನೂ ಕೂಡ ಸಹಿಸಲು ಆಗಲಿಲ್ಲ. ಅವರು ನೇರವಾಗಿ ಇಬ್’ನುದ್ದುಗನ್ನಯರ ಬಳಿ ಹೋಗಿ , ನೀವು ಆಶ್ರಯ ನೀಡಿದ ಅಬೂಬಕ್ಕರ್’ರಲ್ಲಿ ◌ؓ, ನೀವು ಹೇಳಿದ್ದು ಮನೆಯ ಒಳಗೆ ಆರಾಧನೆ ಮಾಡಲು ಆಗಿತ್ತು ಅಲ್ಲವೇ, ಆದರೆ ಈಗ ಅವರು ಮನೆಯ ಪಕ್ಕದಲ್ಲೇ ಮಸ್ಜಿದ್ ನಿರ್ಮಿಸಿ, ಸಾರ್ವಜನಿಕವಾಗಿ ಆರಾಧನೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಅದನ್ನು ಕೇಳಿ ತಕ್ಷಣವೇ ಇಬ್’ನುದ್ದುಗನ್ನ ಅಬೂಬಕ್ಕರ್’ರವರನ್ನು ◌ؓ ಭೇಟಿಯಾಗಿ, ನನ್ನ ಆಶ್ರಯದಲ್ಲಿರುವ ಒಬ್ಬ ವ್ಯಕ್ತಿ, ಈ ರೀತಿ ತಂತ್ರಗಳನ್ನು ರೂಪಿಸುವುದು ನನಗೆ ಇಷ್ಟವಿಲ್ಲ, ಹಾಗಾಗಿ ನೀವು ಈ ಕೂಡಲೇ ಸಾರ್ವಜನಿಕವಾಗಿ ಆರಾಧನೆ ಮಾಡುವುದನ್ನು ನಿಲ್ಲಿಸಬೇಕು. ಅಥವಾ ನನ್ನ ಆಶ್ರಯವನ್ನು ಬಿಟ್ಟು ಬಿಡಬೇಕು ಎಂದು ಹೇಳಿದರು. ಅದಕ್ಕೆ ಅಬೂಬಕ್ಕರ್’ರವರು ◌ؓ ತಕ್ಷಣವೇ ನಾನು ನಿಮ್ಮ ಆಶ್ರಯದಿಂದ ದೂರ ಸರಿದು ಅಲ್ಲಾಹನ ಆಶ್ರಯವನ್ನು ಬಯಸುತ್ತೇನೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-97/365

ಇಬ್’ನು ಇಸ್’ಹಾಖ್ ◌ؓ ಮಾತು ಮುಂದುವರಿಸುತ್ತಿದ್ದಾರೆ. ಅಬೂಬಕ್ಕರ್ ◌ؓ ಇಬ್’ನುದುಗನ್ನರ ಆಶ್ರಯದಿಂದ ಹೊರಗೆ ಬಂದು ನೇರವಾಗಿ ಕಅಬಾಲಯದ ಕಡೆಗೆ ನಡೆದರು. ಆ ಸಂದರ್ಭದಲ್ಲಿ ಅಬೂಬಕ್ಕರ್’ರವರ ◌ؓ ತಲೆಯ ಮೇಲೆ, ಒಬ್ಬ ದುಷ್ಟ ಬಂದು ಮಣ್ಣು ಎಸೆದನು. ಅದೇ ಸಮಯಕ್ಕೆ, ವಲೀದ್ ಬಿನ್ ಮುಗೀರ ಅಥವಾ ಆಸ್ವ್ ಬಿನ್ ವಾಯಿಲ್ ಅದೇ ದಾರಿಯಲ್ಲಿ ನಡೆದು ಬಂದರು. ಅಬೂಬಕ್ಕರ್ ◌ؓ ಅವರನ್ನು ನಿಲ್ಲಿಸಿ, ನೋಡಿ ನಿಮ್ಮ ಗುಂಪಿನ ಜನರು ಎಷ್ಟು ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದಾಗ, ಅದನ್ನು ನೀವೇ ಅಲ್ವಾ.? ಮಾಡಿದ್ದು ಎಂದು ಉತ್ತರಿಸಿದರು. ಅದನ್ನು ಕೇಳಿ ಅಬೂಬಕ್ಕರ್’ರವರು ◌ؓ ಅಲ್ಲಾಹನನ್ನು ಸ್ತುತಿಸಿದರು.

ಒಂದೊಂದು ಪರೀಕ್ಷೆಗಳು ಕೂಡ ಸತ್ಯ ವಿಶ್ವಾಸಿಗಳ ಉತ್ಸಾಹವನ್ನು ಇಮ್ಮಡಿ ಗೊಳಿಸುತ್ತಿತ್ತು. ಅಷ್ಟೊಂದು ವಿರೋಧಗಳಿದ್ದರೂ, ಭಾಗ್ಯಶಾಲಿ ವ್ಯಕ್ತಿಗಳು ಮಾತ್ರ ತಮ್ಮ ಸನ್ಮಾರ್ಗದ ದಾರಿಯನ್ನು ಹಾರಿಸುತ್ತಲೇ ಇದ್ದರು. ವಿವಿಧ ದಿಕ್ಕುಗಳಿಂದ ಬರುತ್ತಿದ್ದ ತೀರ್ಥ ಯಾತ್ರಿಕರಿಗೂ ಕೂಡ, ಹೊಸ, ಹೊಸ ಸುದ್ದಿಗಳು ಎಲ್ಲಾ ಕಡೆಗಳಿಂದ ತಿಳಿಯಲು ಸಾಧ್ಯವಾಯಿತು.
ಹೀಗಿರುವಾಗ ಔಸ್ ಜನಾಂಗದ ತುಫೈಲ್ ಬಿನ್ ಅಂರ್ ಎನ್ನುವ ವ್ಯಕ್ತಿಯು ಮಕ್ಕಾ ನಗರಕ್ಕೆ ಬಂದರು. ಅವರು ಪ್ರಸಿದ್ಧ ಜನಾಂಗದ, ನಾಯಕರೂ, ಕವಿಯೂ ಕೂಡ ಆಗಿದ್ದರು. ಅವರ ಕಲೆ ಹಾಗೂ ಪ್ರತಿಭೆಯ ಬಗ್ಗೆ ಎಲ್ಲರಿಗೂ ಚಿರಪರಿಚಿತವಾಗಿತ್ತು. ಖುರೈಷಿ ನಾಯಕರು ಅವರನ್ನು ಭೇಟಿಯಾಗಿ ಮುಹಮ್ಮದ್’ರ ﷺ ಕುರಿತು ತಿಳಿಸಲು ಮುಂದಾದರು. ಇಲ್ಲೊಬ್ಬರು ವ್ಯಕ್ತಿಯ ಆಗಮನವಾಗಿದೆ, ಅವರು ತಮ್ಮನ್ನು ಪ್ರವಾದಿ ಎಂದು ಹೇಳುತ್ತಿದ್ದಾರೆ. ಅವರು ಅವತರಿಸುವ ವಾಕ್ಯಗಳು ಬಹಳ ವಿಸ್ಮಯಕಾರಿಯಾಗಿದೆ. ಆದರೆ ಅದು ವಾಮಾಚಾರವಾಗಿದೆ, ನೀವು ಆ ವಾಕ್ಯಾಗಳನ್ನು ಕೇಳುವುದಾಗಲಿ, ಅವರನ್ನು ಭೇಟಿಯಾಗುವುದು ಆಗಲಿ ಮಾಡಬೇಡಿ ಎಂದು ಹೇಳಿದರು. ಅದನ್ನು ಕೇಳಿದ ತುಫೈಲ್ ಎಲ್ಲವನ್ನೂ ವಿಶ್ವಾಸವಿರಿಸಿದ್ದರು, ಅವರು ಬಹಳ ಮುಂಜಾಗರೂಕತೆಯಿಂದ ಕಅಬಾಲಯದ ಬಳಿ ಹೆಜ್ಜೆ ಹಾಕಿದರು. ಅಲ್ಲಿ ನೋಡಿದರೆ ಪ್ರವಾದಿಯವರು ﷺ ಈಗಾಗಲೇ ಬಂದು ನಮಾಝ್ ಮಾಡುತಿದ್ದರು. ಅದನ್ನು ಕಂಡ ತುಫೈಲ್, ಖುರ್’ಆನ್ ಕೇಳಬಾರದು ಎಂದು ಕಿವಿಯನ್ನು ಮುಚ್ಚಿದರು. ಆದರೆ ಸಣ್ಣ ಧ್ವನಿಯಲ್ಲಿ ಖುರ್’ಆನ್ ಓದುವುದು ಅವರಿಗೆ ಕೇಳಲು ಸಾಧ್ಯವಾಯಿತು. ಆ ಖುರ್’ಆನಿಗೆ ಅವರು ಆಕರ್ಷಿತರಾಗಿ, ಕವಿಯೂ ಬುದ್ಧಿವಂತನೂ ಆದ ನಾನು ಯಾಕೆ ನಾನು ಅದನ್ನು ಕೇಳಬಾರದು.? ಜ್ಞಾನಿಯಾದ ನನಗೆ ಅಲ್ಲಾಹನು ಒಳಿತು ತೋರಿಸಿಕೊಡಬಾರದೇ.? ಎಂದು ಸ್ವಯಂ ಚಿಂತಿಸುತ್ತಾ, ಏನೇ ಆಗಲಿ ಒಮ್ಮೆ ಕೇಳೋಣ. ಅದರಲ್ಲಿ ಏನಾದರೂ ಒಳಿತು ಇದ್ದರೆ ಸ್ವೀಕರಿಸೋಣ, ಇಲ್ಲದಿದ್ದರೆ ಬಿಟ್ಟಿಬಿಡೋಣ ಎಂದು ಆಲೋಚಿಸಿ, ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋಗುವ ವರೆಗೂ ಕಾಯುತ್ತಾ ಕುಳಿತರು. ಮನೆಗೆ ಹೋಗಲು ಮುಂದಾದಾಗ ತುಫೈಲ್, ಪ್ರವಾದಿಯವರ ﷺ ಬಳಿ ಬಂದು, ನಿಮ್ಮ ಊರಿನವರು, ನಿಮ್ಮ ಬಗ್ಗೆ ಏನೇನೋ ಹೇಳಿ ನನ್ನನ್ನು ಭಯಗೊಳಿಸಿದ್ದರು. ಹಾಗಾಗಿ ನಾನು ನಿಮ್ಮ ಖುರ್’ಆನ್ ಪಠನೆ ಕೇಳಬಾರದು ಎಂದು ಕಿವಿ ಮುಚ್ಚಿದ್ದೆ, ಆದರೂ ನನಗೆ ಕುರ್’ಆನ್ ಕೇಳಲು ಭಾಗ್ಯ ಸಿಕ್ಕಿತು. ಎಷ್ಟೊಂದು ಸುಂದರವಾದ ವಾಕ್ಯಗಳು, ಎಂತಹ ಅದ್ಭುತ.! ನೀವು ಇತರರಿಗೆ ಏನನ್ನು ಕಲಿಸಿ ಕೊಡುತ್ತಿದ್ದೀರೋ ಅದನ್ನು ನನಗೂ ಕೂಡ ಕಲಿಸಿ ಕೊಡುತ್ತೀರಾ.? ಎಂದು ಕೇಳಿದಾಗ, ಪ್ರವಾದಿಯವರು ﷺ ಮೊದಲು ‘ಅಲ್ ಇಖ್’ಲಾಸ್’ ಅಧ್ಯಾಯವನ್ನು ಪಠಿಸಿದರು. ಅದು ತುಫೈಲ್’ರನ್ನು ಇನ್ನಷ್ಟು ಆಕರ್ಷಿತಗೊಳಿಸಿತು. ನಂತರ ಪ್ರವಾದಿಯವರು ﷺ ನೂರ ಹದಿಮೂರು ಹಾಗೂ ಹದಿನಾಲ್ಕನೇ (ಅಲ್ ಫಲಕ್, ಅನ್ನಾಸ್) ಅಧ್ಯಾಯವನ್ನು ಪಠಿಸಿ, ತುಫೈಲನ್ನು ಇಸ್ಲಾಮಿಗೆ ಆಹ್ವಾನಿಸಿದರು. ಅದೆಲ್ಲವನ್ನೂ ಕೇಳಿದ ತುಫೈಲ್, ವಾಹ್.! ಎಂತಾ ಅದ್ಭುತ ವಾಕ್ಯಗಳು. ಎಷ್ಟೊಂದು ಸುಂದರವಾದ ವಚನ, ಎಂದು ಹೇಳಿ ಅವರು ಇಸ್ಲಾಮ್ ಸ್ವೀಕರಿಸಿದರು. ನಂತರ ಮಾತು ಮುಂದುವರೆಸಿ, ನನ್ನ ಜನಾಂಗದಲ್ಲಿ ನಾನು ಎಲ್ಲರಿಗೂ ಅತೀ ಪ್ರೀಯ ವ್ಯಕ್ತಿಯಾಗಿರುವೆನು, ನಾನು ಅವರನ್ನೂ ಕೂಡ ಇಸ್ಲಾಮಿಗೆ ಆಹ್ವಾನಿಸುತ್ತೇನೆ. ಜೊತೆಯಲ್ಲಿ ನನಗೆ ವಿಶೇಷವಾದ ಪವಾಡದ ಪ್ರಮಾಣ ಕೂಡ ಕೊಟ್ಟಿದ್ದರೆ ಬಹಳ ಒಳ್ಳೆದಿತ್ತು, ಎಂದು ಹೇಳಿದಾಗ, ಪ್ರವಾದಿಯವರು ﷺ ಅವರಿಗಾಗಿ ಪ್ರಾರ್ಥನೆ ಮಾಡಿದರು.

ಕಗ್ಗತ್ತಲು ತುಂಬಿದ ರಾತ್ರಿಯಲ್ಲಿ, ಸುರಿಯುವ ಮಳೆಯ ನಡುವೆ ತುಫೈಲ್ ಊರಿನ ಕಡೆ ನಡೆಯುತ್ತಾ, ಕತ್ತಲಲ್ಲಿ ಹೇಗೋ ಒಂದು ಗುಡ್ಡದ ಬಳಿ ಬಂದು ತಲುಪಿದರು. ತಕ್ಷಣವೇ ಅವರ ಕಣ್ಣಿನ ನಡುವಿನಿಂದ ಒಂದು ಬೆಳಕು ಹೊಮ್ಮಿ, ಅದು ದಾರಿಯಲ್ಲಿ ಹೊಳೆಯುತ್ತಿತ್ತು. ಅದನ್ನು ಕಂಡ ತುಫೈಲ್, ಇದು ಹೀಗೆ ಕಣ್ಣಿನ ನಡುವೆ ನಿಂತರೆ ಅದೊಂದು ಮುಖದ ಮೇಲಿನ ಕಲೆಯಾಗಿ ಕಾಣುತ್ತದೆ. ಹಾಗಾಗಿ ಮುಖವಲ್ಲದ ಸ್ಥಳದಲ್ಲಿ ಇದು ಇದ್ದಿದ್ದರೆ ಬಹಳ ಒಳ್ಳೆದಿತ್ತು ಎಂದು ಆಲೋಚಿಸಿದ್ದೇ ತಡ, ಬೆಳಕು ಚಾವಟಿಯ ತುದಿಗೆ ಸ್ಥಳಾಂತರ ಗೊಂಡು, ತೂಗುದೀಪದಂತೆ ಹೊಳೆಯ ತೊಡಗಿತು. ತುಫೈಲ್ ಆ ಬೆಳಕಿನ ಸಹಾಯದಿಂದ ಮೆಲ್ಲ ಮೆಲ್ಲವಾಗಿ, ಗುಡ್ಡದಿಂದ ಇಳಿದು ಬಂದು ಮನೆಯ ಬಳಿ ತಲುಪಿದರು. ವಯಸ್ಸಾದ ತಂದೆ ತುಫೈಲ್’ರ ಬಳಿ ಬರುತ್ತಿದ್ದಾಗ, ತುಫೈಲ್ ಸ್ವಲ್ಪ ದೂರ ನಿಂತುಕೊಳ್ಳಿ ಅಪ್ಪ, ಎಂದು ಹೇಳಿದರು. ಅದನ್ನು ಕೇಳಿದ ಅವರ ತಂದೆ, ಅದು ಯಾಕೆ ಮಗನೇ ಎಂದು ಕೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-98/365

ತುಫೈಲ್ ◌ؓ ತಂದೆಯಲ್ಲಿ ನಾನು ಸತ್ಯ ವಿಶ್ವಾಸವನ್ನು ಸ್ವೀಕರಿಸಿ, ಮುಹಮ್ಮದ್ ﷺ ಪ್ರವಾದಿಯವರ ಧರ್ಮವನ್ನು ಹಿಂಬಾಲಿಸುತಿದ್ದೇನೆ ಎಂದು ಹೇಳಿದರು. ಅದಕ್ಕೆ ಅವರ ತಂದೆ, ನಾನೂ ಕೂಡ ಮಗನ ಧರ್ಮವನ್ನೇ ಸ್ವೀಕರಿಸುತ್ತೇನೆ ಎಂದು ಹೇಳಿದಾಗ ತುಫೈಲ್, ಹಾಗಿದ್ದರೆ ನೀವು ಅಂಗಸ್ನಾನ ಮಾಡಿ ಬನ್ನಿ ಎಂದು ಹೇಳಿದರು. ತುಫೈಲ್’ರ ತಂದೆ ತಕ್ಷಣವೇ ಅಂಗಸ್ನಾನ ಮಾಡಿ ಬಂದಾಗ, ತಂದೆಗೆ ಇಸ್ಲಾಮಿನ ಕುರಿತು ವಿವರಿಸಿಕೊಟ್ಟರು. ಅದನ್ನು ಕೇಳಿದ ನಂತರ ಅವರ ತಂದೆ ಇಸ್ಲಾಮ್ ಸ್ವೀಕರಿಸಿದರು. ಸ್ವಲ್ಪ ಸಮಯದ ಬಳಿಕ ಅಲ್ಲಿಗೆ ತುಫೈಲ್’ರ್ ಪತ್ನಿ ಬಂದಾಗ, ನನ್ನಿಂದ ಸ್ವಲ್ಪ ಸರಿದು ನಿಲ್ಲು ಎಂದು ಹೇಳಿದರು. ಅದನ್ನು ಕೇಳಿದ ಪತ್ನಿ, ನನ್ನ ತಂದೆ, ತಾಯಿ ಸರ್ವಸ್ವ ಎಲ್ಲವೂ ಆದ ನೀವು ಹೀಗೇಕೆ ಹೇಳುತ್ತಿದ್ದೀರಿ.? ಎಂದು ಕೇಳಿದಾಗ, ತುಫೈಲ್ ನಾನು ಪ್ರವಾದಿ ಮುಹಮ್ಮದ್’ರ ﷺ ಇಸ್ಲಾಮ್ ಧರ್ಮವನ್ನು ಸ್ವೀಕರಿಸಿದ್ದೇನೆ. ಹಾಗಾಗಿ ಈಗ ನಮಗೆ ಜೊತೆ ಸೇರಲು ಸಾಧ್ಯವಿಲ್ಲ ಅಂದರು. ಅದಕ್ಕೆ ಅವರ ಪತ್ನಿ, ನೀವು ಯಾವ ಧರ್ಮವನ್ನು ಅಂಗೀಕರಿಸಿದ್ದೀರೋ.? ನಾನು ಕೂಡ ಅದೇ ಧರ್ಮವನ್ನು ಅಂಗೀಕರಿಸಿತ್ತೇನೆ ಎಂದು ಹೇಳಿದಾಗ, ತುಫೈಲ್ ಹಾಗಿದ್ದರೆ, ಕೂಡಲೇ ಅಂಗಸ್ನಾನ ಮಾಡಿ ಬಾ ಎಂದು ಹೇಳಿದರು. ಅವರು ಅದೇ ರೀತಿ ತಕ್ಷಣವೇ ಅಂಗಸ್ನಾನ ಮಾಡಿ ಬಂದಾಗ, ತುಫೈಲ್ ಇಸ್ಲಾಮಿನ ಬಗ್ಗೆ ಎಲ್ಲವನ್ನೂ ವಿವರಿಸಿದರು. ಅವರ ಪತ್ನಿ ಅದಕ್ಕೆ ಆಕರ್ಷಿತರಾಗಿ ಇಸ್ಲಾಮ್ ಸ್ವೀಕರಿಸಿದರು.

ಆದರೆ ತುಫೈಲ್’ರ ತಾಯಿ ಅದಕ್ಕೆ ಗಮನ ಕೊಡಲಿಲ್ಲ. ನಂತರ ಅವರು ದೌಸ್ ಜನಾಂಗದ ಜನರನ್ನು ಕೂಡ ಇಸ್ಲಾಮಿಗೆ ಆಹ್ವಾನಿಸಿದರು. ಆದರೆ ಅವರೆಲ್ಲರೂ ಉದಾಸೀನತೆ ತೋರಿಸಿದರು. ತುಫೈಲ್ ಅಲ್ಲಿಂದ ನೇರವಾಗಿ ಪ್ರವಾದಿಯವರ ﷺ ಬಳಿ ತೆರಳಿ, ದೌಸ್ ಜನಾಂಗದ ಜನರಲ್ಲಿ ವ್ಯಭಿಚಾರವು ಅಧಿಕವಾಗಿದೆ ಹಾಗಾಗಿ ನೀವು ಅವರ ವಿರುದ್ಧವಾಗಿ ಪ್ರಾರ್ಥನೆ ಮಾಡಬೇಕು ಎಂದು ಕೇಳಿಕೊಂಡರು, ಅದಕ್ಕೆ ಪ್ರವಾದಿಯವರು ﷺ ತುಫೈಲ್’ರನ್ನು ಸಮಾಧಾನ ಪಡಿಸಿ, ನೀವು ಊರಿಗೆ ಮರಳಿರಿ, ಹಾಗೂ ಅವರಲ್ಲಿಯೂ ಬಹಳ ಸೌಮ್ಯ ಸ್ವಭಾವದಿಂದಲೇ ವರ್ತಿಸಿರಿ ಎಂದು ಹೇಳಿ ಕಳುಹಿಸಿದರು.
ಪ್ರವಾದಿಯವರು ﷺ ಮದೀನಕ್ಕೆ ಪಲಾಯನ ಆಗುವ ವರೆಗೂ ತುಫೈಲ್ ಊರಲ್ಲೇ ನಿಂತರು. ನಂತರ ದೌಸ್ ಜನಾಂಗದಿಂದ ಇಸ್ಲಾಮ್ ಸ್ವೀಕರಿಸಿದ ಜನರ ಜೊತೆಯಲ್ಲಿ ಖೈಬರ್’ಗೆ ತೆರಳಿ ಪ್ರವಾದಿಯವರನ್ನು ﷺ ಸೇರಿಕೊಂಡರು.

ಪ್ರವಾದಿಯವರು ﷺ ಮಕ್ಕಾದಲ್ಲಿ ತಮ್ಮ ಪ್ರಭೋಧನೆಯಲ್ಲಿ ನಿರತರಾದರು. ಶತ್ರುಗಳು ಬಹಳಷ್ಟು ಸಂಚುಗಳನ್ನು, ವಿವಿಧ ಶೈಲಿಯಲ್ಲಿ ರೂಪಿಸಿದ್ದರು. ಆದರೆ ಯಾವುದು ಕೂಡ ಸಫಲವಾಗಲಿಲ್ಲ. ಅಷ್ಟೇ ಅಲ್ಲದೆ, ದಿನದಿಂದ ದಿನಕ್ಕೆ ಇಸ್ಲಾಂ ಸ್ವೀಕರಿಸುವವರ ಸಂಖ್ಯೆಯೂ ಕೂಡ ಅಧಿಕವಾಗುತ್ತಲೇ ಇತ್ತು. ಅದರ ನಡುವೆ ಖುರೈಷಿ ನಾಯಕರಿಗೆ ಪ್ರವಾದಿಯವರ ﷺ ಮಹತ್ವವನ್ನು ಅಂಗೀಕರಿಸಬೇಕಾಗಿ ಬಂತು. ಆ ಘಟನೆಯು ಈ ರೀತಿಯಾಗಿದೆ.

ಇರಾಷಿನಿಂದ ಒಬ್ಬ ವ್ಯಕ್ತಿಯು ಮಕ್ಕಾ ನಗರಕ್ಕೆ ಬಂದಿದ್ದರು. ಅವರಿಂದ ಅಬೂಜಹಲ್ (ಅಬುಲ್ ಹಕಮ್) ಒಂಟೆಗಳಿಗೆ ಬೆಲೆ ನಿಶ್ಚಯಿಸಿ ಖರೀದಿಸಿದರು. ಆದರೆ ಅದು ಅವರಿಗೆ ಅದರ ಬೆಲೆಯನ್ನು ನೀಡದೆ ಸತಾಯಿಸಿದರು. ಆ ವ್ಯಕ್ತಿ ತನ್ನ ಹಣ ಸಿಗದೆ, ತನ್ನ ಒಂಟೆಗಳನ್ನು ವಾಪಸು ಪಡೆಯಲು ಬಹಳಷ್ಟು ಜನರ ಮೊರೆ ಹೋದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಕಅಬಾಲಯದ ಬಳಿ ಬಂದ ಆ ವ್ಯಕ್ತಿಯು, ಒಂದು ಭಾಗದಲ್ಲಿ ಖುರೈಷಿಗಳ ಸಭೆ ಹಾಗೂ ಮಸ್ಜಿದ್’ನ ಮತ್ತೊಂದು ಭಾಗದಲ್ಲಿ ಪ್ರವಾದಿಯವರು ﷺ ಇರುವುದನ್ನು ನೋಡಿ, ಓ ಖುರೈಷಿಗಳೇ, ನನ್ನಿಂದ ಕಿತ್ತುಕೊಂಡ ಒಂಟೆಗಳನ್ನು ಅಬುಲ್ ಹಕಮ್’ನಿಂದ ವಾಪಸ್ಸು ಕೊಡಿಸಿರಿ ಎಂದು ಕೇಳಿದಾಗ, ಅಲ್ಲೇ ನೆರೆದಿದ್ದ ಕೆಲವರು ತಮಾಷೆ ಮಾಡುವ ರೀತಿಯಲ್ಲಿ, ಅದೋ ಅಲ್ಲಿ ಕುಳಿತಿರುವ ವ್ಯಕ್ತಿಯ ಬಳಿ ಹೋಗಿ ಹೇಳಿರಿ ಎಂದು ಪ್ರವಾದಿಯವರನ್ನು ﷺ ತೋರಿಸಿ ಹೇಳಿದರು. ಅಬೂಜಹಲ್’ಗೆ ಪ್ರವಾದಿಯವರ ﷺ ಮೇಲಿದ್ದ ದ್ವೇಷವನ್ನು ನೆನೆದು ತಮಾಷೆ ಮಾಡುವ ರೀತಿಯಲ್ಲಾಗಿತ್ತು ಅವರು ಹೇಳಿದ್ದು, ಆದರೆ ಅಸಹಾಯಕನಾಗಿದ್ದ ಆ ವ್ಯಕ್ತಿಯು, ಅವರ ಮಾತನ್ನ ನಂಬಿ ಪ್ರವಾದಿಯವರ ﷺ ಬಳಿ ತೆರಳಿದರು.

ಪ್ರವಾದಿಯವರ ﷺ ಬಳಿ ತಲುಪಿದ ಆ ವ್ಯಕ್ತಿಯು, ತನ್ನ ಎಲ್ಲಾ ಬೇಸರವನ್ನೂ ಅವರಲ್ಲಿ ತಿಳಿಸಿದರು. ಅದನ್ನು ಕೇಳಿ, ಪ್ರವಾದಿಯವರು ﷺ ಅವರ ಜೊತೆಯಲ್ಲಿ ಅಬೂಜಹಲ್’ನ ಮನೆ ಕಡೆ ನಡೆದರು. ಇದೆಲ್ಲವನ್ನೂ ದೂರದಿಂದಲೇ ನೋಡುತ್ತಿದ್ದ ಖುರೈಷಿಗಳು, ಅಲ್ಲಿ ಏನು ನಡೆಯಬಹುದು ಎಂದು ತಿಳಿಯಲು ಒಬ್ಬನನ್ನು ಅವರ ಹಿಂದೆ ಕಳುಹಿಸಿದರು. ಅಬೂಜಹಲ್’ನ ಮನೆಗೆ ತಲುಪಿದ, ಪ್ರವಾದಿಯವರು ﷺ ಅವರ ಮನೆಯ ಬಾಗಿಲನ್ನು ತಟ್ಟಿದರು. ಬಾಗಿಲು ತೆರೆದ ಅಬೂಜಹಲ್, ಪ್ರವಾದಿಯವರ ﷺ ಮುಂದೆ ಬಹಳ ವಿನಮ್ರತೆಯಿಂದ ನಿಂತರು. ಪ್ರವಾದಿಯವರು ﷺ ಬೇಸರದಿಂದ ಬೇಸತ್ತು ಹೋಗಿದ್ದ ಆ ವ್ಯಕ್ತಿಯನ್ನು ಮುಂದಕ್ಕೆ ಕರೆದರು. ಅವರು ಮುಂದೆ ಬಂದಾಗ, ಪ್ರವಾದಿಯವರು ﷺ ನೀವು ಇವರಿಗೆ ನೀಡಬೇಕಾದ, ಇವರ ಹಣವನ್ನು ತಿರುಗಿ ನೀಡಬೇಕು ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಸರಿ ಎಂದು ಹೇಳಿದಾಗ, ಪ್ರವಾದಿಯವರು ﷺ ಈಗಲೇ, ಇಲ್ಲೇ ನೀಡಬೇಕು ಎಂದು ಹೇಳಿದರು. ಅದನ್ನು ಕೇಳಿ, ಅಬೂಜಹಲ್ ತಕ್ಷಣವೇ ಒಳಗೆ ಹೋಗಿ, ಒಂಟೆಗೆ ನಿಗದಿಪಡಿಸಿದ ಹಣವನ್ನು ತೆಗೆದು ಕೊಂಡು ಬಂದು, ಆ ವ್ಯಕ್ತಿಗೆ ನೀಡಿದರು. ಆ ವ್ಯಕ್ತಿಯೂ ಸಂತೋಷದಿಂದ ಪ್ರವಾದಿಯವರಿಗೆ ﷺ, ಖುರೈಷಿಗಳ ಎದುರಿನಲ್ಲೇ ಕೃತಜ್ಞತೆ ತಿಳಿಸಿದರು. ಅದನ್ನು ಕೇಳಿದ ಖುರೈಷಿಗಳು, ಅವರ ಹಿಂದೆ ಕಳಿಸಿದ್ದ ವ್ಯಕ್ತಿಯನ್ನು ಕರೆದು, ಇದೆಂತಹ ಕರ್ಮ, ಅಲ್ಲಿ ಏನಾಯಿತು ಎಂದು ಕೇಳಿದಾಗ, ಅವರು ಅಲ್ಲಿ ನಡೆದ ಎಲ್ಲಾ ಘಟನೆಯನ್ನು ವಿವರಿಸಿದರು.

ಅದನ್ನು ಕೇಳಿದ, ಖುರೈಷಿಗಳು ತಕ್ಷಣವೇ ಅಬೂಜಹಲ್’ರ ಬಳಿ ಹೋಗಿ, ಏನಾಯಿತು ಎಂದು ಕೇಳಿದರು. ಅದಕ್ಕೆ ಅಬೂಜಹಲ್, ಮುಹಮ್ಮದ್ ﷺ ಬಂದು ನನ್ನ ಮನೆಯ ಬಾಗಿಲನ್ನು ತಟ್ಟಿದರು. ಶಬ್ದ ಕೇಳಿದ ತಕ್ಷಣವೇ ಏನೋ ಒಂದು ಭಯ ಕಾಡಿತು. ಬಾಗಿಲು ತೆರೆದು ನೋಡಿದಾಗ, ಮುಹಮ್ಮದ್’ರ ﷺ ತಲೆಯ ಮೇಲೆ ಇವತ್ತಿನವರೆಗೂ ನೋಡಿರದ, ಒಂದು ಭೀಕರವಾದ ಒಂಟೆಯು ಬಾಯಿ ತೆರೆದು ನಿಂತಿತ್ತು. ಅದನ್ನು ಕಂಡು ಬಹುಶಃ ನಾನು ಅವರು ಹೇಳಿದ ಹಾಗೆ ಕೇಳದಿದ್ದರೆ ನನ್ನನ್ನು ಅದು ತಿಂದು ಬಿಡಬಹುದು ಎಂದು ಅನಿಸಿತು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-99/365

ಕ್ರಿ ಶ 615 ರಲ್ಲಾಗಿತ್ತು ಈ ವಿಷಯವನ್ನು ಪ್ರವಾದಿಯವರು ﷺ ಹೇಳಿದ್ದು. ದಿವಸಗಳು ಉರುಳಿ ಹೋಯಿತು. ಕ್ರಿ ಶ 622 ರಲ್ಲಿ ಅಬೂಬಕ್ಕರ್’ರವರು ◌ؓ ಮದೀನಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ, ಉಬಯ್ಯ್ ಅವರ ನಡುವೆ ಇದ್ದ ಸವಾಲಿನ ಬಗ್ಗೆ ನೆನಪಿಸಿದರು. ಅದಕ್ಕೆ ಸಿದ್ದೀಕ್’ರವರು ◌ؓ, ನನ್ನ ಅನುಪಸ್ಥಿತಿಯಲ್ಲಿ ಸವಾಲನ್ನು ಪೂರ್ತಿಯಾಗಿಸಲು, ನನ್ನ ಮಗ ಅಬ್ದುಲ್ಲಾಹ್’ರನ್ನು ನಿಯೋಗಿಸಿದ್ದೇನೆ ಎಂದು ಹೇಳಿದರು. ನಂತರದ ಕಾಲದಲ್ಲಿ, ಉಬಯ್ಯ್ ಉಹುದ್ ಯುದ್ಧಕ್ಕೆ ತೆರಳುವಾಗ, ಅಬ್ದುಲ್ಲಾಹ್ ಅವರ ಬಳಿ ಬಂದು ನಿಮ್ಮ ಬದಲಾಗಿ ಸವಾಲನ್ನು ಪೂರ್ತಿಯಾಗಿಸಲು, ನಿಮ್ಮ ಪ್ರತಿನಿಧಿಯನ್ನು ನಿಯೋಗಿಸಬೇಕು ಎಂದು ಹೇಳಿದಾಗ, ಉಬಯ್ಯ್ ಅದಕ್ಕೊಂದು ಪ್ರತಿನಿಧಿಯನ್ನು ನಿಯೋಗಿಸಿ ಹೋದರು, ಉಹುದಿನ ರಣರಂಗದಲ್ಲೇ ಅವರು ಮರಣ ಹೊಂದಿದರು.

ಸೀಸರ್ ಹೆರ್ಕುಲೀಸ್ ಎಂಬ ವ್ಯಕ್ತಿಯು ರಹಸ್ಯವಾಗಿ ಕೋನ್’ಸ್ಟಾನ್’ಟಿನೋಪಲ್ ನಗರವನ್ನು ಬಿಟ್ಟು ತರಾವ್ ಸೋನಿಗೆ ಕಪ್ಪು ಸಮುದ್ರದ ಮೂಲಕ ಹೋದರು. ಆದರೆ ಅಲ್ಲಿ ಪುಷ್ಟ್’ಗಳ ಮೂಲಕ ಆಕ್ರಮಣ ನಡೆಸುವ ಸಂಚುಗಳನ್ನು ತಿಳಿದುಕೊಂಡರು. ಕ್ರೈಸ್ತ ಧರ್ಮದ ಗುಂಪಿನ ಸಹಾಯದೊಂದಿಗೆ, ಕ್ರಿ ಶ 623 ರಲ್ಲಿ ಅರ್’ಮೇನಿಯದ ಮೇಲೆ ವಿಶೇಷವಾದ ರೀತಿಯಲ್ಲಿ ದಾಳಿ ನಡೆಸಿದರು. ಅದರ ಮುಂದಿನ ವರ್ಷವೇ ಅಝರ್’ಬೀಜಾನಿಗೆ ನುಗ್ಗಿ, ಸೌರಾಷ್’ಟ್ರಾದವರನ್ನು ಸೋಲಿಸಿ ಇರ್ಮಿಯವನ್ನು ವಶಪಡಿಸಿಕೊಂಡರು. ನಂತರ ರೋಮ್ ನಿರಂತರವಾಗಿ ಪರ್ಶಿಯಗೆ ಆಘಾತಗಳನ್ನು ಉಂಟುಮಾಡಿತು. ಕೊನೆಗೆ ಕ್ರಿ ಶ 627 ರಲ್ಲಿ ನೀನವದಲ್ಲಿ ನಡೆದ ಯುದ್ಧದಲ್ಲಿ ಪರ್ಷಿಯನ್ ಸಾಮ್ರಾಜ್ಯದ ಸಿಂಹಾಸನವು ಪತನಗೊಂಡಿತು.
ಇಂಗ್ಲೀಷ್ ಇತಿಹಾಸಗಾರನಾದ ಗಿಬ್ಬಾನ್ ಪ್ರಸ್ತುತ ಘಟನೆಯ ಬಗ್ಗೆ ಈ ರೀತಿ ತಿಳಿಸಿತ್ತಾರೆ. “ಖುರ್’ಆನಿನ ಘೋಷಣೆಯು ನಡೆದು ಸುಮಾರು ಏಳೆಂಟು ವರ್ಷ ಕಳೆದು ಉಂಟಾದ ಪರ್ಷಿಯಾದ ಸೋಲು ಯಾರು ಊಹಿಸದ ರೀತಿಯಲ್ಲಿ ಆಗಿತ್ತು. ಅಷ್ಟೇ ಅಲ್ಲ ರೋಮಿನ ಹೆಸರೇ ಇಲ್ಲದ ರೀತಿಯಲ್ಲಿ ನಾಶವಾಗಬಹುದು ಎನ್ನುವ ಆತಂಕವೇ ಅಧಿಕವಿತ್ತು” ಎಂದು ಹೇಳಿದ್ದರು.
ರೋಮ್ ಜಯಗೊಳಿಸಿದ ನಂತರ ಉಬಯ್ಯ್ ನಿಯೋಗಿಸಿದ್ದ ಪ್ರತಿನಿಧಿಯು ಸೋಲನ್ನು ಒಪ್ಪಿಕೊಂಡು, ಮೊದಲೇ ಹೇಳಿದ ಹಾಗೆ ನೂರು ಒಂಟೆಗಳನ್ನು ಅಬೂಬಕ್ಕರ್’ರವರಿಗೆ ◌ؓ ನೀಡಿದರು. ಇನ್ನೂ ಜೂಜಾಟ ವಿರೋಧ ನಿಯಮ ಆಗದೆ ಇರುವುದರಿಂದ ಅಬೂಬಕ್ಕರ್’ರವರು ಸವಾಲಿಗೆ ಉಡುಗೊರೆಯಾಗಿ ಇಟ್ಟಿದ್ದ ಒಂಟೆಗಳನ್ನು ಸ್ವೀಕರಿಸಿದರು. ಆದರೆ ಅದನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಬಡವರಿಗೆ ನೀಡಿದರು.

*********

ಪ್ರವಾದಿತ್ವದ ಘೋಷಣೆಯಾಗಿ ಹತ್ತು ವರ್ಷ ಕಳೆಯಿತು. ಪ್ರವಾದಿಯವರ ﷺ ದೊಡ್ಡಪ್ಪ ಅಬೂತ್ವಾಲಿಬರಿಗೆ ಅನಾರೋಗ್ಯ ಬಾಧಿಸಿತು. ತಾತ ಅಬ್ದುಲ್ ಮುತ್ತಲಿಬರ ◌ؓ ವಿಯೋಗದ ನಂತರ, ಪ್ರವಾದಿಯವರನ್ನು ﷺ ಎಂಟು ವರ್ಷ ಪ್ರಾಯದಿಂದ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಮಹಾಮನುಷಿಯಾಗಿದ್ದರು ಅಬೂತ್ವಾಲಿಬ್. ಅವರು ಅನಾರೋಗ್ಯದಿಂದ ಬಳಲುತ್ತಿದ್ದದ್ದು, ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರ ತಂದಿತ್ತು. ತನ್ನೆಲ್ಲಾ ಕಷ್ಟದ ಸಂದರ್ಭದಲ್ಲಿ, ತನಗೆ ನೆರಳಾಗಿ ನಿಂತಿದ್ದ ದೊಡ್ಡಪ್ಪರ ಅವಸ್ಥೆಯನ್ನು ಕಂಡು ಪ್ರವಾದಿಯವರ ಮನಸ್ಸು ಬಹಳಷ್ಟು ರೋಧಿಸಿತು. ಆಗಾಗ ಬಂದು ದೊಡ್ಡಪ್ಪರನ್ನು ನೋಡಿ ಹೋಗುತ್ತಿದ್ದರು.

ಸಯೀದ್ ಬಿನ್ ಅಲ್ ಮುಸಯ್ಯಬ್’ರು ◌ؓ ಈ ವಿಷಯದ ಕುರಿತು ವಿವರಿಸುವುದು ಕಾಣಬಹುದು. ಅಬೂತ್ವಾಲಿಬರ ರೋಗ ಉಲ್ಭಣಗೊಂಡು ಮರಣಾವಸ್ಥೆಗೆ ತಲುಪಿದಾಗ, ಪ್ರವಾದಿಯವರು ﷺ ಅಬೂತ್ವಾಲಿಬರ ಬಳಿಯೇ ಇದ್ದರು. ಆಗ ಅಲ್ಲೇ ಪಕ್ಕದಲ್ಲಿ ಖುರೈಷಿ ನಾಯಕರಾದ ಅಬೂಜಹಲ್ ಹಾಗೂ ಅಬ್ದುಲ್ಲಾಹಿಬಿನು ಅಬೀಉಮಯ್ಯತ್’ಬಿನುಲ್ ಮುಗೀರ ಕೂಡ ಇದ್ದರು. ಪ್ರವಾದಿಯವರು ﷺ, ತನ್ನ ದೊಡ್ಡಪ್ಪರ ಬಳಿ ಬಂದು, “ಲಾ ಇಲಾಹ ಇಲ್ಲಲ್ಲಾಹ್” ಎಂಬ ವಚನವನ್ನು ಹೇಳಿರಿ, ನಾನು ನಿಮಗಾಗಿ ಅಲ್ಲಾಹನ ಬಳಿ ಸಾಕ್ಷಿ ನಿಲ್ಲುತ್ತೇನೆ ಎಂದು ಹೇಳಿದಾಗ, ತಕ್ಷಣವೇ ಪಕ್ಕದಲ್ಲೇ ನಿಂತಿದ್ದ ಅಬೂಜಹಲ್, ಓ ಅಬೂತ್ವಾಲಿಬರೇ ನೀವು ಅಬ್ದುಲ್ ಮುತ್ತಲಿಬರ ದಾರಿಯನ್ನು ತಿರಸ್ಕರಿಸಿಸುತ್ತಿದ್ದೀರ.? ಎಂದು ಕೇಳಿದರು. ಪ್ರವಾದಿಯವರು ﷺ ಲಾ ಇಲಾಹ ಇಲ್ಲಲ್ಲಾಹ್ ಎಂದು ಉಚ್ಛರಿಸಲು, ಹೇಳುತ್ತಿರುವಾಗೆಲ್ಲ, ಅಬೂಜಹಲ್ ಇದನ್ನೇ ಹೇಳುತ್ತಿದ್ದರು. ಕೊನೆಗೆ ಅಬೂತ್ವಾಲಿಬರೇ, ನಾನು ಅಬ್ದುಲ್ ಮುತ್ತಲಿಬರ ದಾರಿಯಲ್ಲೇ ಇರುವೆನು ಎಂದು ಹೇಳಿದರಾದರೂ ಲಾ ಇಲಾಹ ಇಲ್ಲಲ್ಲಾಹ್ ಎಂದು ಮಾತ್ರ ಉಚ್ಛರಿಸಲಿಲ್ಲ. ಅದಕ್ಕೆ ಪ್ರವಾದಿಯವರು ﷺ ನನ್ನನ್ನು ನಿಷೇಧಿಸುವ ವರೆಗೂ ನಾನು ನಿಮಗಾಗಿ ಪಾಪ ಮೋಚನೆ ಕೇಳುತ್ತಲೇ ಇರುವನು ಎಂದು ಹೇಳಿದರು.

ನಂತರ ಪವಿತ್ರ ಖುರ್’ಆನಿನ ತೌಬಾ ಅಧ್ಯಾಯದ ನೂರ ಹದಿಮೂರನೇ ಸೂಕ್ತವು ಅವತರಿಸಿತು. “ಪ್ರವಾದಿಯವರಾಗಲಿ, ವಿಶ್ವಾಸಿಗಳಾಗಲಿ, ಸತ್ಯನಿಷೇಧಿಗಳಿಗಾಗಿ ಪಾಪ ಮೋಚನೆ ಕೇಳಬಾರದು. ಅವರು ಆತ್ಮೀಯ ಸಂಬಂಧಿಗಳಾಗಿದ್ದರೂ ಕೂಡ”, (ಅವರು ನರಕಕ್ಕೆ ಪ್ರವೇಶಿಸುವರು ಎಂದು ಸ್ಪಷ್ಟವಾದ ಬಳಿಕ) ಅಲ್ ಖಸ್ವಸ್ ಅಧ್ಯಾಯದ ಐತ್ತಾರನೇ ಸೂಕ್ತವೂ ಕೂಡ ಈ ಘಟನೆಗೆ ಸಂಬಂಧಿಸಿ ಅವತರಿಸಿತು. ಅದರ ಸಾರಾಂಶ ಈ ರೀತಿಯಾಗಿದೆ, “ಪ್ರವಾದಿಯವರೇ ﷺ ತಾವು ಇಷ್ಟಪಡುವವರನ್ನು ತಮ್ಮಿಷ್ಟದಂತೆ ಸನ್ಮಾರ್ಗಕ್ಕೆ ಕೊಂಡು ಬರಲು ಸಾಧ್ಯವಿಲ್ಲ, ಆದರೆ ಅಲ್ಲಾಹನು ಇಚ್ಛಿಸಿದವರನ್ನು ಅವನು ಖಂಡಿತ ಸನ್ಮಾರ್ಗಕ್ಕೆ ಕೊಂಡು ಬರುವನು, ಸತ್ಯ ಅಂಗೀಕರಿಸುವವರನ್ನು ಬಹಳ ಚೆನ್ನಾಗಿ ತಿಳಿಯುವವನು ಅವನಾಗಿರುವನು.”

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-100/365

ಪ್ರವಾದಿಯವರ ﷺ ಬಳಿಯಿಂದ ಅವರು ಎದ್ದು ನಿಂತರು. ಇನ್ನೇನು ಹೊರಡಬೇಕು ಅನ್ನುವಷ್ಟರಲ್ಲಿ, ದೂರದಲ್ಲೇ ದೃಶ್ಯವನ್ನು ನೋಡುತ್ತಿದ್ದಾ, ಅಬೂಜಹಲ್ ಹಾಗೂ ಅವನ ಸಂಗಡಿಗರು ಅವರ ಕಡೆ ತಿರುಗಿ ನಿಂತು, ಅಲ್ಲಾಹು ನಿಮ್ಮನ್ನು ಪರಾಜಯ ಗೊಳಿಸಲಿ, ನಿಮ್ಮ ಅನುಯಾಯಿಗಳು ನಿಮ್ಮನ್ನು ಇವರ ಬಗ್ಗೆ ತಿಳಿಯಲು ಅಲ್ವಾ ಇಲ್ಲಿಗೆ ಕಳುಹಿಸಿದ್ದು.? ಆದರೆ ನೀವು ಇವರನ್ನು ಭೇಟಿಯಾದ ತಕ್ಷಣವೇ ನಿಮ್ಮ ಧರ್ಮವನ್ನು ತ್ಯಜಿಸಿ, ಅವರ ಧರ್ಮವನ್ನು ಸ್ವೀಕರಿಸಿದಿರಿ ಅಲ್ವಾ.? ನೀವೆಷ್ಟು ದಡ್ಡರು ಎಂದು ಇದರಲ್ಲೇ ಅರ್ಥ ಆಗುತ್ತೆ.! ಎಂದು ಕೂಗಿ ಹೇಳಿದರು. ಅದಕ್ಕೆ ಅವರು, ನಿಮಗೆ ನಿಮ್ಮ ಆದರ್ಶ ನಮಗೆ ನಮ್ಮ ಲೋಕ ಎಂದು ತಿರುಗಿ ಹೇಳಿದರು.
ಪ್ರವಾದಿಯವರನ್ನು ﷺ ಭೇಟಿಯಾಗಿದ್ದ ಆ ಗುಂಪು, ನಜ್’ರಾನ್ ಪ್ರದೇಶ ಕ್ರೈಸ್ತ ಪ್ರತಿನಿಧಿಗಳಾಗಿದ್ದರು. ಎಂದಾಗಿದೆ ಇದರ ಬಗ್ಗೆ ಪ್ರಬಲವಾದ ಅಭಿಪ್ರಾಯ. ಈ ಗುಂಪಿನ ಬರುವಿಕೆ, ಹಾಗೂ ಅವರು ಮಾಡಿದ ಭೇಟಿಯ ಕುರಿತು, ಪವಿತ್ರ ಖುರ್’ಆನಿನ ಅಲ್ ಖಸ್ವಸ್ವ್ ಅಧ್ಯಾಯದ ಐವತ್ತೇರಡರಿಂದ, ಐವತ್ತಾರರವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ.

“ಪೂರ್ವ ಕಾಲದ ವೇಧ ಪಡೆದವರು ಕೂಡ ಕುರ್’ಆನನ್ನು ಅಂಗೀಕರಿಸಿದರು. ಅವರಿಗೆ ಖುರ್’ಆನನ್ನು ಓದಿ ಕೇಳಿಸಿದಾಗ, ನಿಶ್ಚಯವಾಗಿಯೂ ಇದು ನಮ್ಮ ಪ್ರಭುವಿನಿಂದ ಬಂದ ಸತ್ಯವಾಗಿದೆ, ಹಾಗಾಗಿ ನಾವು ಅವುಗಳ ಮೇಲೆ ಈಗಾಗಲೇ ವಿಶ್ವಾಸವಿರಿಸಿ, ಇದನ್ನು ಸಂಪೂರ್ಣವಾಗಿ ಅನುಸರಿಸಿದ್ದೇವೆ ಎಂದು ಹೇಳುವರು. ಅಂತವರಿಗೆ ಅವರ ಸಹಿಷ್ಣುತೆಯ ಕಾರಣದಿಂದ ಅವರಿಗೆ ಉತ್ತಮ ಪ್ರತಿಫಲ ಸಿಗಲಿದೆ. ನಾವರಿಗೆ ನೀಡಿದ್ದರಿಂದ ಒಳಿತಿಗಾಗಿ ಖರ್ಚು ಮಾಡುವವರು, ಹಾಗೂ ಕೆಡುಕಿನಿಂದ ದೂರವಿರುವರು ಆಗಿರುತ್ತಾರೆ. ಅರ್ಥವಿಲ್ಲದ ಮಾತುಗಳನ್ನು ಕೇಳಿದರೆ ಅವರು ಅವುಗಳಿಂದ ದೂರ ಸರಿದು, ನಾವು ಅವಿವೇಕಿಗಳನ್ನು ಅನುಸರಿಸಲು ತಯಾರಿಲ್ಲ, ನಿಮಗೆ ನಿಮ್ಮ ವಿಷಯ, ನಮ್ಮಗೆ ನಮ್ಮ ವಿಷಯ, ನಿಮಗೆ ಹೋಗಬಹುದು ಎಂದು ಹೇಳುವರು” ಎಂದಾಗಿತ್ತು ಅದರ ಸಾರಾಂಶ.

ಈ ಸೂಕ್ತಗಳು ನಜ್ಜಾಶಿ ರಾಜನ ಅನುಯಾಯಿಗಳ ಕುರಿತಾಗಿತ್ತು ಅವತರಿಸಿದ್ದು, ಎಂದು ಇಮಾಮ್ ಝುಹ್’ರಿ ಉಲ್ಲೇಖಿಸಿದ್ದಾರೆ. ಅದರ ಜೊತೆಯಲ್ಲಿ ಈ ಘಟನೆಗೆ ಸಾಮೀಪ್ಯವಿರುವ ಮತ್ತೊಂದು ಸೂಕ್ತವಾಗಿದೆ, ಖುರ್’ಆನಿನ ಅಲ್ ಮಾಇದ ಅಧ್ಯಾಯದ (ಐದನೇ ಅಧ್ಯಾಯ) ಎಂಬೆತ್ತೆರಡನೇ ಹಾಗೂ ಎಂಬತ್ತಮೂರನೇ ಸೂಕ್ತ.
ಒಂದೆಡೆ ಖುರ್’ಆನ್ ಪ್ರತಿಯೊಂದನ್ನು ಪ್ರವಾದಿಯವರ ﷺ ಮೂಲಕ ಗುರುತಿಸುತ್ತಿದ್ದರೆ. ಮತ್ತೊಂದೆಡೆ ಖುರೈಷಿಗಳು, ಅವರಿಗೆ ಸಿಗುತ್ತಿದ್ದ ಪ್ರತಿಯೊಂದು ಅವಕಾಶಗಳನ್ನು ಹೇಗೆ ಮುಸ್ಲಿಮರ ವಿರುದ್ಧ ಬಳಸಬಹುದು ಎಂದು ಹೊಂಚು ಹಾಕುತ್ತಲೇ ಇದ್ದರು. ಇದರ ನಡುವೆ ಪೇರ್ಶ್ಯ ರೋಮನ್ನು ವಶಪಡಿಸಿಕೊಂಡಿತು. ಅದು ಮಕ್ಕಾದ ಖುರೈಷಿಗಳಿಗೆ ಬಹಳ ಸಂತಸ ತಂದಿತ್ತು. ಅವರು ಮುಸ್ಲಿಮರಲ್ಲಿ, ಅಗ್ನಿ ಆರಾಧಕರಾದ ಪೇರ್ಶ್ಯ ರೋಮನ್ನು ಸೋಲಿಸಿದೆ. ಸ್ವಲ್ಪ ದಿನ ಕಳೆಯಲಿ ಅದೇ ನೀವುಗಳನ್ನೂ ಕೂಡ ನಾವು ಖಂಡಿತ ಸೋಲಿಸುತ್ತೇವೆ ಎಂದು ಹೇಳಿದರು. ಈ ವಿಷಯವು ಪ್ರವಾದಿಯವರ ﷺ ಬಳಿ ತಲುಪಿತು. ಅವರು ಪವಿತ್ರ ಖುರ್’ಆನಿನ ಮೂವತ್ತನೇ ಅಧ್ಯಾಯದ (ಅರ್ರೂಮ್) ಒಂದರಿಂದ ಆರರವರೆಗಿನ ಸೂಕ್ತವನ್ನು ಓದಿ ತಿಳಿಸಿದರು. ಅದರ ಸಾರಾಂಶವು ಈ ರೀತಿಯಾಗಿದೆ.

“ಅಲಿಫ್ ಲಾಂ ಮೀಮ್, ಪಕ್ಕದ ಪ್ರದೇಶವಾದ ರೂಮ್ ಸೋಲ್ಲನ್ನು ಅನುಭವಿಸಿದೆ. ಈ ಸೋಲಿನ ನಂತರ ಅವರು ಪುನಃ ಗೆಲುವು ಸಾಧಿಸಿಕೊಳ್ಳುವರು. ಅಂದು ಸಂತೋಷ ಪಡುವ ಸರದಿ ವಿಶ್ವಾಸಿಗಳಿಗಾಗಿರುತ್ತದೆ. ಎಲ್ಲಾ ಅಧಿಕಾರವು ಅಲ್ಲಾಹನಿಂದ ಮಾತ್ರ, ಈ ಹಿಂದೆ ನಡೆದದ್ದು, ಇನ್ನುಮುಂದೆ ನಡೆಯಲಿರುವುದು ಎಲ್ಲವನ್ನು ತಿಳಿದವನು ಅವನು ಮಾತ್ರ. ಅವನಿಗೆ ಇಷ್ಟವಿದ್ದವರಿಗೆ ಅವನು ಸಹಾಯ ಮಾಡುವನು. ಅವನು ಕರುಣಾಮಯಿಯೂ ಅತೀ ಶಕ್ತಿಶಾಲಿಯೂ ಆಗಿರುವನು. ಅಲ್ಲಾಹನು ನೀಡಿದ ಭರವಸೆಯಾಗಿದೆ ಇದು, ಅವನು ನೀಡಿದ ಭರವಸೆಯನ್ನು ಅವನು ಯಾವತ್ತೂ ಕಡೆಗಣಿಸುವುದಿಲ್ಲ. ಆದರೆ ಬಹಳಷ್ಟು ಜನರಿಗೆ ಇದರ ಬಗ್ಗೆ ತಿಳಿದೇ ಇಲ್ಲ.” ಎಂಬುದಾಗಿತ್ತು ಅದರ ಸಾರಾಂಶ.

ರೋಮ್’ನ ಗೆಲುವಿನ ಕುರಿತು ಕೇಳಿದ ಅವರಿಗೆ ಅದನ್ನು ಊಹಿಸಲು ಕೂಡ ಸಾಧ್ಯವಾಗುತ್ತಿರಲಿಲ್ಲ. ಕೆಲವೇ ಕೆಲವು ವರ್ಷಗಳಲ್ಲಿ ಎನ್ನುವುದಕ್ಕೆ ಅವರು ಏನೇನೋ ಊಹೆಗಳನ್ನು ಮಾಡಿಕೊಂಡಿದ್ದರು. ಉಬಯ್ಯ್ ಬಿನ್ ಖಲಫ್, ಅಬೂಬಕ್ಕರವರಲ್ಲಿ ◌ؓ ಎಲ್ಲಿಯಾದ್ರು ಮೂರು ವರ್ಷದ ಒಳಗೆ ರೋಮ್ ಗೆದ್ದರೆ ನಾನು ನಿಮಗೆ ದುಬಾರಿ ಬೆಲೆಯ ಹತ್ತು ಒಂಟೆಯನ್ನು ನೀಡುತ್ತೇನೆ, ಅದು ಆಗದಿದ್ದರೆ ನೀವು ನನಗೆ ನೀಡಬೇಕು ಎಂದು ಸವಾಲು ಹಾಕಿದರು. ಅಬೂಬಕ್ಕರ್ ◌ؓ ತಕ್ಷಣವೇ ಈ ವಿಷಯವನ್ನು ಪ್ರವಾದಿಯವರ ﷺ ಬಳಿ ತಿಳಿಸಿದರು. ಅದಕ್ಕೆ ಪ್ರವಾದಿಯವರು ﷺ ಕೆಲವು ವರ್ಷಗಳು ಎನ್ನುವುದಕ್ಕೆ ಖುರ್’ಆನ್ ಬಳಸಿದ ಪದ “ಬಿಳ್ಅ ಸಿನೀನ್” ಎಂದಾಗಿದೆ. ಅಂದರೆ ಹತ್ತಕ್ಕಿಂತ ಕಮ್ಮಿಯಿರುವ ವರ್ಷ ಎಂದು, ಹಾಗಾಗಿ ಸವಾಲನ್ನು ಹತ್ತು ವರ್ಷದ ಒಳಗೆ ಎಂದು ಮಾಡಿರಿ, ಹಾಗೂ ಬಹುಮಾನ ನೂರು ಒಂಟೆಗಳನ್ನು ಮಾಡಿರಿ ಎಂದು ಹೇಳಿದಾಗ, ಅಬೂಬಕ್ಕರ್ ◌ؓ ಅದೇ ರೀತಿ ಉಬಯ್ಯ್’ನ ಬಳಿ ಹೋಗಿ ಸವಾಲಿನ ಸಮಯಾವಕಾಶವನ್ನು ಅಧಿಕಗೊಳಿಸಿ ಬಂದರು. ಅವರ ಈ ಆತ್ಮವಿಶ್ವಾಸವನ್ನು ಕಂಡು ಖುರೈಷಿಗಳು ದಂಗಾಗಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-101/365

ಕ್ರಿ ಶ 615 ರಲ್ಲಾಗಿತ್ತು ಈ ವಿಷಯವನ್ನು ಪ್ರವಾದಿಯವರು ﷺ ಹೇಳಿದ್ದು. ದಿವಸಗಳು ಉರುಳಿ ಹೋಯಿತು. ಕ್ರಿ ಶ 622 ರಲ್ಲಿ ಅಬೂಬಕ್ಕರ್’ರವರು ◌ؓ ಮದೀನಕ್ಕೆ ಪಲಾಯನ ಮಾಡುವ ಸಂದರ್ಭದಲ್ಲಿ, ಉಬಯ್ಯ್ ಅವರ ನಡುವೆ ಇದ್ದ ಸವಾಲಿನ ಬಗ್ಗೆ ನೆನಪಿಸಿದರು. ಅದಕ್ಕೆ ಸಿದ್ದೀಕ್’ರವರು ◌ؓ, ನನ್ನ ಅನುಪಸ್ಥಿತಿಯಲ್ಲಿ ಸವಾಲನ್ನು ಪೂರ್ತಿಯಾಗಿಸಲು, ನನ್ನ ಮಗ ಅಬ್ದುಲ್ಲಾಹ್’ರನ್ನು ನಿಯೋಗಿಸಿದ್ದೇನೆ ಎಂದು ಹೇಳಿದರು. ನಂತರದ ಕಾಲದಲ್ಲಿ, ಉಬಯ್ಯ್ ಉಹುದ್ ಯುದ್ಧಕ್ಕೆ ತೆರಳುವಾಗ, ಅಬ್ದುಲ್ಲಾಹ್ ಅವರ ಬಳಿ ಬಂದು ನಿಮ್ಮ ಬದಲಾಗಿ ಸವಾಲನ್ನು ಪೂರ್ತಿಯಾಗಿಸಲು, ನಿಮ್ಮ ಪ್ರತಿನಿಧಿಯನ್ನು ನಿಯೋಗಿಸಬೇಕು ಎಂದು ಹೇಳಿದಾಗ, ಉಬಯ್ಯ್ ಅದಕ್ಕೊಂದು ಪ್ರತಿನಿಧಿಯನ್ನು ನಿಯೋಗಿಸಿ ಹೋದರು, ಉಹುದಿನ ರಣರಂಗದಲ್ಲೇ ಅವರು ಮರಣ ಹೊಂದಿದರು.

ಸೀಸರ್ ಹೆರ್ಕುಲೀಸ್ ಎಂಬ ವ್ಯಕ್ತಿಯು ರಹಸ್ಯವಾಗಿ ಕೋನ್’ಸ್ಟಾನ್’ಟಿನೋಪಲ್ ನಗರವನ್ನು ಬಿಟ್ಟು ತರಾವ್ ಸೋನಿಗೆ ಕಪ್ಪು ಸಮುದ್ರದ ಮೂಲಕ ಹೋದರು. ಆದರೆ ಅಲ್ಲಿ ಪುಷ್ಟ್’ಗಳ ಮೂಲಕ ಆಕ್ರಮಣ ನಡೆಸುವ ಸಂಚುಗಳನ್ನು ತಿಳಿದುಕೊಂಡರು. ಕ್ರೈಸ್ತ ಧರ್ಮದ ಗುಂಪಿನ ಸಹಾಯದೊಂದಿಗೆ, ಕ್ರಿ ಶ 623 ರಲ್ಲಿ ಅರ್’ಮೇನಿಯದ ಮೇಲೆ ವಿಶೇಷವಾದ ರೀತಿಯಲ್ಲಿ ದಾಳಿ ನಡೆಸಿದರು. ಅದರ ಮುಂದಿನ ವರ್ಷವೇ ಅಝರ್’ಬೀಜಾನಿಗೆ ನುಗ್ಗಿ, ಸೌರಾಷ್’ಟ್ರಾದವರನ್ನು ಸೋಲಿಸಿ ಇರ್ಮಿಯವನ್ನು ವಶಪಡಿಸಿಕೊಂಡರು. ನಂತರ ರೋಮ್ ನಿರಂತರವಾಗಿ ಪರ್ಶಿಯಗೆ ಆಘಾತಗಳನ್ನು ಉಂಟುಮಾಡಿತು. ಕೊನೆಗೆ ಕ್ರಿ ಶ 627 ರಲ್ಲಿ ನೀನವದಲ್ಲಿ ನಡೆದ ಯುದ್ಧದಲ್ಲಿ ಪರ್ಷಿಯನ್ ಸಾಮ್ರಾಜ್ಯದ ಸಿಂಹಾಸನವು ಪತನಗೊಂಡಿತು.
ಇಂಗ್ಲೀಷ್ ಇತಿಹಾಸಗಾರನಾದ ಗಿಬ್ಬಾನ್ ಪ್ರಸ್ತುತ ಘಟನೆಯ ಬಗ್ಗೆ ಈ ರೀತಿ ತಿಳಿಸಿತ್ತಾರೆ. “ಖುರ್’ಆನಿನ ಘೋಷಣೆಯು ನಡೆದು ಸುಮಾರು ಏಳೆಂಟು ವರ್ಷ ಕಳೆದು ಉಂಟಾದ ಪರ್ಷಿಯಾದ ಸೋಲು ಯಾರು ಊಹಿಸದ ರೀತಿಯಲ್ಲಿ ಆಗಿತ್ತು. ಅಷ್ಟೇ ಅಲ್ಲ ರೋಮಿನ ಹೆಸರೇ ಇಲ್ಲದ ರೀತಿಯಲ್ಲಿ ನಾಶವಾಗಬಹುದು ಎನ್ನುವ ಆತಂಕವೇ ಅಧಿಕವಿತ್ತು” ಎಂದು ಹೇಳಿದ್ದರು.
ರೋಮ್ ಜಯಗೊಳಿಸಿದ ನಂತರ ಉಬಯ್ಯ್ ನಿಯೋಗಿಸಿದ್ದ ಪ್ರತಿನಿಧಿಯು ಸೋಲನ್ನು ಒಪ್ಪಿಕೊಂಡು, ಮೊದಲೇ ಹೇಳಿದ ಹಾಗೆ ನೂರು ಒಂಟೆಗಳನ್ನು ಅಬೂಬಕ್ಕರ್’ರವರಿಗೆ ◌ؓ ನೀಡಿದರು. ಇನ್ನೂ ಜೂಜಾಟ ವಿರೋಧ ನಿಯಮ ಆಗದೆ ಇರುವುದರಿಂದ ಅಬೂಬಕ್ಕರ್’ರವರು ಸವಾಲಿಗೆ ಉಡುಗೊರೆಯಾಗಿ ಇಟ್ಟಿದ್ದ ಒಂಟೆಗಳನ್ನು ಸ್ವೀಕರಿಸಿದರು. ಆದರೆ ಅದನ್ನು ಸ್ವಂತಕ್ಕೆ ಬಳಸಿಕೊಳ್ಳದೆ ಬಡವರಿಗೆ ನೀಡಿದರು.

*********

ಪ್ರವಾದಿತ್ವದ ಘೋಷಣೆಯಾಗಿ ಹತ್ತು ವರ್ಷ ಕಳೆಯಿತು. ಪ್ರವಾದಿಯವರ ﷺ ದೊಡ್ಡಪ್ಪ ಅಬೂತ್ವಾಲಿಬರಿಗೆ ಅನಾರೋಗ್ಯ ಬಾಧಿಸಿತು. ತಾತ ಅಬ್ದುಲ್ ಮುತ್ತಲಿಬರ ◌ؓ ವಿಯೋಗದ ನಂತರ, ಪ್ರವಾದಿಯವರನ್ನು ﷺ ಎಂಟು ವರ್ಷ ಪ್ರಾಯದಿಂದ, ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದ ಮಹಾಮನುಷಿಯಾಗಿದ್ದರು ಅಬೂತ್ವಾಲಿಬ್. ಅವರು ಅನಾರೋಗ್ಯದಿಂದ ಬಳಲುತ್ತಿದ್ದದ್ದು, ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರ ತಂದಿತ್ತು. ತನ್ನೆಲ್ಲಾ ಕಷ್ಟದ ಸಂದರ್ಭದಲ್ಲಿ, ತನಗೆ ನೆರಳಾಗಿ ನಿಂತಿದ್ದ ದೊಡ್ಡಪ್ಪರ ಅವಸ್ಥೆಯನ್ನು ಕಂಡು ಪ್ರವಾದಿಯವರ ಮನಸ್ಸು ಬಹಳಷ್ಟು ರೋಧಿಸಿತು. ಆಗಾಗ ಬಂದು ದೊಡ್ಡಪ್ಪರನ್ನು ನೋಡಿ ಹೋಗುತ್ತಿದ್ದರು.

ಸಯೀದ್ ಬಿನ್ ಅಲ್ ಮುಸಯ್ಯಬ್’ರು ◌ؓ ಈ ವಿಷಯದ ಕುರಿತು ವಿವರಿಸುವುದು ಕಾಣಬಹುದು. ಅಬೂತ್ವಾಲಿಬರ ರೋಗ ಉಲ್ಭಣಗೊಂಡು ಮರಣಾವಸ್ಥೆಗೆ ತಲುಪಿದಾಗ, ಪ್ರವಾದಿಯವರು ﷺ ಅಬೂತ್ವಾಲಿಬರ ಬಳಿಯೇ ಇದ್ದರು. ಆಗ ಅಲ್ಲೇ ಪಕ್ಕದಲ್ಲಿ ಖುರೈಷಿ ನಾಯಕರಾದ ಅಬೂಜಹಲ್ ಹಾಗೂ ಅಬ್ದುಲ್ಲಾಹಿಬಿನು ಅಬೀಉಮಯ್ಯತ್’ಬಿನುಲ್ ಮುಗೀರ ಕೂಡ ಇದ್ದರು. ಪ್ರವಾದಿಯವರು ﷺ, ತನ್ನ ದೊಡ್ಡಪ್ಪರ ಬಳಿ ಬಂದು, “ಲಾ ಇಲಾಹ ಇಲ್ಲಲ್ಲಾಹ್” ಎಂಬ ವಚನವನ್ನು ಹೇಳಿರಿ, ನಾನು ನಿಮಗಾಗಿ ಅಲ್ಲಾಹನ ಬಳಿ ಸಾಕ್ಷಿ ನಿಲ್ಲುತ್ತೇನೆ ಎಂದು ಹೇಳಿದಾಗ, ತಕ್ಷಣವೇ ಪಕ್ಕದಲ್ಲೇ ನಿಂತಿದ್ದ ಅಬೂಜಹಲ್, ಓ ಅಬೂತ್ವಾಲಿಬರೇ ನೀವು ಅಬ್ದುಲ್ ಮುತ್ತಲಿಬರ ದಾರಿಯನ್ನು ತಿರಸ್ಕರಿಸಿಸುತ್ತಿದ್ದೀರ.? ಎಂದು ಕೇಳಿದರು. ಪ್ರವಾದಿಯವರು ﷺ ಲಾ ಇಲಾಹ ಇಲ್ಲಲ್ಲಾಹ್ ಎಂದು ಉಚ್ಛರಿಸಲು, ಹೇಳುತ್ತಿರುವಾಗೆಲ್ಲ, ಅಬೂಜಹಲ್ ಇದನ್ನೇ ಹೇಳುತ್ತಿದ್ದರು. ಕೊನೆಗೆ ಅಬೂತ್ವಾಲಿಬರೇ, ನಾನು ಅಬ್ದುಲ್ ಮುತ್ತಲಿಬರ ದಾರಿಯಲ್ಲೇ ಇರುವೆನು ಎಂದು ಹೇಳಿದರಾದರೂ ಲಾ ಇಲಾಹ ಇಲ್ಲಲ್ಲಾಹ್ ಎಂದು ಮಾತ್ರ ಉಚ್ಛರಿಸಲಿಲ್ಲ. ಅದಕ್ಕೆ ಪ್ರವಾದಿಯವರು ﷺ ನನ್ನನ್ನು ನಿಷೇಧಿಸುವ ವರೆಗೂ ನಾನು ನಿಮಗಾಗಿ ಪಾಪ ಮೋಚನೆ ಕೇಳುತ್ತಲೇ ಇರುವನು ಎಂದು ಹೇಳಿದರು.

ನಂತರ ಪವಿತ್ರ ಖುರ್’ಆನಿನ ತೌಬಾ ಅಧ್ಯಾಯದ ನೂರ ಹದಿಮೂರನೇ ಸೂಕ್ತವು ಅವತರಿಸಿತು. “ಪ್ರವಾದಿಯವರಾಗಲಿ, ವಿಶ್ವಾಸಿಗಳಾಗಲಿ, ಸತ್ಯನಿಷೇಧಿಗಳಿಗಾಗಿ ಪಾಪ ಮೋಚನೆ ಕೇಳಬಾರದು. ಅವರು ಆತ್ಮೀಯ ಸಂಬಂಧಿಗಳಾಗಿದ್ದರೂ ಕೂಡ”, (ಅವರು ನರಕಕ್ಕೆ ಪ್ರವೇಶಿಸುವರು ಎಂದು ಸ್ಪಷ್ಟವಾದ ಬಳಿಕ) ಅಲ್ ಖಸ್ವಸ್ ಅಧ್ಯಾಯದ ಐತ್ತಾರನೇ ಸೂಕ್ತವೂ ಕೂಡ ಈ ಘಟನೆಗೆ ಸಂಬಂಧಿಸಿ ಅವತರಿಸಿತು. ಅದರ ಸಾರಾಂಶ ಈ ರೀತಿಯಾಗಿದೆ, “ಪ್ರವಾದಿಯವರೇ ﷺ ತಾವು ಇಷ್ಟಪಡುವವರನ್ನು ತಮ್ಮಿಷ್ಟದಂತೆ ಸನ್ಮಾರ್ಗಕ್ಕೆ ಕೊಂಡು ಬರಲು ಸಾಧ್ಯವಿಲ್ಲ, ಆದರೆ ಅಲ್ಲಾಹನು ಇಚ್ಛಿಸಿದವರನ್ನು ಅವನು ಖಂಡಿತ ಸನ್ಮಾರ್ಗಕ್ಕೆ ಕೊಂಡು ಬರುವನು, ಸತ್ಯ ಅಂಗೀಕರಿಸುವವರನ್ನು ಬಹಳ ಚೆನ್ನಾಗಿ ತಿಳಿಯುವವನು ಅವನಾಗಿರುವನು.”

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-102/365

ಈಗಾಗಲೇ ತಿಳಿಸಿದ ಉಲ್ಲೇಖಗಳ ಆಧಾರದ ಮೇಲೆ ಉದ್ಧರಿಸಿದ ಕೆಲವರು ಅಬೂತ್ವಾಲಿಬ್ ಮರಣ ಹೊಂದಿದ್ದು ಅವಿಶ್ವಾಸಿಯಾಗಿದ್ದು ಎಂದು ಹೇಳಿದರೆ, ಕೆಲವರು ಅಬೂತ್ವಾಲಿಬರ ಜೀವನ ಶೈಲಿ, ಅವರ ತೆಗೆದಿದ್ದ ತೀರ್ಮಾನ, ಹಾಗೂ ಅವರು ನಿಭಾಯಿಸಿದ್ದ ಪರಿಸ್ಥಿತಿಗಳೆಲ್ಲವನ್ನೂ ಅವಲೋಕನ ನಡೆಸಿ, ಅವರು ಆಂತರಿಕವಾಗಿ ಸತ್ಯವಿಶ್ವಾಸಿಯಾಗಿ ಆಗಿತ್ತು ಮರಣ ಹೊಂದಿದ್ದು ಎಂದು ಅಭಿಪ್ರಾಯಪಟ್ಟವರು ಇದ್ದಾರೆ. ಅವರಿಗೆ ಈಗಾಗಲೇ ಮೊದಲು ಕೆಲವರು ತಿಳಿಸಿದ್ದ ಖುರ್’ಆನ್ ಸೂಕ್ತಗಳು ಅವತರಿಸಿದ್ದು ಅಬೂತ್ವಾಲಿಬರಿಗೆ ಅಲ್ಲ, ಅಷ್ಟೇ ಅಲ್ಲದೆ ಈ ತಿಳಿಸಿದ ಸೂಕ್ತಗಳಿಗೆ ಅವರ ಬಳಿ ಸ್ಪಷ್ಟವಾದ ವಿವರಣೆಯೂ ಇತ್ತು.
ಈ ವಿಷಯದ ಕುರಿತಾಗಿ ಎರಡು ಅಭಿಪ್ರಾಯಗಳನ್ನು ಒಂದೇ ರೀತಿ ಅಂಗೀಕರಿಸುವ ಹಾಗೆ ನಮಗೆ ಹೀಗೆ ಮನದಟ್ಟು ಮಾಡಬಹುದು.

1. ಎಷ್ಟೇ ಕಷ್ಟದ ಪರಿಸ್ಥಿತಿ ಎದುರಾಗಿದ್ದರೂ, ಪ್ರವಾದಿಯವರಿಗೆ ﷺ ಸಹಾಯ ಮಾಡಲು ಅಬೂತ್ವಾಲಿಬರು ಮುಂದೆ ಬರುತ್ತಿದ್ದರು.
2. ಅವರು ಹೇಳಿದ್ದ ಬಹಳಷ್ಟು ಕವಿತೆಗಳು ಹಾಗೂ ತೀರ್ಮಾನಗಳಲ್ಲಿ, ಪ್ರವಾದಿಯವರು ಹೇಳುತ್ತಿದ್ದ ವಿಷಯಗಳನ್ನು ಸತ್ಯವೆಂದು, ಸರಿಯಾಗಿದೆ ಎಂದೂ ಒಪ್ಪಿಕೊಂಡಿದ್ದರು.
3. ಬಹಿಷ್ಕಾರದಂತಹ ಸಂದಿಗ್ಧ ಪರಿಸ್ಥಿತಿ ಎದುರಾಗಿದ್ದರೂ, ಅಬೂತ್ವಾಲಿಬ್’ರು ಇಸ್ಲಾಮನ್ನು ವಿರೋಧಿಸುವುದಾಗಲಿ, ಪ್ರವಾದಿಯವರನ್ನು ﷺ ದೂಷಿಸುವುದಾಗಲಿ ಮಾಡಿರಲಿಲ್ಲ.
4. ಸ್ವಂತ ಮಕ್ಕಳಾದ ಅಲಿ, ಜಅಫರ್ ಹಾಗೂ ಇತರ ಮಕ್ಕಳಾಗಲಿ ಇಸ್ಲಾಮ್ ಸ್ವೀಕರಿಸಿದಾಗ, ಅವರನ್ನು ವಿರೋಧಿಸುವಾಗಲಿ, ಹಿಂತಿರುಗಿ ಬರಲು ಒತ್ತಾಯ ಮಾಡುವುದಾಗಲಿ ಮಾಡಿರಲಿಲ್ಲ, ಬದಲಾಗಿ ಇನ್ನಷ್ಟು ಪ್ರೋತ್ಸಾಹ ನೀಡಿದ್ದರು.
5. ಮರಣದ ಸಂದರ್ಭದಲ್ಲಿ ಪ್ರವಾದಿಯವರು ﷺ ಸತ್ಯ ವಚನವನ್ನು ಹೇಳಿಕೊಟ್ಟಾಗ, ಅದನ್ನು ಹೇಳದಿದ್ದರೂ ಖುರೈಷಿಗಳು ಇದ್ದ ಕಾರಣ ನಾನು ಅಬ್ದುಲ್ ಮುತ್ತಲಿಬ್’ರ ದಾರಿಯಲ್ಲೇ ಇರುವೆನು ಎಂದು ಹೇಳಿದ್ದರು.
6. ಆದರೆ ಆ ಸಂದರ್ಭದಲ್ಲಿ ಇತರ ದೇವರುಗಳ ಹೆಸರನ್ನು ಕರೆಯುದಾಗಲಿ, ತೌಹೀದ್’ನ ವಚನವನ್ನು ವಿರೋಧಿಸುವುದಾಗಲಿ ಮಾಡಿರಲಿಲ್ಲ.

ಎರಡು ಭಾಗದಿಂದಲೂ ಅಭಿಪ್ರಾಯ ವ್ಯಕ್ತಪಡಿಸುವರು ಹೇಳುವ ಪ್ರಮುಖ ವಿಷಯ ಏನೆಂದರೆ.? ಸತ್ಯ ವಚನವನ್ನು ಸಾರ್ವಜನಿಕವಾಗಿ ಘೋಷಣೆ ಮಾಡದೆ ಇರುವುದರಿಂದ ಅವರನ್ನು ಸತ್ಯವಿಶ್ವಾಸಿ ಎಂದು ಹೇಳಬಹುದೋ.? ಇಲ್ಲವೋ.? ಎಂಬುವುದಾಗಿತ್ತು. ಆದರೆ ಇಲ್ಲಿ ಒಂದು ಗುಂಪಿನ ವಾದ ಸತ್ಯವಚನವನ್ನು ಸಾರ್ವಜನಿಕವಾಗಿ ಉಚ್ಛರಿಸಲು ಹೇಳಿದಾಗ, ಉಚ್ಛರಿಸದ ಕಾರಣ, ಅವರನ್ನು ಸತ್ಯ ವಿಶ್ವಾಸಿ ಎಂದು ಹೇಳುವುದು ಸೂಕ್ತವಲ್ಲ ಎಂಬುವುದಾಗಿತ್ತು. ಅದಕ್ಕೆ ಅವರಿಗೆ ಆಧಾರವಾಗಿ ಉದ್ಧರಿಸಲು ಕೆಲವೊಂದು ಹದೀಸ್’ಗಳಿತ್ತು, ಅದಕ್ಕೆ ಸೇರಿದ್ದಾಗಿದೆ ಅಬ್ಬಾಸ್’ರವರು ◌ؓ ಹಾಗೂ ಅಲಿಯವರು ◌ؓ ಹೇಳಿದ್ದ ಹದೀಸ್’ಗಳು.
ಇನ್ನು ಅಬೂತ್ವಾಲಿಬರನ್ನು ಸತ್ಯ ವಿಶ್ವಾಸಿಯಾಗಿಯೇ ಪರಿಗಣಿಸಬೇಕು ಎಂದು ವಾದಿಸುವವರಿಗೆ, ಪವಿತ್ರ ಖುರ್’ಆನಿನ ಅಅ್’ರಾಫ್ ಅಧ್ಯಾಯದ ನೂರ ಐವತ್ತಾರನೇ ಸೂಕ್ತವಾಗಿತ್ತು ಬೆಂಬಲ ನೀಡುವುದು. ಅದರ ಸಾರಾಂಶ ಈ ರೀತಿಯಾಗಿದೆ, “ಹಾಗಾದರೆ ಪ್ರವಾದಿಯವರ ﷺ ಮೇಲೆ ವಿಶ್ವಾಸವಿರಿಸಿ, ಅವರಿಗೆ ಬೆಂಬಲ ನೀಡಿ, ಸಹಾಯ ಮಾಡಿ, ಅವರ ಜೊತೆಯಲ್ಲಿ ಅವರಿಗೆ ಅವತರಿಸಿದ ಆ ಪ್ರಕಾಶವನ್ನೂ ಯಾರು ಹಿಂಬಾಲಿಸುತ್ತಾರೋ.? ಅವರಾಗಿದ್ದಾರೆ ಜಯಶಾಲಿಗಳು.”

ಈ ಸೂಕ್ತದಲ್ಲಿ ಹೇಳಿದ ಎಲ್ಲಾ ವಿಶೇಷತೆಗಳು ಅಬೂತ್ವಾಲಿಬರಲ್ಲಿ ಕಂಡುಬಂದಿತ್ತು. ಹಾಗಾಗಿ ಅವರನ್ನು ಸತ್ಯ ವಿಶ್ವಾಸಿಯಾಗಿಯೇ ಪರಿಗಣಿಸಬೇಕು ಎಂಬುದಾಗಿತ್ತು ಅವರ ವಾದ. ಅಬೂತ್ವಾಲಿಬರು ಆದರ್ಶದಲ್ಲಿ ಸತ್ಯ ವಿಶ್ವಾಸಿಯೂ, ಜಯಶಾಲಿಗಳ ಸಾಲಿನಲ್ಲಿ ಸೇರಿದ ವ್ಯಕ್ತಿಗಳು ಎನ್ನುವ ವಿಷಯದಲ್ಲಿ ಮಾತ್ರ ಹಲವಾರು ಗ್ರಂಥಗಳು ರಚಿಸಲ್ಪಟ್ಟಿದೆ. ಇಮಾಮ್ ಬರ್’ಸಂಜಿಯವರ, ಬಿಗ್’ಯತ್ ತ್ವಾಲೀಬೀನ್ ಲಿ ಈಮಾನಿ ಅಬೀತ್ವಾಲಿಬ್ ವ ಹುಸ್’ನಿ ಖಾತಿಮತಿಹಿ, ಮುಹಮ್ಮದ್ ಮುಈನ್ ಅಲ್ ಹಿಂದಿಯವರ ಇಸ್’ಬಾತು ಇಸ್ಲಾಮಿ ಅಬೀತ್ವಾಲಿಬ್, ಮುಹಮ್ಮದ್ ಅಫನ್’ದಿಯವರ ಅಸ್ಸಹ್ ಮುಸ್ವಾಯಿಬ್ ಇಲಾ ಕಬಿದಿ ಮನ್ ಆದ ಅಬಾತ್ವಾಲಿಬ್, ಅಸ್ಸಯ್ಯದ್ ಅಲಿ ಕಬೀರ್’ರವರ ಗಾಯತುಲ್ ಮತ್ವಾಲಿಬ್ ಫೀ ಬಹ್’ಸಿ ಈಮಾನಿ ಅಬೀತ್ವಾಲಿಬ್, ಅಹ್ಮದ್ ಫೈಳಿಯವರ ಫೈಳುಲ್ ವಾಹಿಬ್ ಫೀ ನಜಾತಿ ಅಬೀ ತ್ವಾಲಿಬ್, ಮಕ್ಕಾದ ಹದೀಸ್ ಪಂಡಿತರೂ, ಮುಫ್ತಿಯೂ ಆದ ಇಮಾಮ್ ಝೈನಿ ದಹ್’ಲಾನಿಯವರ ಅಸ್’ನಲ್ ಮತ್ವಾಲಿಬ್ ಎನ್ನುವ ಗ್ರಂಥಗಳಾಗಿವೆ ಅವು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-103/365

ಅಬೂತ್ವಾಲಿಬರ ಮರಣವು ಪ್ರವಾದಿಯವರಿಗೆ ﷺ ಬಹಳಷ್ಟು ಬೇಸರ ಉಂಟುಮಾಡಿತು. ಆ ಬೇಸರದಿಂದ ಚೇತರಿಸಿಕೊಳ್ಳುವ ಮೊದಲೇ ಪ್ರೀತಿಯ ಪತ್ನಿ ಖದೀಜರು ◌ؓ ಕೂಡ ರೋಗ ಪೀಡಿತರಾದರು. ರೋಗ ಉಲ್ಭಣಗೊಂಡು ಅವರು ಕೂಡ ಮರಣ ಹೊಂದಿದರು. ಇಮಾಮ್ ಹಾಕಿಮಿಯವರ ಉಲ್ಲೇಖದ ಪ್ರಕಾರ, ಅಬೂತ್ವಾಲಿಬ್’ರ ಮರಣದ ಮೂರು ದಿನದ ನಂತರವಾಗಿತ್ತು ಖದೀಜರು ◌ؓ ಕೂಡ ಮರಣ ಹೊಂದಿದ್ದು.

ಖದೀಜ ◌ؓ ಬೀವಿಯವರು, ಪ್ರವಾದಿಯವರಿಗೆ ﷺ ಕೇವಲ ಪತ್ನಿ ಮಾತ್ರವಾಗಿರಲ್ಲ. ಕೆಲವೊಮ್ಮೆ ತಾಯಿಯ ಸ್ಥಾನವನ್ನು ತುಂಬಿದ್ದರೆ, ಇನ್ನೂ ಕೆಲವೊಮ್ಮೆ ಗೆಳತಿಯಾಗುತ್ತಿದ್ದರು. ಎಲ್ಲಾ ತೊಂದರೆಗಳನ್ನು ಎದುರಿಸುವಾಗಲೂ ಖದೀಜ ಜೊತೆಯಲ್ಲೇ ಇರುತ್ತಿದ್ದರು, ಬೀವಿಯವರ ಗಂಭೀರವಾದ, ಪಕ್ವತೆಯಿಂದ ಇರುತ್ತಿದ್ದ ಅವರ ಆಶ್ವಾಸನೆಗಳು, ಪ್ರವಾದಿಯವರಿಗೆ ﷺ ಬಹಳಷ್ಟು ಧೈರ್ಯ ಕೊಡುತ್ತಿತ್ತು. ಪ್ರೀತಿಯಿಂದ ಕೂಡಿದ ಅವರ ಜೊತೆಯಲ್ಲಿ ಕಳೆದ ಜೀವನವು ಬಹಳಷ್ಟು ಸುಂದರವಾಗಿತ್ತು. ತನ್ನ ಪತ್ನಿಯ ವಿರಹದಿಂದ ಬಹಳಷ್ಟು ಕುಗ್ಗಿ ಹೋಗುತ್ತಿರುವ, ತಮ್ಮ ಪ್ರೀತಿಯ ಮುದ್ದಾದ ಹೆಣ್ಣು ಮಕ್ಕಳಿಗೆ ಸಮಾಧಾನ ಹೇಳುವುದು ಪ್ರವಾದಿಯವರಿಗೆ ﷺ ಇದ್ದ ಮತ್ತೊಂದು ಜವಾಬ್ದಾರಿಯಾಗಿತ್ತು. ಜಿಬ್’ರೀಲ್’ರು (ಅ) ಬಂದು ಖದೀಜರಿಗೆ ಅಭಿನಂದನೆಗಳನ್ನು ಹೇಳಿ ಹೋಗಿದ್ದ ವಿಷಯನ್ನು, ಪ್ರವಾದಿಯವರು ﷺ ತಮ್ಮ ಮಕ್ಕಳಲ್ಲಿ ತಿಳಿಸಿದಾಗ, ಅವರಿಗೆ ಅದರಿಂದ ಸ್ವಲ್ಪ ಸಮಾಧಾನ ಆಯಿತು.

ಬೀವಿಯವರ ಪಾರ್ಥಿವ ಶರೀರವನ್ನು ಭಾರವಾದ ಮನಸ್ಸಿನಿಂದ, ಪ್ರವಾದಿಯವರು ﷺ ಹಜೂನಿನ ಖಬರ್’ಸ್ಥಾನದ ಬಳಿ (ಜನ್ನತುಲ್ ಮುಅಲ್ಲದಲ್ಲಿ) ಅಂತ್ಯ ಸಂಸ್ಕಾರ ಮಾಡಲಾಯಿತು. ಅಬೂತ್ವಾಲಿಬರನ್ನು ಅಂತ್ಯ ಸಂಸ್ಕಾರ ಕೂಡ ಇಲ್ಲೇ ಆಗಿತ್ತು. ಮಯ್ಯತ್ ನಮಾಝ್ ಅಂದು ನಿಯಮ ಆಗಿರದ ಕಾರಣ, ಮನೆಯಿಂದ ನೇರವಾಗಿ ಖಬರ್’ಸ್ಥಾನಕ್ಕಾಗಿತ್ತು ಕೊಂಡು ಹೋದದ್ದು. ಸ್ವತಃ ಪ್ರವಾದಿಯವರೇ ﷺ ಖಬರಿನ ಒಳಗೆ ಇಳಿದು, ಒಡೆದ ಮನಸ್ಸಿನಿಂದ, ಸುರಿಸುವ ಕಣ್ಣಿರುನೊಂದಿಗೆ, ಬಹಳ ಗೌರವದಿಂದಲೇ ಅವರ ಪಾರ್ಥಿವ ಶರೀರವನ್ನು ಇಟ್ಟು, ಅಂತಿಮ ವಿಧಾಯ ಹೇಳಿದರು. ಮುಂದಿನ ಹದಿಮೂರು ವರ್ಷದ ಕಾರ್ಯಾಚರಣೆಯ ಪ್ರತಿಯೊಂದು ಹಂತದಲ್ಲೂ ಪ್ರವಾದಿಯವರಿಗೆ ﷺ, ಅವರ ನೆನಪು ಕಾಡುತ್ತಲೇ ಇತ್ತು. ಕೆಲವೊಮ್ಮೆ ಬೀವಿಯವರ ನೆನಪು ಅಧಿಕವಾದಾಗ, ಅವರ ಬಂಧುಗಳಿಗೆ ಉಡುಗೊರೆಗಳನ್ನು ಕೊಟ್ಟು ಕಳುಹಿಸುತ್ತಿದ್ದರು. ಮೇಕೆಯನ್ನು ಝಬಅ್ ಮಾಡಿ, ಅದರ ಮಾಂಸವನ್ನು ದಾನ ಮಾಡುತಿದ್ದರು. ಸ್ವರ್ಗದಲ್ಲಿ ಸುಂದರವಾದ ಅರಮನೆಯನ್ನು ತನ್ನದಾಗಿಸಿಕೊಂಡ ಭಾಗ್ಯವತಿ ಎನ್ನುವ ಪಟ್ಟವನ್ನು ಬೀವಿಯು ತಮ್ಮದಾಗಿಸಿಕೊಂಡಿದ್ದರು.

ಪ್ರವಾದಿಯವರ ﷺ ಎಲ್ಲಾ ಸಂಧಿಗ್ದ ಪರಿಸ್ಥಿತಿಯಲ್ಲೂ, ನೆರಳಿನ ಹಾಗೆ ನಿಂತಿದ್ದ ಎರಡು ಮಹಾ ಮನುಷಿಗಳ ವಿಯೋಗವು, ಪ್ರವಾದಿತ್ವದ ಘೋಷಣೆಯಾಗಿ ಹತ್ತು ವರ್ಷದ ಬಳಿಕವಾಗಿತ್ತು. ಇತಿಹಾಸದ ಪುಟಗಳಲ್ಲಿ ಆ ವರ್ಷವು “ಆಮುಲ್’ಹುಸೂಲ್” (ದುಃಖದ ವರ್ಷ) ಎನ್ನುವ ಹೆಸರಿನಲ್ಲಿ ದಾಖಲಾಯಿತು.
ಅಬೂತ್ವಾಲಿಬರ ವಿಯೋಗವು ಶತ್ರುಗಳಿಗೆ ಪ್ರವಾದಿಯವರಿಗೆ ﷺ ತೊಂದರೆ ನೀಡಲು ಅವಕಾಶ ಮಾಡಿಕೊಟ್ಟಿತು. ಎಲ್ಲಾ ಸಮಸ್ಯೆಗಳನ್ನು ಎದುರಿಸುತ್ತಿದ್ದಾಗ ಅದನ್ನು ವಿರೋಧಿಸುತ್ತಿದ್ದ ವ್ಯಕ್ತಿ ಇಲ್ಲವಾದಾಗ, ಅವರ ಕ್ರೌರ್ಯ ಅಧಿಕವಾಯಿತು. ಒಮ್ಮೆ ಬಹಳ ಬೇಸರದಿಂದ ಪ್ರವಾದಿಯವರು ﷺ, ತಮ್ಮ ದೊಡ್ಡಪ್ಪನನ್ನು ನೆನೆದು, “ದೊಡ್ಡಪ್ಪ ಎಷ್ಟು ಬೇಗ ತಮ್ಮ ವಿಯೋಗ ನನ್ನನ್ನು ಬಾಧಿಸಿತು.” ಎಂದು ಹೇಳಿದ್ದರು. ಮತ್ತೊಮ್ಮೆ ಪ್ರವಾದಿಯವರು ﷺ ದಾರಿಯಲ್ಲಿ ನಡೆದು ಬರುತ್ತಿದ್ದ ಸಂದರ್ಭದಲ್ಲಿ, ಒಬ್ಬ ದುಷ್ಟ ಪ್ರವಾದಿಯವರ ﷺ ತಲೆಯ ಮೇಲೆ ಮಣ್ಣೆಸೆದನು. ಪ್ರವಾದಿಯವರು ﷺ ಅಲ್ಲಿಂದ ತಕ್ಷಣವೇ ಮನೆ ಕಡೆ ನಡೆದರು. ಮನೆಗೆ ತಲುಪಿದಾಗ, ದೃಶ್ಯವನ್ನು ಕಂಡು, ಮಗಳು ಫಾತಿಮ ◌ؓ ಅಳುತ್ತಲೇ ತಂದೆಯ, ತಲೆಯಿಂದ ಎಲ್ಲಾ ಮಣ್ಣನ್ನೂ ತೆಗೆದು ಶುಚಿಗೊಳಿಸಿದರು. ಮಗಳ ಬೇಸರವನ್ನು ಕಂಡು, ಪ್ರವಾದಿಯವರು ﷺ, ಅಳ ಬೇಡ ಮಗಳೇ, ಖಂಡಿತ ಅಲ್ಲಾಹನು ರಕ್ಷಿಸುವನು. ಅದಕ್ಕೆ ಮಗಳು, ಹೌದು ಆದರೆ ಅಬೂತ್ವಾಲಿಬರ ಮರಣದ ವರೆಗೂ ಇಂತಹ ಯಾವುದೇ ದುಷ್’ಕೃತ್ಯ ನಡೆದಿರಲಿಲ್ಲ ಅಲ್ವಾ.? ಎಂದು ಹೇಳಿದರು.

ಅಲ್ಲಿಂದ ಕೆಲವು ದಿನಗಳ ಕಾಲ ಮನೆಯಲ್ಲೇ ಉಳಿದುಕೊಂಡರು. ಮಡದಿ ಇಲ್ಲದ ಮನೆಯಲ್ಲಿ, ತನ್ನ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬುತ್ತಾ, ಮುಂಬರುವ ದಿನಗಳ ಕುರಿತು ಅಲೋಚಿಸುತ್ತಾ ಕಾಲ ಕಳೆದರು.
ಅದರ ನಡುವೆ ಒಂದು ಕುತೂಹಲಕಾರಿಯಾದ ಘಟನೆ ನಡೆಯಿತು. ಅಬೂತ್ವಾಲಿಬರ ವಿಯೋಗದಿಂದ ಪ್ರವಾದಿಯವರು ﷺ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಅಬೂಲಹಬಿಗೆ ವಿಷಯ ತಿಳಿಯಿತು. ತನ್ನ ಸಹೋದರ ಮಗನ ಬೇಸರವನ್ನು ಕಂಡು, ಅವರು ಪ್ರವಾದಿಯವರ ﷺ ಬಳಿ ಬಂದು, ಮುಹಮ್ಮದ್’ರೆ ﷺ, ಅಬೂತ್ವಾಲಿಬ್ ಜೀವಿಸಿದ್ದಾಗ ನೀವು ಮಾಡುತಿದ್ದ ಎಲ್ಲಾ ಕಾರ್ಯಗಳನ್ನು ನೀವು ಮುಂದುವರಿಸಿ, ನನ್ನ ಮರಣದವರೆಗೂ, ನಿಮಗೆ ಯಾರೂ ಕೂಡ ತೊಂದರೆ ನೀಡಲಾರರು. ಇದು ಲಾತ ಉಝ್ಝದ ಮೇಲಾಣೆ ಎಂದು ಹೇಳಿದರು. ಇದರ ನಡುವೆ ಅಬೂಗೈತ್ವಲ ಎಂಬ ವ್ಯಕ್ತಿಯೂ, ಪ್ರವಾದಿಯವರನ್ನು ﷺ ಅವಾಚ್ಯವಾಗಿ ನಿಂದಿಸಿದ್ದರು, ಇದರ ಬಗ್ಗೆ ಅಬೂಲಹಬರಿಗೆ ವಿಷಯ ತಿಳಿದಾಗ, ಅವರು ನೇರವಾಗಿ ಆ ವ್ಯಕ್ತಿಯ ಬಳಿ ಹೋಗಿ ಅವನನ್ನು ಗದರಿಸಿದರು. ಅದನ್ನು ಕಂಡ ಆ ವ್ಯಕ್ತಿಯು ಅಲ್ಲಿಂದ ಸ್ವಲ್ಲ ಹಿಂದೆ ಸರಿದು, ಓ ಖುರೈಷಿಗಳೇ ಅಬೂಉತ್’ಬ (ಅಬೂಲಹಬ್) ನಮ್ಮ ಧರ್ಮ ಬಿಟ್ಟು ಹೋಗಿದ್ದಾರೆ, ಅವರು ಸಾಬಿಈ ಆಗಿದ್ದಾರೆ ಎಂದು ಜೋರಾಗಿ ಹೇಳಲು ಆರಂಭಿಸಿದನು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-104/365

ಅಬೂ ಗೈತ್ವಲರ ಕೂಗು ಕೇಳಿ ಖುರೈಷಿಗಳೆಲ್ಲರೂ ಓಡಿ ಬಂದು, ಅವರೆಲ್ಲರೂ ಅಬೂಲಹಬಿನಲ್ಲಿ ಇದೇನು ನಾವು ಕೇಳುತ್ತಿದ್ದೇವೆ.? ಅಂತ ಎಂದು ಕೇಳಿದಾಗ, ಅಬೂಲಹಬ್ ಏನಿಲ್ಲ, ನಾನು ಯಾವತ್ತೂ ಅಬ್ದುಲ್ ಮುತ್ತಲಿಬರ ಧರ್ಮವನ್ನು ಬಿಟ್ಟು ಹೋಗುವುದಿಲ್ಲ. ಆದರೆ ನನ್ನ ಸಹೋದರನ ಮಗನನ್ನು ಕಾಪಾಡಿದೆ ಅಂತ ಮಾತ್ರ.! ಅವರು ಮಾಡುವ ಕಾರ್ಯಾಚರಣೆಯನ್ನು, ಅವರು ಮಾಡಲಿ ಎಂದು ಹೇಳಿದರು. ಅದಕ್ಕೆ ಖುರೈಷಿಗಳು, ಅದು ಒಳ್ಳೆಯ ಕೆಲಸ ಕುಟುಂಬ ಸಂಬಂಧವನ್ನು ಮುರಿಯಬೇಡಿ ಎಂದು ಹೇಳಿದರು.

ಸ್ವಲ್ಪ ದಿನದ ಮಟ್ಟಿಗೆ ಹೀಗೆ ದಿನಗಳು ಕಳೆದು ಹೋಯಿತು. ಅಬೂಲಹಬ್ ಕಾರಣವಾಗಿ, ಪ್ರವಾದಿಯವರಿಗೆ ﷺ ಸಣ್ಣ ತೊಂದರೆಯನ್ನೂ ನೀಡಲು ಸಾಧ್ಯವಾಗಿಲ್ಲ. ಹೀಗಿರುವಾಗ ಅಬೀ ಮುಐತ್ವ್ ಹಾಗೂ ಅಬೂಜಹಲ್ ಇಬ್ಬರು ಜೊತೆ ಸೇರಿ, ಅಬೂಲಹಬನ್ನು ಭೇಟಿಯಾಗಲು ಹೊರಟರು. ಅಬೂಲಹಬಿನ ಬಳಿ ತಲುಪಿದ ಅವರು, ನಿಮ್ಮ ತಂದೆ ಎಲ್ಲಿಗೆ ಹೋಗುವುದು ಎಂದು ಮುಹಮ್ಮದ್ ﷺ ಹೇಳುತ್ತಿದ್ದದ್ದು.? (ಅಬ್ದುಲ್ ಮುತ್ತಲಿಬ್ ಸ್ವರ್ಗದಲ್ಲೋ, ಅಥವಾ ನರಕದಲ್ಲೋ) ಎಂದು ಕೇಳಿದರು. ಅದಕ್ಕೆ ಅಬೂಲಹಬ್ ನೇರವಾಗಿ ಪ್ರವಾದಿಯವರ ﷺ ಬಳಿ ಬಂದು ಇದೇ ಪ್ರಶ್ನೆಯನ್ನು ಪುನಃ ಕೇಳಿದಾಗ, ಪ್ರವಾದಿಯವರು ﷺ, ಅವರ ಜನತೆ ಎಲ್ಲಿಗೆ ಹೋಗುವರೋ ಅಲ್ಲಿಗೆ ಎಂದು ಹೇಳಿದರು. ಅಬೂಲಹಬ್ ಅದೇ ಉತ್ತರವನ್ನು ಅವರಿಬ್ಬರಿಗೂ ತಿಳಿಸಿದರು. ಅದಕ್ಕೆ ಅವರು, ಮುಹಮ್ಮದ್’ರ ﷺ ಮಾತಿನ ಅರ್ಥ ಅಬ್ದುಲ್ ಮುತ್ತಲಿಬ್ ನರಕಕ್ಕೆ ತಲುಪುವರು ಎಂದೋ.? ಎಂದು ಪುನಃ ಕೇಳಿದಾಗ, ಅಬೂಲಹಬ್ ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಪ್ರವಾದಿಯವರಲ್ಲಿ ﷺ ಕೇಳಿದರು. ಅದಕ್ಕೆ ಪ್ರವಾದಿಯವರು ﷺ, ಅಲ್ಲಾಹನಿಗೆ ಸಮಾನವಾಗಿ ಯಾರು ಇತರರನ್ನು ಜೊತೆ ಸೇರಿಸುತ್ತಾರೋ ಅವರು ಖಂಡಿತವಾಗಿ ನರಕಕ್ಕೆ ಹೋಗುವರು ಎಂದು ಹೇಳಿದರು. ಅದಕ್ಕೆ ಅಬೂಲಹಬ್, ನಮ್ಮ ತಂದೆ ನರಕಕ್ಕೆ ಹೋಗುವುದಾದರೆ.? ನಾನು ಇನ್ನು ಮುಂದೆ ನಿಮ್ಮ ರಕ್ಷಣೆಗೆ ನಿಲ್ಲುವುದಿಲ್ಲ ಎಂದು ಹೇಳಿ, ಅಲ್ಲಿಂದ ಹೊರಟರು.

ಈ ಮಾತನ್ನು ಕೇಳಿ, ಶತ್ರುಗಳಿಗೆ ಹೋದ ಧೈರ್ಯ ವಾಪಸ್ ಬಂದಿತು. ತುಂಬಾ ಕ್ರೂರವಾಗಿ ವರ್ತಿಸಲು ಪುನಃ ಆರಂಭಿಸಿದರು. ಹಕಮ್ ಬಿನ್ ಅಬಿಲ್ ಅಲ್’ಹಸ್ವ್, ಉಖ್’ಬತ್ ಬಿನ್ ಅಬೀ ಮುಐತ್ವ್, ಅದಿಯ್ಯ್ ಬಿನ್ ಹಂರಾಅ, ಇಬ್’ನುಲ್ ಅಸದಾಅಲ್ ಹುದಲಿ, ಮುಂತಾದ ಜನರು ಪ್ರವಾದಿಯವರಿಗೆ ﷺ ತೊಂದರೆ ನೀಡುತ್ತಿದ್ದ ಮುಖ್ಯ ಶತ್ರುಗಳಾಗಿದ್ದರು. ಇವರಲ್ಲಿ ಕೆಲವರು ಪ್ರವಾದಿಯವರು ﷺ ನಮಾಝ್ ಮಾಡುತಿದ್ದ ಸಂದರ್ಭದಲ್ಲಿ, ಮೇಕೆಯ ಕರಳುಗಳನ್ನು ಬಿಸಾಡಲು ಆರಂಭಿಸಿದರು. ಪ್ರವಾದಿಯವರಿಗೆ ﷺ ಯಾವುದೇ ಭಯವಿಲ್ಲದೆ ನಮಾಝ್ ಮಾಡಲು ಹಿಜ್’ರ್ ಇಸ್ಮಾಯಿಲ್ ಲಲ್ಲಿ ಅಡಗಿ ನಿಲ್ಲಬೇಕಾಗಿ ಬಂದಿತು. ಇಮಾಮ್ ಬುಖಾರಿಯವರ ◌ؓ ಉಲ್ಲೇಖದಲ್ಲಿ ಈ ಘಟನೆಯ ಕುರಿತು ಉರ್’ವ್ವರವರು ◌ؓ ವಿವರಿಸುವುದು ಕಾಣಬಹುದು. ನಾನು ಅಂರ್ ಬಿನ್ ಅಲ್’ಆಸ್ವ್’ನಲ್ಲಿ ಕೇಳಿದೆನು, ಖುರೈಷಿಗಳು ಪ್ರವಾದಿಯವರಿಗೆ ﷺ ಬಹಳಷ್ಟು ತೊಂದರೆ ನೀಡಿದ್ದ ಸಂದರ್ಭ ಯಾವುದು ಎಂದು ನಿಮಗೆ ಗೊತ್ತಿದ್ದರೆ, ತಿಳಿಸುವಿರ.? ಎಂದು ಕೇಳಿದರು. ಅದಕ್ಕೆ ಅಂರ್ ಹೇಳಲು ಆರಂಭಿಸಿದರು.

ಒಂದು ದಿನ ಪ್ರವಾದಿಯವರು ﷺ ಕಅಬಾಲಯದ ಹಿಜ್’ರ್’ನಲ್ಲಿ (ಹಿಜ್’ರ್ ಇಸ್ಮಾಯಿಲ್) ನಮಾಝ್ ಮಾಡುತಿದ್ದರು. ಉಖ್’ಬತ್ ಬಿನ್ ಅಬೀಮುಐತ್ವ್ ಎನ್ನುವ ವ್ಯಕ್ತಿ, ಪ್ರವಾದಿಯವರ ﷺ ಕತ್ತಿಗೆ ಒಂದು ಬಟ್ಟೆಯನ್ನು ಸುತ್ತಿ, ಬಲವಾಗಿ ಎಳೆಯಲು ಆರಂಭಿಸಿದನು. ಅದನ್ನು ನೋಡಿದ ಅಬೂಬಕ್ಕರ್ ◌ؓ ತಕ್ಷಣವೇ ಓಡಿ ಹೋಗಿ ಅವನನ್ನು ತಡೆದು, ನನ್ನ ರಕ್ಷಕ ಅಲ್ಲಾಹನಾಗಿರುವೆನು ಎಂದು ಹೇಳಿದ ಕಾರಣಕ್ಕೆ ಅವರನ್ನು ನೀವು ಕೊಲ್ಲುತ್ತಿದ್ದೀರ.? ಅವರು ನಿಮಗೆ ಬೇಕಾಗಿದ್ದ ಎಲ್ಲಾ ಪ್ರಮಾಣ ಗಳನ್ನೂ ನೀಡಲಿಲ್ಲವೇ.? ಎಂದು ಜೋರಾಗಿ ಕೂಗಿ ಹೇಳಿದರು.
ಇಮಾಮ್ ತ್ವಬ್’ರಾನಿಯವರ ◌ؓ ಉಲ್ಲೇಖದ ಪ್ರಕಾರ, ಪ್ರವಾದಿಯವರು ﷺ ನಮಾಝ್ ಮಾಡಿದ ನಂತರ ಕಅಬಾಲಯದ ನೆರಳಿನಲ್ಲಿ ಕುಳಿತಿದ್ದ ಖುರೈಷಿಗಳ ಮುಂದೆ ನಿಂತು, ಕುತ್ತಿಗೆಯ ಬಳಿ ತೋರಿಸಿ, ಓ ಖುರೈಷಿಗಳೇ ನನ್ನನ್ನು ಖುರ್ಬಾನಿಯಿಂದಲ್ಲದೇ (ಬಹುಶಃ ತನ್ನ ತಂದೆಯ ಅಥವಾ ಪ್ರವಾದಿ ಇಸ್ಮಾಯಿಲ್’ರವರ ಘಟನೆಯನ್ನು ನೆನಪಿಸಿ ಆಗಿರಬಹುದು ಈ ಮಾತು ಹೇಳಿದ್ದು) ನಿಯೋಗಿಸಿಸಲಿಲ್ಲ ಎಂದು ಹೇಳಿದರು. ಅದಕ್ಕೆ ಅಬೂಜಹಲ್ ಜಾಹಿಲ್ ಆಗಿದ್ದೀರೋ.? ಎಂದು ಕೇಳಿದಾಗ, ಪ್ರವಾದಿಯವರು ﷺ ನಿವಾಗಿದ್ದೀರ ಬುದ್ದಿ ಶೂನ್ಯರಲ್ಲಿ ಸೇರಿದ ವ್ಯಕ್ತಿ (ಜಾಹಿಲ್) ಎಂದು ಹೇಳಿದರು.

ಆ ಕಾಲದ ಇನ್ನೊಂದು ಘಟನೆಯನ್ನು ಅನಸ್’ರವರು ◌ؓ ಈ ರೀತಿ ವಿವರಿಸುತ್ತಾರೆ. ಒಂದು ದಿನ ಪ್ರವಾದಿಯವರಿಗೆ ﷺ, ಖುರೈಷಿಗಳು ಬಹಳಷ್ಟು ಹಿಂಸೆ ನೀಡಿದರು. ಅವರು ಪ್ರಜ್ಞೆ ತಪ್ಪಿ ಬಿದ್ದರು. ತಕ್ಷಣವೇ ಅಬೂಬಕ್ಕರ್’ರವರು ಬಂದು, ನನ್ನ ರಕ್ಷಕ ಅಲ್ಲಾಹು ಆಗಿರುವನು ಎಂದು ಹೇಳಿದ ಕಾರಣಕ್ಕೆ ನೀವು ಒಬ್ಬರನ್ನು ಕೊಲ್ಲುತಿದ್ದೀರ.? ನಿಮಗಾಗಿದೆ ನಾಶ ಎಂದು ಜೋರಾಗಿ ಕೂಗಿ ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-105/365

ಆ ಸಮಯದಲ್ಲಿ ಪ್ರವಾದಿಯವರು ﷺ ಹಾಗೂ ಅವರ ಅನುಚರರು ಬಹಳಷ್ಟು ತೊಂದರೆಗಳನ್ನು ಎದುರಿಸಿದ್ದ ಬಹಳಷ್ಟು ಘಟನೆಗಳನ್ನು ಉಲ್ಲೇಖಿಸಲಾಗಿದೆ. ಇಮಾಮ್ ಬುಖಾರಿ ◌ؓ ಹಾಗೂ ಇಮಾಮ್ ಮುಸ್ಲಿಂರವರು ◌ؓ ಉಲ್ಲೇಖಿಸಿದ, ಅಬ್ದುಲ್ಲಾಹಿ ಬಿನ್ ಮಸ್’ವೂದ್’ರವರು ◌ؓ ವಿವರಿಸಿದ ಘಟನೆಯೂ ಈ ರೀತಿಯಾಗಿದೆ. ಪ್ರವಾದಿಯವರು ﷺ ಖುರೈಷಿಗಳ ವಿರುದ್ಧವಾಗಿ ಪ್ರಾರ್ಥಿಸಿದ ದೃಶ್ಯಕ್ಕೆ ಒಮ್ಮೆ ಮಾತ್ರವೇ ನಾನು ಸಾಕ್ಷಿಯಾಗಿದ್ದೆ. ಒಂದು ದಿನ ಪ್ರವಾದಿಯವರು ﷺ ಕಅಬಾಲಯದ ಬಳಿ ನಿಂತು ನಮಾಝ್ ಮಾಡುತಿದ್ದರು. ಅಲ್ಲೇ ಪಕ್ಕದಲ್ಲಿ ಖುರೈಷಿಗಳು ಕೂಡ ಕುಳಿತಿದ್ದರು. ಪ್ರವಾದಿಯವರು ﷺ ನಮಾಝಿನಲ್ಲಿ ಸುಜೂದ್’ಗೆ ತಲುಪಿದಾಗ, ಅಬೂಜಹಲ್ ತನ್ನ ಸಹಚರರೊಂದಿಗೆ, ಕಳೆದ ದಿನ ಕತ್ತರಿಸಿದ ಒಂಟೆಯ ಕರುಳನ್ನು ತಂದು ಮುಹಮ್ಮದ್’ರ ﷺ ಬೆನ್ನಿನ ಮೇಲೆ ಯಾರು ಹಾಕ್ತಾರೆ ಎಂದು ಕೇಳಿದರು. ತಕ್ಷಣವೇ ಅವರ ಗುಂಪಿನಲ್ಲಿದ್ದ ನೀಚನಾದ ಉಖ್’ಬ ಬಿನ್ ಅಬೀ ಮುಐತ್ವ್ ಎದ್ದು ಹೋಗಿ, ಆ ಕರುಳನ್ನು ತಂದು ಸಾಷ್ಟಾಂಗದಲ್ಲಿ ಇದ್ದ ಪ್ರವಾದಿಯವರ ﷺ ಬೆನ್ನಿನ ಮೇಲೆ ಹಾಕಿದನು. ಅದನ್ನು ನೋಡುತ್ತಾ ನಿಂತಿದ್ದ ಖುರೈಷಿಗಳು ಬಿದ್ದು, ಬಿದ್ದು ನಗುತ್ತಿದ್ದರು. ಆದರೆ ಪ್ರವಾದಿಯವರಿಗೆ ﷺ ಮಾತ್ರ ಸ್ವಲ್ಪವೂ ಕದಳಲು ಸಾಧ್ಯವಾಗಿಲ್ಲ. ನಾನು ಅದನ್ನು ಅಸಹಾಯಕನಾಗಿ ನೋಡಿತ್ತಾ ನಿಂತಿದ್ದೆ. ಅದರ ನಡುವೆ ವೇಗವಾಗಿ ಹೋಗಿ ಪ್ರವಾದಿಯವರ ﷺ ಪ್ರಿಯ ಮಗಳಾದ ಫಾತಿಮಾರಿಗೆ ◌ؓ ವಿಷಯ ತಲುಪಿಸಿದರು. ಸಣ್ಣ ವಯ್ಯಸಿನ ಮಗಳು ಫಾತಿಮ ◌ؓ ಖುರೈಷಿಗಳನ್ನು ಕೋಪದಿಂದ ಬೈದು ಅಲ್ಲಿ ಓಡಿ ಬಂದು, ಹೇಗಾದರೂ ಮಾಡಿ ಆ ಭಾರವಾದ ಕರಳನ್ನು ತೆಗದು ಬಿಟ್ಟರು. ನಂತರ ಪ್ರವಾದಿಯವರು ನಿರಾಳವಾಗಿ ತಲೆ ಎತ್ತಿ, ಅಲ್ಲಾಹನಿಗೆ ಸ್ತುತಿಸಿ, ಖುರೈಷಿಗಳ ವಿರುದ್ಧ ಪ್ರಾರ್ಥನೆ ಮಾಡಿದರು. ಸಾಮಾನ್ಯವಾಗಿ ಪ್ರವಾದಿಯವರು ﷺ ಪ್ರಾರ್ಥನೆ ಮಾಡುವಾಗ ಆ ವಾಕ್ಯಗಳನ್ನು ಮೂರು ಬಾರಿ ಹೇಳುತ್ತಿದ್ದರು. ಹಾಗೇ ಅದೇ ರೀತಿ ಅಬೂಜಹಲ್, ಉತ್’ಬ, ವಲೀದ್, ಶೈಬ, ಉಮಯ್ಯ, ಉಖ್’ಬ ಎಂಬವರನ್ನು ನೀನೇ ನೋಡುಕೊಳ್ಳಬೇಕು ಅಲ್ಲಾಹ್ ಎಂದು ಮೂರು ಬಾರಿ ಹೇಳಿ ಪ್ರಾರ್ಥಿಸಿದರು. ಪ್ರಾರ್ಥನೆಯಲ್ಲಿ ಏಳನೇ ವ್ಯಕ್ತಿಯ ಹೆಸರನ್ನೂ ಹೇಳಿದ್ದರು. ಆದರೆ ಅದು ನನಗೆ ಮರೆತು ಹೋಯಿತು. ಹೀಗೆ ಪ್ರಾರ್ಥನೆ ಮಾಡಿದ್ದನ್ನು ಕಂಡು ಅವರ ಮುಖದಲ್ಲಿದ್ದ ಸಂತೋಷ ಮಾಯವಾಯಿತು. ಈ ಹೆಸರು ಹೇಳಿದ ಎಲ್ಲಾ ವ್ಯಕ್ತಿಗಳು ಬದ್’ರ್ ಯುದ್ಧದಲ್ಲಿ ಮರಣ ಹೊಂದಿದರು. ಎಂದು ಹೇಳಿದರು.

ಇಮಾಮ್ ತ್ವಬ್’ರಿ ◌ؓ ಅದರಲ್ಲಿ ಇನ್ನೊಂದು ಘಟನೆಯನ್ನು ಸೇರಿಸಿ ವಿವರಿಸುತ್ತಾರೆ. ಈ ಘಟನೆ ಆದ ಬಳಿಕ ಪ್ರವಾದಿಯವರು ﷺ ಹೊರಗೆ ಬಂದು ನಿಂತಾಗ, ಕೈಯಲ್ಲಿ ಚಾಟಿ ಹಿಡಿದು ಬರುತ್ತಿದ್ದ ಅಬುಲ್ ಬಖ್’ತರಿಯರಿಗೆ ಎದುರಾದರು. ಅವರು ಏನಾಯಿತು ಎಂದು ಕೇಳಿದರು. ಅದಕ್ಕೆ ಪ್ರವಾದಿಯನ್ನು ﷺ ಕೇಳಿದಾಗ, ಅದು ಏನು ಇಲ್ಲ, ಎಂದು ಅವರನ್ನು ಕಳುಹಿಸಲು ಮುಂದಾದಾಗ, ಅಬುಲ್ ಬಖ್’ತರಿಯ ಮತ್ತಷ್ಟು ಕೇಳುತ್ತಿದ್ದರು. ಬೇರೆ ವಿಧಿ ಇಲ್ಲದೆ ಎಲ್ಲಾ ವಿಷಯವನ್ನು ಹೇಳಿದರು. ಅದನ್ನು ಕೇಳಿ ಅವರು ಪ್ರವಾದಿಯವರ ﷺ ಜೊತೆಯಲ್ಲಿ ಪುನಃ ಮಸ್ಜಿದ್ ಬಳಿ ಬಂದು, ಅಬೂಜಹಲ್’ನ ಬಳಿ ಬಂದು, ನೀನೇನ ಪ್ರವಾದಿಯವರ ಮೇಲೆ ಕರುಳು ಹಾಕಿದ್ದು ಎಂದು ಕೇಳಿದಾಗ, ಅಬೂ ಜಹಲ್ ಹೌದು ಎಂದು ಹೇಳಿದನು. ಅದನ್ನು ಕೇಳಿ ಅಬುಲ್ ಬಖ್’ತರಿಯ ಚಾಟಿಯಿಂದ ಅಬೂ ಜಹಲ್’ನ ತಲೆಗೆ ಬೀಸಿದರು. ನೋವಿನಿಂದ ನರಳಾಡುದನ್ನು ಕಂಡು, ಅವರನ್ನು ನೋಡುತ್ತಾ ನಿಂತಿದ್ದವರು ಕೂಡ ಓಡಿ ಹೋದರು. ಅಬೂಜಹಲ್ ಓಡುತ್ತಾ ಮುಹಮ್ಮದ್’ರೇ ﷺ ನಿಮಗಾಗಿದೆ ನಾಶ, ನಮ್ಮ ಜೊತೆಯಲ್ಲಿ ಶತ್ರುದ ನಿರ್ಮಿಸಿ ಅನುಚರರೊಂದಿಗೆ ಬಂದು ರಕ್ಷಣೆ ಹೊಂದುತ್ತಾರೆ ಎಂದು ಹೇಳಿದರು.

ಸಾಮಾನ್ಯವಾಗಿ ಪ್ರವಾದಿಯವರು ಯಾರ ವಿರುದ್ಧವು ಪ್ರಾರ್ಥನೆ ಮಾಡುವುದಿಲ್ಲ. ವೆಯ್ಯುಕ್ತಿಕ ವಿಷಯದಲ್ಲಿ ಯಾರಲ್ಲೂ ಕೋಪ ಮಾಡುತ್ತನೂ ಇರಲಿಲ್ಲ. ಆದರೆ ಸತ್ಯವನ್ನು ನಿಷೇಧ ಮಾಡುವುದಾಗಲಿ, ಮೌಲ್ಯಗಳನ್ನು ಹಾನಿ ಮಾಡಲು ಮುಂದಾದಾಗ ಮಾತ್ರ ಪ್ರವಾದಿಯವರು ಸಹಿಸುತ್ತಿರಲಿಲ್ಲ. ಅದೇ ರೀತಿ ಅಲ್ಲಾಹನ ಚಿಹ್ನೆಗಳನ್ನು ಆಗಲಿ ನಿಯಮಗಳನ್ನು ಆಗಲಿ ವಿರೋಧಿಸಿದಾಗ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ನೀಡುತ್ತಿರಲಿಲ್ಲ. ಈ ಘಟನೆಯಲ್ಲಿ ಅತ್ಯುನ್ನತ ಆರಾಧನೆಯ ವೇಳೆಯಲ್ಲಿದ್ದಾಗ ಅವರು ಅಪಮಾನ ಮಾಡಿದರು ಎಂಬುದಾಗಿತ್ತು ಅವರು ಪ್ರಾರ್ಥನೆ ಮಾಡಲು ಕಾರಣ. ಅದು ಪ್ರವಾದಿಯವರಿಗೆ ಯಾವುದೇ ಕಾರಣಕ್ಕೂ ಕ್ಷಮಿಸಲು ಸಾಧ್ಯವಾಗಿಲ್ಲ. ಈ ಘಟನೆಯನ್ನು ಉದ್ದೇಶಿಸಿಯಾಗಿತ್ತು ಇತಿಹಾಸಕಾರರು ಇಬ್’ನು ಮಸ್’ವೂದ್ ಹೇಳಿದ, ಪ್ರವಾದಿಯವರು ಒಂದೇ ಬಾರಿ ಮಾತ್ರವಾಗಿತ್ತು ಈ ರೀತಿ ಪ್ರಾರ್ಥನೆ ಮಾಡಿದ್ದು ಎನ್ನುವುದನ್ನು ವಿವರಿಸಿದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-106/365

ಅಬೂತ್ವಾಲಿಬರ ವಿಯೋಗದ ನಂತರದ ಮಕ್ಕಾದಲ್ಲಿ ಉಂಟಾದ ಸಂಧಿಗ್ದ ಪರಿಸ್ಥಿತಿಯ ಕುರಿತು ಒಂದು ಉಲ್ಲೇಖವು ಈ ರೀತಿಯಾಗಿದೆ. ಅನಸ್’ರವರು ◌ؓ ಹೇಳುವುದು ಕಾಣಬಹುದು. ಖುರೈಷಿಗಳು, ಪ್ರವಾದಿಯವರ ﷺ ಮೇಲೆ ಬಹಳಷ್ಟು ಹಲ್ಲೆ ನಡೆಸಿದರು. ಅವರು ತಮ್ಮ ಪ್ರಜ್ಞೆ ತಪ್ಪುವ ಪರಿಸ್ಥಿತಿಗೆ ಬಂದು ತಲುಪಿದರು. ತಕ್ಷಣವೇ ಅಲ್ಲಿಗೆ ಬಂದ ಅಬೂಬಕ್ಕರ್ ◌ؓ, ಜೋರು ಧ್ವನಿಯಲ್ಲಿ, ನನ್ನ ರಕ್ಷಕ ಅಲ್ಲಾಹನಾಗಿದ್ದಾನೆ, ಎಂದು ಹೇಳಿದ ಕಾರಣಕ್ಕೆ ನೀವು ಅವರನ್ನು ಸಾಯಿಸಲು ನೋಡುತ್ತಿದ್ದೀರೇ.? ಎಂದು ಕೇಳಿದರು.

ಪ್ರಸ್ತುತ ಸಂದರ್ಭದಲ್ಲಿ ಅವರ ಮಧ್ಯಸ್ಥಿಕೆ ಬಹಳಷ್ಟು ಪರಿಣಾಮಕಾರಿಯಾಗಿತ್ತು. ಅದನ್ನು ಸೂಚಿಸುವ ಒಂದು ಘಟನೆಯ ಬಗ್ಗೆ, ಮುಹಮ್ಮದ್ ಬಿನ್ ಅಖೀಲ್ ತಿಳಿಸುವ ಉಲ್ಲೇಖವನ್ನು ಅಬೂನುಐಂ ಈ ರೀತಿ ವಿವರಿಸುತ್ತಾರೆ. ನನ್ನಲ್ಲಿ ಅಲಿಯವರು ◌ؓ, ಈ ಜನತೆಯಲ್ಲಿ ಬಹಳಷ್ಟು ಧೈರ್ಯಶಾಲಿ ವ್ಯಕ್ತಿ ಯಾರೆಂದು.? ನನಗೆ ತಿಳಿಸುವಿರ ಎಂದು ಕೇಳಿದಾಗ, ಅದು ನೀವೆ ಎಂದು ಎಲ್ಲರೂ ಒಟ್ಟಾಗಿ ತಿಳಿಸಿದೆವು. ತಕ್ಷಣವೇ ಅಲಿಯವರು ◌ؓ ನೇರವಾದ ನಡೆದ ಯುದ್ಧದಲ್ಲಿ ನಾನು ಬಹಳಷ್ಟು ಜನರನ್ನು ಎದುರಿಸಿದ್ದೇನೆ, ಅದಲ್ಲ ನಾನು ಕೇಳಿದ್ದು, ಅತೀ ದೊಡ್ಡ ಧೀರ ವ್ಯಕ್ತಿ (ಶುಜಾಯಿ) ಯಾರು ಎಂದು.? ಪುನಃ ಕೇಳಿದಾಗ, ನಾವೆಲ್ಲರೂ ಅದೂ ಕೂಡ ನೀವೆ ಎಂದು ಉತ್ತರಿಸಿದೆವು. ತಕ್ಷಣವೇ ಅಲಿಯವರು ◌ؓ ಅಬೂಬಕ್ಕರ್ ◌ؓ ಆಗಿದ್ದಾರೆ ಎಂದು ಹೇಳಿದರು. ಯಾಕೆಂದರೆ, ಒಂದು ದಿನ ಖುರೈಷಿಗಳು ಪ್ರವಾದಿಯಾರಿಗೆ ﷺ ಬಹಳಷ್ಟು ತೊಂದರೆ ನೀಡಿ ಈ ವ್ಯಕ್ತಿಯಾಗಿದ್ದಾರೆ, ನಮ್ಮ ಹಲವಾರು ದೇವರುಗಳನ್ನು, ಒಂದೇ ದೇವನು ಮಾತ್ರ ಎಂದು ಬದಲಾವಣೆ ಮಾಡಿದ್ದು ಎಂದು ಹೇಳುತ್ತಿದ್ದಾಗ, ನಾವ್ಯಾರಿಗೂ ಅಲ್ಲಿ ಹೋಗಲು ಸಾಧ್ಯವಾಗಿಲ್ಲ. ಅಷ್ಟರಲ್ಲೇ ಅಬೂಬಕ್ಕರ್ ◌ؓ ನೇರವಾಗಿ ಅಲ್ಲಿಗೆ ಬಂದು, ಪ್ರವಾದಿಯವರನ್ನು ಸುತ್ತುವರಿದಿದ್ದ ಜನರನ್ನು ದೂರ ಸರಿಸಿ, ನಿಮಾಗಾಗಿದೆ ನಾಶ.! ನನ್ನ ರಕ್ಷಕ ಅಲ್ಲಾಹನಾಗಿದ್ಡಾನೆ ಎಂದು ಹೇಳಿದ ಕಾರಣಕ್ಕೆ ಇವರನ್ನು ನೀವುಗಳು ಸಾಯಿಸುತ್ತಿದ್ದೀರೆ.? ಎಂದು ಹೇಳಿ ಮುಗಿಸುವಾಗ ಅಲಿಯವರು ◌ؓ ಭಾವುಕರಾಗಿ ಅಳಲು ಆರಂಭಿಸಿದರು. ಕಣ್ಣೀರು ಅವರ ಗಡ್ಡದ ನಡುವಿನಿಂದ. ಹರಿದು ಹೋಗುವಷ್ಟು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ನಂತರ ಅವರು ಸಭೆಯೊಂದಿಗೆ, ಫರೋವನ ಜನತೆಯ ಸತ್ಯ ವಿಶ್ವಾಸಿಗಳೋ ಧೀರರು ಅಥವಾ ಅಬೂಬಕ್ಕರ್’ರವರ ◌ؓ ಧೀರ ವ್ಯಕ್ತಿ ಎಂದು ಕೇಳಿದಾಗ.? ಸಭೆಯಲ್ಲಿ ಯಾರೂ ಏನೂ ಹೇಳಲಿಲ್ಲ. ಅದನ್ನು ಕಂಡು ಯಾಕೆ ಯಾರೂ ಹೇಳುತ್ತಿಲ್ಲ ಎಂದು ಕೇಳಿ.? ಅಬೂಬಕ್ಕರ್’ರವರ ◌ؓ ಒಂದೊಂದು ನಿಮಿಷವೂ ಕೂಡ ಫರೋವನ ಜನತೆಯ ಸತ್ಯ ವಿಶ್ವಾಸಿಗಳ ಜೀವನಕ್ಕೆ ಸಮಾನವಾಗಿದೆ. ಅಷ್ಟೇ ಅಲ್ಲ ಅವರು ಫರೋವನ ಭಯದಿಂದ ತಮ್ಮ ವಿಶ್ವಾಸವನ್ನು ರಹಸ್ಯವಾಗಿ ಇಟ್ಟರು ಆದರೆ ಅಬೂಬಕ್ಕರ್ ◌ؓ ಸಾರ್ವಜನಿಕವಾಗಿ ಎದುರಿಸಿದರು ಎಂದು ಹೇಳಿದರು.

ಹಿಜ್’ರ ಹತ್ತನೇ ವರ್ಷದ ಘಟನೆಯನ್ನಾಗಿದೆ ನಾವು ಈಗ ತಿಳಿದದ್ದು. ಮಕ್ಕಾದಲ್ಲಿದ್ದ ಪ್ರತಿರೋಧಗಳು ಬಹಳಷ್ಟು ಕ್ರೂರವಾಯಿತು. ಇಸ್ಲಾಮಿನ ಸುಂದರ ಆದರ್ಶಗಳನ್ನು ತಿಳಿಸಿಕೊಡಲು ಮುಂದಿನ ದಾರಿ ಏನೆಂದು ಯೋಚಿಸುತ್ತಾ, ಸಖೀಫ್ ಜನತೆಯ ಬೆಂಬಲ ಪಡೆದರೆ ಹೇಗೆ.? ಎಂಬ ತೀರ್ಮಾನಕ್ಕೆ ಬಂದು. ಸಖೀಫ್ ಜನತೆಯ ಕಡೆಗೆ ಹೋದರು. ಅವರು ತ್ವಾಹಿಫ್’ನಲ್ಲಾಗಿತ್ತು ವಾಸವಾಗಿದ್ದದ್ದು. ಅಷ್ಟೇ ಅಲ್ಲ ಪ್ರವಾದಿಯವರ ﷺ ಸಾಕು ತಾಯಿ ಹಲೀಮ ಬೀವಿಯವರ ◌ؓ ಹಾಗೂ ಸಂಬಂಧಿಕರ ಮನೆಯೂ ಕೂಡ ಅಲ್ಲೇ ಇದ್ದವು. ಹೀಗೆ ಪ್ರವಾದಿಯವರು ﷺ ಹಿಜ್’ರ ಹತ್ತನೇ ವರ್ಷ ಶವ್ವಾಲ್ ತಿಂಗಳಲ್ಲಿ ತ್ವಾಹಿಫ್’ಗೆ ಹೊರಟರು. ಅವರ ಜೊತೆಯಲ್ಲಿ ಝೈದ್ ಬಿನ್ ಹಾರಿಸ್ ◌ؓ ಕೂಡ ಜೊತೆಯಲ್ಲಿದ್ದರು. ತ್ವಾಹಿಫಿನ ಜನತೆ ಖಂಡಿತ ಸಹಾಯ ಮಾಡುವರು ಎನ್ನುವ ಭರವಸೆಯಿಂದಾಗಿತ್ತು ತ್ವಾಹೀಫಿಗೆ ತಲುಪಿದ್ದು. ಅವರು ಸಖೀಫ್ ಜನಾಂಗದ ನಾಯಕರನ್ನು ಭೇಟಿಯಾಗಲು ಹೊರಟರು. ಅಂರ್ ಬಿನ್ ಉಮೈರ್’ನ ಮೂರು ಮಕ್ಕಳಾಗಿದ್ದರು ಅಲ್ಲಿನ ನಾಯಕರು. ಅವರಲ್ಲಿ ಅಬ್ದು ಯಾಲಿಲ್, ಹಬೀಬ್, ಮಸ್’ಊದ್ ಎನ್ನುವರಾಗಿದ್ದರು, ಪ್ರಮುಖ ವ್ಯಕ್ತಿಗಳು. ಸಫ್’ವಾನ್ ಬಿನ್ ಉಮಯ್ಯರ ತಾಯಿಯಾದ ಖುರೈಷಿ ಯುವತಿ ಸಫಿಯ ಅವರಲ್ಲಿ ಒಬ್ಬರಾಗಿದ್ದರು.

ಪ್ರವಾದಿಯವರು ﷺ ನೇರವಾಗಿ ಅವರನ್ನು ಭೇಟಿಯಾಗಿ ಅವರ ಬೆಂಬಲವನ್ನು ಆಗ್ರಹಿಸಿದರು. ಶತ್ರುಗಳ ವಿರುದ್ಧ ನಮ್ಮ ಜೊತೆಯಲ್ಲಿ ಇರಬೇಕು ಎಂದು ವಿನಂತಿಸಿದರು. ಎಲ್ಲವನ್ನೂ ಕೇಳಿದ ನಂತರ, ಅವರಲ್ಲಿ ಒಬ್ಬ ವ್ಯಕ್ತಿ ಎದ್ದು ನಿಂತು ಅಣಕಿಸುವ ರೀತಿಯಲ್ಲಿ, ಅಲ್ಲಾಹನು ಪ್ರವಾದಿಯಾಗಿ ಮುಹಮ್ಮದ್’ರನ್ನು ﷺ ನಿಯೋಗಿಸಿದ್ದರೆ ಕಅಬಾಲಯದ ಕಿಸ್’ವನ್ನು ನಾನು ಹರಿದು ಹಾಕುತ್ತೇನೆ ಎಂದು ಹೇಳಿದಾಗ, ಇನ್ನೊಬ್ಬ ವ್ಯಕ್ತಿ. ಪ್ರವಾದಿಯಾಗಿ ಮಾಡಲು ಬೇರೆ ಯಾರು ಸಿಗಲಿಲ್ವ.? ಎಂದು ಹೇಳಿದನು. ಮತ್ತೊಬ್ಬ ವ್ಯಕ್ತಿ ನಾನೇನು ಹೇಳುವುದಿಲ್ಲ, ನೀವು ನಿಜವಾಗಿಯೂ ಪ್ರವಾದಿ ಆಗಿದ್ದರೆ ಮಾತಾಡದೆ ಇರುವುದೇ ಒಳಿತು, ಇನ್ನು ಸುಳ್ಳು ಹೇಳುವುದಾದರೂ ಆಗಲೂ ಮಾತಾಡದೆ ಇರುವುದೇ ಒಳಿತು ಎಂದು ಹೇಳಿದರು. ಪ್ರವಾದಿಯವರು ﷺ, ಸಖೀಫ್ ಜನತೆಯ ಬೆಂಬಲ ಸಿಗುವುದಿಲ್ಲ ಎಂದು ಅರಿತು ಬೇಸರದಿಂದ ಎದ್ದು ನಿಂತು, ಅವರಲ್ಲಿ ನೀವು ನನ್ನನ್ನು ಅಣಕಿಸಿದ್ದು, ನನ್ನ ಬಳಿ ವರ್ತಿಸಿದ್ದು ಎಲ್ಲವು ಹಾಗೆ ಇರಲಿ. ಆದರೆ ಅದನ್ನು ಪ್ರಚಾರ ಮಾಡಬೇಡಿ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-107/365

ಪ್ರವಾದಿಯವರು ﷺ ತ್ವಾಹಿಫ್’ನಲ್ಲೇ ಹತ್ತು ದಿನ ಕಳೆದರು. ಒಂದು ತಿಂಗಳು ಎನ್ನುವ ಅಭಿಪ್ರಾಯವೂ ಇದೆ. ತ್ವಹೀಫಿನ ಒಂದೊಂದೇ ನಾಯಕರನ್ನು ಭೇಟಿಯಾಗಿ ಆದರ್ಶವನ್ನು ತಿಳಿಸಿ ಕೊಟ್ಟರೂ ಯಾರೂ ಕೂಡ ಅಂಗೀಕರಿಸಲಿಲ್ಲ. ತಕ್ಷಣವೇ ಊರು ಬಿಟ್ಟು ಹೋಗಲು ಹೇಳಿದರು, ಮಕ್ಕಳನ್ನು, ಸೇವಕರನ್ನು ಹಾಗೂ ಮೂರ್ಖರನ್ನು ಪ್ರವಾದಿಯವರಿಗೆ ﷺ ತೊಂದರೆ ನೀಡಲು, ಕಲ್ಲು ತೂರಾಟ ನಡೆಸಲು ಎತ್ತಿಕಟ್ಟಿದರು. ಅಷ್ಟೇ ಅಲ್ಲ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದರು. ಅವರು ಒಟ್ಟಾಗಿ ತಿರುಗಿ ಕಲ್ಲೆಸೆಯ ಆರಂಭಿಸಿದಾಗ, ಕೆಲವೊಂದು ಕಲ್ಲು ಪ್ರವಾದಿಯವರಿಗೆ ﷺ ತಾಗಿ ರಕ್ತ ಬರಲು ಆರಂಭಿಸಿತು. ಪ್ರವಾದಿಯವರು ﷺ ತಿರುಗಿ ಬರುವ ಸಂದರ್ಭದಲ್ಲಿ ಎರಡು ಭಾಗದಿಂದ ಸುತ್ತುವರಿದು ಪ್ರವಾದಿಯವರಿಗೆ ﷺ ತೊಂದರೆ ನೀಡಲು ಆರಂಭಿಸಿದರು. ಪ್ರವಾದಿಯವರ ﷺ ಶರೀರದಲ್ಲಿ ಬಹಳಷ್ಟು ಗಾಯಗಳು ಆದವು. ಜೊತೆಯಲ್ಲಿದ್ದ ಝೈದ್ ಬಿನ್ ಹಾರಿಸ್ ಕೂಡ ತಮ್ಮ ಕೈಯ್ಯಲ್ಲಿ ಆಗುವಷ್ಟು ಸಂರಕ್ಷಣೆ ನೀಡಿದ್ದರೂ ಕೊನೆಗೆ ಅವರಿಗೂ ಕಲ್ಲು ತಾಗಿ ತಲೆಯಿಂದ ರಕ್ತ ಬರಲು ಆರಂಭಿಸಿತು. ಪ್ರವಾದಿಯವರ ﷺ ಕುಳಿತ ಸ್ಥಳದಿಂದ ಎಬ್ಬಿಸಿ ಕಳುಹಿಸಿ, ಮುಂದಕ್ಕೆ ಹೋಗುವಾಗ ಪುನಃ ಹಿಂಸಿಸತೊಡಗಿದರು.

ಇಬ್’ನು ಉಖ್’ಬ ಮಾತು ಮುಂದುವರಿಸುತ್ತಾ, ಎರಡು ಕಾಲಿನಿಂದಲೂ ರಕ್ತ ಹರಿಯುತ್ತಲೇ ಇತ್ತು. ಹೇಗೋ ಅವರಿಂದ ರಕ್ಷೆ ಹೊಂದಿ ಒಂದು ತೋಟದ ಒಳಗೆ ಬಂದು, ನೋಯುತ್ತಿರುವ ಶರೀರವನ್ನು ಹೊತ್ತು ಬೇಸರದಿಂದ ಒಂದು ಮರದ ಕೆಳಗೆ ಕುಳಿತು ವಿಶ್ರಾಂತಿ ಪಡೆಯಲು ಮುಂದಾದರು. ಆದರೆ ಆ ತೋಟ ಇಸ್ಲಾಮಿನ ಶತ್ರುಗಳಾದ, ರಬೀಅನ ಮಕ್ಕಳು ಉತ್’ಬ ಹಾಗೂ ಶೈಬನದ್ದಾಗಿತ್ತು . ಆದರೂ ಪ್ರವಾದಿಯವರು ﷺ ಅಲ್ಲೇ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಲು ಕುಳಿತುಕೊಂಡರು. ಇಮಾಮ್ ತ್ವಬ್’ರಾನಿಯವರು ◌ؓ ಇಲ್ಲಿ ಮತ್ತೊಂದು ಘಟನೆಯನ್ನು ಸೇರಿಸಿ ವಿವರಿಸುವುದು ಕಾಣಬಹುದು. ಪ್ರವಾದಿಯವರು ﷺ ಮರದ ಬಳಿ ತಲುಪಿದಾಗ, ಅಲ್ಲೇ ಎರಡು ರಕಾಅತ್ ನಮಾಝ್ ಮಾಡಿ ಅಲ್ಲಾಹನಲ್ಲಿ, ನಾನು ನಿನ್ನಲ್ಲಿ ದೂರು ನೀಡುತ್ತಿದ್ದೇನೆ, ನನ್ನ ಶಕ್ತಿ, ತಂತ್ರದ ಕೊರತೆ, ಹಾಗೂ ಜನರ ಮುಂದೆ ಇರುವ ಪರಿಮಿತಿ, ಕರುಣೆಯ ಮಹಾ ಸಾಗರವಾದ ಅಲ್ಲಾಹನೇ.! ದುರ್ಬಲರ ರಕ್ಷಕನಲ್ಲವೇ ನೀನು, ನಿರ್ಗತಿಕರ ರಕ್ಷಕನಾದ ಅಲ್ಲಾಹನೇ, ನೀನು ಯಾರಿಗೆ ನನ್ನನ್ನು ಬಿಟ್ಟು ಕೊಡುತಿದ್ದೀಯ.? ಈ ವಿರೋಧಿಗಳಿಗೋ.? ನಿನ್ನ ಕೋಪ, ಅಸಮಾಧಾನ ಇರದೇ ಇರುತ್ತಿದ್ದರೆ ನನಗೆ ಯಾವುದೇ ಭಯ ಇರುತ್ತಿರಲಿಲ್ಲ. ನಿನ್ನ ಚಿಕಿತ್ಸೆಯೇ ನನ್ನ ಶಕ್ತಿ, ಈ ಜಗತ್ತನ್ನು ಸಂಪೂರ್ಣವಾಗಿ ನಿಯಂತ್ರಿಸಿ, ಪ್ರಕಾಶಿಸುವ ನಿನ್ನ ಕೋಪದಿಂದ, ನಿನ್ನ ರಕ್ಷಣೆಯನ್ನು ನಾನು ಬಯಸುತ್ತಿದ್ದೇನೆ. ಎಲ್ಲಾ ನಿಯಂತ್ರಣ, ಎಲ್ಲಾ ಶಕ್ತಿಯೂ ನಿನಗೆ ಮಾತ್ರ ಅಲ್ಲವೇ ಅಲ್ಲಾಹ್.” ಎಂದು ಪ್ರಾರ್ಥನೆ ನಡೆಸಿದರು.

ಮರದ ಕೆಳಗೆ ಕುಳಿತು ಆಯಾಸಗೊಂಡು ಪ್ರಾರ್ಥನೆ ನಡೆಸುತ್ತಿದ್ದ, ಪ್ರವಾದಿಯವರನ್ನು ﷺ ಉತ್’ಬ ಹಾಗೂ ಶೈಬರಿಗೆ ಕಂಡಾಗ ಏನೋ ಒಂತರ ಬೇಸರ ಆಯಿತು. ಅವರು ಅವರ ಸೇವಕ ಅದ್ದಾಸನ್ನು ಕರೆದು, ಅಲ್ಲಿ ನಿಂತಿರುವ ವ್ಯಕ್ತಿಗೆ ಒಂದು ಗೊಂಚಲು ದ್ರಾಕ್ಷಿಯನ್ನು ಕೊಟ್ಟು ಬರಲು ಹೇಳಿದರು. ಅದ್ದಾಸ್ ಅದೇ ರೀತಿ ಅದನ್ನು ಪ್ರವಾದಿಯವರ ﷺ ಬಳಿ ಬಂದು ಕೊಟ್ಟಾಗ, ಪ್ರವಾದಿಯವರು ﷺ ಅದನ್ನು ಸ್ವೀಕರಿಸಿದರು. ಅವರು ಅದನ್ನು ಬಿಸ್ಮಿಲ್ಲಾಹ್ ಎಂದು ಅಲ್ಲಾಹನ ಹೆಸರು ಹೇಳಿ ತಿನ್ನಲು ಮುಂದಾದಾಗ, ಅದ್ದಾಸ್ ಪ್ರವಾದಿಯವರನ್ನು ﷺ ಬಿಟ್ಟ ಕಣ್ಣು ಬಿಟ್ಟಹಾಗೆ ನೋಡುತ್ತಾ ಇದು ಸಾಮಾನ್ಯವಾಗಿ ಈ ಊರಿನವರು ಹೇಳಲು ವಾಕ್ಯ ಅಲ್ಲವಲ್ಲ ಎಂದು ಹೇಳಿದರು.? ಅದನ್ನು ಕೇಳಿ ಪ್ರವಾದಿಯವರು ﷺ ನೀವು ಯಾವ ಊರಿನವರು, ನಿಮ್ಮ ಧರ್ಮ ಯಾವುದು ಎಂದು ಕೇಳಿದರು.? ಅದಕ್ಕೆ ನಾನು ಕ್ರೈಸ್ತ ಧರ್ಮದ, ನೀನಾವ ಪ್ರದೇಶದ ನಿವಾಸಿಯಾಗಿರುವೆನು ಎಂದು ಹೇಳಿದರು. ಒಸಾದ್ ಎಂದು ಹೆಸರು ವಾಸಿಯಾದ ಯೂನುಸು ಬಿನ್ ಮತ ಅವರ ಊರಿನವರಲ್ಲವೇ.? ನೀವು, ನಿಮಗೆ ಅವರ ಬಗ್ಗೆ ಗೊತ್ತೇ ಎಂದು ಪ್ರವಾದಿಯವರು ﷺ ಕೇಳಿದಾಗ, ನಾನು ನೀನವದಿಂದ ಹೊರಟಿದ್ದಾಗ, ಕನಿಷ್ಠ ಹತ್ತು ಜನರಿಗೂ ಕೂಡ ಅವರು ಯಾರೆಂದು ಗೊತ್ತೇ ಇಲ್ಲ. ಹೀಗಿರುವಾಗ ಅವರ ಬಗ್ಗೆ ನಿಮಗೆ ಹೇಗೆ ಗೊತ್ತು ಎಂದು ಅವರು ಪುನಃ ಕೇಳಿದರು. ಅದಕ್ಕೆ ಪ್ರವಾದಿಯವರು ﷺ ಅದು ನನ್ನ ಸಹೋದರ ಪ್ರವಾದಿ ಆಗಿರುವರು. ನಾನು ಕೂಡ ಅಲ್ಲಾಹನ ಪ್ರವಾದಿ ಆಗಿರುವೆನು. ಅದನ್ನು ಕೇಳಿ ಅದ್ದಾಸ್ ಬಹಳ ವಿನಮ್ರತೆಯಿಂದ ತಲೆ ಬಾಗಿ, ಕೈಯಲ್ಲೂ, ನೆತ್ತಿಯಲ್ಲೂ ಮುತ್ತಿಟ್ಟರು. ಅದನ್ನು ದೂರದಿಂದಲೇ ನೋಡುತ್ತಿದ್ದ ರಬೀಅನ ಮಕ್ಕಳು ಒಬ್ಬ ಇನ್ನೊಬ್ಬನಲ್ಲಿ, ನಿನ್ನ ಸೇವಕ ನಾಶ ಮಾಡಿದ ಅಲ್ಲವೇ ಎಂದು ಹೇಳಿದನು. ಸೇವಕ ತಿರುಗಿ ಬಂದ ನಂತರ, ನೀನು ಯಾಕೆ ಆ ವ್ಯಕ್ತಿಯ ಕೈಯನ್ನೂ, ನೆತ್ತಿಯನ್ನು ಚುಂಬಿಸಿದ್ದು ಎಂದು ಕೇಳಿದಾಗ, ಪ್ರೀತಿಯ ಒಡೆಯ ಈ ವ್ಯಕ್ತಿಯಷ್ಟು ಮಹತ್ವ ಇರುವವರು ಇಂದು ಈ ಭೂಮಿಯಲ್ಲಿ ಯಾರೂ ಇಲ್ಲ, ಒಬ್ಬ ಪ್ರವಾದಿ ಮಾತ್ರ ಹೇಳುವ ಮಾತನ್ನಾಗಿತ್ತು ಅವರು ನನ್ನ ಬಳಿ ಹೇಳಿದ್ದು ಎಂದು ಹೇಳಿದರು. ಅದನ್ನು ಕೇಳಿ ಅವರು, ಅಯ್ಯೋ ಕಷ್ಟ.! ಅದ್ದಾಸ್ ನೀವು ಕೂಡ ನಿಮ್ಮ ಧರ್ಮವನ್ನು ಬಿಟ್ಟು ಹೋಗಬೇಡಿ, ಅದು ಆ ವ್ಯಕ್ತಿಯ ಧರ್ಮಕ್ಕಿಂತ ಶ್ರೇಷ್ಠವಾದದ್ದು ಆಗಿದೆ ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-108/365

ತ್ವಹೀಫಿನಿಂದ ಒಬ್ಬನೇ ಒಬ್ಬನೂ ಕೂಡ ಪ್ರವಾದಿಯವರನ್ನು ﷺ ಅಂಗೀಕರಿಸಲಿಲ್ಲ. ಭಾರವಾದ ಮನಸ್ಸಿನಿಂದ ಅವರು ಹಿಂತಿರುಗಿ ಬಂದರು. ಅದರ ನಡುವೆ ಖಾಲಿದುಲ್ ಅದವಾನಿ ಎನ್ನುವ ವ್ಯಕ್ತಿಗೆ ಉಂಟಾದ ಅನುಭವವನ್ನು ಅವರು ಈ ರೀತಿ ವಿವರಿಸುತ್ತಾರೆ. ಪ್ರವಾದಿಯವರು ﷺ ತ್ವಾಹಿಫಿನ ಬೀದಿಯ ಒಂದು ಪಕ್ಕದಲ್ಲಿ ನಿಂತಿದ್ದ ಸಂದರ್ಭದಲ್ಲಿ, ಅವರು ಖುರ್’ಆನಿನ ಎಂಬತ್ತಾರನೇ ಅಧ್ಯಾಯವನ್ನು (ತ್ವಾರಿಕ್) ಓದಲು ಆರಂಭಿಸಿದರು. ಅದನ್ನು ನಾನು ಬಹಳ ಶ್ರದ್ಧೆಯಿಂದ ಕೇಳುತ್ತಿದ್ದೆನು, ಅವತ್ತು ನಾನು ಬಹುದೈವ ವಿಶ್ವಾಸಿಯಾಗಿದ್ದೆ, ಆದರೆ ನಂತರದ ಕಾಲದಲ್ಲಿ ನಾನು ಮುಸ್ಲಿಮಾಗಿ ಆ ಅಧ್ಯಾಯವನ್ನು ಓದಿದ್ದೆನು.
ನಾನು ಪ್ರವಾದಿಯವರಿಂದ ﷺ ಶ್ರದ್ಧೆಯಿಂದ ಖುರ್’ಆನ್ ಕೇಳುತ್ತಿರುವುದನ್ನು ಕಂಡು, ತ್ವಾಹಿಫಿನ ಜನತೆ ನನ್ನಲ್ಲಿ ನೀವು ಏನು ಕೇಳಿತಿದ್ದೀರಿ.? ಎಂದು ನನ್ನಲ್ಲಿ ಕೇಳಿದಾಗ, ನಾನು ಅವರಿಗೆ ಅದನ್ನು ತಿಳಿಸಿದೆನು. ಅಷ್ಟರಲ್ಲಿ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬ, ನಮ್ಮ ಊರಿನ ವ್ಯಕ್ತಿಯ ಬಗ್ಗೆ ನಮಗಲ್ಲವೇ.? ಗೊತ್ತಿರುವುದು. ಅವರು ಹೇಳುವುದರಲ್ಲಿ ಸತ್ಯ ಇದ್ದಿದ್ದರೆ ನಾವು ಅದನ್ನು ಅಂಗೀಕರಿಸುತ್ತಿರಲಿಲ್ವಾ.? ಎಂದು ಹೇಳಿದರು.

ಖುರೈಷಿಗಳು ಇನ್ನೊಬ್ಬರನ್ನು ಕೂಡ ಪ್ರವಾದಿಯವರ ﷺ ಬಗ್ಗೆ ತಿಳಿಯುದಕ್ಕೂ ಕೂಡ ಅಡ್ಡ ಪಡಿಸುತ್ತಿದ್ದರು. ಪ್ರವಾದಿಯವರಿಗೆ ﷺ ತ್ವಾಹಿಫಿನಲ್ಲಿ ತಾನು ಅನುಭವಿಸಿದ ನೋವುಗಳು ಬಹಳಷ್ಟು ಕಾಡುತ್ತಲೇ ಇತ್ತು. ಇಮಾಮ್ ಬುಖಾರಿ ◌ؓ ಹಾಗೂ ಇಮಾಮ್ ಅಹ್ಮದ್’ರವರು ◌ؓ ಉಲ್ಲೇಖಿಸಿದ ಹದೀಸಿನ ಕಾಣಬಹುದು. ಒಮ್ಮೆ ಆಯಿಷ ಬೀವಿಯವರು ◌ؓ ಪ್ರವಾದಿಯವರಲ್ಲಿ ﷺ, ಉಹ್’ದ್ ಯುದ್ದಕ್ಕಿಂತಲೂ ಬೇಸರವಾದ ಅನುಭವವನ್ನು ಯಾವತ್ತಾದರೂ ನಿಮಗೆ ಎದುರಿಸಬೇಕಾಗಿ ಬಂದಿತ್ತೋ.? ಎಂದು ಕೇಳಿದಾಗ, ಪ್ರವಾದಿಯವರು ﷺ, ನಿನ್ನ ಜನಾಂಗದವರಲ್ಲಿ ನಾನು, ತ್ವಾಹಿಫ್’ನ ಅಖಬದಲ್ಲಿ ಯಾಲೀಲ್ ಬಿನ್ ಅಬ್ದು ಕುಲಾಲನ್ನು ಇಸ್ಲಾಮಿಗೆ ಆಹ್ವಾನ ನೀಡಿದಾಗ ಅನುಭವಿಸಿದ ಘಟನೆಯಾಗಿತ್ತು. ಅವತ್ತು ನಾನು ಇಸ್ಲಾಮಿಗೆ ಅವರನ್ನು ಆಹ್ವಾನ ನೀಡಿದಾಗ, ಯಾರೂ ಕೂಡ ನನ್ನನ್ನು ವಿಶ್ವಾಸ ಇರಿಸಲಿಲ್ಲ. ನಾನು ಬಹಳ ಬೇಸರದಿಂದ ಹಿಂತಿರುಗಿ ಬಂದೆನು. “ಖರ್’ನು ಸ್ಸಆಲಿಬ್” ಎಂಬ ಊರಿಗೆ ತಲುಪಿದಾಗಾಗಿತ್ತು ನನಗೂ ಸ್ವಲ್ಪ ಸಮಾಧಾನ ಆದದ್ದು. ನಾನು ತಲೆ ಎತ್ತಿ ನೋಡಿದಾಗ, ನನ್ನ ತಲೆಯ ಮೇಲೆ ಮೊಡವು ನೆರಳು ನೀಡುತ್ತಿತ್ತು, ನಾನದನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದಾಗ, ಅಲ್ಲಿ ಮಲಕ್ ಜಿಬ್’ರೀಲ್ (ಅ) ನಿಂತಿದ್ದರು. ನನಗೆ ಸಲಾಂ ಹೇಳಿ ನನ್ನ ಬಳಿ ಬಂದು, ನಿಮ್ಮ ಜನತೆಯ ವರ್ತನೆ, ಹಾಗೂ ಅವರು ಆಡಿದ ಮಾತುಗಳು ಎಲ್ಲವನ್ನೂ ಅಲ್ಲಾಹನು ಈಗಾಗಲೇ ತಿಳಿದಿದ್ದಾನೆ. ಹಾಗಾಗಿ ಪರ್ವತದ ಜವಾಬ್ದಾರಿಯಿರುವ ಮಲಕ್’ಗಳನ್ನು ಅಲ್ಲಾಹನು ಕಳುಹಿಸಿದ್ದಾನೆ, ನೀವು ಇಷ್ಟಬಂದದ್ದು ಅವರಲ್ಲಿ ಹೇಳಿರಿ ಎಂದು ಹೇಳುವಷ್ಟರಲ್ಲಿ, ಪರ್ವತ ಜವಾಬ್ದಾರಿಯಿರುವ ಮಲಕ್ ಕೂಡ ನನಗೆ ಸಲಾಂ ಹೇಳುತ್ತಾ ಕೆಳಗೆ ಬಂದು, ನಿಮ್ಮ ಜನತೆ ಮಾಡಿದ ಎಲ್ಲಾ ಕೃತ್ಯವನ್ನು ಅಲ್ಲಾಹನು ಈಗಾಗಲೇ ತಿಳಿದಿದ್ದಾನೆ, ಹಾಗಾಗಿ ಅಲ್ಲಾಹನು ನನ್ನನ್ನು ನಿಮ್ಮ ಬಳಿ ಕಳುಹಿಸಿರುವನು, ನೀವು ಇಷ್ಟಪಡುದಾದರೆ ಈ ಕಾಣುವ ಎರಡು ಪರ್ವತವನ್ನು ಅವರ ಮೇಲೆ ಹಾಕುತ್ತೇನೆ ಎಂದು ಹೇಳಿದರು. ಅದಕ್ಕೆ ಪ್ರವಾದಿಯವರು ﷺ ಬೇಡ, ಅಲ್ಲಾಹನನ್ನು ಮಾತ್ರ ಆರಾಧಿಸುವ ಬಹಳಷ್ಟು ಜನರು ಅವರ ಜನತೆಯಲ್ಲಿ ಜನಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ಎಂದು ಹೇಳಿದರು.

ಇಕ್’ರಿಮರ ◌ؓ ಉಲ್ಲೇಖದ ಪ್ರಕಾರ, ಪ್ರವಾದಿಯವರ ﷺ ಬಳಿ ಜಿಬ್’ರೀಲ್ (ಅ) ಬಂದು, ಅಲ್ಲಾಹನು ನಿಮಗೆ ಸಲಾಂ ಹೇಳಿರುವನು. ಇವರು ಪರ್ವತದ ಮಲಕ್ ಆಗಿರುವರು, ನೀವು ಏನೇ ಹೇಳಿದರೂ ಅವರು ಮಾಡಲು ತಯಾರು ಆಗಿರುವರು. ಅದಕ್ಕೆ ಪರ್ವತದ ಮಲಕ್ ಕೂಡ, ಹೌದು ನೀವು ಅನುಮತಿ ನೀಡುವುದಾದರೆ.? ತ್ವಾಹಿಫ್ ಜನತೆಯ ಮೇಲೆ ಈ ಕಾಣುವ ಪರ್ವತನ್ನು ಹಾಕುತ್ತೇನೆ, ಅಥವಾ ಅವರನ್ನು ಭೂಗರ್ಭದ ಒಳಗೆ ಹಾಕಿ ಜೀವಂತ ಸಮಾಧಿ ಮಾಡಿ ಬಿಡುತ್ತೇನೆ ಎಂದು ಹೇಳಿದಾಗ, ಪ್ರವಾದಿಯವರು ﷺ ಬೇಡ ನಾನು ಅವರಿಗೆ ಇನ್ನೊಂದು ಅವಕಾಶ ನೀಡಲು ಇಚ್ಛಿಸುತ್ತೇನೆ. ಲಾಇಲಾಹ ಇಲ್ಲಲ್ಲಾಹ್ ಎಂದು ಹೇಳುವ ಜನರನ್ನು ಅವರ ಪರಂಪರೆಯಿಂದ ಬರಲು ನಾನು ಕಾಯುತ್ತಿದ್ದೇನೆ, ಎಂದು ಹೇಳಿದರು. ಅದಕ್ಕೆ ಮಲಕ್, ಅಲ್ಲಾಹನು ನಿಮಗೆ ನೀಡಿದ ರವೂಫ್, ರಹೀಮ್ ಎನ್ನುವ ಹೆಸರಿನ ಹಾಗೆ ನೀವು ಕ್ಷಮೆ, ಕರುಣೆ ನೀಡುವವರೇ ಆಗಿರುವಿರಿ ಅಲ್ಲವೇ ಎಂದು ಹೇಳಿದರು.

ಪ್ರವಾದಿಯವರು ﷺ ತ್ವಾಹಿಫಿನಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಬರುವ ದಾರಿಯಲ್ಲಿ, ಜೊತೆಯಲ್ಲಿದ್ದ ಝೈದ್ ಬಿನ್ ಹಾರಿಸ ◌ؓ, ಈಗ ನಾವು ಹೇಗೆ ಹಿಂತಿರುಗಿ ಹೋಗುವುದು, ಅವರು ನಿಮ್ಮನ್ನು ಅಲ್ಲಿಂದ ಹೊರಗೆ ಹಾಕಿದ್ದಾರೆ ಅಲ್ಲವೇ.? ಎಂದು ಕೇಳಿದಾಗ, ಪ್ರವಾದಿಯವರು ﷺ, ಎಲ್ಲಾ ಸಂಕಷ್ಟದ ಸಮಯದಲ್ಲಿ ಪರಿಹಾರ ನೀಡುವ ಅಲ್ಲಾಹನು ಖಂಡಿತ ಅವನ ಧರ್ಮಕ್ಕೆ ಸಹಾಯ ಮಾಡುವನು ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-109/365

ಪ್ರವಾದಿಯವರು ﷺ ಹಾಗೂ ಝೈದ್ ಬಿನ್ ಹಾರಿಸ ◌ؓ ಬಂದು ಹಿರಾದ ಬಳಿ ತಲುಪಿದರು. ಮಕ್ಕಾ ನಗರದ ಒಳಗೆ ಹೋಗಬೇಕಾದರೆ ಯಾರದ್ದಾದರೂ ಆಶ್ರಯವಿದ್ದರೆ ಮಾತ್ರವೇ ಹೋಗ ಬಹುದಿತ್ತು. ಹಾಗಾಗಿ ಅಬ್ದುಲ್ಲಾಹಿಬಿನ್ ಉರೈಖಿತರನ್ನು, ಅಖ್’ನಸ್ ಬಿನ್ ಶರೀಖ್ ಎಂಬ ಗಣ್ಯ ವ್ಯಕ್ತಿಯ ಬಳಿ ಕಳುಹಿಸಿದಾಗ, ಅವರು ನಾನೇ ಕೆಲವೊಂದು ಒಪ್ಪಂದದಲ್ಲಿ ಜೀವನ ಸಾಗಿಸುತ್ತಿದ್ದೇನೆ. ಹಾಗಾಗಿ ನನಗೆ ಯಾರಿಗೂ ಆಶ್ರಯ ನೀಡಲು ಅನುಮತಿ ಇಲ್ಲ ಎಂದು ಹೇಳಿದರು. ನಂತರ ಅಲ್ಲಿಂದ ಸುಹೈಲ್ ಬಿನ್ ಅಂರ್’ನ ಬಳಿ ಬಂದಾಗ ಅವರು ಬನೂ ಆಮೀರ್ ಜನಾಂಗದ ಜನರು, ಬನೂ ಕಅಬ್ ಜನಾಂಗಕ್ಕೆ ಆಶ್ರಯ ನೀಡುವುದಿಲ್ಲ ಎಂದು ವಾಪಸು ಕಳುಹಿಸಿದರು. ಕೊನೆಗೆ ಮುತ್ವ್ಇಮು ಬಿನ್ ಅದಿಯ್ಯಿರಲ್ಲಿ ಕೇಳಿದಾಗ, ಅವರು ಆಶ್ರಯ ನೀಡಲು ಒಪ್ಪಿಕೊಂಡು ಪ್ರವಾದಿಯವರನ್ನು ﷺ ಅವರ ಮನೆಗೆ ಬರಲು ಅನುಮತಿ ನೀಡಿದರು. ಮೊದಲು ಆಶ್ರಯ ಕೇಳಿ ಹೋಗಿದ್ದ ಇಬ್ಬರೂ ನಂತರದ ಕಾಲದಲ್ಲಿ ಇಸ್ಲಾಂ ಸ್ವೀಕರಿಸಿದ್ದರೂ ಮೂರನೇ ವ್ಯಕ್ತಿಗೆ ಮಾತ್ರ ಆ ಭಾಗ್ಯ ಸಿಗಲಿಲ್ಲ. ಮರುದಿನ ಪ್ರವಾದಿಯವರ ﷺ ಜೊತೆಯಲ್ಲಿ ಮುತ್ವ್’ಇಂ ಕೂಡ ತನ್ನ ಆರೇಳು ಮಕ್ಕಳ ಜೊತೆಯಲ್ಲಿ ಆಯುಧದಾರಿಯಾಗಿ ಕಅಬಾಲಯದ ಬಳಿ ಬಂದು, ಪ್ರವಾದಿಯವರಲ್ಲಿ ﷺ ಕಅಬಾದ ತ್ವವಾಫ್ (ಕಅಬಾದ ಪ್ರದಕ್ಷಿಣೆ) ಹಾಕಲು ಹೇಳಿದರು. ಅದನ್ನು ಅಲ್ಲೇ ನೋಡುತ್ತಿದ್ದ ಅಬೂಸೂಫಿಯಾನ್, ಮುತ್ವ್’ಇಮರಲ್ಲಿ ನೀವು ಮುಹಮ್ಮದ್’ರ ﷺ ಅನುಯಾಯಿ ಆಗಿದ್ದೀರ.? ಎಂದು ಕೇಳಿದಾಗ, ಇಲ್ಲ ನಾನು ಅವರಿಗೆ ಆಶ್ರಯ ನೀಡಿದ್ದು ಮಾತ್ರ, ಎಂದು ಮುತ್ವ್’ಇಂ ಹೇಳಿದರು. ಹಾಗಾದರೆ ಸರಿ, ನಾವು ಕೂಡ ಅವರಿಗೆ ಆಶ್ರಯ ನೀಡುತ್ತೇವೆ ಎಂದು ಅಬೂಸೂಫಿಯಾನ್ ಕೂಡ ಅಲ್ಲೇ ಕುಳಿತು ಕೊಂಡರು. ಪ್ರವಾದಿಯವರು ﷺ ಮನೆಗೆ ಹಿಂತಿರುಗಿ ಹೋದಾಗ, ಮುತ್ವ್’ಇಂ ತನ್ನ ಗೆಳೆಯರ ಜೊತೆಯಲ್ಲಿ ಮಸ್ಜಿದ್’ನ ಕಡೆಗೆ ಹೋದರು. ಪ್ರವಾದಿಯವರ ﷺ ಹಿಜ್’ರ (ಪಲಾಯನ) ಹೋಗವ ಸಂದರ್ಭದಲ್ಲಿ ಮುತ್ವ್’ಇಂ ಮರಣ ಹೊಂದಿದರು, ಅವರು ಮಾಡಿದ ಸಹಾಯ ಪ್ರವಾದಿಯವರ ﷺ ಮನಸ್ಸಿನಲ್ಲಿ ಹಾಗೆ ಉಳಿದಿತ್ತು. ಹಾಗಾಗಿ ಪ್ರವಾದಿಯವರು ﷺ, ಬದ್ರ್ ಯುದ್ಧದಲ್ಲಿ ಮುತ್ವ್ಇಂ ಬದುಕಿರುತಿದ್ದರೆ.? ಅವರ ಮಾತು ಕೇಳಿ ಬಂಧಿತರಾದವರನ್ನು ಬಿಡುಗಡೆ ಮಾಡಬೇಕಿತ್ತು ಎಂದು ಹೇಳುತ್ತಿದ್ದರು.

ಹುಟ್ಟೂರಿಗಾಗಿ ಮತ್ತೊಮ್ಮೆ ಆಶ್ರಯ ಹುಡುಕುತ್ತಾ ಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಕಅಬಾಲಯದ ಪ್ರದಕ್ಷಿಣೆ ಕೂಡ ಹಾಕಲು ಆಗದ ಪರಿಸ್ಥಿತಿಯಾಗಿತ್ತು. ಹಿಂಸಿಸಲ್ಪಡುವ ವಿಶ್ವಾಸಿಗಳ ನೋವುಗಳು, ಪಲಾಯನದಿಂದ ಅಪಾಯಗಳನ್ನು ಎದುರಿಸುತ್ತಿದ್ದ ಅವರ ಕುಟುಂಬಗಳು, ಮನುಷತ್ವವೇ ಇಲ್ಲದೆ ಕ್ರೂರಿತನದ ವರ್ತನೆಯನ್ನು ಸಹಿಸುತ್ತಾ ಕಳೆಯುತ್ತಿದ್ದ ದಿನಗಳು. ಪ್ರವಾದಿಯವರು ﷺ ಕೂಡ ಅಲ್ಲಾಹನ ಆಜ್ಞೆಗಾಗಿ ಕಾಯುತ್ತಾ ಕುಳಿತಿದ್ದರು. ಇದರ ನಡುವೆ ತ್ವಾಹಿಫಿನಿಂದ ಮಕ್ಕಾ ನಗರಕ್ಕೆ ಹಿಂತಿರುಗಿ ಬರುವಾಗ, ಒಂದು ಅದ್ಭುತ ಘಟನೆಯನ್ನು ಪ್ರವಾದಿಯವರಿಗೆ ﷺ ಎದುರಿಸಬೇಕಾಗಿ ಬಂದಿತು. ಇಮಾಮ್ ಇಬ್’ನು ಇಸ್’ಹಾಖ್ ಉಲ್ಲೇಖಿಸಿದ ಹದೀಸ್’ನಲ್ಲಿ ಕಾಣಬಹುದು. ಪ್ರವಾದಿಯವರು ﷺ ಸಖೀಫ್’ನಿಂದ ತಮ್ಮ ಕಾರ್ಯ ಸಾಧ್ಯವಾಗದೆ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ, ಮಕ್ಕಾ ನಗರಕ್ಕೆ ಹತ್ತಿರವಿದ್ದ ಒಂದು ಸ್ಥಳದಲ್ಲಿ, ಜಿನ್ನ್’ಗಳಿಂದ ಕೆಲವರು ಪ್ರವಾದಿಯವರು ﷺ ಖುರ್’ಆನ್ ಓದುದನ್ನು ಕೇಳಿದರು. ನಸೀಬೀನ್ ಜನಾಂಗದ ಏಳು ಮಂದಿ ಆಗಿದ್ದರು ಎಂದಾಗಿತ್ತು ಇಬ್’ನು ಇಸ್’ಹಾಕ್ ಅಭಿಪ್ರಾಯ ಪಟ್ಟಿದ್ದು. ಪ್ರವಾದಿಯವರ ﷺ ನಮಾಝಿನ ಬಳಿಕ ಅವರು, ಅವರ ಗುಂಪಿಗೆ ಹೋಗಿ, ಪ್ರವಾದಿಯವರಿಂದ ﷺ ಕೇಳಿದ ಖುರ್’ಆನನ್ನು ಅವರಿಗೂ ತಿಳಿಸಿದರು. ಅವರೂ ಕೂಡ ಅದನ್ನು ಅಂಗೀಕರಿಸಿದರು.

ಈ ಘಟನೆಯನ್ನು ಪವಿತ್ರ ಖುರ್’ಆನಿನ ನಲ್ವತ್ತಾರನೇ ಅಧ್ಯಾಯ ಅಲ್ ಅಹ್’ಖಾಫಿನ ಇಪ್ಪತ್ತೊಂಬತ್ತರಿಂದ ಮೂವತ್ತೊಂದರ ವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ, “ಜಿನ್ನ್’ಗಳಿಂದ ಒಂದು ಗುಂಪನ್ನು ನಿಮ್ಮ ಖುರ್’ಆನ್ ಪಠನೆಯನ್ನು ಕೇಳಲು ಕಳುಹಿಸಿದ ಸಂದರ್ಭ ಬಹಳ ಗಮನಾರ್ಹವಾಗಿದೆ. ನೀವು ಖುರ್’ಆನ್ ಓದುತ್ತಿದ್ದ ಸಂದರ್ಭದಲ್ಲಿ ಅವರು ನಿಶಬ್ಧವಾಗಿ ಕುಳಿತುಕೊಳ್ಳಲು ಪರಸ್ಪರ ಅವರಲ್ಲೇ ಹೇಳಿಕೊಂಡರು. ಖುರ್’ಆನ್ ಓದಿ ಮುಗಿದ ನಂತರ ಅವರು, ಅವರ ಗುಂಪಿಗೆ ಮರಳಿ ಹೋಗಿ, ಅವರ ಗುಂಪಿನ ಜನತೆಯನ್ನು ಕೂಗಿ, ಪ್ರವಾದಿ ಮೂಸರವರ (ಅ) ನಂತರ ನಾವು ಒಂದು ವೇದ ಗ್ರಂಥವನ್ನು ಕೇಳಿದ್ದೇವೆ. ಅದು ಸತ್ಯಕ್ಕೂ, ಒಳಿತಿಗಳಿಗೂ ಆಹ್ವಾನ ನೀಡುವುದು ಮಾತ್ರವಲ್ಲದೆ, ಪೂರ್ವ ಕಾಲ ವೇದಗಳಿಗೆ ಹೊಂದಾಣಿಕೆಯೂ ಆಗುತ್ತಿದೆ ಎಂದು ಹೇಳಿದರು.”

ಜಿನ್ನ್ ವರ್ಗದಿಂದ ಬಂದ ಪ್ರತಿನಿಧಿಗಳು ಒಂಬತ್ತು ಮಂದಿ ಇದ್ದರು. ಎಂದೂ, ಅವರಲ್ಲಿ ಒಬ್ಬರ ಹೆಸರು ಸೌಬಿಯಃ ಎಂದೂ ಅಭಿಪ್ರಾಯವಿದೆ. ಜಿನ್ನ್ ವರ್ಗದಿಂದ ಮೂರು ಮಂದಿಯ ಜೊತೆಯಲ್ಲಿ ಪ್ರವಾದಿಯವರು ﷺ, ಹುಜೂನ್ ಎಂಬ ಸ್ಥಳಕ್ಕೆ ತಲುಪಿದರು. ಪ್ರವಾದಿಯವರು ﷺ ಅವರಿಗಾಗಿ ಸಮಯ ನೀಡಿದರು, ಆ ಸಂದರ್ಭದಲ್ಲಿ ಪ್ರವಾದಿಯವರ ﷺ ಜೊತೆಯಲ್ಲಿ ಇತರ ಯಾವುದೇ ಅನುಯಾಯಿಗಳು ಇರಲಿಲ್ಲ. ಮತ್ತೊಂದು ಸಂದರ್ಭದಲ್ಲಿ ಇಬ್’ನು ಮಸ್’ವೂದ್’ರವರು ◌ؓ ಜೊತೆಯಲ್ಲಿದ್ದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-110/365

ಎಷ್ಟೇ ಸಮಸ್ಯೆಗಳು ಎದುರಾದರೂ, ಪ್ರವಾದಿಯವರು ﷺ ಪ್ರಭೋಧನೆಯನ್ನು ಮಾತ್ರ ನಿಲ್ಲಿಸಿರಲಿಲ್ಲ. ಪ್ರವಾದಿತ್ವದ ಘೋಷಣೆಯಾಗಿ ಮೊದಲ ಮೂರು ವರ್ಷ ರಹಸ್ಯವಾಗಿ ಆಗಿತ್ತು ಪ್ರಭೋಧನೆ ನಡೆಸಿದ್ದು. ನಂತರ ಸಾರ್ವಜನಿಕವಾಗಿ ಆರಂಭಿಸಿದ ಪ್ರಭೋಧನೆಗೆ ಈಗ ಹತ್ತು ವರ್ಷ ಪೂರ್ತಿಯಾಗುದರಲ್ಲಿತ್ತು. ಅದೆಷ್ಟೇ ಪ್ರತಿರೋಧ, ಪ್ರತಿಕ್ರಿಯೆ ಇದ್ದರೂ, ಸನ್ಮಾರ್ಗಕ್ಕಾಗಿ ನಡೆಸುತ್ತಿದ್ದ ಆಹ್ವಾನ ಮಾತ್ರ ಮುಂದುವರಿಯುತ್ತಲೇ ಇತ್ತು. ಪ್ರವಾದಿಯವರು ﷺ ಒಂದೊಂದೇ ಜನಾಂಗದ ಜನರನ್ನು ನೇರವಾಗಿ ಭೇಟಿಯಾಗಿ ಪ್ರಭೋಧನೆ ನಡೆಸಲು ತೀರ್ಮಾನಿಸಿ, ಅದಕ್ಕಾಗಿ ಮಕ್ಕಾ ನಗರಕ್ಕೆ ತೀರ್ಥಯಾತ್ರೆಗೆ ಬಂದು ತಲುಪುವ ಯಾತ್ರಿಕರಿಗಾಗಿ ಕಾಯುತ್ತಾ ನಿಂತರು. ಮಕ್ಕಾ ನಗರಕ್ಕೆ ಬಂದಿದ್ದ ಯಾತ್ರಿಕರು, ಅತೀ ಹೆಚ್ಚು ತಂಗುತಿದ್ದದ್ದು ಉಕ್ಕಾಳ್, ಮಜಿನ್ನ, ದುಲ್ ‘ಮಜಾಸ್ ಎಂಬ ಅಂಗಡಿಗಳಿರುವ ಸ್ಥಳದಲ್ಲಾಗಿತ್ತು. ಕಅಬಾಲಯದಿಂದ ಹಿಂತಿರುಗಿ ಬರುತ್ತಿದ್ದ ಜನರನ್ನು, ಪ್ರವಾದಿಯವರು ﷺ ಹಿಂಬಾಲಿಸಿ, ಅವರು ತಂಗಿದ್ದ ಶಿಬಿರಕ್ಕೆ ಬಂದು, ಅವರ ಬಗ್ಗೆ ಎಲ್ಲವನ್ನೂ ತಿಳಿದು, ಇನ್ನುಳಿದವರ ಬಗ್ಗೆಯೂ ತಿಳಿದುಕೊಳ್ಳುತ್ತಿದ್ದರು. ಹೀಗೆ ಒಂದೊಂದೇ ಮನೆತನದವರ ಬಳಿ ತೆರಳಿ, ಅವರಲ್ಲಿ “ಲಾಇಲಾಹ ಇಲ್ಲಲ್ಲಾಹ್” ಎಂದು ಹೇಳಿ ವಿಜಯ ಶಾಲಿಗಳಾಗಿರಿ, ನೀವು ಸತ್ಯ ವಿಶ್ವಾಸಿಗಳಾದರೆ ನಿಮಗೆ ಸ್ವರ್ಗ ಸಿಗಲಿದೆ ಎಂದು ಹೇಳುತ್ತಿದ್ದರು. ಅಷ್ಟೊತ್ತಿಗೆ ಅಬೂಲಹಬಿನ ನಾಯಕತ್ವದಲ್ಲಿ ಖುರೈಷಿಗಳು ಪ್ರವಾದಿಯವರು ﷺ ಇದ್ದ ಸ್ಥಳಕ್ಕೆ ಬಂದು, ಇವರನ್ನು ನಂಬಬೇಡಿ, ಇವರು ಸ್ವಾಬಿಯಿ ಆಗಿರುತ್ತಾರೆ. ಅವರು ಸುಳ್ಳನ್ನೇ ಹೇಳುವುದು, ಎಂದು ಹೇಳುತ್ತಿದ್ದರು. ಅದನ್ನು ಕೇಳುತ್ತಿದ್ದ ಜನಾಂಗದ ಜನರು, ಊರಿನ ಜನರು ಸುಳ್ಳು ಹೇಳಲ್ಲ ಅಲ್ವಾ.? ಅವರಿಗೆ ಅಲ್ವಾ ಅವರ ಊರಿನ ವ್ಯಕ್ತಿಯ ಬಗ್ಗೆ ಜಾಸ್ತಿ ಗೊತ್ತಿರುವುದು ಎಂದು ಹೇಳುತ್ತಾ, ಪ್ರವಾದಿಯವರನ್ನು ﷺ ಬಹಳ ಹೀನಾಯವಾಗಿ ಬೈದು ಕಳುಹಿಸುತಿದ್ದರು. ಪ್ರವಾದಿಯವರು ﷺ ಅದೆಲ್ಲವನ್ನೂ ಕೇಳಿ ಮುಂದಿನ ಅವಕಾಶಕ್ಕಾಗಿ ಕಾಯುತ್ತಿದ್ದರು.

ಇಮಾಮ್ ಬೈಹಕಿಯವರು ◌ؓ ಉಲ್ಲೇಖಿಸಿದ ಹದೀಸಿನಲ್ಲಿ ರಬೀಅತ್ ಬಿನ್ ಇಬಾದ್ ಎಂಬ ವ್ಯಕ್ತಿಯು ಹೇಳುವುದು ಈ ರೀತಿಯಾಗಿದೆ. ನಾನು, ನನ್ನ ಬಾಲ್ಯದಲ್ಲಿ, ನನ್ನ ತಂದೆಯೊಂದಿಗೆ ಮಿನಾದಲ್ಲಿ ನಿಂತಿದ್ದ ಸಂದರ್ಭದಲ್ಲಿ, ಪ್ರವಾದಿಯವರು ﷺ ಅರಬ್ ಜನಾಂಗದ ಜನರನ್ನು ಇಸ್ಲಾಮಿಗೆ ಆಹ್ವಾನಿಸುತಿದ್ದದ್ದು ಕಾಣಲು ಸಾಧ್ಯವಾಯಿತು. ಅವರು ಅಲ್ಲಿ, ನಾನು ಅಲ್ಲಾಹನ ದೂತ (ಸಂದೇಶ ವಾಹಕ) ಆಗಿರುವೆನು, ಅವನನ್ನು ಮಾತ್ರವೇ ಆರಾಧಿಸಿರಿ, ಅವನ ಜೊತೆಯಲ್ಲಿ ಇನ್ಯಾರನ್ನು ಜೊತೆಯಾಗಿ ಸೇರಿಸಬೇಡಿರಿ, ನೀವು ಆರಾಧಿಸುತ್ತಿರುವ ಮೂರ್ತಿಗಳನ್ನು ದೂರ ಮಾಡಿರಿ, ನನ್ನನ್ನು ವಿಶ್ವಾಸವಿರಿಸಿ, ಅಂಗೀಕರಿಸಿರಿ, ಅಲ್ಲಾಹನು ನನಗೆ ನೀಡಿದ ಜವಾಬ್ದಾರಿಯನ್ನು ನಿಭಾಯಿಸಲು ನನ್ನ ಜೊತೆಯಲ್ಲಿ ನಿಂತು ಸಹಾಯ ಮಾಡಿರಿ ಎಂದು ಹೇಳುತ್ತಿದ್ದರು. ಅದನ್ನು ಕೇಳಿದ ಜನರೆಲ್ಲರೂ ಅವರನ್ನು ಸುತ್ತುವರಿದರು. ಅವರು ಅದೇನೇ ಕೇಳಿದರೂ ಪ್ರವಾದಿಯವರು ﷺ ಮಾತ್ರ ಮಾತಾಡುತ್ತಲೇ ಇದ್ದರು. ಅಷ್ಟೊತ್ತಿಗೆ ಅಲ್ಲಿಗೆ ಬಿಳಿ ವರ್ಣದ ವ್ಯಕ್ತಿಯೊಬ್ಬರು, ಅದನೀ ಶಿರವಸ್ತ್ರ ಧರಿಸಿ ಬಂದು, ಪ್ರವಾದಿಯವರು ﷺ
ಮಾತು ನಿಲ್ಲಿಸಿದ ಕೂಡಲೇ, ಅವರು ಮಾತು ಮುಂದುವರಿಸುತ್ತಾ, ಓ ಜನರೇ ಈ ವ್ಯಕ್ತಿ ಹೇಳುತ್ತಿರುವುದು, ನೀವು ಲಾತ, ಉಝ್ಝ, ಹಾಗೂ ನಾವು ಸೇವೆ ಮಾಡುತ್ತಿರುವ ಜಿನ್ನ್’ಗಳನ್ನು ದೂರ ಮಾಡಬೇಕೆಂದೂ, ಅಷ್ಟೇ ಅಲ್ಲ ಇವರ ನೂತನ ವಾದವನ್ನು ಅಂಗೀಕರಿಸಬೇಕೆಂದು ಆಗಿದೆ. ನೀವು ಯಾವುದೇ ಕಾರಣಕ್ಕೂ ಇವರನ್ನು ಮಾತ್ರ ಅಂಗೀಕರಿಸಿಬೇಡಿ ಎಂದು ಹೇಳಿದರು. ಅದನ್ನು ಕೇಳಿ ನಾನು, ನನ್ನ ತಂದೆಯಲ್ಲಿ, ಈ ಮಾತಾಡಿದ ವ್ಯಕ್ತಿ ಯಾರೆಂದು ಕೇಳಿದಾಗ.?, ಅದು ಈಗ ಮಾತಾಡಿದ ಆ ಪ್ರವಾದಿಯವರ ﷺ ದೊಡ್ಡಪ್ಪ ಅಬೂಲಹಬ್ ಆಗಿದ್ದಾರೆ ಎಂದು ಹೇಳಿದರು.

ಮುದಿರಿಕ್ ಬಿನ್ ಮುನೀಬ್ ಎಂಬ ವ್ಯಕ್ತಿಯು, ಅವರ ತಾತನಿಂದ ಕೇಳಿದ ವಿಷಯವನ್ನು ಅವರ ತಂದೆ, ಅವರಿಗೆ ಹೇಳಿದ್ದಾಗಿ, ಹೇಳುವುದು ಕಾಣಬಹುದು. ಅಂಧಕಾರದ (ಜಾಹಿಲೀಯ) ಸಮಯದಲ್ಲಿ ನನಗೆ ಪ್ರವಾದಿಯವರನ್ನು ﷺ ಕಾಣಲು ಸಾಧ್ಯವಾಗಿತ್ತು. ಅವರು ಜನರಲ್ಲಿ, ಲಾಇಲಾಹ ಇಲ್ಲಲ್ಲಾಹ್ ಹೇಳಿ ವಿಜಯ ಶಾಲಿಯಾಗಿರಿ ಎಂದು ಹೇಳುತ್ತಿದ್ದರು. ಅದನ್ನು ಕೇಳಿದ ಕೆಲವು ಜನರಲ್ಲಿ, ಕೆಲವರು ಮುಖ ತಿರುಗಿಸಿ ಹೋದರೇ, ಕೆಲವರು ಅವರ ಮೇಲೆ ಮಣ್ಣು ಬಿಸಾಡಿದರು, ಕೆಲವರಂತೂ ಅವಾಚ್ಯ ಶಬ್ದಗಳಿಂದ ನಿಂದಿಸುತಿದ್ದರು. ಇದು ಹೀಗೆ ಮಧ್ಯಾಹ್ನದ ವರೆಗೆ ಮುಂದುವರಿಯುತ್ತಲೇ ಇತ್ತು. ಅಷ್ಟೊತ್ತಿಗೆ ಹದಿಹರೆಯದ ಹೆಣ್ಣು ಮಗಳೊಬ್ಬಳು ಅಲ್ಲಿಗೆ ಬಂದಳು, ಅವಳು ತಂದಿದ್ದ ಪಾತ್ರೆಯಲಿದ್ದ ನೀರಿನಿಂದ ಪ್ರವಾದಿಯವರು ﷺ ಕೈ, ಕಾಲು, ಮುಖ ತೊಳೆದರು. ನಂತರ ಅವಳಲ್ಲಿ, ನಿನ್ನ ತಂದೆಗೆ ಆಗುತ್ತಿರುವ ನಿಂದನೆ, ಸೋಲನ್ನು ಕಂಡು ನೀನು ಕುಗ್ಗದಿರು ಮಗಳೇ ಎಂದು ಹೇಳಿದರು. ನಾನು ಇತರರಲ್ಲಿ ಅದು ಯಾರೆಂದು ಕೇಳಿದಾಗ, ಅದು ಪ್ರವಾದಿಯವರ ﷺ ಮಗಳಾದ ಝೈನಬ್ ಎಂದು ಹೇಳಿದರು.

ಪ್ರವಾದಿಯವರ ﷺ ಪ್ರತಿ ಹೆಜ್ಜೆಯಲ್ಲೂ ಹಿಂದೆ ಹೋಗಿ, ಪ್ರವಾದಿಯವರಿಗೆ ﷺ ತೊಂದರೆ ನೀಡುವುದು ಅಬೂಲಹಬಿಗೆ ಅದೇನೋ ಒಂದು ಸಂತೋಷ ನೀಡುತ್ತಿತ್ತು, ಅಬೂಲಹಬ್ ಎಲ್ಲೇ ಹೋದರು ಅವರ ಜೊತೆಯಲ್ಲಿ ಅಬೂಜಹಲ್ ಕೂಡ ಇರುತ್ತಿದ್ದರು. ಕಿನ್’ದ, ಕಲ್’ಬ್, ಬನೂ ಆಮಿರ್, ಬನೂ ಹನೀಫ, ಎನ್ನುವ ಜನಾಂಗದವರಲ್ಲಿ ಪ್ರವಾದಿಯವರು ﷺ ಮಾತಾಡಿದಾಗ, ಅವರು ಬಹಳ ಕ್ರೂರವಾಗಿ ಆಗಿತ್ತು ವರ್ತಿಸುತ್ತಿದ್ದದ್ದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-111/365

ಪ್ರವಾದಿಯವರಿಗೆ ﷺ ಮಾಡುತಿದ್ದ ಪರಿಹಾಸ್ಯ, ನಿಂದನೆಗಳನ್ನು ಕಂಡು ಪ್ರವಾದಿಯವರು ﷺ ಬಹಳಷ್ಟು ಬೇಸರ ಪಟ್ಟಿದ್ದರೂ, ಎಲ್ಲವನ್ನೂ ಅಲ್ಲಾಹನಿಗಾಗಿ ಕ್ಷಮಿಸಿ ಎದುರಿಸ ತೊಡಗಿದರು. ಅಷ್ಟರಲ್ಲಿ ಪ್ರವಾದಿಯವರನ್ನು ﷺ ಸಮಾಧಾನ ಪಡಿಸಲು ಖುರ್’ಆನಿನ ಸೂಕ್ತಗಳು ಅವತರಿಸಿತು. “ನಿಮ್ಮಕಿಂತ ಮುಂಚೆಯೂ ಕೂಡ ದೂತರು (ಪ್ರವಾದಿಗಳು) ಅಪಹಾಸ್ಯಗಳನ್ನು ಎದುರಿಸಿದ್ದರು. ಆಗ ಸತ್ಯ ವಿರೋಧಿಗಳಿಗೆ ಬಹಳಷ್ಟು ಸಮಯವಕಾಶ ನೀಡಿದ್ದೆವು, ಕೊನೆಗೆ ನಾವರಿಗೆ ಪಾಠ ಕಲಿಸಿದೆವು, ಅವರಿಗೆ ನೀಡಿದ್ದ ಶಿಕ್ಷೆ ಎಷ್ಟೊಂದು ಭಯಾನಕವಾಗಿತ್ತು.!” (ಅಲ್ ರಅದ್/32) “ಖಂಡಿತವಾಗಿಯೂ ಅಪಹಾಸ್ಯ ಮಾಡುವವರಿಂದ ನಿಮ್ಮನ್ನು ರಕ್ಷಿಸಲು ನಾವು ಮಾತ್ರ ಸಾಕು.” (ಅಲ್’ಹಿಜ್’ರ್/95) “ಈ ಜನತೆ ನಿಮ್ಮ ಬಗ್ಗೆ ಮಾಡುತ್ತಿರುವ ಅಪಹಾಸ್ಯಗಳಿಗೆ, ನಿಮಗೆ ಬಹಳಷ್ಟು ತೊಂದರೆ ಆಗಿದೆ ಎಂದು ನಮಗೆ ತಿಳಿದಿದೆ. ಅಲ್ಲಾಹನನ್ನು ಸ್ತುತಿಸಿ, ಅವನಿಗಾಗಿ ಸಾಷ್ಟಾಂಗ ಮಾಡಿರಿ, ಕೊನೆಯ ನಿಮಿಷದ ವರೆಗೂ ಅಲ್ಲಾಹುವಿನ ಆರಾಧನೆಯಲ್ಲಿ ಕಳೆಯಿರಿ” (ಅಲ್ ಹಿಜ್’ರ್/ 95-99)

ಪ್ರವಾದಿಯವರಿಗೆ ﷺ ಸಂಪೂರ್ಣವಾಗಿ ಅಲ್ಲಾಹನ ಸಂರಕ್ಷಣೆ ಲಭಿಸಿತು. ಇನ್ನಷ್ಟು ಹುಮ್ಮಸ್ಸಿನಲ್ಲಿ ಕಾರ್ಯಾಚರಣೆಯಲ್ಲಿ, ಬಹಳ ಎಚ್ಚರಿಕೆಯಿಂದ ಮುಂದುವರೆದರು. ಇದರ ನಡುವೆ ಪ್ರವಾದಿಯವರನ್ನು ಅಪಹಾಸ್ಯ ಮಾಡುತ್ತಿರುವ ಜನರೇ ಅಪಹಾಸ್ಯಕ್ಕೆ ಗುರಿಯಾದರು. ಅವುಗಳಲ್ಲಿ ಕೆಲವೊಂದನ್ನು ನೋಡೋಣ.

1. ಅಲ್ ಅಸ್’ವದ್ ಬಿನ್ ಅಬ್ದು ಯಗೂಸ್:
ಬಲಾದುರಿ ವಿವರಿಸುವುದು ಕಾಣಬಹುದು. ಇವರು ಸತ್ಯವಿಶ್ವಾಸಿಗಳನ್ನು ಕಂಡರೆ, ಅದೋ ಕಿಸ್’ರಾ ಕೈಸರನ್ನು ವಶಪಡಿಸಿಕೊಳ್ಳುವ ರಾಜರು ಬರುತ್ತಿದ್ದಾರೆ ಎಂದು ತಮಾಷೆ ಮಾಡುತಿದ್ದರು. ಪ್ರವಾದಿಯವರನ್ನು ﷺ ಕಂಡರೆ, ಇವತ್ತು ಆಕಾಶದಿಂದ ಏನಾದರೂ ಸುದ್ದಿ ಬಂದಿದೆಯಾ.? ಎಂದು ಆಗಾಗ ಕೇಳುತ್ತಲೇ ಇದ್ದರು. ಹೀಗೆ ಒಂದು ದಿನ ಆ ವ್ಯಕ್ತಿ ಹೊರಗೆ ಹೋದಾಗ, ಅವರ ಶರೀರಕ್ಕೆ ವಿಷ ತಾಗಿ, ಶ್ವೇತ ವರ್ಣದ ಸುಂದರ ವ್ಯಕ್ತಿಯಾಗಿದ್ದ ಅವರು ಹಬ್’ಶಾದ ಕಪ್ಪು ವರ್ಣದ ಜನರ ಹಾಗೆ ಬದಲಾದರು. ಅದನ್ನು ಕಂಡ ಅವರ ಮನೆಯವರೂ ಕೂಡ ಅವರನ್ನು ದೂರ ಮಾಡಿದರು. ಅವರು ಹುಚ್ಚರ ಹಾಗೆ ಬೀದಿ ಬೀದಿಯಲ್ಲಿ ಅಲೆಯುತ್ತಾ ಕೊನೆಗೆ ಅವರ ಕರ್ಮದ ಫಲವಾಗಿ ಒಂದು ತೊಟ್ಟು ನೀರೂ ಸಿಗದೆ, ಬಹಳ ಹೀನಾಯವಾಗಿ ಸತ್ತು ಹೋದರು.

2. ಹಾರಿಸ್ ಬಿನ್ ಖೈಸ್ ಅಸ್ಸಹ್’ಮಿ: ಅಂದಿಲ ತಾಯಿಯ ಮಗ ಎಂದೇ ಅರಿಯಲ್ಪಟ್ಟಿದ್ದ ಅವರು, ಕಲ್ಲುಗಳಾನ್ನಾಗಿತ್ತು ಆರಾಧನೆ ಮಾಡುತ್ತಿದ್ದದ್ದು. ಸುಂದರವಾದ ಕಲ್ಲನ್ನು ಕಂಡರೆ ಅವರು ಅದನ್ನು ಪೂಜಿಸುತ್ತಿದ್ದರು, ಅದಕ್ಕಿಂತ ಸುಂದರವಾದ ಬೇರೆ ಕಲ್ಲು ಸಿಕ್ಕರೆ ಹಿಂದಿನದನ್ನು ಬಿಟ್ಟು ಆ ಕಲ್ಲು ಪೂಜಿಸುತ್ತಿದ್ದರು. ಇದಾಗಿತ್ತು ಅವರು ಮಾಡುತ್ತಿದ್ದದ್ದು. ಖುರ್’ಆನಿನ ಅಲ್ ಫುರ್’ಖಾನ್ ಅಧ್ಯಾಯದ ನಲ್ವತ್’ಮೂರನೇ ಸೂಕ್ತದಲ್ಲಿ ಈ ವ್ಯಕ್ತಿಯ ಕುರಿತು ಹೇಳುವುದು ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ. ಸ್ವಂತ ಇಚ್ಛೆಯನ್ನು ದೇವರು ಮಾಡುತಿದ್ದ ವ್ಯಕ್ತಿಯ ಬಗ್ಗೆ ನೀವು ಆಲೋಚಿಸಿದ್ದೀರ.? ಅವರನ್ನು ಸನ್ಮಾರ್ಗಕ್ಕೆ ಕೊಂಡು ಬರಲು ನಿಮಗೆ ಸಾಧ್ಯವಿದೆಯೇ.? ಎಂದು. ಆ ವ್ಯಕ್ತಿ ಪ್ರವಾದಿಯವರ ﷺ ಬಗ್ಗೆ, ಮುಹಮ್ಮದ್ ಸ್ವಯಂ ವಂಚಿತರಾಗಿ, ತನ್ನ ಅನುಯಾಯಿಗಳನ್ನು ವಂಚಿಸುತ್ತಿದ್ದಾರೆ ಎಂದು ಹೇಳುತ್ತಿದ್ದರು. ಅಷ್ಟೇ ಅಲ್ಲದೆ ಮರಣದ ನಂತರ ಒಂದು ಜೀವನ ಇದೆಯಂತೆ.? ಕಾಲವಾಗಿದೆ ಎಲ್ಲವನ್ನೂ ನಾಶ ಮಾಡುವುದು. ಕಾಲವಾಗಿದೆ ಎಲ್ಲವನ್ನೂ ಬದಲಾವಣೆ ಮಾಡುವುದು ಎಂದು ಹೇಳುತ್ತಾ, ಪ್ರವಾದಿಯವರನ್ನೂ ﷺ, ಅವರ ಧರ್ಮವನ್ನು ತಮಾಷೆ ಮಾಡುತಿದ್ದರು. ಹೀಗೆ ಒಂದು ದಿನ ಆ ವ್ಯಕ್ತಿ ಉಪ್ಪಿನಲ್ಲಿ ಹಾಕಿದ್ದ ಮೀನನ್ನು ತಿಂದರು. ಆಗ ಅವರಿಗೆ ವಿಪರೀತ ದಾಹ ಉಂಟಾಯಿತು, ದಾಹದಿಂದ ಎಷ್ಟೇ ನೀರು ಕುಡಿದರೂ ಅವರ ದಾಹ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಬಹಳಷ್ಟು ನೀರು ಕುಡಿದ ಕಾರಣ ಹೊಟ್ಟೆಗೆ ಸಂಬಂಧಿಸಿದ ರೋಗ ಬಂದು ಬಹಳ ಹೀನಾಯವಾಗಿ ಸಾವನ್ನಪ್ಪಿದರು. ಆತನ ಸಾವಿನ ಬಗ್ಗೆ ಇನ್ನೂ ಇತರ ಅಭಿಪ್ರಾಯಗಳು ನಮಗೆ ಕಾಣಬಹುದು.

3. ಅಸ್’ವದ್ ಬಿನ್ ಅಲ್ ಮುತ್ವಲಿಬ್ : ಪ್ರವಾದಿಯವರನ್ನೂ ﷺ, ಅವರ ಅನುಯಾಯಿಗಳನ್ನು, ಓ ಅತೀ ದೊಡ್ಡ ರಾಜ್ಯದ ರಾಜರೇ, ಕಿಸ್’ರಾ ಕೈಸರನ್ನು ವಶಪಡಿಸಿಕೊಳ್ಳುವವರೇ.! ಎಂದೆಲ್ಲಾ ಹೀಗೆ, ಬಹಳಷ್ಟು ತಮಾಷೆ ಮಾಡುತಿದ್ದರು. ಪ್ರವಾದಿಯವರನ್ನು ﷺ ನಿಂದಿಸುವ ಮಾತುಗಳನ್ನೂ ಕೂಡ ಆಡುತಿದ್ದರು. ಕೊನೆಗೆ ಆತನೂ ಕೂಡ ದೊಡ್ಡ ಬೆಲೆಯನ್ನೇ ತೆರೆಯಬೇಕಾಗಿ ಬಂದಿತು. ಒಂದು ದಿನ ಶಾಮಿನಿಂದ ಬರುತ್ತಿದ್ದ ಅವರ ಮಗನನ್ನು ಸ್ವಾಗತಿಸಲು ಹೋದಾಗ, ಅವರು ಮಗನಿಂದ ಮುಖಕ್ಕೆ ಹೊಡಿಸಿಕೊಂಡು ತನ್ನ ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡು ಕುರುಡರಾದರು. ಆತನ ಮಕ್ಕಳಾದ ಸಂಅ ಹಾಗೂ ಅಖೀಲ್ ಬದರ್ ಯುದ್ಧದಲ್ಲಿ ಅಬೂದುಜಾನ ◌ؓ ಹಾಗೂ ಅಲಿಯವರ ◌ؓ ಕೈಯಿಂದ ಕೊಲ್ಲಲ್ಪಟ್ಟರು.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-112/365

4. ಆಸ್ವ್ ಬಿನ್ ವಾಯಿಲ್: ಪ್ರವಾದಿಯವರನ್ನು ﷺ ಹಾಗೂ ಅವರ ಅನುಯಾಯಿಗಳನ್ನು ಅಪಹಾಸ್ಯ ಮಾಡುವುದರಲ್ಲಿ ಯಾವಾಗಲೂ ಮುಂದೆ ಇರುತ್ತಿದ್ದ ವ್ಯಕ್ತಿ ಆಗಿದ್ದರು ಇವರು. ಖಬ್ಬಾಬ್ ಬಿನ್ ಅಲ್ ಅರತ್ತ್’ರವರು ಹೇಳುವ ಮಾತನ್ನು ಹದೀಸ್’ನಲ್ಲಿ ಕಾಣಬಹುದು. ಅಂಧಕರಾದ ಕಾಲದಲ್ಲಿ ನಾನು ಶಸ್ತ್ರಾಸ್ತ್ರಗಳ ಕೆಲಸ ಮಾಡುತ್ತಿದ್ದೆ. ಆಸ್ವ್ ಬಿನ್ ವಾಯಿಲ್’ಗಾಗಿ ನಾನೊಂದು ಖಡ್ಗ ನಿರ್ಮಿಸಿ ಕೊಟ್ಟಿದ್ದೆ, ಹಾಗಾಗಿ ಅದರ ಬೆಲೆಯನ್ನು ಪಡೆಯಲು ಅವರ ಬಳಿ ಹೋಗಿದ್ದಾಗ, ಅವರು ನೀನು ಮುಹಮ್ಮದ್’ರನ್ನು ﷺ ವಿರೋಧಿಸುವ ವರೆಗೂ ನಾನು ನಿನಗೆ ನೀಡಬೇಕಾದ ಹಣವನ್ನು ನೀಡುವುದಿಲ್ಲ ಎಂದು ಹೇಳಿದರು. ಅದಕ್ಕೆ ನಾನು, ನೀವು ಮರಣ ಹೊಂದಿ, ಪುನರ್ಜೀವ ಪಡೆದು ಬರುವರುವ ವರೆಗೂ ಮುಹಮ್ಮದ್’ರನ್ನು ﷺ ವಿರೋಧಿಸಲಾರೆನು ಎಂದು ಹೇಳಿದೆನು. ಅದಕ್ಕೆ ಅವರು ಆಶ್ಚರ್ಯದಿಂದ, ನಾನು ಮರಣ ಹೊಂದಿದ ನಂತರ ನಿಯೋಗಿಸಲ್ಪಡುವುದ.? ಎಂದು ಕೇಳಿದಾಗ, ನಾನು ಹೌದು ಎಂದು ಹೇಳಿದೆನು. ಅದಕ್ಕೆ ಅವರು ಹಾಗಾದರೆ ಸರಿ, ನಾನು ಕೂಡ ಅವತ್ತೇ ನಿನಗೆ ಕೊಡಬೇಕಾದ ಬಾಕಿ ಹಣವನ್ನು ಕೊಡುತ್ತೇನೆ. ನೀನೂ ನಿನ್ನ ನಾಯಕರೂ ಅಲ್ಲಾಹನ ಬಳಿ ನನಗಿಂತ ಪ್ರಭಾವ ಇರುವವರು ಅಲ್ಲವೇ.? ಎಂದು ಹೇಳಿದರು. ಈ ಘಟನೆಯ ಭಾಗವಾಗಿ ಪವಿತ್ರ ಖುರ್’ಆನಿನ ಮರ್’ಯಂ ಅಧ್ಯಾಯದ ಎಪ್ಪತ್ತೇಳರಿಂದ ಎಂಭತ್ತರವರೆಗಿನ ಸೂಕ್ತಗಳಲ್ಲಿ ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ. “ನಮ್ಮ ಸೂಕ್ತಗಳನ್ನು ವಿರೋಧಿಸಿ, ನನಗೆ ಈಗಲೂ ಸಂಪತ್ತು ಹಾಗೂ ಸಂತಾನ ಭಾಗ್ಯ ಸಿಗುತ್ತಲೇ ಇದೆ ಎಂದು ಅಹಂಕಾರದ ಮಾತುಗಳನ್ನು ಆಡುವ ವ್ಯಕ್ತಿಯನ್ನು ನೀವು ನೋಡಿರಬಹುದು. ಅವನೇನಾದರೂ, ನಮ್ಮಿಂದ ಒಪ್ಪಂದ ಮಾಡಿಕೊಂಡಿದ್ದಾನ.? ಅಥವಾ ಅವನಿಗೆ ಏನಾದರೂ ರಹಸ್ಯ ತಿಳಿಯುತ್ತದೋ.? ಇಲ್ಲ ಖಂಡಿತ ಇಲ್ಲ, ಅವನು ಹೇಳಿದ ಎಲ್ಲಾ ಮಾತುಗಳನ್ನು ನಾವು ಬರೆದಿಟ್ಟಿದ್ದೇವೆ, ಅವನ ಶಿಕ್ಷೆಯನ್ನು ಇನ್ನಷ್ಟು ಕಠಿಣಗೊಳಿಸುತ್ತೇವೆ” ಎಂದು.

ಇವರ ಅಂತ್ಯದ ಬಗ್ಗೆ ಚರಿತ್ರೆ ಗ್ರಂಥಗಳಲ್ಲಿ ಬರೆದಿರುವ ಉಲ್ಲೇಖಗಳು ಈ ರೀತಿಯಾಗಿದೆ. ಕತ್ತೆಯ ಮೇಲೆ ಕುಳಿತು ತ್ವಾಹಿಫ್’ಗೆ ಹೋಗುತ್ತಿದ್ದ ಸಂದರ್ಭದಲ್ಲಿ, ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಅವರಿಗೆ ತುಂಬಾ ಗಾಯಗಳಾದವು. ಗಾಯಗಳು ಗಂಭೀರವಾಗಿದ್ದ ಕಾರಣ ಅಂರ್ ವೈದ್ಯರನ್ನು ಹುಡುಕುತ್ತಾ ಹೋದರು. ಆದರೆ ಅಷ್ಟೊತ್ತಿಗಾಗಲೇ ಆಸ್ವ್ ಬಿನ್ ವಾಯಿಲ್’ನ ಪ್ರಾಣ ಪಕ್ಷಿಯು ಹಾರಿ ಹೋಗಿತ್ತು.

5. ಅಬೂಲಹಬ್: ಪ್ರವಾದಿಯವರನ್ನು ﷺ ಬಹಳಷ್ಟು ನಿಂದಿಸಿ, ಅಪಹಾಸ್ಯ ಮಾಡುತಿದ್ದ ವ್ಯಕ್ತಿಯಾಗಿದ್ದರು ಅಬೂಲಹಬ್. ಪ್ರವಾದಿಯವರ ﷺ ಬಾಗಿಲ ಬಳಿ ಮಾಲಿನ್ಯಗಳನ್ನು ಹಾಕುವುದರಿಂದ, ಪ್ರವಾದಿಯವರು ﷺ ಹಿಂದೆಯೇ ಹೋಗಿ ಅವರನ್ನು ನಿಂದಿಸುವಷ್ಟರ ಮಟ್ಟಿಗೆ ತೊಂದರೆ ನೀಡಿದ್ದರು. ಅವರು ಮಾಡುತಿದ್ದ ದುಷ್’ಕೃತ್ಯಗಳ ಬಗ್ಗೆ ಈಗಾಗಲೇ ನಾವು ತಿಳಿದುಕೊಂಡಿದ್ದೇವೆ. ಅಷ್ಟೇ ಅಲ್ಲ ಅವರ ದಾರುಣ ಅಂತ್ಯದ ಬಗ್ಗೆಯೂ ಕೂಡ ಖುರ್’ಆನ್ ಸ್ಪಷ್ಟವಾಗಿ ತಿಳಿಸಿದೆ.

ಈಗಾಗಲೇ ತಿಳಿಸಿದ ಜನರು ಮಾತ್ರವಲ್ಲದೆ, ವಲೀದ್ ಬಿನ್ ಅಲ್ ಮುಗೀರ, ಹಕಮ್ ಬಿನ್ ಅಬುಲ್ ಆಸ್ವ್, ಮಾಲಿಕ್ ಬಿನ್ ತ್ವಲಾತ್ವಿಲಃ, ಮುಂತಾದ ವ್ಯಕ್ತಿಗಳ ಬಗ್ಗೆಯೂ ಕೂಡ, ಚರಿತ್ರೆ ಗ್ರಂಥಗಳಲ್ಲಿ ತಿಳಿಸಿದ್ದು ಕಾಣಬಹುದು.

ಇದೆಲ್ಲವೂ ಅಂಧಕರಾದಲ್ಲಿ ಇದ್ದುಕೊಂಡು, ದುಷ್’ಕೃತ್ಯಗಳನ್ನು ಮಾಡುತಿದ್ದ ವ್ಯಕ್ತಿಗಳಿಗೆ ಅವರ ಕರ್ಮದ ಫಲವಾಗಿ ಸಿಕ್ಕಿದ ಶಿಕ್ಷೆಯಾಗಿತ್ತು. ಅಲ್ಲದೆ ಪ್ರವಾದಿಯವರು ﷺ ಯಾರಿಗೂ ಕೇಡು ಬಯಸುದಾಗಲಿ, ದುಷ್ಕರ್ಮಿಗಳ ವಿರುದ್ಧವಾಗಿ ಪ್ರಾರ್ಥನೆ ನಡೆಸುವುದಾಗಲಿ ಮಾಡಿರಲಿಲ್ಲ. ಆದರೆ ಜಗದೊಡೆಯನ ಇಚ್ಛೆಯಂತೆ ಒಳಿತು ಮಾಡಿದವರಿಗೆ ಪ್ರತಿಫಲ, ಕೆಡುಕು ಮಾಡಿದವರಿಗೆ ಶಿಕ್ಷೆ ಇರುವ ಕಾರಣದಿಂದಲೇ ಆಗಿರಬಹುದು. ಬಹುಶಃ ಅದೆಷ್ಟೋ ಜನರು ಕೆಡುಕುಗಳಿಂದ ದೂರ ಸರಿದು ನಿಂತಿರುವುದು. ನಗರ ವ್ಯವಸ್ಥೆಗಳು ಮತ್ತು ಸಂಚಾರ ಕಾನೂನುಗಳು, ಸಾಮಾನ್ಯವಾಗಿ ನಿಯಮಗಳಿಂದ ರಕ್ಷಿಸಲ್ಪಡುವುದು, ಉಲ್ಲಂಘನೆಗಾಗಿ ಪಾವತಿಸಬೇಕಾದ ದಂಡವನ್ನು ಅಥವಾ ಶಿಕ್ಷೆಯನ್ನು ಅನುಭವಿಸಬೇಕಾಗಿ ಬರಬಹುದು ಎನ್ನುವ ಭಯದಿಂದಲೇ ಆಗಿರುತ್ತದೆ. ನಮ್ಮ ಊರಿನಲ್ಲಿ ಕೆಲವೊಂದು ತಪ್ಪುಗಳು ವ್ಯಾಪಕವಾಗಿ ನಡೆಯಲು ಕಾರಣ, ಅಪರಾಧಿಗಳ ಮಾಡಿದ ತಪ್ಪಿಗೆ ಅರ್ಹವಾದ ಶಿಕ್ಷೆ ಲಭಿಸದೆ ಇರುವ ಕಾರಣದಿಂದಲೇ ಆಗಿರುತ್ತದೆ.

ಏನೇ ಇರಲಿ, ಒಳಿತಿನ ಬೋಧಕರಾದ ಪ್ರವಾದಿಯವರ ﷺ ನಿಂದಕರಿಗೆ ಲಭಿಸಿದ ಶಿಕ್ಷೆಗಳು, ಭವಿಷ್ಯದಲ್ಲಿ ಯಾರೂ ಕೂಡ ಇಂಥಹ ಒಂದು ಸಾಹಸಕ್ಕೆ ಹೋಗಬಾರದು ಎನ್ನುವ ಎಚ್ಚರಿಕೆ ನೀಡುವ ಉದ್ದೇಶದಿಂದಲೂ ಆಗಿದೆ.
ವಿರೋಧಗಳ ನಡುವೆಯೂ, ಆದರ್ಶದ ಸಂರಕ್ಷಣೆಗಾಗಿ, ಸಹಿಷ್ಣುತೆಯೊಂದಿಗೆ ಜೀವನ ಸಾಗಿಸಿದ ಪ್ರವಾದಿಯವರ ﷺ ಮುಂದಿನ ಜೀವನ ಶೈಲಿಯನ್ನು ತಿಳಿಯೋಣ.

(ಮುಂದುವರಿಯುವುದು…)

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-113/365

ಸಂಧಿಗ್ದ ಪರಿಸ್ಥಿತಿಯಲ್ಲಿ ಖುರ್’ಆನ್ ಪ್ರವಾದಿಯವರಿಗೆ ﷺ ನೆರವಾಗಿ ಕೆಲವೊಂದು ಸೂಕ್ತಗಳು ಕೂಡ ಅವತರಿಸಿತು. ಕೆಲವು ಸಂದರ್ಭದಲ್ಲಿ ಮುಅ್’ಜಿಝತ್’ಗಳು ಕೂಡ ಉಂಟಾಯಿತು. ಈ ಸಂದರ್ಭದಲ್ಲಾಗಿತ್ತು ಚಂದ್ರನ ಇಬ್ಬಾಗದ ವಿಸ್ಮಯಕಾರಿ ಘಟನೆ ನಡೆದದ್ದು. ಪವಿತ್ರ ಖುರ್’ಆನಿನ ‘ಅಲ್ ಮಖರ್’ ಅಧ್ಯಾಯದ ಮೊದಲ ಎರಡು ಸೂಕ್ತದಲ್ಲಿ ಕಾಣಬಹುದು. ‘ಲೋಕವಸಾನ ಸಮೀಪವಾಯಿತು, ಚಂದ್ರನ ಇಬ್ಬಾಗವಾಯಿತು’ ಎಂದು. ಈ ಘಟನೆಯ ವಿವರಣೆಯ ಭಾಗವಾಗಿ, ಬಹಳಷ್ಟು ಹದೀಸ್’ಗಳನ್ನು ಉಲ್ಲೇಖಿಸಲಾಗಿದೆ. ವಿಜ್ಞಾನ ಶಾಸ್ತ್ರದ ಪ್ರಕಾರ ನಿಷೇಧಿಸಲಾಗದ ರೀತಿಯಲ್ಲಿ (ತವಾತುರ್) ಬಹಳಷ್ಟು ಜನರು ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಇಮಾಮ್ ಅಹ್ಮದ್’ರವರು ◌ؓ ಉಲ್ಲೇಖಿಸಿದ ಹದೀಸ್’ನಲ್ಲಿ ಅನಸ್’ರವರು ◌ؓ ಹೇಳುವುದು ಕಾಣಬಹುದು. ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಒಂದು ವಿಸ್ಮಯವನ್ನು ತೋರಿಸಬೆಕೆಂದು ಆಗ್ರಹ ವ್ಯಕ್ತಪಡಿಸಿದಾಗ, ಪ್ರವಾದಿಯವರು ﷺ ಚಂದ್ರನನ್ನು ಇಬ್ಬಾಗ ಮಾಡಿ ತೋರಿಸಿದರು. ಎರಡು ಬಾರಿಯಾಗಿತ್ತು ಈ ಘಟನೆ ನಡೆದದ್ದು ಎಂದು. ಇಮಾಮ್ ಬುಖಾರಿಯವರು ಉಲ್ಲೇಖಿಸಿದ ಹದೀಸ್’ನ ಪ್ರಕಾರ, ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಒಂದು ವಿಸ್ಮಯವನ್ನು ತೋರಿಸಬೇಕೆಂದು ಕೇಳಿಕೊಂಡಾಗ, ಪ್ರವಾದಿಯವರು ﷺ ಚಂದ್ರನನ್ನು ಇಬ್ಬಾಗ ಮಾಡಿ ತೋರಿಸಿದರು. ಇಬ್ಬಾಗವಾದ ಚಂದ್ರನ ನಡುವೆ ಅವರಿಗೆ ಹಿರಾ ಪರ್ವತ ಕಾಣುತಿತ್ತು ಎಂದು.

ಈ ಘಟನೆಯಿಂದ ಸತ್ಯವಿಶ್ವಾಸಿಗಳ ಉತ್ಸಾಹ ಇಮ್ಮಡಿಯಾಯಿತು. ಆದರೆ ವಿರೋಧಿಗಳು ಮಾತ್ರ ಇನ್ನೊಂದು ಅಪವಾದ ಹೊರಿಸಲು ಮುಂದಾದರು. ಇದು ಮುಹಮ್ಮದ್’ರ ﷺ ಪವಾಡ ಅಲ್ಲ ಇದು ವಾಮಾಚಾರ ಮಾತ್ರ ಎಂದು ಹೇಳಿದಾಗ, ಅವರಲ್ಲೇ ಕೆಲವರು, ಎಲ್ಲಾ ಜನರಿಗೂ ಒಂದೇ ಸಲ ಮಾಯವಿದ್ಯೆಯನ್ನು ತೋರಿಸಿ ವಂಚಿಸಲು ಸಾಧ್ಯವಿದೆಯ.? ಎಂದು ಕೇಳಿದರು.
ಈ ಘಟನೆಯ ಕುರಿತಾಗಿ ಬಹಳಷ್ಟು ಉಲ್ಲೇಖದಲ್ಲಿ ನೈಜವಾದ ರೀತಿಯಲ್ಲಿ ಸವಿಸ್ತಾರವಾಗಿ ತಿಳಿಯಲು ಸಾಧ್ಯವಿದೆ. ಚಂದ್ರನನ್ನು ಎರಡು ಭಾಗ ಮಾಡಿ, ಎರಡು ಪರ್ವತದ ಮೇಲೆ ಕೈ ಬೆರಳು ತೋರಿಸಿ, ಖುರೈಷಿಗಳಲ್ಲಿ ನೀವು ಅವುಗಳನ್ನು ಕಾಣುತಿಲ್ಲವೇ.? ಎಂದು ಕೇಳಿದರು. ಆಗ ಅಲ್ಲಿದ್ದ ಎಲ್ಲರಿಗೂ ಅರ್ಥವಾಗಿತ್ತು ಇದು ನೈಜವಾದ ವಾಸ್ತವ ಘಟನೆಯೇ ಆಗಿದೆ ಎಂದು.

ಪ್ರವಾದಿಗಳು ತೋರಿಸುವ ವಿಸ್ಮಯಕಾರಿ ಘಟನೆಗಳನ್ನು ಮುಅ್’ಜಿಝತ್ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ನಡೆಯಲ್ಪಡುವ ಘಟನೆಗಳಿಗಿಂತ ವಿಭಿನ್ನವಾಗಿ ನಡೆಯುವ ವಿಸ್ಮಯಕಾರಿ ಘಟನೆಗಳಾಗಿವೆ ಅವುಗಳು, ಹಾಗಾಗಿ ಅವುಗಳನ್ನು ವೈಜ್ಞಾನಿಕವಾಗಿ ಸಾಬೀತು ಪಡಿಸಬೇಕು ಎನ್ನುವ ವಾದವೇ ಅಪ್ರಸ್ತುತ. ಶಾಸ್ತ್ರಗಳ ಆಧಾರದ ಮೇಲೆ ವಿಷಯಗಳನ್ನು ತೀರ್ಮಾನಿಸುದಾದರೂ, ದೈವಿಕತೆ, ಪ್ರವಾದಿತ್ವ, ದಿವ್ಯ ಸಂದೇಶ ಮುಂತಾದ ವಿಷಯಗಳನ್ನು ಗ್ರಹಿಸುವ ಆಧಾರದ ಮೇಲೆಯೇ ಆಗಿದೆ ಮುಅ್’ಜಿಝತ್’ಗಳನ್ನೂ ಅರ್ಥ ಮಾಡಿಕೊಳ್ಳುವುದು.
ಅದರರ್ಥ ಇದೆಲ್ಲವೂ ಕೇವಲ ಸಂಕಲ್ಪವಾಗಿದೆ ಎಂದು ಅಲ್ಲ. ಬದಲಾಗಿ, ಕೆಲವೊಮ್ಮೆ ವಾಸ್ತವವಾಗಿ ನಡೆಯುವ ಕೆಲವೊಂದು ಘಟನೆಗಳಲ್ಲಿ, ನಮ್ಮ ಬುದ್ದಿಗೆಯಾಗಲಿ, ಕಲಿಕೆಗಾಗಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕೆಂದಿಲ್ಲ ಎಂದು ಮಾತ್ರ.

ಉದಾಹರಣೆಗೆ ಈ ಲೋಕವನ್ನು ನಿಯಂತ್ರಣ ಮಾಡುವ ರಕ್ಷಕನಿದ್ದಾನೆ (ಇರಬೇಕು) ಎಂಬುದನ್ನು, ಈ ಪ್ರಪಂಚದ ಪ್ರತಿಯೊಂದು ಚಲನವಲನಗಳನ್ನು ಗಮನಿಸುವ ಯಾವುದೇ ವ್ಯಕ್ತಿಗಳಿಗೆ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಯಾಕಾಗಿ ನನಗೆ ಆ ಜಗತ್ ರಕ್ಷಕನನ್ನು ಕಾಣಲು ಸಾಧ್ಯವಿಲ್ಲ, ಎಂದು ಹೇಳುತ್ತಾ, ಎಲ್ಲವೂ ನನ್ನ ಕಣ್ಣುಗಳಿಗೆ ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳುವುದಾದರೆ, ಇಲ್ಲಿ ಸಮಸ್ಯೆ ಇರುವುದು ದೈವಿಕತೆಯಲ್ಲಿ ಅಲ್ಲ, ಬದಲಾಗಿ ನನ್ನ ಬುದ್ದಿಗೂ, ಕಣ್ಣಿಗೂ ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಬೇಕು ಎಂದು ಹೇಳುವ ವ್ಯಕ್ತಿಯಲ್ಲಾಗಿದೆ.

ಇನ್ನೂ ಚರಿತ್ರೆಯ ಕಡೆಗೆ ಬಂದರೆ, ಮಕ್ಕಾ ನಿವಾಸಿಗಳು ಪ್ರವಾದಿಯವರಲ್ಲಿ ﷺ ಸಾಕ್ಷಿಯನ್ನು ಕೇಳಿದಾಗ, ಪ್ರವಾದಿಯವರು ﷺ ಚಂದ್ರನನ್ನು ನೋಡಲು ಹೇಳಿದರು. ಎಲ್ಲರೂ ಚಂದ್ರನನ್ನು ನೋಡಿದಾಗ, ಅದೋ ಅಲ್ಲಿ ಚಂದ್ರನು ಎರಡು ಇಬ್ಬಾಗವಾಗಿ, ಎರಡು ಕಡೆಗಳಲ್ಲಿ ನಿಂತಿರುವನು. ಇದನ್ನು ಕಂಡು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದ ಅವತ್ತಿನ ಜನರು, ಇದನ್ನು ಮಾಯ ವಿದ್ಯೆ ಎಂದು ಹೇಳಿದರು. ಆದರೆ ಇವತ್ತಿಗೂ ಒಬ್ಬನೇ ಒಬ್ಬ ವಾಮಾಚಾರಿಯಾಗಲಿ, ಮಾಯ ವಿದ್ಯೆ ಮಾಡುವವನಾಗಲಿ, ಅದೇ ರೀತಿ ಮಾಡುವುದಾಗಲಿ, ಅಥವಾ ಅದೊಂದು ಮಾಯ ವಿದ್ಯೆ ಎಂದು ಅಪವಾದ ಹೊರಿಸುವುದಾಗಲಿ ಮಾಡಲಿಲ್ಲ. ಆದರೆ ಈ ಘಟನೆಯನ್ನು ಯಾರಿಗೂ ವಿರೋಧಿಸಲಾಗದ ರೀತಿಯಲ್ಲಿ ಬಹಳಷ್ಟು ಗ್ರಂಥಗಳಲ್ಲಿ ಉಲ್ಲೇಖಿಸಿಲಾಗಿದೆ. ಇನ್ನೂ ಕೂಡ ಅದನ್ನು ಸಾಬಿತುಪಡಿಸಲು ಇದಕ್ಕಿಂತ ಬೇರೆ ಏನು ಬೇಕು.?

ಚಂದ್ರನು ಇಬ್ಬಾಗವಾಯಿತು ಎಂಬುವುದು ಸರಿ, ಆದರೆ ಅದನ್ನು ಯಾರಿಗೂ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ ಹೇಗೆ ಮಾಡಲು ಸಾಧ್ಯವಾಯಿತು ಎಂಬುದರಲ್ಲಾಗಿದೆ ಪ್ರವಾದಿಯವರ ﷺ ಮಹತ್ವವು ಎದ್ದು ಕಾಣುವುದು. ಆ ಸಂದರ್ಭದಲ್ಲಾಗಿದೆ ಅದೊಂದು ಮುಅ್’ಜಿಝತ್ತಾಗಿ ಬದಲಾಗುವುದು ಕೂಡ.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-114/365

ಪ್ರವಾದಿತ್ವದ ಘೋಷಣೆಯಾಗಿ ಹನ್ನೊಂದು ವರ್ಷ ಕಳೆಯಿತು. ಒಂದು ರಜಬ್ ಇಪ್ಪತ್ಟೇಳರ ರಾತ್ರಿಯಾಗಿತ್ತು ಅದು. ಪ್ರಭೋಧನೆಯ ದಾರಿಯಲ್ಲಿ ಚಲಿಸುತ್ತಿದ್ದ ಪ್ರವಾದಿಯವರು ﷺ ಎದುರಿಸಿದ ನೋವುಗಳಿಗೆ, ಅಪಹಾಸ್ಯಗಳಿಗೆ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಪ್ರವಾದಿಯವರಿಗೆ ﷺ ಲಭಿಸಿದ ಅಂಗೀಕಾರದ ರಾತ್ರಿಯಾಗಿತ್ತು ಅದು. ಅಥವಾ ಪ್ರವಾದಿಯವರನ್ನು ﷺ ಅತ್ಯುತ್ತಮ ಸ್ಥಳಕ್ಕೆ ಕರಿಸಿಕೊಂಡು, ಜಗತ್ ಪಾಲಕನಾದ ಅಲ್ಲಾಹನೊಂದಿಗೆ ವಿಶೇಷವಾಗಿ ಸಂಭಾಷಣೆ ನಡೆಸಿದ ಇಸ್’ರಾಅ್, ಮಿಅ್’ರಾಜ್’ನ ಆ ಪವಿತ್ರ ಕ್ಷಣವಾಗಿತ್ತು ಅದು.

ಮಕ್ಕಾದಿಂದ ಬೈತುಲ್ ಮುಖದ್ದಸ್’ವರೆಗೆ ರಾತ್ರಿ ನಡೆಸಿದ ಸಂಚಾರಕ್ಕಾಗಿತ್ತು ಇಸ್’ರಾಅ್ ಎಂದು ಹೇಳುವುದು. ಪವಿತ್ರ ಕುರ್’ಆನಿನ ಹದಿನೇಳನೇ ಅಧ್ಯಾಯದ ಹೆಸರು ಕೂಡ ಇಸ್’ರಾಅ್ ಎಂದೇ ಆಗಿದೆ. ಈ ಅಧ್ಯಾಯದ ಆರಂಭದ ಸೂಕ್ತದಲ್ಲಿ ತಿಳಿಸುವುದೇ, ಪ್ರವಾದಿಯವರು ﷺ ನಡೆಸಿದ ರಾತ್ರಿ ಸಂಚಾರದ ಕುರಿತಾಗಿತ್ತು. ಅದರ ಸಾರಾಂಶ ಈ ರೀತಿಯಾಗಿದೆ, “ಒಂದು ರಾತ್ರಿಯಲ್ಲಿ ತನ್ನ ವಿಶೇಷವಾದ ದಾಸನನ್ನು, ಮಸ್’ಜಿದುಲ್ ಹರಾಮಿನಿಂದ, ಸುತ್ತಮುತ್ತಲಿನಲ್ಲಿ ಪವಿತ್ರತೆ ತುಂಬಿ ತುಳುಕುವ ಮಸ್ಜಿದುಲ್ ಅಖ್’ಸಾಗೆ ರಾತ್ರಿ ಸಂಚಾರ ನಡೆಸಿದವನು ಎಷ್ಟೊಂದು ಉತ್ತಮನು” ಎಂದು. ಬೈತುಲ್ ಮುಖದ್ದಸ್’ನಿಂದ ಆಕಾಶಲೋಕಕ್ಕೆ ನಡೆಸಿದ ಪ್ರಯಾಣವಾಗಿತ್ತು ಮಿಅ್’ರಾಜ್. ಪವಿತ್ರ ಕುರ್’ಆನಿನ ಅನ್ನಜ್’ಮ್ ಅಧ್ಯಾಯದ, ಒಂದರಿಂದ ಹದಿನೆಂಟರವರೆಗಿನ ಸೂಕ್ತಗಳಲ್ಲಿ ಈ ಘಟನೆಯ ಬಗ್ಗೆ ವಿವರಿಸಲಾಗಿದೆ.

ಪ್ರವಾದಿಯವರ ﷺ ಜೀವನದಲ್ಲಿ ಉಂಟಾದ ವಿಶಿಷ್ಟವಾದ ಈ ಘಟನೆಯ ಬಗ್ಗೆ ಪ್ರಮಾಣಗಳು ಸಮೇತವಾಗಿ, ಬಹಳಷ್ಟು ಕಡೆಗಳಲ್ಲಿ ಉಲ್ಲೇಖಿತವಾಗಿದೆ. ಪ್ರವಾದಿಯವರು ﷺ, ತಮ್ಮ ದೊಡ್ಡಪ್ಪ ಅಬೂತ್ವಾಲಿಬರ ಮಗಳಾದ, ಉಮ್ಮುಹಾನಿ ಎಂದು ಪ್ರಸಿದ್ಧಿ ಪಡೆದ, ಹಿಂದ್’ರ ಮನೆಯಲ್ಲಾಗಿತ್ತು ಇದ್ದದ್ದು. ಎಲ್ಲರೂ ನಿದ್ರಿಸಿದ ನಂತರ, ಜಿಬ್’ರೀಲ್’ರವರು (ಅ) ಬಂದು ಪ್ರವಾದಿಯವರನ್ನು ﷺ ಭೇಟಿಯಾದರು. ಈ ಘಟನೆಯ ಕುರಿತಾಗಿ ಅಬೂದರ್ರ್’ರವರು ◌ؓ ಉಲ್ಲೇಖಿಸಿದ ಹದೀಸನ್ನು, ಪ್ರವಾದಿಯವರು ﷺ ಹೇಳಿರುವುದಾಗಿ, ಅನಸ್’ರವರು ◌ؓ ಹೇಳುವುದು ಕಾಣಬಹುದು. ನಾನು ಮನೆಯಲ್ಲಿದ್ದಾಗ, ಮನೆಯ ಮೇಲ್ಛಾವಣಿಯ ಸಣ್ಣ ಅಂತರದ ಮೂಲಕ ಪ್ರತ್ಯಕ್ಷರಾದ ಜಿಬ್’ರೀಲ್’ರವರು ◌ؓ ನನ್ನ ಬಳಿ ಬಂದು, ನನ್ನ ಎದೆಯ ಭಾಗವನ್ನು ತೆರೆದು, ಝಮ್’ಝಮ್ ನೀರಿನಿಂದ ನನ್ನ ಹೃದಯವನ್ನು ತೊಳೆದ ನಂತರ, ಒಂದು ಚಿನ್ನದ ಬಟ್ಟಲಿನಲ್ಲಿ ತುಂಬಿದ್ದ ವಿಶ್ವಾಸ ಹಾಗೂ ತಂತ್ರವನ್ನು (ಈಮಾನ್ ಹಾಗೂ ಹಿಕ್’ಮತ್) ನನ್ನ ಹೃದಯಕ್ಕೆ ತುಂಬಿದರು. ತಕ್ಷಣವೇ ನನ್ನ ಎದೆಯು ಯಥಾ ಸ್ಥಿತಿಗೆ ಮರಳಿತು. ನಂತರ ನನ್ನ ಕೈ ಹಿಡಿದು ಮಕ್ಕಾದಿಂದ ಬೈತುಲ್ ಮುಖದ್ದಸ್’ಗೆ ಯಾತ್ರೆ ಮಾಡಲು, ಆಕಾಶಕ್ಕೆ ಹಾರಿ ಬುರಾಖ್ ಎಂಬ ವಾಹನದ ಬಳಿ ಕರೆದುಕೊಂಡು ಹೋದರು. ಗಾತ್ರದಲ್ಲಿ ಕೇವರ್ ಕತ್ತೆಗಿಂತಲೂ ಸಣ್ಣದಾಗಿ, ಸಾಮಾನ್ಯ ಕತ್ತೆಗಿಂತ ದೊಡ್ಡದಾದ ಜೀವಿಯಾಗಿತ್ತು ಅದು. ಮಿಂಚು ಎನ್ನುವ ಅರ್ಥವನ್ನು ಸೂಚಿಸುವ “ಬರಕ” ಎಂಬ ಅರಬಿ ಪದದಿಂದ, ಮಿಂಚಿನ ವೇಗದಲ್ಲಿ ಸಂಚರಿಸುವ ವಾಹನಕ್ಕೆ “ಬುರಾಖ್” ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಎಂದು ಹೇಳಿದ ಬಹಳಷ್ಟು ಜನರಿದ್ದಾರೆ. ಗತಕಾಲದ ಪ್ರವಾದಿಗಳು ಕೂಡ ಸಂಚರಿಸುತ್ತಿದ್ದ ವಾಹನವಾಗಿತ್ತು ಅದು. ಪ್ರವಾದಿ ಇಬ್ರಾಹಿಂ’ರವರು (ಅ) ಮಕ್ಕಾನಗರಕ್ಕೆ ಸಂಚರಿಸುತ್ತಿದ್ದ ವಾಹಣವೂ ಕೂಡ ಇದೆ ಆಗಿತ್ತು ಎಂದು, ಕೆಲವೊಂದು ಉಲ್ಲೇಖಗಳಲ್ಲಿ ಕಾಣಲು ಸಾಧ್ಯವಿದೆ.

ಕೆಲವೇ ಕೆಲವು ನಿಮಿಷದಲ್ಲಿ, ಅತೀ ವೇಗವಾಗಿ ಒಂದೊಂದು ಹೆಜ್ಜೆಯನ್ನು ಇಡುತ್ತಾ ಬುರಾಖ್ ಮಕ್ಕಾದಿಂದ ಬೈತುಲ್ ಮುಖದ್ದಸಿಗೆ ತಲುಪಿತು. ಯಾತ್ರೆಯ ನಡುವೆ ಬಹಳಷ್ಟು ವಿಸ್ಮಯಕಾರಿ ಸ್ಥಳಗಳಿಗೆ ಭೇಟಿ ನೀಡಿದರು. ಹೆಬ್ರೋನ್, ಬತ್’ಲಹೆಮನ್ನು ಕೂಡ ವೀಕ್ಷಿಸಿ, ಪ್ರವಾದಿ ಮೂಸರವರು (ಅ) ಅಂತ್ಯ ವಿಶ್ರಾಂತಿ ಪಡೆಯುತ್ತಿದ್ದ ಕೆಂಪು ಗುಡ್ಡದ ಹಾದಿಯಲ್ಲಿ ಸಂಚರಿಸುತ್ತಿದ್ದಾಗ, ಮೂಸ ಪ್ರವಾದಿಯವರು (ಅ) ಖಬರಿನ ಒಳಗಿನಿಂದ ನಮಾಝ್ ಮಾಡುತಿದ್ದ ದೃಶ್ಯವನ್ನು ಕಾಣಲು ಸಾಧ್ಯವಾಗಿತ್ತು. ಗತಕಾಲದ ಪ್ರವಾದಿಗಳ, ಹಾಗೂ ಅವರ ಅನುಯಾಯಿಗಳ ನೆನಪುಗಳನ್ನು ತರಿಸುವಂತಹ ಬಹಳಷ್ಟು ವಸ್ತುಗಳನ್ನು ಕೂಡ ವೀಕ್ಷಿಸಿದರು. ಯಾತ್ರೆಯ ಮದ್ಯೆ ಕೆಲವೊಂದು ವಿಶಿಷ್ಟವಾದ ಸ್ಥಳಗಳಿಗೆ ತಲುಪಿದಾಗ, ಪ್ರವಾದಿಯವರು ﷺ, ಜಿಬ್’ರೀಲ್’ರ ಸೂಚನೆಯಂತೆ ಅಲ್ಲಿ ಇಳಿದು ನಮಾಝ್ ಮಾಡುತಿದ್ದರು. ಪಲಾಯನ ಮಾಡಿ ತಲುಪಬೇಕಾದ ತ್ವೈಬ ಅಥವಾ ಮದೀನದಲ್ಲೂ ಕೂಡ ಇಳಿದು ನೋಡಿದರು. ಕೆಲವೊಂದು ಶಿಕ್ಷೆಯನ್ನು ಅನುಭವಿಸುತ್ತಿದ್ದಾ ದೃಶ್ಯಗಳನ್ನೂ, ಅದೇ ರೀತಿ ಗತಕಾಲದ ಮಹಾನ್ ವ್ಯಕ್ತಿಗಳು ಅನುಭವಿಸುತ್ತಿದ್ದ ಅನುಗ್ರಹಗಳನ್ನು ಕೂಡ ಜಿಬ್’ರಲರು (ಅ) ತೋರಿಸಿ, ಅವುಗಳ ಬಗ್ಗೆಯೂ ವಿವರಿಸುತ್ತಿದ್ದರು.

ಬೈತುಲ್ ಮುಖದ್ದಸಿಗೆ ತಲುಪಿದಾಗ, ಗತಕಾಲದ ಪ್ರವಾದಿಗಳೆಲ್ಲರೂ, ಪ್ರವಾದಿ ಪೈಗಂಬರ್’ರವರ ﷺ ಸ್ವಾಗತಕ್ಕಾಗಿ ಅಲ್ಲಿ ನೆರೆದಿದ್ದರು. ಮೊದಲು ಪ್ರವಾದಿಯವರು ﷺ ಹಾಗೂ ಜಿಬ್’ರೀಲರು ಮಾತ್ರ ಒಟ್ಟಿಗೆ ನಮಾಝ್ ಮಾಡಿ ನಂತರ ಎಲ್ಲಾ ಪ್ರವಾದಿಗಳ ಜೊತೆಯಲ್ಲಿ ಇಮಾಮಾಗಿ (ಜಂಟಿಯಾಗಿ ) ನಮಾಝ್ ಮಾಡಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-115/365

ಇಸ್’ರಾಅ್ ಮಿಅ್’ರಾಜ್ ಯಾತ್ರೆಯ ನಡುವೆ ವೀಕ್ಷಿಸಿದ ದೃಶ್ಯಗಳ ಬಗ್ಗೆ ಚರಿತ್ರೆ ಗ್ರಂಥಗಳಲ್ಲಿ ಹಲವಾರು ರೀತಿಯ ಉಲ್ಲೇಖಗಳು ಕಾಣಲು ಸಾಧ್ಯವಿದೆ. ಎಲ್ಲಾ ಉಲ್ಲೇಖಗಳನ್ನು ಜೊತೆ ಸೇರಿಸಿ ಬರೆದಿರುವ ಸುಬ್’ಲುಲ್ ಹುದಯ್ ಎಂಬ ಗ್ರಂಥದಲ್ಲಿ ಇದರ ಬಗ್ಗೆ ಒಂದು ಅಧ್ಯಾಯವನ್ನೇ ಕಾಣಬಹುದು ಅದು ಈ ರೀತಿಯಾಗಿದೆ.

ಮಲಕ್ ಜಿಬ್’ರೀಲ್’ರವರು (ಅ) ಪ್ರವಾದಿಯವರ ﷺ ಬಲ ಭಾಗದಲ್ಲಿ ಹಾಗೂ ಮೀಕಾಯಿಲ್’ರವರು (ಅ) ಎಡ ಭಾಗದಲ್ಲೂ ನಿಂತು ಮಕ್ಕಾದಿಂದ ಯಾತ್ರೆ ಹೊರಟರು. ಯಾತ್ರೆ ಬಹಳಷ್ಟು ದೂರ ಹೋದ ನಂತರ ಖರ್ಜುರಗಳು ತುಂಬಿ ತುಳುಕುತ್ತಿದ್ದ ಒಂದು ಊರಿಗೆ ತಲುಪಿದರು. ಅಲ್ಲಿ ಇಳಿದು ನಮಾಝ್ ಮಾಡಲು ಪ್ರವಾದಿಯವರಲ್ಲಿ ﷺ, ಜಿಬ್’ರೀಲರು (ಅ) ಹೇಳಿದಾಗ, ಪ್ರವಾದಿಯವರು ﷺ ಅಲ್ಲಿ ನಮಾಝ್ ಮಾಡಿ ಅಲ್ಲಿಂದ ಮುಂದೆ ಹೊರಟರು. ಯಾತ್ರೆ ಮುಂದುವರಿಸುತ್ತಾ ಜಿಬ್’ರೀಲರು (ಅ), ಈಗ ಇಲ್ಲಿ ನಮಾಝ್ ಮಾಡಿದ ಸ್ಥಳ ಯಾವುದೆಂದು ನಿಮಗೆ ಗೊತ್ತಿದೆಯೇ.? ಎಂದು ಪ್ರವಾದಿಯರಲ್ಲಿ ﷺ ಕೇಳಿದಾಗ, ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಜಿಬ್’ರೀಲರು ಇದಾಗಿದೆ ತ್ವೈಬ, ಭವಿಷ್ಯದಲ್ಲಿ ಇಲ್ಲಿಗೆ ನೀವು ಪಲಾಯನ ಮಾಡಿ ಬರಲಿರುವಿರಿ ಎಂದು ಹೇಳುತ್ತಾ ಯಾತ್ರೆ ಮುಂದು ವರಿಸಿದರು. ಬುರಾಖ್ ತನ್ನ ವೇಗವನ್ನು, ಒಮ್ಮೆ ನೋಡುವಾಗ ಕಣ್ಣ ದೃಷ್ಟಿ ಎಷ್ಟು ದೂರದವರೆಗೆ ಚಲಿಸುತ್ತಿತ್ತೋ ಅಷ್ಟು ದೂರದ ವರೆಗೆ ಒಂದೊಂದೇ ಹೆಜ್ಜೆ ಇಟ್ಟು ಹೋಗುತ್ತಿತ್ತು. ಮುಂದಿನ ಒಂದು ಸ್ಥಳಕ್ಕೆ ತಲುಪಿದಾಗ, ಅಲ್ಲಿಯೂ ಕೂಡ ಜಿಬ್’ರೀಲರು, ಪ್ರವಾದಿಯವರಲ್ಲಿ ﷺ ನಮಾಝ್ ಮಾಡಲು ಹೇಳಿದರು. ಅಲ್ಲಿಯೂ ಕೂಡ ನಮಾಝ್ ಮಾಡಿ ಮುಂದೆ ಹೋಗುವಾಗ, ಜಿಬ್’ರೀಲರು (ಅ) ಪುನಃ ಈ ಸ್ಥಳ ಯಾವುದೆಂದು ನಿಮಗೆ ಗೊತ್ತಿದಿಯೇ.? ಕೇಳಿದಾಗ, ಪ್ರವಾದಿಯವರು ﷺ ಇಲ್ಲ ಎಂದು ಉತ್ತರಿಸಿದರು. ಅದಕ್ಕೆ ಜಿಬ್’ರೀಲರು (ಅ) ಇದಾಗಿದೆ ಮದ್’ಯನ್ ಎಂದು ಹೇಳುತ್ತಾ, ಮೂಸ ಪ್ರವಾದಿಯವರ ﷺ ಮರದ ಬಳಿ ನಿಂತು ಎಲ್ಲವನ್ನು ವಿವರಿಸಿದರು. ಅಲ್ಲಿಂದ ಸ್ವಲ್ಪ ಮುಂದೆ ಹೋಗಿ ಇನ್ನೊಂದು ಸ್ಥಳಕ್ಕೆ ತಲುಪಿದಾಗ, ಅಲ್ಲಿಯೂ ಕೂಡ ಇಳಿದು ನಮಾಝ್ ಮಾಡಿ ಯಾತ್ರೆ ಮುಂದುವರೆಸಿದರು. ನಂತರ ಜಿಬ್’ರೀಲರು (ಅ), ಇದಾಗಿದೆ ಮೂಸ ಪ್ರವಾದಿಯವರು ಅಲ್ಲಾಹನ ಮಾತುಗಳನ್ನು ಕೇಳಿದ ಪವಿತ್ರವಾದ ಸೀನ ಪರ್ವತ ಎಂದು ಹೇಳಿದರು.

ಅಲ್ಲಿಂದ ಮುಂದುವರಿಯುತ್ತಾ ಕೋಟೆಗಳು ಕಾಣುತ್ತಿದ್ದ ಸ್ಥಳದಲ್ಲಿ ಇಳಿದು, ಅಲ್ಲಿಯೂ ನಮಾಝ್ ಮಾಡಿ ಯಾತ್ರೆ ಮುಂದುವರಿಸಿದಾಗ, ಜಿಬ್’ರೀಲರು (ಅ) ಇದು ಈಸ ಪ್ರವಾದಿಯವರ (ಅ) ಜನ್ಮ ನಾಡಾದ ಬತ್’ಲಹೆಂ ಎಂದು ವಿವರಿಸಿ ಕೊಟ್ಟರು. ಅಲ್ಲಿಂದ ಮುಂದೆ ಹೋದಾಗ, ಭೂತ ವರ್ಗದ ಇಫ್’ರೀತ್ ಭೂತವು ಬೆಂಕಿಯ ನಾಳದೊಂದಿಗೆ ಅಲ್ಲಿ ಪ್ರತ್ಯಕ್ಷವಾಯಿತು. ಹಿಂತಿರುಗಿ ನೋಡುವಾಗ ಅವರ ಹಿಂದೆ ಬರುತ್ತಿದ್ದ ಭಾಸವಾಗುತ್ತಿತ್ತು, ಅದಕ್ಕೆ ಜಿಬ್’ರೀಲರು (ಅ) ಪ್ರವಾದಿಯವರಲ್ಲಿ ﷺ, “ಖುಲ್ ಅವೂದು ಬಿ ವಜ್’ಹಿಲ್ಲಾಹಿಲ್ ಕರೀಂ…” ಎಂಬ ಮಂತ್ರವನ್ನು ಹೇಳಿರಿ, ಅವನ ಬೆಂಕಿಯ ನಾಳವು ಬತ್ತಿ ಹೋಗುತ್ತದೆ, ಎಂದು ಹೇಳಿದಾಗ ಪ್ರವಾದಿಯವರು ﷺ ಅದೇ ರೀತಿ ಹೇಳಿದರು. ಅಷ್ಟ್ರರಲ್ಲೇ ಇಫ್’ರೀತ್’ನ ಬೆಂಕಿ ನಾಳವು ಕೆಟ್ಟು ಹೋಗಿ, ಅವನು ಕೆಳಗೆ ಬಿದ್ದು ಬಿಟ್ಟನು.

ಯಾತ್ರೆ ಪುನಃ ಅಲ್ಲಿಂದ ಮುಂದುವರಿದು, ಒಂದು ವಿಶಿಷ್ಟವಾದ ಜನತೆಯ ಬಳಿ ತಲುಪಿತು. ಅವರು ಒಂದು ದಿನ ಧಾನ್ಯಗಳನ್ನು ಬೆಳೆದರೆ, ಇನ್ನೊಂದು ದಿನ ಅದನ್ನು ಕೊಯ್ಯುವರು. ಕೊಯ್’ದಷ್ಟು ಬೆಳೆಗಳು ಪುನಃ ಪೂರ್ವ ಸ್ಥಾನಕ್ಕೆ ಮರಳುತ್ತಿದ್ದವು. ಅದನ್ನು ಕಂಡು ಅವರು ಯಾರೆಂದು ಪ್ರವಾದಿಯವರು ﷺ ಕೇಳಿದಾಗ, ಇವರು ಅಲ್ಲಾಹನಿಗಾಗಿ ಜೀವ ಸಮರ್ಪಣೆ ಮಾಡಿದವರಾಗಿದ್ದಾರೆ. ಅವರ ಮಾಡಿದ ಒಳಿತಿನ ಕಾರಣದಿಂದ, ಅವರಿಗೆ ಎಪ್ಪತ್ತು ಸಾವಿರದಷ್ಟು ದುಪ್ಪಟ್ಟು ಪ್ರತಿಫಲ ಸಿಗಲಿದೆ. ಅವರು ಖರ್ಚು ಮಾಡಿದ್ದೆಲ್ಲವೂ ಅವರಿಗೆ ಮರಳಿ ಸಿಗಲಿದೆ ಎಂದು ಹೇಳಿ ಮುಗಿಸುವಷ್ಟರಲ್ಲಿ, ಒಂದು ಒಳ್ಳೆಯ ಸುಗಂಧದ ಸುವಾಸನೆ ಬಡಿಯಿತು. ಅದು ಏನೆಂದು ಪ್ರವಾದಿಯವರು ﷺ ಕೇಳಿದಾಗ, ಅದು ಫಿರ್’ಔನ್’ನ ಮಗಳ ಸೇವಕಿ ಮಾಷಿತರ (ಕೂದಲು ಬಾಚುವ ಸೇವಕಿ) ಮಕ್ಕಳ ಸುವಾಸನೆಯಾಗಿದೆ ಅದು. ನನ್ನ ರಕ್ಷಕ, ಜಗತ್ ಪಾಲಕನಾದ ಅಲ್ಲಾಹನಾಗಿರುವನು ಅಲ್ಲದೆ ಫರೋವ ಅಲ್ಲ ಎಂದು ಹೇಳಿದ ಕಾರಣಕ್ಕೆ ಬಿಸಿ ಎಣ್ಣೆಯಲ್ಲಿ ಹಾಕಿ ಕೊಲ್ಲಲ್’ಪಟ್ಟವರಾಗಿದ್ದಾರೆ ಅವರು ಎಂದು ಹೇಳಿದರು.

ಹೀಗೆ ಯಾತ್ರೆ ಮುಂದುವರಿಯುತ್ತಾ ಹೋಗುತ್ತಿದ್ದಾಗ, ತಲೆ ಹೊಡೆದು ಹೋಗುವ ಹಾಗೂ ಸ್ವಲ್ಪ ಸಮಯದ ನಂತರ ಅದು ಪುನಃ ಪೂರ್ವ ಸ್ಥಾನಕ್ಕೆ ಮರಳುತಿದ್ದ ಒಂದು ಸಮೂಹವನ್ನು ಕಾಣಲು ಸಾಧ್ಯವಾಯಿತು. ಅವರು ಯಾರೆಂದು ಕೇಳಿದಾಗ, ನಮಾಝ್ ತ್ಯಜಿಸಿ ಇತರ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಅನುಭವಿಸುವ ಶಿಕ್ಷೆಯಾಗಿದೆ ಇದು ಎಂದು ಹೇಳಿದರು. ಸ್ವಲ್ಪ ಮುಂದುವರಿದಾಗ, ಒಂದು ವಿಭಾಗವು ಜಾನುವಾರುಗಳಂತೆ ಮುಳ್ಳುಗಳ ಹುಲ್ಲುನ್ನು ಮೇಯುತ್ತಿದ್ದರು, ಅದು ನರಕವಕಾಶಿಗಳು ಅನುಭವಿಸುತ್ತಿದ್ದ ಶಿಕ್ಷೆಯ ಭಾಗವಾಗಿತ್ತು. ಅದನ್ನು ಕಂಡು ಪ್ರವಾದಿಯವರು ಇವರು ಯಾರೆಂದು ಕೇಳಿದಾಗ, ಜಿಬ್’ರೀಲರು (ಅ) ಎಲ್ಲವನ್ನೂ ವಿವರಿಸಿ ಕೊಟ್ಟರು, ಹೀಗೆ ಮುಂದುವರೆದು ಹೋಗುತ್ತಿದ್ದಾಗ, ಮತ್ತೊಂದು ವಿಭಾಗವನ್ನು ಕಂಡರು, ಅವರ ಮುಂದೆ ಒಂದು ಬಟ್ಟಲಿನಲ್ಲಿ ಒಳ್ಳೆಯ ಶುಚಿಯಿರುವ ಮಾಂಸ ಇದ್ದರೆ, ಇನ್ನೊಂದು ಬಟ್ಟಲಿನಲ್ಲಿ ಕೊಳೆತ ಮಾಂಸ ಇದ್ದವು. ಅವರು ಕೊಳೆತ ಮಾಂಸಗಳನ್ನು ತಿನ್ನುತ್ತಿದ್ದರು. ಅವರು ಯಾರೆಂದು ಕೇಳಿದಾಗ, ಅವರು ತಮಗಾಗಿ ಅನುಮತಿಸಿದ ಸಂಗಾತಿಗಳು ಇದ್ದರೂ ಕೂಡ, ಬೇರೆಯವರ ಜೊತೆಯಲ್ಲಿ ಸಂಪರ್ಕ ಇಟ್ಟುಕೊಂಡವರಾಗಿದ್ದರು ಎಂದು ಜಿಬ್’ರೀಲರು (ಅ) ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-116/365

ಪ್ರವಾದಿಯವರ ﷺ ಯಾತ್ರೆ ಮುಂದುವರೆದು ಮುಂದೆ ಹೋಗುತ್ತಿರುವಾಗ, ಮತ್ತೊಂದು ಸ್ಥಳದಲ್ಲಿ ಒಂದು ಮರದ ತುಂಡನ್ನು ಕಾಣಲು ಸಾಧ್ಯವಾಯಿತು, ಅದಕ್ಕೆ ತಾಗಿ ಮುಂದು ಹೋಗುವ ಎಲ್ಲಾ ಜನರ ಬಟ್ಟೆಗಳು, ಹಾಗೂ ಇತರ ಎಲ್ಲವೂ ಹರಿಯಲ್ಪಡುತಿತ್ತು. ಅದನ್ನು ಕಂಡು ಪ್ರವಾದಿಯವರು ﷺ ಅದರ ಬಗ್ಗೆ ವಿವರಣೆ ಕೇಳಿದಾಗ, ಅವರು, ಅವರ ಸಮೂಹದ ಜನರನ್ನು ದಾರಿ ಮಧ್ಯೆ ಕುಳಿತು ತೊಂದರೆ ನೀಡುತ್ತಿದ್ದರು ಎಂದು ಜಿಬ್’ರೀಲ್’ರು (ಅ) ವಿವರಿಸಿದರು.
ಹೀಗೆ ಯಾತ್ರೆ ಮುಂದುವರೆದು, ಬಡ್ಡಿಯ ವ್ಯವಹಾರ ಮಾಡಿದವರು, ನಂಬಿಕೆ ದ್ರೋಹ ಮಾಡಿದವರು, ವಿನಾಶವನ್ನು ಮಾಡಿಸುವ ಭಾಷಣಗಾರರು, ದೊಡ್ಡ ದೊಡ್ಡ ಮಾತುಗಳನ್ನು ಆಡಿ ಅದನ್ನು ಪಾಲಿಸದೆ ಇರುವವರು, ಮುಂತಾದ ಜನರು ಅನುಭವಿಸುತ್ತಿರುವ ಶಿಕ್ಷೆಗಳನ್ನೂ, ಸ್ವರ್ಗ ನರಕದ ದೃಶ್ಯಗಳನ್ನೂ, ಶಿಕ್ಷೆಯ ಭೀಕರತೆ, ದಜ್ಜಾಲಿನ ವಾಸ್ತವ ರೂಪ, ಅಲಂಕಾರ ಮಾಡಿ ನಿಂತಿರುವ ಹೆಣ್ಣಿನ ಹಾಗೆ ಇರುವ ಭೌತಿಕ ಜಗತ್ತು, ಮುಂತಾದ ದೃಶ್ಯಗಳನ್ನು ಕಂಡ ನಂತರವಾಗಿತ್ತು ಪ್ರವಾದಿಯವರು ﷺ ಬೈತುಲ್ ಮುಖದ್ದಸಿಗೆ ತಲುಪಿದ್ದು.

ಪ್ರವಾದಿಯವರು ﷺ ಹಾಗೂ ಜಿಬ್’ರೀಲ್’ರು (ಅ) ಬೈತುಲ್ ಮುಖದ್ದಸಿಗೆ ತಲುಪಿದ ಬಗ್ಗೆ ಬಹಳಷ್ಟು ಅಭಿಪ್ರಾಯಗಳನ್ನು ಉಲ್ಲೇಖಿಸಲಾಗಿದೆ. ಅವುಗಳೆಲ್ಲವನ್ನೂ ಸೇರಿಸಿ ನಮಗೆ ಈ ರೀತಿ ತಿಳಿಯಬಹುದು. ಪ್ರವಾದಿಯವರು ﷺ ಹಾಗೂ ಜಿಬ್’ರೀಲ್’ರು (ಅ) ಸೇರಿ, ಬೈತುಲ್ ಮುಖದ್ದಸಿನ ಯಮಾನಿ ಬಾಗಿಲಿನಿಂದ ಒಳಗೆ ಬರುವಾಗ, ಎರಡು ಭಾಗದಿಂದಲೂ ಪ್ರಕಾಶಿಸುವ ಎರಡು ಜ್ಯೋತಿಯನ್ನು ಕಾಣಲು ಸಾಧ್ಯವಾಯಿತು. ಅದನ್ನು ಕಂಡ ಪ್ರವಾದಿಯವರು ﷺ ಅದು ಏನೆಂದು ಕೇಳಿದಾಗ, ಬಲ ಭಾಗದಲ್ಲಿರುವ ಜ್ಯೋತಿಯು, ನಿಮ್ಮ ಸಹೋದರನಾದ ಪ್ರವಾದಿ ದಾವೂದ್’ರವರ (ಅ) ಮಿಹ್’ರಾಬಿನಿಂದಲೂ, ಎಡಭಾಗದಲ್ಲಿ ಕಂಡ ಜ್ಯೋತಿಯು ತಮ್ಮ ಸಹೋದರಿಯಾದ ಮರ್’ಯಮ್’ರ ಖಬರಿನಿಂದಲೂ ಆಗಿದೆ ಎಂದು ಜಿಬ್’ರೀಲರು (ಅ) ಉತ್ತರಿಸಿದರು. ನಂತರ ಜಿಬ್’ರೀಲರು (ಅ) ಅಲ್ಲಿದ್ದ ಬಂಡೆಯನ್ನು ಕೊರೆದು ಒಂದು ದ್ವಾರವನ್ನು ನಿರ್ಮಿಸಿ ಅದರೊಳಗೆ ಬುರಾಖ್ ವಾಹನವನ್ನು ಕಟ್ಟಿ ಹಾಕಿದರು. ಅದರ ಜೊತೆಯಲ್ಲಿ ಇತರ ಪ್ರವಾದಿಗಳ ವಾಹನವನ್ನು ಕಟ್ಟಿ ಹಾಕಿದರು. ನಂತರ ಪ್ರವಾದಿಯವರು ﷺ ಮಸ್ಜಿದಿನ ಮಹಡಿಗೆ ಬಂದಾಗ, ಜಿಬ್’ರೀಲರು ಪ್ರವಾದಿಯವರಲ್ಲಿ ﷺ ನೀವು ಹೂರುಲ್ ಹೀನ್’ಗಳನ್ನು ಕಾಣಬೇಕೆಂದು ಅಲ್ಲಾಹನಲ್ಲಿ ಪ್ರಾರ್ಥನೆ ಮಾಡಿದ್ದೀರೇ.? ಎಂದು ಕೇಳಿದಾಗ ಪ್ರವಾದಿಯವರು ﷺ ಹೌದು ಎಂದು ಹೇಳಿದರು. ಅದಕ್ಕೆ ಜಿಬ್’ರೀಲರು ಅಲ್ಲಿದ್ದಾರೆ ಅವರು, ಅಲ್ಲಿಗೆ ಹೋಗಿ, ಅವರಿಗೆ ಸಲಾಂ ಹೇಳಿರಿ, ಎಂದು ಹೇಳಿದಾಗ, ಪ್ರವಾದಿಯವರು ﷺ ಅವರ ಬಳಿ ತೆರಳಿ ಸಲಾಂ ಹೇಳಿದರು, ಅವರು ಪ್ರವಾದಿಯವರ ﷺ ಸಲಾಮಿಗೆ ಉತ್ತರಿಸಿದರು. ನಂತರ ಪ್ರವಾದಿಯವರು ﷺ ನೀವು ಯಾರೆಂದು ಕೇಳಿದಾಗ, ನಾವು ಸಜ್ಜನ ವ್ಯಕ್ತಿಗಳ ಪತ್ನಿಗಳಾಗಿರುತ್ತೇವೆ (“ಖೈರಾತುಲ್ ಹಿಸಾನ್”) ಎಂದು ಹೇಳಿದರು. ವಿಶ್ವ ಸುಂದರಿಯರಾದ ಹೂರುಲ್ ಹೀನ್ ಯುವತಿಯರು ಮಸ್ಜಿದುಲ್ ಅಖ್’ಸದ ಎಡ ಭಾಗದಲ್ಲಿರುವ ವಿಶೇಷವಾದ ಕಲ್ಲಿನ ಮೇಲಾಗಿತ್ತು ಅವರು ನಿಂತಿದ್ದದ್ದು.

ನಂತರ ಪ್ರವಾದಿಯವರು ﷺ, ಜಿಬ್ರೀಲರ (ಅ) ಜೊತೆಯಲ್ಲಿ ಮಸ್ಜಿದಿನ ಒಳಗೆ ಹೋಗಿ, ಎರಡು ರಕಾಅತ್’ನಂತೆ ನಮಾಝ್ ಮಾಡುತಿದ್ದರು, ಸ್ವಲ್ಪ ಸಮಯದ ನಂತರ ಇನ್ನಷ್ಟು ಪ್ರವಾದಿಗಳು ﷺ ಅವರ ಜೊತೆ ಬಂದು ಸೇರಿದಾಗ, ಜಿಬ್’ರೀಲರು ಅಝಾನ್ ಕೂಗಿದರು. ಅಷ್ಟೊತ್ತಿಗಾಗಲೇ ಎಲ್ಲಾ ಮಲಕ್’ಗಳು ಕೂಡ ಬಂದು ಜೊತೆ ಸೇರಿದ್ದರು. ಜಿಬ್’ರೀಲರು (ಅ) ಇಖಾಮತ್ ಕೂಗಿ, ಎಲ್ಲರೂ ಜೊತೆಯಲ್ಲೇ ಪ್ರವಾದಿಯವರ ﷺ ನೇತೃತ್ವದಲ್ಲಿ (ಇಮಾಮಾಗಿ) ನಮಾಝ್ ಮಾಡಲು ಆರಂಭಿಸಿದರು. ನಮಾಝ್ ಮುಗಿದ ನಂತರ ಪ್ರವಾದಿಯವರಲ್ಲಿ ﷺ ಜಿಬ್’ರೀಲರು (ಅ), ನಿಮ್ಮ ಹಿಂದೆ ನಿಂತು ನಮಾಝ್ ಮಾಡಿದವರು ಯಾರೆಂದು ನಿಮಗೆ ಗೊತ್ತೇ.? ಎಂದು ಕೇಳುತ್ತಾ, ಅವರು ಗತಕಾಲದಲ್ಲಿ ಮರಣ ಹೊಂದಿ ಹೋದ ಪ್ರವಾದಿಗಳಾಗಿದ್ದಾರೆ ಎಂದು ಹೇಳಿದರು. ಅಲ್ಲಿ ಜೊತೆ ಸೇರಿದ್ದ ಪ್ರವಾದಿಗಳಲ್ಲಿ ಸಂಭಾಷಣೆ ನಡೆಸಲು ತಿಳಿಸಿದ ವಿಷಯವನ್ನು, ಸುಖ್’ರುಫ್ ಅಧ್ಯಾಯದ ನಲವತ್ತೇಳನೇ ಸೂಕ್ತದಲ್ಲಿ ವಿವರಿಸುವುದು ಕಾಣಬಹುದು. ಅದರ ಸಾರಾಂಶ ಈ ರೀತಿಯಾಗಿದೆ. “ಗತಕಾಲದಲ್ಲಿ ನಿಯೋಗಿಸಲ್ಪಟ್ಟ ಪ್ರವಾದಿಯರುಗಳಲ್ಲಿ ತಾವು ಕೇಳಿರಿ ಪ್ರವಾದಿಯವರೇ ﷺ, ಅಲ್ಲಾಹನಲ್ಲದೆ ಬೇರೆ ಏನನ್ನಾದರೂ ಆರಾಧ್ಯ ವಸ್ತುವಾಗಿ ಮಾಡಿದ್ದೇವೆಯೇ.? ಎಂದು.”

ಪ್ರತಿಯೊಂದು ಪ್ರವಾದಿಗಳು ಕೂಡ ಅವರವರ ಸ್ಥಾನವನ್ನು ತಿಳಿಸಿ ಅಲ್ಲಾಹನನ್ನು ಸ್ತುತಿಸಿದರು. ಪ್ರವಾದಿ ಇಬ್ರಾಹಿಮರು (ಅ) ನನ್ನನ್ನು ಖಲೀಲ್ ಮಾಡಿದ ಅಲ್ಲಾಹನಿಗಾಗಿದೆ ಸರ್ವಸ್ತುತಿ, ಅವನು ನನ್ನನ್ನು ಅಗ್ನಿಗುಂಡದಿಂದ ರಕ್ಷಿಸಿದನು, ಅಗ್ನಿಗುಂಡವನ್ನು ನನಗೆ ತಂಪುಗೊಳಿಸಿ ಕೊಟ್ಟನು, ಅಷ್ಟೇ ಅಲ್ಲ ಸಮುದಾಯ ಎನ್ನುವ ಮಹತವನ್ನು ಕೂಡ ನೀಡಿದನು ಎಂದು ಹೇಳಿದರು. ಪ್ರವಾದಿ ಮೂಸರವರು (ಅ), ನನ್ನನ್ನು ಕಲೀಮುಲ್ಲಾಹ್ (ಅಲ್ಲಾಹನಲ್ಲಿ ಸಂಭಾಷಣೆ ನಡೆಸಿದ ವ್ಯಕ್ತಿ) ಮಾಡಿದ ಅಲ್ಲಾಹನಿಗಾಗಿದೆ ಸರ್ವಸ್ತುತಿ. ಇಸ್’ರಾಯಿಲರನ್ನು ರಕ್ಷಿಸಿ, ಫರೋವನ ಅಂತ್ಯವನ್ನು ನನ್ನ ಕೈಯಿಂದ ಮಾಡಿಸಿದನು. ನನ್ನ ಜನತೆಯನ್ನು ಸತ್ಯವಂತರಾಗಿಯೂ, ನೀತಿವಂತರಾಗಿಯೂ ಮಾಡಿದನು ಎಂದು ಹೇಳಿದರು. ಪ್ರವಾದಿ ದಾವೂದ್’ರವರು (ಅ) ಅಲ್ಲಾಹನಿಗಾಗಿದೆ ಸರ್ವಸ್ತುತಿ, ಅವನು ನನಗೆ ಉನ್ನತ ಅಧಿಕಾರ ನೀಡಿದನು. ಝಬೂರ್ ಎಂಬ ವೇದ ಗ್ರಂಥವನ್ನೂ ನೀಡಿದನು, ಕಬ್ಬಿಣವನ್ನು ಮೃದುವಾಗಿಸಿ ಕೊಟ್ಟನು. ಪರ್ವತಗಳನ್ನು ನನಗೆ ಮಣಿಸಿ ಕೊಟ್ಟನು, ತತ್ವಶಾಸ್ತ್ರ ಹಾಗೂ ಸಂವದಾತ್ಮಕವನ್ನು ನೀಡಿದನು ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-117/365

ಸುಲೈಮಾನ್ ಪ್ರವಾದಿಯವರು (ಅ), ಅಲ್ಲಾಹನೇ ನಾನು ನಿನ್ನನ್ನು ಸ್ತುತಿಸುತ್ತೇನೆ, ನೀನು ನನಗೆ ಮನುಷ್ಯ ಹಾಗೂ ಭೂತ ವರ್ಗವನ್ನು ನನ್ನ ಅಧೀನದಲ್ಲಿ ಮಾಡಿಕೊಟ್ಟೆ, ಅವರು ನನಗಾಗಿ ಅರಮನೆಗಳನ್ನು, ಸುಂದರವಾದ ವಾಸ್ತುಶಿಲ್ಪಗಳನ್ನು ಕಟ್ಟಿ ಕೊಟ್ಟರು. ಕೆಲಸಗಾರರ ಹಾಗೆ ನನ್ನ ಆಜ್ಞೆಯಂತೆ ನನಗಾಗಿ ಕೆಲಸ ಮಾಡಿದರು. ಅಲ್ಲಾಹನೇ ನೀನು ನನಗೆ ಪಕ್ಷಿಗಳ ಭಾಷೆಯನ್ನೂ ತಿಳಿಸಿ ಕೊಟ್ಟೆ. ಬಹಳಷ್ಟು ಅನುಗ್ರಹಗಳನ್ನು ನೀನು ನನಗೆ ನೀಡಿ, ಉನ್ನತವಾದ ಅಧಿಕಾರವನ್ನು ನೀಡಿದೆ ಎಂದು ಹೇಳಿದರು.
ಪ್ರವಾದಿ ಈಸರವರು (ಅ) ಅಲ್ಲಾಹನೇ ನಿನ್ನನ್ನು ನಾನು ಕೂಡ ಸ್ತುತಿಸುತ್ತೇನೆ, ನೀನು ನನ್ನನ್ನು ನಿನ್ನ ವಚನವಾಗಿ (ಕಲಿಮತ್) ಮಾಡಿದೆ, ಪ್ರವಾದಿ ಆದಂರವರ (ಅ) ಹಾಗೆ ವಿಶೇಷವಾದ ಮಣ್ಣಿನಿಂದ ಸೃಷ್ಟಿ ಮಾಡಿದೆ. ನೀನು ನನಗೆ ತತ್ವಜ್ಞಾನವನ್ನೂ, ವೇದ ಗ್ರಂಥಗಳಾದ ತೌರಾತ್ ಹಾಗೂ ಇಂಜೀಲನ್ನು ನೀಡಿದೆ. ನಿನ್ನ ಅನುಮತಿಯಿಂದ ಮರಣ ಹೊಂದಿದ ವ್ಯಕ್ತಿಗಳಿಗೆ ಪುನರ್ಜೀವ ನೀಡುವ ಅಧಿಕಾರವನ್ನೂ ಕೊಟ್ಟೆ. ಕುರುಡರನ್ನು, ಪಾಂಡು ರೋಗವನ್ನು ವಾಸಿ ಮಾಡುವ ಅವಕಾಶವನ್ನು ನೀಡಿದೆ. ನನ್ನನ್ನು ಹಾಗೂ ನನ್ನ ತಾಯಿಯನ್ನೂ ಎಲ್ಲಾ ರೀತಿಯ ಪೈಶಾಚಿಕ ಸಮಸ್ಯೆಯಿಂದ ರಕ್ಷಣೆ ಮಾಡಿದೆ ಎಂದು ಹೇಳಿದರು.

ಎಲ್ಲಾ ಪ್ರವಾದಿಗಳು ಅಲ್ಲಾಹನಿಗೆ ಸ್ತುತಿಸಿದ ನಂತರ, ಪ್ರವಾದಿಯವರು ﷺ ಕೂಡ ಇತರ ಪ್ರವಾದಿಗಳಲ್ಲಿ, ನೀವೆಲ್ಲರೂ ಅಲ್ಲಾಹನನ್ನು ಸ್ತುತಿಸಿದಿರಿ, ನಾನೂ ಕೂಡ ಅಲ್ಲಾಹನನ್ನು ಸ್ತುತಿಸುತ್ತೇನೆ. ನನ್ನನ್ನು ಮನುಷ್ಯ ಕುಲಕ್ಕೆ ಸಂಪೂರ್ಣವಾಗಿ, ಸುವಾರ್ತೆ ತಿಳಿಸುವವನಾಗಿಯೂ, ಎಚ್ಚರಿಕೆ ನೀಡುವವನಾಗಿಯೂ ಮಾಡಿದನು. ಪ್ರಪಂಚಕ್ಕೆ ನನ್ನನ್ನು ಕಾರುಣ್ಯವಾಗಿ ಕಳುಹಿಸಿದ ಅಲ್ಲಾಹನಿಗಾಗಿದೆ ಸರ್ವಸ್ತುತಿ, ಎಲ್ಲದಕ್ಕೂ ಪುರಾವೆಯಾಗಿ ನನಗೆ ಕುರ್’ಆನನ್ನು ನೀಡಿದನು. ಮನುಷ್ಯ ಕುಲದಲ್ಲೇ ಉತ್ತಮ ಸಮುದಾಯವಾಗಿ ನನ್ನ ಸಮುದಾಯವನ್ನು ಮಾಡಿದನು. ಅವರನ್ನು ನೀತಿವಂತರಾದ ಸಮುದಾಯವನ್ನಾಗಿ ಮಾಡಿದನು. ಅಷ್ಟೇ ಅಲ್ಲ ಕೊನೆಯ ಸಮುದಾಯವಾಗಿಯು, ವಿಭಿನ್ನವಾದ ಸಮುದಾಯವಾಗಿಯೂ, ನನ್ನ ಸಮುದಾಯವನ್ನು ಮಾಡಿಕೊಂಡನು. ನನ್ನ ಹೃದಯವನ್ನು ಎಲ್ಲಾ ಮಾಲಿನ್ಯತೆಯಿಂದ ಶುದ್ದಿಯಾಗಿಸಿ, ವಿಶಾಲಗೊಳಿಸಿದನು. ನನಗೆ ಉತ್ತಮವಾದ ಶಬ್ದವನ್ನು ನೀಡಿದನು, ಅಷ್ಟೇ ಅಲ್ಲ ಎಲ್ಲಾ ಒಳಿತುಗಳ ಆರಂಭವನ್ನು ಸಂಪೂರ್ಣವಾಗಿ ಪೂರ್ತಿಯಾಗಿಸಿ ಕೊಟ್ಟನು ಎಂದು ಹೇಳಿದರು.

ನಂತರ ಮಾತು ಮುಂದುವರಿಸುತ್ತಾ, ಲೋಕವಸಾನದ ಕುರಿತು ಕೇಳಿದಾಗ. ಪ್ರವಾದಿ ಇಬ್ರಾಹಿಂ’ರವರು (ಅ) ನನಗೆ ಗೊತ್ತಿಲ್ಲ ಎಂದು ಹೇಳಿದರು. ಪ್ರವಾದಿ ಮೂಸರವರು (ಅ) ಕೂಡ ಅದೇ ರೀತಿ ಹೇಳಿದರು. ಕೊನೆಗೆ ಪ್ರವಾದಿ ಈಸರವರೂ ಕೂಡ (ಅ) ಒಂದಲ್ಲಾ ಒಂದು ದಿನ ಲೋಕ ಅಂತ್ಯ ಖಂಡಿತ ಆಗಲಿದೆ ಆದರೆ ಅದು ಯಾವಾಗ ಎಂದು ನನಗೂ ಗೊತ್ತಿಲ್ಲ ಆದರೆ ಅದರ ಮುನ್ಸೂಚನೆಗಳನ್ನು ನನಗೂ ಕೂಡ ಅಲ್ಲಾಹನು ನೀಡಿದ್ದನು, ಅದು ದಜ್ಜಾಲಿನ ಆಗಮನದ ಬಗ್ಗೆಯಾಗಿದೆ. ನಾನು ಎರಡನೇ ಬಾರಿ ಭೂಮಿಗೆ ಬಂದಾಗ ದಜ್ಜಾಲಿನ ವಧೆ ಆಗುತ್ತದೆ. ಕಲ್ಲುಗಳೂ ಕೂಡ ಮುಸ್ಲಿಮರಿಗಾಗಿ ಮಾತಾಡುತ್ತದೆ. ಯಅ್’ಜೂಜ್ ಮಅ್’ಜೂಜ್’ರ ಆಗಮನದ ಬಗ್ಗೆ ಹಾಗೂ ಇತರ ವಿಷಯಗಳ ಬಗ್ಗೆ ತಿಳಿಸಿದರು.

ಅಷ್ಟೊತ್ತಿಗೆ ಪ್ರವಾದಿಯವರಿಗೆ ﷺ ತುಂಬಾ ಬಾಯಾರಿಕೆ ಆಗಿತ್ತು. ತಕ್ಷಣವೇ ಒಂದು ಕಡೆಯಿಂದ ಹಾಲು ಹಾಗೂ, ಇನ್ನೊಂದು ಭಾಗದಲ್ಲಿ ಜೇನುತುಪ್ಪವನ್ನು ಎರಡು ಬಟ್ಟಲಿನಲ್ಲಿ ತರಿಸಲಾಯಿತು. ಇನ್ನೊಂದು ಉಲ್ಲೇಖದ ಪ್ರಕಾರ ಉತ್ತಮ ಗುಣಮಟ್ಟದ ಮೂರು ಪಾತ್ರೆಗಳಲ್ಲಿ ಆಗಿತ್ತು ಎನ್ನುವ ಅಭಿಪ್ರಾಯವೂ ಇದೆ, ಅದರಲ್ಲಿ ಒಂದರಲ್ಲಿದ್ದ ನೀರನ್ನು ಸ್ವಲ್ಪ ಕುಡಿದರು, ಎರಡನೇ ಪಾತ್ರೆಯಲ್ಲಿದ್ದ ಹಾಲನ್ನು ಹೊಟ್ಟೆ ತುಂಬಾ ಕುಡಿದರು. ಆದರೆ ಮೂರನೇ ಪಾತ್ರೆಯ ಕಡೆಗೆ ಗಮನ ಕೂಡ ನೀಡಲಿಲ್ಲ, ಕಾರಣ ಅದು ಮದ್ಯವಾಗಿತ್ತು. ಇನ್ನೂ ಒಂದು ಉಲ್ಲೇಖದ ಪ್ರಕಾರ ನೀರಿನ ಪಾತ್ರೆಯ ಬದಲು ಅಲ್ಲಿ ಜೇನುತುಪ್ಪವಾಗಿತ್ತು ಎಂಬ ಅಭಿಪ್ರಾಯವೂ ಇದೆ.
ಜಿಬ್’ರೀಲರು (ಅ) ಪ್ರವಾದಿಯವರಲ್ಲಿ ﷺ, ನಿಮ್ಮ ಸಮೂಹಕ್ಕೆ ಮದ್ಯವನ್ನು ನಿಷೇಧಿಸಲಾಗಿದೆ ಎಂದು ಹೇಳಿದಾಗ, ಪ್ರವಾದಿಯವರು ﷺ ಹಾಲನ್ನು ಆಯ್ಕೆ ಮಾಡಿದರು. ಅದನ್ನು ಕಂಡು ಜಿಬ್’ರೀಲರು ಪ್ರವಾದಿಯವರ ﷺ ಬೆನ್ನು ತಟ್ಟುತ್ತಾ ನೀವು ಪರಿಶುದ್ಧತೆಯನ್ನು ಆಯ್ಕೆ ಮಾಡಿದ್ದೀರಿ, ಬಹುಶಃ ನೀವು ಮದ್ಯವನ್ನು ಆಯ್ಕೆ ಮಾಡಿರುತಿದ್ದರೆ.? ನಿಮ್ಮ ಸಮೂಹವು ನಾಶವಾಗಿ, ನಿಮ್ಮ ಅನುಯಾಯಿಗಳ ಸಂಖ್ಯೆಯೂ ಕೂಡ ಬಹಳ ಕಡಿಮೆ ಆಗುತಿತ್ತು, ನೀವು ಸಂಪೂರ್ಣವಾಗಿ ನೀರನ್ನು ಮಾತ್ರ ಆಯ್ಕೆ ಮಾಡಿರುತಿದ್ದರೆ ನಿಮ್ಮ ಸಮೂಹ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗುತ್ತಿದ್ದರು, ಎಂದು ಹೇಳಿದರು. ಇನ್ನೊಂದು ಉಲ್ಲೇಖದ ಪ್ರಕಾರ, ಒಬ್ಬರು ವಯಸ್ಸಾದ ವ್ಯಕ್ತಿ, ಒಂದು ಉನ್ನತವಾದ ಆಸನದಲ್ಲಿ ಕುಳಿತು, ಓ ಜಿಬ್’ರೀಲರೇ (ಅ) ನೀವು ಕರೆದುಕೊಂಡು ಬಂದ ವ್ಯಕ್ತಿಯು, ಪರಿಶುದ್ಧತೆಯನ್ನು ಆಯ್ಕೆ ಮಾಡಿರುತ್ತಾರೆ. ಖಂಡಿತವಾಗಿಯೂ ಅವರು ಸನ್ಮಾರ್ಗಕ್ಕೆ ಆಹ್ವಾನಿಸುವ ನಾಯಕನೇ ಆಗಿರುತ್ತಾರೆ, ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-118/365

ಪ್ರವಾದಿಯವರು ﷺ ಮಸ್ಜಿದುಲ್ ಅಖ್’ಸದಲ್ಲಿರುವ ಇನ್ನೊಂದು ವಿಶೇಷವಾದ ಕಲ್ಲಿನ ಬಳಿ ಹೋದರು. ಅಲ್ಲಿ ಆಕಾಶ ಲೋಕಕ್ಕೆ ಹೋಗುವ ಮೆಟ್ಟಿಲುಗಳನ್ನು ಪ್ರಸ್ತುತ ಪಡಿಸಲಾಗಿತ್ತು. ಆತ್ಮಗಳು ಎತ್ತರಕ್ಕೆ ತಲುಪಲು ಬಳಸುವ ಮೆಟ್ಟಿಲಾಗಿತ್ತು ಅದು, ಅಷ್ಟೊಂದು ಸುಂದರವಾದ ಒಂದು ವಸ್ತು ಬೇರೆ ಇರಲಿಕ್ಕಿಲ್ಲ ಎನ್ನುವ ರೀತಿಯಲ್ಲಿತ್ತು ಅದರ ಸೌಂದರ್ಯ. ಬಲ ಭಾಗದಲ್ಲಿಯೂ, ಎಡ ಭಾಗದಲ್ಲಿಯೂ ಮಲಕ್’ಗಳಿಂದ ಕಾವಲು ಕಾಯುತ್ತಿದ್ದ ಹವಲಗಳಿಂದ ನಿರ್ಮಿತವಾದ ಮೆಟ್ಟಿಲುಗಳ ಮೂಲಕ, ಪ್ರವಾದಿಯವರು ﷺ ಹಾಗೂ ಜಿಬ್’ರೀಲರು (ಅ) ಜೊತೆಯಲ್ಲಿ, ಆಕಾಶ ಲೋಕಕ್ಕೆ ಹಾರಿದರು. ಮೊದಲನೇ ಆಕಾಶದ, ಹಫಳಃ ಹೆಬ್ಬಾಗಿಲ ಬಳಿ ತಲುಪಿದಾಗ, ಅಲ್ಲಿ ಇಸ್ಮಾಯಿಲ್ ಎಂಬ ಮಲಕಾಗಿತ್ತು ದ್ವಾರಪಾಲಕನಾಗಿ ಕಾವಲು ಕಾಯುತ್ತಾ ನಿಂತಿದ್ದದ್ದು. ಜಿಬ್’ರೀಲರು (ಅ) ಅವರ ಬಳಿ ಹೋಗಿ, ಆಕಾಶದ ಬಾಗಿಲನ್ನು ತೆರೆಯಲು ಆಗ್ರಹಿಸಿದಾಗ, ಅವರು ಯಾರದು.? ಎಂದು ಕೇಳಿದರು. ಅದಕ್ಕೆ ನಾನು ಜಿಬ್’ರೀಲ್ ಎಂದು ಹೇಳಿದರು. ಜೊತೆಯಲ್ಲಿ ಯಾರಿದ್ದಾರೆ.? ಎಂದು ಕೇಳಿದಾಗ, ಜೊತೆಯಲ್ಲಿ ಮುಹಮ್ಮದ್’ರು ﷺ ಇದ್ದಾರೆ ಎಂದು ಹೇಳಿದರು. ಓ ಅವರನ್ನು ನಿಯೋಗಿಸಿಲಾಯಿತು ಅಲ್ಲವೇ.? ಎಂದು ಕೇಳಿದಾಗ, ಹೌದು ಎಂಬ ಉತ್ತರ ಬಂದಿತು. ಅದನ್ನು ಕೇಳಿ, ಸ್ವಾಗತ ಸುಸ್ವಾಗತ ಎಂತಹ ಶ್ರೇಷ್ಠವಾದ ಸಹೋದರ, ಎಷ್ಟೊಂದು ಉತ್ತಮವಾದ ಪ್ರತಿನಿಧಿ, ಆಗಮಿಸಿದ ಅತಿಥಿ ಎಷ್ಟೊಂದು ಉತ್ತಮನು ಎಂದು ಹೇಳುತ್ತಾ, ಬಾಗಿಲನ್ನು ತೆರೆಯಲಾಯಿತು. ಆಕಾಶದ ಒಂದನೇ ಮಳಿಗೆ ಬಳಿ ಹೋದಾಗ, ಅಲ್ಲಿ ಪ್ರವಾದಿ ಆದಮರು (ಅ) ಅಲ್ಲಿ ಕುಳಿತಿದ್ದರು. ಮೊದಲು ಸೃಷ್ಟಿಸಿದ್ದ ಅದೇ ರೂಪದಲ್ಲಿದಲ್ಲಾಗಿತ್ತು ಅವರು ಕುಳಿತಿದ್ದದ್ದು, ಅಷ್ಟರಲ್ಲೇ ಮಹಾನರ ಎದುರು ಹಲವಾರು ಪವಿತ್ರ ಆತ್ಮಗಳು ಪ್ರತ್ಯಕ್ಷವಾದವು. ಅವರನ್ನು ಇಲ್ಲಿಯ್ಯೀನ್ ಎಂಬ ಸ್ಥಳಕ್ಕೆ ಕರೆದುಕೊಂಡು ಹೋಗಲು ಹೇಳಲಾಯಿತು. ತಕ್ಷಣವೇ ಅವರ ಎದುರು ಅವಿಶ್ವಾಸಿಗಳ, ಹಾಗೂ ಕೆಟ್ಟ ಆತ್ಮಗಳೂ ಕೂಡ ಪ್ರತ್ಯಕ್ಷವಾದವು ಅವುಗಳನ್ನು ಸಿಜ್ಜಿಯ್ಯೀನ್ ಎಂಬ ಸ್ಥಳಕ್ಕೆ ಹೋಗಲು ಹೇಳಲಾಯಿತು. ಅಲ್ಲೇ ಪಕ್ಕದಲ್ಲಿ ಬಲಭಾಗದಲ್ಲಿದ್ದ ಗುಂಪಿನ ಬಾಗಿಲಿನಿಂದ ಬಹಳ ಉತ್ತಮವಾದ ಸುವಾಸನೆ ಬರುತಿತ್ತು, ಅದೇ ರೀತಿ ಎಡಭಾಗದಲ್ಲಿದ್ದ ಗುಂಪಿನ ಬಾಗಿಲಿನಿಂದ ದುರ್ಗಂಧ ಬರುತಿತ್ತು. ಪ್ರವಾದಿ ಆದಮರು (ಅ) ಬಲ ಭಾಗದವರನ್ನು ನೋಡಿ ಮಂದಹಾಸ ಬೀರಿದರೆ.? ಎಡ ಬಾಗದವರನ್ನೂ ನೊಡಿ ಬೇಸರ ಪಡುತ್ತಿದ್ದರು.

ಪ್ರವಾದಿಯವರು ﷺ, ಪ್ರವಾದಿ ಆದಮ್’ರಿಗೆ (ಅ) ಸಲಾಮ್ ಹೇಳಿದಾಗ, ಅವರು ಕೂಡ ತಿರುಗಿ ಸಲಾಮಿಗೆ ಉತ್ತರ ನೀಡಿ, ಉತ್ತಮನಾದ ಮಗನಿಗೆ ಸ್ವಾಗತ ಎಂದು ಹೇಳಿದರು. ಅದನ್ನು ಕೇಳಿ ಪ್ರವಾದಿಯವರು ﷺ, ಜಿಬ್’ರೀಲರಲ್ಲಿ (ಅ) ಅದು ಯಾರೆಂದು ಕೇಳಿದಾಗ, ಅವರು ಇದು ನಿಮ್ಮ ತಂದೆ ಪ್ರವಾದಿ ಆದಮ್’ರು (ಅ) ಎಂದು ಹೇಳುತ್ತಾ, ನಿಮ್ಮ ಬಲ ಭಾಗದಲ್ಲಿ ಕಾಣುವ ಬಾಗಿಲು ಸ್ವರ್ಗಕೆ ಹೋಗುವ ದಾರಿ, ಅದನ್ನು ನೋಡಿ ಸಂತೋಷ ಪಡುತ್ತಾರೆ, ಅದೇ ರೀತಿ ಎಡ ಭಾಗದಲ್ಲಿರುವ ಬಾಗಿಲು ನರಕದ ಬಾಗಿಲಾಗಿದೆ. ಅದನ್ನು ನೋಡಿ ಬಹಳಷ್ಟು ದುಃಖ ಪಡುತ್ತಾರೆ ಎಂದು ಹೇಳಿದರು.

ಅಲ್ಲಿಂದ ಸ್ವಲ್ಪ ಮುಂದೆ ಹೋದ ಪ್ರವಾದಿಯವರಿಗೆ ﷺ ಅಲ್ಲಿ ಬಹಳಷ್ಟು ಒಳ್ಳೆಯ ಆಹಾರದ ಮೇಜುಗಳು ಕಾಣಲು ಸಾಧ್ಯವಾಯಿತು, ಆದರೆ ಅದರ ಬಳಿ ಯಾರೂ ಇಲ್ಲ, ಅಲ್ಲೇ ಪಕ್ಕದಲ್ಲಿ ಬಹಳಷ್ಟು ಮೇಜಿನ ಮೇಲಿದ್ದ ಹಾಳಾಗಿ ಹೋದ ಮಾಂಸಗಳನ್ನು ಇಡಲಾಗಿತ್ತು. ಅಲ್ಲಿ ಬಹಳಷ್ಟು ಜನರು ಅದನ್ನು ತಿನ್ನುತ್ತಿದ್ದರು. ಅದನ್ನು ಕಂಡ ಪ್ರವಾದಿಯವರು ﷺ, ಅದು ಯಾರೆಂದು ಕೇಳಿದಾಗ, ಜಿಬ್’ರೀಲರು ಅದು ನಿಮ್ಮ ಸಮುದಾಯದ ಜನತೆ ಅನುಮತಿಸಿದ ವಸ್ತುಗಳನ್ನು ಬಿಟ್ಟು, ವಿರೋಧಿಸಿರುವ ವಸ್ತುಗಳನ್ನು ಆಯ್ಕೆ ಮಾಡುತಿದ್ದರು ಎಂದು ಹೇಳಿದರು. ಇನ್ನೊಂದು ಉಲ್ಲೇಖದ ಪ್ರಕಾರ, ಒಂದು ಬಟ್ಟಲಿನಲ್ಲಿ ಸ್ವಾದಿಷ್ಟವಾದ ಕರಿದ ಮಾಂಸವನ್ನು ಇಡಲಾಗಿತ್ತು. ಇನ್ನೊಂದು ಬಟ್ಟಲಿನಲ್ಲಿ ಶವವನ್ನು ಇಡಲಾಗಿತ್ತು. ಆಗ ಅಲ್ಲಿ ಕೆಲವರು ಸ್ವಾದಿಷ್ಟವಾದ ಆಹಾರವನ್ನು ಬಿಟ್ಟು ಕೆಟ್ಟ ಆಹಾರವನ್ನು ತಿನ್ನುತ್ತಿದ್ದರು. ಅವರನ್ನು ಕಂಡು, ಪ್ರವಾದಿಯವರು ﷺ ಅದು ಯಾರೆಂದು ಕೇಳಿದಾಗ, ಅನಿಮತಿಸಲಾದ ಸಂಗತಿಗಳನ್ನು ಬಿಟ್ಟು, ಅನ್ಯರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ವ್ಯಭಿಚಾರಿಗಳಾಗಿದ್ದರು ಎಂದು ಹೇಳಿದರು.

ಅಲ್ಲಿಂದ ಸ್ವಲ್ಪ ಮುಂದೆ ಹೋದಾಗ ಪ್ರವಾದಿಯವರಿಗೆ ﷺ, ಅಲ್ಲೇ ಕೆಲವರ ಹೊಟ್ಟೆ ದೊಡ್ಡ ಮನೆಯ ಹಾಗೆ ಕಾಣುತ್ತಿದ್ದವು. ಹೊಟ್ಟೆಯ ಒಳಗಿದ್ದ ಸರ್ಪಗಳು ಹೊರಗಿನಿಂದ ಚೆನ್ನಾಗಿ ಕಾಣುತಿತ್ತು. ಅವರು ಎದ್ದೇಳಲು ಪ್ರಯತ್ನ ಮಾಡುವಾಗ ಕೆಳಗೆ ಬೀಳುತ್ತಿದ್ದರು. ಅದನ್ನು ಕಂಡು ಜಿಬ್’ರೀಲರು (ಅ), ಅದು ಬಡ್ಡಿ ವ್ಯವಹಾರಗಳನ್ನು ಮಾಡಿದವರಾಗಿದ್ದರು ಎಂದು ಹೇಳಿದರು. ಅನಾಥರ ಸಂಪತ್ತನ್ನು ಕೊಳ್ಳೆ ಹೊಡೆದವರು, ಹೆಣ್ಣು ಮಕ್ಕಳನ್ನು ಜೀವಂತ ಸಮಾಧಿ ಮಾಡಿದವರು, ಚಾಡಿ, ಪರದೂಷಣೆಗಳನ್ನು ಹೇಳುತಿದ್ದವರ, ಮುಂತಾದ ತಪ್ಪುಗಳಿಗೆ ಅನುಭವಿಸುತ್ತಿದ್ದ ಭೀಕರವಾದ ಶಿಕ್ಷೆಯನ್ನು ಕಾಣಲು ಸಾಧ್ಯವಾಯಿತು. ಪ್ರತಿಯೊಂದರ ಬಗ್ಗೆಯೂ ಜಿಬ್’ರೀಲರು (ಅ) ವಿವರಿಸುತ್ತಾ ಬಂದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-119/365

ಪ್ರವಾದಿಯವರು ﷺ ಹಾಗೂ ಜಿಬ್’ರೀಲರು (ಅ) ಯಾತ್ರೆ ಮುಂದುವರಿಸಿ, ಎರಡನೇ ಆಕಾಶಕದ ಕಡೆಗೆ ಹೋದರು. ಜಿಬ್’ರೀಲರು (ಅ) ಬಾಗಿಲು ತೆರೆಯಲು ಆಗ್ರಹಿಸಿದಾಗ, ಯಾರದು.? ಎಂಬ ಶಬ್ದವು ಒಳಗಿನಿಂದ ಬಂದಿತು. ನಾನು ಜಿಬ್’ರೀಲ್ (ಅ) ಎಂದು ಉತ್ತರಿಸಿದಾಗ, ನಿಮ್ಮ ಜೊತೆಯಲ್ಲಿ ಯಾರಿದ್ದಾರೆ.? ಎಂಬ ಮುಂದಿನ ಪ್ರಶ್ನೆ ಬಂದಿತು. ಜೊತೆಯಲ್ಲಿ ಮುಹಮ್ಮದ್’ರು ﷺ ಇದ್ದಾರೆ ಎಂದು ಹೇಳಿದರು. ಓಹ್ ಅವರನ್ನು ಅನುಸರಿಸಲು ನೇಮಕ ಮಾಡಿಲಾಯಿತು ಅಲ್ಲವೇ.? ಅಭಿನಂದನೆಗಳು, ಸ್ವಾಗತ ಸುಸ್ವಾಗತ ಎಂದು ಹೇಳುತ್ತಾ ಒಳಗಿನಿಂದ ಬಾಗಿಲು ತೆರೆಯಲಾಯಿತು. ಒಳಗೆ ಪ್ರವಾದಿ ಈಸ (ಅ) ಹಾಗೂ ಯಹ್ಯರವರು (ಅ) ಜೊತೆಯಲ್ಲಿ ನಿಂತಿದ್ದರು. ಅವರಿಬ್ಬರ ನಡುವೆ ಬಟ್ಟೆಯಲ್ಲಿ ಹಾಗೂ ಕೂದಲಿನಲ್ಲಿ ಬಹಳಷ್ಟು ವ್ಯತ್ಯಾಸ ಕಾಣುತಿತ್ತು, ಅಷ್ಟೇ ಅಲ್ಲ ಅವರ ಜೊತೆಯಲ್ಲಿ ಅವರ ಅನುಯಾಯಿಗಳ ಸಣ್ಣ ಸಣ್ಣ ಗುಂಪು ಕೂಡ ಇದ್ದವು. ಕೆಂಪು ಮಿಶ್ರಿತ ಶ್ವೇತ ವರ್ಣದ ವ್ಯಕ್ತಿಯಾಗಿದ್ದ ಈಸ ಪ್ರವಾದಿಯವರು (ಅ) ತುಂಬಾ ಚೆನ್ನಾಗಿದ್ದ ತಲೆಗೂದಲನ್ನು ಹೊಂದಿದ್ದರು. ಒಂದು ಕ್ಷಣ ಕಂಡಾಗ ಯಾರಿಗೆಯಾದರೂ ಸ್ನಾನಗ್ರಹದಿಂದ ಈಗಷ್ಟೇ ಹೊರಗೆ ಬಂದಿರುವ ಹಾಗೆ ಕಾಣುತ್ತಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ, ಇರ್’ವತ್ ಬಿನ್ ಮಸ್’ವೂದ್ ಅಸ್ಸಖಫಿ ಎಂಬ ಸ್ವಹಾಬಿಯ ಹಾಗೆ ಕಾಣುತ್ತಿದ್ದರು.

ಹೀಗೆ ಮುಂದುವರಿದು ಮೂರನೇ ಆಕಾಶಕ್ಕೂ ತಲುಪಿದರು. ಅಲ್ಲಿಯೂ ಕೂಡ ಬಾಗಿಲು ತೆರೆಯಲು ಆಗ್ರಹಿಸಿದಾಗ ಕೆಲವೊಂದು ಪ್ರಶ್ನೆಗಳನ್ನು ಕೇಳಿ, ಅಲ್ಲಿಯೂ ಕೂಡ ಸ್ವಾಗತ ಕೋರಿ ಒಳಗೆ ಕರಿಸಿಕೊಂಡರು. ಅಲ್ಲಿ ಒಳಗೆ ಪ್ರವಾದಿ ಯೂಸುಫ್’ರವರು (ಅ) ನಿಂತಿದ್ದರು. ಅವರು ಪ್ರವಾದಿಯವರನ್ನು ﷺ ಕಂಡು ಅವರ ಒಳಿತಿಗಾಗಿ ಪ್ರಾರ್ಥಿಸಿದರು. ಭೂಲೋಕ ಎಲ್ಲಾ ಮನುಷ್ಯರ ಅರ್ಧ ಸೌಂದರ್ಯವು ಕೇವಲ ಪ್ರವಾದಿ ಯೂಸುಫ್’ರಲ್ಲಿ (ಅ) ಮಾತ್ರ ಕಾಣಬಹುದಿತ್ತು. ನಕ್ಷತ್ರಗಳ ನಡುವೆ ಹೊಳೆಯುವ ಹುಣ್ಣಿಮೆ ಚಂದ್ರನ ಹಾಗೆ ಅಲ್ಲಾಹನ ಸೃಷ್ಟಿಗಳಲ್ಲಿ ಅತೀ ಸುಂದರನಾದ ವ್ಯಕ್ತಿಯಾಗಿದ್ದರು ಪ್ರವಾದಿ ಯೂಸುಫ್’ರು (ಅ).
ನಂತರ ಅಲ್ಲಿಂದ ನಾಲ್ಕನೇ ಆಕಾಶದ ಕಡೆಗೆ ಹೋದರು. ಅಲ್ಲಿಯೂ ಕೂಡ ಅದೇ ರೀತಿಯ ಪ್ರಶ್ನೆಗಳ ನಂತರ ಪ್ರವಾದಿ ಇದ್’ರೀಸ್’ರವರನ್ನು (ಅ) ಭೇಟಿಯಾದರು. ಶುಭಾಶಯ, ಹಾಗೂ ಪ್ರಾರ್ಥನೆಯ ನಂತರ ಅಲ್ಲಿಂದ ಐದನೇ ಆಕಾಶದ ಕಡೆಗೆ ಹೊರಟರು. ಅಲ್ಲಿಯೂ ಅದೇ ರೀತಿಯ ಪ್ರಶ್ನೆಗಳ ನಂತರ ಬಾಗಿಲು ತೆರೆದಾಗ, ಪ್ರವಾದಿ ಹಾರೂನ್’ರನ್ನು (ಅ) ಕಾಣಲು ಸಾಧ್ಯವಾಯಿತು. ಅವರ ಗಡ್ಡದ ಅರ್ಧ ಭಾಗ ಬಿಳಿಯಾಗಿದ್ದರೂ, ಇನ್ನುಳಿದ ಭಾಗ ಕಪ್ಪು ಬಣ್ಣದಲ್ಲಿತ್ತು, ಅವರ ಗಡ್ಡವು ಹೋಟೆಯವರೆಗೆ ಬೆಳೆದಿತ್ತು. ವಿನಮ್ರವಾಗಿ ಪ್ರವಾದಿಯವರಿಗೆ ﷺ ಸ್ವಾಗತವನ್ನು ತಿಳಿಸಿದರು. ಪ್ರವಾದಿ ಹಾರೂನ್’ರು (ಅ) ತಮ್ಮ ಕೆಲವೊಂದು ಅನುಯಾಯಿಗಳ ಜೊತೆಯಲ್ಲಿ ಕಥೆ ಹೇಳುತ್ತಾ ಕುಳಿತಿದ್ದರು. ಜಿಬ್’ರೀಲ್’ರು (ಅ) ಪ್ರವಾದಿ ಹಾರೂನ್’ರನ್ನು (ಅ) ಪ್ರವಾದಿಯವರಿಗೆ ﷺ ಪರಿಚಯಿಸಿ ಕೊಟ್ಟರು.

ಅಲ್ಲಿಂದಲೂ ಮುಂದುವರಿದು ಆಕಾಶದ ಆರನೇ ಮಂಡಲಕ್ಕೆ ತಲುಪಿದರು. ಅಲ್ಲಿಯೂ ಕೂಡ ಎಲ್ಲಾ ರೀತಿಯ ಪ್ರಶ್ನೆಗಳ ನಂತರ ಒಳಗೆ ಬಂದಾಗ ಅಲ್ಲಿಯೂ ಕೂಡ ಇನ್ನಷ್ಟು ಪ್ರವಾದಿಗಳನ್ನು ಕಾಣಲು ಸಾಧ್ಯವಾಯಿತು. ಪ್ರತಿಯೊಬ್ಬರ ಬಳಿಯೂ ಕೆಲವೊಂದು ಅನುಯಾಯಿಗಳ ಗುಂಪು ಇದ್ದವು. ಹೀಗೆ ಸ್ವಲ್ಪ ಮುಂದಕ್ಕೆ ಹೋದಾಗ ಅಲ್ಲಿ ಪ್ರವಾದಿ ಮೂಸ (ಅ) ಹಾಗೂ ಅವರ ಅನುಯಾಯಿಗಳನ್ನು ಕಾಣಲು ಸಾಧ್ಯವಾಯಿತು. ಅಷ್ಟರಲ್ಲೇ ಒಂದು ಶಬ್ದ ಕೇಳಿತು, ನೀವುಗಳು ತಲೆ ಎತ್ತಿರಿ, ಅಲ್ಲಿ ಕಾಣುತ್ತಿರುವ ಬಹಳ ವಿಶಾಲವಾದ ಒಂದು ಗುಂಪು, ಅದು ಪ್ರವಾದಿ ಮುಹಮ್ಮದ್’ರ ﷺ ಸಮುದಾಯವಾಗಿದೆ. ಅಷ್ಟೇ ಅಲ್ಲದೆ ಸುಮಾರು ಎಪ್ಪತ್ತು ಸಾವಿರದಷ್ಟು, ಯಾವುದೇ ವಿಚಾರಣೆ ಇಲ್ಲದೆ ಸ್ವರ್ಗ ಪ್ರವೇಶ ಮಾಡುವ ಜನರು ಕೂಡ ಜೊತೆಯಲ್ಲಿ ಇದ್ದರು. ಪ್ರವಾದಿ ಮೂಸ’ರವರು (ಅ) ಕಾಣಲು ಬಹಳ ಎತ್ತರದ ವ್ಯಕ್ತಿಯಾಗಿದ್ದರು. ಒಂದೇ ನೋಟದಲ್ಲಿ ಹೇಳುವುದಾದರೆ, ಶನೂಅ ಜನಾಂಗದ ವ್ಯಕ್ತಿಗಳ ಹಾಗೆ ಇದ್ದರು.

ಪ್ರವಾದಿ ಮುಹಮ್ಮದ್’ರು ﷺ ಪ್ರವಾದಿ ಮೂಸರಿಗೆ (ಅ) ಸಲಾಂ ಹೇಳಿದಾಗ, ಅವರು, ಇಸ್ರಾಯಿಲರಲ್ಲಿ ಎಲ್ಲರೂ ಹೇಳುವುದು, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ನಾನಾಗಿರುವೆನು ಎಂದು, ಆದರೆ ನನಗಿಂತಲೂ ಶ್ರೇಷ್ಠವಾದ ವ್ಯಕ್ತಿ ನೀವಾಗಿದ್ದೀರಿ ಎಂದು ಹೇಳಿದರು. ಪ್ರವಾದಿಯವರು ﷺ, ಅಲ್ಲಿಂದಲೂ ಮೂಸ ಪ್ರವಾದಿಯವರನ್ನು (ಅ) ಬಿಟ್ಟು ಮುಂದಕ್ಕೆ ಹೋದಾಗ, ಅವರ ಕಣ್ಣುಗಳು ತೇವಗೊಂಡಿತು. ಅದನ್ನು ಕಂಡು ಉಳಿದವರು ಅವರಲ್ಲಿ ಯಾಕಾಗಿ ಕಂಬನಿ ಸುರಿಸುತ್ತಿರುವಿರಿ.? ಎಂದು ಕೇಳಿದಾಗ, ಪ್ರವಾದಿ ಮೂಸ’ರವರು (ಅ) ನನ್ನ ನಂತರ ನೇಮಕ ಗೊಳಿಸಿದ ಈ ಪ್ರವಾದಿಯವರು, ಭೂಲೋಕಕ್ಕೆ ಬಂದದ್ದು ನಾನು ಪರಲೋಕಕ್ಕೆ ಯಾತ್ರೆ ಆದ ನಂತರವಾಗಿತ್ತು. ಆದರೆ ನನ್ನ ಸಮುದಾಯಕ್ಕಿಂತ ಅದೆಷ್ಟೋ ಪಟ್ಟು ಅಧಿಕವಾಗಿದೆ, ಅವರು ಅವರ ಸಮುದಾಯದ ಜೊತೆಯಲ್ಲಿ ಸ್ವರ್ಗಕ್ಕೆ ಪ್ರವೇಶ ಮಾಡುವುದು ಎಂದು ಹೇಳಿದರು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Mahabba Campaign Part-120/365

ಪ್ರವಾದಿಯವರ ﷺ ಯಾತ್ರೆ ಮುಂದುವರಿದು ಏಳನೇ ಆಕಾಶಕ್ಕೆ ತಲುಪಿತು. ಇತರ ಆಕಾಶಕ್ಕಿಂತ ವಿಭಿನ್ನವಾಗಿ ಇಲ್ಲಿ ಗುಡುಗು ಮಿಂಚುಗಳು ಕೇಳಲು ಸಾಧ್ಯವಾಯಿತು. ಜಿಬ್’ರೀಲರು (ಅ) ಪ್ರವಾದಿಯವರನ್ನು ﷺ ಕರೆದುಕೊಂಡು, ಆಕಾಶದ ಹೆಬ್ಬಾಗಿಲ ಬಳಿ ಬಂದು ತಲುಪಿದರು. ಅಲ್ಲಿಯೂ ಕೂಡ ಪರಿಚಯಿಸುವ ಪ್ರಶ್ನೆಗಳನ್ನು ಕೇಳಿ ಒಳಗೆ ಬರುವಾಗ, ಪ್ರವಾದಿಯವರಿಗೆ ﷺ ಪ್ರಾರ್ಥನೆಗಳ ಜೊತೆಯಲ್ಲಿ ಶುಭಾಶಯಗಳನ್ನು ತಿಳಿಸಲಾಯಿತು. ಏಳನೇ ಆಕಾಶದ ಬಾಗಿಲು ತೆರೆದಾಗ ಅಲ್ಲಾಹನ ಮಹತ್ವವನ್ನು ತಿಳಿಸುವ ತಸ್’ಬೀಹ್’ನ ಮಂತ್ರಗಳನ್ನು ಕೇಳಲು ಸಾಧ್ಯವಾಯಿತು. ಪ್ರವಾದಿ ಇಬ್ರಾಹಿಂ’ರು (ಅ), ಪ್ರವಾದಿ ಮುಹಮ್ಮದ್’ರನ್ನು ﷺ ಕಂಡು, ಪ್ರಪಂಚದ ಪರಮೋನ್ನತ ವ್ಯಕ್ತಿಯೂ, ಪ್ರವಾದಿಯೂ ಆದ ಮುದ್ದಿನ ಮಗನೇ, ನಿಮಗೆ ಸ್ವಾಗತ ಎಂದು, ವಿಶೇಷವಾಗಿ ಸ್ವಾಗತ ಕೋರಿದರು. ನಂತರ ಅವರು ಪ್ರವಾದಿಯವರಲ್ಲಿ ﷺ, ನೀವು ನಿಮ್ಮ ಸಮೂಹದಲ್ಲಿ ಸ್ವರ್ಗಕ್ಕಾಗಿ ಬೆಳೆ, ಬಿತ್ತಲು ತಿಳಿಸಬೇಕು. ನಿಮ್ಮಲ್ಲಿರುವ ಮಣ್ಣು ಪವಿತ್ರವಾದದ್ದು, ವಿಶಾಲತೆಯಿಂದ ಕೂಡಿದ್ದು ಆಗಿದೆ. ಎಂದು ಹೇಳಿದಾಗ ಪ್ರವಾದಿಯವರು ﷺ ಅದು ಯಾವುದು? ಸ್ವರ್ಗದ ಬೆಳೆ ಎಂದು ಕೇಳಿದರು. ಅದು, “ಲಾಹೌಲ ವಲಾ ಖುವ್ವತ ಇಲ್ಲಾಬಿಲ್ಲಾಹಿಲ್ ಅಲೀಯಿಲ್ ಅಳೀಮ್” ಎಂದು ಹೇಳಿದರು. ಇನ್ನೊಂದು ಉಲ್ಲೇಖದ ಪ್ರಕಾರ, ಪ್ರವಾದಿ ಇಬ್ರಾಹಿಮರು (ಅ) ಪ್ರವಾದಿ ಮುಹಮ್ಮದ್’ರಲ್ಲಿ ﷺ, ನಿಮ್ಮ ಸಮುದಾಯಕ್ಕೆ ನನ್ನ ಅಭಿನಂದನೆಯನ್ನು ತಿಳಿಸಿ, ನಂತರ ಅವರಲ್ಲಿ ಸ್ವರ್ಗದಲ್ಲಿ ಬೆಳೆ ಬೆಳೆಸಲು ತಿಳಿಸಬೇಕು, ಅಲ್ಲಿಯ ಮಣ್ಣು ವಿಶೇಷವಾದದ್ದೂ, ವಿಶಾಲವಾದದ್ದೂ ಆಗಿದೆ. ಬೆಳೆ ಏನೆಂದರೆ.? “ಸುಬ್’ಹಾನಲ್ಲಾಹಿ ವಲ್’ಹಂದುಲಿಲ್ಲಾಹಿ ವ ಲಾಇಲಾಹ ಇಲ್ಲಲ್ಲಾಹು ಅಲ್ಲಾಹು ಅಕ್’ಬರ್” ಎಂಬ (ಅಲ್ಲಾಹನ ಮಹತ್ವವನ್ನು ಕೂಗಿ ಹೇಳುತ್ತಿದ್ದೇನೆ, ಅವನಿಗಾಗಿದೆ ಸರ್ವಸ್ತುತಿ, ಅವನಾಗಿದ್ದಾನೆ ಅತ್ಯುನ್ನತನು) ತಸ್’ಬೀಹ್’ನ ಮಂತ್ರವಾಗಿದೆ ಸ್ವರ್ಗದ ಬೆಳೆ ಎಂದು ಹೇಳಿದರು.

ಪ್ರವಾದಿ ಇಬ್ರಾಹಿಮ್’ರ (ಅ) ಬಳಿ ಒಂದು ಗುಂಪಿನಲ್ಲಿ ಕೆಲವು ಜನರು ಜೊತೆಗಿದ್ದರು. ಅವರ ಮುಖವು ಮಂದಹಾಸ ತುಂಬಿ, ಬಹಳ ಪ್ರಸನ್ನತೆಯಿಂದ ಕೂಡಿತ್ತು. ಅವರ ಜೊತೆಯಲ್ಲಿದ್ದ ಇನ್ನೊಂದು ಗುಂಪಿನಲ್ಲಿ ಕೆಲವು ಜನರ ಮುಖ ಭಾವವು, ಮೊದಲಿನವರಿಗಿಂತ ಸ್ವಲ್ಪ ಕಡಿಮೆ ಇತ್ತು. ಆದರೆ ಅವರು ಅಲ್ಲಿ ಪಕ್ಕದಲ್ಲಿದ್ದ ಹೊಳೆಯ ಒಳಗೆ ಹೋಗಿ ಬಂದಾಗ, ಅವರು ಕೂಡ ಮೊದಲಿನ ಗುಂಪಿನವರ ಹಾಗೆ ಮಂದಹಾಸ ಬಿರುತ್ತಾ, ಅವರ ಜೊತೆಯಲ್ಲಿ ಕುಳಿತರು. ಇದೆಲ್ಲವನ್ನೂ ದೂರದಲ್ಲಿ ನಿಂತು ನೋಡುತ್ತಿದ್ದ ಪ್ರವಾದಿಯವರು ﷺ, ಜಿಬ್’ರೀಲರಲ್ಲಿ (ಅ), ಈ ಎರಡು ವಿಭಾಗದ ಜನರು ಯಾರು ಎಂದು ಕೇಳಿದಾಗ.?, ಮೊದಲನೇ ವಿಭಾಗವು ತಮ್ಮ ಜೀವಿತ ಕಾಲದಲ್ಲಿ ಸ್ವಲ್ಪವೂ ಕೂಡ ಕಲ್ಮಶವಿಲ್ಲದೆ ಅಲ್ಲಾಹನಿಗಾಗಿ ಆರಾಧನೆ ಮಾಡಿದವರಾಗಿವರು, ಆದರೆ ಇನ್ನೊಬ್ಬರು ಬಹಳಷ್ಟು ಒಳಿತುಗಳನ್ನು ಮಾಡಿದ್ದರೂ ಅದರ ಜೊತೆಯಲ್ಲಿ ತಪ್ಪುಗಳನ್ನೂ ಮಾಡುತಿದ್ದರು. ಆದರೆ ಪಾಪ ಮೋಚನೆಯೆಂಬ ಹೊಳೆಯಲ್ಲಿ ಮುಳುಗಿ ಎದ್ದಾಗ ಮೊದಲಿದ್ದ ಗುಂಪಿನ ಸಾಲಿಗೆ ಬಂದು ಸೇರಿದರು. ಆ ಹೊಳೆಯಲ್ಲಿ, ಮೊದಲು ಇರುವುದು ಅಲ್ಲಾಹನ ಕರುಣೆ, ಎರಡನೆದಾಗಿ ಅವನ ಅನುಗ್ರಹ ಹಾಗೂ ಮೂರನೇದಾಗಿ ಪವಿತ್ರ ಪಾನೀಯವಾಗಿದೆ ಎಂದು ಹೇಳಿದರು. (ಪವಿತ್ರ ಖುರ್’ಆನಿನ ಇನ್’ಸಾನ್ ಅಧ್ಯಾಯದ ಇಪ್ಪತ್ತೊಂದನೇ ಸೂಕ್ತದಲ್ಲಿ ಈ ಪಾನೀಯದ ಬಗ್ಗೆ ವಿವರಿಸಿದ್ದು ಕಾಣಬಹುದು.)

ಅಲ್ಲಿಂದ ಮುಂದೆ ಹೋಗಿ ಒಂದು ವಿಶೇಷವಾದ ಸ್ಥಳಕ್ಕೆ ತಲುಪಿದಾಗ, ಪ್ರವಾದಿಯರಲ್ಲಿ ﷺ ಇದು ನಿಮ್ಮ ಸಮುದಾಯದವರ ಸ್ಥಳವಾಗಿದೆ ಎಂದು ಹೇಳಲಾಯಿತು. ಪ್ರವಾದಿಯವರ ﷺ ಸಮುದಾಯವು ಎರಡು ವಿಭಾಗವಾಗಿ ಕಾಣುತ್ತಿದ್ದವು. ಅದರಲ್ಲಿ ಒಂದನೇ ವಿಭಾಗ, ಶುಭ್ರ ವಸ್ತ್ರಗಳನ್ನು ಧರಿಸಿದ್ದರು. ಇನ್ನೊಂದು ವಿಭಾಗ, ಸ್ವಲ್ಪ ಧೂಳಿನಿಂದ ಕೂಡಿದ ವಸ್ತುಗಳನ್ನು ಧರಿಸಿದ್ದರು, ಅವರು ಬೈತುಲ್ ಮಅಮೂರು ಎಂಬ ವಿಶೇಷ ಭವನದ ಒಳಗೆ ಹೋಗುತ್ತಿದ್ದರು. ಅವರಲ್ಲಿ ಮೊದಲನೇ ವಿಭಾಗವು, ಎರಡನೇ ವಿಭಾಗವನ್ನು ಕವಚದ ಹಾಗೆ ರಕ್ಷಿಸುತ್ತಿದ್ದರು. ಬೌತುಲ್ ಮಅಮೂರಿಗೆ ಪ್ರತಿದಿನ ಎಪ್ಪತ್ತು ಸಾವಿರ ಜನರು ಒಳಗೆ ಹೋಗುತಿದ್ದರು, ಹೀಗೆ ಹೋದರೆ ಅವರು ಅಂತ್ಯ ದಿನದವರೆಗೆ ಯಾವತ್ತೂ ತಿರುಗಿ ಬರುತ್ತಿರಲಿಲ್ಲ. ಮಕ್ಕಾದಲ್ಲಿರುವ ಕಅಬಾಲಯದ ಮೇಲೆ ನೇರ ರೇಖೆಯಲ್ಲಿ ಆಕಾಶ ಲೋಕದಲ್ಲಿ, ರಚಿಸಲ್ಪಟ್ಟ ವಿಶೇಷವಾದ ಭವನವಾಗಿದೆ ಬೈತುಲ್ ಮಅಮೂರ್ ಎಂದು ಹದೀಸ್’ನಲ್ಲಿ ಉಲ್ಲೇಖಿಸಿದ್ದು ಕಾಣಬಹುದು. ಅದೇ ರೀತಿ ಪವಿತ್ರ ಕುರ್’ಆನಿನ ಅತ್ತೂರು ಅಧ್ಯಾಯದ ನಾಲ್ಕನೇ ಸೂಕ್ತದಲ್ಲಿಯೂ ಇದರ ಬಗ್ಗೆ ವಿವರಿಸುವುದು ಕಾಣಬಹುದು.

ಇದರ ಭಾಗವಾಗಿ ಇಮಾಮ್ ತ್ವಬ್’ರಾನಿಯವರು ◌ؓ ವಿವರಿಸುವುದು ಕಾಣಬಹುದು. ಪ್ರವಾದಿಯವರು ﷺ ಉಭಯ ಲೋಕದ ಯಾತ್ರೆಯ ಬಗ್ಗೆ ಹೇಳುತ್ತಾ, ನಾವು ಅತ್ಯುನ್ನತ ಸ್ಥಳಗಳಿಗೆ ಅದರಲ್ಲೂ ಅಲ್ ಮಲವುಲ್ ಅಅಲ ಎಂಬ ಸ್ಥಳಕ್ಕೆ ತಲುಪಿದಾಗ, ಜಿಬ್’ರೀಲರು (ಅ) ಬಹಳ ವಿನಮ್ರವಾಗಿ ಒಂದು ಭಾಗಕ್ಕೆ ಸರಿದು ನಿಂತು ಕೊಂಡರು ಎಂದು ಹೇಳಿದರು. ಅಲ್ ಮಲವುಲ್ ಅಅಲ ಅಂದರೆ ಅಲ್ಲಾಹನ ಬಹಳ ಹತ್ತಿರದ ಮಲಕ್’ಗಳ ಮಲಕ್’ಗಳ ಲೋಕ ಎಂದಾಗಿದೆ ಅದನ್ನು ಕರೆಯಲ್ಪಡುವುದು.

اَللّٰهُمَّ صَلِّ عَلَى سَيِّدِنٰا مُحَمَّدٍ وَعَلَى آلِهِ وَصَحْبِهِ وَسَلِّمْ

Leave a Reply